ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ಹಳೆಗನ್ನಡ

ಸಲ್ಲೇಖನ

March 5, 2008 - 9:49pm — cmariejoseph

ಸುರಚಾಪಂಬೊಲೆ ವಿದ್ಯುಲ್ಲತೆಗಳ ತೆರವೊಲ್ ಮಂಜುವೋಲ್ ತೋರಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ ನಿಲ್ಲವಾರ್ಗೆಂದು . . .

ಮುಂದೆ ನೆನಪಿಗೆ ಬರುತ್ತಿಲ್ಲ.
ಯಾರಾದರೂ ಪೂರ್ಣಗೊಳಿಸಿ.
ಹಾಗೆಯೇ ಅರ್ಥ ತಿಳಿಸಿ.

ಒಂದು ಸಣ್ಣ ಕ್ಲೂ: ಇದು ಶ್ರವಣಬೆಳಗೊಳದ ಬೆಟ್ಟದ ಮೇಲಿನ ಒಂದು ಸ್ವಹತ್ಯಾ ಘೋಷಣೆ.

ಪ್ರೀತಿಯಿಂದ
ಸಿ ಮರಿಜೋಸೆಫ್

‹ ಚಾಗದ ಭೋಗದಕ್ಕರದ... ವೇದ ಪುರುಷನ ಸುತನ ಸುತನ... ›
  • ಹಳೆಗನ್ನಡ
~.~
  • Login or register to post comments
  • 519 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2008 - 11:20am — kannadakanda

ಉ: ಸಲ್ಲೇಖನ

kannadakanda's picture

ಸುರಚಾಪಂಬೋಲೆ ವಿದ್ದುಲ್ಲತೆಗಳ ತೆಱವೋಲ್ಮಂಜುವೋಲ್ತೋಱಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ನಿಲ್ಲವಾರ್ಗಂ
ಪರಮಾರ್ತ್ಥಂ ಮೆಚ್ಚೆನಾನೀ ಧರಣಿಯುಳಿರವಾನೆನ್ದು ಸನ್ಯಾಸನಂ ಗೆ-
ಯ್ದುರುಸತ್ವನ್ನನ್ದಿಸೇನಪ್ರವರ ಮುನಿವರನ್ದೇವಲೋಕಕ್ಕೆ ಸಂದಾನ್||

ಇದೊಂದು ಪೂರ್ವದ ಹೞಗನ್ನಡದ ಪದ್ಯ
ಇದಱರ್ಥ:
ಸುರಚಾಪಂ +ಪೋಲೆ= ಕಾಮನ ಬಿಲ್ಲಿನಂತೆ, ವಿದ್ದ್ಯುಲ್ಲತೆಗಳ ತೆಱವೋಲ್=ಮಿಂಚಿನ ಬಳ್ಳಿಯ ತೆಱದಂತೆ ಬೇಗಂ =ಬೇಗ ತೋಱಿ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್, ಪರಮಾರ್ತ್ಥಂ= ರೂಪ ಲೀಲೆ ಹಣ ಐಶ್ವರ್ಯದ ರಾಶಿಗಳು ಹಾಗೂ ವಿಶೇಷ ಸಂಪತ್ತುಗಳು ಪಿರಿಗುಂ= ಬಹಳ ಕಾಲದವರೆಗೆ ಆರ್ಗಂ=ಯಾರಿಗೂ ನಿಲ್ಲವು=ನಿಲ್ಲುವುದಿಲ್ಲ. ಆನ್= ನಾನು ಈ ಧರಣಿಯುಳ್= ಈ ಭೂಮಿಯಲ್ಲಿ ಇರವಾನ್=ಇರುವುದನ್ನು(ಇರುವಿಕೆಯನ್ನು) ಮೆಚ್ಚೆನ್=ಇಷ್ಟಪಡುವುದಿಲ್ಲ. ಎನ್ದು=ಎಂದು ಉರುಸತ್ವನ್=ಮಹಾಶಯನಾದ ನನ್ದಿಸೇನಪ್ರವರ ಮುನಿವರನ್= ನಂದಿಸೇನ ಎಂಬ ಹೆಸರಿನ ಮಹಾಮುನಿಯು ದೇವಲೋಕಕ್ಕೆ ಸಂದಾನ್=ಸೇರಿದನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 6:14am — cmariejoseph

ಉ: ಸಲ್ಲೇಖನ

cmariejoseph's picture

ಉತ್ತರ ಹೇಳುವವರು ಒಬ್ಬರಾದರೂ ಸಿಕ್ಕಿದರಲ್ಲ, ಅದೇ ಸಂತೋಷ!!

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 12:48pm — kannadakanda

ಉ: ಸಲ್ಲೇಖನ

kannadakanda's picture

ಇದಕ್ಕೆ ಪ್ರತಿಕ್ರಿಯಿಸಬೇಕೆಂದು ಬಹಳ ದಿನದಿಂದ ಅಂದುಕೊಂಡಿದ್ದೆ. ಆದರೆ ಶಾಸನಸಂಗ್ರಹಪುಸ್ತಕದಲ್ಲಿ ಈ ಪದ್ಯದ ಪೂರ್ಣಪಾಠ ಸಿಕ್ಕಿತು. ಆಮೇಲೆ ಇದಱ ಅರ್ಥವನ್ನು ಹೀಗೆ ಹೇೞಬಹುದೆಂದು ಪ್ರೊ. ಜಿ ವೆಂಕಟಸುಬ್ಬಯ್ಯನವರೊಡನೆ ವಿಚಾರಿಸಿ ಬರೆದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 12:48pm — Sunil Jayaprakash

ಉ: ಸಲ್ಲೇಖನ

Sunil Jayaprakash's picture

ಯಪ್ಪಾ, ಈ ಎಳೆಯಲ್ಲಿ ಸೀಮರಿಜೋಸೇಫ್ ಮತ್ತು ಕನ್ನಡಕಂದರಿಗೆ ಹೇಗೆ "ನನ್ನಿ" ಹೇಳಬೇಕೋ ನನಗೆ ತಿಳಿದಿಲ್ಲ. ಅದೇನ್ ಘಟಾನುಘಟಿಗಳಪ್ಪಾ ಇವರಿಬ್ರೂ...!!!!

ಮರಿಜೋಸೆಫ್ - ತುಂಬಾ ಚೇಷ್ಟೆಪುಟ್ಟ ನೀವು. "ಸಲ್ಲೇಖನ!!!!!!" ಬಳಕೆಯನ್ನು ಸಖತ್ತಾಗಿ ಮಾಡಿದ್ದೀರಾ Eye-wink
ಕನ್ನಡಕಂದ - ತುಂಬಾ ಸಂತೋಷ ಆಗತ್ತೆ, ಕಣ್ರೀ, ನೀವು ಪದ್ಯವನ್ನು ಬಿಡಿಸಿದ ರೀತಿ. ಕುತೂಹಲಕ್ಕೆ ಕೇಳ್ತಾ ಇದ್ದೀನಿ. ಇದೆಲ್ಲ ಯಾವಾಗ ಓದಿದ್ರೀ ನೀವು ?

ಸಾಯೋವಾಗ್ಲೂ ಕನ್ನಡಜನರು ಹೀಗೆ ಕವನ ಗಿವನ ಗೀಚ್ತಾ ಇದ್ರು ಅಂದ್ರೆ!!!!!! "ಕುಱಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್"!!!!!! ಸಾರ್ಥಕವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 12:56pm — kannadakanda

ಉ: ಸಲ್ಲೇಖನ

kannadakanda's picture

ನನಗೆ ನನ್ನ ೮ನೇ ತರಗತಿಯಿಂದಲೇ ಕನ್ನಡ ಅದಱಲ್ಲೂ ಹೞಗನ್ನಡ ತುಂಬಾ ಇಷ್ಟ ಹಾಗೂ ತುಂಬಾ ಸವಾಲಿನ ವಿಷಯ. ನನ್ನ ಪ್ರಥಮ ಭಾಷೆ ಪ್ರೌಢಶಾಲೆಯಲ್ಲಿ ಸಂಸ್ಕೃತವಾಗಿದ್ದರೂ ಓದುತ್ತಿದ್ದೆ ಹಾಗೂ ಗೆಳೆಯರೊಡನೆ ವಿಮರ್ಶಿಸುತ್ತಿದ್ದೆ. ಬೆಳೆದಂತೆ ಹೞಗನ್ನಡದಲ್ಲಿ ಆಸಕ್ತಿಯಿರುವವರ ಸಂಖ್ಯೆ ಕಡಿಮೆಯಿರುವುದನ್ನು ಕಂಡಿದ್ದೇನೆ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ವಿಚಾರಕ್ಕೆ ಜನ ಸಿಗುತ್ತಾರೆ. ಅಂದ ಹಾಗೆ ಭರತೇಶವೈಭವದ ಪ್ರತಿ ಯಾವಾಗ ಕಳಿಸುತ್ತೀರಿ. ರತ್ನಾಕರವರ್ಣಿ ತನ್ನ ಭರತೇಶವೈಭವದ ಪ್ರಾರಂಭದಲ್ಲಿ ಹೀಗನ್ನುತ್ತಾನೆ.

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯ ಮಂಚಿದಿಯೆನೆ ತೆಲುಗ-
ರಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ

ಎನ್ನುತ್ತಾನೆ ತನ್ನ ಭರತೇಶವೈಭವ ಕುಱಿತು. ಅದು ಸತ್ಯ ಕೂಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 1:02pm — Sunil Jayaprakash

ಉ: ಸಲ್ಲೇಖನ

Sunil Jayaprakash's picture

ಕನ್ನಡಕಂದರೆ, ನಿಮ್ಮ ಆಸಕ್ತಿಯ ನನಗೆ ತುಂಬಾ ಸಂತೋಷವನ್ನುಂಟುಮಾಡುತ್ತಿದೆ. ನೀವು ಉದಾಹರಿಸಿದ ಪದ್ಯ ಇಲ್ಲಿದೆ. ನೋಡಿ.
ಭರತೇಶ ವೈಭವ ಕಲ್ಪು ೯ - ಕಾವ್ಯ ಹೇಗಿರಬೇಕು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 1:08pm — kannadakanda

ಉ: ಸಲ್ಲೇಖನ

kannadakanda's picture

ಪಿರಿಗುಂ ಶಬ್ದಕ್ಕೆ ನಾಶವಾಗುತ್ತದೆಯೇ ಎಂದು ಅರ್ಥವಿದೆಯೇ ಎಂದು ವಿಚಾರಿಸಿ ಇನ್ನೂ ಸುಸ್ಪಷ್ಟ ಉತ್ತರೆ ಹೇೞುತ್ತೇನೆ. ಹೞಗನ್ನಡ ನಿಘಂಟು ಹಾಗೂ ಸಮಗ್ರ ಕನ್ನಡ ನಿಘಂಟು ನನ್ನ ಬೞಿ ಈಗ ಇಲ್ಲ. ನೋಡಿ ಹೇೞುತ್ತೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 11:01pm — kannadakanda

ಉ: ಸಲ್ಲೇಖನ

kannadakanda's picture

ಪಿರಿಗುಂ ಬೇಗಂ= ಬಹಳ ಕಾಲದವರೆಗೆ ಎಂದು ಅರ್ಥ ಮಾಡಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 11:23pm — kannadakanda

ಉ: ಸಲ್ಲೇಖನ

kannadakanda's picture

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆಱವೋಲ್ಮಂಜುವೋಲ್ತೋಱಿ ಬೇಗಂ
ಪಿರಿಗುಂ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್ನಿಲ್ಲವಾರ್ಗಂ
ಪರಮಾರ್ತ್ಥಂ ಮೆಚ್ಚೆನಾನೀ ಧರಣಿಯುಳಿರವಾನೆನ್ದು ಸನ್ಯಾಸನಂ ಗೆ-
ಯ್ದುರುಸತ್ವನ್ನನ್ದಿಸೇನಪ್ರವರ ಮುನಿವರನ್ದೇವಲೋಕಕ್ಕೆ ಸಂದಾನ್||

ಇದು ಸರಿಯಾದ ಪಾಠ. ಹಾಗೆಯೆ ಸಂನ್ಯಾಸನಂ ಗೆಯ್ದು= ಸನ್ಯಾಸಿ ಜೀವನವನ್ನು ಮಾಡಿ ಎಂಬ ಅರ್ಥವನ್ನು ಈ ಹಿಂದೆ ಅರ್ಥ ಹೇೞುವಾಗ ಬಿಟ್ಟಿದ್ದೆ. ದಯವಿಟ್ಟು ಸೇರಿಸಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 11:29pm — kannadakanda

ಉ: ಸಲ್ಲೇಖನ

kannadakanda's picture

ಇದಱರ್ಥ:
ಸುರಚಾಪಂ +ಪೋಲೆ= ಕಾಮನ ಬಿಲ್ಲಿನಂತೆ, ವಿದ್ಯುಲ್ಲತೆಗಳ ತೆಱವೋಲ್=ಮಿಂಚಿನ ಬಳ್ಳಿಯ ತೆಱದಂತೆ ತೋಱಿ ಶ್ರೀರೂಪಲೀಲಾಧನವಿಭವ ಮಹಾರಾಶಿಗಳ್, ಪರಮಾರ್ತ್ಥಂ= ರೂಪ ಲೀಲೆ ಹಣ ಐಶ್ವರ್ಯದ ರಾಶಿಗಳು ಹಾಗೂ ವಿಶೇಷ ಸಂಪತ್ತುಗಳು ಬೇಗಂ ಪಿರಿಗುಂ= ಬಹಳ ಕಾಲದವರೆಗೆ ಆರ್ಗಂ=ಯಾರಿಗೂ ನಿಲ್ಲವು=ನಿಲ್ಲುವುದಿಲ್ಲ. ಆನ್= ನಾನು ಈ ಧರಣಿಯುಳ್= ಈ ಭೂಮಿಯಲ್ಲಿ ಇರವಾನ್=ಇರುವುದನ್ನು(ಇರುವಿಕೆಯನ್ನು) ಮೆಚ್ಚೆನ್=ಇಷ್ಟಪಡುವುದಿಲ್ಲ. ಎನ್ದು=ಎಂದು ಸಂನ್ಯಾಸನಂ ಗೆಯ್ದು=ಸನ್ಯಾಸೀಜೀವನವನ್ನು ಮಾಡಿ ಉರುಸತ್ವನ್=ಮಹಾಶಯನಾದ ನನ್ದಿಸೇನಪ್ರವರ ಮುನಿವರನ್= ನಂದಿಸೇನ ಎಂಬ ಹೆಸರಿನ ಮಹಾಮುನಿಯು ದೇವಲೋಕಕ್ಕೆ ಸಂದಾನ್=ಸೇರಿದನು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 12, 2008 - 11:32pm — kannadakanda

ಉ: ಸಲ್ಲೇಖನ

kannadakanda's picture

ಮತ್ತೆ ಮಂಜುವೋಲ್=ಮಂಜಿನಂತೆ ಬಿಟ್ಟು ಹೋಯ್ತು ದಯವಿಟ್ಟು ಸೇರಿಸಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 12:15pm — kannadakanda

ಉ: ಸಲ್ಲೇಖನ

kannadakanda's picture

ಇದು ಮಹಾಸ್ರಗ್ಧರಾವೃತ್ತದಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 14, 2008 - 8:39pm — cmariejoseph

ಉ: ಸಲ್ಲೇಖನ

cmariejoseph's picture

ನೀವು ತೆಗೆದುಕೊಂಡ ಶ್ರಮಕ್ಕೆ ತುಂಬಾ ಧನ್ಯವಾದಗಳು.

ಪ್ರೀತಿಯಿಂದ
ಸಿ ಮರಿಜೋಸೆಫ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 4, 2008 - 2:04pm — mahesha

ಉ: ಸಲ್ಲೇಖನ

mahesha's picture

ಈಗ ಹೀಗೊಂದು ಸುಯಿಸಯ್ಡ್ ನೋಟ್ ಬಿಟ್ರೇ ಹಿಂಗಿರತ್ದೆ..

ಆಂಗೊಂದೆನೆನ್ನಂ.ಉವರ ವೊಣೆಯಿಲ್ಲಂಮಿಲ್ಲಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅರೆತಿಪ್ಪೊರಿನ ಗೊಮ್ಮಟ
  • ಮುಖವಾಡ
  • ಜಿಮೇಲ್ ಕನ್ನಡ
  • ರಸವತ್ತಾದ ಪ್ರಶ್ನೆಗಳು
  • ಇದು ಪದ್ಯವಲ್ಲ
Syndicate content

ಲೇಖಕರು

cmariejoseph's picture

ಪೂರ್ಣ ಹೆಸರು
ಮರಿಜೋಸೆಫ್

ಪರಿಚಯ

ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
  • ೫೬ದೇಶಗಳಲ್ಲಿ ಇಂಟರ್‍ನ್ಯಾಶನಲ್ ರೋಮಿಂಗ್ ಬಿಟ್ಟಿ!
  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಕಿಱುನಾಲಿಗೆ, ಕುಞ್ಞಾಲಿಗೆ
  • ಕನ್ನಡದಲ್ಲಿ ಞ ಮತ್ತು ಙ
  • ಸಪ್ತಸ್ವರಗಳು
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:28pm
  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator