ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ಏನಿದು 'ಅದಿ'?

June 17, 2008 - 8:18am — ವೈಭವ

ಈ ಪದಬಳಕೆಗಳನ್ನು ಗಮನಿಸಿ

೧. ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಎನ್ನ ಕರುಣದಿ ಕಾಯೋ ಮಾದೇಸ್ವರ (ಕರುಣದಿ =ಕರುಣೆಯಿಂದ)
೨. ಸಕ್ಕದ ಕಬ್ಬಿಣದ ಕಡಲೆ, ಕನ್ನಡ ಸುಲಿದಬಾಳೆಹಣ್ಣಿನಂದದಿ( ಬಾಳೆಹಣ್ಣಿನಂದದಿ = ಬಾಳೆಹಣ್ಣಿನತರ)


ಈ 'ಅದಿ' ಸಂದರ್ಬಕ್ಕೆ ತಕ್ಕಂತೆ ಅರಿತ ಯತ್ವಾಸ ಉಂಟಾಗುತ್ತಾ?

‹ awesome ಗೆ 'ಚಿಂದಿ' ಸರಿಯಾದ ಪದವೆ? ಧರಣಿ ಮಂಡಲ ಮಧ್ಯದೊಳಗೆ... ಸಾಹಿತ್ಯ ಇದೆಯಾ? ›
  • ಸಾಹಿತ್ಯ, ಭಾಷೆ
~.~
  • Login or register to post comments
  • 502 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 17, 2008 - 9:40am — kannadakanda

ಉ: ಏನಿದು 'ಅದಿ'?

kannadakanda's picture

ನಿಮಗೆ ಗೊತ್ತಿರಬಹುದು ಅವಂ ಬಂದಂ ಎಂಬುದಱ ಕೊನೆಯ ’ನ್’(ಇಲ್ಲಿ ಅನುಸ್ವಾರ) ಕೆಲವು ಕಡೆ ಬೞಸುವುದಿಲ್ಲ. ಹೞಗನ್ನಡದಲ್ಲೂ ಕೂಡ.
ಕರುಣದಿಂ ಕಾಯೋ ಎನ್ನುವುದನ್ನು ಕರುಣದಿ ಕಾಯೋ ಎಂದೂ ಅನ್ನಬಹುದು. ಹಾಗೆಯೇ ಸುಲಿದ ಬಾೞೆಯ ಹಣ್ಣಿನಂದದಿಂ ಎಂಬುದನ್ನು ಸುಲಿದ ಬಾೞೆಯ ಹಣ್ಣಿನಂದದಿ ಎಂದೂ ಹೇೞಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 10:46am — ವೈಭವ

ಉ: ಏನಿದು 'ಅದಿ'?

ವೈಭವ's picture

ನನ್ನಿ ಕನ್ನಡಕಂದ,

ಇದು ಹಳೆಗನ್ನಡದ ಪಳೆಯುಳಿಕೆ ಅಂತ ತಿಳಿದು ನಲಿವಾಯಿತು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 11:57am — mahesha

ಉ: ಏನಿದು 'ಅದಿ'?

mahesha's picture

ಕರುಣದಿ ಕಾಯೋ

ಅಂದರೆ ಕರುಣದಿಂ ಕಾಯೋ ಮತ್ತು ಕರುಣದಲ್ಲಿ ಕಾಯೋ ಎಂದು ಎರಡು ಆಗಬೋದು...

"ಮನದಿ ದುಗುಡವಿರಲು, ಮೊಗದಿ ಸೊಬಗು ಎಂತು? "

ಇಲ್ಲಿ ಮನದಿಂದ್ ದುಗುಡ ಎಂದು ಹೇಳಲಾಗದು!

ಒಟ್ಟು: ’ದಿ’ ಕೆಲವೊಮ್ಮೆ ಮೂರನೇ, ಕೆಲವೊಮ್ಮೆ ಏಳನೇ ವಿಬಕ್ತಿ ಹೊಂದುವುದು!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 4:04pm — kannadakanda

ಉ: ಏನಿದು 'ಅದಿ'?

kannadakanda's picture

ಮಹೇಶ ನಿಮ್ಮ ವಿಶ್ಲೇಷಣೆ ಮೊನಚಾಗಬೇಕು. ನೀವು ಕೇಳಿರಬಹುದು ವಿಭಕ್ತಿಪಲ್ಲಟವನ್ನು. ತೃತೀಯಾ ವಿಭಕ್ತಿಗೆ ಬದಲಾಗಿ ಸಪ್ತಮೀ ವಿಭಕ್ತಿ ಬಳಸುವುದನ್ನು ಕಾಣಬಹುದು. ಅವನು ಮಚ್ಚಿನಿಂದ/ಮಚ್ಚಿನಲ್ಲಿ ಹೊಡೆದ. ಪೆನ್ನಲ್ಲಿ/ಪೆನ್ನಿಂದ ಬರೆ. (ಲೇಖನಿಯಲ್ಲಿ/ಲೇಖನಿಯಿಂದ) ಬರೆ. ಹಾಗೆ ಮನದಿ/ಮನದಲ್ಲಿ ನೆನೆ. ಮನಸ್ಸಿನಿಂದ/ಮನಸ್ಸಿನಲ್ಲಿ ನೆನೆ. ಒಂದೇ ಮನಸ್ಸಿನಿಂದ/ಮನಸ್ಸಿನಲ್ಲಿ ಕೆಲಸ ಮಾಡು. ಹಾಗಾಗಿ ಕೆಲವು ವೇಳೆ ತೃತೀಯಾವಿಭ್ಹಕ್ತಿಯ ಅರ್ಥದಲ್ಲಿ ಸಪ್ತಮೀ ಬೞಸಿರಬಹುದು. ಆದರೆ ಸಪ್ತಮೀ ಅರ್ಥದಲ್ಲಿ ತೃತೀಯಾ ಬೞಕೆಯಿಲ್ಲ. ಮನೆಯಲ್ಲಿ ವಾಸವಾಗು ಎನ್ನುತ್ತೇವೆ ಹೊಱತು ಮನೆಯಿಂದ ವಾಸವಾಗು ಎನ್ನುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 17, 2008 - 4:17pm — mahesha

ಉ: ಏನಿದು 'ಅದಿ'?

mahesha's picture

ವಿಬಕ್ತಿ ಪಲ್ಲಟದ ಬಗ್ಗೆ ಶಂಕರಬಟ್ಟರ ಮಾತುಗಳನ್ನು ಓದಿರಿ...

ಕನ್ನಡದ ವಿಬಕ್ತಿಗಳನ್ನು ಚನ್ನಾಗಿ ವಿಚರಿಸಿದ್ದಾರಿ...

ನೀರಿಗೆ ಈಚು, ನೀರಿಂದ ಈಜು, ನೀರಲ್ಲಿ ಈಚು, ನೀರನ್ನು ಈಜು ಈ ನಾಲಕ್ಕು ಬಳಕೆಗಳಿಗೂ ತಿಳಿವಿನಲ್ಲಿ ಬೇರೆತನಗಳುಂಟು.

ಹಾಗೆ ’ಪೆನ್ನಲ್ಲಿ ಬರೆ’ ಮತ್ತು ’ಪೆನ್ನಿಂದ ಬರೆ’ ಇವೆರಡರಲ್ಲಿ ’ಪೆನ್ನಿಂದ ಬರೆ’ ಅನ್ನೋ ಬಳಕೆ ಸಹಜವಾಗಿ ಕನ್ನಡಿಗರಲ್ಲಿ ಇಲ್ಲವಂತೆ!( ನಾನೆಂದು ಪೆನ್ನಿಂದ ಬರೆ, ಮಚ್ಚಿಂದ ಹೊಡೆ ಬಳಕೆಗಳನ್ನು ಆಡುಮಾತಲ್ಲಿ ಕೇಳಿಲ್ಲ ಸಾಮಾನ್ಯ)

’ಪೆನ್ನಿಂದ ಬರೆ’ ಅನ್ನೋದು ಸಕ್ಕದದ ’ಕರಣ’ ವಿಬಕ್ತಿ ಓದಿಕೊಂಡರವರ ಮಾತಶ್ಟೆ!

ಇಂದ ಬಳಕೆ ಸಾಮಾನ್ಯ.. ಒಂದರಿಂದ ಬೇರಾಗುವ ಆಗ ಬಳಸ್ತೀವಿ

ಮನೆಯಿಂದ ಹೊರಡು,
ನಿದ್ದಿಯಿಂದ ಏಳು

ಹಾಗೆ ಅಲ್ಲಿ ಅನ್ನು

ಮನೆಯಲ್ಲಿ ಇರು
ಪೆನ್ನಲ್ಲಿ ಬರೆ
ಮನದಲ್ಲಿ ನೆನೆ
ಕಷ್ಟದಲ್ಲೂ ನಗು
ಕಣ್ಣಲ್ಲೇ ಕೊಲ್ಲು

ಕನ್ನಡದ ವಿಬಕ್ತಿಗಳು ಸಕ್ಕದದಂತೇ ಇಲ್ಲ....
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ
  • ಶಂಕರಲಿಂಗ ಸ್ತೋತ್ರಂ
  • ನಿವೇದನೆ...
  • ಕೊಳ್ ಮತ್ತು (ಉ)ತ್ತಾ ಏನು ಎಂತು
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಓದಬೇಕು & ಓದಿಕೊಳ್ಳಬೇಕು
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ನಲ್ಲೆಯ ಕೋಪ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • `ಓವಿ ' ಪದದ ಅರ್ಥವೇನು?
  • ಪಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • keerthi2kiran
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 2:29pm
  • keerthi2kiran
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 2:27pm
  • ಸಂಗನಗೌಡ
    ಉ: Typical ನಲ್ಲನ ಒಲುಮೆಯಳಲು
    August 20, 2008 - 2:06pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator