ಯಥೇಚ್ಛವೋ ಯಥೇಷ್ಟವೋ?
ನಮ್ಮಲ್ಲಿ ಬೇಕಾದಷ್ಟು , ಧಂಡಿಯಾಗಿ ಎಂಬ ಅರ್ಥದಲ್ಲಿ ಯಥೇಚ್ಛ ಶಬ್ದ ಬಳಸುತ್ತೀವಿ.
ಆದರೆ ಇದೇ ಅರ್ಥದಲ್ಲಿ ಯಥೇಷ್ಟ ಶಬ್ದ ಬಳಸಿದ್ದು ಇವತ್ತು ಓದಿದೆ.
ಯೋಚನೆ ಮಾಡಿ ನೋಡಿದಾಗ ಎರಡೂ ಸರಿ ಇರಬಹುದು ಅಂತ ಅನ್ನಿಸುತ್ತದೆ.
ಯಥೇಚ್ಛ - ಯಥಾ ಇಚ್ಛಾ : ಇಚ್ಛೆಯಿದ್ದಷ್ಟು ಅರ್ಥಾತ್ ಬೇಕಾದಷ್ಟು
ಯಥೇಷ್ಟ - ಯಥಾ ಇಷ್ಟ : ಇಷ್ಟವಿದ್ದಷ್ಟು ಅರ್ಥಾತ್ ಬೇಕಾದಷ್ಟು
ಅಲ್ಲವೇ?

- Login or register to post comments
- 319 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಯಥೇಚ್ಛವೋ ಯಥೇಷ್ಟವೋ?
ಇಚ್ಛಾ = ಇಷ್ಟ ಅಂದ ಮೇಲೆ... ಸಣ್ಣ ಬೇರೆತನ ಇರಬೋದು
ಯಥೇಚ್ಛಾ = ಯಥೇಷ್ಟ! ಎರಡು ಒಂದೇ!
=====================================
ಮಾಯ್ಸ!
ಉ: ಯಥೇಚ್ಛವೋ ಯಥೇಷ್ಟವೋ?
ಎರಡೂ ಸರಿ
ಯಥಾ+ಇಚ್ಛಾ=ಯಥೇಚ್ಛಂ (ಅವ್ಯಯವಾಗಿ) ಇಚ್ಛೆಯಿದ್ದಷ್ಟು
ಯಥಾ+ಇಷ್ಟಮ್=ಯಥೇಷ್ಟಂ(ಅವ್ಯಯವಾಗಿ) ಇಷ್ಟ ಪಟ್ಟಷ್ಟು ಎರಡೂ ಅವ್ಯಯವಾಗಿ ಸರಿ. ಎರಡರ ಭಾವಾರ್ಥವೂ ಒಂದೇ.