ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಗಾಂಧಿ ಮತ್ತೆ ಹುಟ್ಟಿ ಬಾ...

September 5, 2007 - 8:17pm — uniquesupri

ಗಾಂಧಿ ಜಯಂತಿ ಹತ್ತಿರಾಗುತ್ತಿದೆ. ಜಗತ್ತಿನೆ ಇತಿಹಾಸದಲ್ಲೇ ಮಾನವರು ಕಾಣಲಾಗದಂತಹ ರಾಜಕೀಯ ಸಂತನನ್ನು ಭಾರತ ಪ್ರಪಂಚಕ್ಕೆ ಕೊಟ್ಟ ದಿನ.

ಚಿಕ್ಕಂದಿನಲ್ಲಿ ನಮಗೆ ದೊರೆಯುವ ಪ್ರೇರಣೆ, ಅರೆಬೆಂದ ವೈಚಾರಿಕತೆಯ ಕಾವಿನಲ್ಲಿ, ಹುಚ್ಚು ಸಿದ್ಧಾಂತಗಳ ಕಣ್ಕಾಪಿನಲ್ಲಿ ನಾವು ಗಾಂಧೀಜಿಯನ್ನು ವಿನಾಕಾರಣವಾಗಿ ಅಲಕ್ಷಿಸುತ್ತೇವೆಯೇ? ಗಾಂಧೀಜಿಯ ಬಗ್ಗೆ ತಿಳಿಯುವ ಮೊದಲೇ ಪೂರ್ವಾಗ್ರಹದ ನಿರ್ಧಾರಕ್ಕೆ ಬಂದು ಅದನ್ನು ಪುಷ್ಟೀಕರಿಸುವಂತಹ ದಾಖಲೆಗಳನ್ನು ಮಾತ್ರ ಓದಿಕೊಂಡು ನಮ್ಮ ಇತಿಹಾಸದ ಒಬ್ಬ ಮಹಾಪುರಷನಿಗೆ ಸಲ್ಲಿಸಬೇಕಾದ ಸಹಜ ಗೌರವವನ್ನು ತಪ್ಪಿಸುತ್ತಿದ್ದೇವೆಯೇ?

ಗಾಂಧೀಜಿ ಎಂದ ಕ್ಷಣವೇ ನಮಗೆ ಮುಸ್ಲಿಮರ ಓಲೈಕೆ, ಭಗತ್ ಸಿಂಗ್‍ರನ್ನು ಗಲ್ಲಿಗೇರಿಸಲು ನೆರವಾದರು ಎಂಬ ಭಾವ ಹುಟ್ಟಲು ಕಾರಣವೇನು? ಸ್ವಾತಂತ್ರ್ಯ ಹೋರಾಟವೆಂದರೆ ಯಾರೋ ರಾಜರು, ರಾಣಿಯರು ತಮ್ಮ ಸಿಂಹಾಸನಕ್ಕೆ ಬಂದ ಕುತ್ತು ನಿವಾರಿಸಿಕೊಳ್ಳಲು ಮಾಡುವ ಯುದ್ಧ ಎಂದೇ ತಿಳಿದು, ಬ್ರೀಟೀಶ್ ದೊರೆಗಳನ್ನೂ ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದ್ದ ಸ್ವಾತಂತ್ರ್ಯ ಪೂರ್ವ ಭಾರತದ ಶ್ರೀ ಸಾಮಾನ್ಯರೆಲ್ಲರನ್ನೂ ಸ್ವಾತಂತ್ರ್ಯ ಹೋರಾಟದಲ್ಲಿ ಒಳಗೊಳ್ಳುವಂತೆ ಮಾಡಿದ ಗಾಂಧೀಜಿ ಮಹಾತ್ಮರಲ್ಲವೇ? ಅನ್ಯರಿಂದ ಎರವಲು ಪಡೆದ ಸಿದ್ಧಾಂತದ, ಪರಕೀಯರ ನೆಲದಲ್ಲಿ ಯಶಸ್ವಿಯಾದ ತಂತ್ರವನ್ನೇ ನಮ್ಮ ದೇಶಕ್ಕೂ ಅಳವಡಿಸಲು ಮುಂದಾದವರ ಎದುರು ಭಾರತದ ನೈಜ ಸ್ವಭಾವವನ್ನರಿತು ಸತ್ಯಾಗ್ರಹದ ಅಸ್ತ್ರವನ್ನು ಕೊಡಮಾಡಿದ ಗಾಂಧಿ ಸಮಾಜ ಚಿಕಿತ್ಸಕರಲ್ಲವೇ?

ಹೌದು, ಗಾಂಧೀಜಿಯನ್ನು ನಿಂದನೆ, ಆರೋಪಗಳಿಂದ ರಕ್ಷಿಸಿ ದೇವರ ಸ್ಥಾನದಲ್ಲಿ ಕೂಡಿಸುವುದು ತಪ್ಪು. ಸಹಜ ಗೊಂದಲ, ದೌರ್ಬಲ್ಯಗಳಿಂದ ಕೂಡಿದ ಒಬ್ಬ ವ್ಯಕ್ತಿ ಮಹಾತ್ಮನಾದ phenomenonನನ್ನು ಅರ್ಥಮಾಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಲ್ಲವೇ?

ಈಗ ಹೇಳಿ ಗಾಂಧಿ ಬಗ್ಗೆ ನಿಮಗೇನನ್ನಿಸುತ್ತದೆ?

‹ ಯಾರು ತೀವ್ರವಾದಿ ? Who is an extremist ? ಕನ್ನಡವೇ ಯಾರಿಗೆ ಬೇಕ್ರೀ.... ಹೋಗ್ರೀ ಹೋಗ್ರಿ ›
  • ಸಮಾಜ
~.~
  • Login or register to post comments
  • 657 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !
  • ಮಹಾತ್ಮ ಗಾಂಧಿ - ೧೧
  • ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !
  • ಗಾಂಧಿ ನೆನಪು -೧
  • ಗಾಂಧಿ ಜಯಂತಿ
Syndicate content

ಲೇಖಕರು

uniquesupri's picture

ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್

ಪರಿಚಯ

I am a simple life loving person with a sensitive heart.

ನಾನು ಇಂಜಿನಿಯರಿಂಗ್ ಓದುತ್ತಿದ್ದೇನೆ. ನಾನು ಹಾಗೂ ನನ್ನ ಗೆಳೆಯರು ಸೇರಿ ಒಂದು ಸಣ್ಣ ಪತ್ರಿಕೆಯೊಂದನ್ನು ಪ್ರತಿ ತಿಂಗಳು ಹೊರಡಿಸುತ್ತಿದ್ದೇವೆ. ಅದರ ಬ್ಲಾಗು ಇಲ್ಲಿದೆ:http://kalaravapatrike.wordpress.com/
ನನ್ನ ಬ್ಲಾಗು:
http://uniquesupri.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
  • ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
  • ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು
  • ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • ಶಿರಾಡಿ ಘಾಟ್ ಎಂಬ ನರಕದ ದಾರಿ.
  • ಅಡಿಗರಿಗೆ ಬುಕ್ಕರ್‍ ಸಿಕ್ಕಿದೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:42pm
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:29pm
  • pradeep_adiga
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 15, 2008 - 11:15pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:12pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator