ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ತತ್ವಜ್ಞಾನ

ದೇಹ ಮತ್ತು ಆತ್ಮ

June 11, 2008 - 9:38pm — kalpana

ಪ್ರತಿ ಮಾನವ ಜನ್ಮದ ಗುರಿಯೂ, ಆಕಾರವುಳ್ಳ ಈ ದೇಹದ ಪರಿಧಿಯನ್ನು ಮೀರಿ ನಿರಾಕಾರವಾದ ಆತ್ಮವನ್ನು ಅರಿತುಕೊಳ್ಳುವುದೆಂದು ಜ್ಞಾನಿಗಳು ಹೇಳಿದ್ದಾರೆ. ಇದು ನಿಜವಾದರೆ, ಹುಟ್ಟಿನಿಂದಲೆ ಮಾನವನಿಗೆ ದೇಹ-ಆತ್ಮದ ಪರಿಜ್ಞಾನ ಏಕಿಲ್ಲ? ಅದನ್ನು ಸಾಧನೆ ಮೂಲಕ ಏಕೆ ತಿಳಿದುಕೊಳ್ಳಬೇಕು? ತಿಳಿದವರು ಕೃಪೆ ಮಾಡಿ ವಿವರಿಸಿ.

‹ ಶ್ರೀರಾಮಚಂದ್ರ ಹೇಗೆ ಸತ್ತರು? ಚನ್ನಬಸವಣ್ಣನ ಈ ವಚನ ವನ್ನು ತಿಳಿದವರು ದಯವಿಟ್ಟು ವಿವರಿಸುವಿರಾ? ›
  • ತತ್ವಜ್ಞಾನ
~.~
  • Login or register to post comments
  • 801 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 8:25am — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

ಸದ್ಯಕ್ಕೆ ಆತ್ಮ ಇದೆ ಅಂತಲೇ ಇನ್ನೂ ಖಚಿತವಾಗಿಲ್ಲ. ಜೀವ ಹೋದಮೇಲೂ ಒಂದು "ಅರಿವು (conciousness)" ಇದೆ/ಇಲ್ಲ ಅನ್ನೋದು ಬಹಳ ಚರ್ಚೆ ಆಗ್ತಿರೋ ವಿಷಯ. ವಿಜ್ಞಾನದ ಪ್ರಕಾರ ಹೌದು ಅಥವಾ ಇಲ್ಲ ಅನ್ನುವುದಕ್ಕೆ ಆಧಾರ ಇಲ್ಲ. ಅದಿರಲಿ.
ಹುಟ್ಟುವಾಗ ನಮಗೆ ದೇಹದ ಅರಿವು ಇರುತ್ತದೆ. ಜೀವದ ಅರಿವೂ ಇರುತ್ತದೆ. ಆತ್ಮ? ಅದು ಯಾರಾದರೂ ಆತ್ಮ ಅಂತ ಒಂದು ಇದೆ ಅಂತ ಹೇಳಿದ ಮೇಲೇ ತಿಳಿಯೋದು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 9:09am — kalpana

ಉ: ದೇಹ ಮತ್ತು ಆತ್ಮ

kalpana's picture

ಈ ಅರಿವು ಅನ್ನುವುದರ ಇರುವಿಕೆ ನಿಜವಾದರೆ, ಅದು ಹುಟ್ಟಿನಿಂದಲೇ ಮಾನವನಿಗೆ ಏಕೆ ತಿಳಿದಿಲ್ಲ? ಯೋಗ, ಧ್ಯಾನ, ಇವೆಲ್ಲ ಮಾಡಿದ ಮೇಲೆ ತಿಳಿಯುತ್ತೆ ಅಂತ ಯಾಕೆ ಹೇಳುತ್ತಾರೆ? Why is every human being not born enlightened(if there is something called enlightenment?) ಇದು ನನ್ನ ಪ್ರಶ್ನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 1:05pm — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

ಅದನ್ನೇಯ ನಾನೂ ಹೇಳಿದ್ದು Sticking out tongue
ನಾನು ಬದುಕಿದ್ದೀನಿ ಅನ್ನೋ ಅರಿವು ಇದ್ದೇ ಇರುತ್ತದೆ. ಆದರೆ ಆತ್ಮ ಎಂದರೆ "ಏನು" ಅಂತ ಹುಟ್ಟಿದಾಗಲೇ ಗೊತ್ತಿರಕಿಲ್ಲ. ಇಲ್ಲಿ ಜೀವಕ್ಕೂ ಆತ್ಮಕ್ಕೂ ವ್ಯತ್ಯಾಸ ಇದೆ. ಜೀವ - ಬದುಕಿರುವ ಸೂಚನೆ. ಆತ್ಮ ಬೇರೆ ಬೇರೆ ದೇಹ-ಕಾಲಗಳಲ್ಲೂ ಬದಲಾಗದ, ಯಾವುದೇ ರೀತಿಯ ಸಾಕ್ಷಿ ಇಲ್ಲದ (ತೋರದ??) abstract concept.

ಈ ಪ್ರಶ್ನೆಗೆ ಪ್ರತಿ ಪ್ರಶ್ನೆ - ಯಾಕೆ ಹುಟ್ಟೋ ಮಕ್ಕಳಿಗೆ ನಮ್ಮ ದೇಶ ಯಾವುದು ಅಂತ ಗೊತ್ತಿರೋದಿಲ್ಲ? ಬೇಕಿದ್ದರೆ ಕೇಳಿನೋಡಿ. ಅವು ಹೇಳುವುದಿಲ್ಲ Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:54pm — Aravinda

ಉ: ದೇಹ ಮತ್ತು ಆತ್ಮ

Aravinda's picture

Quote:
ಯಾಕೆ ಹುಟ್ಟೋ ಮಕ್ಕಳಿಗೆ ನಮ್ಮ ದೇಶ ಯಾವುದು ಅಂತ ಗೊತ್ತಿರೋದಿಲ್ಲ? ಬೇಕಿದ್ದರೆ ಕೇಳಿನೋಡಿ. ಅವು ಹೇಳುವುದಿಲ್ಲ

Smiling Smiling Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:22am — madhava_hs

ಉ: ದೇಹ ಮತ್ತು ಆತ್ಮ

madhava_hs's picture

ನನಗೆ ಗೊತ್ತಿರುವುದಿಷ್ಟು.

ಆತ್ಮ ಜ್ಞಾನ ಸಾಕ್ಷಾತ್ಕಾರಕ್ಕೆ ಜನ್ಮ ಜನ್ಮಾಂತರಗಳ ಸಾಧನೆಗಳು ಬೇಕಾಗಬಹುದು. ಅದು ಜೀವದ ಸ್ವಭಾವಕ್ಕನುಗುಣವಾಗಿ ನಿರ್ಧಾರವಾಗುತ್ತದೆ. ಅವರವರ ಪೂರ್ವ ಜನ್ಮದ ಪಾಪ ಪುಣ್ಯಗಳಿಗನುಗುಣವಾಗಿ ಅವರ ಜ್ಞಾನ-ಕರ್ಮಗಳು ನಿರ್ಧಾರವಾಗುತ್ತಾ ಹೋಗುತ್ತವೆ. ಹೇಗೆ ಒಂದು ತರಗತಿಯಲ್ಲಿ ಉಪಾಧ್ಯಾಯರು ಪಾಠವನ್ನು ಹೇಳಿದರೆ ಎಲ್ಲ ವಿದ್ಯಾರ್ಥಿಗಳೂ ಒಂದೇ ಸಮನೆ ಗ್ರಹಿಸುವುದಿಲ್ಲವೋ ಹಾಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 1:24pm — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

ಆತ್ಮಕ್ಕೆ, ಜನ್ಮಗಳಿಗೆ ಇನ್ನೂ ಖಚಿತ ಸಾಕ್ಷಿ ಸಿಕ್ಕಿಲ್ಲ.

ಅಂದಹಾಗೆ ಭೈರಪ್ಪರವರ "ನಾಯಿ-ನೆರಳು" (ಪುಸ್ತಕ - ಸಿನಿಮಾ ಕಥೆಯಲ್ಲಿ ಬೇರೆ ರೀತಿ ಇದೆ) ಬಗ್ಗೆ ಆಸಕ್ತಿ ಹುಟ್ಟಿಸುವ ಸಂಗತಿಗಳಿವೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 2:05pm — madhava_hs

ಉ: ದೇಹ ಮತ್ತು ಆತ್ಮ

madhava_hs's picture

ವೈಜ್ಞಾನಿಕವಾಗಿ ಧೃಢವಾಗದ ಸಂಗತಿಗಳು ಅನೇಕವು ಇವೆ. ಸಾಮಾನ್ಯ ಸಂಗತಿಗಳಾದ ಹೂವಿನ ಬಣ್ಣ, ಹಣ್ಣಿನ ರುಚಿ ಇತ್ಯಾದಿಗಳಿಗೇ ವಿಜ್ಞಾನ ಉತ್ತರ ಕಂಡು ಹಿಡಿದಿಲ್ಲ. ಇನ್ನು ಆತ್ಮ-ಜನ್ಮ ವಿಚಾರಗಳು ವಿಜ್ಞಾನದ ಅರಿವಿಗೆ ನಿಲುಕದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 12:35pm — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

Quote:
ಸಾಮಾನ್ಯ ಸಂಗತಿಗಳಾದ ಹೂವಿನ ಬಣ್ಣ, ಹಣ್ಣಿನ ರುಚಿ ಇತ್ಯಾದಿಗಳಿಗೇ ವಿಜ್ಞಾನ ಉತ್ತರ ಕಂಡು ಹಿಡಿದಿಲ್ಲ.

ರುಚಿ, ಬಣ್ಣದ ಅರಿವು, ವಾಸನೆ ಹೇಗೆ ತಿಳಿಯುತ್ತದೆ ಎಂಬುದಕ್ಕೆಲ್ಲಾ ಈಗಾಗಲೇ ಸಾಕಷ್ಟು ತಿಳುವಳಿಕೆಯನ್ನು ವಿಜ್ಞಾನ ಕೊಟ್ಟಿದೆ. ತಿಳಿಯದೆ ಉದಾಹರಣೆ ಕೊಟ್ಟರೆ ನಿಮ್ಮ ವಾದಕ್ಕೇ ಕುತ್ತು Smiling

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 12:44pm — madhava_hs

ಉ: ದೇಹ ಮತ್ತು ಆತ್ಮ

madhava_hs's picture

ಬಣ್ಣ, ರುಚಿ ಹೇಗೆ ತಿಳಿಯುತ್ತದೆ ಎಂಬುದರ ಬಗ್ಗೆ ನಾನು ಹೇಳುತ್ತಿಲ್ಲ.

ಆ ಬಣ್ಣ, ಆ ರುಚಿ ಹೇಗೆ ಬಂತು. ಅದನ್ನು ನಿಸರ್ಗದತ್ತ ಪದಾರ್ಥಗಳನ್ನು ಬಳಸದೇ ತಯಾರಿಸುವುದು ಸಾಧ್ಯವೇ ಎಂಬುದೇ ಪ್ರಶ್ನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 1:59pm — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

ಯಾವುದು ನಮಗೆ ಉತ್ತರಿಸಲು ಸಾಧ್ಯವಿಲ್ಲವೋ, ಅಥವಾ ಬಹಳ complex ಅನ್ನಿಸುತ್ತದೆಯೋ, ಅದನ್ನು ದೇವರಿಗೆ ಆರೋಪಿಸುವ ವಾದ ಹಳೆಯದು.

Intelligent design, Arguments by ignorance, God of the gaps ಬಗ್ಗೆ ಓದಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 11:53pm — kalpana

ಉ: ದೇಹ ಮತ್ತು ಆತ್ಮ

kalpana's picture

ಆತ್ಮಜ್ಞಾನ ನಮ್ಮ ಇಂದ್ರಿಯಗಳಿಗೆ ನಿಲುಕದ್ದು, ಆದ್ದರಿಂದ ಇದನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವಿಲ್ಲವೆನ್ನುತ್ತಾರೆ. ಮುಂದೆ ಎಂದಾದರೂ ಇದು brain mapping ಮುಂತಾದವುಗಳಿಂದ ಸಾಧ್ಯವಾಗುತ್ತೋ ಏನೋ. ಹಿಂದೆ ಸುಳ್ಳೆಂದ ಹಲವಾರು ವಿಷಯಗಳು ಈಗ ಸಾಕ್ಷಿ ಸಮೇತ ನಿಜವಾಗಿವೆಯಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 8:54pm — kalpana

ಉ: ದೇಹ ಮತ್ತು ಆತ್ಮ

kalpana's picture

ಮಾಧವ,
ಇದು ಕೇಳಿದ್ದೇನೆ. ಆದ್ರೂ ಇದು ಏಕೆ ಹೀಗೆ complicated process ಆಯ್ತು? ಇದನ್ನು ಹೀಗೆ ಮಾಡಿದ್ದು ಯಾರು ಅಂತೆಲ್ಲಾ ಅನ್ಸತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 1:32pm — mahesha

ಉ: ದೇಹ ಮತ್ತು ಆತ್ಮ

mahesha's picture

ಒಂದು ಪ್ರಶ್ಣೆ.. ಆತ್ಮ ಮಯ್ಯಲ್ಲಿ ಎಲ್ಲಿ ಇರತ್ತೆ? Smiling

ಆತ್ಮ ಅನ್ನೋದೇ ಇಲ್ಲ.. ಅಂತ ನಂಬಿದ್ದರೆ ತಪ್ಪೇ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 1:41pm — rameshbalaganchi

ಉ: ದೇಹ ಮತ್ತು ಆತ್ಮ

rameshbalaganchi's picture

ಮೈಯ ಕಣಕಣದಲ್ಲೂ ಹಾಸುಹೊಕ್ಕಾಗಿರತ್ತೆ ಅಂತ ಹೇಳ್ತಾರೆ. ತಪ್ಪು ಅನ್ನಕ್ಕೆ ಇದೇನೂ ಸರ್ಕಾರಿ ನಿಯಮ ಅಲ್ವಲ್ಲ!!

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 1:44pm — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

ಯಾವ ತಪ್ಪೂ ಇಲ್ಲ. ಹಾಗೇ ಆತ್ಮ ಇರಬಹುದು, ಅನ್ನೋದು ತಪ್ಪಾ? Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 1:53pm — mahesha

ಉ: ದೇಹ ಮತ್ತು ಆತ್ಮ

mahesha's picture

ಹಾಗಾದರೆ ಇದು ಬರಿ ನಂಬಿಕೆ.. !!

ಅದರ ಚರ್ಚೆ ಯಾಕೆ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 3:08pm — ಶ್ರೀನಿಧಿ

ಉ: ದೇಹ ಮತ್ತು ಆತ್ಮ

ಶ್ರೀನಿಧಿ's picture

ನಂಬಿಕೆ ಬಗ್ಗೆ ಚರ್ಚೆ ಮಾಡಬಾರದು ಅಂತೇನೂ ಇಲ್ಲವಲ್ಲ?

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 8:44pm — kalpana

ಉ: ದೇಹ ಮತ್ತು ಆತ್ಮ

kalpana's picture

ಮಾಯ್ಸ,
ಕುಂಡಲಿನಿ ಶಕ್ತಿಯ ಬಗ್ಗೆ ಕೇಳಿದ್ದೀರ? ಇದು ದೇಹದಲ್ಲಿ ಬೆನ್ನೆಲುಬಿನ ತುದಿಯಲ್ಲಿ ಸುಪಾವಸ್ತೆಯಲ್ಲಿರುತ್ತೆ, ಮತ್ತು ಯೋಗಕ್ರಿಯೆಗಳಿಂದ ಇದನ್ನು ಮೇಲಕ್ಕೆ ಹರಿಯುವಂತೆ ಮಾಡಿದಲ್ಲಿ, ತಲೆಯಲ್ಲಿರುವ ಕೊನೆಯ ಚಕ್ರವಾದ ಸಹಸ್ರಾರ ಚಕ್ರದಲ್ಲಿ ಇದು ಸಂಪೂರ್ಣ ಜಾಗೃತಗೊಳ್ಳುತ್ತದೆ. ಇದನ್ನೇ ಆತ್ಮ ಅನ್ನುತ್ತಾರೇನೋ.

ಆತ್ಮ ಇಲ್ಲ ಅಂತ ನಂಬಿದರೆ, ಹುಟ್ಟು ಮತ್ತು ಸಾವನ್ನು ಹೇಗೆ ವಿವರಿಸುತ್ತೀರಿ? ದೇಹಕ್ಕೆ ಜೀವ ಎಲ್ಲಿಂದ ಬರುತ್ತೆ ಮತ್ತು ಸತ್ತಾಗ ಎಲ್ಲಿಗೆ ಹೋಗುತ್ತೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 10:48am — kannadakanda

ಉ: ದೇಹ ಮತ್ತು ಆತ್ಮ

kannadakanda's picture

ಆತ್ಮ ಮತ್ತು ದೇಹ ಚರ್ಚೆಯೇನೋ ಗೊತ್ತಿಲ್ಲ. ವಿಚಾರಕ್ಕೊಂದು ನೆಲೆ ಬೇಕು. ಅದಕ್ಕಾಗಿಯೇ ಅದು ತನಗೆ ಬೇಕಾದ ದೇಹವನ್ನಾಶ್ರಯಿಸುವುದು. ಹಾಗಾಗಿ ನೋಡಿ ಈ ಕ್ರಾಂತಿ, ಭ್ರಾಂತಿಗಳೆಲ್ಲ. ನಂಬಿಕೆಯಿಲ್ಲ ಎಂದರೂ ಅದೊಂದು ನಂಬಿಕೆಯಾಗಿರಬಹುದು (ವಿಜ್ಞಾನ ಅಥವಾ ಇನ್ನಾವುದೇ ತಂತ್ರಜ್ಞಾನದ ಆವಿಷ್ಕಾರದ ಹಿನ್ನೆಲೆಯಲ್ಲಿ ರೂಪುಗೊಂಡ ನಂಬಿಕೆ) ಅಥವಾ ಮೂಢನಂಬಿಕೆಯಾಗಿರಬಹುದು. ಸ್ವೋಪಜ್ಞತೆಯಿಂದ ದಿಟ್ಟವಾಗಿ ’ನಾನಿದನ್ನು ನಂಬೋಲ್ಲ’ ಎಂದೂ ಆಗಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 1:54pm — benaka

ಉ: ದೇಹ ಮತ್ತು ಆತ್ಮ

benaka's picture

ಆತ್ಮ ದೇಹದಲ್ಲಿ ಎಲ್ಲಿರುತ್ತದೆ ಎಂಬುದಕ್ಕೆ ವಿಜ್ಞಾನದಲ್ಲಿ ಉತ್ತರವಿದೆಯೋ ಇಲ್ಲವೋ ಗೊತ್ತಿಲ್ಲ,
ಆದರೆ ವೇದಗಳಲ್ಲಿನ ವಿವರಣೆ ಅಚ್ಚುಕಟ್ಟಾಗಿದೆ. ಉದಾ:

ನಾರಾಯಣ ಸೂಕ್ತ:
...ಪದ್ಮಕೋಶಪ್ರತೀಕಾಶಂ ಹೃದಯಂ ಚಾಪ್ಯಧೋಮುಖಂ
ಅಧೋನಿಷ್ಟ್ಯಾ ವಿತಸ್ತ್ಯಾಂತೇ ನಾಭ್ಯಾಮುಪರಿ ತಿಷ್ಠತಿ...

ಆತ್ಮ ಅಥವಾ ಪರಮಾತ್ಮ(ನಾರಾಯಣ) ಹೊಕ್ಕಳಿನ ಮೇಲೆ, ಹೃದಯದ ಕೆಳಗೆ,
ತಲೆಕೆಳಗಾದ ಕಮಲದ ಮೊಗ್ಗಿನಂತಹ ಕೋಶಾಕೃತಿಯ ಒಳಗೆ ಪ್ರಕಾಶಿಸುತ್ತಿದ್ದಾನೆ.

... ಜ್ವಾಲಮಾಲಾಕುಲಂ ಭಾತಿ ವಿಶ್ವಸ್ಯಾಯತನಂ ಮಹತ್

ವಿಶ್ವವೆಂಬ ಮನೆಯ ಮೂರ್ತಿರೂಪವಾದ ಜ್ವಾಲೆಯಂತೆ ಕಾಣುತ್ತಾನೆ.

... ತಸ್ಯ ಮಧ್ಯೇ ವಹ್ನಿ ಶಿಖಾ ಅಣೀಯೋರ್ಧ್ವಾ ವ್ಯವಸ್ಠಿತಃ
ನೀಲತೋಯದ ಮಧ್ಯಸ್ಥಾ ವಿದ್ಯುಲ್ಲೇಖೇವ ಭಾಸ್ವರಾ...

ಆ ಕೋಶದ ನಡುವಿನಲ್ಲಿ ಬೆಂಕಿಯ ತುದಿಯಂತಹ ಅತಿ ಸಣ್ಣ ಕಣವಿದ್ದು,
ಕಾರ್ಮೋಡದ ನಡುವಿನಲ್ಲಿ ಮಿಂಚು ಹೊಳೆದಂತೆ ಪ್ರಕಾಶಿಸುತ್ತದೆ.

... ತಸ್ಯ ಶಿಖಾಯಾಂ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ
ಸ ಬ್ರಹ್ಮ ಸ ಶಿವಸ್ಸಹರಿ ಸೇಂದ್ರ ಸೋಕ್ಷರಃ ಪರಮ ಸ್ವರಾಟ್...

ಆ ಬೆಂಕಿಯಣುವಿನ ಮಧ್ಯೆ ಪರಮಾತ್ಮನಿದ್ದಾನೆ.
ಅವನೇ ಬ್ರಹ್ಮ, ಶಿವ, ಹರಿ, ಇಂದ್ರ ಹಾಗೂ ನಾಶವಾಗದ ಭವ್ಯ ಸ್ವಯಂ ತೇಜಸ್ಸು.

--> ಪಾಶ್ಚಾತ್ಯ ಅನಾಟಮಿಯ ಕಲ್ಪನೆಯೂ ಇಲ್ಲದ ಕಾಲದ ನಮ್ಮ ವೇದಗಳ ವಿವರಣೆ ಅದ್ಭುತವಲ್ಲವೆ!?

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 7:33am — kalpana

ಉ: ದೇಹ ಮತ್ತು ಆತ್ಮ

kalpana's picture

ಇದನ್ನು ವಿವರಿಸಿದ್ದಕ್ಕೆ ಧನ್ಯವಾದಗಳು, ಬೆನಕ ಅವರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 13, 2008 - 11:51am — kannadakanda

ಉ: ದೇಹ ಮತ್ತು ಆತ್ಮ

kannadakanda's picture

ದೇಹದ ಪರಿಜ್ಞಾನ ಕಾಣುವುದಱಿಂದ ಇದೆ. ಉೞಿದುದಱ ಜ್ಞಾನವನ್ನು ಈ ದೇಹದ ಅಱಿವು ಮುಚ್ಚಿಹಾಕಿದೆ ಎಂದು ತಿಳಿದವರ ಅಂಬೋಣ. ನಾವಿದನ್ನು ನಿಜಕ್ಕೂ ಅಱಿಯಬೇಕೆಂದರೆ ಈ ಪ್ರಶ್ನೆಯ ಜೊತೆಗೆ ನಿಜಕ್ಕೂ ಇದನ್ನು ತಿಳಿಯುವ ಗಂಭೀರ ಪ್ರಶ್ನೆ ನಮ್ಮಲೇ ಇರಬೇಕು. ಇದನ್ನು ಸಂಪದದಲ್ಲಿ ಹಾಕಿ ಇತರರ ಅಭಿಪ್ರಾಯ ಕೇಳೋಣ ಎಂಬುದಕ್ಕಷ್ಟೇ ಸೀಮಿತವಾಗಿರಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 14, 2008 - 12:03am — kalpana

ಉ: ದೇಹ ಮತ್ತು ಆತ್ಮ

kalpana's picture

ಹೌದು. ಆದರೆ, ಈ ವಿಚಾರ ಮುಂದುವರೆಸಲು ಒಳ್ಳೆಯ ಗುರುಗಳು ಸಿಗಬೇಕಲ್ಲ? ಜೊತೆಗೆ, ಒಂದು ದಾರಿಯಲ್ಲಿ ಮುನ್ನಡೆದರೆ ಮುಂದೆಂದೋ ಜ್ಞಾನೋದಯವಾಗುವುದು ಎಂಬ ದೃಢ ನಂಬಿಕೆ ಬೇಕು. ಇದು ಎಷ್ಟು ಜನಕ್ಕೆ ಸಾಧ್ಯ? ಅದರಿಂದಲೇ ಉದ್ಭವವಾಗಿದ್ದು ನನ್ನ ಪ್ರಶ್ನೆ - ಈ ಅರಿವನ್ನು ಪಡೆಯುವ ಬಗೆ ಯಾಕಿಷ್ಟು ಕಷ್ಟ ಮಾಡಿದ (ಇವೆಲ್ಲವನ್ನೂ ಸೃಷ್ತಿ ಮಾಡಿದಾತ)? ಎಲ್ಲರಿಗೂ ಸಮನಾಗಿ ಹುಟ್ಟಿನಿಂದಲೇ ಹಂಚಿದಿದ್ದರೆ ಏನಾಗುತ್ತಿತ್ತು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 10:44am — madhava_hs

ಉ: ದೇಹ ಮತ್ತು ಆತ್ಮ

madhava_hs's picture

ಕಲ್ಪನರವರೆ ನಿಮಗೆ ಈ ಬಗ್ಗೆ ಹೆಚ್ಚು ತಿಳಿದು ಕೊಳ್ಳಬೇಕಿದ್ದರೆ ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯರ ಕೆಲವು ಪ್ರವಚನಗಳನ್ನು ಕೇಳಿ. ಅದ್ಭುತವಾಗಿ ವಿವರಿಸುತ್ತಾರವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇಹ ಮತ್ತು ಆತ್ಮ - ಭಾಗ ೨
  • ಏಡ್ಸ್ "ವಿಕಾಸ" ವಾದ: ಮಂಗನಿಂದ ಮಾನವನಿಗೆ!
  • ಆತ್ಮವಿಶ್ವಾಸ ಮತ್ತು ಅಹಂಕಾರ
  • ಪೋಲಿಷ್ ಕವಿತೆ: ಆತ್ಮ
  • ಕರ್ನಾಟಕ ಕುಲಪುರೋಹಿತರ ಆತ್ಮಚರಿತ್ರೆಯಿಂದ - ಭಾಗ ೧
Syndicate content

ಲೇಖಕರು

kalpana's picture

ಪೂರ್ಣ ಹೆಸರು
ಕಲ್ಪನ

ಪರಿಚಯ

ಹೀಗೂ ಒಬ್ಬಳು !

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಓದಬೇಕು & ಓದಿಕೊಳ್ಳಬೇಕು
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ನಲ್ಲೆಯ ಕೋಪ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • `ಓವಿ ' ಪದದ ಅರ್ಥವೇನು?
  • ಪಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: Typical ನಲ್ಲನ ಒಲುಮೆಯಳಲು
    August 20, 2008 - 2:06pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:07pm
ಇನ್ನಷ್ಟು


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator