ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಎಲ್ಲರೂ ಟಿ.ವಿಯಲ್ಲಿ ಬರುವ ವೊಡಾಫೋನ್‌ನ ಈ ಜಾಹೀರತನ್ನು ನೋಡಿದ್ದೇವೆ
ಅವರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಅರಿವಾಗಲಿಲ್ಲ. ಅಫ್‌ಕೋರ್ಸ್ ಅದು ಆ ಜಾಹಿರ್ರಾತು
ಚಿಕ್ಕ ಮಗುವೊಂದು ಕಭಿ ಕಬಿ ಹಾಡು ಕೇಳುತ್ತಿದ್ದಂತೆ ಅದರ ಮುಂದಿನ ಹಂತಗಳಲ್ಲು ಅದೇ ಹಾಡನ್ನು ಹಾಡುತ್ತಿರುತ್ತದೆ.
ಅವನು ಕಾಲೇಜ್ ಹಾಗು ತನ್ನ ಪ್ರೇಮಿಯೊಡನೆ ಕೂಡಾ ಇದೇ ಹಾಡನ್ನು ಹೆಳುತ್ತಾನೆ. ನಂತರ ಅವನ ಮಗ ಕೂಡ ಅದೇ ಹಾಡನ್ನು ಉಲಿಯುತದೆ.
ನಂತರ ವೊಡಾಫೋನೆನಿಂದ ಹೆಚ್ಚು ಹಾಡನ್ನು ಕೇಳಿ ಎಂಬ ವಾಕ್ಯ
ನಾನು ಹೇಳಿದ್ದೇನೆಂದರೆ
ಅಂದಿನ ಕಾಲ್ದಿಂದಲೂ ಒಂದೆ ಹಾಡನ್ನು ಕೇಳುತ್ತಿದ್ದೀರಾ ನಾವು ಹೊಸ ಹಾಡನ್ನು ಹಾದುತ್ತೇವೆ ಎಂಬ ಪ್ರಚಾರ ಅವರದು ಎಂದು
ನಮ್ಮ ಮನೆಯವೆರೆಲ್ಲರೂ ಹೇಳಿದ್ದೇನೆಂದರೆ
ಯಾವ ಕಾಲದ ಹಾಡನ್ನೂ ನಾವು ಹಾಕುತ್ತೇವೆ ಎಂಬ ಪ್ರಚಾರ ಅವರದು ಎಂದು
ಯಾವುದು ಸರಿ
ಅಥವ ಎರೆಡೂ ತಪ್ಪಾ?

- Login or register to post comments
- 621 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಎರಡೂ ಅಲ್ಲ, "ಕನ್ನಡ ಹಾಡುಗಳನ್ನು ಕೇಳೋದು ಬಿಟ್ಟು ವೋಡಾಫೋನ್ ಮೂಲಕ ಹಿಂದಿ ಹಾಡುಗಳನ್ನು ಕೇಳಿ" ಎಂದು ಅರ್ಥ. ಕನ್ನಡದ ಮೇಲೆ ಹಿಂದಿಯ ದಬ್ಬಾಳಿಕೆ
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಕನ್ನಡ ತೀವ್ರವಾದಿಯ ಪ್ರತಿಕ್ರಿಯೆ ಇದು ಅಲ್ಲವಾ?
-:)
ರೂಪ
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ನನಗೆ ತುಂಬಾ ಅಂದ್ರೆ ತುಂಬಾ ನಗು ಬಂತು
"ನೂರು ನೂರು ನಗುವ ಸ್ಮೈಲಿ"
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ನನಗರ್ಥವಾದ ಪ್ರಕಾರ, ನೀವು ಹಸುಗೂಸಾಗಿದ್ದಾಗಿಂದ ಹಿಡಿದು ನಿಮಗೆ ಕೂಸಾಗುವವರೆಗೂ ನಿಮಗೆ ಮೆಚ್ಚುಗೆಯಾದ ಹಾಡನ್ನು ವೊಡಾಫೋನಿನಲ್ಲಿ ಕೇಳಿ ಎಂಬುದು ಆ ಜಾಹೀರಾತಿನ ಅರ್ಥ.
ಜಾಹೀರಾತು ಅರ್ಥ ಮಾಡ್ಕೋ ಬೇಕಾದ ಕಾಲ ಬಂತಲ್ಲಪ್ಪಾ ಅಂತ ನನ್ನಮ್ಮ ಹೇಳ್ತಿರ್ತಾರೆ ಇಂಥಾ ಜಾಹೀರಾತುಗಳನ್ನು ನೋಡಿ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಅವರಿಗೆ ಹೇಳ್ಬೇಕು..
ಅಣ್ಣ ನಮಗೆ ಹಾಡೂ ಬೇಡಾ ಏನೂ ಬೇಡಾ........ ಮೊದಲು ನಿಮ್ಮ ದರಿದ್ರ ನೆಟ್ವರ್ಕ್ ಇಂಪ್ರೂವ್ ಮಾಡಿ ಅಂತ...
-ವರುಣ ಭಟ್
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ನಾನು ಸಹ ನಿಮ್ಮ ಹಾಗೇ ಯೋಚಿಸಿದ್ದೆ.ನಿಮ್ಮ ಅನಿಸಿಕೆನೇ ಸರಿ ಅನ್ನಿಸುತ್ತೆ..
ಬದುಕು ಬರಡಾಗದಿರಲಿ..........
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಈ ಸರ್ವಿಸ್ ಪ್ರೊವೈಡರ್‍ಗಳ ಹಂಗಲ್ಲಿದ್ದು... ನಾವು ಕಳಿಸು ಎಸ್ಸೆಮ್ಮೆಸ್ಸು.. ಪೋನುಗಳಿಗೆಲ್ಲ.. ದುಡ್ಡು ಕಕ್ಕೋ ಬದ್ಲು.. ಊರಿಗೊಂದು ಅದೇ ಊರಿನವರೆಲ್ಲ ... ದುಡ್ಡು ಕಲೆ ಹಾಕಿ... ಟವರ್‍ಗಳನ್ನು ಕೂರಿಸಿಕೊಂಡು .. ಔಟ್‍ಗೋಯಿಂಗ್.. ಇನ್‍ಕಮಿಂಗ್ ಎಲ್ಲ ಬಿಟ್ಟಿ... ಮಾಡ್ಕೊಂಡ್ರೆ ಚೆನ್ನಾಗಿರುತ್ತಲ್ವಾ??
..
ನಾನಿದರ ಬಗ್ಗೆ ಸೀರಿಯಸ್ ಇದೀನಿ... :|
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಐಡಿಯ ಒಳ್ಳೆಯದೆ. ಆದರೆ ಹೊರಗಿನ ಸಿಟಿಗಳಿಗೆ ಕಾಲ್ ಮಾಡೋಕೆ ಏನ್ ಮಾಡ್ತೀರಿ? ಜೊತೆಗೆ ಕಾನೂನು ಕಾಯ್ದೆಗಳು, ಬಂಡವಾಳ ಇವೆಲ್ಲ?
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ನಾವು ಇಂಜಿನಿಯರ್ಗಳು ಅಡುಗೆ ಮನೆನಲ್ಲಿ ಕೂತಿದ್ರು, ಆಕಾಶಕ್ಕೆ ರಾಕೆಟ್ ಬಿಡುವುದನ್ನೆ ಯೋಚಿಸುತ್ತಿರುತ್ತೇವೆ....!
ಒಳ್ಳೆ ಕೆಲಸ ಮಾಡೋದಕ್ಕೆ ಹೆಜ್ಜೆ ಇಟ್ಟಲೆಲ್ಲೆ ಕೆಸರು ಹಾಕಿ ಜಾರಿ ಬೀಳಿಸೊ ಉದ್ಯಮಿ ಜನರು ನಮ್ಮ ನಡುವೆ ಇದ್ದಾರೆ...! ಎಚ್ಚರ..!
-ಯುವಪ್ರೇಮಿ