ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಕನ್ನಡದ ನುಡಿ, ಬರಹ, ಶ್ರೀಡೆಕ್ಕನ್ ಇತ್ಯಾದಿ ಫಾಂಟ್‌ಗಳಲ್ಲಿ ಬರೆದ ಬರಹಗಳನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ? ನನ್ನ ನೂರಾರು ಲೇಖನಗಳು, ಬರಹಗಳು ಮೇಲಿನ ಫಾಂಟ್‌ಗಳಲ್ಲಿವೆ. ಹೊಸದಾಗಿ ಬರೆಯುವುದನ್ನು ಯುನಿಕೋಡ್ ಮೂಲಕ ಮಾಡುತ್ತಿರುವೆನಾದರೂ, ಹಿಂದಿನವನ್ನೆಲ್ಲ ಯುನಿಕೋಡ್‌ನಲ್ಲಿ ಬರೆಯುವುದು ಎಲ್ಲ ಸಮಯದಲ್ಲಿ ಅಂದುಕೊಂಡಂತೆ ಆಗುತ್ತಿಲ್ಲ.
ಈ ರೀತಿಯ ಫಾಂಟ್‌ಗಳಲ್ಲಿರುವುದನ್ನು ಎಂ.ಎಸ್. ವರ್ಡ್ ಅಥವಾ ಸಂಬಂಧಿ ತಂತ್ರಾಂಶದಲ್ಲಿ ತೆರೆದು ಅವನ್ನು ಪಿಡಿಎಫ್ ಫೈಲ್ ಮಾಡಲು ಸಾಧ್ಯವೆ? ಬಲ್ಲವರು ಮಾಹಿತಿ/ಕೊಂಡಿ ನೀಡಿದರೆ ಉಪಕಾರವಾಗುತ್ತದೆ.
- ಚಾಮರಾಜ ಸವಡಿ

- Login or register to post comments
- 395 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಓಪನ್ ಆಫೀಸ್ ಬಳಸಿ. ಅದರಲ್ಲಿ ನೇರ ಪಿ ಡಿ ಎಫ್ ಗೆ ಬದಲಿಸಬಹುದು (Export ಮಾಡಬಹುದು).
baraha converter ಬಳಸಿ ಹಳೆಯ ಲೇಖನಗಳನ್ನ ಯೂನಿಕೋಡಿಗೆ ಸುಲಭವಾಗಿ ತರಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಪ್ರೈಮೋ ಪಿಡಿಎಫ್ (http://www.primopdf.com/) ಬಳಸಿ ನೋಡಿ. ಇದರಿಂದ ನೀವು ಯಾವುದೇ ಫೈಲನ್ನು (ವರ್ಡ್, ಎಕ್ಸೆಲ್, ಇತ್ಯಾದಿ) ಪಿಡಿಎಫ್‌ಗೆ ಬದಲಿಸಬಹುದು.
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ನವೀನ್, ನೀವು ಸೂಚಿಸಿದ ಕೊಂಡಿಯನ್ನೂ ಒಮ್ಮೆ ಪ್ರಯತ್ನಿಸಿ ನೋಡುತ್ತೇನೆ.
- ಚಾಮರಾಜ ಸವಡಿ
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ನಾನು ಬಳಸುತ್ತಿರುವುದು ಗೃಹ ಬಳಕೆಯ ರಿಲಯನ್ಸ್ ಅಂತರ್ಜಾಲ ಸಂಪರ್ಕ. ಓಪನ್ ಆಫೀಸ್ ತಂತ್ರಾಂಶದ ಗಾತ್ರ ೧೨೭ ಎಂ.ಬಿ.ಗಿಂತ ಹೆಚ್ಚಿದೆ. ಅದನ್ನು ಇಳಿಸಿಕೊಳ್ಳಲು ಮೂರು-ನಾಲ್ಕು ಗಂಟೆಗಳಾದರೂ ಆದೀತು ಎಂಬ ಅಳುಕು.
ಸದ್ಯಕ್ಕೆ ಬರಹ ಪರಿವರ್ತಕ ಬಳಸಿ ಒಂದಿಷ್ಟು ಬರಹಗಳನ್ನು ಯುನಿಕೋಡ್‌ಗೆ ಬದಲಾಯಿಸುವ ಯತ್ನ ನಡೆಸಿದ್ದೇನೆ. ಉತ್ತಮ ಸಲಹೆ ನೀಡಿದ್ದೀರಿ, ನಾನು ಉಪಕೃತ.
- ಚಾಮರಾಜ ಸವಡಿ
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
pdf995 ಅಂತ ಒಂದು ಟೂಲ್ ಬರತ್ತೆ. ನೆಟ್ಟಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ಅದನ್ನ install ಮಾಡ್ಕೊಂಡು ವರ್ಡ್ ಮುಂತಾದ ಫೈಲುಗಳನ್ನ pdf ಆಗಿ ಬದಲಾಯಿಸಬಹುದು.
**************************
http://vikasavada.blogspot.com/
**************************
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಗುರುಪ್ರಸಾದ್
pdf995, ಟೂಲ್ ಚೆನ್ನಾಗಿದೆ, ಆದ್ರೆ ಡೈರೆಕ್ಟ್ ಆಗಿ convert ಆಗೋಲ್ಲ, Print option ನಿಂದ convert ಮಡ್ಕೋಬೇಕಾಗುತೆ.
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ನಾನು ಕ್ಯೂಟ್ಪಿಡೀಎಫ್ ರೈಟರ್ ಬಳಸ್ತೀನಿ. ಅದೂ ಕೂಡ ಪ್ರಿಂಟ್ ಆಪ್ಶನ್ ಮೂಲಕ ಪಿಡಿಎಪ್ ಕ್ರಿಯೆಟುತ್ತೆ.
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
pdf995 ಸಾಧನವನ್ನು ಅಂತರ್ಜಾಲದಿಂದ ಇಳಿಸಿಕೊಂಡಿದ್ದೇನೆ. ಅದು ಚೆನ್ನಾಗಿ ಕೆಲಸ ಮಾಡುತ್ತಿದೆ ಕೂಡಾ. ಆದರೆ, ನನ್ನ ಪಿಡಿಎಫ್ ಬರಹಗಳನ್ನು ಸಂಪದದಲ್ಲಿ ಹಾಕಲು ಬರುವುದಿಲ್ಲವಲ್ಲ. ಹೀಗಾಗಿ ಪರ್ಯಾಯ ಮಾರ್ಗದ ಶೋಧನೆಯಲ್ಲಿದ್ದೇನೆ. ಇಲ್ಲದಿದ್ದರೆ ಇದ್ದೇ ಇದೆಯಲ್ಲ, ಕೂತು ಕುಟ್ಟುವುದು.
ಸಲಹೆಗಾಗಿ ಥ್ಯಾಂಕ್ಸ್ ವಿಕಾಸ್
- ಚಾಮರಾಜ ಸವಡಿ
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಚಾಮರಾಜ ಸವಡಿ, ನೂರಾರು ಬರಹಗಳನ್ನ ಕೂತು ಕುಟ್ತಾ ಇದ್ರೆ, ಸುಮ್ನೆ ಟೈಮ್ ವೇಸ್ಟಾಗತ್ತೆ. ನುಡಿಯಲ್ಲಿರುವ ಒಂದು ಬರಹ ನನಗೆ ಕಳಿಸಿ. ನೋಡೋಣ, ಏನಾದ್ರು ಮಾಡ್ಕಕೆ ಸಾಧ್ಯವೇ ಅಂತ.
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಮಾನ್ಯ ಚಾಮರಾಜ ಸವಡಿ ಅವರೇ,
ನೀವು "ಹಿಂದಿನವನ್ನೆಲ್ಲ ಯುನಿಕೋಡ್‌ನಲ್ಲಿ ಬರೆಯುವುದು" ಅಂದರೆ ಹೊಸದಾಗಿ ಟೈಪಿಸುತ್ತಿದ್ದೀರಿ ಎಂದು ಅಂದುಕೊಂಡಿದ್ದೇನೆ. ನಿಮ್ಮ ಲೇಖನಗಳು ನುಡಿ ಅಥವ ಬರಹದಲ್ಲಿದ್ದರೆ ಅವನ್ನು ಯೂನಿಕೋಡ್ ಪಠ್ಯವಾಗಿ ಬದಲಾಯಿಸುವುದು ತುಂಬಾ ಸುಲಭ. ಬರಹದಲ್ಲಿ baraha convert ತೆರೆಯಿರಿ. ಅದರಲ್ಲಿ ಐದು ಮನೆಗಳಿರುತ್ತವೆ. ನಿಮ್ಮ ಹಳೆಯ ಪಠ್ಯವನ್ನು ANSI ಮನೆಯಲ್ಲಿ ಹಾಕಿರಿ (copy paste). ಆಮೇಲೆ ಬಾಣದ ಮೇಲೆ ಚಿಟುಕಿಸಿ ಆ ಮನೆಯಿಂದ baraha code ಮನೆಗೆ ಬಂದು ಅಲ್ಲಿಂದ ಯೂನಿಕೋಡ್ ಮನೆಯ ಕಡೆ ಬಾಣವನ್ನು ನಿರ್ದೇಶಿಸಿ. ಈಗ ನಿಮ್ಮ ಪಠ್ಯ ಯೂನಿಕೋಡ್ ಮನೆಯಲ್ಲಿ ಕಾಣುತ್ತದಲ್ಲವೇ? ಆ ಅಷ್ಟೂ ಪಠ್ಯವನ್ನು copy ಮಾಡಿಕೊಂಡು ನಿಮ್ಮ ವರ್ಡ್ ಪುಟದಲ್ಲಿ ಲಗತ್ತಿಸಿಕೊಳ್ಳಿ. ಅಷ್ಟೇ.
ಶ್ರೀಡೆಕ್ಕನ್ ಪಠ್ಯವನ್ನು ಯೂನಿಕೋಡ್ ಆಗಿ ಬದಲಾಯಿಸುವುದು ಹೇಗೆಂದು ನನಗೆ ತಿಳಿಯದು.
ಇನ್ನು ಪಿಡಿಎಫ್ ವಿಷಯಕ್ಕೆ ಬರೋಣ. ಓಪನ್ ಆಫೀಸಿನಲ್ಲಿ ಪಿಡಿಎಫ್ ಆಗಿ ಪರಿವರ್ತಿಸುವುದು ಸುಲಭ. ಆದರೆ ಹಳೆಯ ಪಠ್ಯವನ್ನು ಪಿಡಿಎಫ್ ಮಾಡುವುದೆಂದರೆ ಹಳೆಯ ಪಠ್ಯವನ್ನು ಫೋಟೋ ಫ್ರೇಮಿನಲ್ಲಿ ಇಟ್ಟಹಾಗೆ. ಅದನ್ನು ನೋಡುತ್ತಿರಬಹುದೇ ಹೊರತು ನಾಳೆ ಅದನ್ನು ನೀವು ತಿದ್ದುವ ಹಾಗಿಲ್ಲ.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
ಮರಿಜೋಸೆಫ್ ಅವರೇ,
ನಿಮ್ಮ ಸಲಹೆಗಳು ಚೆನ್ನಾಗಿ ಕೆಲಸ ಮಾಡಿವೆ. ಅದರ ಫಲ, ನುಡಿಯಲ್ಲಿದ್ದ ನನ್ನ ಎರಡು ಬರಹಗಳು ಶೀಘ್ರ ಸಂಪದದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಿದ್ದು.
ಶ್ರೀ ಡೆಕ್ಕನ್ ಎಂಬುದು ಪ್ರಜಾವಾಣಿ ಬಳಸುವ ಫಾಂಟ್. ನನ್ನ ನೂರಾರು ಬರಹಗಳು ಅದರಲ್ಲಿವೆ. ಅವನ್ನೂ ಈ ರೀತಿ ಬದಲಿಸಲು ಸಾಧ್ಯವಾದೀತೆ ಎಂಬುದು ಪ್ರಶ್ನೆ.
ನೀವು ಪ್ರಯತ್ನಿಸುತ್ತೀರಿ ಎಂದರೆ, ಶ್ರೀ ಡೆಕ್ಕನ್‌ನಲ್ಲಿರುವ ಬರಹವನ್ನು ನಿಮಗೆ ಕಳಿಸಿಕೊಡುವೆ.
- ಚಾಮರಾಜ ಸವಡಿ
ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
"ಶ್ರೀ ಡೆಕ್ಕನ್ ಎಂಬುದು ಪ್ರಜಾವಾಣಿ ಬಳಸುವ ಫಾಂಟ್. ನನ್ನ ನೂರಾರು ಬರಹಗಳು ಅದರಲ್ಲಿವೆ. ಅವನ್ನೂ ಈ ರೀತಿ ಬದಲಿಸಲು ಸಾಧ್ಯವಾದೀತೆ ಎಂಬುದು ಪ್ರಶ್ನೆ.
ನೀವು ಪ್ರಯತ್ನಿಸುತ್ತೀರಿ ಎಂದರೆ, ಶ್ರೀ ಡೆಕ್ಕನ್‌ನಲ್ಲಿರುವ ಬರಹವನ್ನು ನಿಮಗೆ ಕಳಿಸಿಕೊಡುವೆ."
ಇಲ್ಲ ನನಗದರ ಒಳಹೊರಗು ಗೊತ್ತಿಲ್ಲ. ನಾಡಿಗರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರು. ಇತ್ತೀಚೆಗೆ ಪ್ರಜಾವಾಣಿಯನ್ನೂ ಫೈರ್ ಫಾಕ್ಸಿನಲ್ಲಿ ಓದಲಾಗುತ್ತಿಲ್ಲ.
ಪ್ರೀತಿಯಿಂದ
ಸಿ ಮರಿಜೋಸೆಫ್