ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

July 4, 2008 - 11:20am — vikashegde

ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್ತು ಅಲ್ಲಿನ ಸರ್ಕಾರ, ಜನರಿಂದಲೇ ತೊಂದರೆ ಶುರುವಾಗಿದೆ. ಸುಖಾ ಸುಮ್ಮನೆ ಅಲ್ಲಿನ ಸರ್ಕಾರ ಮತ್ತು ಕೆಲ ಮುಸ್ಲಿಂ ಸಂಘಟನಳು, ಜನರು ಈ ವಿಷಯದಲ್ಲಿ ಮೂಗು ತೂರಿಸುತ್ತಿವೆ. ಯಾತ್ರೆಗೆ ಬರುವ ಜನರ ಅನುಕೂಲ, ವ್ಯವಸ್ಥೆಗಾಗಿ ಸರ್ಕಾರದಿಂದ ಕೊಡಲ್ಪಟ್ಟ ಜಾಗವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹಿಂಸಾತ್ಮಕ ಪ್ರತಿಭಟನೆ ಮಾಡಿದ್ದಾರೆ ಕಾಶ್ಮೀರದ ಮುಸ್ಲಿಮರು ಮತ್ತು ಅದರಲ್ಲಿ ಸಫಲರಾಗಿದ್ದಾರೆ. ಇದೇ ರೀತಿ ಹಜ್ ಯಾತ್ರೆಯ ಬಗ್ಗೆ ಅಥವಾ ವ್ಯಾಟಿಕನ್ ಬಗ್ಗೆ ಹಿಂದೂಗಳು ಪ್ರತಿಭಟನೆ ಮಾಡಿದ್ದಾಗಲೀ ಅಥವಾ ಮೂಗು ತೂರಿಸಿದ್ದಾಗಲೀ ಎಲ್ಲೂ ಇಲ್ಲ.

ಅಂತದ್ದರಲ್ಲಿ ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ಹಿಂದೂಗಳ ಪವಿತ್ರ ಸ್ಥಳವೊಂದರ ಯಾತ್ರೆಯ structure ನಿರ್ಥರಿಸಲು ಇವರು ಯಾರು? ವಿ.ಎಚ್.ಪಿ. , ಭಜರಂಗದಳ, ಬಿ.ಜೆ.ಪಿ , ಆರೆಸ್ಸಿಸ್ಸಿನ ಕತೆ ಇಲ್ಲಿ ಬೇಡ. ಒಬ್ಬ ಹಿಂದೂ ಆಗಿ ಇದನ್ನು ವಿರೋಧಿಸುವುದಕ್ಕಿಂತ, ಒಂದು ಪ್ರಜಾಪ್ರಭುತ್ವವುಳ್ಳ, ಜಾತ್ಯಾತೀತ ದೇಶದ ಪ್ರಜೆಯಾಗಿ ಇದನ್ನು ಸಮರ್ಥಿಸಿಕೊಳ್ಳುವವರೂ ಇದ್ದಾರೆಂದರೆ ಆಶ್ಚರ್ಯ! ಅದೊಂದು ಪ್ರಾದೇಶಿಕೆ ಸಮಸ್ಯೆ ಎಂದು ತಮ್ಮ ಮೂರ್ಖತನ ತೋರಿಸುವ ಬುದ್ಧಿವಂತರೂ ಇದ್ದಾರೆ. ಇದ್ಯಾಕೆ ಈ ದೇಶ ಹೀಗೆ ಸೋಗಲಾಡಿಗಳ ಬೀಡಾಗಿದೆ?

‹ ಮದುವೆಯಾಗಿ ನಿಮ್ಮ ಬದುಕು ಬದಲಾಯಿತೆ?ಹೇಗೆ? ಹೆಂಡತಿ-ಎಂದರೆ ಜೋಕು ಯಾಕೆ ? ›
  • ಸಮಾಜ
~.~
  • Login or register to post comments
  • 528 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 4, 2008 - 12:49pm — mahesha

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

mahesha's picture

ನಿರ್ಥರಿಸಲು ?!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:56pm — vikashegde

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

vikashegde's picture

spell checker ಗೆ ನನ್ನಿ : ನಿರ್ಧರಿಸಲು
ಇನ್ನೂ ಒಂದು ಬಿಟ್ಟೋಗಿದೆ spell checking ನಲ್ಲಿ : ಪ್ರಾದೇಶಿಕ

Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 5:38pm — ವೈಭವ

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ವೈಭವ's picture

ಹೆಗಡೆ,

ನನಗೆ ಈ ತಲೆಸಾಲು ನೋಡಿ ಈ ತರ ಅನ್ನಿಸಿತು. ಆದರೆ ನಿಮ್ಮ ಬರಹದ ಗುರಿಗೆ ನಂಟಿರುವುದಲ್ಲ. ಮನ್ನಿಸಿ.

ಹೀಗೆ ಸಕ್ಕದ ಪದಗಳನ್ನು ಕಡಿಮೆ ಬಳಸಿದರೆ ಈ spelling ತಪ್ಪುಗಳು ಕಡಿಮೆಯಾಗುತ್ತವೆ,
ನನ್ನಿ ಹೆಗಡೆಯವರೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 5:47pm — vikashegde

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

vikashegde's picture

ಅಯ್ಯೋ, ಆಂಡವಾ... ಎನ್ನಪ್ಪಾ ಇದು.
ಟೈಪಿಂಗು dha ಬದಲು tha ಕುಟ್ಟಿದ್ದಕ್ಕೆ ಇವರು ಸಕ್ಕದ, ಕನ್ನಡ ಅಂತೆಲ್ಲಾ ಅಂತಾರಲ್ಲಪ್ಪ!

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:51pm — mahesha

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

mahesha's picture

ಹಿಂದುಗಳು ಎಂದರೆ ಯಾರು? ಒಂದು ಬರಹ ಬೇಕು..

ಇದೊಂದು prompt ಪ್ರಸ್ನೆ.. ಹಲವು ಸರತಿ ಇಲ್ಲಿ ಕೇಳಿದ್ದೀವಿ.. ಉತ್ತರ ಯಾರು ನೀಡಿಲ್ಲ.!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:58pm — vikashegde

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

vikashegde's picture

ಇಲ್ಲಿ ಹಳಸಲು ತಾತ್ವಿಕ ಪ್ರಶ್ನೆಗಳಿಗಿಂತ ಪ್ರಸ್ತುತ ವಿಷಯಗಳ ಬಗ್ಗೆ ಪ್ರಶ್ನೆಗಳು ಒಳ್ಳೆಯದು.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 1:07pm — mahesha

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

mahesha's picture

"ಹಿಂದುಗಳು ಯಾರು?" ಎಂಬುದು ಹಳಸಲು ತಾತ್ವಿಕ ಪ್ರಶ್ನೆ ಅಲ್ಲ..

ಈಗ ನಾನು ಹಿಂದು ಅಲ್ಲವೋ ಹೌದೋ?
ಇಲ್ಲವೇ
ನೀವು ಹಿಂದು ಅಲ್ಲವೋ ಹೌದೋ?

ಅದು ಹೇಗೆ...??

ಇದೂ ಹಳಸಲು ಆದರೆ.. ತಪ್ಪಾಯ್ತು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 1:42am — ಕೇವೆಂ

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಕೇವೆಂ's picture

ನನಗೆ ತಿಳಿದಿರುವ ಉತ್ತರಗಳನ್ನ ಇಲ್ಲಿ ತೋರಿಸಿದ್ದೀನಿ.

ಸಾವರಕರರ ಮಾತಿನಲ್ಲಿ - ಹಿಮಾಲಯದಿಂದ ಹಿಡಿದು ಕಡಲಿನ ನಡುವೆ ಇರೋ ನಾಡನ್ನ ತಮ್ಮ ಹಿರಿಯರ ನಾಡು ಮತ್ತು ಪವಿತ್ರ ಅಂತ ತಿಳಿದವರೆಲ್ಲಾ ಹಿಂದುಗಳು.
ಇದರ ಪ್ರಕಾರ ಮುಸ್ಲಿಮರು , ಕ್ರಿಸ್ಚಿಯನರು, ಪಾರ್ಸಿಗಳು,ಕಮ್ಯುನಿಸ್ಟರು ಹೊರತಾಗುತ್ತಾರೆ. ಸೀಕ್ಕರು, ಭೌದ್ಧರು , ಲಿಂಗಾಯತರು ,ಕೊಡವರು,ಚಾರ್ವಾಕರು,ಸೋಲಗರು, ಕಾಡು ಕುರುಬರು ಎಲ್ಲಾ ಸೇರಿಕೊಳ್ತಾರೆ.ಇದು ಒಂಥರಾ "geographic definition"

ಇನ್ನೊಂದು ನೋಡುವ ರೀತಿ ( ಆಧ್ಯಾತ್ಮದ ಕಡೆಯಿಂದ)
ಭಾರತದ ಯಾವುದೆ ಒಂದು "ಧಾರ್ಮಿಕ" ಪರಂಪರೆಗೆ ಸೇರಿದವರು.
ಇಲ್ಲ "ಧರ್ಮ"ಕ್ಕೆ ಬೇರೆ ಅರ್ಥ ಇದೆ.ಪೂರಾ ಸರಿಯಾಗಿ ಹೇಳಲು ನಾನು ತಕ್ಕವನಲ್ಲ. ಇಲ್ಲಿ ಮುಖ್ಯವಾದ ಸಂಗತಿಗಳು ಮಾತ್ರ ಇವೆ. ---
ಪ್ರಕೃತಿ ಮತ್ತು ಸಮಾಜದೊಡನೆ ಸಮತೋಲನದಿಂದ ಬದುಕುತ್ತ ಅನುಭವ ಮತ್ತು ಪರಂಪರೆಯೆ ಆಧಾರದ ಮೇಲೆ ಬಾಳಿನ ಸತ್ಯವನ್ನು ಹುಡುಕುವ ಪರಿ.
ಇದು ಮತ ಅಥವಾ ಪಂಥ ಅಲ್ಲ.ಪ್ರವಾದಿ ಮತ್ತು ಪುಸ್ತಕದ ಹಂಗಿಲ್ಲ. ಹೊರಗಿನವರು ಮತ್ತು ಒಳಗಿನವರೆಂಬ ವ್ಯತ್ಯಾಸವಿಲ್ಲ. ಹೊರಗಿನವರು ಒಳಗಿನವರಾಗಬೇಕೆಂಬ ಒತ್ತಡವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 12:59pm — mahesha

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

mahesha's picture

ಮನ್ನಿಸಿ ಹೆಗಡೆಯವರೆ..

ನಾನು ಈ ಚರ್ಚೆಯ ಹರಿವನ್ನು ತಿರುಗಿಸಲು ಎಳಸುತ್ತಿಲ್ಲ

"ಅಂತದ್ದರಲ್ಲಿ ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ಹಿಂದೂಗಳ ಪವಿತ್ರ ಸ್ಥಳವೊಂದರ ಯಾತ್ರೆಯ structure ನಿರ್ಥರಿಸಲು ಇವರು ಯಾರು?"
ಈ ಸಾಲಿನ ಬಗ್ಗೆ ನನ್ನ ಪ್ರಸ್ನೆ..

ಬರೆಯಲ್ಲಿ ಇಶ್ಟ ಇಲ್ಲದಿದ್ದರೆ ಬೇಡ.. ತಪ್ಪಾಯ್ತು.

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 2:17pm — roshan_netla

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

roshan_netla's picture

ನಾನು ಹಿಂದು!! ಅದು ಹೇಗೆ ಅನ್ನುವು ದು ನಿಮ್ಮ ಮುಂದಿನ ಪ್ರಶ್ನೆಯೆ? Smiling)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 4:40pm — ahankari

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ahankari's picture

ಈ ವಿಶಯದ ಬಗ್ಗೆ ನನಗೂ ಕೆಲವು ಸಂದೇಹಗಳಿವೆ . ಯಾರನ್ನು ಹಿಂದು ಅನ್ನಬೇಕು , ಹಿಂದು ಎಂದು ಒಬ್ಬನನನ್ನು ಗುರುತಿಸಬೇಕಾದರೆ ಇರಬೇಕಾದ minimum requirement ಏನು ? ಕೆಲವು ದಿನಗಳ ಹಿಂದೆ ನನ್ನ ಉತ್ತರ ಬಾರತೀಯ ಕೆಳಯನೊಡನೆ ಈ ಬಗ್ಗೆ ವಾದ ಮಾಡಿದ್ದೆ. ಅವನ ಪ್ರಕಾರ ಯಾರೆಲ್ಲ ಭಗವದ್ಗೇತೆ ಓದುತ್ತಾರೆ ಅವರೆಲ್ಲಾ ಹಿಂದು . ದೇವರಾಣೆಗೆ ನಾನು ಓದಿಲ್ಲ. ಹಾಗಾದರೆ ನಾನು ಹಿಂದು ಅಲ್ಲವೆ ?
ಇನ್ನು ಕೆಲವರ ಪ್ರಕಾರ ಯಾರು ಹಿಂದುಗಳು ದನದ ಮಾಂದ ತಿನ್ನುವುದಿಲ್ಲ . ನನಗೆ ತಿಳಿದಿರುವ ಪ್ರಕಾರ ಮುಸ್ಲಿಂ ಮತ್ತು christian ಅಲ್ಲದೆ ದನ ಮಾಂಸ ತಿನ್ನುವ ಹಲವಾರು ಬುಡಕಟ್ತು ಜನಾಂಗಗಳಿದ್ದಾವೆ . ಅವರುಗಳು ಹಿಂದುಗಳಲ್ಲವೆಂದರೆ conversion ಪ್ರಶ್ನೆನೇ ಇಲ್ಲ. ಸರಿ ಇನ್ನೊಂದು ವಾದವೆಂದರೆ ಹಿಂದುಗಳು ಹೆಣವನ್ನು ಸುಡುತ್ತಾರೆ .ಆದರೆ ಕರ್ನಾಟಕದಲ್ಲಿ ಕೇವಲ ೩೦% ಜನ ಈ ಸಂಪ್ರದಾಯವನ್ನು ಪಾಲಿಸುತ್ತಾರೆ ..(ಈ ದಾಖಲೆಯಲ್ಲಿ ವ್ಯತ್ಯಾಸ ಇರಬಹುದು , ಆದರೆ ಎಲ್ಲರೂ ಸುಡೊಲ್ಲ ಇದಂತು ಸತ್ಯ) .
ಇನ್ನು ನನ್ನ ಒಂದು ಕುತೂಹಲ ಏನೆಂದರೆ ಯಾರನ್ನಾದರು ಹಿಂದು ದರ್ಮಕ್ಕೆ converrt ಮಾಡ್ಬೇಕಂದ್ರೆ ಏನು ಮಾಡ್ಬೇಕು ? ಅವನಿಗೆ do's ಮತ್ತು dont do's ಏನು ?

ಇದರ ಹೊರತಾಗಿ ಲೇಖನದಲ್ಲಿ ಹೇಳಿದ ವಿಶಯದ ಬಗೆ ನನ್ನ ಸಹಮತವಿದೆ , ಸಾವಿರಾರು ಜನ ಹೋಗುವ ಒಂದು ತಾಣದ ಬಗ್ಗೆ ದರ್ಮವನ್ನು ಆದಾರವಿಟ್ಟು ಕೊಂಡು ಈ ವಿವಾದ ಅಗತ್ಯ ಇರಲಿಲ್ಲ ....

spelling check ಮಾಡುವ ಕಶ್ಟ ನಾನು ತಗೊಂಡಿಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 5:54pm — vikashegde

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

vikashegde's picture

ನೀವು ತಿಳ್ಕೊಂಡಿರೋದೆಲ್ಲ ತಪ್ಪು ಸ್ವಾಮಿ.

ಭೌಗೋಳಿಕ, ಸಾಂಸ್ಕೃತಿಕ, ಜೀವನ ಶೈಲಿಯಿಂದ ಹಿಂದು ಅಂತ ಕೆಟಗರೈಸ್ ಆಗಿರೋದೇ ಹೊರತು ನೀವು ಹೇಳಿದ್ದು ಯಾವುದೂ ಅಲ್ಲ.
ಹಿಂದು ಅನ್ನೋದು ಇಸ್ಲಾಂ, ಕ್ರೈಸ್ತ ಧರ್ಮದಂತೆ ಒಬ್ಬರು ಸ್ಥಾಪಿಸಿದ, ಬೆಳೆಸಿದ ಧರ್ಮ ಅಲ್ಲವಾದ್ದರಿಂದ ಹಲವು ಜಾತಿ, ಪಂಗಡದ ಜನರು , ವಿವಿಧ ಆಚಾರ ವಿಚಾರ, ಸಂಪ್ರದಾಯ, ಆಚರಣೆ, ಆಹಾರ, ಅಭ್ಯಾಸ, ದೇವರು ಮುಂತಾದವುಗಳನ್ನು ಹೊಂದಿದ ಜನರೆಲ್ಲರೂ ಇದ್ದಾರೆ ಮತ್ತು ಅವರೆಲ್ಲರೂ ಹಿಂದು ಎಂಬುದಾಗಿ ಗುರುತಿಸಲ್ಪಡುತ್ತಾರೆ.

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 6:07pm — cmariejoseph

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

cmariejoseph's picture

"ಭೌಗೋಳಿಕ, ಸಾಂಸ್ಕೃತಿಕ, ಜೀವನ ಶೈಲಿಯಿಂದ ಹಿಂದು ಅಂತ ಕೆಟಗರೈಸ್ ಆಗಿರೋದೇ" ಇದು ನನ್ನ ತಿಳುವಳಿಕೆ ಹತ್ತಿರವಾಗಿದೆ.

ನನಗೆ ತಿಳಿದಂತೆ ಹಿಂದೂ ಎಂಬುದು ಧರ್ಮವಲ್ಲ. ಅದೊಂದು ಜೀವನರೀತಿ. ಕಾನ್‌ಸ್ಟಾಂಟಿನೋಪಲ್ ಎಂಬ ಜಾಗತಿಕ ಸಂತೆಯಲ್ಲಿ ಇಂಡಿಯಾದ ವಸ್ತುಗಳು ಬಿಕರಿಯಾಗುವಾಗ ಅವನ್ನು ಸಿಂಧೂದೇಶದಿಂದ ತಂದದ್ದೆಂದು ಹೇಳಲಾಗುತ್ತಿತ್ತು. ಸಕಾರಕ್ಕೆ ಹಕಾರ ಬಳಸುತ್ತಿದ್ದ ಅಲ್ಲಿನ ಜನ ಸಿಂಧೂ ಎಂಬುದನ್ನು ಹಿಂದೂ ಎಂದು ಕರೆದರು. (ಹಾಗೆ ನೋಡಿದರೆ ಸೈಂಧವರು ಮತ್ತು ಅನಾರ್ಯರು ಎಂದರೆ ಸಿಂಧೂ ಬಯಲಿನ ಉತ್ಕೃಷ್ಟ ನಾಗರಿಕರು ಎಂದರ್ಥ). ಚೀನಾದ ಎಲ್ಲರೂ ಚೀನೀಯರು, ಫ್ರಾನ್ಸ್ ದೇಶದ ಎಲ್ಲರೂ ಫ್ರೆಂಚರು ಆಗಿರುವಂತೆ ಹಿಂದೂಸ್ತಾನದಲ್ಲಿರುವ ನಾವೆಲ್ಲರೂ ಅಂದರೆ ನಾನಾಗಲೀ, ನೀವಾಗಲೀ, ಅಬ್ದುಲ್ ಕಲಾಮ್ ಆಗಲೀ ಎಲ್ಲರೂ ಹಿಂದೂಗಳೇ. ನಾವು ಪೂಜಿಸುವ ದೇವರುಗಳೂ ನಮ್ಮ ಧರ್ಮಗಳೂ ಬೇರೆ ಬೇರೆ ಅಷ್ಟೇ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 12:58am — ahankari

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ahankari's picture

ಜೋಸೆಫ್ ನಿಮ್ಮ ಅಭಿಪ್ರಾಯ ನನ್ನದು ಕೂಡಾ ...ನನ್ನ ಪ್ರಕಾರ ಯಾರೆಲ್ಲ ಭಾರತದ ಸಂವಿಧಾನವನ್ನು ಒಪ್ಪಿ ಕೊಂಡು ಅದರಂತೆ ಬದುಕುತ್ತಾರೋ ಅವರೆಲ್ಲಾ ಭಾರತೀಯರು. ಆದರೆ ನಮ್ಮಲ್ಲಿ ಕೆಲವರು ನಮಗೆ ಭಾರತದ ಸಂವಿಧಾನಕ್ಕಿಂಥ ನಮ್ಮ ಧರ್ಮ ಗ್ರಂಥಗಳೇ ಹಿರಿದು ಎಂದು ನಂಬಿರುವುದು ಇಂದಿನ situationಗೆ ಕಾರಣವೆಂದಿನುಸುತ್ತದೆ . ನನಗನಿಸುವುದೇನಂದರೆ ನಮ್ಮಲ್ಲಿ ಯಾರು ಅಲ್ಲಾ ಮತ್ತು ಜೀಸಸ್ ಅನ್ನು ತಮ್ಮ ದೇವರೆಂದು ನಂಬಿಲ್ಲವೋ ಅವರೆಲ್ಲಾ ಹಿಂದುಗಳು. Even though I would like to defer from this definition, this is what we are made to believe. ಇದರಲ್ಲಿ ಬುದ್ದರು ,ಜೈನರು, ಸಿಖ್ಖರು ಎಲ್ಲರು ಬರುತ್ತಾರೆ.

ಈ ವಿಶಯವಾಗಿ ಇತರರನ್ನು ಬಯ್ಯವ ಬದಲು ಉಳಿದ ಧರ್ಮದವರು ತಮ್ಮ ಬಗೆ , ತಮ್ಮ ನಿಶ್ಟೆಯ ಬಗೆ ಇನ್ನೊಮ್ಮೆ ಯೋಚಿಸುವುದು ಒಳಿತು ಎನ್ನುವಿದು ನನ್ನ ಅಭಿಪ್ರಾಯ......

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 7:09am — cmariejoseph

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

cmariejoseph's picture

".. ನಮ್ಮಲ್ಲಿ ಕೆಲವರು ನಮಗೆ ಭಾರತದ ಸಂವಿಧಾನಕ್ಕಿಂಥ ನಮ್ಮ ಧರ್ಮ ಗ್ರಂಥಗಳೇ ಹಿರಿದು ಎಂದು ನಂಬಿರುವುದು ಇಂದಿನ situationಗೆ ಕಾರಣವೆಂದಿನುಸುತ್ತದೆ . ನನಗನಿಸುವುದೇನಂದರೆ ನಮ್ಮಲ್ಲಿ ಯಾರು ಅಲ್ಲಾ ಮತ್ತು ಜೀಸಸ್ ಅನ್ನು ತಮ್ಮ ದೇವರೆಂದು ನಂಬಿಲ್ಲವೋ ಅವರೆಲ್ಲಾ ಹಿಂದುಗಳು. Even though I would like to defer from this definition, this is what we are made to believe. ಇದರಲ್ಲಿ ಬುದ್ದರು ,ಜೈನರು, ಸಿಖ್ಖರು ಎಲ್ಲರು ಬರುತ್ತಾರೆ."

ಮಾನ್ಯ ಅಹಂಕಾರಿಗಳೇ (ಇದೇತರ ಹೆಸರು?), ಧರ್ಮ ಹಾಗೂ ದೇವರ ಬಗೆಗಿನ ನಂಬುಗೆಯೇ ಬೇರೆ, ದೇಶಪ್ರೇಮವೇ ಬೇರೆ ಎಂದು ನಾನು ಭಾವಿಸಿದ್ದೇನೆ. ಆದರೆ ಒಂದಕ್ಕೊಂದು ವಿರುದ್ಧವಲ್ಲ, ಎರಡೂ ಪರಸ್ಪರ ಪೂರಕ. ಯೇಸುಕ್ರಿಸ್ತನ ಬಳಿಗೆ ಸುಂಕದವನು ಬಂದು ಸುಂಕ ಕೊಡು ಎಂದಾಗ ಯೇಸುಕ್ರಿಸ್ತ ನಿರಾಕರಿಸಲಿಲ್ಲ. ನಾನು ಸಾಧು, ಸಂತ, ದೇವಮಾನವ,ಸುಂಕಕ್ಕೆ ನಿಲುಕದವನು ಎಂದೆಲ್ಲ ಭಂಡವಾದ ಮಾಡಲಿಲ್ಲ. "ಸೀಜರನು ಸೀಜರನಿಗೆ, ದೇವರದು ದೇವರಿಗೆ" ಎಂದ ಅವನ ಮಾತು ಇಂದಿಗೂ ಪ್ರಸ್ತುತ.

"ಈ ವಿಶಯವಾಗಿ ಇತರರನ್ನು ಬಯ್ಯವ ಬದಲು ಉಳಿದ ಧರ್ಮದವರು ತಮ್ಮ ಬಗೆ , ತಮ್ಮ ನಿಶ್ಟೆಯ ಬಗೆ ಇನ್ನೊಮ್ಮೆ ಯೋಚಿಸುವುದು ಒಳಿತು ಎನ್ನುವಿದು ನನ್ನ ಅಭಿಪ್ರಾಯ......"
ಇದನ್ನು ನನಗೇಕೆ ಹೇಳುತ್ತಿದ್ದೀರಿ ಅರ್ಥವಾಗುತ್ತಿಲ್ಲ.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 10:28pm — ಚೈತನ್ಯ ಎಸ್

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಚೈತನ್ಯ ಎಸ್'s picture

ನನ್ನ ಪ್ರಕಾರ ಯಾರು ಮಾನವನನ್ನು ಮಾನವನಂತೆ ನೋಡುತ್ತಾರೋ ಅವನೆ ಹಿಂದು ಯಾರು ಭಾರತವನ್ನು ತನ್ನದೆಂದು ಹೇಳುತ್ತಾರೋ ಅವನೇ ಭಾರತೀಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 11:03pm — ಚೈತನ್ಯ ಎಸ್

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಚೈತನ್ಯ ಎಸ್'s picture

ಒಂದು ವಿಷಯ ಯಾರು ಬಲವಂತವಾಗಿ ಬಂದು ಒಂದು ದರ್ಮವನ್ನು ಸೇರುತ್ತಾನೋ ಅವನು ಇಂದಿನ ರಾಜಕೀಯದ ರಾಜಕಾರಣಿಯಂತ (ಅಂದರೆ ಯಾವುದೊ ದುರುದ್ದೇಶ ಇರುತ್ತೆ) ಯಾರು ಇನ್ನೊಬ್ಬರನ್ನು ಬಲವಂತವಾಗಿ ಸೇಳೆಯಲು ಪ್ರಯತ್ನ ಮಾಡುತ್ತಾರೊ ಅವರು ಹೇಡಿಗಳಂತೆ ಅ ಕೆಲಸ ಹೇಡಿಗಳಿಗೆ ಬೀಡು ಸ್ವಾಮಿ ನಾವು ಒಳ್ಳೆ ಭಾರತೀಯರಾಗಿರೊಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:34pm — muralihr

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

muralihr's picture

ಸೂಪರ್ ಸಕ್ಕತ್ ಉತ್ತರ ...
ಆದರೆ ದೇವರೂ ಕೂಡ ಒಬ್ಬನೇ ಇರೋದು ..ಅಕಸ್ಮಾತ್ ಇಬ್ಬರು ದೇವ್ರಿದ್ದರೆ ಅವರವರಲ್ಲಿ ಭಕ್ತರ ಮಮಕಾರದಿ೦ದಾ ಕದನ ನಡೆಯುತ್ತಿತ್ತು. ಅವನ್ನನ್ನು ಬೇರೆ ಅ೦ದುಕೊ೦ಡು ಬೇರೆ ಬೇರೆ ಧರ್ಮಗಳು ಕಟ್ಟುಕೊ೦ಡು ಬೇರೆ ಬೇರೆ ಹೆಸರು ವೇಷ ಇಟ್ಟುಕೊ೦ಡು ಇರುವ ಮುಖ್ಯವಾದ ಕೆಲ್ಸಾ ಬಿಟ್ಟು ದೇವರ ಹೆಸರಲ್ಲಿ ಜಗಳ ಆಡ್ತಾ ಬ೦ದಿದ್ದೇವೆ ಅಷ್ಟೇ....ಇದು ಒಳ್ಳೆ "ರಾಮಾ೦ಜನೇಯ ಯುದ್ಧದ " ಹ೦ಗೇ .
ಆಕಡೆ ರಾಮ ಸೋತರು ಬೇಜಾರು... ಈಕಡೆ ಆ೦ಜನೇಯ ಬಿದ್ದರೂ ಬೇಜಾರು ...ಅದಕ್ಕೆ ನಮ್ಮ ದೇಶ ಆಗಾಗ ನ೦ಗೇ ಬೇಜಾರು ತರುತ್ತೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2008 - 10:56pm — hpn

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

hpn's picture

ಮುರಳಿ, ಇದು ಯಾರಿಗೆ ಉತ್ತರ? (ನೀನುತ್ತರಿಸುತ್ತಿರುವ ಪ್ರತಿಕ್ರಿಯೆಯ "ಪ್ರತಿಕ್ರಿಯೆ ಸೇರಿಸಿ" ಆಯ್ಕೆ ಬಳಸಬೇಕು, ಇಲ್ಲವಾದರೆ ಕೆಳಗೆ ಮೂಲ ಲೇಖನಕ್ಕೆ ಪ್ರತಿಕ್ರಿಯೆಯೆಂಬಂತೆ ಸೇರಿಕೊಳ್ಳುತ್ತದೆ).
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 4:08pm — nagesamrat

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

nagesamrat's picture

ದೇವರೆಂಬುವವನು ಒಬ್ಬನು ಇದ್ದಾನೆ ಎಂಬುದೇ ತೀರ್ಮಾನವಾಗದ ಸಂಗತಿ ಹೀಗಿರುವಾಗ ದೇವರ ಹೆಸರು ಹೇಳಿಕೊಂಡು ನಾವು ಏನೇನೆಲ್ಲಾ ಮಾಡುತ್ತಿದ್ದೇವೆ ಅಲ್ಲವೇ?
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2008 - 10:35pm — ಚೈತನ್ಯ ಎಸ್

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಚೈತನ್ಯ ಎಸ್'s picture

ದೇವರು ಇಲ್ಲ ಎಂದು ಇದ್ದಾನೆ ಎಂದು ನಿರ್ದರಿಸುವ ಜನರಿಗೆ ಸಂತೋಷದ ಸುದ್ದಿ ಕಣ್ಣು ಮುಚ್ಚಿ ದೇವರು ಇದ್ದಾನೆ ಎಂದರೆ ಇದ್ದಾನೆ ಇಲ್ಲ ಬರೀ ಕತ್ತಲು ಎಂದರೆ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 12:51pm — nagesamrat

ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

nagesamrat's picture

ಕಣ್ಣು ಮುಚ್ಚುವ ಮುಂಚೆ ‘ಪರಮಾತ್ಮ’ನ್ನ ಒಳಕ್ಕೆ ಹಾಕಿಕೊಂಡು ಕಣ್ಣು ಮುಚ್ಚಿದರೆ ಇನ್ನೂ ಮಸ್ತಾಗಿರುತ್ತೆ ಅಲ್ವಾ?
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
  • ಎಳನೀರು ಮಾರುವವರ ಸಾಮಾಜಿಕ ಕಳಕಳಿ
  • ನಿದ್ರೆ ಬರದವರ ಬಗ್ಗೆ
  • ನಮ್ಮ ನಿಜವಾದ ಶತೃ ಯಾರು?
Syndicate content

ಲೇಖಕರು

vikashegde's picture

ಪೂರ್ಣ ಹೆಸರು
ವಿಕಾಸ್ ಹೆಗಡೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator