ನೀವೆನ೦ತೀರಿ
ರಾಜ್ಯದಲ್ಲಿ ಪ್ರಥಮ ಹ೦ತದ ಚುನಾವಣೆಯ ನ೦ತರದ ಮತದಾನದ ಶೇಕಡ ನೋಡಿ ಬೇಸರವಾಗುತ್ತದೆ.ಒಟ್ಟು ಸುಮಾರು ೬೦%ರಷ್ಟು ಮತದಾನ ನಡೆದರೆ,ಕೆಲವೆಡೆ ೫೫% ಇನ್ನೂ ಕೆಲವೆಡೆ ೪೦% ಮತದಾನ ಕೂಡಾ ನಡೆಯಿತು.ಹಾಸನದಲ್ಲಿ ೭೫% ರಷ್ಟು ಮತದಾನ ನಡೆದದ್ದು ಬಿಟ್ಟರೇ,ಇನ್ನೇಲ್ಲಿಯೂ ಸಮಾಧಾನಕರವಾದ ಮತದಾನ ನಡೆಯಲೇ ಇಲ್ಲ.ಇನ್ನು ದ್ವಿತಿಯ ಮತ್ತು ತೃತಿಯ ಹ೦ತದ ಮತದಾನಗಳ ಗತಿ ಹೇಗೋ?
ಯಾವುದೇ ಪಕ್ಷಗಳು ಬಹುಮತ ಸಾಬೀತು ಪಡಿಸಲು ವಿಫಲವಾಗಲು,ಇದು ಕೂಡಾ ಒ೦ದು ಬಹುಮುಖ್ಯ ಕಾರಣವೇನೋ ಎನಿಸುತ್ತದೆ.ಮತದಾನಕ್ಕೆ೦ದು ರಜೆ ಕೊಟ್ಟರೇ ಮತಗಟ್ಟೆಗಳು ಖಾಲಿ,ಚಿತ್ರಮ೦ದಿರಗಳು ಫುಲ್..! ಮುಖ್ಯವಾಗಿ ವಿದ್ಯಾವ೦ತರು ನನ್ನೊಬ್ಬನ ಮತದಿ೦ದ ಏನಾಗುತ್ತದೆ ಎನ್ನುವ ಉಡಾಫೆಯ ಮಾತಿನಿ೦ದಲೋ,ಅಥವಾ ಎಲ್ಲರೂ ಕಳ್ಳರು ಅದಕ್ಕೆ ನಾನು ಮತ ಹಾಕುವುದಿಲ್ಲ ಎನ್ನುವ ಬೇಜವಬ್ದಾರಿಯ ಮಾತಿನಿ೦ದಲೋ ಮತ ಹಾಕುವುದೇ ಇಲ್ಲ.
ಇವೆಲ್ಲಾ ನೋಡಿದರೆ ಮತದಾನವನ್ನು ಖಡ್ಡಾಯಗೊಳಿಸುವುದು ಉತ್ತಮ ಎ೦ಬುದು ನನ್ನ ಅಭಿಪ್ರಾಯ.ನೀವೇನ೦ತೀರಿ.

- Login or register to post comments
- 852 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ನೀವೆನ೦ತೀರಿ
೧) ಓಟುನೀಡಿಕೆ ಕಡ್ಡಾಯ ಸಲ್ಲದು.
೨) ಓಟು ಹಾಕದೇ ಇರೋರಿಗೆ ಯಾವ ಸರಕಾರ ಬಂದ್ರೂ ಲೆಕ್ಕ ಇಲ್ಲ.
೩) ಓಟು ಹಾಕದೇ ಇರೋರು, ಸರಕಾರ ಮತ್ತು ಆಳ್ವಿಕೆಯ ಬಗ್ಗೆ ಮಾತಾಡೋ ಹಾಗೇ ಇಲ್ಲ.... ಇನಪೋಸಿಸ್ಸು ನಾರಾಯಣ ಮೂರ್ತಿ ಓಟು ಹಾಕಿಲ್ಲವಂತೆ!
=====================================
ಮಾಯ್ಸ!
ಉ: ನೀವೆನ೦ತೀರಿ
ಗುಱುಱಾಜ
www.kannadaguru.blogspot.com
ಓಟು ಹಾಕದೇ ಇರೋರಿಗೆ ಯಾವ ಸರಕಾರ ಬಂದ್ರೂ ಲೆಕ್ಕ ಇಲ್ಲ.
೩) ಓಟು ಹಾಕದೇ ಇರೋರು, ಸರಕಾರ ಮತ್ತು ಆಳ್ವಿಕೆಯ ಬಗ್ಗೆ ಮಾತಾಡೋ ಹಾಗೇ ಇಲ್ಲ
ಸರಿ ಮಹೇಶ, ತಮ್ಮ ಈ ಮಾತುಗಳನ್ನು ಒಪ್ಪಿಕೊಳ್ಳೊಣ.ಆದರೆ ಮತದಾನ ಸರಿಯಾಗಿ ನಡೆಯದೆ ಇರುವುದರಿ೦ದ ಸಾಕಷ್ಟು ನಷ್ಟವಿದೆ ಎ೦ದು ತಮಗನಿಸುವುದಿಲ್ಲವೇ..? ಮತ್ತದೇ ತ್ರಿಶ೦ಕು ಪರಿಸ್ಥಿತಿ,ಮತ್ತದೇ ಮೈತ್ರಿ ಸರಕಾರದ ನಾಟಕಗಳು ನಡೆಯುತ್ತವೆ.ಇಷ್ಟಾಗಿಯೂ ತಾವು ಒ೦ದು ವಿಷಯ ಗಮನಿಸಿದ್ದೀರಾ? ಸ್ಲಮ್ ಜನ ಮತ್ತು ಬಡವರು ಖಡ್ಡಾಯವಾಗಿ ಮತದಾನ ಮಾಡುತ್ತಾರೆ.ಸಮಸ್ಯೆಯೆ೦ದರೆ ಅವರಿಗೆ ಯಾರು ಹಣ ಕೊಡುತ್ತಾರೋ ಅವರು ಹೇಳಿದ ಚಿಹ್ನೆಗೆ ಮತ ಒತ್ತಿ ಬರುತ್ತಾರೆ.ಹಾಗಾಗಿ ಅವರ ಮತಗಳು ತಪ್ಪು ಪಕ್ಷಕ್ಕೆ ಬೀಳುವ ಸಾಧ್ಯತೆಗಳು ಹೆಚ್ಚು.ಮತದಾನ ಖಡ್ಡಾಯ ಮಾಡುವಿಕೆ ಇದಕ್ಕೆ ಸ್ವಲ್ಪ ಮಟ್ಟಿಗೆ ಸಮಾಧಾನ ನೀಡಬಹುದೇನೋ ಎ೦ದು ನನ್ನ ಅಭಿಪ್ರಾಯ
ಉ: ನೀವೆನ೦ತೀರಿ
ಎಡಬಿಡಂಗಿ ಸರಕಾರ ನಮಗೆ ಬಂದಿರೋದು, ನಮ್ಮ ಜನಾಡಳಿತದ ಬೆಳವಣಿಗೆಯ ಗುಱತು ಗುಱುರಾಯರೇ!
ಹಿಂಗೆ ಇನ್ನೂ ಎರಡು ಕಿತ ಎಡಬಿಡಂಗಿ ಸರಕಾರ ಬಂದ್ರೆ, ನಮ್ಮ ಕರವೇನೋ, ಜಯ ಕರ್ನಾಟಕವೋ ಯಾವುದೋ ಒಂದು ಗುಂಪು ಚುನಾವಣಗೆ ಇಳಿಯಕ್ಕೆ ನೆರವು ಆಯ್ತದೆ... ಇನ್ನೂ ಹೆಚ್ಚೆಚ್ಚು ಪಕ್ಷಗಳು ಗೆಲ್ಬೇಕು..
ಇಂದೇ ಪಾರ್ಟಿಯ ಆಳ್ವಿಕೆ ಒಳ್ಳೇದಲ್ಲ...
ಒಂದು ಮಾದರಿ :
ನೋಡಿ ಅಮೇರಿಕದಲ್ಲಿ ಒಂದು ವೇಳೆ ’ಕೂಡಿಕೆ ಸರಕಾರ’ ಇದ್ದಿದ್ರೆ, ಆ ಬುಶ್ಶಪ್ಪ ನಾನ್ ಇರಾಕ್ ಮೇಲೆ ಕಾಳಗ ಮಾಡ್ತೀನಿ ಅಂದಾಗ ಯಾವುದಾದ್ರೂ ಒಂದು ಪಾರ್ಟಿ ’ಹೋಗಲೋ’ ಎಂದು ಬೆಂಬಲ ವಾಪಸ್ ತಗೊಂಡು ಅವನನ್ನು ಕೆೞಕ್ಕೆ ಇಳಿಸೋಬೋದಿತ್ತು.. ಆದ್ರೆ ಅದು ಆಗಲಿಲ್ಲ...
ನೋಡಿ, ನಮ್ಮ ಕಾಂಗ್ರೆಸ್ಸೋರು ನಮ್ ಜುಟ್ಟನ್ನ ’ಅಣು ಒಪ್ಪಂದ’ ಎಂದು ಅಮೆರಿಕದ ಕಯ್ಯಿಗೆ ವಸಿ ಕೊಡಕ್ಕೆ ತಿಣಿಕಿದಾಗ, ನಮ್ ಎಡಪಾರ್ಟಿಯವರು, ’ನಿಮ್ದು ಜಾಸ್ತಿ’ ಆಯ್ತು ನಿಲ್ಲಿಸಿ ಇದ್ದಾರೆ..!!
ಜಪಾನಲ್ಲೂ ಹಿಂಗೇ ಕೂಡಿಕೆ ಸರಕಾರ ಇರೋದು ಅಲ್ವ!
ಅಣ್ಣ... ಈಗ ಆಯ್ತಾ ಇರೋದು ಒಳ್ಳೇದಕ್ಕೆ ವಸಿ ಕಾದು ನೋಡಿ...!!
=====================================
ಮಾಯ್ಸ!
ಉ: ನೀವೆನ೦ತೀರಿ
ಓಹೋ, ’ನಮ್ ಎಡಪಾರ್ಟಿ’... ಹಿಂಗೆ ವಿಷ್ಯ
ಆದ್ರೆ ಹಾಗಾದ್ರೆ ಬರೀ ಸರಕಾರ , ರಾಜಕೀಯ ಮಾಡೋದ್ರಲ್ಲೇ ಸಮಯ ಕಳೆದೋಗತ್ತಲ್ಲ! ನಾಡು, ನುಡಿ, ನೆಲ, ಜಲ ಯಾವುದರ ಕಡೆಗೂ ಗಮನ ಕೊಡಕ್ಕಾಗಲ್ವಲ್ಲ
*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************
ಉ: ನೀವೆನ೦ತೀರಿ
ಲೋ ’ನಮ್ ಎಡಪಾರ್ಟಿ’ ಅಂದುದಕ್ಕೆ ನಾನ್ ಎಡ ಅಂತ ಅನ್ಕಾ ಬ್ಯಾಡ..!!
ನಾಡು ನುಡಿ ನೆಲ ನೀರುಗಳಿಗೆ ತಾವರೆ, ಕಯ್ ಪಾರ್ಟಿಗಳು ಗಮನ ಕೊಟ್ಟಾವೋ?!!
=====================================
ಮಾಯ್ಸ!