(ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??
ನಮ್ಮ ಮಾತುಗಳು ಹೀಗಿರುತ್ತವೆ
೧. ನಾನ್ ಹೋಗ್ತಾ ಇದ್ದೀನಿ..ನೀನ್ ಬರ್ತೀಯೆನೆ? ( ಇಲ್ಲಿ 'ಏನೆ' ಹೆಣ್-ತೋರುಗ ಒರೆ, ಹೆಣ್ಣಿಗೆ ಕೇಳುತ್ತಿರುವ ವಾಕ್ಯ ಇದು)
೨. ನಾನ್ ಹೋಗ್ತಾ ಇದ್ದೀನಿ ..ನೀನ್ ಬರ್ತೀಯೇನೊ? ( ಇಲ್ಲಿ 'ಏನೊ' ಗಂಡ್-ತೋರುಗ ಒರೆ, ಗಂಡಿಗೆ ಕೇಳುತ್ತಿರುವ ವಾಕ್ಯ ಇದು)
ಹೀಗೂ ಇರುತ್ತವೆ
೧. ನಾ ಹೊಂಟೆ ..ನೀ ಬರ್ತಿ? (ಇಲ್ಲಿ ಗಂಡ್-ತೋರುಗ ಮೇಣ್ ಹೆಣ್-ತೋರುಗಗಳನ್ನು ಬಳಸಿಲ್ಲ ..ಇದನ್ನ ಇಬ್ಬರಿಗೂ ಬಳಸಬಹುದು)
೨. ನಾ ಹೊಂಟೆ..ನೀ ಬರಾಕ್ ಹತ್ತಿ? (------,,--------)
ಇದರ ಬಗ್ಗೆ ನಿಮ್ಮ ಅನಿಸಿಕೆ ಹೇಳಿ

- Login or register to post comments
- 174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: (ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??
ನಾನೂ ನೀನೇ ಕೂಡ್ ಮಾತಾಡಕ್ ಹತ್ತೀವಿ. ನನ್ ಬಗ್ಗೆ. ನಿನ್ ಬಗ್ಗೆ ನನಗ್ಗೊತ್ತು. ನಮಗಿಬ್ಬರಿಗಿರೋ ಉಸಾಬರಿ ಮೂಱನೆಯವರದ್ದು. ಅದಕ ಅಂವನೋ ಅವ್ಳೋ ಬೇಕಷ್ಟೆ. ಅದ್ಕ ನನ್ಗೂ ನಿನ್ಗೂ ನನ್ ಬಗ್ಗೆ ನಿನ್ ಬಗ್ಗೆ ಹೆಣ್ಣೊ ಗಂಡೋ ಎನ್ನೋ ಉಸಾಬರಿ ಬೇಡೆನ್ನೋದು. ಅದ್ಕ ಈ ಏ ಓ ನಮ್ಮಿಬ್ಬರ ಹತ್ರ ನಡಿಯಂಗಿಲ್ಲ.
ಉ: (ಏ)ನೆ, (ಏ)ನೊ ಇವು ಕನ್ನಡದಲ್ಲಿ ಹೆಣ್, ಗಂಡು ತೋರುಗಗಳು ??
ನೋಡಿ..
ಬರುತ್ತೀಯಿ/ಯೆ = you(singular) come
ಬರುತ್ತೀರಿ = you(plural) come.
ಬರ್ತೀಯೇನೋ ಬೞಕೆ ಇರೋ ಹಾಗೆ.. ಬರ್ತೀಲೇ? ಬರ್ತೀಲಾ? ಬರ್ತೀ ಡಾ/ಡಿ ಇವೆ..
ಬೋಶ ಇದು ತೆಂಕಣದಲ್ಲಿ ಹೆಚ್ಚು...
=====================================
ಮಾಯ್ಸ!