ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಇಂದು ವಿಶ್ವ ಪರಿಸರ ದಿನ - Do I care?

June 5, 2008 - 5:11pm — shobha.koppad

ಇವತ್ತು ವಿಶ್ವ ಪರಿಸರ ದಿನಾಚರಣೆ. ಎಂದಿನಂತೆ ಇಂದು ಒಂದು ದಿನ ಅಂತಾನೆ ನಾವು ಇಷ್ಟು ದಿನ ಕಳೆದಿದ್ದಿವಿ. ಹೆಚ್ಚೆಂದರೆ ಗಿಡ ನೆಡಬೇಕು, ಪರಿಸರ ಕಾಪಾಡಬೇಕು ಅಂತ ಒಂದೆರಡು ಮಾತಾಡಿ ಸುಮ್ಮನಾಗಿ ಬಿಡ್ತಿವಿ. ಆದ್ರೆ ಇವತ್ತು ವಿಶ್ವ ಪರಿಸರ ದಿನ ನಮ್ಮಿಂದ ತುಂಬ ಪ್ರಾಮಾಣಿಕವಾದ, ಬದ್ಧತೆ ಯನ್ನು ಬೇಡುತ್ತ ಇದೆ. ಈ ನಮ್ಮ ಭೂಮಿಯನ್ನು, ನಮ್ಮ ಸುಂದರ ಕರುನಾಡನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಹೇಗೆ ಬಿಟ್ಟು ಹೋಗ್ತಾ ಇದ್ದಿವಿ ? ಇವತ್ತು ಭೂಮಿ ಮೇಲೆ ಆಗ್ತಿರೋ ಆಕ್ರಮಣ, ದೌರ್ಜನ್ಯದ ಪ್ರಮಾಣ ಮೇರೆ ಮಿರಿದೆ. ಇವತ್ತಿಗಾಗ್ಲೆ ಗ್ಲೋಬಲ್ ವಾರ್ಮಿಂಗ್ ಅನ್ನೋ ಭೂತದ ಪರಿಣಾಮ ನಮ್ಮೆಲ್ಲರ ಅನುಭವಕ್ಕೆ ಬರ್ತಾ ಇದೆ. ಮೊನ್ನೆ ಮೊನ್ನೆ ಯಷ್ಟೇ ಸುರಿದ ಅಕಾಲಿಕ ಮಳೆಯಿಂದ ನಮ್ಮ ರಾಯಚೂರು, ಬಳ್ಳಾರಿ, ಗದಗ್ ಸುತ್ತಮುತ್ತಲಿನ ರೈತರ ಬೆಲೆ ಸಂಪೂರ್ಣ ನಾಶವಾಗಿ ರೈತರು ಕಂಗಾಲಾಗುವಂತೆ ಮಾಡಿತು. ಆದ್ರೆ, ಇದೆಲ್ಲ ಬರಿ ಆರಂಭ. ಬರೋ ದಿನಗಳಲ್ಲಿ ಎಲ್ಲಕಿಂತ ಹೆಚ್ಚು ಕಷ್ಟ ನಷ್ಟ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆ. ಅವರಿಗೆ ನಾವು ಬಿಟ್ಟು ಹೋಗುತ್ತಿರುವುದಾದರೂ ಏನು ? ವೈಪರಿತ್ಯ ಉಳ್ಳ ಹವಾಮಾನ, ಎಲ್ಲಿ ನೋಡಿದರಲ್ಲಿ ಜಲ ಕ್ಷಾಮ, ೨೦ ರಿಂದ ೩೦% ಪ್ರಾಣಿ ಮತ್ತು ಸಸ್ಯ ಸಂಕುಲದ ನಾಶ. ಆದರೆ ಇದೆಲ್ಲವನ್ನೂ ಸ್ವಲ್ಪ ಪ್ರಯತ್ನ ಮಾಡಿದ್ರೆ ತಪ್ಪಿಸಬಹುದೇನೋ !

೧> ನಾನು, ನೀವು, ಎಲ್ಲರೂ ಜಾಗತಿಕ ತಾಪಮಾನ ಏರಿಕೆ ಬಗ್ಗೆ ಅರಿವು ಬೆಳೆಸಿಕೊಳ್ಳೋಣ
೨> ಆದಷ್ಟು ಸಂಪನ್ಮೂಲಗಳ ಪುನರ್ಬಳಕೆ ಮಾಡೋಣ.
೩> ಪರಿಸರ ನಾಶ ಅನ್ನುವುದನ್ನು ಒಂದು ರಾಜಕೀಯವಾಗಿ ಪ್ರಾಮುಖ್ಯತೆ ಪಡೆದ ವಿಷಯವನ್ನಾಗಿಸೋಣ. ನಮ್ಮ ಮತದ ಮೂಲಕ ಬರುವ ದಿನಗಳಲ್ಲಿ ನಮ್ಮನ್ನು ಆಳುವ ದೊರೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸೋಣ.
೪> ಆದಷ್ಟು ಸಸ್ಯಹಾರಿಗಳಾಗಿ. ಕೊನೆ ಪಕ್ಷ, ಮಾಂಸ ಸೇವನೆಯನ್ನು ಕಡಿಮೆ ಮಾಡೋಣ.
೫> CFL ಬಲ್ಬ್ ಗಳನ್ನು ಬಳಸೋಣ, ಆ ಮೂಲಕ ವಿದ್ಯುತ ಬಳಕೆಯಲ್ಲಿ ಉಳಿಸೋಣ
೬> ಆದಷ್ಟು ರೆಚ್ಯ್ಕ್ಲೆದ್ ವಸ್ತುಗಳನ್ನು ಬಳಸೋಣ.
೭> ಆದಷ್ಟು ಹೆಚ್ಚು ಸಾರ್ವಜನಿಕ ಸಾರಿಗೆ ಬಳಸೋಣ. ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ೨೦೦ ಡಾಲರ್ ಪ್ರತಿ ಬ್ಯಾರೆಲ್ ಗೆ ಆಗುತ್ತಿರುವ ಈ ಸಂದರ್ಭದಲ್ಲಿ, ಈ ಹೆಜ್ಜೆ ಒಳ್ಳೆಯದು.
೮> ಕೆಲಸದ ಸಮಯ ಮುಗಿದ ಮೇಲೆ ನಿಮ್ಮ ಕಂಪ್ಯೂಟರ್ ಅನ್ನು ಆಫ್ ಮಾಡಿ. ಬಳಸದೆ ಇದ್ದಲ್ಲಿ ನಿಮ್ಮ ಮನೆಯ ಎ.ಸಿ ಆರಿಸಿ.
೯> ಆದಷ್ಟು ಕಡಿಮೆ ಪ್ಯಾಕೇಜ್ ಮಾಡಿರೋ ವಸ್ತುಗಳನ್ನು ಖರೀದಿಸಿ. ನೆನಪಿರಲಿ, ಇಂದು ಖರಿದಿಸೋ ವಸ್ತುವಿಗಿಂತಲೂ ಅದರ ಪ್ಯಾಕೇಜಿಂಗ್ ಗಾಗಿ ಬಳಸೋ ವಸ್ತುಗಳೇ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯದ ಸಮಸ್ಯೆ ತಂದೋಡ್ದುತ್ತಿವೆ.

ನಾಳಿನ ಭವಿಷ್ಯ ಅಂದ್ರೆ ನಮಗಾಗಿ ಯಾರೋ ಸೃಷ್ಟಿ ಮಾಡಿರೋದಲ್ಲ. ಅದನ್ನ ನಾವೇ ಸೃಷ್ಟಿಸಬೇಕು. ಪ್ರತಿ ದಿನವು ನಮ್ಮ ಆಯ್ಕೆಗಳ ಮೂಲಕ, ನಮ್ಮ ಪರಿಸರ ಸ್ನೇಹಿ ನಿಲುವುಗಳ ಮೂಲಕ ನಾವು ಒಂದು ಸುಂದರ ಜಗತ್ತನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬಹುದು. ನೆನಪಿರಲಿ, ಪರಿಸರದ ವಿಷಯದಲ್ಲಿ ಯಾವುದೇ ಬಹುಮಾನವು ಇಲ್ಲ, ಶಿಕ್ಷೆಯು ಇಲ್ಲ, ಇರುವುದು ಪರಿಣಾಮವೊಂದೇ. Let us Think and Act. Make a Commitment before it is too late.

‹ ಮಂಡ್ಯದ ಗಂಡು ಮತ್ತು ವಿಶ್ವೇಶ್ವರಯ್ಯ ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು ›
  • ಸಮಾಜ
~.~
  • Login or register to post comments
  • 194 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 6, 2008 - 6:48am — venkatesh

ಉ: ಇಂದು ವಿಶ್ವ ಪರಿಸರ ದಿನ - Do I care?

venkatesh's picture

ನಾಳಿನ ಭವಿಷ್ಯ ಅಂದ್ರೆ ನಮಗಾಗಿ ಯಾರೋ ಸೃಷ್ಟಿ ಮಾಡಿರೋದಲ್ಲ. ಅದನ್ನ ನಾವೇ ಸೃಷ್ಟಿಸಬೇಕು. ಪ್ರತಿ ದಿನವು ನಮ್ಮ ಆಯ್ಕೆಗಳ ಮೂಲಕ, ನಮ್ಮ ಪರಿಸರ ಸ್ನೇಹಿ ನಿಲುವುಗಳ ಮೂಲಕ ನಾವು ಒಂದು ಸುಂದರ ಜಗತ್ತನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಬಹುದು. ನೆನಪಿರಲಿ, ಪರಿಸರದ ವಿಷಯದಲ್ಲಿ ಯಾವುದೇ ಬಹುಮಾನವು ಇಲ್ಲ, ಶಿಕ್ಷೆಯು ಇಲ್ಲ, ಇರುವುದು ಪರಿಣಾಮವೊಂದೇ. Let us Think and Act. Make a Commitment before it is too late.

ನಿಮ್ಮ ಪರಿಸರ ಪ್ರಜ್ಞೆ ಎಲ್ಲರಿಗೂ ಬಂದರೆ ಎಷ್ಟು ಚೆನ್ನಾಗಿರುತ್ತೆ ಅಲ್ವೆ ? ಈಗ ಇದರಬಗ್ಗೆ ಹೆಚ್ಚು ಹೆಚ್ಚು ಆಲೋಚಿಸುವ ಹಾಗೂ ಅದನ್ನು ಅನುಷ್ಟಾನಕ್ಕೆ ತರುವ ಅಗತ್ಯವಿವೆ.

ಇಲ್ಲಿ ಒಂದು ಕೆನರಾ ಬ್ಯಾಂಕ್ ಇದೆ. ಅಲ್ಲಿನ ಎ.ಟಿ.ಎಮ್ ನಲ್ಲಿ ಹಣತರಲು ಹೋಗಿದ್ದೆ. ಒಳಗೆ ಕಸ, ಚಿಂದಿಪೇಪರ್ ಗಳ ರಾಶಿಯೇ ಇತ್ತು. ಕಾಲುಕಾಲಿಗೆ ಹೊಡೆಯುತ್ತಿತ್ತು. ಅದನ್ನು ಗುಡಿಸಿ ಶುಚಿಮಾಡುವಷ್ಟು ಸಮಯ, ಹಾಗೂ ಮನಸ್ಸು ಯಾರಿಗೂ ಇದ್ದಂತೆ ಕಾಣಲಿಲ್ಲ. ಇದೊಂದು ಚಿಕ್ಕ ಉದಾಹರಣೆ. ಮನೆ ಒಳಗೋ ದೇವೇಂದ್ರನ ವೈಭವವನ್ನು ನಾಚಿಸುವಷ್ಟು ಅಂದ ಚೆಂದ. ಹೊಸಿಲಿನಿಂದ ಆಚೆಗೆ ನರಕಸದೃಶವಾತಾವರಣ. ಈ ಮಾತು , ಮುಂಬೈನಗರದ, (ಅ)ನಾಗರಿಕರ ಬಗ್ಗೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಳಿಲು ಸೇವೆ.
  • ಪ್ಲಾಸ್ತಿಕ್ ಬಳಕೆ ಕಡಿಮೆ ಮಾಡಿ
  • ವಿಶ್ವ ಪರಿಸರ ದಿನಾಚರಣೆ-2007
  • ವಿಶ್ವ ಪರಿಸರ ದಿನಾಚರಣೆ-2007
  • ಪರಿಸರ ಸಂರಕ್ಷಣೆ ಅನ್ನೋ ಜೋಕು -
Syndicate content

ಲೇಖಕರು

shobha.koppad's picture

ಪೂರ್ಣ ಹೆಸರು
ಶೋಭಾ ಕೊಪ್ಪದ್

ಪರಿಚಯ

ವೃತ್ತಿಯಿಂದ ವೈದ್ಯೆ. ಹುಟ್ಟೂರು ದಾವಣಗೆರೆ. ಈ ಸದ್ಯಕ್ಕೆ ಬೆಂಗಳೂರಲ್ಲಿ ಒಂದು ಆಸ್ಪತ್ರೆಯಲ್ಲಿ ಕೆಲಸ. ಕನ್ನಡ, ಕರ್ನಾಟಕ ಮತ್ತು ಕನ್ನಡಿಗನ ಬಗ್ಗೆ ಕೆಲವು ಕನಸಿವೆ. ಇದೇನು ಕನ್ನಡತಿ ಒಬ್ಬಳಿಗೆ ಇದೆಂತ ಹುಚ್ಚು ಅಂತೀರ? ನನ್ನ ಕನ್ನಡ ಮೇಷ್ಟ್ರಿಂದ ಬಂದಿದ್ದು ಈ ಕನ್ನಡ ಪ್ರೀತಿ. ಕನ್ನಡ ದಲ್ಲಿ ಉತ್ತಮವಾದ ಎಲ್ಲ ಸಾಹಿತ್ಯ ಓದಬೇಕು. ಓದಿರೋದು ತುಂಬ ಕಮ್ಮಿ. ತುಂಬ ಓದೋ ಆಸೆ ಇದೆ. ಜೊತೆಗೆ ಸಮಾನ ಮನಸ್ಕ ಸ್ನೇಹಿತರ ಹುಡುಕಾಟದಲ್ಲಿ ಸಂಪದದ ಸಂಪರ್ಕಕ್ಕೆ ಬಂದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
  • ಓದಬೇಕು & ಓದಿಕೊಳ್ಳಬೇಕು
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ನಲ್ಲೆಯ ಕೋಪ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • `ಓವಿ ' ಪದದ ಅರ್ಥವೇನು?
  • ಪಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: Typical ನಲ್ಲನ ಒಲುಮೆಯಳಲು
    August 20, 2008 - 2:06pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:07pm
ಇನ್ನಷ್ಟು


ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator