ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಹೆಂಡತಿ-ಎಂದರೆ ಜೋಕು ಯಾಕೆ ?

July 4, 2008 - 2:40pm — roopablrao

ಯಾವುದೇ ಬರಹ, ಲೇಖನ, ನಾಟಕ, ಏನೆ ನೋಡಿದರೂ ಮದುವೆ ಬಗ್ಗೆ ಯಾವುದೇ ಒಳ್ಳೆಯ ಮಾತಿಲ್ಲ
ಹೆಚ್ಚಾಗಿ ಗಂಡಸರು
ಮದುವೆಯಿಂದ ಆಗಬಾರದ ಅನಾಹುತವೇನೂ ಆಗಿದೆ ಎಂಬಂತೆ ಕತೆ ಕವನ ಬರೆದು ಗೀಚಿ ಗೀಚಿ ಹಾಳೆಗಳನ್ನೆಲ್ಲಾ ,ಖಾಲಿ ಮಾಡುತ್ತಾರೆ.
ತಮ್ಮ ಸ್ವಾತಂತ್ರ ಹೋಯಿತು ಎಂದು ಬೊಬ್ಬೆ ಹೊಡೆಯುತ್ತಾರೆ
ಹೆಂಡತಿಯರ ಮೇಲೆ ಜೋಕ್ ಕಟ್ಟಿ ನಗುತ್ತಾರೆ.

ಎರೆಡು ತಿಂಗಳ ಕೆಳಗೆ ಯಾವುದೋ ಒಂದು ಬ್ಲಾಗ್‌ನಲ್ಲಿ ಒಂದು ಕತೆ ಬರೆದಿದ್ದರು (ಮಲ್ಲೇಶ್ವರಮ್ ಸುಂದರಿಯರು ಅಂತ ಕತೆ ಇರಬೇಕು )

"ಹೆಂಡತಿ ಗಂಡನನ್ನು ಬಿಟ್ಟು ಹೋಗುತ್ತೇನೆ ಎಂದಾಗ ಗಂಡ ಏನೂ ಮಾತಾಡುವುದಿಲ್ಲ ಒಂದು ರೀತಿಯ ನಿರಾಳ ಭಾವ ತುಂಬಿತು" ಎಂದು ಬರೆದಿದ್ದರು.ಅದಕ್ಕೆ ಪ್ರತಿಕ್ರಿಯಿಸಿದ ಮಹನೀಯರೊಬ್ಬರು ಎಲ್ಲರಿಗೂ ಆ ಭಾಗ್ಯ ಲಭ್ಯವಾಗುವಿದಿಲ್ಲ ಎಂದು ಅವಲತ್ತುಕೊಂಡಿದ್ದರು.
ಮತ್ತೊಬ್ಬ ಮಹನೀಯರು ಸಂಪದದಲ್ಲಿ ನಾಯಿಯೊಂದು ಒಬ್ಬನ ಹೆಂಡತಿಯನ್ನು ಕಚ್ಚಿದಾಗ ಎಲ್ಲರೂ ಅವನ ಮನೆ ಮುಂದೆ ಆ ನಾಯಿಗಾಗಿ ಕ್ಯೂ ನಿಲ್ಲುವುದನ್ನು ಒಂದು ಜೋಕಾಗಿ ಬರೆದಿದ್ದರು.

ಮತ್ತೊಬ್ಬರು (ಯುವ ಪ್ರೇಮಿಗಳು) ಯಾವುದೋ ಮಿಷನ್ ಬಗ್ಗೆ ಮಾತಾಡುತ್ತಾ ಆ ಮಿಷನ್ ಇದ್ದರೆ ಬೇಗ ಮದುವೆಯಾಗಿ ಸ್ವತಂತ್ರ ಕಳೆದುಕೊಳ್ಳ್ಳುವ ಭಯ ಇರುವುದಿಲ್ಲ ಎಂದು ಅರುಹಿದರು.

ಮೊನ್ನೆ ನಮ್ಮ ಪತಿರಾಯನ ಸ್ನೇಹಿತನೂಬ್ಬ ಇವರಿಗೆ ಒಂದು ಮಾತನ್ನು ಹೇಳಿ ಹೋಗಿದ್ದಾನೆ . ಆತ ಮತ್ತೆ ಬರುವುದನ್ನೇ ಕಾಯುತ್ತಿದ್ದೇನೆ ಗ್ರಹಚಾರ ಬಿಡಿಸಲು
"ಹೆಂಡತಿ ಚಾಕ್ಲೇಟ್ ಯಾವಾಗ ಬೇಕಾದರೂ ತಿನ್ನಬಹುದು. ಆದರೆ ಬೇರೆ ಹೆಂಗಸರು ಐಸ್‌ಕ್ರೀಮ್ ಇದ್ದಂತೆ ಕರಗುವ ಮುಂಚೆ ತಿನ್ನಬೇಕು " ಇದು ಆತ ಹೇಳಿಕೊಟ್ಟ ಜೋಕು

ಇದ್ದಿದರಲ್ಲಿ ಏ. ಆರ ಮಣಿಕಾಂತ್ ವಿಜಯ ಕರ್ನಾಟಕದಲ್ಲಿ ಹೆಂಡತಿಯ ಮಹತ್ವದ ಬಗ್ಗೆ ಒಂದು ಪುಟ್ಟ ಕತೆ ಕೊಟ್ಟಿದ್ದರು . ಅವರೇ ವಾಸಿ

ಯಾಕೆ ಹೀಗೆ.

ಪ್ರತಿಯೊಬ್ಬರಿಗೂ ಮದುವೆ ಹೆಂಡತಿ ಅಂದರೆ ತಾಪತ್ರಯ ಅಂತ ಗೊತ್ತಿದ್ದರೂ ಯಾಕೆ ಮದುವೆ ಆಗುತ್ತಾರೆ?

ಯಾಕೆಂದರೆ ಈ ಜೋಕು, ಕತೆಗಳಲ್ಲಿ ಬರುವುದೆಲ್ಲ ನಿಜವಿರುವುದಿಲ್ಲ.

ತಾಯಿ ಮದುವೆಯ ತನಕ ಜೊತೆ ಇರುತ್ತಾಳೆ. ನಂತರ ಹೆಂಡತಿಯೇ ಕೊನೆತನಕ ಜೊತೆಯಲಿ ತಾಯಿಯ ಮಮತೆಯನ್ನು ಧಾರೆ ಎರೆಯುತ್ತಾಳೆ.
ಆದರೂ ಅಂದಿನ ಕಾಲದಿಂದ ಇಂದಿನವರೆಗೂ ಹೆಂಡತಿ ಸರ್ದಾರ್ಜಿ ತರಹ ನಗೆಪಾಟಲಿಗೆ ಈಡಾಗುವುದು ಮಾತ್ರ ತಪ್ಪಿಲ್ಲ.

ಮದುವೆ ಆಗುವವರು, ಆದವರು, ಆಗಲಿರುವವರು , ಏನು ಹೇಳುತ್ತೀರಾ
ಹಾಗೆ ನಾನು ಮದುವೆಯೇ ಆಗುವುದಿಲ್ಲ ಎಂದು ಘೋಷಿಸುವವರು ಯಾರ್ಯಾರು ಇದ್ದೀರಾ ನೋಡೋಣ.

ಇದು ಹಿತಕರವಾದ ಚರ್ಚೆಯಾಗಿರಲಿ.

‹ ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು? ಒಳ್ಳೆಯ ಗಂಡ ಹೇಗಿರಬೇಕು? ›
  • ಸಮಾಜ
~.~
  • Login or register to post comments
  • 800 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 4, 2008 - 3:10pm — mahesha

ಉ: ಹೆಂಡತಿ-ಎಂದರೆ ಜೋಕು ಯಾಕೆ ?

mahesha's picture

ರೂಪಕ್ಕ

ಹೆಂಡತಿಯಂದರೆ ಜೋಕು ಅಲ್ಲ, ಅವಳು ಅಂದರೆ ’ಜೋಕೆ’ ...
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 3:14pm — roopablrao

ಉ: ಹೆಂಡತಿ-ಎಂದರೆ ಜೋಕು ಯಾಕೆ ?

roopablrao's picture

ಮದುವೆಗೆ ಮುಂಚೇನೆ ಭಯ ಶುರುವಾಗಿದೆಯಾ ಮಹೇಶ್?
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 3:22pm — mahesha

ಉ: ಹೆಂಡತಿ-ಎಂದರೆ ಜೋಕು ಯಾಕೆ ?

mahesha's picture

ಹು.. ಹೆದರಿಕೆ, ಅಂಜಿತೆ, ತರತರ ತತ್ತರ........ Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 3:24pm — mahesha

ಉ: ಹೆಂಡತಿ-ಎಂದರೆ ಜೋಕು ಯಾಕೆ ?

mahesha's picture

ಇದಕ್ಕೆ ಸೀರಿಯಸ್ಸಾಗಿ ಕಮೆಂಟು..

ಬರೆಯೋ ಹೆಚ್ಚು ಮಂದಿ ಗಂಡಸರು. ಅದಕ್ಕೇ ಹೆಂಡತಿಯರ ಮೇಲೆ ಹೆಚ್ಚು ಜೋಕುಗಳು...
ಬರೆಯೋ ಹೆಚ್ಚು ಮಂದಿ ಹೆಂಗಸರು ಆದಾಗ ಗಂಡರ ಮೇಲೆ ಹೆಚ್ಚು ಜೋಕುಗಳು
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 4:50pm — yuvapremi

ಉ: ಹೆಂಡತಿ-ಎಂದರೆ ಜೋಕು ಯಾಕೆ ?

yuvapremi's picture

ನಮಗೆ ಮದುವೇ ಬೇಡಾ ಸ್ವಾಮಿ....!! Eye-wink

ರೊಪ ಮೇಡಮ್, ನಿಮ್ಮ ಪತಿರಾಯರ ಸ್ನೇಹಿತರು ಮತ್ತೆ ನಿಮ್ಮ ಮನೆಗೆ ಬಂದಾಗ ಶ್ರೀ ಬ್ರಂಹಾಚಾರಿ ಆಂಜನೇಯ ಸ್ವಾಮಿಯು ಅವರನ್ನು ರಕ್ಷಿಸಲಿ ಎಂದು ಬೇಡಿಕೊಳ್ಳುವೆ..! Smiling

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 5:02pm — Sunil Jayaprakash

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Sunil Jayaprakash's picture

ಒಳ್ಳೆಯ ವಿಷಯ. ಮದುವೆಗೆ ನಂಟಾದ ನನ್ನೆ ಕೆಲವು ಅನಿಸಿಕೆಗಳು (*)

೧. ಮದುವೆಯಾಗುವುದರಿಂದ ಸ್ವಾತಂತ್ರ್ಯ (ಅದೂ ಮುಖ್ಯವಾಗಿ ಹೆಂಗಳೆಯರಿಗೆ) ಹೋಗುತ್ತದೆ ಎಂಬ ಕಾನ್ಸೆಪ್ಟಿನಲ್ಲಿ ನನಗೆ ವಿಶ್ವಾಸ ಮೂಡಿಲ್ಲ. ಒಂದು ಮದುವೆ ಓರ್ವ ಹೆಣ್ಣಿನ ಬಾಳಿನಲ್ಲಿ ಅದೆಷ್ಟು ಧೈರ್ಯ ತುಂಬುತ್ತದೆ ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಧೈರ್ಯವನ್ನು ಬೇಬೇರೆ ಆಯಾಮಗಳಿಂದ ನೋಡಬೇಕು. ಮದುವೆ ಆದಮೇಲೆ, "ಅತ್ತೆ" ಎಲ್ಲದಕ್ಕೂ ರೆಸ್ಟ್ರಿಕ್ಟ್ ಮಾಡ್ತಾರೆ, ಲೇಟಾಗಿ ಬಂದ್ರೆ "ಮಾವ" ಬಯ್ತಾರೆ, ಗಂಡ ಏನಂದ್ಕೋತಾನೆ, ಇವುಗಳನ್ನು "ಹೆಣ್ಣಿನ ಸ್ವಾತಂತ್ರ್ಯ ಹರಣ"ಕ್ಕೆ ನಂಟಾಗಿಸುವುದು ತರವಲ್ಲ. "ಏನೇ ಆದರೂ, ನೋಡಿಕೊಳ್ಳೋಕ್ಕೆ ಗಂಡ ಅನ್ನೋವ್ನು ಒಬ್ಬ ಇದ್ದಾನೆ ಎಂಬುದು ಹೆಂಡತಿಗೆ ಯಾವ ಕಾಲಕ್ಕೂ ಧೈರ್ಯ ಕೊಡತ್ತೆ".
೨. ಇಲ್ಲಿ ಚರ್ಚಿತವಾಗಿರುವ ಹೆಣ್ಣನ್ನು ನಗೆಪಾಟಲಿಗೀಡುಮಾಡುವ ಗಂಡಿನ ಮನಸ್ಥಿತಿ. ಇದಕ್ಕೆ ಬಹುಮಟ್ಟಿನ ಕಾರಣ, ನನಗೆ ಅನಿಸುವ ಮಟ್ಟಿಗೆ, "ಗಂಡಿನ ಸ್ವಾರ್ಥ". ಈಗ ನೋಡಿ. ಒಂದು ಗಂಡು, ತನ್ನ ಹೆಂಡತಿಯನ್ನು ಹೀಗೆ ಪರಿಚಯಿಸುತ್ತಾನೆ. "ಈಕೆ ನನ್ನ ಹೆಂಡತಿ". ಒಬ್ಬ, ನನಗೆ ಹೀಗೆ ಹೇಳಿದ್ದ, "ಇವಳು ನನ್ನ ರಿಲೇಟೀವ್, ಹಾಗೆ ಈಗ ಗರ್ಲಫ್ರೆಂಡ್". ಅಪರೂಪಕ್ಕೆ "ಇವಳು ನಮ್ಮಾಕೆ", "ನಮ್ಮ ಮನೆಯವಳು", "ನಮ್ಮ ಕುಟುಂಬ" ಹೇಳುವುದುಂಟು. "ಈಕೆ ನನ್ನ ಹೆಂಡತಿ" ಅಂದಾಗ ಏನಾಗುತ್ತದೆ ನೋಡಿ, "ಈಕೆ ನನ್ನ ತಾಯಿಯ ಸೊಸೆ", "ನನ್ನ ಮಗನ ತಾಯಿ", "ನನ್ನ ತಮ್ಮನ ಅತ್ತಿಗೆ", "ನನ್ನ ಅತ್ತಿಗೆಯ ಓರಗಿತ್ತಿ" ಇವುಗಳು ಹಿಂದೆಸರಿಯುತ್ತದೆ. ಅಂದರೆ ಹೆಣ್ಣು ಇಡೀ ಮನೆಗಲ್ಲದೆ, ತನಗೊಬ್ಬಳಿಗೇ ಸೇರಿದವಳು ಎಂಬ "ಟೇಕನ್ ಫಾರ್ ಗ್ರಾಂಟೆಡ್" ಮನಸ್ಥಿತಿ. ಆದರೆ ಒಂದು ಹೆಣ್ಣು ತನ್ನ ಗಂಡನನ್ನು ಪರಿಚಯಿಸುವಾಗ, "ನಮ್ಮ ಮನೆಯವರು", "ಇವರು", "ನಮ್ಮವರು", "ಇವರು ನಮ್ಮೆಜಮಾನ್ರು" ಈ ರೀತಿಯ ಪದಬಳಕೆಮಾಡ್ತಾರೆ. ಹೀಗೆ ಮಾಡಿದಾಗ, ಗಂಡ ತನಗೊಬ್ಬನಿಗೇ ಅಲ್ಲದೆ, ಎಲ್ಲರಿಗೂ ಸೇತುವಾಗಬೇಕಾದವನು ಎಂದುಕೊಳ್ಳುತ್ತಾರೆ. ಆದರೆ ಗಂಡಿಗೆ ಈ ಹಂಗಿಲ್ಲ.

* - ಈ ಮೇಲಿನ ಪಾಯಿಂಟುಗಳಿಗೆ ಅಪವಾದಗಳೂ ಇವೆ. ಈಗೀಗ ನಗರಗಳಲ್ಲಿ, ಮೇಲಿನ ಪದಗಳ ಬದಲಾಗಿ ಬೇರೆ ಪದಗಳು ಬಳಕೆಯಲ್ಲಿದೆ. ಆದರೆ, ಎಲ್ಲ ವಿಷಯಗಳ ಒಳಗುಟ್ಟು "ತನ್ನವಳಾಗಿಬಿಟ್ಟಿದ್ದಾಳೆ", "ತನ್ನದೆನ್ನುವ ಸ್ವಾರ್ಥ".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 5:09pm — Sunil Jayaprakash

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Sunil Jayaprakash's picture

"ಸ್ವಾರ್ಥ" ಒಂದು ಕಡೆಯಾದರೆ, "ಒಣ-ಒಳ-ಹಮ್ಮು-ಬಿಗುಮಾನ" ಮತ್ತೊಂದು. ಯೂಶುವಲಿ, ಹೆಂಡತಿಗಿಂತ ಗಂಡು ಹೆಚ್ಚು ಓದಿರುತ್ತಾನೆ, ಇಲ್ಲವೇ ಹೆಚ್ಚು ಅನುಭವ ಪಡೆದವನಾಗಿರುತ್ತಾನೆ. ಈ ಅಂಶವೇ, ದಾಂಪತ್ಯದಲ್ಲಿ ಕೆಲವೊಮ್ಮೆ ಮುಳುವಾಗುತ್ತದೆ. "ತನ್ನ ಹೆಂಡತಿಯೂ ತನ್ನಂತೆ ಪ್ರಬುದ್ಧಳಾಗಲಿ, ಎಲ್ಲ ವಿಷಯ ತಿಳಿದುಕೊಳ್ಳಲಿ", ಎಂದು ಯೋಚಿಸುವುದಕ್ಕಿಂತ, "ತಾನು ಹೆಂಡತಿಗಿಂತ ಹೆಚ್ಚು ಪ್ರಬುದ್ಧ, ತನ್ನ ಮಾತನ್ನು ಆಕೆ ಕೇಳಬೇಕು", "ತನ್ನ ಹೆಂಡತಿಗೆ ಏನೂ ತಿಳಿಯಲ್ಲ" ಎಂಬ ಭ್ರಮೆ ಹೆಂಡತಿಯನ್ನು ಕುರಿತು ಜೋಕ್ ಮಾಡುವಂತೆ ಪ್ರೇರೇಪಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 6:20pm — cmariejoseph

ಉ: ಹೆಂಡತಿ-ಎಂದರೆ ಜೋಕು ಯಾಕೆ ?

cmariejoseph's picture

ನನ್ನ ಹೆಂಡತಿ ನನ್ನ ಬೋಳುಮಂಡೆಯ ಬಗ್ಗೆ ಜೋಕು ಮಾಡುತ್ತಾಳೆ ಹಾಗೆಯೇ ಅವಳ ಗಾತ್ರದ ಬಗ್ಗೆ ನಾನು ಜೋಕ್ ಮಾಡುತ್ತೇನೆ, ನಮ್ಮ ಸಲ್ಲಾಪದಲ್ಲಿ ಗಂಡಹೆಂಡಿರ ಬಗೆಗಿನ ಹಲವು ಜೋಕುಗಳು ಬಂದುಹೋಗುತ್ತವೆ, ಅವು ನಕ್ಕು ಬಿಡುವುದಕ್ಕಷ್ಟೇ ಸೀಮಿತವಾಗುತ್ತವೆ ಅಷ್ಟೆ. ಇನ್ನು ನನ್ನ ಅವಳ ಅನುಬಂಧ ಅನುಪಮ. ಅದು ನಮ್ಮಿಬ್ಬರಿಗಷ್ಡೇ ಗೊತ್ತು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 9:29am — hamsanandi

ಉ: ಹೆಂಡತಿ-ಎಂದರೆ ಜೋಕು ಯಾಕೆ ?

hamsanandi's picture

ರೂಪಾ ಅವರೆ,

ಸಂಪದದಲ್ಲಿ ಎಲ್ಲರೂ ಹೀಗೆ ಅಂತ ಹೇಳ್ಬೇಡ್ರೀ!!

ವರ್ಷಕ್ಕೂ ಹಿಂದೆ ನಾನು ಪೋಸ್ಟಿಸಿದ ಬರಹವೊಂದು ನೋಡಿ , ಇಲ್ಲಿದೆ:

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ... : http://sampada.net/blog/hamsanandi/25/05/2007/4149

ಇದನ್ನೇ ಇನ್ನೊಂದು ಸ್ವಲ್ಪ ಬೆಳೆಸಿ ದಟ್ಸ್ ಕನ್ನಡಕ್ಕೆ ಕಳಿಸಿದ್ದೆ - ಫೆಬ್ರವರಿಯಲ್ಲಿ ಪ್ರಕಟವಾಗಿತ್ತು. ಈಗ ಅದರ ಕೊಂಡಿ ಸಿಕ್ತಿಲ್ಲ..

-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 12:52am — hamsanandi

ಉ: ಹೆಂಡತಿ-ಎಂದರೆ ಜೋಕು ಯಾಕೆ ?

hamsanandi's picture

ರೂಪಾ ಅವರೆ,

ಹಿಂದಿನ ಟಿಪ್ಪಣಿಯಲ್ಲಿ ಹೇಳಿದ್ದ ಸ್ವಲ್ಪ ಬೆಳೆಸಿದ ಬರಹ ಇಲ್ಲಿದೆ:

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ಏನಂತೀಗ:
http://thatskannada.oneindia.in/nri/article/2008/0802-my-wife-my-valenti...

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2008 - 12:15am — ಗಣೇಶ

ಉ: ಹೆಂಡತಿ-ಎಂದರೆ ಜೋಕು ಯಾಕೆ ?

ಗಣೇಶ's picture

ಬರೀ ಒಬ್ಬರು..
ಯುವಪ್ರೇಮಿ ಒಬ್ಬರೇ "ನಮಗೆ ಮದುವೆ ಬೇಡಾ ಸ್ವಾಮಿ"ಅಂದರು. ಅದೂ ನನಗೆ ಎಂದಿಲ್ಲ!!
ರೂಪಾ ಮೇಡಮ್ ಒಬ್ಬರು ಹೆದರಿಸಿದಾಗಲೇ ಎಲ್ಲಾ ಗಪ್‌ಚಿಪ್! Smiling
ರೂಪಾ ಅವರೆ,
ಯಾವುದೋ ಮೆಷಿನ್ ಅಲ್ಲ-ಸಂಪದದಲ್ಲಿ ಹೆಸರುವಾಸಿಯಾಗಿರುವ "ರಾಗಿಮುದ್ದೆ ಮೆಷಿನ್".
ಅದರಲ್ಲೇ 'ನನ್ನನ್ನು ತರಾಟೆಗೆ ತೆಗೆದುಕೊಳ್ಳಬೇಡಿ, ಪ್ಲೀಸ್' ಎಂದೂ ಬರೆದಿದ್ದರು. ಆದರೂ ತರಾಟೆಗೆ ತೆಗೆದುಕೊಂಡಿದ್ದೀರಿ.
ನಿಮ್ಮ ಯಜಮಾನರು ಮಿತ್ರನ ಬಳಿ ಮಾತನಾಡಿದ್ದನ್ನೂ ನಿಮಗೆ ವರದಿ ಒಪ್ಪಿಸುತ್ತಾರೆ ಯಾಕೆ?
******
ಮದುವೆಯಾಗದ ಗಂಡುಗಳೇ
ಹೆಂಡತಿ ಅಂದರೆ ತಾಪತ್ರಯ ಅಲ್ಲವೇ ಅಲ್ಲ
-ತಾಪಶತ-ತಾಪ ಸಹಸ್ರ.
ಇನ್ನಾದರೂ ಕೈ ಎತ್ತಿ (ಮಹೇಶರನ್ನು ಬಿಟ್ಟು ಉಳಿದವರು).

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 3:51pm — roopablrao

ಉ: ಹೆಂಡತಿ-ಎಂದರೆ ಜೋಕು ಯಾಕೆ ?

roopablrao's picture

ಗಣೇಶ್‌ರವರೆ
ನಿಮ್ಮ ಈ ಪ್ರತಿಕ್ರಿಯೆನಾ ನಿಮ್ಮಾಕೆ ಮುಂದೆ ತೋರಿಸುವ ಧೈರ್ಯ ಮಾಡಿದ್ದೀರಾ?

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 11:13pm — ಗಣೇಶ

ಉ: ಹೆಂಡತಿ-ಎಂದರೆ ಜೋಕು ಯಾಕೆ ?

ಗಣೇಶ's picture

>>ನಿಮ್ಮ ಈ ಪ್ರತಿಕ್ರಿಯೆಯನ್ನು ನಿಮ್ಮಾಕೆ ಮುಂದೆ ತೋರಿಸುವ "ಧೈರ್ಯ" ಮಾಡಿದ್ದೀರಾ?

ಹೆಂಡತಿ ಎಂದರೆ "ಭಯಾನಕ ಪ್ರಾಣಿ" ಎಂಬಂತೆ ರೂಪಾ ಅವರೇ ಜೋಕ್ ಮಾಡಿದರಲ್ವಾ!!!
ಜೋಕ್ ಅಲ್ಲಾ ಎಂದಾದರೆ-ಯುವಕರೆ,
ಇದನ್ನು ಓದಿದ ಮೇಲೂ ಮದುವೆ ಆಗುವ "ಧೈರ್ಯ" ಇದೆಯಾ?
ಹಾಯಾಗಿರುವುದು ಬಿಟ್ಟು ಯಾಕೆ ರಿಸ್ಕ್ ತೆಗೆದುಕೊಳ್ಳುತ್ತೀರಿ?
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2008 - 9:24pm — kalpana

ಉ: ಹೆಂಡತಿ-ಎಂದರೆ ಜೋಕು ಯಾಕೆ ?

kalpana's picture

ರೂಪ,
ನೀವು ಗಂಡನ ಬಗ್ಗೆ ಜೋಕುಗಳನ್ನು ಕೇಳಿಲ್ಲವೇನು? ಸರಿ, ನಿಮಗೆ ಸಧ್ಯದಲ್ಲೆ ಇ-ಮೇಲ್ ಮಾಡುತ್ತೇನೆ Smiling

ಆದರೆ, ನೀವು ಹೇಳಿದ್ದು ನಿಜ. ಮದುವೆ ಒಂದು ರೀತಿಯ ಸಂಕೋಲೆ ಅನ್ನುವ ರೀತಿ ಬಹಳ ಗಂಡಸರು ಮಾತನಾಡುತ್ತಾರೆ. ಮದುವೆಯಾದ ಮೇಲೆ ಒಳ್ಳೆಯ ಗೃಹಿಣಿ, ಹೆಂಡತಿಯಾಗಲು ಹೆಂಗಸರಿಗೆ ಹೆಚ್ಚು ಸಮಯ ಹಿಡಿಸುವುದಿಲ್ಲ. ಆದರೆ, ಗಂಡಸರು ಮಾತ್ರ ತಮ್ಮ bachelorhoodನ ಅಷ್ಟು ಬೇಗ ತ್ಯಜಿಸುವುದಿಲ್ಲ. ಜವಾಬ್ದಾರಿಯಿಲ್ಲದ ಹುಡುಗರ ಹಾಗೆ ಇರಲು ಪ್ರಯತ್ನಿಸುತ್ತಾರೆ! ಗಂಡಸರು ತಮ್ಮ ಸಮರ್ಥನೆಗಾಗಿ ಒಂದು ಗಾದೆಯನ್ನೂ ಹುಟ್ಟುಹಾಕಿಕೊಂಡಿದ್ದಾರಲ್ಲ - Boys will be boys ಅಂತ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2008 - 10:27pm — Sunil Jayaprakash

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Sunil Jayaprakash's picture

ಏನ್ರೀ ಅದು, ಕಲಿಸಿಂಹಗಳ ಮೇಲಿನ ಜೋಕು. ಹುಶ್-ಆರ್!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2008 - 10:29pm — Sunil Jayaprakash

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Sunil Jayaprakash's picture

೧. ಹೆಂಡತಿ, ಪ್ರಾಣ ಹಿಂಡುತಿ, ಕೊಂಡ ಕೊಂಡ ಕೋತಿಯಂತೆ ಕುಣಿ ಕುಣಿಯುತ.
೨. ಹೆಂಡ ಬುಟ್ಟೆ, ಹೆಣ್ತೀನ್ ಬುಟ್ಬುಡ್ ರತ್ನಾ ಅಂತವ್ನೇನಾರಂದ್ರೆ, ಕಳ್ದೋಯ್ದಂತೆ ಕುಣ್ದಾಡ್ತೀನಿ ದೊಡ್ದೊಂದ್ ಕಾಟ ತೊಂದ್ರೆ.

ನಾನಲ್ಲಪ್ಪಾ, :ಗಪಚುಪ:

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 3:39pm — ಶ್ರೀನಿವಾಸ ವೀ. ಬ೦ಗೋಡಿ

ಉ: ಹೆಂಡತಿ-ಎಂದರೆ ಜೋಕು ಯಾಕೆ ?

ಶ್ರೀನಿವಾಸ ವೀ. ಬ೦ಗೋಡಿ's picture

Quote:
ಹೆಂಡ ಬುಟ್ಟೆ, ಹೆಣ್ತೀನ್ ಬುಟ್ಬುಡ್ ರತ್ನಾ ಅಂತವ್ನೇನಾರಂದ್ರೆ, ಕಳ್ದೋಯ್ದಂತೆ ಕುಣ್ದಾಡ್ತೀನಿ ದೊಡ್ದೊಂದ್ ಕಾಟ ತೊಂದ್ರೆ.

ಈ ಪದ್ಯ ಸುರುವಾಗೋದು,

ಎಂಡ, ಎಂಡ್ತಿ, ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 3:56pm — roopablrao

ಉ: ಹೆಂಡತಿ-ಎಂದರೆ ಜೋಕು ಯಾಕೆ ?

roopablrao's picture

ಸುನೀಲರೆ
ಅತಿಯಾಯ್ತಲ್ಲವಾ
ಈ ಪುಟಾನ ಸೇವ್ ಮಾಡಿಕೊಂಡಿರ್ತೆನೆ
ನಿಮಗೂ ಮದವೆಯಾದ ಮೇಲೆ ನಿಮಗೆ ಮೈಲ್ ಮಾಡೋದಿಕ್ಕೆ Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2008 - 10:35pm — Sunil Jayaprakash

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Sunil Jayaprakash's picture

ಸಂಪದಗಿತ್ತಿಯರಿಗೆ (ರೂಪಾ, ಕಲ್ಪನಾ,... ಮನ್ನಿಸಿ ಬೇರೆಯವರ ಹೆಸರು ಬರೆಯದಿದ್ದುದಕ್ಕಾಗಿ) ಒಂದು ಸೀರಿಯಸ್ ಪ್ರಶ್ನೆ. ಹೆಂಗಸರಲ್ಲಿ ಸ್ವಲ್ಪ ಕೀಳರಿಮೆ ಹೆಚ್ಚಿನೆಸುವಷ್ಟು ಇರಬಹುದೇ ? ಈ ಕೀಳರಿಮೆಯನ್ನು ಹೋಗಲಾಡಿಸಲೊಸುಗ, ಶತಾಯಗತಾಯ ತನ್ನ ಮೇಲೆ ಯಾರೂ ಜೋಕ್ ಮಾಡಕೂಡದು ಎಂಬ ಬೇಲಿ ಹಾಕಿಕೊಂಡಿರಬಹುದೇ ?

ಎಲ್ಲಿ ಸಲಿಗೆ ಇರುತ್ತೋ, ಅಲ್ಲಿ ಜೋಕು ತಂತಾನೇ ಹುಟ್ಟಿಬಿಡುತ್ತದೆ. ಏನಂತೀರಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 9:59pm — kalpana

ಉ: ಹೆಂಡತಿ-ಎಂದರೆ ಜೋಕು ಯಾಕೆ ?

kalpana's picture

ಸುನೀಲರೆ,
ನೀವು ಆದಷ್ಟು ನಮ್ಮನ್ನು ಕೆಣಕಿ ಮಜ ತೆಗೆದುಕೊಳ್ಳೋಣ ಅನ್ಕೋತಿರೋ ಹಾಗಿದೆ Smiling ನಾವು ಮದುವೆಯ ಖೆಡ್ಡಾದಲ್ಲಿ ಪಳಗಿದೆ ಸಿಂಹಿಣಿಗಳು ಸ್ವಾಮಿ. ಇದಕ್ಕೆಲ್ಲ ಸೊಪ್ಪು ಹಾಕೊಲ್ಲ. ಏನೂ ತಿಳಿಯದ "ಬಚ್ಚಾ" ಅಂತ ಸುಮ್ನೆ ಬಿಟ್ಬಿಡ್ತಿದ್ದೀವಿ ಹೋಗಿ! Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 7, 2008 - 10:47pm — Sunil Jayaprakash

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Sunil Jayaprakash's picture

ಇಲ್ಲ ಕಲ್ಪನ ಅವರೆ, ಕೆಣಕುವ ಕಾಮೆಂಟ್ ಜೊತೆಗೆ ಸೀರಿಯಸ್ ಕಾಮೆಂಟುಗಳನ್ನೂ ಸೇರಿಸಿದ್ದೇನೆ ನೋಡಿ.

೧. http://sampada.net/forum/9723#comment-22484
೨. http://sampada.net/forum/9723#comment-22488
೩. http://sampada.net/forum/9723#comment-22577

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 12:05pm — Guruprasadkr

ಉ: ಹೆಂಡತಿ-ಎಂದರೆ ಜೋಕು ಯಾಕೆ ?

Guruprasadkr's picture

ಎಲ್ಲೋ ಒಂದು ಕವನ ಓದಿದ ನೆನಪು,
" ಮದುವೆಯಾದ ಮೇಲೆ ಗಂಡ, ಹೆಂಡತಿ ಬಳಿ ಹೇಳಿದ serious ಆಗಿ:
ಗಂಡ:- ಪ್ರಿಯೆ, ನಾವು ಈಗಷ್ಟೇ ಮದುವೆಯಾಗಿದೇವೆ, ನನಗೆ ಬರುವ ಈ ಅಲ್ಪ ಸಂಬಳದಲ್ಲಿ ನೀನು ಖುಷಿಯಾಗಿ ಬದುಕಾಬಲ್ಲೆಯ?
ಹೆಂಡತಿ:- ಖಂಡಿತ ಇರಬಲ್ಲೆ ಡಿಯಾರ್ , ನನಗದು ಸಾಕು, ಆದರೆ ನೀನು ಬದುಕಲು ಏನು ಮಾಡ್ತೀಯಾ?

ಇದನ್ನು serious ಅನ್ನಬೇಕೋ ಅಥವಾ ಜೋಕು ಅಂತ ಹೇಳಬೇಕೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 1:20pm — nagesamrat

ಉ: ಹೆಂಡತಿ-ಎಂದರೆ ಜೋಕು ಯಾಕೆ ?

nagesamrat's picture

ಓಶೋ ಒಂದು ಕಡೆ ಹೇಳಿದ್ದಾನೆ. ತುಂಬಾ ಕಷ್ಟದಲ್ಲಿ ಜೀವನ ನಡೆಸುವವರಿಗೆ, ದುರಂತಗಳಲ್ಲಿ ಬಾಳುವೆ ಮಾಡುವವರಿಗೆ ಜೋಕುಗಳ ಅಗತ್ಯವಿರುತ್ತದೆಯಂತೆ. ಅಂಥವರ ಬಳಿ ಶ್ರೇಷ್ಠವಾದ ಜೋಕು ಇರುತ್ತವಂತೆ. ಅದಕ್ಕೇ ಯಹೂದಿಗಳ ಜೋಕುಗಳು ತುಂಬಾ ಚೆನ್ನಾಗಿರ್ತವಂತೆ.
ಅದನ್ನೇ ಗಂಡಂದಿರ ಬಗ್ಗೆ ಹೇಳಬಹುದೇನೋ!
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 17, 2008 - 6:19pm — ಸಂಗನಗೌಡ

ಉ: ಹೆಂಡತಿ-ಎಂದರೆ ಜೋಕು ಯಾಕೆ ?

ಸಂಗನಗೌಡ's picture

ಹಾ ಹಾ!! ಅಯ್ಯೋ ಪಾಪ, ಮದುವೆ ಆದವರೇ!!..
ಯಾವುದಕ್ಕೂ, ಹೆಂಡತಿ ಮೇಲಿನ ಜೋಕುಗಳ ಸ್ಟಾಕ್ ಕಾಯ್ದಿಟ್ಟುಕೊಳ್ಳಬೇಕು,.. ಅವು ಬತ್ತಳಿಕೆಯಲ್ಲಿನ ಒಳ್ಳೆ ಬಾಣಗಳು,.. ಯಾರದರೂ ಮಿಂಚೋಲೆಯಲಿ ಕಳಿಸಿರಿ,.. ತುಂಬ ನೆರವಾಗುತ್ತದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 17, 2008 - 10:10am — vallish Rao

ಉ: ಹೆಂಡತಿ-ಎಂದರೆ ಜೋಕು ಯಾಕೆ ?

vallish Rao's picture

hendathi endare jokalla. avaLa naalige harithavaada chaaku. abbabba enu maathaadthale enu jagala maadthale. joke maadade innenri. adella thamashe ge reee. serious aagi thogobardu. Vajpayee mele, laalu bagge joke madolwa? jokes yaavaglu famous perseonalities mele ne maadodu.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಂಡ-ಹೆಂಡತಿ-ಅತ್ತೆಯ ಕುರಿತ ಮೂರು ಜೋಕುಗಳು!
  • ಒಂದು ಜೋಗಿ ಕತೆ ಕೇಳಿ
  • ಮದುವೆ
  • ಗಂಡನ ಕಾರಣದಿಂದ ಹೆಂಡತಿ How ದಪ್ಪ?
  • ಮರು ಮದುವೆ?
Syndicate content

ಲೇಖಕರು

roopablrao's picture

ಪೂರ್ಣ ಹೆಸರು
ರೂಪ

ಪರಿಚಯ

ಹಾಯ್
ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ಹತ್ತು ಜನರ ಮಧ್ಯೆ ನನ್ನ ಸ್ವಂತಿಕೆ ಎದ್ದು ಕಾಣಬೇಕೆಂಬ ಹಂಬಲದಲ್ಲಿ ಇದ್ದ ಕೆಲಸ ಬಿಟ್ಟು ವಿದ್ಯೆ ನೀಡುವ ಸೇವಾ ಕ್ಶೇತ್ರವೊಂದನ್ನು ಉದ್ಯಮವನ್ನಾಗಿ ಆರಿಸಿದ್ದೇನೆ. ಕತೆ ಕವನ ಲೇಖನ ಇವುಗಳು ನನ್ನ ಹವ್ಯಾಸಗಳು
ನನ್ನ ಗುರಿ
ಸಮಾಜದಲ್ಲಿ ಅಗುವ ಅನ್ಯಾಯದ ವಿರುದ್ದ ಹೋರಾಡಬೇಕೆಂಬ ಛಲವಿದ್ದರೂ ಜೋಡಿಸುವ ಕೈಗಳಿಲ್ಲದೇ ಮೂಕ ಪ್ರೇಕ್ಶಕಳಾಗಿದ್ದೇನೆ. ಆದರೂ ಆಗೊಮ್ಮೆ ಈಗೊಮ್ಮೆ ಎತ್ತುವ ದನಿ ಪರಿಸ್ಥಿತಿಯ ಗುಡುಗಿನ ನಡುವೆ ಕೇಳಿಸುವುದೇ ಇಲ್ಲ.
ಕನ್ನಡ ಎಂದರೆ ನನಗೆ ಅಚ್ಹ್ಚುಮೆಚ್ಹು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator