ಕಬ್ಬಿಗ = ಕವಿ
ಜೈ ಭಾರತ ಜನನಿಯ ತನು- ಜಾತೆ - ಯಲ್ಲಿ 'ಕಬ್ಬಿಗರುದಿಸಿದ ಮಂಗಳಧಾಮ, ಕವಿ ಕೋಗಿಲೆಗಳ ಪುಣ್ಯಾರಾಮ' ಅನ್ನುತ್ತಾರೆ ಕುವೆಂಪು. ಕಬ್ಬಿಗ ಅನ್ನುವ ಶಬ್ದದ ಅರ್ಥ ಕವಿ ಎಂದು ಆದಲ್ಲಿ , ಒಂದೇ ಅರ್ಥ ಬರುವ ಎರಡು ಶಬ್ದಗಳನ್ನು ಪಕ್ಕ ಪಕ್ಕ ಇಟ್ಟರೆ ಕುವೆಂಪು.. ? ಅಥವಾ ಕಬ್ಬಿಗ ಅಂದರೆ ಬೇರೆ ಅರ್ಥವಿದೆಯೆ...? ಬರಹ ನಿಘಂಟು ನಾನು ನೋಡಿ ಆಗಿದೆ, ಗೊತ್ತಿದ್ದವರಿಂದ ಸಮಾಧಾನಕ್ಕಾಗಿ ಕಾಯುತ್ತಿದ್ದೇನೆ.
( ಈ ವಿಷಯ ಚರ್ಚೆ ಆಗಬೇಕಾದರೆ | ಚರ್ಚೆಯಲ್ಲಿ ಸೇರಬೇಕಾದರೆ ನಾನು 75 ಶಬ್ದಗಳು ಸೇರಿಸಬೇಕು ಅನ್ನುತ್ತಿದೆ ಸಂಪದ , ಅಂತೂ ಇಂತೂ ಕಷ್ಟ ಪಟ್ಟು 75 ಶಬ್ದ ಕುಟ್ಟಿ ಸೇರಿಸಿದ್ದೇನೆ
:-(
:-(
:-(
:-(
:-(
, ಗೊತ್ತಿರುವವರಿಂದ ಉತ್ತರ ಬೇಕು ... )

- Login or register to post comments
- 498 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಉ: ಕಬ್ಬಿಗ = ಕವಿ
ಶ್ರೀ.ಡಿ.ಎನ್(ಅಥವಾ ಡಿ.ಎನ್.ಶ್ರೀ), ಕಬ್ಬಿಗ ಎನ್ನುವ ಪದ ಹೀಗೆ ಬಂದಿದೆ. ಕಾವ್ಯ(ಸಂಸ್ಕೃತ) = ಕಬ್ಬ(ಕನ್ನಡ)
ಮಾಡು - ಮಾಡುಗ, ನೋಡು - ನೋಡುಗ, ಓದು - ಓದುಗ, ಅಂಬಿಗ, ಹಾಡುಗ ಹೀಗೆ.
ಕಬ್ಬ - ಕಬ್ಬಿಗ
"ಕಬ್ಬ" ಪದಕ್ಕೆ ನಾಮಪ್ರತ್ಯಯ ಸೇರಿ ಕಬ್ಬಿಗ ಪದ ಬಂದಿದೆ. ಕಬ್ಬಿಗರ ಕಾವನ್(ಕವಿಗಳ ರಕ್ಷಕ) ಎಂಬ ಒಂದು ಅಚ್ಚಗನ್ನಡ ಕಾವ್ಯವಿದೆ. ಇದರ ಬಗ್ಗೆ ಸಂಪದದಲ್ಲಿ ಕೆಲವು ಕಾಲ ಚರ್ಚೆಗಳಾಗಿದ್ದವು. ಬಿಡುವಿದ್ದಾಗ ಇದನ್ನು ಓದಿ.
ಉ: ಕಬ್ಬಿಗ = ಕವಿ
ಕಬ್ಬಿಗ ಎಂದರೆ ಕಬ್ಬಿನಂತೆ (= ಸಿಪ್ಪೆ ಗಟ್ಟಿ ಆದರೆ ಒಳಗೆ ಸಿಹಿಯಾದ ರಸ) ಇರುವ ಕವಿತೆ ಬರೆಯುವ ಕವಿ ಎಂದು ಅರ್ಥೈಸಿಕೊಳ್ಳೋಣ.
ಉ: ಕಬ್ಬಿಗ = ಕವಿ
ಹಾಗಾದರೆ ಕುವೆಂಪುರವರು ಯಾಕೆ ಹಾಗೆಂದಿರಬಹುದು...? ನನ್ನ ಗೆಳೆಯರ ಬಳಗದಲ್ಲಿ ಇದು ಚರ್ಚೆಗೆ ಬಂದಾಗ, 'ಕಬ್ಬಿಗರುದಿಸಿದ..' ಸಾಲಿನ ಹಿಂದೆ ಮಹಾನ್ ಕವಿಗಳ ಹೆಸರುಗಳಿರುವುದರಿಂದ ಬಹುಷಃ ಕಬ್ಬಿಗರೆಂದರೆ ಮಹಾನ್ ಕವಿಗಳೆಂಬ ಅರ್ಥದಲ್ಲಿ ತೆಗೆದುಕೊಂಡಿರಬಹುದೆ ಅಂತ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು.
ಉ: ಕಬ್ಬಿಗ = ಕವಿ
ಆ ಸಾಲನ್ನು
"ಕುಮಾರವ್ಯಾಸನ ಮಂಗಳಧಾಮ" ಅಂತ ಕೆಲವರು ಹಾಡುವರು.
ಕಾವ್ಯ => ಕಬ್ಬ => ಕಪ್ಪಿಯ( ತಮಿಳು? )
ಕಬ್ಬವನ್ನು ಬರೆಯುವವನು ಕಬ್ಬಿಗ.
ಹೀಗೆ 'ಇಗ' ಸೇರಿ ಹಲವು ಒರೆಗಳು ಬಂದಿದೆ.
ಕೆಲವು ತಮಾಶೆ ಹುಟ್ಟಿಸಿದ್ದೇನೆ
)

೧) ಕೊಬ್ಬಿಗ ( ಕೊಬ್ಬು ಇರವವನು )
೨) ಕನ್ನಡಕಿಗ/ಕಣ್ಣಡಕಿಗ ( ಕಣ್ಣಡಕ ಹಾಕುವವನು )
೩) ಸೂಜಿಗ ( ಸೂಜಿ ಹಿಡಿದವನು
೪) ಗಬ್ಬಿಗ ( ಗಬ್ಬಾಗಿರುವವನು )
ಉ: ಕಬ್ಬಿಗ = ಕವಿ
ಕೆಲವು ದಿನಗಳ ಹಿಂದೆ ಡುಂಡಿರಾಜರು ವಿ.ಕ.ದ ಅಂಕಣದಲ್ಲಿ 'ಕಬ್ಬಿಗ' --> ಕಬ್ಬು ಬೆಳೆಯುವವನು ಅಂತಾಗಬೇಕುತ್ತು
ಆದರೆ ಆಗಲೆ 'ಕವಿ' ಗಳು 'ಕಬ್ಬಿಗ' ರಾಗಿರುವುದರಿಂದ ಈ ಪದದಿಂದಲೂ ರೈತರು ವಂಚಿತರಾಗಿದ್ದಾರೆ ಅಂತ ಬರೆದಿದ್ದರು
ಉ: ಕಬ್ಬಿಗ = ಕವಿ
ಅವ್ದವ್ದು
!!
ಹಾ...
ಕುವೆಂಪು ಅವರ ಮಾತು "ಕಬ್ಬಿಗರುದಿಸಿದ ಮಂಗಳಧಾಮ" ಅಂದ್ರೆ ಹೀಗು ಅರ್ತ ಮಾಡಿಕೋಬವುದಲ್ಲ!
ಕಬ್ಬು ಬೆಳಗಾರರಿಂದ, ಮಂಗಳ/ಶುಭ/ಸರಿ/ಚೆಲುವುಗಳಿಸಿ ನಾಡು ಈ ಕನ್ನಡವೆಂದು.
ಇಲ್ಲಿ ನೋಡಿ
ಕಬ್ಬಿರು ಉದಿಸಿದ. ಉದಿಸು = ಮೂಡಿಸು, ಹುಟ್ಟಿಸು. ಕಬ್ಬುಗಾರರೇ ಅಲ್ಲವೇ ಬೆಳೆಯನ್ನು ಮೂಡಿಸುವುದು.
ನಮ್ಮ ಮಂಡ್ಯ, ಬೀದರ ಮುಂತಾದ ಕಬ್ಬಬೆಳೆಗಾರರಿಗೆ ಜೈ!
ಉ: ಕಬ್ಬಿಗ = ಕವಿ
ಬೀದರ್ ನಲ್ಲಿ ಬೆಳೀತಾರ ..?? ನಂಗ ಗೊತ್ತಿರ ಹಂಗೆ ಬಳ್ಳಿಗಾವಿ/ಬಾಗಲಕೋಟೆಯಲ್ಲೇ ಬಹಳ ಬೆಳೆಯೋದು.
ನೀವು ಹೇಳ್ದಂಗೆ ಕುವೆಂಪುರವರ ಕಬ್ಬಿಗ = ಕಬ್ಬು ಬೆಳೆಯುವವನೆ ಆಗರಿಬಹುದು !!
ಉ: ಕಬ್ಬಿಗ = ಕವಿ
ಬೆಳಗಾವಿ ಅನ್ನೋದಕ್ಕೆ ಬಳ್ಳಿಗಾವಿ ಅಂತ ಬರೆದಿದ್ದೀರ ಅಂದುಕೊಂಡಿದ್ದೇನೆ.
ಬಳ್ಳಿಗಾವಿ ಎಂಬ ಊರು ಇರುವುದು ಶಿವಮೊಗ್ಗ ಜಿಲ್ಲೆ (ಅಥವ ಈಗ ದಾವಣಗೆರೆ ಆಗಿರಬಹುದು) ಶಿಕಾರಿಪುರ ತಾಲ್ಲೂಕಿನಲ್ಲಿ.
ಹೊಯ್ಸಳರ ಕಾಲದ ಒಂದು ಪ್ರಮುಖ ಸ್ಥಳ ಇದು. ಬೇರೆ ಕಡೆಗಳಲ್ಲಿ ದೇವಾಲಯಗಳನ್ನು ಕಟ್ಟುವ ಮೊದಲು, ಇಲ್ಲಿ ಹೊಯ್ಸಳರ ಶಿಲ್ಪಿಗಳು ಬಹಳಷ್ಟು ಪ್ರಯೋಗ ನಡೆಸಿದ್ದರೆಂದು ಹೇಳಲಾಗಿದೆ.
ಬಳ್ಳಿಗಾವಿಯ ಬಗ್ಗೆ ಒಂದು ಸುದ್ದಿ ಕೊಂಡಿ ನೋಡಿ ಇಲ್ಲಿ:
http://www.deccanherald.com/archives/jan252005/spt7.asp
ಇನ್ನು ಬೆಳಗಾವಿ ಬಗ್ಗೆ ಹೇಳೋದೇನಿಲ್ಲ - ನನಗೆ ತಿಳಿದಂತೆ, ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆ ಹೆಚ್ಹು. ಆದರೆ ಅದೆಲ್ಲ ಹೋಗುವುದು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಿಗೆ
-ಹಂಸಾನಂದಿ
ಉ: ಕಬ್ಬಿಗ = ಕವಿ
"ಕಬ್ಬಿಗರುದಿಸಿದ ಮಂಗಳಧಾಮ..." ಸಾಲನ್ನು ನಾನು ಡುಂಡಿರಾಜ್ ಅವರಿಗೆ ಒಂದು ಇಮೈಲ್‍ನಲ್ಲಿ ಈರೀತಿಯಾಗಿ ಉಪಯೋಗಿಸಿಕೊಂಡಿದ್ದೆ.
"ಕಬ್ಬಿಗ ಕೊರೆದಿಹ ಮಂಗಳವಾರ..." (ಪ್ರತಿ ಮಂಗಳವಾರ ವಿಜಯಕರ್ನಾಟಕದಲ್ಲಿ ಪ್ರಕಟವಾಗುವ ಡುಂಡಿರಾಜ್ ಅಂಕಂಅ ಮಾತು-ಕ(ವಿ)ತೆ ಬಗ್ಗೆ).
ಅದಕ್ಕವರು ಉತ್ತರವಾಗಿ, ’ಜೋಶಿಯವರೆ ನಿಮ್ಮ ಅಂಕಣ ಸಹ ದಟ್ಸ್‌ಕನ್ನಡದಲ್ಲಿ ಮಂಗಳವಾರವೇ ಬರುವುದಲ್ಲ?" ಎಂದು ಪ್ರತಿಸವಾಲಿಸಿದ್ದರು
ಆಗ ನನ್ನ ಸಮಜಾಯಿಶಿ ಹೀಗಿತ್ತು: "ನಾನು ಕಬ್ಬಿಗನಲ್ಲ, ತುಕ್ಕು ಹಿಡಿದ ಕಬ್ಬಿಣ. ಹಾಗಾಗಿ "ಕಬ್ಬಿಣ ಕೆರೆದಿಹ ಮಂಗಳವಾರ..." ಎನ್ನಬಹುದು, ವಿಚಿತ್ರಾನ್ನದ ಬಾಣಲೆಯನ್ನು ಕೆರೆಯುವುದೆಂದರ್ಥದಲ್ಲಿ.