ಕನ್ನಡಕ್ಕೆ ದಿಕ್ಕಿಲ್ಲವೆ?!!
೪ ದಿಕ್ಕುಗಳಾದ ಪೂರ್ವ , ಪಶ್ಚಿಮ, ಉತ್ತರ , ದಕ್ಷಿಣ ಇವುಗಳಿಗೆ ಕನ್ನಡದಲ್ಲಿ ಮೂಡಣ, ಪಡುವಣ, ಬಡಗಣ, ತೆಂಕಣ ಎನ್ನುವುದು ಸರಿಯೆ?
ಇನ್ನುಳಿದ ೪ ದಿಕ್ಕುಗಳಾದ ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯಗಳಿಗೆ ಕನ್ನಡ ಪದಗಳು ಇವೆಯೆ? ಇದ್ದರೆ ಅವು ಏನು?
ಬಲ್ಲವರು ತಿಳಿಸಿಕೊಡಬೇಕು.

- Login or register to post comments
- 828 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಸಕ್ಕದದಂತೆ ಒಟ್ಟು ದಶದಿಕ್ಕುಗಳು, ಹತ್ತುದಿಕ್ಕುಗಳು....
ಪ್ರಾಚ, ದಕ್ಷಿಣ, ಪ್ರತೀಚ, ಉದೀಚ,
ಆಗ್ನೇಯ, ವಾಯುವ್ಯ, ಈಶಾನ್ಯ, ನೈರುತ್ಯ
ಊರ್ಧ್ವ, ಅಧಃ
ಆದ್ರೆ ಬಳಕೆಗೆ ಇವು ಸಾಕು.
ಮೂಡಣ, ಪಡುವಣ, ತೆಂಕಣ, ಬಡಗಣ ಕನ್ನಡದಲ್ಲಿ
ಮೇಲೆ ಕೆಳಗೆ
ಎಡ ಬಲ relative direction.
ಮೂಡು = ಹುಟ್ಟು
ಪಡು = ಬೀಳು, ಮಲಗು
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಮಹೇಶ,
ಈ ಯೂರೋಪಿನವರಂತೆ.. ನಾವು ಹೀಗೆ ಹೇಳಿದರೆ ಹೇಗೆ..
ತೆಂಮೂಡಣ / ತೆಂಕಮೂಡಣ
ತೆಂಪಡುವಣ / ತೆಂಕಪಡುವಣ
ಬಡಮೂಡಣ
ಬಡಪಡುವಣ
ಹಾಗೆನೆ ತೆಂಕ, ಬಡ ಅಂದರೆ ಏನು ಅಂತ ತಿಳಿಸುತ್ತೀರಾ?
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
^^ ಒಳ್ಳೆಯ ಹವಣಿಕೆ...
ತೆಮ್ಮೂಡಣ - south-east
ತೆಂಬಡುವಣ - south-west
ಬಡಮೂಡಣ - north-east
ಬಡಮೂಡಣ - north west
http://dsal.uchicago.edu/cgi-bin/philologic/getobject.pl?c.1:1:864.burro...
3449 Ta. teṉ south, southern region; right side; teṉṟal, teṉṉal south wind, balmy breeze from the south, south-west monsoon; teṉṟi, teṉṟal south; teṉṉar south; people of the south; teṉṉaṉ, teṉṉavaṉ southerner; teṉātu that which is in the south; teṟku, tekku south. Ma. ten south; tennal southern breeze, zephyr; tekku south; tekkan southern. Ka. teṅ-gāli south wind; teṅka, teṅkal, teṅku, tembu, ṭeṅkalu, ṭeṅku the south. Koḍ. tekkï, tëkkï south; tekkië southern. Tu. tenůkāyi, tenkāyi, teṅkāyi the south, southern. ? Go. (ASu.) telṅāṛ south. DED(N) 2839.
ತೆಣ್/ತೆನ್ = south!
http://dsal.uchicago.edu/cgi-bin/philologic/getobject.pl?c.1:1:2636.burr...
5218 Ta. vaṭa northern; vaṭakku north, north point of the compass; vaṭantai that which is in the north, north wind; vaṭavar northerners; vaṭātu that which is in the north, north; vaṭuku the region immediately north of the Tamil country, the Telugu country, the Telugu language; vaṭukar people of the Telugu country, a caste of Telugu immigrants; vāṭai north wind, cold wind, wind. Ma. vaṭa north; vaṭakku id., in or towards the north; vaṭakkan northern; vāṭa wind. Ka. baḍa, baḍaga, baḍagal, baḍagu the north, in the north. Koḍ. baḍakï north. Tu. baḍakāyi the north, northern. Te. vaḍãkũgoṇḍa Himalaya. DED 4267.
ವಟ/ಬಡ = north!
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ತೆಮ್ಮೂಡಣ= ಆಗ್ನೇಯ(South East)
ಬಡವೂಡಣ=ಈಶಾನ್ಯ(North East)
ಬಡವಡುವಣ=ವಾಯವ್ಯ(North West)
ತೆಂಬಡುವಣ=ನೈಋತ್ಯ(South West)
ಎಂದಾಗಬಹುದೇನೋ?
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಹೀಗೂ ಆಗಬಹುದೇನೋ?
ಮೂಡುದೆಂಕಣ=ಆಗ್ನೇಯ (South East)
ಮೂಡುವಡಗಣ=ಈಶಾನ್ಯ(North East)
ಪಡುವಡಗಣ=ವಾಯವ್ಯ (North West)
ಪಡುದೆಂಕಣ=ನೈಋತ್ಯ(South West)
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಮೂೞ್ತೆಂಕಣ=ಮೂಡುದೆಂಕಣ=ಆಗ್ನೇಯ (South East)=ತೆಮ್ಮೂಡಣ
ಮೂೞ್ವಡುಗಣ=ಮೂಡುವಡಗಣ=ಈಶಾನ್ಯ(North East)=ಬೞ್ವೂಡಣ
ಪೞ್ವಡುಗಣ=ಪಡುವಡಗಣ=ವಾಯವ್ಯ (North West)=ಬೞ್ವಡುಗಣ
ಪೞ್ತೆಂಕಣ=ಪಡುದೆಂಕಣ=ನೈಋತ್ಯ(South West)=ತೆಂಬಡುಗಣ
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಥ್ಯಾಂಕ್ಸ್,
ಈಗೊಂದು ೧೫ ವರುಷಗಳ ಹಿಂದೆ ’ಚುಟುಕ’ ಎಂಬ ಪತ್ರಿಕೆಯಲ್ಲಿ ’ಪೇರೂರು ಜಾರು’ ಎಂಬುಬರೊಬ್ಬರು ಅಚ್ಚ ಕನ್ನಡದ ಬಗ್ಗೆ ಅಂಕಣ ಬರೆಯುತ್ತಿದ್ದರು. ಅವರು ಈ ದಿಕ್ಕುಗಳ ಬಗ್ಗೆ ಬರೆದು ಉಳಿದ ಆ ನಾಲ್ಕು ದಿಕ್ಕುಗಳಿಗೆ ಕನ್ನಡದ ಏನೋ ಹೆಸರುಗಳನ್ನು ಸೂಚಿಸಿದ್ದರು. ನೆನಪಾಗುತ್ತಿಲ್ಲ. ಹೆಚ್ಚಾಗಿ ನೀವು ಹೇಳಿದ್ದೇ ಇರಬೇಕು.
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಬೞ್ವಡುಗಣ, ಬೞ್ವೂಡಣ ತಪ್ಪಾಗಬಹುದೇನೋ?
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಮಹೇಶ್,
"ಮೇಲೆ ಕೆಳಗೆ ಎಡ ಬಲ relative direction".
ಹೀಗಂದರೇನು? ಸ್ವಲ್ಪ ಬಿಡಿಸಿ ಹೇಳಿ.
ಬಳಕೆಗೆ ಸಾಕು ಹೌದು. ಆದರೆ ಅರಿವಿಗೆ ಬೇಕು.
ಉ: ಕನ್ನಡಕ್ಕೆ ದಿಕ್ಕಿಲ್ಲವೆ?!!
ಇವೆಲ್ಲ ಸಂಸ್ಕೃತದ ಶಬ್ದಗಳು. ಅವರಲ್ಲೂ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಿಗೆ ಮಾತ್ರ ಹೆಸರಿಟ್ಟರು. ಸೂರ್ಯೋದಯದ ಕಾಲಕ್ಕೆ ಪೂರ್ವಕ್ಕೆದುರಾದಾಗ ಎದುರಿಗಿರುವುದು(ಮುಂದಿರುವುದು=ಪೂರ್ವ, ಪಶ್ಚಾತ್=ಹಿಂದಿರುವುದು ಪಶ್ಚಿಮ, ಬಲಕ್ಕಿರುವುದು ದಕ್ಷಿಣ ಹಾಗೆಯೇ ಎಡಕ್ಕಿರುವುದು ಉತ್ತರ. ಗಮನಿಸಿ ಬೆಳಗ್ಗೆ ಸೂರ್ಯೋದಯಕ್ಕೆ ಪೂರ್ವಕ್ಕಭಿಮುಖವಾಗಿ ನಿಂತಾಗ ಮಾತ್ರವಿದು). ಉೞಿದ ದಿಕ್ಕುಗಳಿಗೆ ಹೆಸರಿಸುವುದು ಹೇಗೆ. ಸಂಸ್ಕೃತದವರು ಇದ್ದ ಹೆಸರುಗಳಲ್ಲೇ ಹೊಸ ಹೆಸರುಗಳನ್ನು ಸೃಷ್ಟಿಸಿಕೊಳ್ಳುವುದಱಲ್ಲಿ ನಿಪುಣರು. ಉೞಿದ ನಾಲ್ಕು ವಿದಿಕ್ಕುಗಳಿಗೆ (ಮಧ್ಯದ ದಿಕ್ಕುಗಳಿಗೆ) ಹೆಸರಿಡಲು ಕಂಡುಕೊಂಡ ಮಾರ್ಗ ಆ ದಿಕ್ಕುಗಳ ದಿಕ್ಪಾಲಕರ ಹೆಸರನ್ನು ಬೞಸಿರುವುದು, ಆಗ್ನೇಯ (ಅಗ್ನಿಗೆ ಸಂಬಂಧಿಸಿದ್ದು, ಪೂರ್ವ ದಕ್ಷಿಣದಿಕ್ಕಿನ ನಡುವಣ ದಿಕ್ಕು) ನೈಋತ್ಯ(ನಿಋತಿಗೆ, ಪಶ್ಚಿಮ ದಕ್ಷಿಣ ದಿಕ್ಕುಗಳ ನಡುವೆ), ವಾಯವ್ಯ(ವಾಯು, ಪಶ್ಚಿಮ ಮತ್ತು ಉತ್ತರ) ಹಾಗೂ ಈಶಾನ್ಯ(ಈಶಾನ=ಈಶ್ವರ, ಪೂರ್ವ ಮತ್ತು ಉತ್ತರದ ನಡುವೆ). ನಮ್ಮವರಿಗೆ(ತೆನ್ನುಡಿಗರಿಗೆ) ಈ ಪುರಾಣಗಳು ಗೊತ್ತಿಲ್ಲವಲ್ಲ. ಹಾಗಾಗಿ ಅವರಿಗೆ ನೇಸಱು ಮೂಡುವ ದಿಕ್ಕು, ಪಡುವ (ಮಲಗುವ) ದಿಕ್ಕು ಬಲ(ತೆಂಕಣ=ದಕ್ಷಿಣ), ಬಡಗಣ(ಎಡ=ಉತ್ತರ) ಇಷ್ಟೇ ಗೊತ್ತಿರುವುದು.