ಅಮ್ಡಾಲ್ಸ್ ನಿಯಮ - ಏನಿದು?
ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.
ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ.
ಇದರ ವಿಚಾರವಾಗಿ ಗೂಗಲಿಸಿದಾಗ ಅಮ್ಡಾಲ್ಸ್ ನ ನಿಯಮ ಕಣ್ಣಿಗೆ ಬಿತ್ತು. ತುಂಬ ಸ್ವಾರಸ್ಯಕರವಾಗಿದೆ ಅನ್ನಿಸಿತು.
ಯಾವುದೇ ಮಲ್ಟಿ ಕೋರ್ ಪ್ರಾಸೆಸರ್ ನಿಂದ ವ್ಯವಸ್ಥೆಗೆ(system) ದೊರಕುವ ವೇಗ(speedup) ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಲ್ಗಾರಿತಮ್ ಮೇಲೆ ಜಾಸ್ತಿ ಅವಲಂಬಿತವಾಗಿದೆಯೆ ಹೊರತು ಎಷ್ಟು ಪ್ರಾಸೆಸರ್ ಕೋರ್ ಗಳಿವೆಂಬುದರ ಮೇಲಲ್ಲ.
ಅಂದರೆ ವ್ಯವಸ್ಥೆಯಲ್ಲಿ ಪ್ರಾಸೆಸರ್ ಗಳ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಅದರ ವೇಗ(ಅಥವ ಕಾರ್ಯಕ್ಷಮತೆ) ಅದಕ್ಕೆ ತಕ್ಕಂತೆ ಹೆಚ್ಚಾಗುವುದಿಲ್ಲ.
-ಜೈ ಕರ್ನಾಟಕ

- Login or register to post comments
- 675 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಅಮ್ಡಾಲ್ಸ್ ನಿಯಮ - ಏನಿದು?
ಬಹಳ ಇಂಟರೆಸ್ಟಿಂಗ್ ವಿಷಯ ಇದು. ಡ್ಯುಅಲ್ ಕೋರ್ ಎಂದುಕೊಂಡು ಹೆಚ್ಚು ಹಣ ವ್ಯಯ ಮಾಡಿ ತಂದ ಪ್ರಾಸೆಸರ್ ಹಳೆಯದಕ್ಕಿಂತ ಕಳಪೆಯಂತೆ ಆಡತೊಡಗಿದರೆ ನಾವುಗಳು ಅರ್ಥಮಾಡಿಕೊಂಡು ಮನೆಯವರಿಗೆ ಹೇಳಲು ಈ ವಿಷಯ ಚೆಂದ. ಆದರೆ ಅವರಿಗೆಷ್ಟು ಅರ್ಥವಾಗುವುದೋ ನನಗ್ಗೊತ್ತಿಲ್ಲ.
"ಹೋಗಿ ಹೋಗಿ ಹಳೆಯದಕ್ಕಿಂತ ಕಳಪೆ ಪ್ರಾಸೆಸರ್ ತಂದ್ಯಲ್ಲೋ" ಅಂತ ಅನ್ನಿಸಿಕೊಳ್ಳೋದಂತು ಖರೆ.
೬೪ ಬಿಟ್ ಪ್ರಾಸೆಸರುಗಳಿಗೂ ಹಲವು ದಿನ ಹೀಗೆಯೇ ಇತ್ತು. ೬೪ ಬಿಟ್ ಸಂಪೂರ್ಣವಾಗಿ ಬಳಸುವ ತಂತ್ರಾಂಶವಿಲ್ಲದಿದ್ದರೆ ಈ ಸವಲತ್ತು ಇದ್ದೂ ಪ್ರಯೋಜನವಿಲ್ಲ. ಇತ್ತೀಚೆಗೆ ಇಲ್ಲಿ ಸುಧಾರಣೆಯಾಗಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: ಅಮ್ಡಾಲ್ಸ್ ನಿಯಮ ಮತ್ತು ಸಾಮಾಜಿಕ ವ್ಯವಸ್ಥೆ
ನಾಡಿಗರೆ,
ಮನೆಯವರಿಗೆ ಹೀಗೆ ತಿಳಿ ಹೇಳಬಹುದು .
ಒಂದು ಕಂಪ್ಯೂಟರ್ ವ್ಯವಸ್ಥೆಯನ್ನು ಒಂದು ದೇಶಕ್ಕೆ ಹೋಲಿಕೆ ಮಾಡೋಣ. ಅದರಲ್ಲಿರುವ ಜನಗಳೇ ಪ್ರಾಸೆಸರ್ ಕೋರ್ ಗಳು (ಅಂದರೆ ಮೆದುಳು ಇರುವ ಪ್ರಾಣಿಗಳು). ದೇಶದಲ್ಲಿ ಎಷ್ಟೇ ಜನರಿದ್ದರೂ ಅವರನ್ನು ನಿರ್ದೇಶಿಸುವ ಒಂದು ಒಳ್ಳೆಯ ಪ್ರಜಾತಂತ್ರ ವ್ಯವಸ್ಥೆ(ಬಹುಶಃ ಇದನ್ನು ನೀವು ಅಲ್ಗಾರಿದಂ ಅನ್ನಬಹುದು) ಯಿದ್ದಲ್ಲಿ ಮಾತ್ರ ದೇಶದಲ್ಲಿ ಶಾಂತಿ ನೆಲೆಸುತ್ತದೆ ಮತ್ತು ದೇಶವು ಪ್ರಗತಿಪಥದಲ್ಲಿರುತ್ತದೆ. ಅಂದರೆ ಒಂದು ದೇಶದ ಕಾರ್ಯಕ್ಷಮತೆ(GDP ಎನ್ನಬಹುದು?) ಹೆಚ್ಚುತ್ತದೆ ಇಲ್ಲವಾದರೆ ಒಳ್ಳೆಯ ಅಲ್ಗಾರಿದಂ ಇಲ್ಲದಿರುವ ವ್ಯವಸ್ಥೆಗಳಂತೆ, ಕೇವಲ ವಿದ್ಯುತ್ ಶಕ್ತಿಯನ್ನು ಕಬಳಿಸುವ ವ್ಯರ್ಥ ಸಾಧನಗಳುಗುತ್ತಾರೆ ದೇಶದ ಜನರು.
ಈ ನಿಯಮದ ಪ್ರಕಾರ ದೇಶದ ಉದ್ಧಾರ ಅದರ ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು - ಇದು ಒಪ್ಪಿಕೊಳ್ಳಬಹುದಾದ ವಿಚಾರವಲ್ಲವೆ?
ಒಹೊ.ಇದೇನಿದು ಅಮ್ಡಾಲನ ನಿಯಮ ಒಂದು ದೇಶದ ಸಾಮಜಿಕ ಪರಿಸ್ಥಿತಿಗೊ ಸರಿಹೊಂದುವುದೆ?!
ಉ: ಅಮ್ಡಾಲ್ಸ್ ನಿಯಮ - ಏನಿದು?
ಯಾವುದೇ ಒಂದು ಕೆಲಸವನ್ನು ಹಾರ್ಡ್ವೇರ್ ನಲ್ಲಿ ಇಂಪ್ಲಿಮೆಂಟ್ ಮಾಡಿದರೆ ಅದು ಸಾಫ್ಟ್ವೇರ್ ಬಳಸಿ ಇಂಪ್ಲಿಮೆಂಟ್ ಮಾಡಿದ್ದಕ್ಕಿಂತ ಸಾವಿರ ಪಟ್ಟು ಹೆಚ್ಚು ವೇಗವಾಗಿ ಕೆಲಸ ಮಾಡುತ್ತೆ ಅಂತೆ!
(ಇನ್ನು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಗಳಲ್ಲೂ ತಮ್ಮೊಳಗೆನೆ ಒಂದಕ್ಕಿಂತ ಒಂದು efficient (ವೇಗ) ವಿಧಾನ ಗಳು ಇರುತ್ತವೆ ಅನ್ನೋದು ಬೇರೆ ವಿಷಯ!)
ವೈಭವ ಎಲ್ಲಿ ಇತ್ತೇಚೆಗೆ ಕಾಣುತ್ತಿಲ್ಲ.
ಈ ಬರಹ ಇವತ್ತು ಕಣ್ಣಿಗೆ ಬಿಟ್ಟು ....ಹಾಗಾಗಿ ಈಗ ನನ್ನ ಕೆಲ ಅನಿಸಿಕೆಗಳು!
ಈ ವಿಷಯವಾಗಿ ಬರೆದಿದ್ದಕ್ಕೆ ನನ್ನೀ
ಸವಿತೃ