'ನನ್ನಿ'ಯ ಮೂಲ???
'ನನ್ನಿ'ಯ ಮೂಲ???
ಸಂಪದದಲ್ಲಿ ಸುತ್ತಲು ಶುರು ಮಾಡಿದ ಮೇಲೆ ಕೇಳ್ಪಟ್ಟ ಪದ - 'ನನ್ನಿ'.
ನಾನು 'ನನ್ನಿ' ಎಂಬುದು ಕನ್ನಡದಲ್ಲಿ Thanks ಹೇಳಲು ಬಳಸುತ್ತಾರೆಂದು ಸ್ನೇಹಿತರಿಗೆ ತಿಳಿಸಿದಾಗ ನನಗೆ ತಿಳಿದು ಬಂದಿದ್ದು ಮಲಯಾಳದಲ್ಲಿ ಇಂದಿಗೂ 'ನನ್ನಿ'ಯ ಬಳಕೆ ಇದೆಯೆಂದು.
'ನನ್ನಿ' ಯ ಕನ್ನಡದ ಮೊದಲ ಉಪಯೋಗ ಎಲ್ಲಿ ಆಗಿದೆ?
ಮಲಯಾಳದಿಂದ ಕನ್ನಡಕ್ಕೆ ಬಂದದಲ್ಲವೆಂಬುದಕ್ಕೆ ಪುರಾವೆಗಳಿವೆಯೆ???
ಬಲ್ಲವರು ಬೆಳಕನ್ನು ಹರಿಸಿ...
ಇದರ ಬಗ್ಗೆ ಸಂಪದ ಕಟ್ಟೆಯಲ್ಲಿ ಚರ್ಚೆ ಆಗಲೇ ಆಗಿದ್ದಲ್ಲಿ ಸಂಬಂಧಿತ Link ಅನ್ನು ತಿಳಿಸಿ...
--ಶ್ರೀ
(ಈ ಚರ್ಚೆಯ ವಿಷಯದಲ್ಲಿ ಐವತ್ತು ಪದಗಳು ದಾಟಿವೆ ಎಂಬುದು ನನ್ನ ಅನಿಸಿಕೆ - ಆದರೂ ಸಂಪದಕ್ಕೆ ಸಮಾಧಾನವಿಲ್ಲ
ಹೆಚ್ಚ್ಹು ಪದಗಳನ್ನು ಬರೆಯಬೇಕಂತೆ, ಅದಕ್ಕಾಗಿ ಈ ವಾಕ್ಯ)

- Login or register to post comments
- 1080 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: 'ನನ್ನಿ'ಯ ಮೂಲ???
ಮೊದಲು ನನ್ನಿ ಅಂದ್ರೆ thanks ಅಂತ ಕನ್ನಡದಲ್ಲಿ ಹಿಂದಿನಿಂದಲೂ ಯಾರಾದರೂ ಬಳಸಿಕೊಂಡು ಬಂದಿದ್ದಾರೋ ಎಂದು ಗೊತ್ತಿಲ್ಲ.
ಆದರೆ ನಾನು ಮತ್ತು ಸುನಿಲ ಇಬ್ಬರು ಅಚ್ಚಕನ್ನಡದಲ್ಲಿ (ಅಪ್ಪಟಗನ್ನಡ, ಅಣ್ಣೆಗನ್ನಡ)ಒರೆಗಳನ್ನು ಹೆಣೆಯುತ್ತಾ,
good morning = ನಲ್ವಗಲು
good night = ನಲವಿರಳು
hello = ತುೞಿಲ್
bye = ಸಿಗೋಣ
ಆಗ thanks ಗೆ ಒರೆ ಸಿಕ್ಕಲೇ ಇಲ್ಲ. ಆಗ ನಾವು ದ್ರಾವಿಡ ಒರೆಗಂಟಿನ ಮೊರೆ ಹೋದೆವು.
ಆಗ ಅಲ್ಲಿ ತಮಿಳಲ್ಲಿ thanks = ನಣ್ರಿ ಅಂತ ಇತ್ತು, ಹಾಕೆ ನಣ್ರಿಗೆ ಸಮವಾಗಿ ನನ್ನಿ ಅಂತ ಕನ್ನಡದಲ್ಲಿ ಇದೆ. ಅದರ ತಿಳಿವು
nanni truth, love, affection (= Ta. naṉṟi, Kitt.).
ಅಂತ ಸಿಕ್ತು. ಮತ್ತೆ ಇದಕ್ಕಿಂತ ಒಳ್ಳೆಯ ಒರೆ ಇದೆಯಾ? ಸರಿ ಅದನ್ನೇ ನಾವು thanksಗೆ ಬಳಸ ತೊಡಗಿದೆವು. ಅದು ನಮಗೆ ತುಂಬಾ ಹಿಡಿಸಿ, ಹೊಂದಿಕೊಂಡಿತು.
ಕೊಳಂಬೆ ಪುಟ್ಟಣ್ಣಗೌಡರ "ತಿಳಿಗನ್ನಡ ನುಡಿವಣಿಗಳು" ಅಲ್ಲಿ ಈ ಒರೆ ಬಂದಿದೆ. ಅವರು "ಅಚ್ಚಗನ್ನಡ ಶಬ್ದ ಕೋಶ"ದಲ್ಲೂ ಇದೆ.
ನನ್ನಿ ಮಲಯಾಳಿಯಲ್ಲೂ ಇದೆ, ನಣ್ರಿಯಾಗಿ ತಮಿಳಲ್ಲೂ ಇದೆ.
ಈ ಒರೆಯ ಬೇರು 'ನಲ್'/ನಱ್' ಎಂಬ "ದ್ರಾವಿಡ ಬೇರು"
http://dsal.uchicago.edu/cgi-bin/philologic/getobject.pl?c.1:1:1025.burr...
ಸಕ್ಕದದ ನಲ-ದಮಯಂತಿಯಲ್ಲಿರು 'ನಲ' ದ್ರಾವಿಡನಿರಬೇಕು. ಅದಕ್ಕೆ ಅಚ್ಚದ್ರಾವಿಡದಲ್ಲಿ 'ನಲ'( ಒಳ್ಳೆಯವನು ) ಅಂತ ಹೆಸರು ಇಟ್ಟಿಕೊಂಡಿದ್ದಾರೆ.
( ಲೈಟಾಗಿ ತಗೊಳ್ಳಿ )
ಉ: 'ನನ್ನಿ'ಯ ಮೂಲ???
ನನ್ನಿ (1) = ನಿಕ್ಕು, ನಿಕ್ಕುವ, ನಿಸದ, ನನಸು, ವಲಂ, ವೆ , ದಲ, ಸಾಜ, ದಿಟ, ನನ್ನಿಯ ನುಡಿ - ಸತ್ಯ್ ವಚನ
ನನ್ನಿ (2) = ನಲ್ವೆ, ನಣ್ಟು, ನಚ್ಚು (ಪ್ರೀತಿ)
ಹಾಗಾದರೆ.. ಧನ್ಯವಾದಕ್ಕೆ .. ಸರಿಯಾದ ಪದ ನನ್ನಿ ಅಲ್ಲ ಅನಿಸುತ್ತೆ... ಸವಿಯೊದಗು ಸರಿಹಾಗಿ ಹೊಂದುತ್ತೆ.
ಉ: 'ನನ್ನಿ'ಯ ಮೂಲ???
ವಿನಾಯಕ...
ನಾವು ಸವಿಯೊದಗು ಅನ್ನು ಬಳಸುತ್ತಿದ್ದೆವು. ಆದರೆ ನನ್ನಿ ನನಗೆ ಹಿಡಿಸಿದೆ. ಇದು ಕನ್ನಡದ ನೆಂಟಾದ ತಮಿಳಲ್ಲಿ thanks ಅನ್ನೋ ತಿಳಿವಲ್ಲಿ ಬಳಕೆಯಲ್ಲೂ ಇದೆ. ಅದಕ್ಕೆ ನನ್ನಿ ಬಳಸಲು ಅಡ್ಡಿಯಿಲ್ಲ, ಹಾಗೇ ಒತ್ತಾಯವೂ ಇಲ್ಲ.
ಧನ್ಯವಾದ ಅಂದರೆ 'ಧನ್ಯತೆ'ಯ "ವಾದ=ಮಾತು". ಇಲ್ಲಿ 'ಧನ್ಯ'ಕ್ಕೆ ಕನ್ನಡದಲ್ಲಿ ಏನಪ್ಪ?
ನನ್ನಿ ಅಂದ್ರೆ ನಲ್ವೆ ಅಂತ ತಿಳಿವಿನಲ್ಲಿ, thanksಗೆ ಬಳಸಬಹುದು. ನಿಕ್ಕುವವಾದ ಒರೆ ನನಗೂ ಸಿಕ್ಕಿಲ್ಲ.
ಸವಿಯೊದಗು = ಸವಿ + ಒದಗು
ಉ: 'ನನ್ನಿ'ಯ ಮೂಲ???
ಸವಿಯೊದಗು = congratulations ಗೆ ಬಳಸಬಹುದು.
ಉ: 'ನನ್ನಿ'ಯ ಮೂಲ???
ನನಗೆ ತಿಳಿದ ಮಟ್ಟಿಗೆ, ನನ್ನಿ ಅನ್ನುವ ಪದ, thanks ಅನ್ನುವ ರೀತಿಯಲ್ಲಿ ಹಿಂದೆ ಎಂದೂ ಬಳಕೆಯಾಗಿಲ್ಲ.
ಈ ಪದ , ನಿಜ, ಸತ್ಯ್ಸ ಎಂಬ ಅರ್ಥಗಳಲ್ಲಿ, ಬಹಳ ಕಡೆ ಬಳಕೆಯಾಗಿದೆ. (ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು, ಛಲದೊಳ್ ದುರ್ಯೋಧನನಂ ನನ್ನಿಯೊಳ್ ಇನತನಯನಂ ಎಂಬ ಸಾಲುಗಳನ್ನು ನೆನೆಯಬಹುದು). ತಮಿಳಿನ ನನ್ರಿ ಪದಕ್ಕೆ ಹೋಲಿಕೆ ಇರುವುದಾದರೂ, ತಮಿಳಿನಲ್ಲಿ ಸತ್ಯ, ನಿಜ ಎಂಬ ಅರ್ಥದಲ್ಲಿ ಇದು ಉಪಯೋಗವಾಗುವುದಿಲ್ಲ. ಅದಕ್ಕೆ, ನಿಜ ಅಥವ ಸತ್ಯ ಪದದ ರೂಪಗಳನ್ನೆ ಬಳಸುತ್ತಾರೆ.
ಉಪಯೋಗ ಮಾಡುವುದು ಬಿಡುವುದು ಅವರವರಿಗೆ ಬಿಟ್ಟದ್ದು - ನನಗೆ ನನ್ನಿ ಎಂದರೆ ಅನ್ನವನು ಇಕ್ಕುವುದು ... ಮೊದಲಾದ ಪ್ರಯೋಗಳೇ ನೆನಪಾಗುವುದರಿಂದ, ನಾನು thanks ಅನ್ನುವ ಅರ್ಥದಲ್ಲಿ ಅದನ್ನ್ನು ಉಪಯೋಗಿಸಲಾರೆ. ಬಹಳ ಸಹಾಯವಾಯಿತು, ಉಪಕಾರವಾಯಿತು ಎಂದು ಹೇಳುತ್ತೇನೆ
-ಹಂಸಾನಂದಿ
ಉ: 'ನನ್ನಿ'ಯ ಮೂಲ???
ಸಂಪದದಲ್ಲಿ ನನ್ನಿ ಪದ ಬಳಕೆ ನೋಡಿ, ಇದು thanksಗೆ ಹಿಂದಿನಿಂದಲೇ ಬಳಕೆಯಾಗುತ್ತಿದ್ದ ಶಬ್ದ ಎಂಬ ಅನಿಸಿಕೆ ನನಗೆ ಬಂದಿತ್ತು. ನಿಜವಾಗಿ ಅದರ ಬಳಕೆ ಹೇಗೆ ಆಗುತ್ತಿತ್ತು ಎನ್ನುವುದನ್ನು ತಿಳಿಸಿದಕ್ಕೆ ಧನ್ಯವಾದಗಳು.
*ಅಶೋಕ್
ಉ: 'ನನ್ನಿ'ಯ ಮೂಲ???
"ಸಹಾಯವಾಯಿತು, ಉಪಕಾರವಾಯಿತು ಎಂದು ಹೇಳುತ್ತೇನೆ"
"ನೆರವಾಯಿತು" ಎಂದು ಅಚ್ಚಗನ್ನಡದಲ್ಲೇ ಅನ್ನಬಹುದು
. ಸಹಾಯ, ಉಪಕಾರ ಇವು ಸಕ್ಕದ ಅಂತ ನಿಮಗೆ ಚನ್ನಾಗೇ ಗೊತ್ತಿದೆ. 
ಕನ್ನಡದ ಒರೆಗಳು ಅನಿತ್ತು ಸಲೀಸಾಗಿ ಹೊಳೆಯಲ್ಲ!!
ಉ: 'ನನ್ನಿ'ಯ ಮೂಲ???
"ನೆರವಾಯಿತು" ಎಂದು ಅಚ್ಚಗನ್ನಡದಲ್ಲೇ ಅನ್ನಬಹುದು . ಸಹಾಯ, ಉಪಕಾರ ಇವು ಸಕ್ಕದ ಅಂತ ನಿಮಗೆ ಚನ್ನಾಗೇ ಗೊತ್ತಿದೆ.
ಕನ್ನಡದ ಒರೆಗಳು ಅನಿತ್ತು ಸಲೀಸಾಗಿ ಹೊಳೆಯಲ್ಲ!!
ನನ್ನ ಮಟ್ಟಿಗೆ ಅದು ಹೊಳೆಯುವ ಪ್ರಶ್ಬೆ ಅಲ್ಲ - ನಾನು ಬರೆಯುವಾಗ ನೆರವು ಅನ್ನುವ ಪದ ಪ್ರಯೋಗಿಸುವೆನೇನೋ - ಆದರೆ, ಆಡು ಮಾತಿನಲ್ಲಿ , ಸಹಾಯ, ಉಪಕಾರ ಎನ್ನುವವನೇ!
ಕುಮಾರವ್ಯಾಸ "ಈ ಲೋಗರು" ಎಂಬ ಪ್ರಯೋಗ ಮಾಡಿದ್ದಾನೆ - (ಲೋಗ್- ಜನ (ದೇಶ್ಯ ಪದ - ಹಿಂದಿಯಿಂದ) ; ಆದರೆ ನನ್ನ ಮಾತಿನಲ್ಲು ನೀವು ಅದನ್ನು ಕಾಣಲಾರಿರಿ; ನನಗೆ ಜನರೇ ಸಾಕು!
-ಹಂಸಾನಂದಿ
ಉ: 'ನನ್ನಿ'ಯ ಮೂಲ???
ಸರಿ ಸ್ವಾಮಿ ಹಂಸಾನಂದಿಗಳೇ,
ಅವೆಲ್ಲವೂ ತಮ್ಮ ಬರೀ ಮಟ್ಟಗೇ ಸರಿ! ಇಲ್ಲಿ ತಾವು "ನನ್ನ" "ನಾನು" ಬಗ್ಗೇ ಹೇಳಿಕೊಂಡಿದ್ದೀರಿ ಅದಕ್ಕೆ ಕೆಲವು ಕೇಳ್ಮೆಗಳು. ಇಲ್ಲಿ "ನನ್ನೊಬ್ಬನಿಗೆ ಸಲೀಸಾದರೇ ಆಯ್ತು ಅಷ್ಟು ಸಾಕು" ಎನ್ವ ಹಾಗಿದೆ ನಿಮ್ಮ ಮಾತು.
-ನೀವು ಈಗ ಇರುವುದು ಎಲ್ಲಿ?
-ದಿನಕ್ಕೆ ಎಷ್ಟು ಕನ್ನಡವನ್ನು ಮಾತಾಡುವಿರಿ? ೧೦%? ೨೦%, ೧೦೦%?
-ನಿಮ್ಮ ಮನೆಮಾತು ಕನ್ನಡವೇ?
-ನಿಮ್ಮ ಮಕ್ಕಳು ಇದ್ದರೆ ಕನ್ನಡವನ್ನೇ ನಿಮ್ಮ ಜೊತೆ ಮಾತಾಡುವುದೇ( ಮುಂದೇ ಮಾತಾಡ್ತಾರಾ?), ನೀವು ನಿಮ್ಮ ಅಪ್ಪಮ್ಮರ ಜೊತೆ ಕನ್ನಡದಲ್ಲೇ ಮಾತಾಡುವುದೇ?
ಇವಕ್ಕೆ ಇಲ್ಲಿ ಮರುನುಡಿಯದಿದ್ದರೂ ಬೇಡ, ಒಮ್ಮೆ ಉಂಕಿಸಿಕೊಳ್ಳಿ. ಕನ್ನಡದ ಕಬ್ಬಗಳ ಮೇಲೆ ನಿಮ್ಮ ಹುರುಪು ಮೆಚ್ಚುವಂತಹದ್ದೇ. ನನಗೂ ಇಂಗ್ಲೀಶ ನಾವೆಲ್ಲುಗಳು ಅಚ್ಚುಮೆಚ್ಚು. ಆದರೆ ನಾನು ಕನ್ನಡವನ್ನು ನೋಡುವ ನೋಟವೇ ಬೇರೆ, ಇಂಗ್ಲೇಶನ್ನು ನೋಡುವ ನೋಟವೇ ಬೇರೆ.
ಕನ್ನಡ ನಮಗೆ ಹೆಮ್ಮೆ ತಾಯ್ನುಡಿ, ಇಂಗ್ಲೀಶು ಮೋಜು. !!!
ನಾನು ಇರುವುದು ಬೆಂಗಳೂರಲ್ಲೇ, ಅದೂ ನನ್ನ ಮನೆ ಇರುವುದು ಒಂದು ಹಳ್ಳಿಯಲ್ಲಿ.
೭೦-೯೦% ಕನ್ನಡವನ್ನೇ ಮಾತಾಡೋದು. ನಮ್ಮ ಮ್ಯಾನೇಜರು ಕೂಡ ಕನ್ನಡದಲ್ಲೇ ಮಾತಾಡ್ತಾನೆ( ಅವರು ಕನ್ನಡದವರಲ್ಲದಿದ್ದರೂ )
ನಮ್ಮ ಮನೆಯಲ್ಲಿ ಕನ್ನಡ ಬಿಟ್ಟು ಬೇರೆ ನುಡಿಯೇ ಬರಲ್ಲ ನಮಗೆ. ಅದೂ ಪಕ್ಕ ಹಳ್ಳಿ ಕನ್ನಡ ನಮ್ಮ ಮನೆಯಲ್ಲಿ. ನಮಗೆ ಗೊತ್ತು ಈ "ಸಂಸ್ಕೃತ ಪ್ರೇಮಿ"ಗಳಿಂದ ಕೀಳೆನಿಸಿಕೊಂಡಿರುವ ನೋವು!!
"ಯಾವಾಗ್ಲಾದ್ರು ಬಿಡುವಾದ್ರೆ ವಸಿ ಹಟ್ಟಿ ತಾಕ್ ಬನ್ನಿ ಬುದ್ದಿ" ಅಂದ್ರೆ ಇಲ್ಲಿ ಈ ಮಾತಿನಲ್ಲಿರುವ "ಪ್ರೀತಿಯ ಆಹ್ವಾನ" ಕಾಣುವುದಿಲ್ಲ. ಅವರ "ಭಾಷಾಶೈಲಿ" ಬಗ್ಗೆ ಗಮನ. ಆಮೇಲೆ ಮನೆಗೆ ಹೋಗಿ "ಅದೇನು ಹಂಗೆ ವಡ್ಡ ವಡ್ಡಾಗಿ ಮಾತಾಡ್ತಾರೆ. ಅವರೋ ಅವರ ಭಾಷೆಯೋ" ಅನ್ನೋರು.
"ನಾನು, ನನ್ನ ಮಟ್ಟಿಗೆ, ನನಗೆ"ಇಂದ ಮೇಲಕ್ಕೆ ಬಂದು ನಮ್ಮ ಹಳ್ಳಿಯ ಮಂದಿ, ಅವರ ಮಣ್ಣಿನ ನುಡಿ, ತಾಯ್ನುಡಿ, ಅವರ ತನ, ನನ್ನ ತಾಯ್ನುಡಿ-ಕನ್ನಡ ಅಂತ ಉಂಕಿಸಿದರೆ, ನಾವು ಹೆಚ್ಚಚ್ಚು ಕನ್ನಡಿಗರಿಗೆ ನೆರವಾಗುವುದು "ಹೆಚ್ಚುಹೆಚ್ಚು sanskritization"ನೋ, ಇಲ್ವೆ ಆಡು-ನುಡಿಗೆ ಹತ್ತಿರವಾದ "ಅಚ್ಚ-ಕನ್ನಡ"ವೋ ತಿಳಿಯಾಗುವುದು. "ಧೂಮಪಾನ" ಸಲೀಸೋ "ಹೊಗೆ ಸೇದಬೇಡಿ ಸಲೀಸೋ"?
ಇಲ್ಲಿ ಕನ್ನಡ ಒಂದು ಬರೀ ಮೋಜು, a hobby, a time pass thing, yet another extra language ಅನ್ನೋ ಮನವುಳ್ಳವರಿಗೆ, ನಾವು ಹೇಳಿದ್ದು ತಲೆಗೆ ಎಂದೂ ಇಳಿಯುವುದಿಲ್ಲ.
ಆದರೆ ಕನ್ನಡ ನಮಗೆ necessity. ಇದು ಇಲ್ದೇ ಇದ್ರೆ ನಮ್ಮಮ್ಮ, ನಮ್ಮಪ್ಪ ನಮ್ಮ ಬಳಗ ಇವರೆಲ್ಲ ಮೂಗರು!
ತುಸು ಅರ್ಥ ಮಾಡಿಕೊಳ್ಳಿ! ನಿಮ್ಮ "ಉಪಕಾರ, ಸಹಾಯ" ಇವೆಲ್ಲ ಹಲವರು ಹೇಳಲ್ಲ. "ಸಹಾಯ" ಹೇಳಕ್ಕೆ "ಸಾಯ" ಅಂತಾರೆ.
ಬೇಸರಪಟ್ಟುಕೊಳ್ಳದೇ ಸಂಗತಿಯ ಒಳನೋಡಿರಿ.
ಉ: 'ನನ್ನಿ'ಯ ಮೂಲ???
"ಅವೆಲ್ಲವೂ ತಮ್ಮ ಬರೀ ಮಟ್ಟಗೇ ಸರಿ"
ಅನ್ನು
"ಅವೆಲ್ಲವೂ ಬರೀ ತಮ್ಮ ಮಟ್ಟಿಗೇ ಸರಿ" ಎಂದು ತಿದ್ದಬೇಕಿತ್ತು.
ಉ: 'ನನ್ನಿ'ಯ ಮೂಲ???
"ನೆರವಾಯಿತು" ಎಂದು ಅಚ್ಚಗನ್ನಡದಲ್ಲೇ ಅನ್ನಬಹುದು . ಸಹಾಯ, ಉಪಕಾರ ಇವು ಸಕ್ಕದ ಅಂತ ನಿಮಗೆ ಚನ್ನಾಗೇ ಗೊತ್ತಿದೆ.
ಕನ್ನಡದ ಒರೆಗಳು ಅನಿತ್ತು ಸಲೀಸಾಗಿ ಹೊಳೆಯಲ್ಲ!!
ನನ್ನ ಮಟ್ಟಿಗೆ ಅದು ಹೊಳೆಯುವ ಪ್ರಶ್ಬೆ ಅಲ್ಲ - ನಾನು ಬರೆಯುವಾಗ ನೆರವು ಅನ್ನುವ ಪದ ಪ್ರಯೋಗಿಸುವೆನೇನೋ - ಆದರೆ, ಆಡು ಮಾತಿನಲ್ಲಿ , ಸಹಾಯ, ಉಪಕಾರ ಎನ್ನುವವನೇ!
ಕುಮಾರವ್ಯಾಸ "ಈ ಲೋಗರು" ಎಂಬ ಪ್ರಯೋಗ ಮಾಡಿದ್ದಾನೆ - (ಲೋಗ್- ಜನ (ದೇಶ್ಯ ಪದ - ಹಿಂದಿಯಿಂದ) ; ಆದರೆ ನನ್ನ ಮಾತಿನಲ್ಲು ನೀವು ಅದನ್ನು ಕಾಣಲಾರಿರಿ; ನನಗೆ ಜನರೇ ಸಾಕು!
-ಹಂಸಾನಂದಿ
ಉ: 'ನನ್ನಿ'ಯ ಮೂಲ???
ಹಾಗೆಯೆ ನಾವು ಧನ್ಯವಾದ, ಅಭಿನಂದನೆ, ವಂದನೆಗಳು ..ಇವುಗಳ ಬೇರುಗಳನ್ನು ಹೇಳುತ್ತೀರಾ?
ಉ: 'ನನ್ನಿ'ಯ ಮೂಲ???
ಸರ್ವಜ್ಞ ಅವರ ಒಂದು ತ್ರಿಪದಿಯಲ್ಲಿ 'ನನ್ನಿ' ಪದದ ಬಳಕೆ ಇದೆ. ಆ ತ್ರಿಪದಿ ಈ ಕೆಳಗಿನಂತಿದೆ
ಅನ್ನವನು ಇಕ್ಕುವುದು, ನನ್ನಿ ಯನು ನುಡಿಯುವುದು
ತನ್ನಂತೆ ಪರರೆಂದು ಬಗೆದೊಡೆ, ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.
ಇಲ್ಲಿ ನನ್ನಿ ಅಂದ್ರೆ 'ಸತ್ಯ', 'ನಿಜ' ಅಂತ ಅರ್ಥ ಬರುತ್ತೆ.
ಇನ್ನು ಕೆಲವು ಹಳಗನ್ನಡ ಹೊತ್ತಿಗೆಗಳಲ್ಲಿ ಈ ಪದವನ್ನು ಬಳಸಿರುವ ಸಾಧ್ಯತೆಗಳು ಬಹಳ ಇವೆ.
ಯಾರಾದರು ಕನ್ನಡ ಪಂಡಿತರು ಇಲ್ಲಿ ಇದ್ದರೆ ಉತ್ತರಿಸುತ್ತಾರೇನೋ ಕಾಯ್ದು ನೋಡಬೇಕು.
ಧನ್ಯವಾದಗಳು.
ಜಯಪ್ರಕಾಶ ನೇ ಶಿವಕವಿ
ಉ: 'ನನ್ನಿ'ಯ ಮೂಲ???
ಸರ್ವಜ್ಞ ಅವರ ಒಂದು ತ್ರಿಪದಿಯಲ್ಲಿ 'ನನ್ನಿ' ಪದದ ಬಳಕೆ ಇದೆ. ಆ ತ್ರಿಪದಿ ಈ ಕೆಳಗಿನಂತಿದೆ
ಅನ್ನವನು ಇಕ್ಕುವುದು, ನನ್ನಿ ಯನು ನುಡಿಯುವುದು
ತನ್ನಂತೆ ಪರರೆಂದು ಬಗೆದೊಡೆ, ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ.
ಇಲ್ಲಿ ನನ್ನಿ ಅಂದ್ರೆ 'ಸತ್ಯ', 'ನಿಜ' ಅಂತ ಅರ್ಥ ಬರುತ್ತೆ.
ಇನ್ನು ಕೆಲವು ಹಳಗನ್ನಡ ಹೊತ್ತಿಗೆಗಳಲ್ಲಿ ಈ ಪದವನ್ನು ಬಳಸಿರುವ ಸಾಧ್ಯತೆಗಳು ಬಹಳ ಇವೆ.
ಯಾರಾದರು ಕನ್ನಡ ಪಂಡಿತರು ಇಲ್ಲಿ ಇದ್ದರೆ ಉತ್ತರಿಸುತ್ತಾರೇನೋ ಕಾಯ್ದು ನೋಡಬೇಕು.
ಧನ್ಯವಾದಗಳು.
ಜಯಪ್ರಕಾಶ ನೇ ಶಿವಕವಿ
ಉ: 'ನನ್ನಿ'ಯ ಮೂಲ???
ಇದು ನಿಜಕ್ಕು ಒಳ್ಳೆಯ ಚರ್ಚೆ. ಕನ್ನಡದಲ್ಲಿ ಅನೇಕ ಆಂಡಯ್ಯಗಳು ಸ್ರುಷ್ಟಿಯಾಗತ್ತಿದ್ದಾರೆ. 11, 12 ನೇ ಶತಮಾನದಲ್ಲಿ ಜೀವಿಸಿದ್ದ ಆಂಡಯ್ಯ ಅನ್ನೋ ಒಬ್ಬ ಕನ್ನಡದ ಕಬ್ಬಿಗ, ಸಂಸ್ಕ್ರುತಕ್ಕೂಸೆಡ್ಡು ಹೊಡೆದು ಅಚ್ಚಕನ್ನಡದಲ್ಲಿ 'ಕಬ್ಬಿಗರ ಕಾವ' ಅನ್ನೊ ಹೊತ್ತಿಗೆ ಬರೆದಿದ್ದ.
ಇಂತ ಚರ್ಚೆಗಳು ಇನ್ನು ಹೆಚ್ಚು ನಡೆಯಲಿ ಅಚ್ಚಕನ್ನಡದ ಪದಗಳು (ಹಳೆಗನ್ನಡದ ಪದಗಳೂ ಸಹ) ನಿಘಂಟುಗಳಿಂದ ಹೊರಬಂದು ಎಲ್ಲರ ಮಾತುಗಳಲ್ಲಿ ನಲಿದಾಡಲಿ...
ಕನ್ನಡಮ್ಮಳಿಗೆ ಗೆಲುವಾಗಲಿ.
ಜಯಪ್ರಕಾಶ ನೇ ಶಿವಕವಿ.
ಉ: 'ನನ್ನಿ'ಯ ಮೂಲ???
ಕವಿ ಆಂಡಯ್ಯ ಸಂಸ್ಕೃತದ ದ್ವೇಷಿಯಾಗಿರಲಿಲ್ಲ. ಸಂಸ್ಕೃತದ ಶಬ್ದಗಳನ್ನು ಕನ್ನಡದ ಜನರ ಸಹಜ ಉಚ್ಚಾರಣೆಗೆ (ಕನ್ನಡವೋ ಎನಿಸುವ ಹಾಗೆ) ಮಾರ್ಪಡಿಸಿ ಬೞಸಬೇಕೆನ್ನುವುದು ಅವನ ಉದ್ದೇಶವಾಗಿತ್ತು. ಹಾಗಾಗಿ ಅವನ ರಚನೆಗಳಲ್ಲಿ ಸಾಕಷ್ಟು ತದ್ಭವಗಳನ್ನು ಕಾಣುತ್ತೇವೆ. ಸತ್ಯವಾಗಿ ಅವನ "ಕಬ್ಬಿಗರ ಕಾವ" "ಕಾವ್ಯಕಾರರ ಕಾಮ" ಎಂಬುದಾಗಿ ಎರಡು ತದ್ಭವಗಳನ್ನು ಬೞಸಿರುವುದನ್ನೇ ನೋಡಬಹುದು.
ಉ: 'ನನ್ನಿ'ಯ ಮೂಲ???
"ಸತ್ಯವಾಗಿ ಅವನ "ಕಬ್ಬಿಗರ ಕಾವ" "ಕಾವ್ಯಕಾರರ ಕಾಮ" ಎಂಬುದಾಗಿ ಎರಡು ತದ್ಭವಗಳನ್ನು ಬೞಸಿರುವುದನ್ನೇ ನೋಡಬಹುದು."
ಕನ್ನಡ ಕಂದರೆ,
ನೀವು ಇದನ್ನು ತಪ್ಪಾಗಿ ತಿಳಿದಿದ್ದೀರಿ ಎಂದು ನನ್ನನಿಸಿಕೆ.
ಸಕ್ಕದವಿಲ್ಲದೆ ಅಚ್ಚಕನ್ನಡದಲ್ಲಿ ಕಬ್ಬನೆಗೞ್ಚಲಾರರು ಎಂದು ಕಬ್ಬಿಗರ ಮೇಲೆ ಅಪವಾದ ಬಂದಾಗ, ಹಿಂದಿನವರಾದ "ಪೆಂಪನಾಳ್ದ" (ಹೆಸರುಮಾಡಿದ, ಪ್ರಸಿದ್ಧರಾದ) ಪಂಪ, ರನ್ನ ಮೊದಲಾದವರು ಸಕ್ಕದದ ನೆರವಿಲ್ಲದೆ ಕನ್ನಡದೊಳ್ ಕಬ್ಬವನ್ನು ನೆಗೞ್ಚಬಲ್ಲರಾದರೂ, ತನ್ನಂತೆ ಎದೆಮುಟ್ಟುವಂತೆ, ಮನಸೂರೆಗೊಳ್ಳುವಂತೆ, ಸೊಗಯಿಸುವ ಕಬ್ಬ ಬರೆಯುವವರಾರಿಲ್ಲವೆಂದು ಈ ಕಬ್ಬವನ್ನು ಬರೆಯಲಾಗಿ ಈ ಕಬ್ಬಕ್ಕೆ "ಕಬ್ಬಿಗರ ಕಾವ" ಎಂಬ ಹೆಸರು ಬಂದಿದೆ ಎಂದು ದಿಮ್ಮಿದಿರರಾದ ರಾಮಾನುಜಾಚಾರ್ಯರು ಬಗೆಯುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ “ಕಬ್ಬಿಗರ ಕಾವಂ” ಆಂಡಯ್ಯ .
ಉ: 'ನನ್ನಿ'ಯ ಮೂಲ???
ಇದಕ್ಕೆ "ಮದನ ವಿಜಯ", "ಸೊಬಗಿನ ಸುಗ್ಗಿ", "ಕಾವನ ಗೆಲ್ಲ" ಎಂದೂ ಕೂಡ ಕರೆಯುವರಂತೆ. "ಕಾವ್ಯಕಾರರ ಕಾಮ" ಇದು ತಪ್ಪು.
ಉ: 'ನನ್ನಿ'ಯ ಮೂಲ???
"ರಾಮಾನುಜಾಚಾರ್ಯರು" ಇದನ್ನು "ರಾಮಾನುಜಯ್ಯಂಗಾರರು" ಎಂದು ಓದಿಕೊಳ್ಳಿ.
ಉ: 'ನನ್ನಿ'ಯ ಮೂಲ???
ನನ್ನಿಯ ಪದದ ಬಗ್ಗೆ ಚರ್ಚೆಯ ಮೊದಲು ಮಾಡಿದ ಶ್ರೀ ಮತ್ತು ಒಕ್ಕಣೆಗಳನ್ನು ಪೇರಿಸಿರುವ ಎಲ್ಲರಿಗೂ ನನ್ನಿ. ಈ "ನನ್ನಿಗೆ" ಅಂಟಾದ ಈ ಬರಹ ನೋಡಿರಿ, ಸುನಿಲಮಾವ ನನ್ನಿಮಾವನಾದದ್ದು ಹೇಗೆ ?
ನನ್ನ ಲೈಫಲ್ಲೇ ರಿಪೀರಿ ಮಾಡಕ್ಕಾಗ್ದೇ ಇರೋ ಸಾಯ(ಸಹಾಯ) ಆಗೋಗಿದೆ 
ನನ್ನಿ ಎಂದರೆ ಮುಖ್ಯವಾಗಿ ಕೃತಜ್ಞತಾಭಾವ, ಹಿತಕರವಾದ ಮಾತು, ಕಪಟವಿಲ್ಲದ್ದು ಎಂದನಿಸುತ್ತದೆ. ನನ್ನಿ ಪದದ ಬಗ್ಗೆ ಈಗ್ಗೆ ಹಲವು ತಿಂಗಳ ಹಿಂದೆ ನನ್ನ ಕೊಲೀಗ್ ಒಬ್ಬರಿಗೆ ಹೇಳಿದಾಗ, ಅವರು ಅದೇ ದಿನ ಅವರ ಮನೆಯವರೆಲ್ಲರಿಗೆ ಹೇಳಿದರಂತೆ. ಆಗ ಅವರ ತಂದೆ, ಕುಮಾರವ್ಯಾಸ ಭಾರತದಲ್ಲಿ ನನ್ನಿತತ್ವ ಎಂಬ ವ್ಯಾಖ್ಯಾನ ಬರುತ್ತೆ ಅಂತ ಹೇಳಿದ್ದರಂತೆ. (ನಾನು ಕುಮಾರವ್ಯಾಸ ಭಾರತ ಓದಿಲ್ಲ, ಹಂಸಾನಂದಿಯವರು ಒಂದು ಎಳೆ ಹಾಕಿದ್ದಾರೆ). ಇವುಗಳ ಹಿನ್ನೆಲೆಯಲ್ಲಿ ನನ್ನಿ ಎಂಬುದು "ಕೃತಜ್ಞ ಭಾವನೆ" ಎಂಬುದಾಗಿಯೂ ಸಾಹಿತ್ಯದಲ್ಲಿ ಬಳಕೆಯಾಗಿದೆ ಎಂದು ನನಗೆ ಅನ್ನಿಸುತ್ತದೆ. "ನನ್ನಿ=ಸತ್ಯ" ಎನ್ನುವ ಡಿಕ್ಷನರಿ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿ ಖಂಡಿತವಾಗಿಯೂ ಈ ಪದಕ್ಕಿದೆ. ಕೆಳಗಿನ ವಚನಗಳನ್ನೂ ಗಮನಿಸಿ.
ವಚನ ೭೬೭
ಅನ್ನವನಿಕ್ಕಿ ನನ್ನಿಯ ನುಡಿದು
ಅರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದಡೆ
ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ
ವಚನ ೧೬೬೪
ಅನ್ನ-ಉದಕಕ್ಕೆ, ನನ್ನಿಯ ಮಾತಿಗೆ,
ಚೆನ್ನಾಯಿತ್ತು ಒಡೆಯರ ಕಟ್ಟಳೆ,
ಮಿಕ್ಕಾದವಕ್ಕೆ ಗನ್ನವ ಮಾಡಿ-
ಈ ಬಣ್ಣ ಬಚ್ಚಣೆಯಲ್ಲಿ ನಡೆವ ಕನ್ನಗಳ್ಳರ ಶೀಲ
ಇಲ್ಲಿಗೆ ಅಲ್ಲಿಗೆ ಮತ್ತೆಲ್ಲಿಗೂ ಇಲ್ಲ.
ಏಲೇಶ್ವರಲಿಂಗವು ಅವರವೊಲ್ಲನಾಗಿ.
ಉ: 'ನನ್ನಿ'ಯ ಮೂಲ???
ಸುನಿಲಂಗೆ ಜೈ(ಗೆಲ್)
ಉ: 'ನನ್ನಿ'ಯ ಮೂಲ???
ನನ್ನಿ ಎಂದರೆ ಶುಭ ಎಂಬ ಅರ್ಥವೂ ಇದೆಯೇ ?
ಹಾಗಿದ್ದಲ್ಲಿ ನೀವು ಮೇಲೆ ಉದಾಹರಿಸಿದ (ಉದಹರಿಸಿದ?) ಪದ್ಯಗಳಲ್ಲೂ ಈ ಅರ್ಥ ಹೊಂದುತ್ತದೆ . ಮತ್ತು ನಿಮ್ಮ ಎಲ್ಲ ಆಶಯಗಳಲ್ಲಿಯೂ ಹೊಂದುತ್ತದೆ .
ಆಗ ನನ್ನಿ ಅಂತ ವಿಶ್ಶು ಮಾಡಿದಾಗ ಶುಭವಾಗಲಿ ಎಂಬ ಕೋರಿಕೆ ಎಂದಾಗುತ್ತದೆ.
ಉ: 'ನನ್ನಿ'ಯ ಮೂಲ???
ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು...
ಮೇಲೆ ಉದಹರಿಸಿದ ಎಲ್ಲಾ ವಚನಗಳಲ್ಲೂ, 'ನನ್ನಿ' ಎಂಬುದಕ್ಕೆ 'ಒಳ್ಳೆಯದು'/ 'ಹಿತವಾದದ್ದು'/'ನಿಜವಾದದ್ದು' ಎಂಬ ಅರ್ಥವೂ ಬರುತ್ತದೆ.
ಮಹೇಶರು ಹೇಳಿದಂತೆ, 'ನೆರವಾಯಿತು' ಎಂಬ ಪದವನ್ನು ಬಳಸಿದರೆ ಹೆಚ್ಚು ಸೂಕ್ತ ಎಂಬುದು ನನ್ನ ಅನಿಸಿಕೆ...
--ಶ್ರೀ
ಉ: 'ನನ್ನಿ'ಯ ಮೂಲ???
ಈ ಮಾತುಕತೆಯನ್ನು ಮೊದಲು ಮಾಡಿದ ನಿಮಗೆ
ನಲ್ವೆ ನನ್ನಿ, ಬಲು ನೆರವಾಯಿತು!
ಉ: 'ನನ್ನಿ'ಯ ಮೂಲ???
ನನ್ನಿಯ ಮೂಲ ’ನಲ್’ ಒಳ್ಳೆಯದು ಸುಂದರ ಎಂಬುದರ ಭಾವನಾಮ. ಸತ್ಯಂ ಶಿವಂ ಸುಂದರಂ ಎಂಬಂತೆ ಸತ್ಯವು ಅಂದರೆ ಇರಬೇಕಾದ್ದು ಸುಂದರವು ಶಿವಂ ಅಂದರೆ ಮಂಗಳಕರವೆಂಬಂತೆ ನನ್ನಿಯೆಂದರೆ ಸತ್ಯ ಎಂಬರ್ಥವೂ ಇದೆ. ಈ ’ಒಳ್ಳೆಯದು’ ಎಂಬುದು ಕನ್ನಡದ ’ಉಳ್=ಇರು’ ಎಂಬುದಱ ಭಾವನಾಮ. ಇರಬೇಕಾದ್ದು ಚೆನ್ನಾಗಿಯೇ (ಸುಂದರವಾಗಿಯೇ) ಇರಬೇಕೆಂದು ಹಿರಿಯರ ಅಭಿಪ್ರಾಯ. ಅಸತ್ಯವೂ ಕಣ್ಣಿಗೆ ತೋಱುವ ಸತ್ಯವೂ ಒಳ್ಳೆಯದು ಅಥವಾ ಪರಿಣಾಮದಲ್ಲಿ (ನಿಜ ತಿಳಿದಾಗ) ಪಥ್ಯವೂ ಮನಸ್ಸಿಗೆ ಹಿಡಿಸದಿರುವುದಱಿಂದ ಒಳ್ಳೆಯದು ಸುಂದರವಾಗಿರುವುದು ಹಾಗೆಯೇ ಸ್ಥಿರವಾಗಿ ಇರುವುದು ಸತ್ಯದ (ನಿಜವಾದ ಇರುವಿಕೆ) ಸ್ವಭಾವ.
ಉ: 'ನನ್ನಿ'ಯ ಮೂಲ???
ಕಬ್ಬಿಗ ಮತ್ತು ಕಾವ ಎರಡೂ ತದ್ಭವಗಳೆಂದು ಒಪ್ಪದಿದ್ದರೂ ಆಂಡಯ್ಯನ ಕಾವ್ಯಗಳಲ್ಲಿ ಬಹಳಷ್ಟು ತದ್ಭವಗಳನ್ನು ಉಪಯೋಗಿಸಿದ್ದಾನೆ. ಇಲ್ಲಿ ಮೆಚ್ಚುವ ವಿಷಯವೆಂದರೆ ಸಂಸ್ಕೃತ ಶಬ್ದಗಳನ್ನು ಕನ್ನಡಕ್ಕೆ ಒಗ್ಗಿಸಿಕೊಂಡು ಬರೆಯುತ್ತಾನೆ ಕವಿ ಆಂಡಯ್ಯ.