ದೊಡ್ಡದಾದ ಮಂಚ ???
ಇಂದು ಬೆಳಿಗ್ಗೆ (ಮೇ ೧೨, ಸೋಮವಾರ) ವಿಜಯ ಕರ್ನಾಟಕ ನೋಡಿದಾಗ ಅಚ್ಚರಿ ಆಯ್ತು. ಇದೇನಿದು, ಮಂಚಕ್ಕು ಜಾಹಿರಾತ ಅಂತ. ಆಮೇಲೆ ಗೊತ್ತಾಯ್ತ ಇದು ಮೈಕ್ರೋಸಾಫ್ಟ್ ಅವರ ಆಡ್ ಅಂತ. ಸಾಫ್ಟ್ ವೇರ್ ಗು ಮಂಚಕ್ಕು ಏನು ಸಂಬಂಧ ತಿಳೀಲಿಲ್ಲ. ಸ್ಟೇಜ್ ಗೆ ಮಂಚ ಅನ್ನೋ ಬಳಕೆ ಕನ್ನಡದಲ್ಲಿ ಇದೆಯ?

- Login or register to post comments
- 1117 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ದೊಡ್ಡದಾದ ಮಂಚ ???
ಇದು ಮಹಾಭಾರತದ ಶರಶಯ್ಯೆಯ ರೀತಿಯದಿರಬಹುದು
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"
ಉ: ದೊಡ್ಡದಾದ ಮಂಚ ???
"Are you ready for the big platform" ಅನ್ನೋದರ ತಪ್ಪುತಪ್ಪು ಅನುವಾದ ಇದು.
ಇದೊಂದೇ ಅಲ್ಲ - ಸರಿ ಸುಮಾರು ಎಲ್ಲ ಕನ್ನಡ ಜಾಹೀರಾತುಗಳಲ್ಲೂ ಕಾಣುವುದು ಬರೀ ಹಿಂದೀ ವ್ಯಾಕರಣ ಮತ್ತು ಪದರಚನೆ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ಉ: ದೊಡ್ಡದಾದ ಮಂಚ ???
"Are you ready for the big platform" ಅನ್ನೋದರ ತಪ್ಪುತಪ್ಪು ಅನುವಾದ ಇದು."
ಹಾಗಿದ್ದರೆ ಇದರ ಕನ್ನಡ ಅನುವಾದ ಏನಾಗಬಹುದು?
" ನೀವು ದೊಡ್ದದಾದ ವೇದಿಕೆಗೆ ಸಿದ್ದರಿದ್ದೀರಾ "ಆಗಬಹುದೆ?
http://thereda-mana.blogspot.com/
ರೂಪ
ಉ: ದೊಡ್ಡದಾದ ಮಂಚ ???
ಹಿಂದಿಯ ಮಂಚ್ ಅನ್ನು ಕನ್ನಡದ ಮಂಚ ಅಂತ ಮಾಡಿದ್ದಿರಬಹುದು
ಆದರೂ ಮೈಕ್ರೋಸಾಫ್ಟ್ ನವರು ಕನ್ನಡಿಗರನ್ನು ಮಂಚಕ್ಕೆ ಕರೆಯುವುದು ಯಾಕೋ ನಗು ತರಿಸಿತು
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: ದೊಡ್ಡದಾದ ಮಂಚ ???
ಹ್ಹ ಹ್ಹ! "ಸರಸಕೆ ಬಾರೋ ಸರಸರನೆ" ಅಂತ ಹಾಡ್ತಿರಬೇಕು ಪಾಪ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/