ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಒತ್ತಕ್ಷರಗಳು ಬೇಱೆ. ಸಂಯುಕ್ತಾಕ್ಷರಗಳು ಬೇಱೆ. ಒತ್ತಕ್ಷರಗಳೆಂದರೆ ಒಂದೇ ವ್ಯಂಜನ ಒತ್ತಲ್ಪಟ್ಟು ಉಚ್ಚರಿಸಲ್ಪಡುವುದು. ಉದಾ: ಕ್ಕ, ಚ್ಚ, ಟ್ಟ, ತ್ತ, ನ್ನ ಇತ್ಯಾದಿ. ಆದರೆ ಸಂಯುಕ್ತಾಕ್ಷರಗಳೆಂದರೆ ಕ್ಷ, ಕ್ಲ ಇತ್ಯಾದಿ ವಿಜಾತೀಯ ವ್ಯಂಜನಗಳು ಸೇರಿ ಆಗುವ ಅಕ್ಷರಗಳು. ಕನ್ನಡವನ್ನು ಚೆನ್ನಾಗಿ ಗಮನಿಸಿದರೆ ಸಂಯುಕ್ತಾಕ್ಷರಗಳು ಸಂಸ್ಕೃತಕ್ಕಿಂತ ಕಡಿಮೆ. ಪೂರ್ವದ ವ್ಯಂಜನ ನ್, ಣ್, ಯ್, ರ್, ಲ್, ಳ್, ೞ್ ಹಾಗೂ ಕೆಲವು ವೇಳೆ ಱ್ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು. ಇನ್ನೊಂದು ವಿಶೇಷವೆಂದರೆ ’ಱ್’ ನ ಉಚ್ಚಾರ ದಂತಮೂಲೀಯ ಕಂಪಿತವಾಗಿರುವುದರಿಂದ ಹೆಚ್ಚಾಗಿ ಹೞಗನ್ನಡ ಹಾಗೂ ಹೊಸಗನ್ನಡದಲ್ಲಿ ’ಱ್ಱ್’ ನಿಜವಾಗಿ ’ತ್ತ್’ ಆಗುತ್ತದೆ. ಗಮನಿಸಿ ತಮಿೞಿನ ಮಱ್ಱುಂ ಕನ್ನಡದಲ್ಲಿ ಮತ್ತು, ’ನೆಱ್ಱಿ ’ ಕನ್ನಡದಲ್ಲಿ ’ನೆತ್ತಿ’ ಇತ್ಯಾದಿ. ಉದಾಹರಣೆಗೆ, ’ಜಾಣ್ಮೆ’, ’ಮೇಲ್ಮೆ’ ಇತ್ಯಾದಿ ಕನ್ನಡದ ನಿಯಮಿತ ಸಂಯುಕ್ತಾಕ್ಷರಗಳು ದೊರೆಯುತ್ತವೆ. ಸಂಸ್ಕೃತ ಬಿಟ್ಟರೆ ಇನ್ನಾವ ಭಾರತೀಯ ಭಾಷೆಗಳಲ್ಲಿ ವಿಸ್ತಾರವಾದ ಸಂಯುಕ್ತಾಕ್ಷರಗಳ ಸಂಯೋಜನೆ (Combination) ಕಾಣುವುದಿಲ್ಲ.

- Login or register to post comments
- 1390 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕುನ್ಱು = > ಕುಂದು
ನನ್ಱಿ => ನನ್ನಿ?
"ಪೂರ್ವದ ವ್ಯಂಜನ ನ್, ಣ್, ಯ್, ರ್, ಲ್, ಳ್, ೞ್ ಹಾಗೂ ಕೆಲವು ವೇಳೆ ಱ್ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು" ಇದು ಬಱೀ ಹೞಗನ್ನಡದಲ್ಲಿ.. ಹೊಸಗನ್ನಡದಲ್ಲಿ ಅದನ್ನೂ ಮಾಡದೇ ಇರಬೋದು..
ತಾಳ್ಮೆ => ತಾಳುಮೆ
ಬಾೞ್ವೆ/ಬಾೞ್ಮೆ => ಬಾೞು, ಬಾೞುಮೆ
ಅಣ್ಮು ಇಲ್ಲ ಅಣ್/ಅಳ್ ಬೇರು..! ಅಲ್ವ!
"ಕನ್ನಡ ನುಡಿ ನಡೆದು ಬಂದ ದಾರಿ" ಓದಿ!
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಯಾವ ಮಂಕ್‍ನನ್‍ಮಗ್‍ನೂ ಬಾೞುಮೆ, ಬಾೞುವೆ ಅನ್ನಲ್ಲ. ಇದನ್ನ್ ತಿಳಿಲೋ ಮಾಯ್ಸ. (ಬಱಿ ಹಾಸ್ಯ ಮಾಡ್ದೆ ಅಷ್ಟೆ). ಇದು ನಿಜಕ್ಕೂ ಕೂಡ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕಂದಾ...
ಯಾವ ಮಂಕ ನನ್ ಮಗನೂ ಕಡಮೆ, ಹೊಸತು, ಹತ್ತಿರ ಅಂತ ಅನ್ನಲ್ಲಯ್ಯ...
ಆಡುಮಾತಲ್ಲಿ ಅವೆಲ್ಲ ಕಮ್ಮಿ/ಕಡ್ಮಿ/ಕಡ್ಮೆ, ಹೊಸ್ತು, ಹತ್ರ, ಅಂತ ಅಲ್ಲವೇ!...
ನಾವ್ ಆಡುಮಾತಂಗೇ ಬರೆದ್ರೆ ನಿಮ್ ’ಱ’ ಮತ್ತು ’ೞ’ಗಳ ಕತೆ ಗೊಯಿಂದೋ ಗೋಯಿಂದೋ!
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
"ಒಲುಮೆಯ ಸಿರಿಯ ಕಂಡೆ..." ಅಂತ ಸಿನಿಮಾ ಹಾಡೇ ಇದಿಯಲ್ಲ ಕನ್ನಡ ಕಂದರೆ,
ಕುಲ್ಮೆ, ಕುಲುಮೆ ಎರಡೂ ಆಡುಮಾತಿನಲ್ಲಿದೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ತಮಿೞಿನ ’ಕುನ್ಱು’ ಕನ್ನಡದಲ್ಲಿ ’ಕುಂದ’ ಅಂದರೆ ಬೆಟ್ಟ. ತಮಿೞಿನ ’ನನ್ಱಿ’ ಕನ್ನಡದ ’ನನ್ನಿ’. ತಮಿೞಿನ ’ನ್ಱ್’ ಕನ್ನಡದಲ್ಲಿ ’ನ್ದ್’ ರೂಪ ಪಡೆಯುತ್ತದೆ. ಈ ವಿಷಯದಲ್ಲಿ ಕನ್ನಡಿಗರು ನಿಜವಾಗಿ ಸರಿಯಾಗಿ ಉಚ್ಚರಿಸುತ್ತಾರೆ. ಕಂಪಿತವನ್ನು ಒತ್ತಿ ಹೇೞಿದಾಗ ನಾಲಿಗೆಯನ್ನು ಕಂಪಿಸುವುದಾದರೂ ಹೇಗೆ? ದಂತಮೂಲೀಯ ಕಂಪಿತವಾದ ’ಱ್’ ವನ್ನು ’ಱ್ಱ್’ ಎಂದು ಒತ್ತಿಹೇಳುವಾಗ ನಾಲಿಗೆಯನ್ನು ಕಂಪಿಸಲಾಗದು ಆದ್ದಱಿಂದ ’ಱ್ಱ್’ ಮತ್ತು ’ನ್ಱ್’ ಕನ್ನಡದಲ್ಲಿ ಕ್ರಮವಾಗಿ ’ತ್ತ್’ ಮತ್ತು ’ನ್ದ್’. ಆದ್ದರಿಂದ ತಮಿೞಿನ ’ನೆಱ್ಱಿ’ ಮತ್ತು ’ಒನ್ಱು’ ಇವುಗಳಿಗೆ ಕನ್ನಡದಲ್ಲಿ ಕ್ರಮವಾಗಿ ’ನೆತ್ತಿ’ ಮತ್ತು ’ಒಂದು’ ಜ್ಞಾತಿ ಶಬ್ದಗಳು.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕೊಲ್ದು, ಮೆಲ್ದು -> ಕೊನ್ದು, ಮೆದ್ದು ಆಗಿವೆ - ಇದಕ್ಕೆ ವಿವರಣೆ ಹೇಗೆ ವಿವರಣೆ ನೀಡುತ್ತೀರಿ. ಇದಕ್ಕೆ ಶಾಸ್ತ್ರೀಯವಾದ ಯೂವುದಾದರೂ ಸೂತ್ರವಿದೆಯೇ ?
ಕಾಡು + ಕಿಚ್ಚು -> ಇದನ್ನು ನಾವು ಯಾರೂ ಕೂಡ "ಕಾಡುಗಿಚ್ಚು" ಎಂದು ಹೇಳುವುದಿಲ್ಲ, ಕಾಡ್ಗಿಚ್ಚು ಇಲ್ಲವೇ ಕಾಳ್ಗಿಚ್ಚು ಎಂಬುದಾಗಿಯೇ ಹೇಳುತ್ತೇವೆ.
ಇದನ್ನು ಗಮನಿಸಿದರೆ, ಕೆಲವೊಂದು ಸಂಯುಕ್ತಾಕ್ಷರಗಳು, ಕನ್ನಡಿಗರ ಬಾಯಲ್ಲಿ ಸಹಜವಾಗಿಯೇ ಇರುವುದು ಗಮನಕ್ಕೆ ಬರುತ್ತದೆಯಲ್ಲವೇ ? ಆದರೆ ಈ ರೀತಿಯ ವಿಜಾತೀಯ ಸಂಯುಕ್ತಾಕ್ಷರಗಳನ್ನು ಹೆಚ್ಚು ರಿಫೈನ್ಡ್ ಮಾಡಿಕೊಂಡು, ಅವುಗಳನ್ನು ಒತ್ತಕ್ಷರಗಳನ್ನಾಗಿ ಮಾಡಿಕೊಂಡಿರುವುದೇ ಹೆಚ್ಚು.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
"ಪೂರ್ವದ ವ್ಯಂಜನ ನ್, ಣ್, ಯ್, ರ್, ಲ್, ಳ್, ೞ್ ಹಾಗೂ ಕೆಲವು ವೇಳೆ ಱ್ ಇದ್ದಾಗ ಮಾತ್ರ ಸಂಯುಕ್ತಾಕ್ಷರಗಳನ್ನು ಮಾಡಬಹುದು"
ಗಮನಿಸು
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ನಿಮಗೆ ಗೊತ್ತಿರಬಹುದು. ಹೞಗನ್ನಡದಲ್ಲಿ ಎರಡು+ಮಾತು ಎಂಬುದನ್ನು ಮೊದಲ ಪದದ ಕೊನೆಯ ’ಡ’ ಕ್ಕೆ ’ೞ್’ ಆದೇಶವಾಗಿ ಎರೞ್ ಆಗಿ ಅದಕ್ಕೆ ಮಾತು ಸೇರಿದಾಗ ಎರೞ್ಮಾತು ಅಥವಾ ಎರೞ್ವಾತು ಎಂಬುದಾಗಿ ನಿಯಮ. ಪದದ ಅಕ್ಷರ ಣ್, ನ್, ಯ್, ರ್, ಲ್, ಳ್, ೞ್ ಹಾಗೂ ಕೆಲವು ವೇಳೆ ಱ್ ಹೊಱತು ಬೇರೆ ಅಕ್ಷರವಿದ್ದಾಗ ’ಉ’ ಸೇರಿಸಿಕೊಂಡೇ ಉಚ್ಚರಿಸಬೇಕು. ಹಾಗಾಗಿ ಈ ’ಎರಡು’ ಶಬ್ದ ವಾಸ್ತವವಾಗಿ ’ಎರಡ್’ ಹಾಗೆಯೇ ’ಕಾಡು’ ->’ಕಾಡ್’ (ಆದರೆ ಹಾಗನ್ನುವಂತಿಲ್ಲ. ಕಾಡು ಎಂದೇ ಹೇೞಬೇಕು. ಆದರೆ ಸಮಾಸಪದ ಮಾಡುವಾಗ ’ೞ್’ ಆದೇಶ (ಆಧಾರ: ಕೇಶಿರಾಜನ ಶಬ್ದಮಣಿದರ್ಪಣ ಸಮಾಸಪ್ರಕರಣ ಪದ್ಯ ಸಂಖ್ಯೆ ೧೯೪.
ಪದದ ಕಡೆಯಣ ಡಕಾರ-
ಕ್ಕುದಯಿಪುದು ೞಕಾರಮಾ ಱಕಾರಕ್ಕೊದವಿ-
ರ್ಪುದು ರೇಫಂ ವ್ಯಂಜನಪದ-
ಮಿದಿರೊಳ್ ಸಂದಿಸೆ ಸಮಾಸದೊಳ್ ಬಹುಳತೆಯಿಂ||
ಹಾಗಾಗಿ ಕಾೞ್ಗಿಚ್ಚು.
ಮೆಲ್ದನ್, ಗೆಲ್ದನ್ ಈ ರೂಪಗಳೇ ಶುದ್ಧರೂಪಗಳಾಗಿದ್ದು ಮೆದ್ದನು, ಗೆದ್ದನು ಇವು ಜನಸಾಮಾನ್ಯರು ಬೞಸುತ್ತಿದ್ದು ಕ್ರಮೇಣ ಇವನ್ನು ಶಿಷ್ಟ ಎಂದು ಪರಿಗಣಿಸಲಾಗಿದೆ. ಈಗಲೂ ಸಾಮಾನ್ಯ ಜನ ಬರುತ್ತಾರೆ, ತರುತ್ತಾರೆ ಎನ್ನುವುದನ್ನು ಬರ್ತಾರೆ, ತರ್ತಾರೆ (ಸಾಮಾನ್ಯವಾಗಿ) ಎಂದರೆ ಹಳ್ಳಿಗರು ಅದನ್ನೇ ಬತ್ತಾರೆ, ತತ್ತಾರೆ ಎನ್ನುತ್ತಾರೆ. ಇದನ್ನೇ ಕ್ರಮೇಣ ನಾವೆಲ್ಲ ಮುಂದೊಮ್ಮೆ ಒಪ್ಪಬಹುದೇನೋ?
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ನಾನಿನ್ನು ಮುಂದುವರೆದು ಕೊಂದು, ಕೊಂಡು, ಮಿಂದು, ಬೆಂದು ಬಂದು, ತಂದು, ಸಂದು ಇವನ್ನು ವಿವರಿಸುತ್ತೇನೆ. ಕನ್ನಡದಲ್ಲಿ ವಾಸ್ತವವಾಗಿ ಯ್, ರ್, ಲ್, ಳ್ ಇವುಗಳು ಸಾನುನಾಸಿಕ, ನಿರನುನಾಸಿಕ ಎಂದೆರಡು ಬಗೆ. ಇವನ್ನು ಬರೆಹದಲ್ಲಿ ಸೂಚಿಸುವ ಬಗೆ ಗೊತ್ತಿಲ್ಲ. ಬೞಕೆಯಲ್ಲಷ್ಟೇ ತಿಳಿಯಬೇಕು. ಸಾನುನಾಸಿಕವಾದ ಯ್,ರ್,ಲ್,ಳ್ ಇದ್ದಾಗ ಬೇಯ್, ಮೀಯ್, ಬರ್, ತರ್, ಸಲ್ ಹಾಗೂ ಕೊಳ್ ಇದ್ದಾಗ ದು ಸೇರಿದರೆ ಕ್ರಮವಾಗಿ ಬೆಂದು, ಮಿಂದು, ಬಂದು, ತಂದು, ಸಂದು, ಕೊಂಡು ರೂಪಗಳಾಗುತ್ತವೆ. ಹಾಗಿಲ್ಲದಿರುವ ಆಯ್, ಇರ್,ಬೆಮರ್, ಗೆಲ್, ಕೇಳ್ ಇದ್ದಾಗ ದು ಆದೇಶವಾದರೆ ಆಯ್ದು, ಇರ್ದು, ಬೆಮರ್ತು, ಗೆಲ್ದು ಹಾಗೂ ಕೇಳ್ದು ಆಗುತ್ತವೆ.(ಹೊಸಗನ್ನಡದಲ್ಲಿ ಇದ್ದು, ಬೆವತು, ಗೆದ್ದು, ಕೇಳಿ ಈ ರೀತಿ ರೂಪಗಳಿವೆ). ಇದು ನಿಮ್ಮ ಅನುಮಾನ ಪರಿಹಾರ ಮಾಡಿದೆಯೆಂದು ನನ್ನಭಿಪ್ರಾಯ. kannadamaga@gmail.com ನಲ್ಲಿ ನನ್ನನ್ನು ಸಂಧಿಸಿ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕನ್ನಡ ಕಂದ, ನನ್ನ ಅನುಮಾನ ಸ್ವಲ್ಪಮಟ್ಟಿಗೆ ಪರಿಹಾರವಾಯಿತು.
ಇದರರ್ಥ ಕನ್ನಡದಲ್ಲಿಯೂ ಸಂಯುಕ್ತಾಕ್ಷರಗಳು ಇವೆ ಎಂದಾಯಿತಲ್ಲವೇ ?
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಸುನೀಲ್ ಎರಡು ದೋಣಿಗಳ ಮೇಲೆ ಕಾಲಿಡುವ ಉಂಕು ಬೇಡ.
ಒಂದೋ ಬರಹದ ನೇಮಗಳಂತೆ ಹೋಗಿ, ಇಲ್ಲ ಮಾತಿನ ನೇಮಗಳಂತೆ ಹೋಗಿ.
ಯಾವುದೇ ನುಡಿಗೆ ಮಾತು ಮೊದಲು ಆಗಿರೋದರಿಂದ ಮಾತಿನಂತೆ ಹೋಗೋಣ. ಆಯ್‍ದು ವನ್ನು "ಆಯ್ದು" ಅಂತ ಬರೆದರೂ "ಆಯ್‍ದು" ಅಂತ ಬರೆದರೂ ಎರಡನ್ನೂ ಹಂಗೇ ಓದಬೇಕು.ಹೌದಾ?
ಈಗ ನಾನು ಹಲವು ಸತಿ ಹೇಳಿದಂತೆ "ಆಯ್ದು" ಅಂತ ಬರೆಯುವಕಿಂತ "ಆಯ್‍ದು" ಅಂತ ಬರೆಯೋದರಲ್ಲಿ ಒಂದು ದೊಡ್ಡ ಗಳಿಕೆ ಇದೆ, ಏನೆಂದರ "ಆಯ್" ಎಂಬ ತಳದಒರೆ ಕಳೆದು ಹೋಗೋ ಕುತ್ತು(ಅಪಾಯ) ಇರಲ್ಲ.
ಅಲ್ಲದೇ ಬರೀ ಬೆರೆತುಲಿಗಳೇ(ಬೆರೆತ ಉಲಿ - mixed sound, combination fo two different letters) ತುಂಬಿರುವ ಸಕ್ಕದವಾಗಲಿ, ಇಂಗಲೀಸಿನ ಒರಗಳಾಗಲಿ ಕನ್ನಡದಲ್ಲಿ ಹಗುರವಾಗಿ ಬೆರೆಯಲಾರವು.
ಕನ್ನಡವೂ, ಸಕ್ಕದ, ಇಂಗಲೀಸ್‍ಗಳಂತೆ ಆಗಿ ಬಿಟ್ಟರೆ ಕನ್ನಡ ಕನ್ನಡವಾಗಿ ಉಳಿಯುವದು ಹೇಗೆ? ಸಕ್ಕದವನ್ನು ತುಂಬ ಮೈಮೇಲೆ ಎಳೆದುಕೊಂಡು ತುಂಬ ಕನ್ನಡ ಒರೆಗಳು ಮರೆತು ಹೋಗಿವೆ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಸಂಗನ, ಇದನ್ನು ಅಪಾಯ ಅಂದುಕೊಂಡು ಸುಮ್ಮನಾಗಿಬಿಟ್ಟರೆ, ನುಡಿಯಲ್ಲಿ ಹೊಸ ಹೊಸ ಪ್ರಯತ್ನಮಾಡಕ್ಕೆ ಆಗಲ್ಲ. ಶಂ.ಬಾ.ಜೋಶಿಯವರು "ಕಂನುಡಿಯ ಹುಟ್ಟು" ಪುಸ್ತಕದಲ್ಲಿ "ಎಣ್ಣೆ" ಪದದ ವಿವರಣೆಯನ್ನು ಹೀಗೆ ನೀಡಿದ್ದಾರೆ.
ಎಳ್ + ನೊಯ್(ತುಪ್ಪಕ್ಕೆ ಹಳೆಗನ್ನಡ ಹೆಸರು, ತೆಲಗಿನಲ್ಲಿ ಈಗಲೂ ತುಪ್ಪಕ್ಕೆ ನೊಯ್ ಎನ್ನುತ್ತಾರಂತೆ) - > ಎಳ್ನೊಯ್ -> ಎಳ್ನೆಯ್ -> ಎಣ್ಣೆಯ್->ಎಣ್ಣೆ.
ಅಂದರೆ "ಎಣ್ಣೆ" ಪದ ಮೂಲತಃ "ಎಳ್ಳು + ತುಪ್ಪ (ಎರಡು ಧಾತು)"ಗಳನ್ನು ಬಳಸುತ್ತದೆಯಾದರೂ, ನಾವು ಈಗ "ಎಣ್ಣೆ" ಎಂಬುದೇ ಕೂಡಿಕೊಂಡ ಒಂದು ಧಾತುವಾಗಿ ಪರಿಗಣಿಸಿದ್ದೇವೆ. ಅದೂ ಅಲ್ಲದೆ, ಕೊಬ್ಬರಿಎಣ್ಣೆ, ಕಡಲೆಕಾಯಿಎಣ್ಣೆ ಮುಂತಾಗಿ ಕೂಡ ಬಳಸುತ್ತೇವೆ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಸುನಿಲರೆ,
ನನಗೆ ತಿಳಿದಂತೆ, ಅದು ಎಳ್ ನೆಯ್ ಆಗಬೇಕು, ಎಳ್ ನೊಯ್ ಅಲ್ಲ.
ಎಳ್ ನೆಯ್ -> ಎಣ್ಣೆ
ನೆಯ್ ಎನ್ನುವ ಪದ ಈಗಲೂ ತಮಿಳಿನಲ್ಲಿದೆ. ಹಾಗೇ, ಅಲ್ಲಿಯೂ ಮೂಲವನ್ನು ಮರೆಸುವ ಎಣ್ಣೈ ಪದವೇ ಬಳಕೆಯಲ್ಲಿದೆ.
ಈಗ ಅಲ್ಲಿ ಎಳ್ಳಿನ ಎಣ್ಣೆಗೆ ನಲ್ಲೆಣ್ಣೈ ಅನ್ನುತ್ತಾರೆ
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಆದರೆ ಸಂಸ್ಕೃತದಲ್ಲಿರುವ ಹಾಗೆ ವಿಸ್ತಾರವಾದ ಸಂಯುಕ್ತಾಕ್ಷರ ಸಂಯೋಜನೆಗಳಿಲ್ಲ (Extensive combination). ಉದಾಹರಣೆಗೆ, ಕಸ್ತೂರಿ, ಪ್ರಜ್ವಲ ಇವು ಕ್ರಮವಾಗಿ ಕತ್ತುರಿ ಹಾಗೂ ಪಜ್ಜಳ ಎಂಬ ರೂಪಗಳನ್ನು ಪಡೆಯುತ್ತವೆ. ಇಲ್ಲವಾದರೆ ಸಂಯುಕ್ತಾಕ್ಷರಗಳ ವ್ಯಂಜನಗಳ ನಡುವೆ ಸ್ವರ ಸೇರಿ ಬಿಡಿಗೊಳ್ಳುತ್ತವೆ ಉದಾಹರಣೆಗೆ, ಭಕ್ತಿ->ಭಕುತಿ, ಮುಕ್ತಿ->ಮುಕುತಿ, ಲಕ್ಷ್ಮಿ->ಲಕುಮಿ ಇತಾದಿ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
"...ಆದರೆ ಸಂಸ್ಕೃತದಲ್ಲಿರುವ ಹಾಗೆ ವಿಸ್ತಾರವಾದ ಸಂಯುಕ್ತಾಕ್ಷರ ಸಂಯೋಜನೆಗಳಿಲ್ಲ (Extensive combination). .."
ಇಲ್ಲದಿರುವದಿಂದಲೆ ಕನ್ನಡ ಸುಲಿದ ಬಾಳೆಹಣ್ಣಿನ ತೆರ.
ಹೌದು. ಎಲ್ಲ ತರದ ಸಮುಕ್ಕರಗಳು ಇದ್ದಿದ್ದರೆ ಕನ್ನಡ ಸಕ್ಕದದಶ್ಟು ಕಬ್ಬಿಣದ ಕಡಲೆಯಾಗುತ್ತಿತ್ತು.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಒಪ್ಪತಕ್ಕ ಮಾತು.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ನೀವು ಹೇಳುತ್ತಿರುವ ವಿಷಯ ಸರಿಯೇ ಆದರೂ, ನೀವು ನೀಡಿದ ಬಳಕೆಗಳು ಮಾತ್ರ ಸಂಸ್ಕೃತದ ಹಿನ್ನೆಲೆಯಲ್ಲಿ ಕನ್ನಡದ ಒತ್ತಕ್ಷರಗಳನ್ನು ವ್ಯಾಖ್ಯಾನಿಸುವಂತಿದೆ. ನೋಡಿ, ಕಸ್ತೂರಿ, ಪ್ರಜ್ವಲ, ಭಕ್ತಿ, ಮುಕ್ತಿ, ಲಕ್ಷ್ಮಿ ಇವಾವುದೂ ಕನ್ನಡ ಪದಗಳಲ್ಲ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಪ್ರಸ್ತುತ ಬರಹದಲ್ಲಿ ಕನ್ನಡಕಂದರು ಒಳ್ಳೆಯ ಚರ್ಚೆಯನ್ನು ಮೊದಲು ಮಾಡಿದ್ದಾರೆ. ಈ ಒತ್ತಕ್ಷರ ಮತ್ತು ಸಂಯುಕ್ತಾಕ್ಷರಗಳ ಬಗೆಗಿನ ಸಂದೇಹವನ್ನು ತಿಳಿಯಾಗಿಸಿದ ಮೇಲೆ ಕೆಲವು ವಿಷಯಗಳನ್ನು ಗಮನಿಸಲಾರಂಭಿಸಿದೆ. ಇಲ್ಲಿ ಗಮನಕ್ಕೆ ಬಂದದ್ದು.
೧. ನಾವು ಕನ್ನಡ ಎಂದರೆ ಬರೀ ಶಿಷ್ಟ ಕನ್ನಡವನ್ನು (ಅದೂ ಪಟ್ಟಣದವರು ಮಾಡಿಕೊಂಡಿರುವ ಸುಸಂಸ್ಕೃತ ಕನ್ನಡದ ಕಲ್ಪನೆಯನ್ನು) ಮಾತ್ರವೇ ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ.
೨. ನಾವುಗಳು ಕೊಡವಗಳನ್ನೂ, ಮಂಗ್ಳೂರು ನುಡಿಗಳನ್ನು ಕೂಡ ಈ ಚರ್ಚೆಯಲ್ಲಿ ತೆಗೆದುಕೊಳ್ಳಬೇಕು. ಏಕೆಂದರೆ ಅವುಗಳೂ ಕೂಡ ಕನ್ನಡವೇ.
೩. ಈಗ ನೋಡಿ, ಕೆಳಗಿನ ಪದಗಳನ್ನು ಗಮನಿಸಿ. "ಬ್ಯಾರೆ, ಸಂಗ್ಯಾ, ಬಾಳ್ಯಾ, ಕಲ್ತುಕೋ, ಮೆತ್ತಿದ್ಯಾ, ಕಟ್ಸಿದ್ರಾ, ತಿಂದ್ರು, ಕುಡುದ್ರು, ಮಲ್ಪೆ, ಸುಳ್ಯ, ಬಂದ್ಯಾ, ಬರಲ್ಯಾ, ಬರಲ್ವಾ, ಇಲ್ಯಾ, ಕುಂತ್ಯಾ" - ಕರ್ನಾಟಕದ ಬೇರೆ ಬೇರೆ ಸೀಮೆಯ ಕನ್ನಡವನ್ನು ಗಮನಿಸಿದರೆ ಕನ್ನಡದಲ್ಲಿಯೂ ವಿಸ್ತಾರವಾದ ಸಂಯುಕ್ತಾಕ್ಷರಗಳ ಸೌಂಡುಗಳು ಇದ್ದೇ ಇವೆ ಎಂಬುದನ್ನು ನಿಚ್ಚಳವಾಗಿ ಕಾಣಬಹುದಾಗಿದೆ. ಹೀಗಾಗಿ "ಕನ್ನಡಿಗರಿಗೆ ಸಂಯುಕ್ತಾಕ್ಷರ ಒಗ್ಗಲ್ಲ" ಎಂಬುದು ತಪ್ಪು.
೪. ಕನ್ನಡಕ್ಕೂ ಸಂಸ್ಕೃತಕ್ಕೂ ಸಂಯುಕ್ತಾಕ್ಷರಗಳ ವಿಷಯದಲ್ಲಿ ಒಂದು ಸ್ಪಷ್ಟ ವ್ಯತ್ಯಾಸವಿದೆ. ಸಂಸ್ಕೃತ ತನ್ನ ಆಲ್ಮೋಸ್ಟ್ ಎಲ್ಲ ಭಾಷಾಪ್ರಯೋಗಗಳಿಗೂ ಸೂತ್ರಗಳನ್ನು ಮಾಡಿಕೊಂಡು ಅವುಗಳಿಗೆ ಸ್ಪಷ್ಟಮಾನ್ಯತೆಯನ್ನು ನೀಡಿದೆ. ಆದರೆ ಕನ್ನಡದ ಪಂಡಿತರು ಇಂತಹ ಬಳಕೆಗಳಿಗೆ ಶಿಷ್ಟ ಮಾನ್ಯತೆ ನೀಡಿಲ್ಲ. ಕೆಲವು ಮಂಗಳೂರಿನವರು ಹೇಳುವ "ಬರಲ್ಯಾ" ಎಂಬುದನ್ನು ಬರಹ ರೂಪದಲ್ಲಿ "ಬರುವುದಿಲ್ಲವೇ" ಎಂತಲೇ ಬರೆಯಬೇಕು ಎಂಬ ಕಟ್ಟುಪಾಡು ಇದೆ. ಈ ಕಟ್ಟುಪಾಡು ಒಳ್ಳೆಯದೋ ಕೆಟ್ಟದೋ ಆ ಚರ್ಚೆ ಇಲ್ಲಿ ಬೇಡ. ಆದರೆ ಈ ಕಟ್ಟುಪಾಡಿನಿಂದಾಗಿ, ನುಡಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮಾನ್ಯತೆ ಇಲ್ಲದಂತಾಗಿ ಹೊಸತನ್ನು ಕಟ್ಟುವ ಚೈತನ್ಯ ಬಿದ್ದುಹೋಗಿ, ಹೊಸತನ್ನು ಬರಮಾಡಿಕೊಳ್ಳುವ ಮನಸ್ಸು ಇಲ್ಲದಂತಾಗುತ್ತಿದೆ.
೫. ಒಂದು ಮುಖ್ಯ ಕೊಕೊ - ಸಂಸ್ಕೃತದಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಯುಕ್ತಾಕ್ಷರಗಳಿರುವ ಪದಗಳು ಇರಬಹುದು. ಆದರೆ ಅದು ಮುಖ್ಯವಲ್ಲ. ಯಾವ ಯಾವ ಸಂಯಕ್ತಾಕ್ಷರಗಳ ಕಾಂಬಿನೇಷನ್ ಕನ್ನಡದಲ್ಲಿ (ಶಿಷ್ಟ, ಗ್ರಾಮ್ಯ, ಸೀಮೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ವಾದ ಮುಂಡಿದಿ) ಇಲ್ಲದ್ದು ಸಂಸ್ಕೃತದಲ್ಲಿದೆ ಎಂಬ ದಿಕ್ಕಿನಲ್ಲಿ ಚರ್ಚೆ ನಡೆದರೆ ವಿಷಯಗಳು ಇನ್ನೂ ತಿಳಿಯಾಗುತ್ತದೆ ಎಂಬುದು ನನ್ನ ಅನಿಸಿಕೆ. ಈ ವಿಷಯಗಳಿಂದಾಗಿ "ಕನ್ನಡದಲ್ಲಿ ಸಂಸ್ಕೃತದ ವಿಸ್ತಾರದಷ್ಟು ಸಂಯುಕ್ತಾಕ್ಷರಗಳು ಇಲ್ಲ", ಎಂಬುದಕ್ಕೆ ಮನಸ್ಸು ಹಿಂಜರಿಯುತ್ತಿದೆ.
ಚಿಕ್ಕ-ಚೊಕ್ಕ (To put in NutShell) - "ಕನ್ನಡದಲ್ಲಿಯೂ ವಿಸ್ತಾರವಾದ ಸಂಯುಕ್ತಾಕ್ಷರಗಳು ಇವೆ, ಆದರೆ ಅವಕ್ಕೆ ಮಾನ್ಯತೆ ಇಲ್ಲ".
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಲೋ ಅಂಜನೇಯ...
ಕನ್ನಡ ಕಂದ ಹೇಳಿದ್ದು ಸರಿ ಅಯ್ತೆ... ತುಸು ಸರಿಯಾಗಿ ಓದಿ... ಬ್ಯಾರೆ, ಸಂಗ್ಯಾ ಇವೆಲ್ಲ ಬೇರೆ, ಸಂಗಯ್ಯ ಇವುಗಳ ಒಂದು ಬಗೆ ಎಂದೇ ಎಣಿಸಬೇಕು.
ಸಂಸ್ಕೃತವನ್ನು ಮಾತಾಡೋರಿಲ್ಲ.. ಅದೇ ತುಸು ಹಿಂದಿ ಕತೆ ನೋಡಿ.. ಆಪಕೊ ಎಂದು ಬರೆದು ಅದನ್ನ ಆಪ್ಕೊ ಎಂದೇ ಉಲಿಯೋದು....!!
ಸುಮ್ನೆ ಗೊಂದಲದ ಮೇಲೆ ಗೊಂದಲ...
ಕನ್ನಡ ಕಂದ ಹೇೞ್ತಿರೋದು ಬರೆವಣಿಗೆ ಬಱೀ ಬಗ್ಗೆ, ಹೊಱತು ಆಡುನುಡಿಬಗೆಗಳ ಬಗ್ಗೆ ಅಲ್ಲ..!!
ಅದೂ ಅಲ್ಲದೇ ಒತ್ತಕ್ಕರ, ಸಂಯುಕ್ತಕ್ಕರದ ಈ ಸಂಗತಿಗಳು ಬರೋದೇ ಬರೆವಣಿಗೆಯಲ್ಲಿ ಹೆಚ್ಚು..
ಕಡಮೆ ಅನ್ನ ಕಡ್ಮಿ, ಕಮ್ಮಿ ಅಂತ ಬೇಱೆಬೇಱೆ ತೆಱ ಮಂದಿ ಉಲಿತಾರೆ. ಹಾಗೆ ಮನಿ(ಮನೆ), ಕತ್ತಿ(ಕತ್ತೆ), ಹಣಿ(ಹಣೆ) ಮಾತಲ್ಲಿ ಇದ್ದರೂ, ವ್ಯಾಕರಣದ ಒರೆಯ ಬೇರಿನ ಮಾತುಕತೆಯಲ್ಲಿ ಅವನ್ನ ಎಣಿಸಲಾಗದು.. ಮನಯ್, ಕಱ್ತಯ್, ಹಣಯ್ ಇವೆ ಮೂಲ.
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕನ್ನಡಕಂದರು ಹೀಗೆಂದರು
>>> ಇನ್ನೊಂದು ವಿಶೇಷವೆಂದರೆ ’ಱ್’ ನ ಉಚ್ಚಾರ ದಂತಮೂಲೀಯ ಕಂಪಿತವಾಗಿರುವುದರಿಂದ ಹೆಚ್ಚಾಗಿ >>>ಹೞಗನ್ನಡ ಹಾಗೂ ಹೊಸಗನ್ನಡದಲ್ಲಿ ’ಱ್ಱ್’ ನಿಜವಾಗಿ ’ತ್ತ್’ ಆಗುತ್ತದೆ. ಗಮನಿಸಿ ತಮಿೞಿನ ಮಱ್ಱ್’ಕನ್ನಡದಲ್ಲಿ >>>ಮತ್ತು, ’ನೆಱ್ಱಿ ’ ಕನ್ನಡದಲ್ಲಿ ’ನೆತ್ತಿ’ ಇತ್ಯಾದಿ.
ಱ್ಱ್ ಅನ್ನುವ ಉಚ್ಚಾರವನ್ನು ಹೇಳಲು ಸಾಧ್ಯವೇ ಇಲ್ಲ ಅನ್ನಬಹುದು. ತಮಿಳಿನಲ್ಲು ಕೂಡ, ಈರೀತಿ ಬರೆದರೂ, ಅದನ್ನು ಟ್ರ ಎಂದೇ ಓದಬೇಕಾಗುತ್ತೆ. ಅಂದರೆ, ಮಱ್ಹ್ರುಂ ಎಂದು ಬರೆದರೂ, ಅದು ಮಟ್ರುಮ್ ; ನೆಱ್ಱಿ ಎಂದು ಬರೆದರೂ ಅದು ನೆಟ್ರಿ - ಇವೇ ಪದಗಳು ಕನ್ನಡದಲ್ಲಿ ಮತ್ತು ಮತ್ತೆ ನೆತ್ತಿ ಎಂಬ ರೂಪದಲ್ಲಿವೆ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಹಂಸಾನಂದಿ, ಹಾಗಾದರೆ, ನಮ್ಮ ಚಿಕ್ಕಂದಿನಲ್ಲಿ ನಮ್ಮ ತಾಯಿ ಹೇಳಿಕೊಡುವ, "ಕ ಕ್ಕೆ ಒಟ್ರುಸುಳಿ ಕೃ - ಒಱ್ಱುಸುಳಿಯೇ" ಆಗಿರಬಹುದಾ ?
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಅಸಂಭವ!
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
೧) ಆ ನಿಟ್ಟಿನಲ್ಲಿಯೂ ಚರ್ಚೆಯನ್ನು ಮುಂದುವರಿಸಬಯಸುತ್ತೇನೆ.
೨) ಆಡುನುಡಿಗಳಲ್ಲದ (ಅಂದರೆ ಗ್ರಾಮ್ಯವಲ್ಲದ) ಒತ್ತಕ್ಷರಗಳೂ, ಸಂಯುಕ್ತಾಕ್ಷರಗಳೂ ಕನ್ನಡದಲ್ಲಿ ಇವೆ. ಅದಕ್ಕೆ ಹೇಳಿದ್ದು ಕೊಡಗು, ಮಂಗಳೂರು, ಹವ್ಯಕ ಡೈಲೆಕ್ಟುಗಳನ್ನೂ ಗಣನೆಗೆ ತೆಗೆದುಕೊಂಡು ಚರ್ಚೆಮಾಡೋಣ ಅಂತ. ಬಲ್ತು(ಬಲಿತು), ಕಲ್ತು(ಕಲಿತು) ಇಂತಹವುಗಳನ್ನು ಗ್ರಾಮ್ಯ ಅಂತ ತಿಳಿಯಬೇಕು ಅಂತ ನಮಗೆ ಬೇರೆಯವರು ತಿಳಿಸಿರುವುದರಿಂದ ನಮಗೆ ಆ ರೀತಿ ಅನಿಸುತ್ತದೆ. ಆ ನಂಬಿಕೆಯಿಂದ ಆಚೆ ಬಂದು ಯೋಚಿಸೋಣ. ನನಗೆ ಕನ್ನಡದ ಒತ್ತಕ್ಷರಗಳ ವಿಷಯದಲ್ಲಿ ಬರವಣಿಗೆಗೋಸ್ಕರ ಬೇಡದಿದ್ದರೂ ಅತಿಯಾದ ಶಿಷ್ಟಾಚಾರ ರೂಢಿಸಿಕೊಂಡಿದ್ದೇವೆ ಎಂಬುದು ನನ್ನ ಅನಿಸಿಕೆ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಬಲಿತು ಅನ್ನು ಎಲ್ಲರು ಬಲ್ತು ಅನ್ನಲ್ಲ, ಹಲವರು ಬಲೀತು ಎಂದು ಅಂತಾರೆ.
ಕಲೆತು ಮತ್ತು ಕಲಿತು ಎರಡನ್ನು ಮಂದಿ ಕಲ್ತು ಅನ್ನಬೋದಲ್ಲ.
ಅದಕ್ಕೆ ಒತ್ತಕ್ಕರದ ಸಂಗತಿ ಬರೆವಣಿಗೆಗೆ ಹತ್ತಿರವಾದ ...
ಇನ್ನು ಕಿರುನುಡಿಗಳ ಉಲಿಕೆ ಅದು ಬೇರೆ ಸಂಗತಿ. ಅದಕ್ಕೆ ನಮ್ಮ ಕನ್ನದವಲ್ಲರು ಹಾಲಕ್ಕಿ, ಕುರುಬ, ಸೋಲಿಗ ಮುಂತಾದ ಕನ್ನಡದ-ಕವಲು ಬಗೆಗಳ ಕುರಿತ ಅರಯ್ಯು-ವೊತ್ತಿಗೆ ಓದುವುದು.
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಮಹೇಶ ನಿನಗೆ ಹೇಗೆ ಹೇಳಬೇಕೋ ನನಗೆ ಗೊತ್ತಿಲ್ಲ.
ಅಂದರೆ ಇದರ ಒಳಾರ್ತ, "ಬಲ್ತು" ಅಂತಲೂ ಕೆಲವು ಅಂತಾರೆ ಅಂತ ಆಯ್ತಲ್ಲ. ಹಾಗಾದರೆ, ಅದಕ್ಕೆ ಮಾನ್ಯತೆಯೇ ಇಲ್ಲವೇ. ಏನು ಎಲ್ರೂ ಅದನ್ನು "ಬಲೀತು" ಅಂತಲೇ ಹೇಳೇಬೇಕಾ. ನಿನ್ನ ಕಣ್ಣಿಗೆ ಹಾಗಾದರೆ, "ಬಲಿತು" ಎಂಬುದನ್ನು "ಬಲ್ತು" ಎನ್ನುವವರು ಕನ್ನಡಿಗರೇ ಅಲ್ಲವೇ ?
ಅಪ್ಪಾ ಜಾಣ, ಅನ್ನಬೋದಲ್ಲ, ಈಗಾಗಲೇ ಅಂತಾ ಇದ್ದೀವಿ. ಆದರೆ ಇದು ಪ್ರಶ್ನೆಯೇ ಅಲ್ಲ. ಪ್ರಶ್ನೆ ಏನಪ್ಪಾ, "ಕನ್ನಡದಲ್ಲಿ ಹಾಸುಹೊಕ್ಕಾಗಿರುವ ಇಂತಹ ಸಂಯುಕ್ತಾಕ್ಷರಗಳ ಪದಪ್ರಯೋಗಗಳಿಗೆ ಮಾನ್ಯತೆ ನೀಡದೆ ಕನ್ನಡದಲ್ಲಿ ಸಂಸ್ಕೃತದಷ್ಟು ವಿಸ್ತಾರವಾದ ಸಂಯುಕ್ತಾಕ್ಷರಗಳು ಇಲ್ಲ ಅಂತ ಅಂದುಕೊಂಡಿರುವದು ಸರಿಯೋ ತಪ್ಪೋ" ಎಂಬುದರ ಬಗ್ಗೆ. ಇದನ್ನು ಕುರಿತು ಬರಿ. ನಾನು ಹಾಕಿದ ಕಾಮೆಂಟಿನಲ್ಲಿದ್ದ ಯಾವುದೋ ಒಂದು ಉದಾಹರಣೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು, ಮೂಲವನ್ನು ಗ್ರಹಿಸದೆ, ಆತುರಾತುರವಾಗಿ ಏನೇನೋ ಬರೆದು ಚರ್ಚೆಯ ಹಾದಿ ತಪ್ಪಿಸಬೇಡ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕನ್ನಡದಲ್ಲಿ ಸಂಯುಕ್ತಾಕ್ಷರದ ಬಗ್ಗೆ ಕನ್ನಡ ಕಂದ ಹೇಳಿದ್ದಶ್ಟು ಬಿಟ್ಟರೆ, ಹೆಚ್ಚಿಗೆ ತಲೆಗೆಡಿಸಿಕೊಳ್ಳಬೇಕಿಲ್ಲ.
ಸರಿ.. ನೀನು ನಿನ್ನ ತಿಯರಿಯನ್ನ ತುರುಸಿನಲ್ಲಿ ಬರೆದು ಹಾಕು..
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಆಹಾ ದೊಣ್ಣೆನಾಯಕನ ಅಪ್ಪಣೆ. ತೀರ್ಪು ಕೊಟ್ಟುಬಿಟ್ಟ. ಆಯ್ತಪ್ಪಾ, ನಿನಗೆ ಅಷ್ಟೇ ಸಾಕಾಗಿ ಹೆಚ್ಚು ತಲೆಗೆಡಿಸಿಕೊಳ್ಳೋದು ಬೇಡ ಅನ್ನೋದೇ ಆದರೆ ನಿನ್ನ ತೀರ್ಪು ನೀನೇ ಇಟ್ಕೋ. ಹೋಗ್ಲಿ ಕರ್ನಾಟಕದ ಹಳ್ಳಿಗಳ,ಊರುಗಳ ಪಟ್ಟಿ ಮಾಡು, ಆಗ ಗೊತ್ತಾಗತ್ತೆ ಕನ್ನಡದಲ್ಲಿ ಸಂಯುತ್ಕಾಕ್ಷರ ಇದ್ಯೋ ಇಲ್ವೋ ಅಂತ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
".. ಈ ಕಟ್ಟುಪಾಡು ಒಳ್ಳೆಯದೋ ಕೆಟ್ಟದೋ ಆ ಚರ್ಚೆ ಇಲ್ಲಿ ಬೇಡ. ಆದರೆ ಈ ಕಟ್ಟುಪಾಡಿನಿಂದಾಗಿ, ನುಡಿಯಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಮಾನ್ಯತೆ ಇಲ್ಲದಂತಾಗಿ ಹೊಸತನ್ನು ಕಟ್ಟುವ ಚೈತನ್ಯ ಬಿದ್ದುಹೋಗಿ, ಹೊಸತನ್ನು ಬರಮಾಡಿಕೊಳ್ಳುವ ಮನಸ್ಸು ಇಲ್ಲದಂತಾಗುತ್ತಿದೆ..."
ಒಳ್ಳೆ ಒಪ್ಪತಕ್ಕಂತ ಮಾತು ...
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಗೆಳೆಯರೇ, ಒಂದು ವಿಷ್ಯ ನೀವು ಗಮನ್ಸ್ಲೇಸ್ಬೇಕು(ಗಮನಿಸಲೇಬೇಕು), "ಬೇರೆ ನುಡಿಗಳಲ್ಲಿ ಇಲ್ಲದ ಸಂಯುಕ್ತಾಕ್ಷರಗಳ ಪ್ರಯೋಗಗಳು ಸಂಸ್ಕೃತದಲ್ಲಿ ಇದೆ", ಎಂಬುದನ್ನು ನಾನು ಖಂಡಿತವಾಗಿಯೂ ಈ ಎಳೆಯಲ್ಲಿ ಅಲ್ಲಗಳೆಯುತ್ತಿಲ್ಲ. ಸಂಸ್ಕೃತದಲ್ಲಿ ವಿಸ್ತಾರವಾದ ಸಂಯುಕ್ತಾಕ್ಷರಗಳ ಬಳಗೆ ಇದೆ ಎಂಬುದನ್ನೂ ನಾನೂ ಬಲ್ಲೆ. ಆದರೆ "ಕನ್ನಡದ ಸಂಯುಕ್ತಾಕ್ಷರಗಳಿಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಬೇಡದ ಮಡಿ ಪ್ರದರ್ಶಿಸುತ್ತಿರುವುದು ನನಗೆ ಸರಿಕಾಣುತ್ತಿಲ್ಲ". ಕೊಡಗು, ಹವ್ಯಕ, ಕುಂದಾಪುರ ಮುಂತಾದ ಡಯ್ಲೆಕ್ಟುಗಳನ್ನು ಪರಿಗಣಿಸದೆ, ಬರೀ ಸಾಹಿತ್ಯಾತ್ಮಕವಾದ ಬರವಣಿಗೆಯ ಹಿನ್ನೆಲೆಯಲ್ಲಿ ಈ ಕೆಳಗಿನ ನಿರ್ಣಯಗಳಿಗೆ ಬರೋದು ನನಗೆ ಅಷ್ಟಾಗಿ ಸರಿಕಾಣುತ್ತಿಲ್ಲ.
ಮೇಲಿನ ಎರಡು ಮಾತುಗಳು ತಪ್ಪು ಎಂಬುದನ್ನು ಹೆಜ್ಜೆಹೆಜ್ಜೆಗೂ ಗಮನಿಸಬಹುದು. ಕೆಲವೇ ಕೆಲವು ಇಲ್ಲಿವೆ.
ಕ, ಗ ವರ್ಗ- ಮಾಡುವುದಕ್ಕೋಸ್ಕರ, ಪಿಚ್ಕಾರಿ, ಕಟ್ಕೋ, ಮಟ್ಕು, ಸುತ್ಕಟ್ಟು, ಉಬ್ಗ, ಕತ್ಗೆ, ಬಿದ್ಗೊಂಡು, ಹಲ್ಕಟ್ಮುಂಡೇದು.
ಚ, ಜ - ಗಜ್ಗ
ಟ, ಡ - ಅಷ್ಟು, ಇಷ್ಟು, ಎಷ್ಟು, ರವಶ್ಟು, ಗವ್ಡ, ಬಗ್ಡ,
ತ, ದ, ನ - ಸುಸ್ತು, ಕುಕ್ತು, ಸಯ್ತಲ್ತು, ಯತ್ನಾಳ್, ಕಟ್ನಿಟ್
ಪ, ಬ - ಬಂದ್ಬಿಡ್ತು, ಉತ್ಬಿತ್ತು, ಪೆಚ್ಮೊರೆ, ಪ ಮತ್ತು ವ ಒತ್ತುಗಳು ಇಂಟರಚೆಂಜಬಲ್ ಆಗಿ ಬಳಕೆ ಆಗ್ತಾ ಇರತ್ತೆ., ಕಾಟ್ಮಾಣಿ.
ಯ - ಬಂದ್ಯಾ, ಮಂಡ್ಯ, ಹೇಳ್ರೋ, ಕುಡ್ಲ, ತೊಯ್ಲಾ, ಮಾತ್ವಲ್ಲ, ಕಟ್ಸು, ಕಿನ್ಹಾಳ, ಎಕ್ಕುಟ್ಹೋಗಿದೆ, ಮಾಡಿದ್ಲು, ಮಕ್ಳು, ಮೆತ್ಸು, ಸುಳ್ಯ, ಮಗ್ಲು, ಕ್ವ, ತಣ್ಸು, ಇದ್ಯೋ, ಇಲ್ವೋ, ಒಕ್ಲು, ಚಿಬ್ಲು, ಕೇಯ್ದು, ನೀವ್ತಾ, ನೋಯ್ತಾ, ತುಳ್ತ, ಸುಕ್ನಾತಿ
ಒಂದು ವೇಳೆ, ಈ ಮೇಲಿನ ಪದಗಳು ಹಳ್ಳಿಗಮಾರರ ನುಡಿಗಳು ಅಂತ ನಿಮಗೆ ಅನಿಸಿದ್ದೇ ನಿಜ ಆದರೆ, ನನ್ನ ಕೋರಿಕೆ.
೧. ಇವುಗಳನ್ನು ಸೃಜನಾತ್ಮಕ ಬರವಣಿಗೆಯ ಹಿನ್ನೆಲೆಯಲ್ಲಿ ನೋಡ್ಬೇಡಿ. ಮೊದಲು, ಅದು ಏಕೆ ಗ್ರಾಮ್ಯ ಅನಿಸುತ್ತದೆ ಎಂಬುದನ್ನು ಯೋಚಿಸಿ.
೨. ಆ ಪದಗಳ ಒಳಧಾತಗಳನ್ನು ಬೇರೆಮಾಡಿ, ಅದಕ್ಕೆ ಕನ್ನಡ ಪ್ರತ್ಯಯಗಳನ್ನು ಸೇರಿಸಿ.
೩. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎನ್ನುವ ವಿಂಗಡನೆ ಇಲ್ಲಿ ಇರ್ರಿಲವೆಂಟ್.
ಕೋರಿಕೆ - ಈ ಕೊಂಡಿಯನ್ನು ಯಾರೂದರು ಹವ್ಯಕರೋ, ಕೊಡಗಿನವರೋ, ಕುಂದಾಪುರದವರೋ ಓದಿದಿರಾದರೆ ಸ್ವಾರ್ಥಿಗಳಾಗದೆ, ನಿಮ್ಮ ನಿಮ್ಮ ಮನೆಯಲ್ಲಿರುವ ಸಂಯುಕ್ತಾಕ್ಷರಗಳಿರುವ ಅಚ್ಚಕನ್ನಡ ಪದಗಳನ್ನು ಎಲ್ಲರೊಡನೆ ಹಂಚಿಕೊಳ್ಳಿ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ತಂದ್ಕೊಡ್ತ್ಯಾ? ಇಲ್ಲೆಲ್ಲ ದ್+ಕ್ iಧ್ಯೆ ನಿಜಕ್ಕೂ ಸ್ವರದೆಯೋ ಇಲ್ಲವೋ ಎಂಬುದನ್ನು ವಿಚಾರಿಸಬೇಕಾಗುತ್ತದೆ. ಹಾಗೆಯೇ ಗಮನಿಸಿ ಅನ್ತ (ಅಂತ) ಎಂದು ಸುಲಭವಾಗಿ ಉಚ್ಚರಿಸಬಹುದು ರತ್ನ ಇದನ್ನು ಅಷ್ಟು ಸುಲಭವಾಗಿ ಉಚ್ಚರಿಸಲಾಗದು. ಇಲ್ಲಿ ತ್ ಹಾಗೂ ನ್ ಪಲ್ಲಟವಾಗಿವೆ. ರುಬ್ಕೋ ಎಂದು ಹೇೞುವಷ್ಟು ಸುಲಭವಾಗಿ ರುಕ್ಬೋ ಉಚ್ಚರಿಸಲಾಗದು. ಹಾಗಾಗಿ ಕನ್ನಡದಲ್ಲಿ ಎಲ್ಲಾ ತೆಱನಾದ ಸಂಯುಕ್ತಾಕ್ಷರಗಳನ್ನು ಜನ ಉಚ್ಚರಿಸಬಲ್ಲರೆಂದು ನಾನು ಭಾವಿಸಲಾರೆ. ಯಾವಯಾವಾಗ ಸಂಯುಕ್ತಾಕ್ಷರಗಳನ್ನು ನಾವು ಉಚ್ಚರಿಸಬಲ್ಲೆವೆಂದು ಕೊಂಚ ಬಿಡುವಾದಾಗ ಚರ್ಚಿಸೋಣ. ಕನ್ನಡದವೇ ಆದ ಅಷ್ಟು, ಇಷ್ಟು, ಎಷ್ಟು ಎಂಬ ಶಬ್ದಗಳನ್ನು ಹಳ್ಳಿಗರು ಆಟು, ಈಟು, ಏಟು ಎಂದುಚ್ಚರಿಸುವುದನ್ನು ನಾನು ಕೇಳಿದ್ದೇನೆ. ಹೀಗೇಕೆಂದು ವಿಚಾರಮಂಥನ ಮಾಡಿದ್ದೇನೆ. ಅದನ್ನು ನೀವು ಒಪ್ಪದೇ ಹೋಗಬಹುದು. ಶಿಷ್ಟರು ಬೞಸುವ ಕನ್ನಡವೆ ಬೇಱೆ. ಹಳ್ಳಿಗರು ಬೞಸುವ ಕನ್ನಡವೇ ಬೇಱೆ. ಈ ಸಂಯುಕ್ತಾಕ್ಷರದ ಬವಣೆ ನಮಗಷ್ಟೇ ಅಲ್ಲ. ಉತ್ತರ ಭಾರತೀಯರಿಗೂ ಕಷ್ಟ. ಅವರ ಬಾಯಲ್ಲಿ ರತ್ನ ರತನ್ ಆಗುತ್ತದೆ. ಶತ್ರುಘ್ನ ಶತ್ರುಘನ್ ಆಗುತ್ತಾನೆ. ಪ್ರದ್ಯುಮ್ನ ಪ್ರದ್ಯುಮನ್ ಆಗುತ್ತಾನೆ. ಇದನ್ನೆಲ್ಲಾ ನೀವು ಗಮನಿಸಿದ್ದೀರಾ?
ಇಂತು ತಮ್ಮವ
ಕನ್ನಡಕಂದ
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಒಳ್ಳೇ ಹೇಳಿಕೆ!
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕನ್ನಡ ಕಂದ, "ರುಕ್ಬೋ" ಎನ್ನುವಂತಹ ಬಳಕೆಯನ್ನು ನಾವು ಉಲಿಯುವುದಿಲ್ಲ, ಏಕೆಂದರೆ ಅಂತಹವು ಬಳಕೆಯಲ್ಲಿಲ್ಲ. ಆದರೆ "ಹಾಕ್ಬಂದ್ಬುಡು=ಆಕ್ಬಾವೋಗು" ಎಂಬ ಬಳಕೆಗಳು ಸರ್ವೇಸಮಾನ್ಯ. ಗಮನಿಸಿ ಇಲ್ಲಿಯೂ ಕೂಡ "ಕ" ಕ್ಕೆ "ಬ" ಒತ್ತು ಬಂದಿದೆ. ಆದ್ದರಿಂದ ಶಿಷ್ಟರು ಬಳಸುವ "ಸಾಹಿತ್ಯಾತ್ಮಕ ಸಂಯುಕ್ತಾಕ್ಷರಗಳನ್ನು" ದೇಸಿಗರು ಬಳಸದಿದ್ದರೂ ಕೂಡ, ಬೇರೆ ಬೇರೆ ರೀತಿಯ ಸಂಯುಕ್ತಾಕ್ಷರಗಳನ್ನು ತಮ್ಮದೇ ರೀತಿಯಲ್ಲಿ ಬಳಸಿಯೇ ಬಳಸುತ್ತಿದ್ದಾರೆ. ನಾನು ನೀಡಿರುವ ಬಳಕೆಗಳನ್ನು ಬೇಕಿದ್ದರೆ ಮತ್ತೊಮ್ಮೆ ಗಮನಿಸಿ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
’ಕ’ ಯಿಂದ ’ಮ’ ವರೆಗಿನ ಅಕ್ಷರಗಳು ಸ್ಪರ್ಷಗಳು. ಅಂದರೆ ಇಲ್ಲಿ ಉಚ್ಚರಿಸುವಾಗ ಉಸಿರು ಸಂಪೂರ್ಣವಾಗಿ ತಡೆಯಲ್ಪಡುತ್ತದೆ. ಹಾಗಾಗಿ ವಿಜಾತೀಯ ಸ್ವರಗಳು ಮುಂದೆ ಬಂದಾಗ ಓದಿಲ್ಲದ ಜನಗಳಿಗೆ ಉಚ್ಚರಿಸುವುದು ಕಷ್ಟ. ಹಾಗಾಗಿ ಮಧ್ಯದಲ್ಲಿ ’ಅ’, ’ಇ’ ’ಉ’ ಇತ್ಯಾದಿ ಸ್ವರಗಳನ್ನು ಸೇರಿಸಿಕೊಂಡೇ ಕನ್ನಡ, ತಮಿೞರು ಅಷ್ಟೆ ಏಕೆ ತೆಲುಗರಿಗೂ ಕಷ್ಟ. ಈಗ ’ಉತ್ಸಾಹ’ ಎಂಬ ಪದವನ್ನೇ ತೆಗೆದುಕೊಳ್ಳಿ. ಹೆಚ್ಚಾಗಿ ಜನರು ’ಉಸ್ತಾಹ’ ಎಂದೇ ಉಚ್ಚರಿಸುತ್ತಾರೆ. ಇದಕ್ಕೆ ಕಾರಣ ಮೊದಲಲ್ಲಿರುವ ’ತ’ ಕಾರ ಸಂಪೂರ್ಣವಾಗಿ ಉಸಿರನ್ನು ಕಟ್ಟಿ ಹಾಕಿಬಿಡುತ್ತದೆ. ಹಾಗಾಗಿ ’ತ್’ ಮತ್ತು ’ಸ್’ ಪಲ್ಲಟಿಸಿದಾಗ ’ಸ್’ ಸ್ವಲ್ಪಮಟ್ಟಿಗೆ ಉಸಿರನ್ನು ಬಿಡುವುದರಿಂದ ’ಸ್ತ’ ಎಂದು ಜನ ಸ್ವಲ್ಪ ಸುಲಭವಾಗಿ ಉಚ್ಚರಿಸುತ್ತಾರೆ. ಗಮನಿಸಿ ’ಶ, ಷ, ಸ ಹ’ ಗಳು ಊಷ್ಮ ವರ್ಣಗಳು. ಹಾವು ಬುಸುಗುತ್ತಿದಾಗ (hissing) ಸ್ವಲ್ಪ ಮಟ್ಟಿನ ಉಸಿರು ಹೊಱಗೆ ಬರುವುದರಿಂದ ಜನಕ್ಕೆ ’ಉತ್ಸಾಹ’ಕ್ಕಿಂತ ’ಉಸ್ತಾಹ’ ದಲ್ಲೆ ಹೆಚ್ಚು ಉತ್ಸಾಹ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಅಡ್ಡಬಿದ್ದೆ..
ಇಶ್ಟು ಚನ್ನಾಗಿ phonology ವಿಶ್ಲೇಶಣೆ ಮಾಡೋರನ್ನ ಕಂಡಿರಲಿಲ್ಲ..
ಸಕ್ಕತ್ರೀ... ಕನ್ನಡದ ಉಲಿಕೆ phonology ಬಗ್ಗೆ ಬರೆಯಿರಿ..!!
ತುಂಬಾ ನನ್ನಿ
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಕನ್ನಡ ಕಂದರೇ, ಉತ್ಸಾಹ ಮತ್ತು ಉಸ್ತಾಹ ಏಕೆ ಪಲ್ಲಟವಾಗುತ್ತದೆ ಎಂಬುದನ್ನು ಚೆನ್ನಾಗಿಯೇ ವಿವರಿಸಿದ್ದೀರಿ, ಆದರೆ ಆ ವಿವರಣೆ ಇಲ್ಲಿ ನಡೆಯುತ್ತಿರುವ ಚರ್ಚೆಗೆ ಅಪ್ರಸ್ತುತ.
೧. ನೀವು ಮತ್ತೆ ಸಕ್ಕದದ ಕಣ್ಣಿನಿಂದಲೇ ಕನ್ನಡ ಪದಗಳ ಉಚ್ಚಾರವನ್ನು ಗಣನೆಗೆ ತೆಗೆದುಕೊಂಡಿರಿ . ಉತ್ಸಾಹ - ಸಕ್ಕದ ಪದ. ಇದನ್ನು ಮುಂದಿಟ್ಟುಕೊಂಡು ಕನ್ನಡ ಉಚ್ಚಾರಣೆಯ ಬಗ್ಗೆ ಹೇಳುವುದು ತಪ್ಪಾಗುತ್ತದೆ. ಕನ್ನಡದ ಉಚ್ಚಾರಣೆಯನ್ನು ಕನ್ನಡದ ಪದಗಳಿಂದಲೇ ವಿಶ್ಲೇಷಿಸಬೇಕು.
೨. ಅತ್ಯಂತ ಮುಖ್ಯವಾದದ್ದು. ನೀವು ಯಾರನ್ನು "ಓದಿಲ್ಲದ ಜನ" ಅಂತೀರಿ. ಹಾಗಾದರೆ ಸಂಸ್ಕೃತವನ್ನು ಎಲ್ಲರೂ ಓದಿಬಿಟ್ಟಿದ್ದಾರೆಯೋ ? ನಿಮ್ಮ "ಓದಿಲ್ಲದ ಜನ" ಎಂಬ ವಾದ ಹಿಡಿದುಕೊಂಡರೆ ನೀವು ಕನ್ನಡದ ಬಗ್ಗೆ ಹೇಳಿದ ಮಾತು ಸಂಸ್ಕೃತಕ್ಕೂ ಅನ್ವಯವಾಗುತ್ತದೆ, ಅಲ್ಲವೇ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಅವರು ಹೇೞ್ತಾ ಇರೋದನ್ನ ವಸಿ ಅರಿತುಕೋ ಜಾಣ..
’ಉತ್ಸಾಹ’ ಇಲ್ಲಿ ಸ್ಪರ್ಶ ’ತ್’ ಮುಂದೆ ಊಶ್ಮ ’ಸ್’ ಅಂದರೆ ತ್ ಎಂಬಲ್ಲಿ ಉಸಿರು ನಿಲ್ಲಿಸಿ/ಕಟ್ಟಿ, ಸ್ ಎಂಬಲ್ಲಿ ಉಸಿರು ಬಿಟಬೇಕು.. ಇದು ಕನ್ನಡದ ಉಲಿಕೆಗೆ ಹೊಂದದ ವಿಚಾರ.
ಅಂದರೇ ಕನ್ನಡದಾಗೆ ಸ್ಪರ್ಶ ವೆಂಜನಗಳಿಗೆ ಊಶ್ಮ ವೆಂಜನಗಳು ಒತ್ತಾಗಿ, ಸಂಯುಕ್ತವಾಗಿ ಬರಲಾರವು....
ಮಾದರಿ ’ಹತ್ಸು’, ’ಹಚ್ಸು’, ’ಎತ್ಸು’, ಇವನ್ನ ಹೆಚ್ಚು ಕನ್ನಡದ ಮಂದಿ ಉಲಿಯಲಾರರು.
ಪಾಪಾ ಕನ್ನಡದ ಕಂದ ’ಉತ್ಸಾಹ’, ’ಉತ್ಸವ’ ಎಂಬ ಸಕ್ಕದದ ಒರೆ ಮಾದರಿಯಾಗಿ ಕೊಟ್ಟಿದ್ದು, ಆರಾಮಾಗಿ ತಿಳೀಲಿ ಅಂತ ಇರಬೇಕು. ಅವರು ಸಂಸ್ಕೃತ-ವ್ಯಾಕರಣದ ಮೇಲೆ ಹೇೞ್ತಾ ಇಲ್ಲ...
ಯಾಕೆಂದರೆ ಸಕ್ಕದದಲ್ಲಿ ಸ್ಪರ್ಶಕ್ಕೆ ಊಶ್ಮದ ಸಂಯುಕ್ತ ಸಲ್ಲುವುದು.
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಮಹೇಶ, ನೀನು ಯಾವ ಸ್ಟಾಟಿಸ್ಟಿಕ್ಸ್ ಇಟ್ಟುಕೊಂಡು ವಾದ ಮಂಡಿಸ್ತೀಯೋ ನನಗೆ ಗೊತ್ತಿಲ್ಲ. ಆದರೆ ಇಲ್ಲಿ ಇರೋದು "ಹೆಚ್ಚು ಕಡ್ಮೆ ಪ್ರಶ್ನೆ ಇಲ್ವೇ ಇಲ್ಲ. ಬಳಕೆಗಳು ಇದ್ಯೋ ಇಲ್ವೋ ಅಷ್ಟೇ ಪ್ರಶ್ನೆ".
ಕನ್ನಡ ಕಂದ ಮತ್ತು ಮಹೇಶ, ಇಬ್ಬರೂ ಗಮನಿಸಿ ಇಲ್ಲಿ.
೧. "ಸೈಕಲ್ನ ಜಾರೋಬಂಡೆ ಮೇಲ್ ಹತ್ಸು, ನೋಡೋಣ",
೨. "ಕರೆಂಟ್ ಹೋಗಿದೆ. ಲಕ್ಷ್ಮೀಗೆ ಕ್ಯಾಂಡಲ್ ಹಚ್ಸಕ್ಕ್ (ಹಚ್ಚಿಸೋಕ್ಕೆ) ಹೇಳು" - ಇಂತಹ ಬಳಕೆಗಳು ಹಾಸುಹೊಕ್ಕಾಗಿವೆಯಲ್ಲ ನಮ್ಮ ದಿನನಿತ್ಯದ ಬಳಕೆಗಳಲ್ಲಿ. ಕ್ಯಾಂಡಲ್ "ಹಚ್ಚಕ್ಕೆ" ಹೇಳು ಎಂಬ ಬಳಕೆಯೂ ಇದೆ. ಆದರೆ "ಹಚ್ಸೋಕ್ಕೆ" - ೩rd ಪಾರ್ಟಿ ಕ್ಯಾಂಡಲ್ ಹಚ್ಚತ್ತೆ.
ಕನ್ನಡಕಂದ, ಇಲ್ಲಿ ನಾನು ಹೇಳಬಯಸಿರುವುದು, "ಓದಿದವರೂ", "ಓದದೇ ಇರುವವರೂ" ಕೂಡ "ಕನ್ನಡ ಪದಗಳಲ್ಲಿರುವ" (ಗಮನಿಸಿ, ಕನ್ನಡ ಪದಗಳಲ್ಲಿರುವ) "ತ್ಸ"ವನ್ನು "ಸ್ತ" ಎಂದು ಯಾವತ್ತೂ ಕೂಡ ತಪ್ಪಾಗಿ ಹೇಳಲ್ಲ. ಸಂಸ್ಕೃತದ "ತ್ಸ" ವನ್ನು ಕನ್ನಡಿಗರು "ಸ್ತ" ಆಗಿ ಹೇಳಬಹುದು, ಆದರೆ ಈ ಅಂಶ ಈ ಚರ್ಚೆಗೆ ಅಪ್ರಸ್ತುತ. ಅದನ್ನು ಗಣನೆಗೆ ತೆಗೆದುಕೊಳ್ಳಬೇಕಿಲ್ಲ. ಏಕೆಂದರೆ, ಕನ್ನಡದ ವಿಶ್ಲೇಷಣೆಯನ್ನು ಕನ್ನಡದ ಪದಬಳಕೆಯ ಮೂಲಕವೇ ಮಾಡಬೇಕು. ಕನ್ನಡವಲ್ಲದ ಪದಬಳಕೆ ಕೊಟ್ಟುಬಿಟ್ಟು, "ಕನ್ನಡಿಗರು ತಪ್ಪು ಹೇಳ್ತಾರೆ" ಅನ್ನುವುದು ಒಪ್ಪುವಂತಹ ಮಾತಲ್ಲ ತೆಗಿರಿ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಎಷ್ಟು ಜನ ಈ ಶಬ್ದಗಳನ್ನು ಸರಿಯಾಗಿ ಉಚ್ಚರಿಸಬಲ್ಲರು
’ಸಹ್ಯಾದ್ರಿ’, ವಿಹ್ವಲ, ವಿಹ್ಮಲ, ಬ್ರಹ್ಮ ಇತ್ಯಾದಿ. ನಾನು ತಿಳಿದಂತೆ ಸಯ್ಯಾದ್ರಿ, ವಿವ್ವಲ, ವಿಮ್ಮಲ, ಬ್ರಮ್ಮ ನಾನು ವಿಚಾರಿಸಿದಂತೆ. ನಾನು ತೆಗೆದುಕೊಳ್ಳುವ ಉದಾಹರಣೆಗಳು ಸಂಸ್ಕೃತದವೇ ಆಗಿರಲು ಕಾರಣ ಈ ಸಂಯುಕ್ತಾಕ್ಷರಗಳು ಕನ್ನಡಿಗರಿಗೆ (ಸಾಮಾನ್ಯವಾಗಿ ತೆನ್ನುಡಿಗರಿಗೆ) ಪ್ರಾಯಶಃ ಗೊತ್ತಿಲ್ಲ. ಇವರಿಗದು ಅಪರಿಚಿತ.
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಹಾಳಾಗಿ ಹೋಗಲಿ.. ಯಾವ ಯಾವ ಕನ್ನಡದ ಕುರಿತ phonology ಹೊತ್ತಗೆಗಳನ್ನ ಓದಿದ್ದೀಯ?
ನೀನು ಹೇೞ್ತಾ ಇರೋದೇನು?
"ಕರೆಂಟ್ ಹೋಗಿದೆ. ಲಕ್ಷ್ಮೀಗೆ ಕ್ಯಾಂಡಲ್ ಹಚ್ಸಕ್ಕ್ (ಹಚ್ಚಿಸೋಕ್ಕೆ) ಹೇಳು" - ಇಂತಹ ಬಳಕೆಗಳು ಹಾಸುಹೊಕ್ಕಾಗಿವೆಯಲ್ಲ "
ಹಚ್ಸಕ್ಕೆ ಅನ್ನೋದು ಹೆಚ್ಚಿನವರ ಬೞಕೆ ಅಲ್ಲ. ಹಚ್ಚಾಕೆ ಹಚ್ಲಾಕೆ, ಹಚ್ಚಲ್ಕೆ, ಹಚ್ಲಿಕ್ಕೆ, ಹಚ್ಚುಕ್ಕೆ( ಹಾಸನ + ನಮ್ಮ ಮನೆ )
ಹಚ್ಸು ಅನ್ನು ಹಚ್ಚಸ್, ಹಚ್ಚುಸ್, ಎಂದೇ ನಾನು ಕೇಳಿರುವ ಹೆಚ್ಚು ಹಳ್ಳಿ ಮಂದಿ ಹೇೞೋದು.
ನೀನು ಅದು ಯಾವ ಯಾವ ಕೊಡಗ, ಮುಂತಾದ ಮಾತುಬಗೆಗಳ ಆರಯ್ಯು ನಡೆಸಿದ್ದೀ, ನಿನ್ನ ಆರಯ್ಯಬರಹಗಳಲ್ಲಿ?
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಮಹೇಶ, ನೀನು ಯಾವಾಗಲೂ ಚರ್ಚೆಯನ್ನು ವೈಯಕ್ತಿಕ ಮಟ್ಟಕ್ಕೆ ತೊಗೊಂಡೋಗಿ ಹಾಳುಮಾಡುತ್ತೀಯ. ಬರೀ ವಿಷಯಗಳ ಮೇಲೆ ಚರ್ಚೆ ಮಾಡು. ನಾನು ಏನು ಓದಿದ್ದೇನೋ ಅದೆಲ್ಲ ನಿನಗ್ಯಾಕೆ (ನೋಡು "ನಿನಗ್ಯಾಕೆ" ಪದ, ಮತ್ತೊಂದು ಸಂಯುಕ್ತಾಕ್ಷರ ಇದೆ, ಇದೇ ಕ್ಲೀನಾಗಿ ತೋರಿಸುತ್ತಿದೆ ಕನ್ನಡಕಂದ ಹೇಳಿರುವ ಪಾಯಿಂಟು ತಪ್ಪು ಎಂಬುದಾಗಿ). ಬೇರೆಯವರು ಬರೆಯುವ ಕಾಮೆಂಟುಗಳನ್ನು ನೀನು ಸರಿಯಾಗಿ ಗ್ರಹಿಸಲ್ಲ ಅನ್ನೋದು ಗೊತ್ತಾಯ್ತು ಬಿಡು. ನಾನು ಮೊದಲೇ ಹೇಳಿಲ್ಲವೇ, "ಹೆಚ್ಚು, ಕಡ್ಮೆ" ಇವುಗಳ ಪ್ರಶ್ನೆಯೇ ಅಪ್ರಸ್ತುತ. ಏನು ನಿಮ್ಮ ಸೀಮೆಯಲ್ಲಿರುವ "ಆಗಯ್ತೆ, ಬತ್ತಯ್ತೆ, ಓಯ್ತಾನೆ" ಇಶ್ಟೇನಾ ಕನ್ನಡ ಅಂದ್ರೆ. ಕನ್ನಡದ ಯಾವುದೇ ಸೀಮೆಯಲ್ಲಿ ಸಂಯುಕ್ತಾಕ್ಷರಗಳ ಬಳಕೆ ಇದ್ದರೆ ಅದು "ಕನ್ನಡದಲ್ಲಿ ಸಂಯುಕ್ತಾಕ್ಷರ" ಇದೆ ಅಂತಲೇ ಅರ್ಥ.
ಮತ್ತೆ ಅದೇ, ಹುಚ್ಚುಚ್ಚಾದ "ಹೆಚ್ಚು ಕಡ್ಮೆ" ಮಾತು. "ನುಡಿಯ ವಿಷಯ ಏನ್ ಡೆಮಾಕ್ರಸಿ ಅಲ್ಲ. ಕಡ್ಮೆ ಜನ ಮಾತಾಡ್ತಾರೆ, ಹಾಗಾಗಿ ಅದಕ್ಕೆ ಮಾನ್ಯತೆ ಇಲ್ಲ ಎನ್ನುವುದು ತುಂಬಾ ಕೆಳಮಟ್ಟದ, ಅತ್ಯಂತ ಕಳಪೆ, ಹೀನವಾದ ಯೋಚನೆ".
ನಾನು ಈಗಲೂ ಹೇಳುವುದು, "ಕನ್ನಡದಲ್ಲಿ ಸಂಯುಕ್ತಾಕ್ಷರಗಳು ಇವೆ, ಆದರೆ ಬರಹಗಳಲ್ಲಿ ಮಡಿವಂತಿಕೆಯಿಂದಾಗಿ ಅವುಗಳಿಗೆ ಮಾನ್ಯತೆ ಇಲ್ಲ".
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
"ನಾನು ಈಗಲೂ ಹೇಳುವುದು, "ಕನ್ನಡದಲ್ಲಿ ಸಂಯುಕ್ತಾಕ್ಷರಗಳು ಇವೆ, ಆದರೆ ಬರಹಗಳಲ್ಲಿ ಮಡಿವಂತಿಕೆಯಿಂದಾಗಿ ಅವುಗಳಿಗೆ ಮಾನ್ಯತೆ ಇಲ್ಲ"."
ನೀನು ಹೇೞೋದು ಯಾರಿಗೆ ಬೇಕಯ್ಯ!
ನಾನಂತೂ ಕನ್ನಡ ಕಂದ ಹೇೞ್ತಾ ಇರೋದನ್ನ ನೋಡ್ತಿದ್ದೀನಿ.
ನಾನು ಮಾಡಿದ್ದು ಇಶ್ಟು.. ಕನ್ನಡ ಕಂದ ಹೇೞದಕ್ಕೆ ಮಾದರಿ ನೀಡಿ, ಬಿಡಿಸಿ ಹೇೞಿದ್ದು...
ಗ್ರಹಿಕೆ, ವಯ್ಯಕ್ತಿಕ ಮಟ್ಟ ಇವೆಲ್ಲ ಏನು ತಂದೆ! ಸ್ಪರ್ಶ ಮತ್ತು ಊಶ್ಮಗಳು ತಿಳೀತ?
=====================================
ಮಾಯ್ಸ!
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು