ಪ್ರವಾಸ ಕಥನ ಹೇಗಿರಬೇಕು?
ಬ್ಲಾಗೆಂಬ ಹುಟ್ಟಿಯಲ್ಲಿನ ಅಸಂಖ್ಯ ಬರಹಗಳ ಮೇಲೆ ಕಣ್ಣಾಡಿಸುವಾಗ ಮನಸ್ಸಲ್ಲಿ ಮಿಂಚಿ ಮರೆಯಾದ ವಿಚಾರ ಒಂದು ಪ್ರಶ್ನೆಯಾಗಿ ಕಾಡಲಾರಂಭಿಸಿದೆ.
ಪ್ರವಾಸ ಕಥನಗಳು ಎಂದರೆ ಏನು? ಇಷ್ಟು ಘಂಟೆಗೆ ಬಸ್ಸು ಹತ್ತಿ ಇಂತಲ್ಲಿ ಇಷ್ಟು ಹೊತ್ತು ಕುಳಿತು ಇಂತಹ ಹೊಟೇಲಿನಲ್ಲಿ ಟೀ ಕುಡಿದು, ಇಂತಹ ಲಾಡ್ಜಿನಲ್ಲಿ ಉಳಿದುಕೊಂಡು ಇಂತಿಂಥವರನ್ನು ಮಾತನಾಡಿಸಿ … ಎನ್ನುವ ಧಾಟಿಯಲ್ಲಿ ಬರೆದರೆ ಅದು ಪ್ರವಾಸ ಕಥನವೇ? ಹಾಗಾದರೆ ದಿನಚರಿಗೂ ಪ್ರವಾಸ ಕಥನಕ್ಕೂ ವ್ಯತ್ಯಾಸವೇನು?
ಪ್ರವಾಸದ ಸಮಯದಲ್ಲಿ ಭೇಟಿ ನೀಡಿದ ಸ್ಥಳದ ಮಹಿಮೆಯ ಬಗ್ಗೆ, ಪ್ರಾಕೃತಿಕ ಸೌಂದರ್ಯ, ಐತಿಹಾಸಿಕ ಮಹತ್ತುಗಳ ಬಗ್ಗೆ, ರಾಜ ಮಹಾರಾಜರುಗಳ ಜೀವನ ಚರಿತ್ರೆಯ ಬಗ್ಗೆ ಹೇಳುವ ಧಾಟಿಯ ಬರಹ ನಮಗೆ ಸಹಾಯಕವಾಗಬಹುದೇ? ಇದನ್ನು ಸ್ಥಳ ಪರಿಚಯ ಎಂದರೆ ಸಾಕಾಗುವುದಿಲ್ಲವೇ?
ಒಪ್ಪಿಕೊಳ್ಳುತ್ತೇನೆ… ಕೆಲವು ಪ್ರವಾಸದ ಬರಹಗಳನ್ನು ನಾವು ಯಾವ ಇನ್ನಿತರ ಸಿದ್ಧ ಸಾಹಿತ್ಯದ ಪ್ರಕಾರಗಳಿಗೂ ಸೇರಿಸಲಾಗುವುದಿಲ್ಲ. ಅಲೆಮಾರಿಯ ಅಂಡಮಾನ್, ಅಪೂರ್ವ ಪಶ್ಚಿಮ ಮುಂತಾದ ಪ್ರವಾಸ ಕಥನಗಳನ್ನು ನಾನು ಮೆಚ್ಚಿ ಓದಿದ್ದು ಅವು ಪ್ರವಾಸಕಥನಗಳು ಎಂಬ ಕಾರಣಕ್ಕೆ.
ಮನಸ್ಸಿಗೆ ಗೋಚರವಾದ ವಿಚಾರವನ್ನಿಲ್ಲಿ ಹಂಚಿಕೊಂಡಿದ್ದೇನೆ.

- Login or register to post comments
- 495 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ: ಪ್ರವಾಸ ಕಥನ ಹೇಗಿರಬೇಕು?
"ತಿರಿವಾಟ"ಗಳಲ್ಲಿ ಏನೇನೆಲ್ಲಾ ಇದ್ದರೂ, ನಾನು ನಂಬುವ ಒಂದು ಚೊಕ್ಕಾಯವೆಂದರೆ ಈ "ತಿರಿವಾಟಗಳು" ಆಯಾ ಸ್ಥಳದ ಬಗ್ಗೆ ಓದುಗರಲ್ಲಿ ಕುತೂಹಲ ಮೂಡಿಸಿ, ಅಲ್ಲಿಗೆ ನಮ್ಮನ್ನು ಕರಸಿಕೊಳ್ಳುವಂತೆ ಮಾಡಲೇಬೇಕು.
ಉ: ಪ್ರವಾಸ ಕಥನ ಹೇಗಿರಬೇಕು?
ಅಪರವಯಸ್ಕತ ಅಮೇರಿಕಾ ಯಾತ್ರೆ ಮೂರ್ತಿ ರಾವ್ ಬರೆದಿರುವುದನ್ನು ಓದುತ್ತಿದ್ದೇನೆ.
ಅದರಲ್ಲಿ ಅವ್ರು ಬರೆದಿರುವ ಶೈಲಿ ನ೦ಗೆ ತು೦ಬಾ ಇಷ್ಟವಾಯ್ತು.
೧> ಅಲ್ಲಿ ತಮ್ಮ ಚಟುವಟಿಕೆ ಬಗ್ಗೆ ಜಾಸ್ತಿ ಹೇಳಿಕೊ೦ಡಿಲ್ಲಾ.ಆದರೆ ಅಲ್ಲಿಯ ಸಮಾಜದ ಪೂರ್ಣ ಚಿತ್ತಾರ ವನ್ನು ಕೊಡುತ್ತಾ, ಆ ಸಮಾಜದ ವಿಶ್ಲೇಷಣೆ ಮಾಡಿದ್ದಾರೆ. ಅದರ ಇತಿಮಿತಿಗಳನ್ನು ಗುರುತ್ತಿಸಿದ್ದಾರೆ.
ಅಷ್ಟೇ ಅಲ್ಲಾ , ಒ೦ದೊ೦ದು ಸ್ಥಳದ ಇತಿಹಾಸವನ್ನು ಸ೦ಕ್ಷಿಪ್ತವಾಗಿ ತಿಳಿಸಿ ,ನಾವು ನಮ್ಮ ದೇಶದಲ್ಲಿ ಮಾಡುತಿರುವ ಅದೇ ತಪ್ಪಿನ ಅರಿವು ಮೂಡಿಸುತ್ತಾರೆ.ಹೀಗೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ದರ್ಶನವನ್ನು ಮಾಡಿಸುತ್ತಲೇ ಒ೦ದು ಸ್ಥಳವನ್ನು ಕಾಲಾ-ದೇಶಾತೀತವನ್ನಾಗಿ ಮಾಡುವ ಶಕ್ತಿ ಕೆಲವು ಸಾಹಿತ್ಯಗಳಿಗಿವೆ.
ಉ: ಪ್ರವಾಸ ಕಥನ ಹೇಗಿರಬೇಕು?
ಬಹುಶಃ ಇದು ಸಮರ್ಪಕವಾದ defnition ಎನ್ನಿಸುತ್ತದೆ...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravablog.blogspot.com