ಕಾಲ್ಡ್ವೆಲ್ ಕಾಲು ಜಾರಿದನೇ?!!!
ಕಾಲ್ಡ್‌ವೆಲ್ ಕಾಲು ಜಾರಿದನೇ?!!!
----------------------------
ಬ್ರಿಟಿಷರು ನಮ್ಮನ್ನಾಳುತ್ತಿದ್ದಾಗ ಬರೆಯಲ್ಪಟ್ಟ ಹೊತ್ತಗೆಗಳು ಪರಮ ಸತ್ಯವನ್ನೇ ಹೇಳುವುವೆಂದು ನಂಬಿರುವವರು ಸ್ವಾತಂತ್ರ್ಯಾನಂತರ ಬರೆಯಲ್ಪಟ್ಟ, ಒಮ್ಮೆ ಕಣ್ಣಾಡಿಸಬೇಕಾದ ಕೆಲವು ಪುಸ್ತಕಗಳಿವೆ.
ಭಾರತೀಯ ಇತಿಹಾಸತಜ್ಞರೂ ಸಂಶೋಧಕರೂ, ಆರ್ಯರ ದಾಳಿ ಹಾಗೂ ದ್ರಾವಿಡ-ಸಕ್ಕದ ಮೂಲಭೇದ ಎನ್ನುವ ಸುಳ್ಳುಗಳನ್ನು ಹೇಗೆ ಅಲ್ಲಗಳದಿದ್ದಾರೆ ಓದಿ ನೋಡಿ:
ಎನ್.ಆರ್. ವರದಪಾಂಡೆ ಯವರ "ಆರ್ಯರ ದಾಳಿಯೆಂಬ ಕಟ್ಟುಕತೆ" The Aryan Invasion, a Myth
ಎನ್.ಎಸ್. ರಾಜಾರಾಂ ರವರ "ಇತಿಹಾಸದ ರಾಜಕೀಯ" The Politics of History
ಕಾಲ್ಡ್‌ವೆಲ್ ಎಂಬ ದ್ರಾವಿಡಭಾಷಾ ಜನಕನ ಕತೆಯೂ ಇದೆ; ನಲ್ವತ್ತು ವರ್ಷಗಳ ನಂತರ ಅದರ ಮೇಲೆ ರಚಿತವಾದ ದ್ರಾವಿಡ ಎಟಿಮೊಲಜಿ ಎಂಬ ಗ್ರಂಥದ ದ್ವಂದ್ವನೀತಿಯೂ ಅರಿವಾಗುತ್ತದೆ. ನಾಣ್ಯದ ಇನ್ನೊಂದು ಮುಖ ಇಲ್ಲಿದೆ; ಓದಿ ನೋಡಿ.
ತಮ್ಮ ವಾದವಲ್ಲದೆ ಬೇರೆ ಇರಲು ಸಾಧ್ಯವೇ ಇಲ್ಲ ಎನ್ನುವವರಿಗೆ, ಪುರಾವೆಗಳಿಗೆ ಹಲುಬುವವರಿಗೆ ಇದು ಒಂದು ಸಣ್ಣ ಸ್ಯಾಂಪಲ್! ಇಂತಹವು ಹಲವಾರಿದೆ; ಒಂದೊಂದಾಗಿ ಕೊಡೋಣ!!
ನಿಮ್ಮವ
ಬೆನಕ

- Login or register to post comments
- 824 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಹೌದು ಬೆನಕರೆ, ಆರ್ಯರು ಬಂದು ದ್ರಾವಿಡರನ್ನು ತುಳಿದು ಮೂಲೆಗೆ ತಳ್ಳಿದರು ಎಂಬ ಕಟ್ಟುಕತೆಯನ್ನು ಅದು ಯಾವಾಗ ಹೊರಹಾಕುತ್ತೀವೋ ಗೊತ್ತಿಲ್ಲ. ಈ ಇಂದ್ರ-ಚಂದ್ರ ಕಥೆ ಭಾರತದ ಪಾಲಿಗೆ ಎಂದೆಂದಿಗೂ ಮಗ್ಗುಲಿನ ಮುಳ್ಳೇ. ಕೆಲವರು ಇದು ಸುಳ್ಳು ಎಂದು ಗೊತ್ತಿದ್ದೂ ತಮ್ಮ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಬೇರೆ ಬೇರೆ ರೀತಿ ಇದನ್ನು ಎಲ್ಲೆಂದರಲ್ಲಿ ತುರುಕುತ್ತಲೇ ಇರುತ್ತಾರೆ.
ಕೆಲವರಂತೂ ಯಾವ ಪಾಟಿ ಇರ್ತಾರೆಂದರೆ, "ನಿನಗೆ ಕನ್ನಡ (ಮೂಲವಾಗಿ ದ್ರಾವಿಡ) ಪದಗಳು ಸಿಗದಿದ್ದರೆ, ಬೇಕಿದ್ದರೆ ಇಂಗ್ಲೀಷ್ ಪದಗಳನ್ನು ಧಾರಾಳವಾಗಿ ಬಳಸು ಆದರೆ ಸಂಸ್ಕೃತ ಮಾತ್ರ ಎಳ್ಳಷ್ಟೂ ಬಳಸಲೇಬೇಡ. ಸಂಸ್ಕೃತ ಒಂಥರಾ ಪರ್ಷಿಯಾ-ಇರಾನಿಯರ ಭಾಷೆ, ಆರ್ಯರ ಭಾಷೆ, ದ್ರಾವಿಡರಾದ ನಮ್ಮನ್ನು ತುಳಿದವರ ಭಾಷೆ" ಅಂತ ತಿಕ್ಕಲು ತಿಕ್ಕಲಾಗಿ ಆಡುತ್ತಾ, ಬೇರೆಯವರ ತಿಳಿವಳಿಕೆಯನ್ನೇ ಪ್ರಶ್ನಿಸುವಂತಹ ಮಾತುಗಳನ್ನು ಪುಂಖಾನುಪುಂಖವಾಗಿ ಒದರುತ್ತಿರುತ್ತಾರೆ. ಇಂತಹ ಮೂರ್ಖತನಕ್ಕೆ ಏನು ಹೇಳಬೇಕೋ ತಿಳಿಯದು.
ಈ ಆರ್ಯ-ದ್ರಾವಿಡ ಭೂತ ಎಷ್ಟರ ಮಟ್ಟಿಗಿದೆ ಎಂದರೆ ನೋಡಿ, ಕಳೆದ ವಾರ "What is to be done with Sathe" ಎಂಬ ಒಂದು ಇಂಗ್ಲೀಷ್ ನಾಟಕವನ್ನು ರಂಗಶಂಕರದಲ್ಲಿ ನೋಡಿದೆ. ಇದನ್ನು ನಡೆಸಿಕೊಟ್ಟದ್ದು, ಚೆನ್ನೈನ ಒಂದು ತಂಡ. ನಾಟಕದ ಥೀಮ್ ಚೆನ್ನಾಗಿದ್ದರೂ, ಇಲ್ಲಿಯೂ ಈ ಆರ್ಯ-ದ್ರಾವಿಡ ಸುಳ್ಳು ಇತಿಹಾಸವನ್ನು ತುರುಕಿದ್ದರು. ಗಂಡ ಹೆಂಡತಿ ಜಗಳ ಆಡ್ತಾ ಇರ್ತಾರೆ, ಹೆಂಡತಿ ಗಂಡನನ್ನು ಬದ್ಯಾಗ, ಗಂಡ ಅವಳಿಗೆ ಬಯ್ಯುವುದು ಹೀಗೆ. "Aaaa!!! Now I know, you are an Aryan. Did you not exploit the Adivasis, the Dravidas and got your work done!!!!!!!!". ಸದ್ಯ, ಈ ಆರ್ಯ-ದ್ರಾವಿಡ ಭೂತ ಕನ್ನಡದವರಿಗೆ ಹಿಡಿಯದಿದ್ದರೆ ಸಾಕು.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಅದು ನಿಜ - ತಮಿಳಿನಲ್ಲಿ ದಿನಬಳಕೆಯಲ್ಲಿ ಇರುವ ಬೇರೆ ಭಾಷೆಯ ಪದಗಳು (ಸಂಸ್ಕೃತ ಎಂದು ಓದಿಕೊಳ್ಳಿ
ಬೇಕಾದವರು!) ಬೇರೆಕಡೆಯಿಂದ ಬಂದವು ಎಂದು ಅರಿಯದೇ, ಅದರ ಬಗ್ಗೆ ಭಾಷಣ ಕುಟ್ಟುವವರನ್ನು ಬೇಕಾದಷ್ಟು ಜನರನ್ನು ನೋಡಿದ್ದೇನೆ!
-ಹಂಸಾನಂದಿ
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಸ್ವಾಮೀ ಮಹೇಶರೆ,
ದಪ್ಪ ಅಕ್ಷರಗಳಲ್ಲಿ ಬರೆದುಬಿಟ್ಟರೆ ದಿಟ ಸಟೆಯಾಗಿಬಿಡುವುದಿಲ್ಲ. ಮೊದಲು ನಾನು ಹೇಳಿದ ಪುಸ್ತಕಗಳನ್ನು ತಿರುವಿ ಹಾಕಿ; ದ್ರಾವಿಡ ಭಾಷೆಗೂ ಆರ್ಯರ ದಾಳಿ ಎಂಬ ಕತೆಗೂ ನಂಟಿದೆಯೋ ಇಲ್ಲವೋ ನಿಮಗೇ ತಿಳಿಯುತ್ತದೆ. ಆಮೇಲೆ ಮಾತಾಡೋಣ. ಬೇಕಾದರೆ ಈ ವಿಷಯ ಪ್ರಾರಂಭವಾಗುವ ಪುಟ ಸಂಖ್ಯೆಯನ್ನೂ ಹೇಳುತ್ತೇನೆ - ಮೊದಲ ಪುಸ್ತಕದ ೧೯-೨೧ ಪುಟ; ಎರಡನೆಯದರಲ್ಲಿ ೧೪-೧೫ ಪುಟ.
ಮಾಕ್ಸ್ ಮುಲ್ಲರ್ ನನ್ನೇಕೆ ಬಯ್ಯುವಿರಿ? ಅವನು ಕಂಟ ಮಾತ್ರ; ಹಿಡಿದವರಾರೋ! ಅವನ ಈ ವಾದವನ್ನು ಭಾರತೀಯ ಪಂಡಿತರು ಆಗಲೇ ಖಂಡಿಸಿದ್ದರೂ, ಅವೆಲ್ಲ ಈಚೆಗೆ ಬರಲೇ ಇಲ್ಲ! ಸಂದೇಹವಿದ್ದರೆ, ಸ್ವಾಮಿ ದಯಾನಂದ ಸರಸ್ವತಿ, ಮಹರ್ಷಿ ಅರಬಿಂದೋ, ಸ್ವಾಮಿ ವಿವೇಕಾನಂದರು ಈ ಬಗ್ಗೆ ಬರೆದಿರುವುದನ್ನು ಓದಿ.
ಸ್ವಾಮೀ ಜಿ.ಸಿ ಯವರೆ,
ದಬ್ಬಾಳಿಕೆ ನಡೆಸಿ, ನಮ್ಮನ್ನು ಒಡೆಯಲು ತಂತ್ರಹೂಡಿದ ಪಾಶ್ಚಾತ್ಯರು ಕ್ರೈಸ್ತ ಮಿಶನರಿಗಳ ಕೈಲಿ ಬರೆಸಿದ ಗ್ರಂಥವಾದರೆ ಮಾತ್ರ "ಸತ್ಯ"; ಭಾರತೀಯರು ಹೇಳಿದರೆ "ಹಿಂದುತ್ವವೋ"? ಈ ರಾಜಕೀಯ ಬುದ್ಧಿಯಿರುವುದರಿಂದಲೇ ಸ್ವಾಮೀ ನಮಗಿನ್ನೂ ಏಳಿಗೆಯಾಗಿಲ್ಲ!
ಸುನಿಲರೇ,
ಧನ್ಯವಾದ; ನನ್ನ ಉದ್ದೇಶ "ಒಡೆಯುವುದಲ್ಲ; ಒಗ್ಗೂಡಿಸುವುದು" ಎಂದು ನಿಮಗೆ ತಿಳಿಯಿತೆಂದುಕೊಳ್ಳುತ್ತೇನೆ. ಪರಕೀಯವಾದ ಭಾಷೆ ಬಳಸಿದರೂ ಚಿಂತೆಯಿಲ್ಲ; ಸಕ್ಕದ ಮಾತ್ರ ಕೂಡದೆಂದರೆ ನಗುವುದೋ ಅಳುವುದೋ ತಿಳಿಯದಾಗಿದೆ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಬೆನಕರೇ ಮೊಂಡುತನ ಬಿಡುವಂತವರಾಗಿ.
ಸುಮ್ನೆ ಹಟಹಿಡಿದು, ಮಕ್ಕಳಂತೆ ರಚ್ಚೆ ಹಿಡಿಯಬೇಡಿ!
ನಿಮಗೆ ನಾನು ಬರೆದುದು ತಲೆಗೆ ಹೋಗಿಲ್ಲ. ಮರಳಿ ಮೊಂಡು. ನೀವು ಹೇಳಿದ್ದನ್ನೇ ಹೇಳ್ತಾರಿ. ಅದು ಸುಳ್ಳು
ಸರಿ, ನಾನು ಅವನ್ನು ಹುಡುಕಿ ಓದುವೆನು. ಆದರೆ ತಾವು Cadwell ಬರೆದಿರುವ ಹೊತ್ತಗೆ ಓದಲೇ ಬೇಕು. ನೀನು Cadwell ಅನ್ನು Max Mullerನ racistವಾದಕ್ಕೆ ಕಾರಣ ಇಲ್ಲದೇ, ನಿಮ್ಮ ಭಾಂತಿ ಇಂದಲೇ ತಾಳೆಹಾಕುತ್ತಿದ್ದೀರಿ. ನಿಮ್ಮ ಮೊಂಡುಭ್ರಾಂತಿಗೆ reasonablity ಹೊರಟು ಹೋಗಿದೆ. ನಾನು ಇದನ್ನೇ ಅಲ್ಲೂ ಹೇಳಿದ್ದು, ಮೊದಲು
"Cadwell ಬರೀ ಜನಾಂಗೀಯವಾದ ಮುಂದಿಟ್ಟು "Comparitive grammar of Dravidian languages" ಬರೆದ ಅಂತ ತೋರಿರಿ. ಈ ಹೊತ್ತಗೆ ಇಲ್ಲೇ ನೆಟ್ಟಲ್ಲಿ ಇದೆ.
ದಪ್ಪ-ಸಣ್ಣಕ್ಷರ ಕಟ್ಟಿಕೊಂಡು ನಿಮಗೇನು? ಮೊದಲು ವಿಷಯ ಓದಿ, ವಿಷಯದ ಮೇಲೇ ಮಾತಾಡಿ, ಕುಂಟುನೆಪ ಹೂಡಿ, ಏನೇನೋ ಯಾವುದ್ಯಾವುದಕ್ಕೆ ನಂಟು ಎಳೆದು ನಿಮ್ಮ ಭ್ರಾಂತಿಯನ್ನೇ ಪರಮ ಸತ್ಯ ಅಂತ ಹೇಳಿಕೊಂಡಿರಬೇಡಿ.
ನಿಮ್ಮ ಇತಿಹಾಸಕಾರರ ಮೇಲೇ ಆಗಲೇ ಅನುಮಾನ ಗೂಬೆ ಕೂತಾಗಿದೆ. ಆದರೂ ನಾನು ನಿಮ್ಮಂತೆ ಮೊಂಡುತನಕ್ಕೆ ಬಿದ್ದು ಅವರನ್ನು ಅನುಮಾನದಿಂದ ನೋಡುತ್ತಲೇ ಇರೊಲ್ಲ. ಹುಡುಕಿ ಓದ್ತೀನಿ.
ಭ್ರಾಂತಿ! ರೀ ಇದಕ್ಕೆ Cadwellಗೂ ಏನು ನಂಟು? ದೊಡ್ಡ ದೊಡ್ಡದಾಗಿ "ಸ್ವಾಮಿ ದಯಾನಂದ ಸರಸ್ವತಿ, ಮಹರ್ಷಿ ಅರಬಿಂದೋ, ಸ್ವಾಮಿ ವಿವೇಕಾನಂದರು" ಇಂತವರ ಹೆಸರನ್ನು ನಿಮ್ಮ ಭ್ರಾಂತವಾದಕ್ಕೆ ಮೊಂಡುತನಕ್ಕೆ ಯಾಕೆ ತರ್ತೀರ?
ನಿಮಗೆ ಹೇಳಿದ್ದರು ತಲೆಗೆ ಇಳಿತಾನೇ ಇಲ್ಲ. ಅದಕ್ಕೆ ದಪ್ಪದಾಗಿ ಬರೆಯಬೇಕು
Aryan Invasion Theoryಗೂ Dravidian languages ಎಂಬ linguistic divisionಗೂ ಯಾವ ನಂಟೂ ಇಲ್ಲ.
Cadwell ಈ theoryಅನ್ನು ಅವನ ಹೊತ್ತಗೆಯಲ್ಲಿ ಹೇಳಿಲ್ಲ,
ಆದುದರಿಂದ ಈ ಪಾಪವನ್ನು Cadwell ತಲೆಗೆ ಕಟ್ಟುವುದು ತಪ್ಪ
ದಯವಿಟ್ಟು Cadwell ಬರೀ ಜನಾಂಗೀಯವಾದ/racist argument ಮುಂದಿಟ್ಟು "Comparative Grammar of the Dravidian Languages" ಬರೆದಿದ್ದಾನೆ ಅನ್ನೋದಕ್ಕೆ ಪುರಾವೆ ಬೇಕೇ ಬೇಕು. ಇಲ್ಲದಿದ್ದರೆ ಇದೊಂದು ಕಪಟವಾದ!
ನೀವು ಈ ಕಟ್ಟರವಾದದೋರು, ಎಲ್ಲದನ್ನು ಬ್ರಿಟೀಶರಿಗೆ, ಕ್ರಿಸ್ಚಿಯನ್ ಮಿಶನರಿಗಳಿಗೆ ತಗುಲಿ ಹಾಕಿ ತಮ್ಮ ಭ್ರಾಂತಿ, ಅನುಮಾನಗಳಲ್ಲೇ ಬದುಕುವ ಕೆಲವನ್ನು ಮಾಡುತ್ತಿದ್ದೀರಿ. ತುಸು ನೋಡಿ...
ಇಂತು Cadwell ಅನ್ನೋ ದ್ರಾವಿಡ ಭಾಷೆ ಪಂಡಿತನ ಮೇಲೆ ಬೆನಕರು+ಬೆಂಬಲ ಹೊರೆಸಿರುವ ದೂರುಗಳೆಲ್ಲ ಪುರಾವೆ ಇಲ್ಲದ ಕಟ್ಟುಗತೆ.
Aryan Invasion Theory ಶುರು ಮಾಡಿದವನು "Max Muller ಎನ್ನುವ ಸಂಸ್ಕೃತ ವೇದ ಪಂಡಿತ", Cadwell ಗೂ ಈ theoryಗೂ ಯಾವ ನಂಟಿಲ್ಲ
ಎಂದು ತರ್ಕ ಮತ್ತು ಸಾಕ್ಷ್ಯಾಧಾರಗಳು ಹೇಳುವುವು. ಮೊಂಡುತನಕ್ಕೆ ಏನು ಮಾಡಕ್ಕೆ ಆಗಲ್ಲ
ಮತ್ತೆ ಇದಕ್ಕೆ ಇನ್ನೊಂದು ಮೊಂಡು ಉತ್ತರ ಬರೆದು, ಇನ್ನು ಏನನ್ನೋ ಯಾವುದಕ್ಕೋ ತಗುಲಿ ಹಾಕಿದರೆ....ರಾಮ ರಾಮ!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಎರಡೂ ಅಸ್ಟೇ, ಕನ್ನಡಿಗರಿಗೆ ಆಡೋಕೆ ತೊಡಕು ತೊಡಕು. ಅಯ್ಯೋ ಸಾರ್, ಹಿಂದೊಮ್ಮೆ ಕುಕ್ಕಟ ಸಾಕಾಣಿಕಾ ಕೇಂದ್ರ, ಮುಂತಾದವುಗಳ ಬಗ್ಗೆ ನೀವೇ ನೊಂದಿದ್ದಿರಲ್ಲವಾ? ಆಡು ಮಾತಲ್ಲೇ ಬೇಕಾದಸ್ಟಿರುವ ಕನ್ನಡ ಪದಗಳನ್ನು ಬಿಟ್ಟು, ಬರವಣಿಗೆಯಲ್ಲಿ ನಾವು ಸಂಸ್ಕ್ರುತ ಪದಗಳನ್ನು ಸುಮ್ಮಸುಮ್ಮನೆ ಬಳಸುತ್ತಾ ಇದೀವಲ್ಲಾ, ಇದು ದಿಟವಾಗಿ ಬೇಸರದ ಸಂಗತಿ.
ನನ್ನ ಮಟ್ಟಿಗೆ ಹೇಳೋದಾದರೆ ಸಕ್ಕದದ ಬಗ್ಗೆ ನನಗ್ಯಾವ ಬೇಸರಾನೂ ಇಲ್ಲಾ. ನನಗೆ ಬೇಸರವಿರುವದು ಇಂಗ್ಲೀಸಿಂದ ಏನನ್ನಾದರು ಕನ್ನಡಕ್ಕೆ ಇಳಿಸುವಾಗ, ಮಂದಿಗೆ ತೊಡಕಿಲ್ಲದೆ ಆಡಲು ಆಗುತ್ತಾ ಅಂತ ನೋಡದೆ, ಹಂಗಗೆ ಸಂಸ್ಕ್ರುತದಿಂದ ಕಡ ತರೋದರ ಬಗ್ಗೆ. ಇದಕ್ಕೆ ಮಾದರಿ ಬೇಕಾದಸ್ಟು ಸಿಗುತ್ತವೆ, ಕುಕ್ಕುಟ ಪಾಲನಾ ಕೇಂದ್ರ , ಮುಖ್ಯ ಅಬಿಯಂತರರು, ದೂರವಾಣಿ, ಇಂತವು.
ಇಂತ ಕನ್ನಡವಲ್ಲದ ಕನ್ನಡ ತಂದು, ತುಗೊಳ್ರಪಾ ಕನ್ನಡ ಪದ ಅಂತ ಕೊಟ್ರೆ ಮಂದಿ ತಗೊಳ್ಳೊಲ್ಲಾ, ಕನ್ನಡದ್ದೇ ಪದ ಕನ್ನಡದಲ್ಲಿ ಚೆನ್ನಾಗಿ ಕೂಡಿಕೊಳ್ಳುತ್ತೆ, ಅದನ್ನು ಮಂದಿ ತಗೋತಾರೆ, ಅದಕ್ಕೆ ಅಪ್ಪಟ ಕನ್ನಡ ಪದವನ್ನೇ ಗುರುತು ಮಾಡಬೇಕು ಇಲ್ಲಾ ಕನ್ನಡ ಗ್ರಾಮರ್ ಬಳಸಿಕೊಂಡು ಪದವನ್ನು ಹುಟ್ಟಿಸಬೇಕು. ಅಂತ ಪದಗಳನ್ನು ಮಂದಿ ಬಳಕೆ ಮಾಡೇ ಮಾಡುತ್ತಾರೆ.
ನನ್ನಿ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
@ಸಂಗನ, @ವೈಭವ,
ಇಲ್ಲಿ ನೋಡಿ, ಜ್ಞಾನದ ತುಡಿತವನ್ನು ತುಂಬಿಸುವ ನುಡಿ. ಇಲ್ಲಿ ನಾನು ಒತ್ತಿ ಒತ್ತಿ ಹೇಳಿರುವುದು, ಜ್ಞಾನವಲ್ಲದ ಪದಗಳು ಬೇಡ ಅಂತ.
ಆದರೆ ಜ್ಞಾನವಿರುವ ಕಡೆ, ಕನ್ನಡದಲ್ಲಿ ಆಯಾ ಜ್ಞಾನದ ಕಾನ್ಸೆಪ್ಚುಯಲೈಸೇಶನ್ ಆಗುವ ತನಕ, ನಾವೇಕೆ ಬೇರೆ ನುಡಿಯ ಪದಗಳನ್ನು ಬಳಸಬಾರದು. ನೀವುಗಳೇ ಕಂಡಂತೆ random ಎನ್ನುವ ಭಾವಕ್ಕೆ "ಉ" ಎಂಬುದನ್ನು ಬಳಸಿಕೊಳ್ಳಬಹುದು ಎಂಬುದಾಗಿ ತಿಳಿದ ಮೇಲೆ ಅದೆಷ್ಟು ಕಡೆ ನಾನೂ ಸೇರಿದಂತೆ ಇದನ್ನು ಎಷ್ಟೋ ಜನರು ಬಳಸಿಲ್ಲ. ಆದರೆ "ಶಾಸ್ತ್ರೀಯ ಸಂಗೀತ" ಎಂಬುದನ್ನು ಇನ್ನು ಮಂದೆ ಬಳಸಲೇಬೇಡ, ಬೇಕಿದ್ದರೆ "ಕ್ಲಾಸಿಕಲ್ ಮ್ಯೂಸಿಕ್" ಅಂತ ಹೇಳು ಎಂದರೆ ಅದು ತಿಕ್ಕಲುತನ ಆದಂತಾಗುವುದಿಲ್ಲವೇ ?
@ಎಲ್ಲರಿಗೂ,
ಬೆನಕ ಅವರು ತೆರೆದಿರುವ ಈ ಎಳೆಯಲ್ಲಿ "ಆರ್ಯ-ದ್ರಾವಿಡ ಜನಾಂಗವಾದದ" ಕುರಿತು ಹೆಚ್ಚು ಚರ್ಚಿಸೋಣ. ಮಹೇಶ ತೆರೆದಿರುವ Cadwell ಮತ್ತು Comparative Grammar of the Dravidian Languages ಅಲ್ಲಿ ದ್ರಾವಿಡ ನುಡಿ ಗುಂಪಿನ ಬಗ್ಗೆ ಚರ್ಚೆ ನಡೆಸೋಣ. ಏನಂತೀರಾ ನೀವುಗಳು ?
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಹೆಹೆ!!
ಇಲ್ಲಿ Cadwell "ಆರ್ಯ-ದ್ರಾವಿಡ ಜನಾಂಗವಾದ" ಹೇಳಿದ ಅಂತ ನೀನೂ ಒಪ್ಪಿಕೋತೀಯಾ? ಇದನ್ನು ಮೊದಲು ಹೇಳು.
ಬೆನಕರು ಪಾಪಾ ಈ Cadwell ಮಹಾಶಯ ಮೇಲೆ ಹೊರೆಸಿರುವ ದೂರು ಏನು ಹುಡುಗಾಟದ ಮಾತಲ್ಲ. Cadwell ಅನ್ನು ಜನಾಂಗವಾದಿ/racisit ಅಂತ ಅಂದ ಹಾಗೆ.
ಇಲ್ಲಿ ಇವರ ನೇರೆ ಆರೋಪದ ಬಗ್ಗೆ ಮಾತುಗತೆ.
ಇನ್ನು ಸಂಗನ, ವೈಬವ, ಹಂಸಾನಂದಿ ಎಲ್ಲಿ ಎಲ್ಲಿ ಮಾತಾಡಬೇಕು ಮಾತಾಡ್ತಾನೇ ಇದ್ದಾರಲ್ಲ.
ದಾರಿತಪ್ಪಿಸಬೇಡ! ಎರವಲು ಒರೆಗಳ ಮಾತು, ನಿನ್ನ "ಜ್ಞಾನದ ತುಡಿತವನ್ನು ತುಂಬಿಸುವ ನುಡಿ.", conceptulization, ನೀನು ಒತ್ತಿ ಒತ್ತಿ ಹೇಳಿದವು ಇವೆಲ್ಲ ಅತ್ತ ಇರಲಿ, ಅದು ಬೇರೆ ವಿಷಯ. ಇಲ್ಲಿಯ ಸಂಗತಿಯೇ ಬೇರೆ.
ಅಷ್ಟೇ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
@ಮಹೇಶ,
ಅಪ್ಪಾ ಮಾಯ್ಸ, ಸ್ವಲ್ಪ ಎಲ್ಲದಕ್ಕೂ ಬಾಯಿ ಹಾಕಿ ವೈವಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸು. ನಾನು ಏಕೆ ಆ ಕಾಮೆಂಟ್ ಬರೆದೆ ಎಂದರೆ ಸಂಗನ ಮತ್ತು ವೈಭವ ನನ್ನನ್ನು ಕೇಳಿದ್ದಕ್ಕೆ.
ಅಷ್ಟಕ್ಕೂ ನಾನು ಆ ಕಾಮಂಟ್ ಬರೆದಿರುವುದು ಸಂಗನ ಮತ್ತು ವೈಭವರಿಗೆ. ಇದನ್ನು ಅರ್ಥಮಾಡಿಕೊಳ್ಳದೆ, ಈ ಕೆಳಗಿನ ಕಾಮೆಂಟಿನಂತೆ
ಬೇರೆಯವರು ಬರೆಯುವುದರ ಬಗ್ಗೆ ಹಗುರವಾಗಿ ಕುಹಕವಾಡಬೇಡ. ಈ ನಿನ್ನ ಕಾಮೆಂಟಿನಿಂದ ತಿಳಿಯುತ್ತೆ,
ಎಷ್ಚು ವೈಯಕ್ತಿಕ ಹಿನ್ನೆಲೆಯಿಂದ ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸುತ್ತೀಯಾ ಅಂತ. ಇದು ಸರಿಯಲ್ಲ. ಇನ್ನು ಕಾಡ್ವೆಲ್ ವಿಷಯ. ನಾನು ಬರೆದ ಕಾಮೆಂಟನ್ನು ನೀನು ಸರಿಯಾಗಿ ಮೊದಲು ಓದು. ಲಿಂಕ್ ಇಲ್ಲಿದೆ. ಅಲ್ಲಿ ನನಗೆ ತಿಳಿಯದ ಕಾಡ್ವೆಲ್ ವಿಚಾರದ ಬಗ್ಗೆ ಏನನ್ನೂ ಹೇಳಿಯೇ ಇಲ್ಲ. ನಾನು ಬರೆದಿರುವುದು, "ಆರ್ಯ-ದ್ರಾವಿಡ ಜನಾಂಗ" ವಿಷಯದ ಬಗ್ಗೆ. ಇದು ನಿನಗೆ ತಲೆಗಿಳಿಯದೆ, ಬೇರೆಯವರು ಬರೆದ ಕಾಮೆಂಟನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ದಪ್ಪದಪ್ಪ ಅಕ್ಷರಗಳಲ್ಲಿ ಹೀಗೆ ವೇದಿಕೆಗಳಲ್ಲಿ ಎಗರಾಡಿದರೆ ಅದಕ್ಕೆ ನೀನೇ ಜವಾಬ್ದಾರ. ಮೊದಲು ಬೇರೆಯವರು ಏನು ಬರೆಯುತ್ತಾರೆ ಎಂಬುದನ್ನು ಸರಿಯಾಗಿ ಓದು.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಅಣ್ಣ!!
ವಿಷಯದ ಬಗ್ಗೆ ಬರೆಯೋ!! ಅಷ್ಟೇ!!
"ಅಲ್ಲಿ ನನಗೆ ತಿಳಿಯದ ಕಾಡ್ವೆಲ್ ವಿಚಾರದ ಬಗ್ಗೆ ಏನನ್ನೂ ಹೇಳಿಯೇ ಇಲ್ಲ. " ಅದನ್ನೇ ನಾನು ಹೇಳಿದ್ದು. ಆ ವಿಷಯದ ಬಗ್ಗೆ ಹೇಳೂ.. ನಿನ್ನ conceptualization ಎಲ್ಲ ಬೇರೆಯಡೆ ಚರ್ಚೆಯಾಗಿದೆ.
ನಾನು ನಿನ್ನ ಬಗ್ಗೆ ವೈಯಕ್ತಿಕವಾಗಿ ಏನು ಹೇಳಿಲ್ಲ. ನಿನಗೆ ವಿಷಯದ ಬಗ್ಗೆ ಬಗ್ಗೆ ಬರೆಯಲು ಹೇಳಿದ್ದೀನಿ. ಅಷ್ಟೇ!! ಸುಮ್ನೆ ಯಾಕೆ ಮಾತನ್ನು ಎಲ್ಲೆಲ್ಲಿಗೋ ಒಯ್ತೀಯ..
"Cadwell racist ಹೌದು ಅಲ್ಲ" ಇದು ಇಲ್ಲಿ ಚರ್ಚೆ ಅಷ್ಟೇ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ತಮ್ಮಾ, ನೀನು, ನನ್ನ ಮತ್ತು ಸಂಗನನ(ಮತ್ತು ವೈಭವರ) ನಡುವೆ ಬರುವ ತನಕ ಚರ್ಚೆಗೆ ಪ್ರಸ್ತುತವಾಗಿಲ್ಲದ್ದನ್ನು ನಾನೇನ್ನನ್ನೂ ಬರೆದಿರಲಿಲ್ಲ. ಅಂದಹಾಗೆ ನೀನೆಂದುಕೊಂಡಂತೆ
ಎಂಬುವಷ್ಟು ಚಿಕ್ಕದಾಗಿ ಏನು ಈ ಚರ್ಚೆ ಇಲ್ಲ. ಒಂದೇ ವಸ್ತುವಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿ ಹುಟ್ಟುತ್ತದೋ ಹಾಗೆ, ನಾನು "ಆರ್ಯ-ದ್ರಾವಿಡ" ಜನಾಂಗದ ಬಗ್ಗೆ ನನ್ನ ನಿಲುವು ಹೇಳಿದೆ, ನಿನಗೆ ಕಾಲ್ಡವೆಲನ ಬಗ್ಗೆ ಮಾತನಾಡಬೇಕೆನಿಸಿತು. ಅಷ್ಟಕ್ಕೆ ಇಷ್ಟೆಲ್ಲ ಎಗರಾಡಿ, ದಪ್ಪ ದಪ್ಪ ಕೆಂಪು ಅಕ್ಷರಗಳಲ್ಲೇಕೆ ನನ್ನ ಮೇಲೆ, ಬೆನಕ ಅವರ ಮೇಲೇಕೆ ಎಗರಾಡುತ್ತೀಯಾ. ಹಾಗೆಯೇ, "ನಿನ್ನ conceptualization, ನಿನ್ನ ವಿಷಯ" ಅಂತ ಏಕೆ ಹಗುರವಾಡುತ್ತೀಯಾ. ಆ ಚರ್ಚೆಗಳನ್ನು ಮುಂದೆಮಾಡಿದ್ದಷ್ಟೇ ನಾನು. ಆಯಾ ಚರ್ಚೆಗಳಲ್ಲಿ ನೀವುಗಳೂ ಭಾಗವಹಿಸಿದ್ದೀರಿ. ಸರಿ ಈಗ ಇಲ್ಲಿ ನೋಡು. ನನ್ನ ಕಾಮೆಂಟ್. ಕೊಂಕಲ್ಲದೆ ಚರ್ಚೆಗೆ ಸಂಬಂಧಿಸಿದ ಹೊಸತಾದ ಸಂಗತಿಯನ್ನು ಹೇಳುವುದಿದ್ದರೆ ಯಾವುದೇ html ಫಾರ್ಮಾಟುಗಳಿಲ್ಲದ ಅಕ್ಷರಗಳಲ್ಲಿ ಹೇಳು ಅಲ್ಲಿ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಅಯ್ಯೋ
ಉಪದೇಶ ಸಾಕು..
ಇಷ್ಟು ಹೇಳು "ಕಾಲ್ಡ್‌ವೆಲ್ ಕಾಲು ಜಾರಿದನೇ?!!!"
ನಾನು ನಿನ್ನ ವೈಯಕ್ತಿಕ, conceptualization ಬಗ್ಗೆ ಏನು ಬರೆದಿಲ್ಲ ಇಲ್ಲ. ಕುಳಿರಾಗಿರು!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಕುಳಿರಾಗಿದ್ದೇನಪ್ಪಾ. ಮೊದಲು ಬೇರೆಯವರು ಏನು ಬರೆಯುತ್ತಾರೆ ಅಂತ ಓದು. ನೀನು ಕೇಳಿದ್ದನ್ನು ಈಗಾಗಲೇ ಬರೆದಾಗಿದೆ. ನೋಡಲ್ಲಿ

ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
http://sampada.net/forum/5195#comment-10415
ನೋಡಲ್ಲಿ!
"ಕಾಲ್ಡ್‌ವೆಲ್ ಕಾಲು ಜಾರಿದನೇ?!!!?"
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ನೋಡಲ್ಲಿ ಸಂಗನ ಏನು ಹೇಳಿದ ಅಂತ!!
http://www.sampada.net/forum/5195#comment-10335
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಸುನೀಲ್,
ನಿಮ್ಮ ಆ ಬರಹಕ್ಕೂ ಈ ಬರಹಕ್ಕೂ ನಂಟೇ ಇಲ್ಲಾ.
ಕಂಡುಕೊಂಡದ್ದನ್ನು ಬಳಕೆ ಮಾಡಿ. ನಾವು ಮಾಡ್ತಾ ಇಲ್ಲವಾ? ಇಲ್ಲಿ ಬೆನಕರು ಯಾವುದಕ್ಕೋ ಇನ್ಯಾವುದನ್ನೋ ತಳುಕು ಹಾಕಿದ್ದಾರೆ. ಅದರ ಬಗ್ಗೆ ಮಾತಾಡಿ. ಇಲ್ಲಿ ಬೆನಕರು ಕಾಲ್ಡ್ ವೆಲ್‍ನನ್ನು ರೇಸಿಸ್ಟ್ ಅಂತಾ ಮಾಡಿ, ಅವನು ಹೇಳಿದ್ದನ್ನು ಅಲ್ಲಗಳೆಯಲು ನೋಡುತ್ತಿದ್ದಾರೆ, ಅದನ್ನು ನೀವು ಒಪ್ಪುತ್ತೀರಾ?
ಇಲ್ಲಿ ಯಾವುದರ ಬಗ್ಗೆ ಮಾತುಕತೆ ನಡೆದಿದೆ ಅದರ ಬಗ್ಗೆ ಅಸ್ಟೇ ಮಾತಾಡಿ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
"....ಆದರೆ ಜ್ಞಾನವಿರುವ ಕಡೆ, ಕನ್ನಡದಲ್ಲಿ ಆಯಾ ಜ್ಞಾನದ ಕಾನ್ಸೆಪ್ಚುಯಲೈಸೇಶನ್ ಆಗುವ ತನಕ, ನಾವೇಕೆ ಬೇರೆ ನುಡಿಯ ಪದಗಳನ್ನು ಬಳಸಬಾರದು...."
ಗ್ನಾನ್ದ ಕಾನ್ಸೆಪ್ಚುಯಲೈಸೇಸನ್ ಆಗುವ ತನಕ ಅಂದರೆ ಯಾವಾಗ? ಆ ಹೊತ್ತು ಬರುತ್ತೆ ಅಂತ ನಾವು ಕಾಯುತ್ತಾ ಕೂತಿರಬೇಕಾ?
ಸುನೀಲರೆ,
ಈಗ 'ನನ್ನಿ' , 'ಸವಿಯೊದಗು' ನಾವೆಲ್ಲರೂ ಬಳಸುತ್ತಿಲ್ಲವೆ? ಕೆಲವು ಮೊಂಡರು ಬಳಸಿದದ್ದರೆ ನಾವೇನೂ ಮಾಡಲಾಗುವುದಿಲ್ಲ.
"...ಆದರೆ "ಶಾಸ್ತ್ರೀಯ ಸಂಗೀತ" ಎಂಬುದನ್ನು ಇನ್ನು ಮಂದೆ ಬಳಸಲೇಬೇಡ, ಬೇಕಿದ್ದರೆ "ಕ್ಲಾಸಿಕಲ್ ಮ್ಯೂಸಿಕ್" ಅಂತ ಹೇಳು ಎಂದರೆ ಅದು ತಿಕ್ಕಲುತನ ಆದಂತಾಗುವುದಿಲ್ಲವೇ ..."
ಯಾರು ಹೇಳಿದ್ದು ಈ ತರ ? ಇದು ನಿಮ್ಮ ತಪ್ಪು ತಿಳುವಳಿಕೆ. ನೀವು 'ಶಾಸ್ತ್ರೀಯ ಸಂಗೀತ' ಕ್ಕೆ ಕನ್ನಡದ ಒರೆ ಕೊಡಿ. ಆಗ ಮಂದಿ ನೋಡಿ ಇಶ್ಟ/ಸಲೀಸು ಆದ್ರೆ ಬಳಸ್ತಾರೆ. 'ಕ್ಲಾಸಿಕಲ್ ಮ್ಯೂಸಿಕ್' ಬೇಕೆ ಅನ್ನುವ 'ಮೊಂಡರು' ಯಾರು ಇಲ್ಲ ಅನ್ಕೊಂಡಿದೀನಿ.
ಈಗ ಇದು ಸಾಕು. ಕಾಲ್ಡ್ ವೇಲ್ ನ ಹೊತ್ತಗೆ ಬಗ್ಗೆ ಮಾತಾಡೋಣ.
ನಾನು ಹೊತ್ತಗೆಯನ್ನು ತಿಳಿಯಾಗಿ ತಿರುವಿ ಹಾಕಿದೆ. ನನಗೆ ಕಾಲ್ಡ್ ವೆಲ್ ಯಾವುದೇ ಬುಡಕಟ್ಟಿಗೆ/ಜನಾಂಗಕ್ಕೆ ಅವಹೇಳನ ಮಾಡಿಲ್ಲ. ಅವನು
ತೆಂಕಣದ ನುಡಿಗಳಿಗೆ 'ದ್ರಾವಿಡ' ಎಂಬ ಹೆಸರನ್ನು ಕೊಟ್ಟಿದ್ದಾನೆ ಮತ್ತು ತೆಂಕಣದ ನುಡಿಗಳಲ್ಲಿ ಮತ್ತು ಅವುಗಳ ವ್ಯಾಕರಣಗಳಲ್ಲಿ ಇರುವ ಒಂದೇತನವನ್ನ ಎತ್ತಿ ಹಿಡಿದಿದ್ದಾನೆ.
ಈಗ ನಿಮ್ಮ ತಿಳಿವು/ತಿರುಳು ಹೇಳಿರಿ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಅಯ್ಯೋ ಇಲ್ಲ, ವೈಭವ. ಈ ರೀತಿ ಪುಕ್ಕಟೆಯಾದ ತಿಕ್ಕಲು ಸಲಹೆಗಳನ್ನು ನನಗೆ ಕೆಲವರು ನೀಡಿದ್ದರಿಂದ ಆ ಕಾಮೆಂಟ್ ಹಾಕಿದ್ದೇನೆ. ಸರಿ ಒಪ್ಪಿದೆ, ಆರ್ಯ-ದ್ರಾವಿಡ ಜನಾಂಗವನ್ನು ಕುರಿತು ಹೆಚ್ಚು ಚರ್ಚಿಸೋಣ. ಹೇಳಲು ನನ್ನಲ್ಲಿ ಒಂದು ಗಟ್ಟಿಯಾದ ಪಾಯಿಂಟಿದೆ. ಬೇರೆ ಕಾಮೆಂಟಾಗಿ ಹಾಕುತ್ತೇನೆ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ರೀ ಚನ್ನೀಲ,
ನೀವೇ ಏಟೋಂದು ಸಲ ಬರೆದಿದೀರಿ. ಎಡರಿರುವ ಸಕ್ಕದ ಒರೆಗಳನ್ನು ನಾವು ಬಳಸಬಾರದು. ಅದರ ಬದಲು ಹಳೆಗನ್ನಡದ ಪದಗಳು ಅತವ ಸಲೀಸಾಗಿದ್ದರೆ ಇಂಗಲೀಸನ್ನೇ(ಸೈನ್ಸ್ ಒರೆಗಳಿಗೆ) ಬಳಸಬೇಕು ಅಂತ. ಈಟೋಂದು ಬೇಗ ಮರೆತುಬಿಟ್ಟಿರಾ?
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಎನ್.ಎಸ್. ರಾಜಾರಾಂ ಮತ್ತು ಎನ್. ಝಾ ಎಂಬವರು ಸೇರಿ Indus Script ಅನ್ನು Decrypt ಮಾಡಿದ್ದೇವೆ ಎಂದು ಸುಳ್ಳು ಹೇಳಲಿಲ್ಲವೇ? ಇದರ ಬಗ್ಗೆ Frontline ವಾರಪತ್ರಿಕೆಯಲ್ಲಿ ವಿವರಗಳಿವೆ. Indus Script ಬಗ್ಗೆ ಸ್ವಲ್ಪವಾದರೂ ಗೊತ್ತಿರುವ ನಮ್ಮವರೂ ಮತ್ತು ನಿಮಗೆ ಬೇಡವಾದ ವಿದೇಶಿಯರೂ ರಾಜರಾಂ ಮತ್ತು ಝಾ ಅವರು ವಾದಗಳನ್ನು ತಳ್ಳಿ ಹಾಕಿದ್ದಾರೆ.
http://www.safarmer.com/frontline/taleoftwohorses.pdf
http://www.hinduonnet.com/fline/fl1720/17200040.htm
ರಾಜಾರಾಂ ಮತ್ತು ಝಾ ಅಪ್ಪಟ ಹಿಂದೂವಾದಿಗಳು. ಇಂಥವರ 'ಸಂಶೋಧನೆ'ಯಿಂದ ಸತ್ಯ ಹೊರ ಬಂದೀತೆ? ಪೂರ್ವಾಗ್ರಹಪೀಡಿತರಿಂದ ಸಂಶೋಧನೆ ಸಾಧ್ಯವಿಲ್ಲ. ಎಡ ಪಂಥೀಯ/ಕಮ್ಯೂನಿಸ್ಟರಾದ ಬಂಜಗೆರೆಯವರ ಪುಸ್ತಕದ ಬಗ್ಗೆ ಇತ್ತೀಚೆಗೆ ಸಂಪದದಲ್ಲಿ ಚರ್ಚೆಯಾಗಿತ್ತು. ಇಂತಹ ಉಗ್ರ ಪಂಥವಾದಿಗಳಿಂದ ಸತ್ಯ/ಇತಿಹಾಸ ತಿರುಚುವ ಕೆಲಸಗಳು ನಡೆಯುತ್ತಲೇ ಇದೆ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಎನ್.ಎಸ್. ರಾಜಾರಾಂ ಮತ್ತು ಎನ್. ಝಾ ಎಂಬವರು ಸೇರಿ Indus Script ಅನ್ನು Decrypt ಮಾಡಿದ್ದೇವೆ ಎಂದು ಸುಳ್ಳು ಹೇಳಲಿಲ್ಲವೇ? ಇದರ ಬಗ್ಗೆ Frontline ವಾರಪತ್ರಿಕೆಯಲ್ಲಿ ವಿವರಗಳಿವೆ. Indus Script ಬಗ್ಗೆ ಸ್ವಲ್ಪವಾದರೂ ಗೊತ್ತಿರುವ ನಮ್ಮವರೂ ಮತ್ತು ನಿಮಗೆ ಬೇಡವಾದ ವಿದೇಶಿಯರೂ ರಾಜರಾಂ ಮತ್ತು ಝಾ ಅವರು ವಾದಗಳನ್ನು ತಳ್ಳಿ ಹಾಕಿದ್ದಾರೆ.
http://www.safarmer.com/frontline/taleoftwohorses.pdf
http://www.hinduonnet.com/fline/fl1720/17200040.htm
ರಾಜಾರಾಂ ಮತ್ತು ಝಾ ಅಪ್ಪಟ ಹಿಂದೂವಾದಿಗಳು. ಇಂಥವರ 'ಸಂಶೋಧನೆ'ಯಿಂದ ಸತ್ಯ ಹೊರ ಬಂದೀತೆ? ಪೂರ್ವಾಗ್ರಹಪೀಡಿತರಿಂದ ಸಂಶೋಧನೆ ಸಾಧ್ಯವಿಲ್ಲ. ಎಡ ಪಂಥೀಯ/ಕಮ್ಯೂನಿಸ್ಟರಾದ ಬಂಜಗೆರೆಯವರ ಪುಸ್ತಕದ ಬಗ್ಗೆ ಇತ್ತೀಚೆಗೆ ಸಂಪದದಲ್ಲಿ ಚರ್ಚೆಯಾಗಿತ್ತು. ಇಂತಹ ಉಗ್ರ ಪಂಥವಾದಿಗಳಿಂದ ಸತ್ಯ/ಇತಿಹಾಸ ತಿರುಚುವ ಕೆಲಸಗಳು ನಡೆಯುತ್ತಲೇ ಇದೆ.
ಜಿಸಿಯವರೆ,
ರಾಜಾರಾಮ್ ಅವರೇ ಆಗಲಿ, ಬೇರೆಯವರೇ ಆಗಲಿ, ಇನ್ನೂ ಸಿಂಧೂ ಸರಸ್ವತಿ ಬರವಣಿಗೆಯನ್ನು ಪೂರ್ತಿ ಬಿಡಿಸಲು ಆಗಿಲ್ಲ ಅನ್ನುವುದು ನಿಜವಾದರೂ, ರಾಜಾರಾಮ್ ಮತ್ತು ಝಾ ಹೇಳಿದ್ದು ಪೂರ್ತಿ ಸರಿ ಅಥವ ತಪ್ಪು ಎಂದು ಯಾರಿಗೂ ತೋರಿಸಲಾಗಿಲ್ಲ. ಎಲ್ಲರದ್ದೂ ಪ್ರಯತ್ನಗಳಷ್ಟೇ.
ವಿವಾದವಿದ್ದದ್ದು ನನಗೆ ತಿಳಿದಂತೆ ಮುರಿದ ಮುದ್ರೆಯಲ್ಲಿ ಅವರು ತೋರಿಸಲೆತ್ನಿಸಿದ ಕುದುರೆಯ ಬಗ್ಗೆ; ಹಾಗೆಂದು ಅವರ ಎಲ್ಲ ಕೆಲಸವನ್ನೂ ತಳ್ಳಿಹಾಕುವಂತಿಲ್ಲ.
ರಾಜಾರಾಮ್/ಝಾ/ತಲಗೇರಿ ಮೊದಲಾದವರು ಮಂಡಿಸುವ ವಾದಗಳಿಗೆ ಇರುವ ಕೆಲವು observational astronomy ಯಲ್ಲಿ ಸಿಗುವ (ವೇದಗಳಲ್ಲಿ) ತಳ್ಳಿಹಾಕುವಂತಿಲ್ಲ.
-ಹಂಸಾನಂದಿ
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಕೊನೆಯ ಸಾಲನ್ನು "ಸಿಗುವ ಆಧಾರಗಳನ್ನು ತಳ್ಳಿಹಾಕುವಂತಿಲ್ಲ" ಎಂದು ಓದಿಕೊಳ್ಳಿ.
-ಹಂಸಾನಂದಿ
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
"ವಿವಾದವಿದ್ದದ್ದು ನನಗೆ ತಿಳಿದಂತೆ ಮುರಿದ ಮುದ್ರೆಯಲ್ಲಿ ಅವರು ತೋರಿಸಲೆತ್ನಿಸಿದ ಕುದುರೆಯ ಬಗ್ಗೆ" ಅರೆರೆ...ಕುದುರೆ ಬಗ್ಗೆ ಸುಳ್ಳು ಪುರಾವೆಯನ್ನು ಸ್ರಷ್ಟಿಸಲು ಹೋದದ್ದೇಕೆ? ಸಿಂಧೂ ಸಂಸ್ಕೃತಿಗೂ ಕುದುರೆಗೂ ಏನು ಸಂಬಂಧ? ವೈಚಾರಿಕ ಪ್ರಾಮಾಣಿಕತೆಯಿಂದ ಸ್ವಲ್ಪ ನೋಡಿ. ಸಿಂಧೂ ಲಿಪಿ ದ್ರಾವಿಡ ಮೂಲದ್ದೋ? Aryan Invasionನ್ನೋ? ಅಥವಾ Migrationನ್ನೋ? ಸಾವಿರಾರು ವರ್ಷಗಳ ಹಿಂದಿನ ಘಟನೆಗಳ ಬಗ್ಗೆ ಜಗ್ಗಾಟ ನಡೆಯುವುದು ಸಹಜ. ರಷ್ಯದ Yuri Knorosov, ಫಿನಲ್ಯಾಂಡಿನ Asko Parpola, ಹಾರ್ವರ್ಡ್ ವಿಶ್ವವಿದ್ಯಾಲಯದ Prof. Witzel, ಇತ್ಯಾದಿ ಕ್ರೈಸ್ತ ಮಿಶನರಿಗಳೆ? ಇವರೆಲ್ಲ ಸಿಂಧೂ ಸಂಸ್ಕೃತಿಯ ಬಗ್ಗೆ ಹೇಳುವುದೆಲ್ಲ ತಪ್ಪೇ? Ulterior Motive ಇಟ್ಟುಕೊಂಡಿದ್ದ ಅನೇಕ ವಿದೇಶಿಯರು ನಮ್ಮ ಬಗ್ಗೆ ಬರೆದಿದ್ದಾರೆ. ಅವರ Motiveಗಳನ್ನು ಗುರುತಿಸುವಷ್ಟು ಬುದ್ಧಿ ನಮ್ಮಲ್ಲಿ ಖಂಡಿತ ಇದೆ. ಇದೇ ಮಾತು ದೇಶಿಯ ಸಂಶೋಧಕರಿಗೂ ಅನ್ವಯಿಸುತ್ತದೆ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
gc
ಎನ್.ಆರ್. ವರದಪಾಂಡೆ ಯವರ "ಆರ್ಯರ ದಾಳಿಯೆಂಬ ಕಟ್ಟುಕತೆ" The Aryan Invasion, a Myth
ಎನ್.ಎಸ್. ರಾಜಾರಾಂ ರವರ "ಇತಿಹಾಸದ ರಾಜಕೀಯ" The Politics of History
ಇವರು ಕಟ್ಟರವಾದ ಪೂರ್ವಾಗ್ರಹಪೀಡಿತ ಇತಿಹಾಸಕಾರರೇ? ನಿಮ್ಮ ಮಾತು ಕೇಳೀ ನನಗೆ ಐಬು ಕಂಡಿದೆ.
ಇನ್ನು ಬೆನಕರು ಇಂತವೇ ತಿರುಚುವಾದ ಓದೋದಾ ಅನ್ನಿಸಕ್ಕೆ ಶುರುವಾಯಿತು!
ಅಲ್ಲಾ ಇವರು linguistics ಅನ್ನು racisitವಾದಕ್ಕೆ ತಗುಲಿಹಾಕಿ, ಆದೇ racisit ಕಣ್ಣುಗಳಿಂದ ನೋಡಿಬಿಟ್ಟರು.( ಈ ಇಂತಹ racisit ಕೆಲಸವನ್ನು ಇಲ್ಲಿ ನಾವ್ಯಾರು ಮಾಡಿಲ್ಲ )
======================================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ನನ್ನ ಈ ಕಮೆಂಟನ್ನು ಓದೋರು ದುಡುಕಬೇಡಿ ತುಸು ಮೆಲ್ಲಗೆ ತಾಳ್ಮೆ ತೋರಿ ಓದಿರಿ.
ಮೊದಲು gc ಅವರಿಗೆ ನನ್ನಿ! ಕಟ್ಟರವಾದಿಗಳ ಇತಿಹಾಸವನ್ನು ನಂಬಲು ಹಲವು ಮಂದಿ ಒಪ್ಪಲ್ಲ ಅನ್ನೋದಕ್ಕೆ ನಮ್ಮ gc ಪುರಾವೆ.
ಇನ್ನು ಬೆನಕರು( ಮತ್ತಿವರ ಬೆಂಬಲ) ಎಷ್ಟು ಗೊಂದಲದಿಂದ ಅರೆಬರೆ ತಿಳಿದು ಒಬ್ಬ ದೊಡ್ಡ linguistic ಪಂಡಿತಂಗೆ ಮಸಿ ಬಳೆಯುವ ನೀಚ ಕೆಲಸಕ್ಕೆ ಇಳಿದಿದ್ದಾರೆ( ನೋಡಿ ಮುಂದೆ ).
ನೋಡಿ! ಇವರು "ಕಾಲ್ಡ್‌ವೆಲ್ ಕಾಲು ಜಾರಿದನೇ?" ಎಂದಾಗ ನಾನು ನೀವು Cadwell ಅವರ "Comparative Grammar of the Dravidian Languages" ಬಗ್ಗೆ ಬರೆದಿರ್ತಾರೆ ಅಂತ ಹುರುಪಿಂದ ನೋಡಿದೆ. ಆದರೆ ಇವರು ಪಾಪಾ ಈ ದೊಡ್ಡ ದ್ರಾವಿಡಭಾಷಾವಿದ್ವಾಂಸನನ್ನು "Aryan Invasion Theory" ಎಂಬ ಪಾಪಕ್ಕೆ ಸುಳ್ಳುಸುಳ್ಳೇ ಗಂಟುಹಾಕಿದ್ದೀರಿ.
ಇವರು ಎಷ್ಟು ಗಲಿಬಿಲಿ, ಮುನಿಸು, ಹಠ, ಕಟ್ಟರ ವಿತಂಡವಾದ, ಮೊಂಡುತನದಿಂದ ಈ ಚರ್ಚೆ ಎತ್ತಿದ್ದೀರೋ, ಮಾಹಿತಿಯಲ್ಲಿ ಎಷ್ಟು ತಪ್ಪು ಮಾಡಿದ್ದೀರಿ ಗೊತ್ತಾ?
Aryan Invasion Theoryಗೂ Dravidian languages ಎಂಬ linguistic divisionಗೂ ಯಾವ ನಂಟೂ ಇಲ್ಲ. ಇದನ್ನು Cadwell ಹೇಳಿಯೂ ಇಲ್ಲ
ಇಲ್ಲಿ ನೋಡಿ Cadwell ಬರೆದ ಹೊತ್ತಗೆ.
http://books.google.com/books?id=5PPCYBApSnIC&pg=PA32&ots=0VXxCEH2ax&dq=...
ಇದೇ ಇವನ ದೊಡ್ಡ ಹೊತ್ತಗೆ.
ಪಾಪಾ Cadwell ಮಾಡಿದ್ದು ಇಷ್ಟೇ. ಸಂಸ್ಕೃತ/ಪಾಕೃತದಿಂದ ಬಂದ ನುಡಿಗಳಾದ ಸಂಸ್ಕೃತ, ಪಾಕೃತ, ಹಿಂದಿ, ಮತ್ತು ಅದೇ language familyಗೆ ಸೇರಿದ English, ಇವನ್ನು ನಮ್ಮ ತೆಂಕಣ ಇಂಡಿಯದ ತಮಿಳು, ಕನ್ನಡ, ತೆಲುಗು, ಮಳಯಾಳಿ ಮುಂತಾದವುಗಳ ಜೊತೆ ಹೋಲಿಸಿ, ಅವುಗಳ ವ್ಯಾಕರಣದಲ್ಲಿ ಇರುವ ವ್ಯತ್ಯಾಸಗಳನ್ನು ಲೆಕ್ಕ ಹಾಕಿ,
೧) ಸಂಸ್ಕೃತ ಮತ್ತು ಕನ್ನಡ-ತಮಿಳು ನುಡಿಗಳ ವ್ಯಾಕರಣಗಳಲ್ಲಿ ಬಲು ವ್ಯತ್ಯಾಸವಿದೆ.
೨) ಕನ್ನಡ, ತಮಿಳು, ಮಳಯಾಳಿ, ತೆಲುಗು... ಮುಂತಾದ ನುಡಿಗಳಲ್ಲಿ ವ್ಯಾಕರಣ, ಒರೆಗಳು, ಇನ್ನೂ ಮುಂದಾದ ಗುಣಗಳಲ್ಲಿ ಬಲು ಹೋಲಿಕೆ ಇದೆ. ಮತ್ತೂ ಈ ನುಡಿಗಳು ಜಗತ್ತಿನ ಬೇರೆ language familyಗಳ ನುಡಿಗಳಿಂದ ಬೇರೆಯಾಗಿದೆ, ಭಿನ್ನವಾಗಿದೆ.
೩) ಹಾಗೇ ಸಂಸ್ಕೃತ, ಪಾರಸೀ, ಜರ್ಮನಿ, ಇಂಗ್ಲೀಸು, ಮುಂತಾದವುಗಳನ್ನು ಹಿಂದೆಯೇ indo-european language familyಗೆ ಸೇರಿಸಿದ್ದಾರೆ. ಏಕೆಂದರೆ ಅವುಗಳಲ್ಲಿ ವ್ಯಾಕರಣ, ಒರೆಗಳು ಇನ್ನೂ ಮುಂತಾದ ಗುಣಗಳಲ್ಲಿ ಬಲು ಹೋಲಿಗೆ ಇದೆ.
ಆದುದರಿಂದ linguistic ಆಗಿ ಪಂಡಿತ Cadwell, ಕನ್ನಡ, ತಮಿಳು ಇವನ್ನು Indo-european language family ಸೇರಿಸುವುದು ತಕ್ಕದಲ್ಲ. ಅದು ತಪ್ಪು, ಅದಕ್ಕೆ ಒಂದು ಹೊಸ language family ಅನ್ನು ಹೇಳಿ, ಅದಕ್ಕೆ Dravidian ಅಂತ ಹೆಸರಿಟ್ಟನು. ಈ "Dravidian" ಎಂಬ ಹೆಸರ ಬಗ್ಗೆ ಹಲವರು ಅಡ್ಡಮಾತು ಎತ್ತಿದರು( ಇದರ ಬಗ್ಗೆ ಅವನೇ ಪುಟಪುಟ ಬರೆದಿದ್ದಾನೆ). ಬೇರೆ ಯಾವ ಹೆಸರು ಇಲ್ಲದೇ, ಅದು Dravidian langauge family ಆಗಿ ಉಳಿದುಕೊಂಡು ಬಂತು.
ಆದುದರಿಂದ Cadwell ಒಬ್ಬ ದೊಡ್ಡ ಭಾಷಾವಿದ್ವಾಂಸ, ಇವನಿಂದ ನಮ್ಮ ಕನ್ನಡ-ತಮಿಳು .. ಮುಂತಾದ ನುಡಿಗಳಿಗೆ ಬಲು ನೆರವಾಗಿದೆ.
ಇವನ ಉಂಕನ್ನು Kittel ಅವರು ತಮ್ಮ ಕನ್ನಡ ವ್ಯಾಕರಣ ಹೊತ್ತಗೆಯಲ್ಲಿ ಹೇಳಿದ್ದಾರೆ. ಅವರೂ ದ್ರಾವಿಡ ನುಡಿಗುಂಪನ್ನು ಮಾಡಿದ್ದು ಸರಿ ಎಂದು ಕನ್ನಡವು ಸಂಸ್ಕೃತದಿಂದ ಬಂದಿಲ್ಲ, ದ್ರಾವಿಡ ನುಡಿ ಎಂದಿದ್ದಾರೆ.
Kittel ವ್ಯಾಕರಣದ ಹೊತ್ತಗೆ ಇಲ್ಲಿದೆ.
http://books.google.com/books?id=rnNxtHfKxZAC&pg=PP1&ots=p8hLHIhidF&dq=K...
ಇವರ ತರುವಾಯ ಬಂದ ಹಲವರು, ಇವರಲ್ಲಿ ಇಂಡಿಯದೇಶದವರೇ ಹೆಚ್ಚು, ಅದರಲ್ಲಿ ಕನ್ನಡಿಗರೂ, ತಮಿಳರೂ, ಈ ಕುರಿತೋದನ್ನು/ಅಧ್ಯಯನವನ್ನು ಮುಂದುವರಿಸಿ, Cadwell ಅವರ ವಾದಗಳನ್ನು ಒರೆಹಚ್ಚಿ ಅದನ್ನು ಒಪ್ಪಿಕೊಂಡಿದ್ದಾರೆ, ತಪ್ಪುಗಳನ್ನು ತಿದ್ದಿದರು. ಹಾಗು ಇದಕ್ಕೆ ಸರಕಾರದ ಒಪ್ಪಿಗೆಯೂ ಇದೆ. ಇದಕ್ಕೆ Dravidian University ಮತ್ತು "DRAVIDIAN LINGUISTICS ASSOCIATION
AND
INTERNATIONAL SCHOOL OF DRAVIDIAN LINGUISTICS
" ಇವೇ ಪುರಾವೆ.
ಇಲ್ಲಿದೆ ಅವುಗಳ ಕೊಂಡಿಗಳು.
http://www.ijdl.org/
http://www.indiastudycenter.com/Univ/States/AP/DravUniv/default.asp
ಒಟ್ಟು:
Aryan Invasion Theoryಗೂ Dravidian languages ಎಂಬ linguistic divisionಗೂ ಯಾವ ನಂಟೂ ಇಲ್ಲ.
Cadwell ಈ theoryಅನ್ನು ಅವನ ಹೊತ್ತಗೆಯಲ್ಲಿ ಹೇಳಿಲ್ಲ,
ಆದುದರಿಂದ ಈ ಪಾಪವನ್ನು Cadwell ತಲೆಗೆ ಕಟ್ಟುವುದು ತಪ್ಪ
ದಯವಿಟ್ಟು Cadwell ಬರೀ ಜನಾಂಗೀಯವಾದ/racist argument ಮುಂದಿಟ್ಟು "Comparative Grammar of the Dravidian Languages" ಬರೆದಿದ್ದಾನೆ ಅನ್ನೋದಕ್ಕೆ ಪುರಾವೆ ಬೇಕೇ ಬೇಕು. ಇಲ್ಲದಿದ್ದರೆ ಇದೊಂದು ಕಪಟವಾದ!
=====================================================================
ಈಗ Cadwellಗೆ ನಂಟಿರದ ಈ "Aryan Invasion Theory" ಬಗ್ಗೆ ನೋಡೋಣ
"ಎನ್.ಆರ್. ವರದಪಾಂಡೆ ಯವರ "ಆರ್ಯರ ದಾಳಿಯೆಂಬ ಕಟ್ಟುಕತೆ" The Aryan Invasion, a Myth
ಎನ್.ಎಸ್. ರಾಜಾರಾಂ ರವರ "ಇತಿಹಾಸದ ರಾಜಕೀಯ" The Politics of History"
ಇವರ ಬಗ್ಗೆ ನನಗೆ ಗೊತ್ತಿಲ್ಲ. ಇವರು "Aryan Invasion Theory" ಸುಳ್ಳು ಎಂದಿದ್ದರೆ ಅದು ಸರಿಯೇ, ಏಕೆಂದರೆ ಅದನ್ನು ಹಲವರು ಒಪ್ಪಿದ್ದಾರೆ.
http://www.stephen-knapp.com/solid_evidence_debunking_aryan_invasion.htm ಒಳ್ಳೆಯ ಕೊಂಡಿ.
>ಈ "Aryan Invasion Theory" ಅನ್ನೋ ಸುಳ್ಳನ್ನು ಮೊದಲು ಹೊರ ತಂದವನು Max Muller ಎಂಬ ಸಂಸ್ಕೃತ ವೇದ ಪಂಡಿತ, Cadwell ಅಲ್ಲ
ಈ Max Mullerಗೆ ದೊಡ್ಡ ಸಂಸ್ಕೃತ ಪಂಡಿತರ ದಂಡೇ ಜೊತೆಗಿತ್ತು. ಈ ಸಂಸ್ಕೃತ ಪಂಡಿತರ ಬಳಗದಿಂದ ಬಂದ ಸುಳ್ಳು "Aryan Invasion Theory."
"European scholars following Max Muller in the nineteenth century decided that the Vedic people - whom they called the Aryans after a misinterpretation of that Vedic term - invaded India around 1500 BC. They were said to have overthrown the primitive and aboriginal culture of the time, which was thought to be Dravidian in nature, and brought a more advanced civilization to the land (though they themselves were still regarded as barbarians). The indigenous aborigines were identified as the Dasyus or inimical people mentioned in the Vedas"
"The modern history of Indo-European studies and indeed of linguistics begins with William Jones, writing in the 1790s, who was the first to relate the kinship of Sanskrit with classical European languages and to propose that an earlier language "which perhaps no longer exists" was the common source of Sanskrit, Greek and Latin. He postulated this claim based on his belief that there was one language at the Tower of Babel which is the mother of all languages. He also suggested that the Germanic and Celtic languages may have derived from the same source.[3] Later theorists confirmed this and identified that the Slavic languages also derived from the lost proto-language.
Some early scholars, notably Friedrich Schlegel in 1808, postulated that India was the source of this original language spoken at the Tower of Babel. They adopted the term "Indo-Germanic." Others preferred "Indo-European," which is now the standard term. Like other European writers Schlegel was of the opinion that India was the "cradle of civilization". For example Voltaire had written some years before Jones's discovery that "I am convinced that everything has come down to us from the banks of the Ganges, astronomy, astrology, metempsychosis, etc...,[4] and said: "It does not behove us, who were only savages and barbarians when these Indian and Chinese peoples were civilized and learned, to dispute their antiquity."[5]"
ಹೀಗೆಲ್ಲ ಬರೆದುದು ಬರೀ ಸಂಸ್ಕೃತ ಪಂಡಿತರೇ, ಇದರಲ್ಲಿ Cadwell ಇಲ್ಲ. ಈ theory ಮುಂಬರlu ಸಂಸ್ಕೃತವ ಮೇಲಿನ ಕುರುಡುಹಠವೂ, ಕುರುಡುಅಭಿಮಾನವೂ ಕಾರಣವೆಂದರೂ ತಪ್ಪಾಗಲ್ಲ ಎಂದವರೂ ಇದ್ದಾರೆ.
ಈ ಸಂಸ್ಕೃತ ಪಂಡಿತರಲ್ಲಿ ಇಂದಿಗೂ ಈ Max Muller ಅಂದ್ರೆ ಬಲು ಮರ್ಯಾದೆ, ಅವನಿಗೆ ಬಲು ಒತ್ತು. ಅದಕ್ಕೆ "Max Muller ಭವನ", "Max Muller" ಪ್ರಶಸ್ತಿ ಇಂದಿಗೂ ಇವೆ.
=================================================================================
ಇಂತು Cadwell ಅನ್ನೋ ದ್ರಾವಿಡ ಭಾಷೆ ಪಂಡಿತನ ಮೇಲೆ ಬೆನಕರು+ಬೆಂಬಲ ಹೊರೆಸಿರುವ ದೂರುಗಳೆಲ್ಲ ಪುರಾವೆ ಇಲ್ಲದ ಕಟ್ಟುಗತೆ.
Aryan Invasion Theory ಶುರು ಮಾಡಿದವನು "Max Muller ಎನ್ನುವ ಸಂಸ್ಕೃತ ವೇದ ಪಂಡಿತ", Cadwell ಗೂ ಈ theoryಗೂ ಯಾವ ನಂಟಿಲ್ಲ
ಎಂದು ತರ್ಕ ಮತ್ತು ಸಾಕ್ಷ್ಯಾಧಾರಗಳು ಹೇಳುವುವು. ಮೊಂಡುತನಕ್ಕೆ ಏನು ಮಾಡಕ್ಕೆ ಆಗಲ್ಲ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಒಂದು ಕಡೆ font size ತುಂಬಾ ಜಾಸ್ತಿ ಆಗಿಬಿಟ್ಟಿದೆ,
HPN ಮತ್ತು ಎಲ್ಲರು ಮನ್ನಿಸಿರಿ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಹೌದಲ್ರೀ
ನಾವು ಬರೆಯೋ ವಿಷಯ ಸರಿ ಇದ್ದಾಗ, ಸಣ್ಣಕ್ಷರ ಇದ್ದರೂ ಸಾಕು ಅಲ್ವೇ?
ಯಾಕಂದ್ರೆ, ನೂರು ಸಲ ಹೇಳಿದ ಸುಳ್ಳು ನಿಜವಾಗುತ್ತೆ ಅಂತ ಜೋರಾಗಿ ಹೇಳೋ ಪಾಡು ತಪ್ಪು ವಿಚಾರ ಹೇಳೋರಿಗೆ ಬೇಕೇ ಹೊರತು, , ಸರಿಯಾದ ವಿಷಯ ಹೇಳ್ತಾ ಇರೋ ನಿಮಗೆ ಯಾಕೆ?
ಸುಮ್ನೆ ತಮಾಷೆಗೆ ಬರೆದದ್ದು
-ಹಂಸಾನಂದಿ
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ನನ್ನಿ! ನಿಮಗೆ ನನ್ನ ಮಾತು ಸರಿ ಅನ್ನಿಸಿದಕ್ಕೆ.
font ತಪ್ಪಿಗೆ ಮನ್ನಿಸಿರಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
"ಆರ್ಯರ ದಾಳಿಯೆಂಬ ಕಟ್ಟು ಕತೆ"
ಒಪ್ಪೋಣ, ಇದಕ್ಕೂ ಸಕ್ಕದ-ಕನ್ನಡ ಬೇರೆ ಬೇರೆ ಅನ್ನೋದಕ್ಕೂ ಏನು ನಂಟು? ಸಕ್ಕದವನ್ನು ಕನ್ನಡದಲ್ಲಿ ತುರುಕುತ್ತಾ ಬಂದವರು ಸಕ್ಕದಿಗರು ಅನ್ನೋದಕ್ಕಿಂತಾ ಸಕ್ಕದ ಮೇಲು, ನಮ್ಮ ಕನ್ನಡ ಕೀಳು, ಸಕ್ಕದವಿಲ್ಲದ ಕನ್ನಡ ಜಾಳು ಜಾಳು, ಸಕ್ಕದ ಎಲ್ಲಾ ಇಂಡಿಯಾದ ನುಡಿಗಳಿಗೆ ತಾಯ್ನುಡಿ ಅಂತಾ ನಂಬಿಕೊಂಡು ಕೀಳರಿಮೆಯಿಂದಾ ನರಳುತ್ತಿದ್ದ ಕನ್ನಡಿಗರೇ ಹೊರತು, ಮತ್ತಾರೂ ಅಲ್ಲಾ. ನಾವು ಕನ್ನಡವನ್ನು ಉದ್ದಾರ ಮಾಡಿ ಬಿಡೋಣ ಅಂತಾ, ಸಕ್ಕದವನ್ನು ಬೆರೆಸಲು ಅಲ್ಲಿಗೆ ಮೊದಲು ಮಾಡಿದವರು ಮಂದಿಗೆ ವಾಕರಿಕೆ ಬರೋ ಹಾಗಾಗಿದ್ದರೂ ಇನ್ನೂ ನಿಲ್ಲಿಸಿಲ್ಲಾ.
ಈಗೀಗ ಇಂಗ್ಲೀಸೇ ಎಲ್ಲಾ ಅಂತಾ, ಕನ್ನಡವನ್ನು ಬರೀ ಮಾತಿನಲ್ಲಿ ಉಳಿಸಿಕೊಂಡಿರುವ ಒಂದು ಕನ್ನಡಿಗರ ಗುಂಪು ಹುಟ್ಟಿಕೊಂಡಿದೆಯಲ್ಲಾ, ಹಾಗೆಯೇ ಆಗಿನ ಹೊತ್ತಲ್ಲಿ ಹುಟ್ಟಿಕೊಂಡ ಒಂದು ಇಂತಹ ಗುಂಪು, ಕನ್ನಡದಲ್ಲಿ ಸಕ್ಕದವನ್ನು ಇನ್ನಿಲ್ಲದಂತೆ ತುಂಬಿದ್ದು, ಮತ್ತು ಅವರ ನೆರಳಲ್ಲೇ ಬೆಳೆದು ಬಂದ ಹೆಚ್ಚಿನ ಕನ್ನಡಿಗರು ಸಕ್ಕದ ಬಿಟ್ಟರೇ ಕನ್ನಡಕ್ಕೆ ದಿಕ್ಕಿಲ್ಲಾ ಅಂತಾ ನಂಬಿತು, ಈಗಲೂ ಹೆಚ್ಚಿನ ಕನ್ನಡಿಗರು ಹಾಗೆಯೇ ನಂಬಿದ್ದಾರೆ.
ಇದರಿಂದ ಕನ್ನಡದಲ್ಲಿ ಕನ್ನಡತನ ಇಲ್ಲವಾಗಿದೆ. ಕನ್ನಡ ಕನ್ನಡವಾಗಿರುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಹೊಣೆ. ಇದನ್ನು ಮರುಕದಿಂದ(ದಯವಿಟ್ಟು, ಪ್ಲೀಜ್) ತಿಳಿದುಕೊಳ್ಳಿ, ಒಂದಕ್ಕೊಂದು ನಂಟೇ ಇಲ್ಲದ ಮಾತುಗಳನ್ನು ತಳಕು ಹಾಕಿ, ನಿಮಗೆ ನೀವೇ ಗೊಂದಲ ಮಾಡಿಕೊಳ್ಳುವದರೊಂದಿಗೆ ನಮಗೂ ಗೊಂದಲ ಮಾಡಬೇಡಿ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಗೂಗಲ್ ಬುಕ್ಕುಗಳ ತಾಣದಿಂದ, ಕಾಲ್ಡವೆಲನ ಪುಸ್ತಕವನ್ನು (ಹಂಸಾನಂದಿ ಮತ್ತು ಮಹೇಶನಿಗೆ ನನ್ನಿ) ಓದುತ್ತಿದ್ದಾಗ, ಕುತೂಹಲಕಾರಿಯಾದ ಕೆಲವು ಅಂಶಗಳು(ಪುಟ ೧೦೬-೧೦೭) ಕಂಡು ಎಲ್ಲರೊಡನೆ ಹಂಚಿಕೊಳ್ಳಬೇಕೆನಿಸಿತು.
ಕಾಲ್ಡವೆಲ್ ದ್ರಾವಿಡನುಡಿಗಳ ಬಗ್ಗೆ ಬರೆಯುವಾಗ "ಆರ್ಯ-ದ್ರಾವಿಡ ಜನಾಂಗವಾದದ" ಬಗ್ಗೆ ಯಾವ ರೀತಿಯ ನಿಲುವನ್ನು ಹೊಂದಿದ್ದ ಎಂಬುದನ್ನು ಪುಟ ೧೦೬-೧೦೭ ಸ್ಪಷ್ಟವಾಗಿ ಓದಬಹುದು. "but it is not easy to determine whether they were the people whom the Aryans found in possession and conquered, or whether they had already, before the arrival of the Aryans, moved on southwards out of nothern provinces, or been expelled from those provinces by the pre-historic irruption of another race......I am not competent to pronounce a decided opinion on a point which lies so far beyond my own province, ಬಟ್ ಎಡವಟ್ಟಿರುವುದು ಮುಂದಿನ ವಾಕ್ಯದಲ್ಲಿ, but the differences which appear to exist, and which I have already pointed out, between the Dravidian languages and the non-Sankritic under-stratum of the northern venaculars induce me to incline to the supposition that the Dravidian idioms belong to an older period of speech.....ನಂತರ ಕೊನೆಯಲ್ಲಿ ಹೀಗೆ ಸ್ಪಷ್ಟವಾಗಿ ಹೇಳಿದ್ದಾನೆ, I feel persuaded that they were never expelled by the Aryans......Looking at the question from a purely Dravidian point of view, I feel convinced that the Dravidians never had nay relations with the primitive Aryans but those of a peaceable and the friendly character.
ಈ ಎರಡು ಪುಟಗಳಿಂದ ಸ್ಪಷ್ಟವಾಗುದೇನೆಂದರೆ, ಕಾಲ್ಡವೆಲನಿಗೆ ಆರ್ಯ-ದ್ರಾವಿಡ ಜನಾಂಗವಾದ ಬಗ್ಗೆ ಚರ್ಚೆ ನಡೆಯುತ್ತಿದ್ದುದು ತಿಳಿದಿತ್ತು, ಆದರೆ ಆರ್ಯರು ದ್ರಾವಿಡರನ್ನು ತುಳಿದರು ಎಂಬುದರ ಬಗ್ಗೆ ಆತನಲ್ಲಿ ದೃಢವಾದ ನಿಲುವುಗಳಿರಲಿಲ್ಲ. ಅಷ್ಟೇ ಅಲ್ಲದೆ, ಜನಾಂಗವಾದದ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕಿದೆ ಎಂದೂ ಹೇಳಿರುವುದನ್ನು ಓದಬಹುದು.
ಜನಾಂಗೀಯ ವಾದ ಮತ್ತು ದ್ರಾವಿಡ ಭಾಷೆಯ ಚರ್ಚೆಗೂ ಸಂಬಂಧವೇನು
ಅದುವೇ ಬ್ರಹೂವಿ ಭಾಷೆ. ಈ ಆರ್ಯ-ದ್ರಾವಿಡ ಜನಾಂಗವಾದ, ಕಾಲ್ಡವೆಲ್ ಮುಂಚೆ ಇತ್ತೋ ಅಥವಾ ಆತನ "ದ್ರಾವಿಡಿಯನ್ ಗ್ರಾಮರ್" ಕುರಿತಾದ ಸಂಶೋಧನೆಯನ್ನು ಬಳಸಿ ನಂತರದವರು ಕಚ್ಚಾಡಿದರೋ ಒಟ್ಟಿನಲ್ಲಿ ಎಡವಟ್ಟಂತೂ ಆಗಿದೆ. "ಆರ್ಯ-ದ್ರಾವಿಡ ಜನಾಂಗವಾದಕ್ಕೆ" ಕಾಲ್ಡವೆಲನ "ದ್ರಾವಿಡಿಯನ್ ಗ್ರಾಮರ್" ಸಂಶೋಧನೆಯ ನಂತರ ಮತ್ತಷ್ಟು ಬಲ ಖಂಡಿತವಾಗಿಯೂ ಸಂದಿದೆ. ಎಷ್ಟರ ಮಟ್ಟಿಗೆ ಎಂದರೆ ಈ ಆರ್ಗ್ಯುಮೆಂಟನ್ನು ಈಗಲೂ ಅಲ್ಲಲ್ಲಿ ಕೇಳಬಹುದು. ಅದು ಏನೆಂದರೆ, "ಬಹುತೇಕ ಎಲ್ಲ ದ್ರಾವಿಡ ನುಡಿಗಳೂ ದಕ್ಷಿಣ ಭಾರತದಲ್ಲಿದೆ, ಆದರೆ ಬೆರಳೆಣಿಕೆಯಷ್ಟಾದ ಬ್ರಹೂವಿ ನುಡಿ ಮಾತ್ರ ಪಾಕಿಸ್ತಾನಕ್ಕೆ ಅಂಟಿಕೊಂಡಂತೆ ಇದೆ. ಇದರ ಬಗ್ಗೆ ಕಾಲ್ಡವೆಲನೇ ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ಇದರಿಂದ ಸ್ಪಷ್ಟವಾಗುತ್ತದೆ ಆರ್ಯರು ದ್ರಾವಿಡರನ್ನು ತುಳಿದು ಕೆಳಕ್ಕೆ ತಳ್ಳಿದರು" ಎಂಬುದಾಗಿ. ಈ ಹಿಂದಿನ ತರ್ಕವಿಲ್ಲದ ಚರ್ಚೆಯನ್ನು ಆರ್ಕುಟ್, ಯಾಹೂ, ರೀಡಿಫ್, ಗೂಗಲ್ ಸೇರಿದಂತೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಫೋರಮ್ಮಗಳಲ್ಲೂ ವಾಗ್ವಾದಗಳಾಗಿವೆ, ಆಗುತ್ತಲೇ ಇದೆ". ನನ್ನ ಹಿಂದಿನ ಕಾಮೆಂಟಿನಲ್ಲಿಯೂ ನಾನು ಬರೆದಿದ್ದುದು "ಜನಾಂಗವಾದದ" ಕಟ್ಟುಕತೆಯ ಬಗ್ಗೆಯೇ ಹೊರತು ಕಾಲ್ಡವೆಲನ ಬಗ್ಗೆ ಅಲ್ಲ.
ಒಟ್ಟು ಹೇಳಬೇಕೆಂದರೆ,
೧. ಆರ್ಯ-ದ್ರಾವಿಡ ಜನಾಂಗವಾದದ ಚರ್ಚೆಯಲ್ಲಿ ಕಾಲ್ಡವೆಲನು ಭಾಗವಹಿಸಿರಬಹುದಾದರೂ ಅವನು ಮೊದಲಿಗನಲ್ಲ. ಈ ಪುಸ್ತಕ ಬರೆಯುವ ಹೊತ್ತಿಗೆ ಅವನಲ್ಲಿ ಇದರ ಬಗ್ಗೆ ಖಚಿತ ನಿಲುವಿರಲಿಲ್ಲ.
೨. ದ್ರಾವಿಡರನ್ನು ಆರ್ಯರು ಕೆಳಗೆ ತಳ್ಳಿದರೋ ಅಥವಾ ತಾವಾಗೇ ಬಂದರೋ ಎಂಬುದರ ಬಗ್ಗೆ ಆತನಲ್ಲಿ ಖಚಿತ ನಿಲುವಿಲ್ಲದಿದ್ದರೂ ದ್ರಾವಿಡ ನುಡಿಗಳು ಒಂದಾನೊಂದು ಕಾಲದಲ್ಲಿ ಖಂಡಿತವಾಗಿಯೂ ಉತ್ತರದಲ್ಲಿತ್ತು ಎಂಬುದನ್ನು ಬಲವಾಗಿ ನಂಬಿದ್ದ.
೩. ಬೆನಕ ಅವರು ಕೂಡ, ಕಾಲ್ಡವೆಲನೇ ಈ ಥಿಯರಿ ಮೊದಲು ಮಾಡಿದ್ದು ಅಂತ ಹೇಳಿಲ್ಲ. ನಲವತ್ತು ವರ್ಷಗಳ ಅಂತರದ ಪ್ರಸ್ತಾಪ ಮಾಡಿದ್ದಾರೆ. ಆದರೆ ಅವರ ನಿಲುವಿಗೆ ವಿರುದ್ಧವಾದ ಅಂಶ ನನಗೆ ಕಂಡದ್ದು, ಕಾಲ್ಡವೆಲನ ಕಾಲಕ್ಕೆ ಸಮಕಾಲೀನವಾಗಿ "ಜನಾಂಗವಾದ ವಿಷಯ" ಚರ್ಚೆಯಲ್ಲಿತ್ತು.
ಆರ್ಯ-ದ್ರಾವಿಡ ಜನಾಂಗವಾದವನ್ನು ನಮ್ಮವರೇ ಅನೇಕ ಸಂಶೋಧನೆಗಳನ್ನು ನಡೆಸಿ ಇದು "ಒಡೆದು-ಆಳುವ" ನೀತಿಗನುಗುಣವಾಗಿ ಮಾಡಿದ ಕಟ್ಟುಕತೆ ಎಂದು ನಿರೂಪಿಸಿರುವುದನ್ನು ಎಷ್ಟೋ ವಿದ್ವಾಂಸರು ಈಗಾಗಲೇ ಒಪ್ಪಿದ್ದಾರೆ. ಆದರೆ ಸಂಸ್ಕೃತ ಮತ್ತದಕ್ಕೆ ನಂಟಾದ ನುಡಿಗಳಿಗೂ ಕನ್ನಡ-ತೆಲುಗು-ತಮಿಳು-ಮಲಯಾಳಂ-ತುಳು-ಕೊಡವ-ಗೊಂಡ-ಬಡಗ...(ಒಟ್ಟಾಗಿ ದ್ರಾವಿಡ ಎಂದು ತಪ್ಪಾಗಿ ಹೆಸರಿಸಲ್ಪಟ್ಟ) ನುಡಿಗುಂಪಿಗೂ ವ್ಯಾಕರಣದ ಅಡಿಯಲ್ಲಿ ಸ್ಪಷ್ಟವಾದ ವ್ಯತ್ಯಾಸಗಳಿರುವುದನ್ನು ಅಲ್ಲಗಳೆಯುವುದು ತುಂಬಾ ತುಂಬಾ ಕಷ್ಟ.
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಅಂದಮೇಲೆ ಬೆನಕರೂ ಕಾಲ್ಡ್ ವೆಲ್ ಕಾಲು ಜಾರಿದನೇ ..ಅನ್ನೋದು ತಪ್ಪು. ಯಾವುದೇ ಪುರಾವೇ ಇಲ್ಲದೇ ಕಾಲ್ಡ್ ವೆಲ್ ಸುಮ್ನೆ ಏನೂ ಹೇಳಿಲ್ಲ ಅಂತ ಇನ್ನು ತಿಳಿಯಾಗಿದೆ. ನನ್ನಿ ಸುನೀಲರೆ
ಬ್ರಹೂಯಿ ಒಂದು ನೆಪ ಮಾಡ್ಕಂಡ್ ಆರ್ಯರು ದ್ರಾವಿಡರನ್ನ ತೆಂಕಣಕ್ಕೆ ತಳ್ಳಿದರು ಅಂತ ಹೇಳಕಾಗುತ್ತ.???
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಸುನಿಲ.
ಇಂತಹ ಬೆಲೆವಣಿಯಂತಹ ಉತ್ತರ ಬರೆಯೋದುದಕ್ಕೆ ನನ್ನಿ!!
ನೀನು ಇನ್ನೂ "ಕಾಲ್ಡ್‌ವೆಲ್ ಕಾಲು ಜಾರಿದನೇ?!!!" ಎಂಬುದಕ್ಕೆ ಉತ್ತರ ಹೇಳಿಲ್ಲ.
ನಿನ್ನೀ ಮಾತಿಂದ Cadwell ಕಾಲುಗಳನ್ನು ಭದ್ರವಾಗೇ ಉರಿದ್ದಾನೆ. ಅವನಲ್ಲಿ ಜಾರಿಕೆ ಇರಲ್ಲಿ ಅಂತ ನಿನ್ನ ಮಾತು ಎಂದುಕೊಳ್ಳಬಹುದೋ?
ನನ್ನಂತೆ Cadwellಗೂ ಅವನ Comparitive grammarಅನ್ನು rasicist ಕಣ್ಣಿನಿಂದ ನೋಡೋದೇ ದೊಡ್ಡ ಪಾಪ. ಪಾಪ ಅವನ ಕಾಲದಲ್ಲಿ ಆ Maxmuller ಮುಂತಾದವರಿಂದ ಆ ವಾದ ಇದ್ರೆ ಅದಕ್ಕೆ "ಕಾಲ್ಡ್‌ವೆಲ್ ಕಾಲು ಜಾರಿದನೇ?!!!" ಎಂದು ಐಬು ತೋರಿಸಕ್ಕೆ ಆಗಲ್ಲ.
ಕುಳಿರಾಗಿರಿ, ನಿನ್ನ ವೈಯಕ್ತಿಕ ಏನು ಬರೆದಿಲ್ಲ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕಾಲ್ಡ್‌ವೆಲ್ ಕಾಲು ಜಾರಿದನೇ?!!!
ಸ್ವಲ್ಪ ಯೋಚನೆ ಮಾಡಿದ ಮೇಲೆ ಬೇರೆ ಏನೋ ಹೊಳೀತು.ಕಾಲ್ಡ್ ವೆಲ್ ಪೂರಾ ಸಾಚಾ ಅಲ್ಲ.ಬ್ರಾಹ್