ಯಾರು ತೀವ್ರವಾದಿ ? Who is an extremist ?
ನೋಡಿ, "ನೀವೇನೇ ಹೇಳಿ. ಅದೆಲ್ಲ ನಿಜ, ಅದೆಲ್ಲ ಒಪ್ತೀನಿ, ಆದರೆ ....... ಇದು ಸ್ವಲ್ಪ ಅತಿಯಾಯಿತು, ಒಂಥರಾ ಎಕ್ಸಟ್ರಿಮಿಸ್ಟ್ ಬಿಹೇವಿಯರ್". ನಮ್ಮ ದಿನನಿತ್ಯದ ಆಗುಹೋಗುಗಳಲ್ಲಿ ಸಿಗುವ ಪುಕ್ಕಟೆ ಅಭಿಪ್ರಾಯಗಳಿವು. ಸಾಂಪಲ್ಲುಗಳನ್ನು ನೋಡಿ.
೧. "ಕರ್ನಾಟಕದ ಚುನಾವಣೇಲಿ ಮೋದಿಗೇನು ಕೆಲಸ" ಅಂತ ಪ್ರಶ್ನಿಸಿದರೆ ಅವನೊಬ್ಬ ಎಡಪಂಥೀಯ ಎಕ್ಸಟ್ರಿಮಿಸ್ಟ್.
೨. "ವಿವೇಕಾನಂದರ ಪುಸ್ತಕಗಳನ್ನು ಓದುವವನು" ಬಲಪಂಥೀಯ ಎಕ್ಸಟ್ರಿಮಿಸ್ಟ್.
೩. "ಕರ್ನಾಟಕದ ಚುನಾವಣೇಲಿ ಬೇರೆಭಾಷೆಯಲ್ಲೇಕೆ ಪ್ರಚಾರ ಅಂತ ಕೇಳುವವನು" ಕರ್ನಾಟಕ ರಕ್ಷಣಾ ವೇದಿಕೆಯ ಎಕ್ಸಟ್ರಿಮಿಸ್ಟ್.
೪. "ಬಿಸಿನೆಸ್ ಎಸ್ಟಾಬ್ಲಿಶ್ಮೆಂಟುಗಳಲ್ಲಿ, ಇಂಗ್ಲೀಷಿನ ಜೊತೆ ಕನ್ನಡದ ಬೋರ್ಡುಗಳನ್ನೂ ಹಾಕಿ ಎನ್ನುವವನು" ಎಕ್ಸಟ್ರಿಮಿಸ್ಟುಗಳ ತಾತನಾದ ಗುರುಗುಂಟೆಗೌಡನ ಪಾಳ್ಯದ ಎಕ್ಸಟ್ರಿಮಿಸ್ಟ್.
೫. "ಸಂಪದದಲ್ಲಿ ಕನ್ನಡದಲ್ಲಿಯೇ ಬರೆಯಬೇಕು ಎನ್ನುವವನು" ಕನ್ನಡದ ಎಕ್ಸಟ್ರಿಮಿಸ್ಟ್.
೬. "ರಾಮೋತ್ಸವಗಳಲ್ಲಿ ತ್ಯಾಗರಾಜರ ಕೀರ್ತನೆಗಳ ಜೊತೆ ಪುರಂದರದಾಸರ ಒಂದೆರೆಡು ಕೀರ್ತನೆಗಳನ್ನೂ ಹಾಡಿ ಅಂತ ಕೇಳಿದವನೊಬ್ಬ" ಅಸಂಸ್ಕೃತ ಅನಾಗರೀಕ ಎಕ್ಸಟ್ರಿಮಿಸ್ಟ್.
೭. ಲೆಕ್ಕಕ್ಕೆ ಸಿಗದಷ್ಟು.....
ಇಲ್ಲಿ ಕೊಟ್ಟಿರೋದು, ಆರೇ ಆರು ಅಷ್ಟೇ. ನಿಮಗೂ ಈ ರೀತಿಯ ಮಾತುಗಳು ಕಿವಿಗೆ ಬಿದ್ದಿದೆಯೇ ? ಮಜ್ಜಾ ಗೊತ್ತಾ, ಮತ್ತೊಬ್ಬನನ್ನು ಎಕ್ಸಟ್ರಿಮಿಸ್ಟ್ ಅಂತ ಕರೆದವನೊಬ್ಬನನ್ನು ಮತ್ಯಾರೋ ಬೇರೆ ಪಾಯಿಂಟಿನ ಮೂಲಕ ಅವನನ್ನೇ ಎಕ್ಸಟ್ರಿಮಿಸ್ಟ್ ಅಂತ ಟ್ಯಾಗ್ ಮಾಡಿರ್ತಾರೆ ![]()
ಈಗ ಹೇಳಿ. ಈ ರೀತಿ ಎಕ್ಸಟ್ರಿಮಿಸ್ಟ್ ಎಂಬ ಹಣೆಪಟ್ಟಿ ಕಟ್ಟೋದು ಸರೀನಾ ? ಈ ರೀತಿ ನಾವು ನಾವೇ ಜಗಳ ಆಡ್ಕೊಳ್ತಾ ಇದ್ರೆ ಏಳಿಗೆ ಸಾಧಿಸೋದು ಯಾವಾಗ? ಏಳಿಗೆ ಎನ್ನುವುದು ಸಮಾಜಮುಖಿಯಾಗಿರಬೇಕು ಎಂಬುದನ್ನು ಯಾಕೆ ನಾವು ಅರ್ಥಮಾಡಿಕೊಳ್ಳುವುದಿಲ್ಲ ? ಬೇರೆಯವರ ಆದರ್ಶಗಳನ್ನು ನಾವು ಒಪ್ಪಿಕೊಳ್ತೇವೇಯೋ ಇಲ್ವೋ, ಆದರೆ ನಾವೇಕೆ ಅದನ್ನು ಗೌರವಿಸುವುದಿಲ್ಲ ?

- Login or register to post comments
- 304 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: