ಗಂಡನ ಕಾರಣದಿಂದ ಹೆಂಡತಿ How ದಪ್ಪ?
ಮೊನ್ನೆ ಒಂದು ಸುದ್ದಿ ಓದಿದೆ. ಹೆಣ್ಣುಮಕ್ಕಳು ತಮ್ಮ ಗಂಡ ಅಥವಾ ಪ್ರೇಮಿಯ ಪ್ರೀತಿಯ ಕಾರಣದಿಂದಲೇ ದಪ್ಪ ಆಗುತ್ತಾರಂತೆ. ಹಾಗಂತ ಇಂಗ್ಲೆಂಡಿನ ಸಂಶೋಧನಾ ವರದಿಯೊಂದು ಹೇಳಿದೆಯಂತೆ.
ಇದನ್ನು ಓದಿ ನನಗೊಮ್ಮೆ ಖುಷಿಯಾಗಿದ್ದಂತೂ ನಿಜ. ಏಕಂದರೆ ನನ್ನ ಹೆಂಡತಿಯನ್ನು ನಾನು ಮದುವೆಯಾದ ಮೇಲೆ, ಅವಳು ತುಂಬಾ ದಪ್ಪ ಆಗಿದ್ದಾಳೆ. ಅಂದರೆ ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಅಂತಾಯಿತು. ಈ ವಿಷಯವನ್ನು ಹೇಳಿ ಸ್ವಲ್ಪ ಜಂಭ ಕೊಚ್ಚಿಕೊಳ್ಳೋಣ ಅನ್ನಿಸಿ ಅವಳಿಗೆ ಫೋನ್ ಮಾಡಿದೆ (ಅವಳು ಈಗ ಅವಳ ತಾಯಿ ಮನೆಯಲ್ಲಿದ್ದಾಳೆ. ನಾನೂ ಅವಳೂ ಈಗ ಬಾಣಭಟ್ಟನ ನಿರೀಕ್ಷೆಯಲ್ಲಿರುವುದು ನಿಮಗೆಲ್ಲಾ ಗೊತ್ತಿರತಕ್ಕಂಥ ವಿಚಾರವೇ).
ಈ ವಿಚಾರವಾಗಿ ಅವಳ ಪ್ರತಿಕ್ರಿಯೆ- ಮಳ್ಳ, pregnent ಆದಾಗ ಎಲ್ಲ ಹೆಂಗಸರೂ ದಪ್ಪ ಆಗ್ತಾರೆ ಅಂದಿದ್ದು ಬಿಟ್ಟರೆ-ಅಷ್ಟೇನೂ ಉತ್ಸಾಹದಾಯಕವಾಗಿರಲಿಲ್ಲ. ಬಹುಶಃ ಈ ವಿಷಯವನ್ನೇ ಆ ಸಂಶೋಧನಾ ವರದಿ ಹೇಳಿರಬಹುದು ಎಂಬ ಗುಮಾನಿ ಅವಳದ್ದು.
ಇರಲಿ, ಇಷ್ಟೆಲ್ಲಾ ಆದಮೇಲೆ ನನ್ನಲ್ಲಿ ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
೧. ಮದುವೆಗೆ ಮುಂಚೆ ನಾನು ಕಡ್ಡಿ ಕಡ್ಡಿಯಾಗಿದ್ದೆ. ಮದುವೆ ಫಿಕ್ಸ್ ಆದ ದಿನದಿಂದ ಮದುವೆಯ ದಿನದವರೆಗೆ ಇದ್ದಕ್ಕಿದ್ದಂತೆ ನನ್ನಲ್ಲಿ ಭಾರೀ ಬದಲಾವಣೆ ಜಾರಿಗೆ ಬಂತು. ಅಂದರೆ ಸ್ವಲ್ಪವೇನು, ತುಂಬಾನೇ ದಪ್ಪವಾಗಿಬಿಟ್ಟೆ. ಆದರೆ ನಂತರ ಮತ್ತೆ ಯಥಾಸ್ಥಿತಿ- ಕಡ್ಡಿ ಕಡ್ಡಿ. ಹೀಗೇಕಾಯ್ತು?
೨. ಸಂಶೋಧನಾ ವರದಿ ಬರೀ ಮಹಿಳೆಯರನ್ನಷ್ಟೇ ಗಣನೆಗೆ ತೆಗೆದುಕೊಂಡು ಪುರುಷರನ್ನು ಕಡೆಗಣಿಸಿದ್ದು ತಪ್ಪಲ್ಲವೇ. ಗಂಡನ ಪ್ರೀತಿಯಿಂದ ಹೆಂಡತಿ ದಪ್ಪವಾಗ್ತಾಳೆ ಅಂತಾದ್ರೆ ಹೆಂಡತಿ ಪ್ರೀತಿಯ ಕಾರಣದಿಂದ ನನ್ನಂಥ ಗಂಡ ದಪ್ಪವಾಗಬೇಕಿತ್ತಲ್ಲ?
೩. ಗಂಡನ ಪ್ರೀತಿಯಿಂದ ಹೆಂಡತಿ ದಪ್ಪವಾಗ್ತಾಳೆ ಅಂತಾದ್ರೆ size doesn't matter ಅನ್ನೋ ಥರ ದಪ್ಪವಿರುವ ಮಹಿಳೆಯರಿಗೆ ಗಂಡನ ಪ್ರೀತಿ ಅತಿಯಾದ ಅಮೃತ ವಿಷದಂತಾಗಿರಬಹುದೇ?
(ತೆಳ್ಳಗಿರುವವರು ಮತ್ತು ದಪ್ಪಗಿರುವವರ ಕ್ಷಮೆ ಕೋರುತ್ತಾ)
-ಸುರೇಶ್ ಕೆ.

- Login or register to post comments
- 1220 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ನಿಮ್ಮ
ನಿಮ್ಮ ಹೆಂಡತಿಯನ್ನೇ ನೀವು ಮದುವೆಯಾದ ಮೇಲೆ ಅವಳ ಪ್ರೀತಿಯ ಆಳವನ್ನು ನೋಡಿ,ಅವಳೆದುರಿಗೆ ನಿಮ್ಮಪ್ರೀತಿ ಏನೂ ಅಲ್ಲವೆಂದೆನಿಸಿ ಮನಸಲ್ಲೇ ಮಂಡಿಗೆ ತಿನ್ನುತ್ತಿರಬಹುದು.
) ಹಾಗಾಗಿ ಕಡ್ಡಿ ಕಡ್ಡಿಯಾಗುತ್ತಿದ್ದೀರಿ.ನಿಮ್ಮವಳ ದಪ್ಪ ಒಪ್ಪವಾಗಿರಲೆಂದು ಹಾರೈಸುತ್ತೇನೆ.
ಡುಂಡಿ ರಾಜ್ ರವರ Honey-ಕವನ
ಮದುವೆಯ ನಂತರ
ಹೆಂಗಸರು ಆಗುವರು ದಪ್ಪ.
ಗಂಡಸರು ಆಗುವರು ಹೌದಪ್ಪ.
ಗುಂಡಿರಾಜ
ನಾನೇನೂ ಹೆಂಡತಿಗೆ ಹೆದರಲ್ಲಪ್ಪ
ಇಲ್ಲಿ ಬರೆದಿರುವುದು ಅವಳಿಗೆ ಹೇಳಬೇಡ್ರಪ್ಪ
ಇರಬಹುದು ಅವಳ ಬಣ್ಣ ಕಪ್ಪಾ?
ಆದರೇನು ಮದುವೆಯಲಿ ಕೊಟ್ಟಿಹರು ಕಪ್ಪ
--- ಗುಂಡಿಗೆ ಬಿದ್ದಿರುವ ರಾಜ
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಉ : ಗುಂಡಿಗೆ ಬಿದ್ದಿರುವ ರಾಜ ?
ಗುಂಡು ಹಾಕಿ ಬಿದ್ದಿರಾ ?
ಸುಚರ
Re: ಉ : ಗುಂಡಿಗೆ ಬಿದ್ದಿರುವ ರಾಜ ?
ಸುಚರ
ಹಾಗಲ್ಲ, 'ಗುಂಡಿಗೆ' ಅಂದರೆ ಹೃದಯ. (ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ... ನೆನಪಿಸಿಕೊಳ್ಳಿ!) ಪ್ರೀತಿಯಲ್ಲಿ ಹೃದಯವನ್ನು ಕಳೆದುಕೊಂಡಿರುವ ರಾಜ ಎಂದೂ ಅರ್ಥೈಸಬಹುದು.
ಇನ್ನೊಂದು ಅರ್ಥ ಬೇಕಿದ್ದರೆ ಶರ್ಟ್ ಬಟನ್‍ಗೆ ನಾಲ್ಕು ರಂಧ್ರಗಳಿರುತ್ತವಲ್ಲ? ಅದರೊಳಗೆ ಬಿದ್ದಿರುವ ಸೂಕ್ಷ್ಮಾಣುಜೀವಿ ರಾಜ ಅಂತಲೂ ಅರ್ಥೈಸಬಹುದು!
'ಅರ್ಥಮನರ್ಥಮ್ ಭಾವಯ ನಿತ್ಯಮ್...'
- ಶ್ರೀವತ್ಸ ಜೋಶಿ
ಹಳ್ಳ
ಜೋಷಿಯವರ ಪಂಚೇ ಪಂಚು (ಕಟ್ಟಿಕೊಂಡದ್ದಲ್ಲ ಕೆನ್ನೆ ಮೇಲೆ ಕೊಟ್ಟಿರೋದು)
ಜೋಷಿಗಳಿಗೆ ಜೋಷಿಗಳೇ ಸಾಟಿ.
ಹಳ್ಳಕ್ಕೇನೋ ಬಿದ್ದಾಯ್ತು. ಆದರೆ ನನ್ನ ಪತ್ನಿ ಮುಂದೆ ಹಳ್ಳದಲ್ಲಿಯೇ ಇರಲು ಬಿಡದೆ, ಮೇಲೆ ಎತ್ತಿದ್ದಾಳೆ. ಇದರ ಬಗ್ಗೆ ಇಂದು ನಂದಾದೀಪ ಎಂಬ ಒಂದು ಕವನವನ್ನು ಬರೆದಿರುವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net