ಒಬಿರಾಯ ಯಾರು ?
hpn ಅವರ ಈ ದಾರ ನೋಡಿ ... http://www.sampada.net/article/5431 , ಈ ಪ್ರಶ್ನೆ ಕೇಳೊಣ ಅನ್ನಿಸಿತು ![]()

- Login or register to post comments
- 681 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



hpn ಅವರ ಈ ದಾರ ನೋಡಿ ... http://www.sampada.net/article/5431 , ಈ ಪ್ರಶ್ನೆ ಕೇಳೊಣ ಅನ್ನಿಸಿತು ![]()




ಉ: ಒಬಿರಾಯ ಯಾರು ?
ಏನ್ರಿ ಇದು? ಬರೆದದ್ದನ್ನೂ ಸರೆಯಾಗಿ ಬರೆದಿಲ್ಲ. ಬರೆದಿರುವಷ್ಟನ್ನ ನೋಡಿದರೆ ನೀವು ನನಗಿಂತ ಸೋಮಾರಿಗಳು ಎಂದು ಗೊತ್ತಾಗುವಂತಿದೆ.
ಮೊದಲಾಗಿ ಅದು "ಓಬಿರಾಯ". ಪ್ರಶ್ನೆ ಕೇಳಿ - ಆದರೆ ಒಂದೇ ಲೈನು ಗೀಚಿ ಬರೆದರೆ ಸಂಪದ ಗಲೀಜಾಗಿದೆ ಎಂದು ಉಳಿದವರು ಓದೋದೇ ಇಲ್ಲ. ನಾವೇ ನಾಲ್ಕೈದು ಜನ ಬರೆದುಕೊಂಡಿರಬೇಕಷ್ಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಒಬಿರಾಯ ಯಾರು ?
೧. ಒಪ್ಪಿಕೊಳ್ಳ್ತಿನಿ ನಾನು ಸೋಮಾರಿ ಅಂತ ...
, ಕನ್ನಡ ಬರೆಯೋದನ್ನ, ಓದುದುವನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಹೇಳ್ತಾಯಿದ್ದಿರಿ ಅಂತ ಗೊತ್ತಾಯ್ತು !!!
೨. ಸರ್, ದಿನಕ್ಕೊಂದು ಪ್ರಶ್ನೆಗೆ ಇನ್ನು ಎಷ್ಟು ಉದ್ದ ಪ್ರಶ್ನೆ ಕೇಳಲಿ, ನೀವೆ ಹೇಳಿ ??
೩. ನನ್ನು ತಪ್ಪುಗಳಿಗೆ , ನನ್ನ ಮುನ್ನೋಟವೆ , ಅಷ್ಟರಲ್ಲಿ "submit" ಮಾಡಿಬಿಟ್ಟೆದ್ದೆ ... ಆದರೆ "submit" ಮಾಡಿದ ಮ್ಯಲೆ "edit" ಬಟನ್ನಿಗೆ ಹುಡಿಕಿ ಸಾಕಾದೆ .
೪. ನಿಜ ಹೇಳಬೇಕೆಂದರೆ ನಾನು ಉದ್ದವಿರುವ ಲೇಖನಗಳನ್ನು ಓದುವುದಿಲ್ಲ. ಒಂದು ಲೈನ್, ಚುಟುಕಗಳು ನನಗೆ ತುಂಬ ಇಷ್ಟ. ಅಂತದ್ರಲ್ಲಿ ನಾನು ೫-೬ ಲೈನ್ ಗಳಿಗಿಂತ ಹೆಚ್ಚಗೆ ಹೇಗೆ ಬರೆಯಲಿ ..
೫. ನನ್ನ ಲೇಖನಗಳು ನಿಮಗೆ ಗಲೀಜಾಗಿ ಕಂಡು ಬಂದಲ್ಲಿ "delete" ಮಾಡಬಹುದು, ನನಗೇನು ಅಭ್ಯಂತರವಿಲ್ಲ !!!
ಆದರೆ ನನ್ನ "ಓಬಿರಾಯನ" ಪ್ರಶ್ನೆಗೆ ಉತ್ತರ ಸಿಗಲಿಲ್ಲ ... !!!
-ನಿಮ್ಮ ಬೆಂಬಿಡದ ಬೇತಾಳ .....
ಉ: ಒಬಿರಾಯ ಯಾರು ?
ವಿಶ್ವೇಶ್ವರ ಭಟ್ಟರು ಒಮ್ಮೆ ಹೀಗೆ ಬರೆದಿದ್ದಾರೆ:
ಅದೇ ದಟ್ಸ್ ಕನ್ನಡದಲ್ಲಿ ಒಂದು ಜೋಕ್ ಹಾಕಿದ್ದಾರೆ. ಅದು ಹೀಗಿದೆ:
ಅರ್ಥ-ಅನರ್ಥ ನಿಮಗೆ ಬಿಟ್ಟದ್ದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಒಬಿರಾಯ ಯಾರು ?
ಓಬಿರಾಯ ಎಂದರೆ ಹಿಂದೆ ಯಾವುದೋ ಒಂದು ಕಾಲದಲ್ಲಿ ಬದುಕುತ್ತಿದ್ದ ಒಬ್ಬ ರಾಯ(ರಾಜ).
ಆದರೆ 'ಓಬಿರಾಯನ ಕಾಲ' ಎಂದರೆ 'ಕಳೆದುಹೋದ ಕಾಲ' ಎಂಬ ಅರ್ಥವಷ್ಟೆ. ವಿಶ್ವೇಶ್ವರ ಭಟ್ಟರು ತಿಳಿಸುವಂತೆ 'ಓಲ್ಡ್ ಬ್ರಿಟಿಷ್‌ರಾಯನ' ಕಾಲವೂ ಆಗುತ್ತದೆ.
ಇದು ಇಂಗ್ಲಿಷಿನ 'ಓಲ್ಡ್ ಬೈಗೋನ್ ಎರಾ' ಎಂಬುದರ ಮಿಸ್ನೋಮರಂತೆ.
ನಾಡಿಗರೇ,
Lohit Kannada ಫಾಂಟನ್ನು ದಯೆಯಿಟ್ಟು ಅಳವಡಿಸಿ ಮಾರಾಯರೇ.
______________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣ ಪ್ರಕಾಶ ಬೊಳುಂಬು
ಉ: ಒಬಿರಾಯ ಯಾರು ?
ಬೆಂಗಳೂರಿನ ಎಮ್. ಜಿ. ರಸ್ತೆಯಲ್ಲಿ ಇದೆಯಲ್ಲಾ ಸ್ವಾಮಿ ಓಬಿರಾಯನ್ ಹೋಟ್ಲು! ಎಮ್.ಎಸ್.ಓಬಿರಾಯ್ ನಿಮಗ್ಗೊತ್ತಿಲ್ವೆ?
ನವರತ್ನ ಸುಧೀರ್
ಉ: ಒಬಿರಾಯ ಯಾರು ?
ರಾಯರ ಮಠಕ್ಕೂ ರಾಯಲ್ ಚಾಲೆ೦ಜಿಗೂ ಸ೦ಬ೦ಧ ಕಲ್ಪಿಸಿದ೦ತಾಯಿತು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು