ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ

ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

May 13, 2008 - 7:32pm — ವೈಭವ

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ

‹ ಕಾಲ್ಡ್‌ವೆಲ್ ಕಾಲು ಜಾರಿದನೇ?!!! ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್.... ›
  • ಸಾಹಿತ್ಯ, ಭಾಷೆ
~.~
  • Login or register to post comments
  • 594 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 15, 2008 - 9:08am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಅಱಿವುಂ = ಅರಿವು
ನೆಱವುಂ =ನೆರವು
ತನ್ನೊಳ್ = ತನ್ನಲ್ಲಿ

ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ನೆಱೆದ ಅಂದ ಅಱಿದ ಅದಱೊಳ್ ಎಸಪುದು ಅಲ್ಲದೆ ಬೞಿಯಂ

ಗುಱಿನೆಱದೆಡೆಯೊಳ್ ಮಮ್ಮಲ
ಗುಱಿನೆಱದ ಎಡೆಯೊಳ್ ಮಮ್ಮಲ

ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ
ಮಱುಗದೊಡೆ ಆನ್ ಎಱವುಂ ಅಱಿವುಂ ಏನ್ ಕೂಡುಗುಮೇ...

ಸರಿಯಾ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 9:14am — ವೈಭವ

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

ವೈಭವ's picture

ನನ್ನಿ ಮಾಯ್ಸ,
ಆದರೆ ಇದರ ತಿರುಳೇನು. ಇನ್ನು ಸರಿಯಾಗಿ ಹೊಳೆಯಲಿಲ್ಲ. ಗೊಂದಲವಾಗಿದೆ
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 9:18am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಇಲ್ಲಿ ಅಱಿವು/ಜ್ನಾನ ಮತ್ತು ನೆಱವು=ಬೞಕೆ/ಸಹಾಯದ ಬಗ್ಗೆ ಮಾತಾಡ್ತಾ ಇರೋ ಹಾಗಿದೆ...

ಕನ್ನಡ ಕಂದರು ಹಾಕಿದ ಒಂದು ಸುಬಾಶಿತದ ಹಂಗೆ ಇದೆ.. ಅನ್ನಿಸ್ತಿದೆ..

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 9:31am — hamsanandi

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

hamsanandi's picture

>>ಅಱಿವುಂ ನೆಱವುಂ ತನ್ನೊಳ್
>>ನೆಱೆದಂದಱಿದದಱೊಳೆಸಪುದಲ್ಲದೆ

ಅರಿವೂ, ನೆರವೂ ತನ್ನೊಳಗೆ ತಾನೇ ನೆರೆದಿದ್ದರೆ (ಸೇರಿದ್ದರೆ), ಅದದರೊಳಗೆ ಎಸೆವುದಲ್ಲದೆ (ಮೆರೆಯುವುದಲ್ಲದೆ)...

ಅಂತಿರಬೇಕೇ?

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:17am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭ್ಹಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:23am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್‍=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್‍=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆಯೂ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:19am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:20am — kannadakanda

June 12, 2008 - 10:24am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್‍=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್‍=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:21am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:28am — kannadakanda

May 15, 2008 - 10:38am — rameshbalaganchi

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

rameshbalaganchi's picture

ಸ್ನೇಹಿತರೆ,
ಹಳೆಗನ್ನಡ ನನ್ನ ಕ್ಷೇತ್ರವಲ್ಲ. ಆದರೂ ಆಸಕ್ತಿ, ನಿಘಂಟಿನ ಸಹಾಯ ಮತ್ತು ಸ್ವಲ್ಪ ಕಲ್ಪನೆಗಳೊಂದಿಗೆ ಇದನ್ನು ಅರ್ಥೈಸುವ ಪ್ರಯತ್ನ ಮಾಡಿದ್ದೇನೆ.
ತಪ್ಪಿದ್ದರೆ ತೋರಿಸಿಕೊಡಿ. ತಿದ್ದಿಕೊಳ್ಳುತ್ತೇನೆ.

ಅಱಿವುಂ = ಜ್ಞಾನವೂ (ತಿಳುವಳಿಕೆಯೂ) ನೆಱವುಂ = (ದೈವ ಅಥವಾ ಮನುಷ್ಯ) ಸಹಾಯವೂ ತನ್ನೊಳ್
ನೆಱೆದಂದು =ತನ್ನಲ್ಲಿ ಒಟ್ಟುಗೂಡಿದಾಗ, ಅರಿದು = ಅದನ್ನರಿತು, ಎಸಪುದಲ್ಲದೆ= ಪ್ರಯತ್ನಶೀಲನಾಗಬೇಕಲ್ಲದೆ
ಬರಿಯಂ= ಕೇವಲ, ಗುಱಿನೆಱದೆಡೆಯೊಳ್= ಗುರಿ ಈಡೇರುವ ವಿಷಯದಲ್ಲಿ ಮಮ್ಮಲಮಱುಗಿದೊಡೆ= ಅತಿಯಾಗಿ ಮರುಗುತ್ತಿದ್ದರೆ (ಚಿಂತಿಸುತ್ತಿದ್ದರೆ) ಆ ನೆಱವುಂ= ಒದಗಿದ ಆ ಸಹಾಯವೂ, ಅಱಿವುಂ= ಜ್ಞಾನವೂ ಕೂಡುಗುಂ ಏಂ ( ನಮಗಾಗಿ) ಒಟ್ಟುಗೂಡುತ್ತವೆಯೇ? (ಫಲಿಸುತ್ತವೆಯೇ)
ಭಾವಾರ್ಥ

ತಿಳುವಳಿಕೆ ಮತ್ತು ಸಹಾಯಹಸ್ತ ಎರಡೂ ಸಿಕ್ಕಿದಾಗ ಮನುಷ್ಯ ಕಾರ್ಯನಿರತನಾಗಬೇಕು. ಹಾಗೆ ಮಾಡದೆ ತನ್ನ ಪ್ರಯತ್ನ ಫಲಿಸುತ್ತದೋ ಇಲ್ಲವೋ ಎಂಬ ಚಿಂತೆಯಲ್ಲಿ ಮುಳುಗಿದ್ದರೆ ವಿದ್ಯೆ ಮತ್ತು ಸಹಾಯಗಳ ಕೂಟ ಫಲಕಾರಿಯಾಗುವುದಿಲ್ಲ.

ಕನ್ನಡ ಸಾಹಿತ್ಯಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು (ಪರಿಷ್ಕೃತ ಆವೃತ್ತಿಯಲ್ಲಿ)
ನೆಱೆ= ಈಡೇರು, ನೆರವೇರು ( 25 ಅರ್ಥಗಳಲ್ಲಿ 11 ನೆಯ ಅರ್ಥ)-ಪುಟ 690
ಎಡೆ= ಸಾಧ್ಯವಾಗು (13 ಅರ್ಥಗಳಲ್ಲಿ 3ನೆಯ ಅರ್ಥ) ಪುಟ173

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 10:46am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ರಮೇಶ್

"ಅರಿದು = ಅದನ್ನರಿತು" ಇದು ತಪ್ಪು..

ಅಱಿದು ಅನ್ನೋದು ಸರಿಬೞಕೆಯಲ್ಲ.. ಅಱಿತು ಅನ್ನೋದ ಸರಿ..
ಅರಿದು ಅಂದರೆ ರುಬ್ಬಿ ಎಂದು ಅಱಿತ ಬರುವುದು.

ಕುಱಿತು/ಕುಱಿತ ಎಂದೂ ಕುಱಿದು/ಕುಱಿದ ಎಂದ ಆಗಲ್ಲ..

ಮಿಕ್ಕವಕ್ಕೆ ನನ್ನಿ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 10:23pm — ವೈಭವ

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

ವೈಭವ's picture

ಅಱಿದು= ಅರಿದು ಅಂದರೆ ಅದನ್ನ ಚೆನ್ನಾಗಿ ಒಂದುಗೂಡಿಸಿಕೊಂಡು ಅಂತ ಅರಿತ ಆಗುತ್ತೆ ಅನ್ಸುತ್ತೆ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 10:47am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಬೞಿಯಂ = ಬಳಿಯಂ , ಬರಿಯಂ ಅಲ್ಲ!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2008 - 10:26pm — ವೈಭವ

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

ವೈಭವ's picture

ಒಹ್, ವಾವ್. ಸಕ್ಕತ್ತಾಗಿದೆ ಇದರ ಅರ್ತ.

ಈ ರಮೇಶ ಬಳಗಂಚಿಯವರ ಬಿಡಿಸುವಿಕೆ ನೋಡಿ ಇದರಿಂದ ಹುರುಪು ಪಡೆದ ನನ್ನ ಉನಿಯಿಟ್ಟಿದ್ದ ಕೆಲಸಗಳು ಇಂದು ಚೆನ್ನಾಗಿ ಸಾಗಿದವು.

ಪಂಪ, ನಿನಗೆ ತಡವಾಗಿಯಾದರೂ ಹೆನ್ನನ್ನಿ.

ರಮೇಶ್ ರವರೆ, ನಿಮ್ಮ ಬಿಡಿಸುವಿಕೆ/ತಿರುಳಿಗಾಗಿ ಎಲ್ಲೆಯಿಲ್ಲದ(ಅನಂತಾನಂತ) ನನ್ನಿಗಳು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:23am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 11:59am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನೆಱೆ= ಈಡೇರು, ನೆರವೇರು ( 25 ಅರ್ಥಗಳಲ್ಲಿ 11 ನೆಯ ಅರ್ಥ)-ಪುಟ 690
ಎಡೆ= ಸಾಧ್ಯವಾಗು (13 ಅರ್ಥಗಳಲ್ಲಿ 3ನೆಯ ಅರ್ಥ) ಪುಟ173
ಈ ನೆಱೆಯಿಂದ ಬರುವ ನೆಱವು ಶಬ್ದಕ್ಕೆ ಸಹಾಯ ಎಂಬರ್ಥ ಬರಲು ಸಾಧ್ಯವೇ ಇಲ್ಲ. ನೆರೆ=ಸೇರು ಒಬ್ಬನ ಜೊತೆ ಇನೂಬ್ಬ ಸೇರಿದಾಗ ಸಹಾಯ. ಹಾಗಾಗಿ ನೆರವು=ಸಹಾಯ ನೆಱೆ=ತುಂಬು, ಪೂರ್ಣವಾಗು ಆದಾಗ ನೆಱವು=ಪೂರ್ಣತೆಯೇ ಹೊಱತು ಸಹಾಯವಲ್ಲ. ಆದ್ದಱಿಂದ ಪೂರ್ಣ ಅನ್ವಯ ಹಾಗೂ ಅರ್ಥಗಳು ತಪ್ಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 12:04pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಹಾಗೆಯೇ ಬರಿಯ ಶಬ್ದ ಅಲ್ಲವದು ಬೞಿಯಂ. ಬಱಿಯಂ ಎಂಬ ಶಬ್ದವೇ ಹೞಗನ್ನಡದಲ್ಲಿ ಇಲ್ಲ. ಬಱಿಯ ಅಥವಾ ಬಱಂ=ಕ್ಷಾಮ ಇರುವ ಶಬ್ದ. ಇಲ್ಲಿರುವುದು ಬೞಿಯಂ=ಇದರ ಅರ್ಥಗಳು ಬೞಿಕ ಅಥವಾ ಬೞಿಯಂ=ದಾರಿಯನ್ನು. ಎಂಬರ್ಥ. ಆದರೆ ಬೞಿಕ (ಆಮೇಲೆ) ಎಂಬರ್ಥವೇ ಎಂದು ಪ್ರೊ. ಜಿ. ವೆಂಕಟಸುಬ್ಬಯ್ಯನವರ ಅಭಿಮತ. ನಮಗೂ ಅದು ಸರಿಯೆನಿಸಿ ಸರಿಯಾದ ಅನ್ವಯ ಹಾಗೂ ಅರ್ಥ ಕೊಟ್ಟಿದ್ದೇನೆ. ಓದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2008 - 10:37am — Sunil Jayaprakash

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

Sunil Jayaprakash's picture

ವೈಭವ, ರಮೇಶ ಬಳಗಾಂಚಿ, ಹಂಸಾನಂದಿ ಮತ್ತು ಮಹೇಶ ಎಲ್ಲರಿಗೂ ನನ್ನ ನಲ್ನನ್ನಿ. ಪಂಪನಿಗೆ ಮಾಮಿಜೋತ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 5:24pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನೆಱವುಂ ನೆರವುಂ ಸರಿಯಾಗಿ ತಿಳಿಸಿ. ಆಗ ಅರ್ಥ ಸರಿ ಮಾಡಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2008 - 10:03pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನೆರವುಂ ಇರಬೇಕು. ನೆಱವುಂ ಇರಲಿಕ್ಕಿಲ್ಲ. ಸರಿಯಾದ ಪದ್ಯವನ್ನು ನೋಡಿ ಅರ್ಥ ತಿಳಿಸುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 12:00am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಮೇಲಿನ ಅನುವಾದಗಳೆಲ್ಲ ಸರಿಯಿಲ್ಲವೆನಿಸುತ್ತದೆ. ಈ ಕೆೞಗಿನ ಅನುವಾದ ನೋಡಿ.
ಅಱಿವು=ಜ್ಞಾನ, ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ. ಇದಱರ್ಥ: ಜ್ಞಾನವೂ ವೈರಾಗ್ಯವೂ ತನ್ನೊಳಗೆ ಪರಿಪೂರ್ಣವಾಗಿ ಅಱಿವಿಗೆ ಬಂದು ಅದಱಿಂದ ಗುಱಿಯ(ಇಲ್ಲಿ ಮುಕ್ತಿಯೊಂದೇ ಗುಱಿ) ಬೞಿಯಂ ಎಸಪುದಲ್ಲದೆ= ಮುಕ್ತಿಯ ದಾರಿ ತೋಱುವುದಲ್ಲದೇ? ಹಾಗೆ ಮುಕ್ತಿ ಪರಿಪೂರ್ಣವಾಗಿ ತೋಱದಿದ್ದರೆ ಅದಱಿಂದ ಮಱುಗಿದರೆ (ಮುಕ್ತಿ ಸಿಗಲಿಲ್ಲವೆಂದು ತಪಿಸಿದರೆ (ದುಃಖಗೊಂಡರೆ) ಆಗ ಲಭ್ಹಿಸಿದ ಜ್ಞಾನ ಮತ್ತು ವೈರಾಗ್ಯ ಒಂದಕ್ಕೊಂದು ಪೂರಕವಾಗುವುವೇ? ಅಂದರೆ ಈ ಜ್ಞಾನ ವೈರಾಗ್ಯಗಳಿನ್ನೂ ಪರಿಪಕ್ವವಾಗಬೇಕೆಂದು ಅರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:15am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ನಂನಿ
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:27am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಕೀಲಿ ಒತ್ತುವಾಗ ಪ್ರಮಾದದಿಂದ ಲಭ್ಹಿಸಿದ ಎಂದು ಮುದ್ರಿತವಾಗಿದೆ. ದಯವಿಟ್ಟು ಲಭಿಸಿದ ಎಂದೋದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 9:50am — rameshbalaganchi

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

rameshbalaganchi's picture

"ನೆಱವು=ಪರಿಪೂರ್ಣತೆ ಪರಿಪಕ್ವತೆ (ನೆಱೆ=ತುಂಬು ಸಮಗ್ರವಾಗು ಪರಿಪೂರ್ಣವಾಗು) ಅಂದರೆ ವೈರಾಗ್ಯ."

ಪರಿಪಕ್ವತೆಯನ್ನು ವೈರಾಗ್ಯದೊಡನೆ ಹೇಗೆ ಸಮೀಕರಿಸುತ್ತೀರಿ?
ಈ ಪದಕ್ಕೆ ನೀವು ಕೊಟ್ಟಿರುವ ವೈರಾಗ್ಯ ಎಂಬ ಪದ ಸಾಂದರ್ಭಿಕವೆ? ಇಲ್ಲದಿದ್ದರೆ ಪರಿಪೂರ್ಣತೆ, ಪರಿಪಕ್ವತೆ ಮತ್ತು ವೈರಾಗ್ಯಗಳಿಗೆ ಎಲ್ಲಿಂದೆಲ್ಲಿಯ ಸಂಬಂಧ?

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 10:31am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಈ ವೈರಾಗ್ಯ ಎಂದರೆ ’ಹೋಗಲಿ ಭಿಡು’. ಈ ಮನೋಭಾವ ಬರಲು ಮನುಷ್ಯ ಆಧ್ಯಾತ್ಮಿಕವಾಗಿ, ಮಾನಸಿಕವಾಗಿ ತುಂಬಿರಬೇಕಾಗುತ್ತದೆ. ಇದು ನಮ್ಮ ತುಂಬು ಬೆಳವಣಿಗೆಯಿಂದ ಬರುವಂಥದ್ದು. ಇದಕ್ಕೆ ನಮಗೆ ಜ್ಞಾನದಿಂದಾದ ಪರಿಪಕ್ವತೆ. ಒಂದು ಉದಾಹರಣೆ ಕೊಡುತ್ತೇನೆ. ಇಬ್ಬರು ಮಹಿಳೆಯರು ಯಾವುದೋ ಚಿಲ್ಲಱೆ (ಕ್ಶುಲ್ಲಕ) ವಿಚಾರಕ್ಕಾಗಿ ಬಡಿದಾಡುತ್ತಿದ್ದರಂತೆ. ಇಬ್ಬರೂ ನಾನು ಸರಿ ನೀನು ತಪ್ಪು ಎಂದು ವಾದ ಮುಂದುವರೆಸುತ್ತಾ ಹೋದರಂತೆ. ಈ ವಾದ ಮುಂದುವರೆಯುತ್ತಿರುವುದನ್ನು ನೋಡಿದ ಆ ಮಹಿಳೆಯರಲ್ಲೊಬ್ಬರಿಗೆ ಒಮ್ಮೆಲೆ ಅಱಿವಾದದ್ದು ಈ ಜಗಳ ಬಿಟುಬಿಡೋಣವೆನಿಸಿತಂತೆ. ಆ ಜಾಣ ಮಹಿಳೆ ತನ್ನೊಡನೆ ಜಗಳವಾಡುತ್ತಿದ್ದ ಮಹಿಳೆಗೆ ಹೆಳಿದರಂತೆ ’ಹೋಗಲಿ ಬಿಡಿ. ನಾನೇ ತಪ್ಪಿದ್ದೆ. ನೀವೇ ಸರಿ’ ಜಗಳ ನಿಂತುಹೋಯಿತಂತೆ. ಆ ಜಾಣೆಗೆ ಅನ್ನಿಸಿರಬಹುದು ’ಹೊಗಲಿ ಬಿಡು’ ಎಂದರೆ ನನ್ನ ಗಂಟೇನು ಹೋಗುವುದು. ಈ ತೆಱನಾದ ವೈರಾಗ್ಯ ನಮಗೆ ಅಗತ್ಯವಿರಬಹುದು. ಏಕೆಂದರೆ ಅಪ್ರಸ್ತುತವಾದ ವಿಚಾರ, ಆಸೆ, ಮಮತೆಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಇವನ್ನೆಲ್ಲಾ ’ಹೋಗಲಿ ಬಿಡು’ ಎನ್ನುವುದಕ್ಕೆ ನಮಗೆ ಸಾಕಷ್ಟು ತುಂಬು ಪ್ರಜ್ಞೆ ಇರಬೇಕಾಗುತ್ತದೆ. ಸಣ್ಣ ಮಕ್ಕಳ ಹಟಕ್ಕೆ ನಾವು ನಮ್ಮ ಹಟವನ್ನು ಬಿಟ್ಟುಬಿಡುತ್ತೇವೆ. ಇದು ಸಣ್ಣ ಮಟ್ಟದ ವೈರಾಗ್ಯ. ದೊಡ್ಡ ಕದನ ರಕ್ತಪಾತಗಳಿಗೆ ದಾರಿಯಾಗುವ ನಮ್ಮ ಅವಿವೇಕದ ಬಿಡಲಾಱದ ವಿಚಾರಗಳನ್ನು ಬಿಡಲು ನಮಗೆ ಉನ್ನತಮಟ್ಟದ ವಿವೇಚನೆ ಬೇಕಾಗುತ್ತದೆ. ಅದಕ್ಕೆ ನಮ್ಮ ಬುದ್ಧಿ ಮನಸ್ಸು ತುಂಬಿರಬೇಕಾಗುತ್ತದೆ (ಅದೇ ಈ ನೆಱವು).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 10:43am — rameshbalaganchi

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

rameshbalaganchi's picture

ವೈರಾಗ್ಯಕ್ಕೆ ನೀವು ಕೊಟ್ಟಿರುವ ವಿವರಣೆ ಕುತೂಹಲಕಾರಿಯಾಗಿದ್ದು ಸ್ವಲ್ಪ ಮಟ್ಟಿಗೆ ಸಮಂಜಸವೂ ಆಗಿದೆ. ಆದರೆ ಪದ್ಯದ ಅರ್ಥೈಕೆಯಲ್ಲಿ ಈ ವಿವರಣೆ ನನಗಿನ್ನೂ ಸಮಂಜಸವೆನ್ನಿಸುತ್ತಿಲ್ಲ.

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 1:16pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಆದರೆ ನೆರವು=ಸಹಾಯ. ನೆಱವು=ಪೂರ್ಣತೆ. ನೀವು ಕೇಳಿರಬಹುದು. ನೆಱೆ ನಂಬಿದೆ ನಿನ್ನ ವೆಂಕಟರಮಣ. ನಿನ್ನನ್ನು ನೆಱೆ(ಸಂಪೂರ್ಣವಾಗಿ) ನಂಬಿದೆ. ಅದಱ ಭಾವನಾಮ ನೆಱವು. ನೆಱವು= ತುಂಬಿರುವಿಕೆ. ನೆಱೆವೆಱೆ= ನೆಱೆ(ಪೂರ್ಣ)+ಪೆಱೆ(ಚಂದ್ರ)=ಪೂರ್ಣಚಂದ್ರ. ತುಂಬಿದ ಕೊಡ ತುಳುಕುವುದಿಲ್ಲ. ತುಂಬಿದ ಕೊಡದಂತಿರುವವರಿಗೆ ವೈರಾಗ್ಯ ಹೆಚ್ಚು. ಸಣ್ಣ ವಿಷಯಗಳಿಗೆಲ್ಲ ಅವರು ’ಹೋಗ್ಲಿ, ಬಿಡು’ ಎನ್ನುತ್ತಾರೆ. ಅವರಿಗೆ ಜಗತ್ತಿನ ವ್ಯ್ವವಹಾರವೆಲ್ಲ ಸಣ್ಣದೇ. ಹಾಗಾಗಿ ಅವರ ಪೂರ್ಣತೆ=ವೈರಾಗ್ಯ. ಸರಿಯೆನಿಸಬಹುದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2008 - 9:35am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

"ಏಱಿದವನು ಚಿಕ್ಕವನಿರಬೇಕು" ಎಂದು ಬದಲಾಯಿಸಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2008 - 10:16am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಏಱದವನು ದೊಡ್ಡವನಾಗಿರಬೋದೋ? Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 10:45am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ವ್ಯಾಕರಣ ಹೋಗಿ ಆದ್ಯಾತ್ಮ ಬಂತು ಡುಂ ಡುಂ ಡುಂ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 12:49pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಇಷ್ಟೆಲ್ಲ ಆಗಿದ್ದು ಈ ನೆರೆ ಮತ್ತು ನೆಱೆ ಶಬ್ದಗಳ ಅಥವ್ಯತ್ಯಾಸ ತಿಳಿಸಲು. ಹಾಗಾಗಿ ವ್ಯಾಕರಣಂ ವೈರಾಗ್ಯಕ್ಕೆಳಸಿತೆನ್ನಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 12:59pm — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಅಯ್ಯ..

ಶಬ್ದಮಣಿದರ್ಪದ ಮೊದಲಲ್ಲೇ ವ್ಯಾಕರಣದಿಂದ ಮುಕುತಿ ದೊರೆಯುವುದು ಎಂದು ಅಱುಹಿದೆ. Smiling

ನಿಂಮಿಂದೇ ನನಗೂ ಈ ಱ, ೞದ ತೆವಲು ಹೆಚ್ಚಿದೆ.. ಈಗ ತಪ್ಪಿಲ್ಲದೆ ಱ, ೞಗಳ ಬೞಕೆ ಮಾಡುತ್ತಿದ್ದೀನಿ ತಾನೇ?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 1:09pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಪ್ಪುದಪ್ಪುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 2:08pm — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಯಾರನ್ನ ಅಪ್ಪುದು?
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 10, 2008 - 5:14pm — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಅಪ್ಪುದು=ಅಹುದು=ಹೌದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2008 - 8:32am — mahesha

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

mahesha's picture

ಗೊತ್ತು..

ಅಪ್ಪುವುದು => ಅಪ್ಪುದು ಎಂದು ಮಾತಲ್ಲುಂಟು.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:21am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ

ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್‍=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್‍=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:31am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ನಿನ್ನೆ ನಾನು ಜಿ. ವೆಂಕಟಸುಬ್ಬಯ್ಯನವರನ್ನು ಭೇಟಿಯಾಗಿದ್ದೆ. ಅವರು ಈ ಪದ್ಯವನ್ನು ಚೆನ್ನಾಗಿ ಬಿಡಿಸಿದರು. ನಾವು ಬಿಟ್ಟ ಕೆಲವು ಶಬ್ದಗಳಿಗೆ ಚೆನ್ನಾದ ಅರ್ಥವನ್ನೇ ಕೊಟ್ಟಿದ್ದಾರೆ.

ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾ ನೆಱವುಮಱಿವುಮೇಂ ಕೂಡುಗುಮೇ

ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್‍=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದಱೊಳೆಸಪುದು=ತಿಳುವಳಿಕೆಯಲ್ಲಿ(ಅಱಿವಿನಲ್ಲಿ) ಸತ್ಯ(ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್‍=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 10:37am — kannadakanda

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

kannadakanda's picture

ಟೈಪಿಸುವಾಗ ಕೆಲವು ಅಕ್ಷರಗಳನ್ನು ನುಂಗಿಬಿಟ್ಟೆ. ಅದಕ್ಕೆ ತಮ್ಮೆಲ್ಲರ ಕ್ಷಮೆಯಿರಲಿ
ಅಱಿವುಂ ನೆಱವುಂ ತನ್ನೊಳ್
ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ
ಗುಱಿನೆಱದೆಡೆಯೊಳ್ ಮಮ್ಮಲ
ಮಱುಗಿದೊಡಾ ನೆಱವುಮಱಿವುಮೇಂ ಕೂಡುಗುಮೇ

ಅಱಿವುಂ=ಅಱಿವೂ ನೆಱವುಂ=ಪರಿಪೂರ್ಣತೆಯೂ ತನ್ನೊಳ್‍=ತನ್ನೊಳಗೆ ನೆಱೆದಂದು=ತುಂಬಿದಂದು(ತುಂಬಿದಾಗ) ಅಱಿದು=ತಿಳಿದು ಅದಱೊಳೆಸಪುದು=ಅದಱಲ್ಲಿ(ಆ ತಿಳುವಳಿಕೆಯಲ್ಲಿ,ಅಱಿವಿನಲ್ಲಿ ನೆಱ=ಹುರುಳು, ಸತ್ವ, ಸತ್ಯ) ಗೋಚರಿಸುವುದು. ಅಲ್ಲದೆ=ಹಾಗೆ ಗಮನಿಸದೇ ಹೋದಾಗ ಬೞಿಯಂ=ಬೞಿಕ (ಹಾಗೆ ಗಮನಿಸುವಾಗ ಗಮನಿಸದೇ ಬಿಟ್ಟು ನಂತರ) ಗುಱಿನೆಱದೆಡೆಯೊಳ್‍=ಗುಱಿಯ ಸತ್ಯ(ಹುರುಳು, ಸತ್ವ)ಕ್ಕಾಗಿ ಮಮ್ಮಲಮಱುಗಿದೊಡಾ=ಮಮ್ಮಲ ಮಱುಗಿದರೆ (ಪಶ್ಚಾತ್ತಾಪ) ಪಟ್ಟರೆ ಆ ನೆಱವುಂ=ಪರಿಪೂರ್ಣತೆ, ಅಱಿವುಂ=ಜ್ಞಾನವೂ ಕೂಡುಗುಮೇ=(ಮತ್ತೆ ಗುಱಿಯೊಡನೆ) ಸೇರಿಕೊಳ್ಳುವುವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 12, 2008 - 12:08pm — rameshbalaganchi

ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ

rameshbalaganchi's picture

ಈ ಪ್ರಯತ್ನಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ವಚನ ನನಗೆ ಸ್ವಲ್ಪವೂ ಅರ್ಥ ಆಗ್ಲಿಲ್ಲ. ದಯವಿಟ್ಟು ವಿವರಿಸುತ್ತೀರಾ?
  • ಸರಿಯಾದ ಕನ್ನಡ ಪದ
  • ಕನ್ನಡದ ಬಗ್ಗೆ ಒಂದು ವಿಶಿಷ್ಟವಾದ ಪದ್ಯ - ಸುಲಿದ ಬಾಳೆಯ ಹಣ್ಣಿನಂದದಿ
  • ಚಾಗದ ಭೋಗದ....
  • ಹಾಡು ಬೇಕಾಗಿತ್ತು.
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
  • ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
  • ಕನಸು, ಕಣಸು
  • ತಾತ
  • ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
  • ಅಬ್ಬಿ, ಅರ್ಬಿ
  • ಕನ್ನಡದಲ್ಲಿ ಓಸಿಆರ್‍ ಇದೆಯೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHMYA
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:55pm
  • srinivasps
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:30pm
  • vikashegde
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 25, 2008 - 3:28pm
  • vikashegde
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:26pm
  • mahesha
    ಉ: ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
    July 25, 2008 - 3:25pm
  • mahesha
    ಉ: ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ *ಅಂತೆ*
    July 25, 2008 - 3:23pm
  • rashmi_pai
    ಉ: ಮೌನ
    July 25, 2008 - 3:13pm
  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
ಇನ್ನಷ್ಟು

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator