ಮೈಕ್ರೋಸಾಫ್ಟ್ ನ 'ವಿಸ್ತಾ' ಇನ್ನೇನು ಮಾರುಕಟ್ಟೆಗೆ ಬರಲಿದೆಯಂತೆ. ಎಕ್ಸ್ ಪಿಯಲ್ಲಿ ಇದ್ದ ಕನ್ನಡ ಅಕ್ಷರಗಳ ಸಮಸ್ಯೆ ಇಲ್ಲಿಯೂ ಮುಂದುವರಿದಿದೆ ಎಂಬುದು ವಿಸ್ತಾದ ರಿಲೀಸ್ ಕ್ಯಾಂಡಿಡೇಟ್ -2 ಪರೀಕ್ಷಿಸಿದವರಿಗೆಲ್ಲಾ ತಿಳಿಯುತ್ತದೆ. Rank ಈಗ ರ್ಯಾಂಕ್ ಆಗುವುದಿಲ್ಲ. ಆದರೆ ಸಾಫ್ಟ್ ವೇರ್ ಎಂದು ಬರೆದರೆ ಅದು ಸಾ ಫ್ ಟ್ ವೇ ರ್ ಆಗುತ್ತದೆ.
ಮೈಕ್ರೋಸಾಫ್ಟ್ ನಲ್ಲಿ ಇದೆಲ್ಲಾ ಸರಿಯಾಗಿರಲೇಬೇಕು ಎಂದು ವಾದಿಸುವುದರ ಬದಲಿಗೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ಎಂಬ ವಾದವನ್ನು ಮಂಡಿಸಬಹುದು. ಇದು ತಾತ್ವಿಕವಾಗಿ ಸರಿಯೂ ಹೌದು. ನನಗೆ ಕಾಡುತ್ತಿರುವುದು ಈ ಸಮಸ್ಯೆಯಲ್ಲ. ಯಾವುದಾದರೂ ಒಂದು ಸಂಸ್ಥೆ ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯೊಂದನ್ನು ಅದಕ್ಕೆ ತೋಚಿದಂತೆ ಬದಲಾಯಿಸಿಬಿಡುವುದನ್ನು ಒಪ್ಪಿಕೊಳ್ಳಬೇಕೇ?
ಸಾ ಫ್ ಟ್ ವೇ ರ್ ಎಂಬಂಥ ಪ್ರಯೋಗವನ್ನು ಬಿಎಂಶ್ರೀ ಒಮ್ಮೆ ಪ್ರತಿಪಾದಿಸಿದ್ದರು. ಆದರೆ ಅದಕ್ಕೆ ಹೆಚ್ಚಿನವರ ಬೆಂಬಲ ದೊರೆಯಲಿಲ್ಲ. ಕೆಲವರಿದನ್ನು ವಿರೋಧಿಸಿದರು ಎಂದೂ ಓದಿದ್ದು ನೆನಪಾಗುತ್ತಿದೆ. ಈಗ ಮೈಕ್ರೋಸಾಫ್ಟ್ ಇದನ್ನು ಹೇರುತ್ತಿದೆ. ವಿರೋಧಿಸುವುದು ಬಿಡಿ. ಕನಿಷ್ಠ ಇದರ ಕುರಿತು ಚರ್ಚಿಸುತ್ತಿಲ್ಲ.
ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಸಾಫ್ಟ್ ವೇರ್ ಗಳ ಅತಿದೊಡ್ಡ ಗ್ರಾಹಕ ಸರಕಾರ. ಸರಕಾರ ತನ್ನ ಎಲ್ಲಾ ಕೆಲಸಕ್ಕೆ ಮೈಕ್ರೋಸಾಫ್ಟ್ ನ ತಂತ್ರಾಂಶಗಳನ್ನೇ ಬಳಸುತ್ತಿದೆ. (ಇತ್ತೀಚೆಗೆ ಚುನಾವಣಾ ಆಯೋಗ ಮುಕ್ತ ತಂತ್ರಾಂಶಗಳನ್ನು ಬಳಸುವ ಪ್ರಯತ್ನ ಆರಂಭಿಸಿದೆ) ಕರ್ನಾಟಕ ಸರಕಾರದ ಇ-ಗವರ್ನನ್ಸ್ ಕಾರ್ಯದರ್ಶಿಯವರಿಗಂತೂ ಮೈಕ್ರೋಸಾಫ್ಟ್ ಎಂದರೆ ಪಂಚಪ್ರಾಣ. ಆಡಳಿತದಲ್ಲಿ ಕನ್ನಡ ಎಂಬ ಪರಿಕಲ್ಪನೆ ಕಂಪ್ಯೂಟರ್ ಗಳ ಸಂದರ್ಭದಲ್ಲಿಯೂ ನಿಜವಾಗುತ್ತಿರುವ ಹೊತ್ತಿನಲ್ಲಿ ಕನ್ನಡ ಬರೆವಣಿಗೆಯೂ ಮೈಕ್ರೋಸಾಫ್ಟ್ ನ ತಂತ್ರಾಂಶಗಳ ಮೂಗಿನ ನೇರಕ್ಕೆ ಇರುತ್ತದೆ ಎಂದಾಗುತ್ತದೆಯಲ್ಲವೇ?
ಮೈಕ್ರೋಸಾಫ್ಟ್ ಎಕ್ಸ್ ಪಿಗಾಗಿ ಹೊರತಂದಿದ್ದ ಕನ್ನಡ ಹೊದಿಕೆ ಅಥವಾ ಲಾಂಗ್ವೇಜ್ ಇಂಟರ್ ಫೇಸ್ ಪ್ಯಾಕ್ ನಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಕೊಂದಿರುವುದರ ಬಗ್ಗೆ ಉದಾಹರಣೆ ಸಹಿತ ಒಂದು ವರ್ಷದ ಹಿಂದೆಯೇ ಪ್ರಶಾಂತ್ ಪಂಡಿತ್ 'ಸಂಪದ'ದಲ್ಲಿಯೇ ಬರೆದಿದ್ದರು. ಆ ಸ್ಥಿತಿ ಈಗಲೂ ಬದಲಾಗಿಲ್ಲ. ವಿಸ್ತಾಕ್ಕೂ ಇದೇ ಹೊದಿಕೆಯನ್ನು ಬಳಸಲಾಗುತ್ತದೆ ಎಂಬ ಮಾತೂ ಕೇಳಿಬರುತ್ತಿದೆ.
ಮೈಕ್ರೋಸಾಫ್ಟ್ ತಪ್ಪುಗಳನ್ನು ತಿದ್ದಿಕೊಳ್ಳಲು ಸಿದ್ಧವಿಲ್ಲ. ಈ ತಪ್ಪನ್ನು ತಿದ್ದಿಸಬೇಕು ಎಂಬ ಅರಿವು ಕರ್ನಾಟಕ ಸರಕಾರಕ್ಕೂ ಇರುವಂತೆ ಕಾಣಿಸುತ್ತಿಲ್ಲ. ಸರಕಾರಕ್ಕೂ, ಮೈಕ್ರೋಸಾಫ್ಟ್ ಗೂ ಕನ್ನಡವನ್ನು ಕೊಲ್ಲಬೇಡಿ ಎಂದು ಹೇಳುವವರು ಯಾರು? ಹೇಗೆ?
-ಇಸ್ಮಾಯಿಲ್
- Login or register to post comments
- 2942 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ismail
ಪರಿಚಯ
ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.
ಚಟುವಟಿಕೆಯುಳ್ಳ ಚರ್ಚಾವೇದಿಕೆ ವಿಷಯಗಳು
- ಮದುವೆಯಾಗಲು ಗಂಡು-ಹೆಣ್ಣಿಗೆ ಸರಿಯಾದ ಪ್ರಾಯ ಯಾವುದು...?ಮುಂದಿನ ಜೀವನ ಸುಗಮವಾಗಲು...?ನಿಮ್ಮ ಅನುಭವಗಳ ನನಗೆ ತಿಳಿಸಿ...
- ಕನ್ನಡದ ಪರವಾಗಿ ದನ್ನಿ ಎತ್ತಕ್ಕೇ ಜನ ಬೇಕಂತೆ!
- Dear ಅಥವಾ Hello
- ನೀವು ನಿಮ್ಮ ಹಿಂದಿನ ಜನ್ಮದಲ್ಲಿ ಎನಾಗಿದ್ದೀರಬಹುದು ಎಂದು ನಿಮಗೆ ಅನಿಸುತ್ತದೆ...? ಹಾಗೂ ನಿಮಗೆ ದೇವರು ಮುಂದಿನ ಜನ್ಮ ದಯಾಪಾಲಿಸಿದರೆ ಮುಂದಿನ ಜನ್ಮದಲ್ಲ
- ಬನ್ನಿ ನಮ್ಮೂರ ನಾವು ನೋಡೋಣ! ನಮಗೆಷ್ಟು ಗೊತ್ತು ನಮ್ಮ ಊರ ಬಗ್ಗೆ ?
- ಚರ್ಚುಗಳ ಮೇಲೆ ಹಲ್ಲೆ ಯಾಕೆ ಆಗ್ತಾ ಇದೆ
- ರಾವಣನ ತಾಯಿಯ ಹೆಸರೇನು? ಹಾಗೂ ತಂದೆಯ ಹೆಸರೇನು?

RSS:
ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ?
ಇಸ್ಮಾಯಿಲ್ ಅವರೇ,
ವಿಷಯ ನಿಜಕ್ಕೂ ಪ್ರತಿಯೊಬ್ಬರೂ ಗಂಭೀರವಾಗಿ ಹತ್ತು ನಿಮಿಷವಾದರೂ ಯೋಚಿಸಲೇಬೇಕಾದ್ದು. ಯಾವುದೋ ಸಂಸ್ಥೆ ತನ್ನ ಅಗತ್ಯಕ್ಕೆ ಭಾಷೆಯ ವಿಧಿ-ವಿಧಾನಗಳನ್ನು ತಿದ್ದುವುದು ಅಪರಾಧವೇ ಸರಿ.
ಸಾಫ್ಟ್‌ವೇರ್ "ಸಾ ಫ್ ಟ್ ವೇ ರ್" ಆದಲ್ಲಿ ಮೈಕ್ರೋಸಾಫ್ಟ್ "ಮ ಯ್ ಕ್ ರೋ ಸಾ ಫ್ ಟ್" ಆಗುತ್ತಾ ಅಂತ ಸಂಬಂಧಿಸಿದವರನ್ನು ಕೇಳಬೇಕು; ಏನು ಉತ್ತರ ಸಿಗುತ್ತೆ ಗೊತ್ತಗುತ್ತದೆ.
ಈ ಕೆಲಸವನ್ನು ಮಾಧ್ಯಮಗಳ ಮೂಲಕ, ಅಥವಾ "ಜಾಥಾ"ದ ಮೂಲಕ, ಅಥವಾ "ಸಹಿ ಸಂಗ್ರಹಣೆ"ಯಂಥ ಸಾಂಕೇತಿಕ ವಿಧಾನಗಳ ಮೂಲಕ ಮಾಡಬಹುದು ಅಂತ ನನ್ನ ಅನಿಸಿಕೆ. ನೀವೇನಂತೀರಾ? ಆದರೆ ಒಟ್ಟಿನಲ್ಲಿ "bottom line" ಇರೋದು ನಮ್ಮ ಮೇಲೆ ಅಂತಲೇ ನನ್ನ ಅಭಿಪ್ರಾಯ. ಏನಾದರೂ ಒಂದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ, ಇಂತಹವುಗಳನ್ನು ತಡೆಗಟ್ಟಲು ಸಾಧ್ಯ. ಇಲ್ಲವಾದಲ್ಲಿ ನಮ್ಮ ನಡುವಣ ಈ ಚರ್ಚೆಗಳು "ಮೈಕ್ರೋಸಾಫ್ಟ್" ಅಂತಹ ಕಂಪೆನಿಯ ಮುಂಬಾಗಿಲನ್ನೂ ಸಹ ತಲುಪುವುದಿಲ್ಲ.
- ಶ್ಯಾಮ್ ಕಿಶೋರ್
ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ?
ಸಹಿ ಸಂಗ್ರಹಣೆ, ಜಾಥಾ ಏನಾದರೂ ಕೆಲಸ ಮಾಡುತ್ತದೆ ಎನ್ನುವ ಕಾಲ ನನ್ನ ಅಭಿಪ್ರಾಯದಲ್ಲಿ ಹೊರಟುಹೋಗಿ ಯುಗಗಳಾಗಿವೆ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಇದು ಕೆಲಸ ಮಾಡಬಹುದು.
ಈಗ ಕಂಪೆನಿಗಳು, ಸರಕಾರ ಅವುಗಳಿಂದಲೂ ತಪ್ಪಿಸಿಕೊಳ್ಳುವ ವಿಧಾನ ಕಂಡುಕೊಂಡಿದ್ದಾರೆ.
ಬಹುಶಃ ನಾವು ಮಾಡಬೇಕಿರುವ ಕೆಲಸ - ಮುಕ್ತ ತಂತ್ರಾಂಶಗಳನ್ನು ಬಲಪಡಿಸುವುದು: ಹೆಚ್ಚಿನ ಕನ್ನಡ ಸಪೋರ್ಟು, ಕನ್ನಡ ಕುರಿತ ಡೆವಲಪ್ಮೆಂಟ್ ಮೊದಲಾದವುಗಳಿಂದ.
ಬಾಟಮ್ ಲೈನ್ ಬಹುಶಃ ಯಾವುದಕ್ಕೆ ಹೇಗೆ ನೋಡಿದರೂ ಸಾಮಾನ್ಯರ ಮೇಲೆಯೇ ಬರುತ್ತದೆ.
ರಾಜಕಾರಣಿಗಳನ್ನು ದೂರುವ ಸಮಯದಲ್ಲಿ ವಿಧಾನಸೌಧದಲ್ಲಿ ಕೂರುವಂತೆ ಮಾಡಿದ್ದೂ ನಾವೇ ಎಂದು ಬರೋದಿಲ್ವೆ? ಹಾಗೆ. ಇದೇ ವಿಷಯವಾಗಿ ಶ್ಯಾಮ್ ಕಶ್ಯಪ್ ಒಂದು ಬಹಳ ಒಳ್ಳೆಯ ಲೇಖನ ಬರೆದಿದ್ದರು.
ಜವಾಬ್ದಾರಿ ಪ್ರತಿಯೊಬ್ಬರದ್ದು.
ಅದೇ ಜವಾಬ್ದಾರಿ ಹೊತ್ತು ಇಸ್ಮಾಯಿಲರು ಈ ಲೇಖನ ಬರೆದಿದ್ದಾರೆ - ನಾವುಗಳು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ನನಗನ್ನಿಸುತ್ತದೆ
ಬಹುಶಃ. ಚರ್ಚೆ ಕಾರ್ಯರೂಪದೆಡೆಗೆ ಮೊದಲ ಹೆಜ್ಜೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಮರುದನಿ: ಉ: ಅನಿಸಿಕೆ: ಮೈಕ್ರೋಸಾಫ್ಟೀಕರಣ - ಹೀಗೆ ಮಾಡಬಹುದೇ?
ರಾಜಕಾರಣಿಗಳನ್ನು ದೂರುವ ಸಮಯದಲ್ಲಿ ವಿಧಾನಸೌಧದಲ್ಲಿ ಕೂರುವಂತೆ ಮಾಡಿದ್ದೂ ನಾವೇ ಎಂದು ಬರೋದಿಲ್ವೆ? ಹಾಗೆ.
ಜಾಥಾ, ಸಹಿ ಸಂಗ್ರಹಣೆ ಎಲ್ಲವೂ ಈ ಕಾಲದಲ್ಲಿಯೂ ನಡೆಯುತ್ತವೆ. ಆದರೆ ಬಲವಾಗಿ, ಕಾಣುವ ರೀತಿ, ಮಾಡಬೇಕು ಅಷ್ಟೆ. ಸುಮ್ಮನೆ ೧೦೦ ಜನ ಸೇರಿ, ಅದನ್ನೇ ಜಾಥ ಎಂದರೆ ಅದು ದೇವರಾಣೆಗೂ flop ಆಗುತ್ತದೆ! ಕನ್ನಡಿಗರು ಒಟ್ಟಾಗಿ ಸೇರಬೇಕು.ಅರ್ಧ ದಿನದ ರಜೆ ಹೋದರೂ ಪರವಾಗಿಲ್ಲ,ಕನ್ನಡಕ್ಕಾಗಿ ಮುನ್ನುಗ್ಗುತ್ತೇವೆ ಅನ್ನುವ ಭಾವನೆ ಬಂದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಚಳುವಳಿಗಳ ಉಪಯೋಗ ಸಾಧ್ಯ. ನನಗೇನೋ ಈಗಲೂ ಚಳುವಳಿಗಳಲ್ಲಿ ನಂಬಿಕೆಯಿದೆ.
- ಶ್ಯಾಮ್ ಕಿಶೋರ್
ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ
ನಲ್ಮೆಯ ಇಸ್ಮಾಯಿಲ್,
ನಿಜಕ್ಕೂ, ಈ ರೀತಿ ಮುಕ್ತವಾಗಿ ಬರೆಯುವವರನ್ನು ಕಂಡಾಗ ಬಹಳ ಹೆಮ್ಮೆಯೆನಿಸುತ್ತದೆ. ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆಯನ್ನು ನೆನ್ನೆಯೇ ಬರೆದಿದ್ದೇನಾದರೂ, ನಾನು ಕೂಡ ಒಮ್ಮೆ ವಿಸ್ತಾ ಬಳಸಿ, ನೀವು ಹೇಳಿದ್ದು ನಿಜವೆಂದು ಕಂಡಮೇಲೆ ಬರೆಯೋಣ ಅಂತ ಸುಮ್ಮನಾಗಿದ್ದೆ.
Infact, ನಾನು ಕನ್ನಡ I.M.E ಬಳಸಿ, ನೋಟ್‌ಪ್ಯಾಡಿನಲ್ಲಿ ಸಲೀಸಾಗಿ ಕನ್ನಡವನ್ನು ಟೈಪಿದೆ. ಕನ್ನಡ ಎನ್ನುವುದು ಕ ನ್ ನ ಡ ಆಗಲಿಲ್ಲ. ಹಾಗೆಯೇ ಸಾಫ್ಟ್‌ವೇರ್ ಎನ್ನುವುದು ಸಾ ಪ್ ಟ್ ವೇ ರ್ ಆಗಲಿಲ್ಲ. ನೋಟ್‌ಪ್ಯಾಡಿನಿಂದಲೇ ಅದೇ ಪುಟವನ್ನು .htm ಆಗಿ ಸೇವ್ ಮಾಡಿ, IE 7.0 ನಲ್ಲಿ ತೆರೆದಾಗ ಕನ್ನಡ, ಸಾಫ್ಟ್‌ವೇರ್ ಎನ್ನುವುದು ಸ್ಪಷ್ಟವಾಗಿ ಕಂಡಿತು.
ಆದರೆ ಒಂದು ವಿಚಾರ ಎಂದರೆ, Kannadaದ Locale ಅನ್ನು KN ನಿಂದ ಬದಲಾಯಿಸಿ KD ಅಂತ ಮಾಡಿದ್ದಾರೆ. ಕನ್ನಡದ Locale ಯಾವಾಗ ಬದಲಾಯಿತು ತಿಳಿಯದು.
ಅಂದ ಹಾಗೆ, ನಾನು ಬಳಸಿದ್ದು, Microsoft Vista(TM) Pre-RC1 ಮತ್ತು I.E. 7.0.
ವಿಷಯ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ, ನೀವು ಯಾವ ಬ್ರೌಸರಿನಲ್ಲಿ ಪ್ರಯತ್ನಿಸಿದಿರಿ ಎನ್ನುವುದನ್ನು ತಿಳಿಸಲು ಸಾಧ್ಯವೇ ?
ಉ: ಸ್ಪಷ್ಟಣೆ: ಮೈಕ್ರೋಸಾಫ್ಟೀಕರಣ
ಸುನಿಲ್,
ನೀನು ಬಳಸಿ ನೋಡಿದ ವಿಸ್ಟ ಮೂರು-ನಾಲ್ಕು ತಿಂಗಳು ಹಳೆಯದು.
ಹೊಸ ವಿಸ್ಟ ಆಗಲೇ ಅತಿ ಹೆಚ್ಚು ಕೊಳ್ಳುವ ಅವರ ಕ್ಲೈಂಟುಗಳಿಗೆ (ಕಾರ್ಪೊರೇಟುಗಳಿಗೆ) ಬಿಡುಗಡೆಯಾಗಿದೆ. ಜನವರಿ ೩೦ಕ್ಕೆ ವಿಸ್ಟ ಸಾಮಾನ್ಯ ಬಳಕೆದಾರರಿಗೆ ಮಾರಾಟ ಮಾಡೋಕ್ಕೆ ಪ್ರಾರಂಭಿಸ್ತಾರೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಒಕ್ಕಣೆ : ಮೈಕ್ರೋಸಾಫ್ಟೀಕರಣ
ಹರಿ,
ಕುತೂಹಲಕಾರಿಯಾಗಿದೆ. PreRelease1 ನಲ್ಲಿರದ ತಪ್ಪುಗಳು RC2ನಲ್ಲಿ ಹೇಗೆ ನುಸುಳಿರಬಹುದು. ಇದು ನಿಜವೇ ಆಗಿದ್ದಲ್ಲಿ ಕೊಬ್ಬಿದ ಗೂಳಿಗಳ ಸೊಕ್ಕಡಗಿಸಲೇಬೇಕು. ಈ ವಿಷಯವನ್ನು ಎಲ್ಲರಿಗೂ ತಿಳಿಸಿದ ಇಸ್ಮಾಯಿಲ್ರಿಗೆ ಸವಿಯೊದಗು.
ಇಲ್ಲಿ ನೋಡು, ಪತ್ರಿಕೋದ್ಯಮ ಯಾವ ರೀತಿಯಲ್ಲಿ Open Source ಬಳಸುವ ಇಂಜಿನಿಯರುಗಳಿಗೆ ಸಹಾಯ ಮಾಡಬಹುದು ಅಂತ ದೊಡ್ಡ ಲೇಖನವನ್ನು ಬರೆದಿದ್ದೇನೆ.
ಹಾಗೆಯೇ, ಕನ್ನಡದ Locale KNನಿಂದ KDಗೆ ಬದಲಾಯಿಸಿಬಿಟ್ಟಿದ್ದಾರಲ್ಲ, ಇದರ ಬಗ್ಗೆ ISO standardsನಲ್ಲಿ ಏನಾದರು ಬದಲಾವಣೆಗಳಾಗಿವೆಯೇ ?
ಒಂದು ಸ್ಪಷ್ಟೀಕರಣ
ಪ್ರಿಯ ಸುನೀಲ್
ನಾನು ನೋಡಿದ್ದು ರಿಲೀಸ್ ಕ್ಯಾಂಡಿಡೇಟ್-2. ಬಳಸಿದ್ದು ಡಿಪಾಲ್ಟ್ ಐಎಂಇ ಆಗಿರುವ inscript ನಾನು ಸಮಸ್ಯೆಯನ್ನು ಬರೆದದ್ದರಲ್ಲಿ ಕೆಲವು ಅಸ್ಪಷ್ಟತೆಗಳಿದ್ದವು. ಪರಿಣಾಮವಾಗಿ ಸಮಸ್ಯೆಯನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ಅಸ್ಪಷ್ಟ ಬರೆವಣಿಗೆಗೆ ಕ್ಷಮೆ ಕೋರುತ್ತೇನೆ. ನಾನು ಬರೆದದ್ದು ಅರ್ಧಾಕ್ಷರವೊಂದಕ್ಕೆ ಒತ್ತು ಬರುವಾಗಿನ ಸಮಸ್ಯೆ. ಸಾಫ್ಟ್‌ವೇರ್ ಎಂದು ಬರೆಯಲು ಹೊರಟರೆ 'ಸಾ ಫ್ ಟ್ ವೇ ರ್'ಎಂದು ಮುದ್ರಿತವಾಗುತ್ತದೆ(ಸ್ಪಷ್ಟತೆಗಾಗಿ ಅಕ್ಷರಗಳ ಮಧ್ಯೆ space ನೀಡಲಾಗಿದೆ). ಇದು ಝೀರೋ ವಿಡ್ತ್ ಜಾಯ್ನರ್ ಮತ್ತು ನಾನ್ ಜಾಯ್ನರ್ ಸವಲತ್ತಿನ ಸಮಸ್ಯೆ. 'ಸಾಫ್ಟ್' ಎಂದು ಟೈಪಿಸಿದ ನಂತರ ಝೀರೋ ವಿಡ್ತ್ ನಾನ್ ಜಾಯ್ನರ್ ಒತ್ತುತ್ತೇವೆ. ತಕ್ಷಣ 'ಸಾಫ್ಟ್' ಹೋಗಿ 'ಸಾ ಫ್ ಟ್' ಆಗುತ್ತದೆ. ಇದು ನೋಟ್ ಪ್ಯಾಡ್, ವರ್ಡ್ ಪ್ಯಾಡ್ಗಳ ಸಮಸ್ಯೆ. ನಾನು ಆರ್ ಸಿ-2ನ್ನು ಪರೀಕ್ಷಿಸಿದ ಸಿಸ್ಟಂಗೆ ಇಂಟರ್ನೆಟ್ ಸವಲತ್ತು ಇರಲಿಲ್ಲವಾದ್ದರಿಂದ ಯಾವುದೇ ಬ್ರೌಸರ್ ನಲ್ಲಿ ಪರೀಕ್ಷಿಸಲು ಹೋಗಲಿಲ್ಲ. ನೀವು ಮಾಡಿದಂತೆ HTML ಆಗಿ ಸೇವ್ ಮಾಡಿ ನೋಡಬಹುದಿತ್ತು. ಆದರೆ ಆ ಕ್ಷಣದಲ್ಲಿ ನನಗದು ಹೊಳೆದಿರಲಿಲ್ಲ. ಎಂ ಎಸ್ ಆಫೀಸ್-2007ನಲ್ಲಿ ಝೀರೋ ವಿಡ್ತ್ ಜಾಯ್ನರ್ ಮತ್ತು ನಾನ್ ಜಾಯ್ನರ್ಗಳೇ Inscript ಐಎಂಇಯಲ್ಲಿ ಕೆಲಸ ಮಾಡುವುದಿಲ್ಲ.
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
ಮತ್ತಷ್ಟು ಸ್ಪಷ್ಟಣೆಗಳನ್ನು ನೀಡಲು ಸಾಧ್ಯವೇ
ನಲ್ಮೆಯ ಇಸ್ಮಾಯಿಲ್,
ನಿಮ್ಮ ಸ್ಪಷ್ಟನೆಗೆ ಸವಿಯೊದಗು. ಇದು ನನ್ನಲ್ಲಿ ತೀವ್ರ ಕುತೂಹಲವನ್ನು ಕೆರಳಿಸುತ್ತಿದೆ. ವಿಸ್ತಾ ಮೆಷಿನ್ ಮನೆಯಲ್ಲಿ ಇಲ್ಲವಾದ್ದರಿಂದ, ಇದನ್ನು ನಾಳೆ Pre Release 1ನಲ್ಲಿ ಪ್ರಯತ್ನಿಸುತ್ತೇನೆ. ಅದಕ್ಕೆ ಮುಂಚೆ ಮತ್ತಷ್ಟು ಸ್ಪಷ್ಟಣೆ ಕೇಳಬೇಕೆನಿಸಿತು. ನೀವು ಝೀರೋ ವಿಡ್ತ್ ಜಾಯ್ನರ್ ಮತ್ತು ಝೀರೋ ವಿಡ್ತ್ ನಾನ್ ಜಾಯ್ನರ್ರಿಗೆ ಯಾವ ಕೀಲಿಯನ್ನು ಬಳಸಿದಿರಿ.
ನೋಡಿ, ಸದ್ಯಕ್ಕೆ ನಾನಿದನ್ನು ಟೈಪುತ್ತಿರುವುದು XP, Default IME ಮತ್ತು Inscriptಗಳನ್ನು ಬಳಸಿ.
ನನಗೆ ಸಾಫ್ಟ್ವೇರ್, ಸಾ ಫ್ ಟ್ ವೇರ್(ಇದನ್ನು ಕೂಡಿಸಿಯೇ ಬರೆದಿದ್ದೆ, ಆದರೆ ಸಂಪದಕ್ಕೆ ಹಾಕುವಾಗ ಕೂಡಿಕೊಂಡು ಬಿಟ್ಟಿತು, ಹಾಗಾಗಿ ಸ್ಪೇಸ್ ಬಳಸಿದ್ದೇನೆ), ಸಾಫ್ಟ್‍ವೇರ್ ಮೂರು ಪದಗಳನ್ನು ಟೈಪಲು ಸಾಧ್ಯವಾಯಿತು.
ಸಾಫ್ಟ್ವೇರ್
(Inscript - meHd'dbsjd)
ಸಾ ಫ್ ಟ್ ವೇ ರ್
(Inscript - meHd'd(Ctrl+Shift+1)bsjd)
ಸಾಫ್ಟ್‌ವೇರ್
(Inscript - meHd'd(Ctrl+Shift+2)bsjd)
ನಾನು ಇದನ್ನು ನೋಟ್‌ಪ್ಯಾಡ್, ವರ್ಡ್‌ಪ್ಯಾಡ್, ಆಫೀಸ್ ೨೦೦೩, ಎಕ್ಸೆಲ್ ೨೦೦೩, ಔಟ್ಲುಕ್ ೨೦೦೩, ಜಿಟಾಕ್ ವಿಂಡೋಗಳಲ್ಲಿ ಪ್ರಯತ್ನಿಸಿ ನೋಡಿದೆ. ಎಲ್ಲದರಲ್ಲಿಯೂ ಸರಿಯಾಗಿ ಮೂಡಿಬಂತು. ಮೊದಲೇ ಹೇಳಿದ ಹಾಗೆ, ವಿಸ್ತಾದಲ್ಲಿ ನಾಳೆ ಪ್ರಯತ್ನಿಸಿ ನೋಡುತ್ತೇನೆ.
ಅಂದ ಹಾಗೆ ಜಿಟಾಕ್‌ನಲ್ಲಿಯೂ ಬಗ್ಗುಗಳಿವೆ, ಇದರ ಬಗೆಗಿನ ವಿವರಗಳು ಇಲ್ಲಿ ಇದೆ ನೋಡಿ.
ಮತ್ತಷ್ಟು ಸ್ಪಷ್ಟಣೆ
ಎಕ್ಸ್ ಪಿ ವೇದಿಕೆಯಲ್ಲಿ ನೀವು ಮೇಲೆ ಹೇಳಿದ ಎಲ್ಲಾ ಅಪ್ಲಿಕೇಶನ್ ಗಳಲ್ಲಿ ಸಾಫ್ಟ್‌ವೇರ್ (Inscript - meHd'd(Ctrl+Shift+2)bsjd) ಎಂದು ಬರೆದರೆ ಸರಿಯಾಗಿಯೇ ಇದೆ. ಇದೇ ವಿಧಾನದಲ್ಲಿ ವಿಸ್ತಾ ವೇದಿಕೆ (R.C-2)ಯಲ್ಲಿ ನೋಟ್ ಪ್ಯಾಡ್ ಅಥವಾ ವರ್ಡ್ ಪ್ಯಾಡ್ ನಲ್ಲಿ ಪ್ರಯತ್ನಿಸಿ ನೋಡಿ. ಹಾಗೆಯೇ ಆಫೀಸ್-2007 ನಲ್ಲಿ Ctrl+Shift+2 ಕೆಲಸವೇ ಮಾಡಲಿಲ್ಲ.
ನಾನು Inscriptನಲ್ಲಿ meHd'd ಎಂದು ಟೈಪಿಸಿ Ctrl+Shift+2 ಒತ್ತಿದ ತಕ್ಷಣ ಅದು ಸಾ ಫ್ ಟ್ ಆಗಿಬಿಡುತ್ತದೆ. ಅರ್ಧಾಕ್ಷರ ವ್ಯಂಜನಕ್ಕೆ ಒತ್ತು ಬರುವಾಗ ಮಾತ್ರ ಈ ಸಮಸ್ಯೆ ಇರುವಂತೆ ಕಾಣಿಸುತ್ತದೆ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
ವಿಸ್ತಾದಲ್ಲಿನ ಬಗ್ಗುಗಳು- Bugs in Vista
ಗೆಳೆಯರೇ,
ಇಸ್ಮಾಯಿಲರು ತೋರಿಸಿಕೊಟ್ಟ ತಪ್ಪುಗಳ ಚಿತ್ರಗಳನ್ನು ಲಗತ್ತಿಸುತ್ತಿದ್ದೇನೆ.
ವಿಸ್ತಾದ IE7.0ನಲ್ಲಿನ ತಪ್ಪುಗಳು - Bugs in Vista IE 7.0

ವಿಸ್ತಾದ ನೋಟ್‌ಪ್ಯಾಡಿನಲ್ಲಿನ ತಪ್ಪುಗಳು - Bugs in Vista Notepad

ವಿಸ್ತಾದ ವರ್ಡ್‌ಪ್ಯಾಡಿನಲ್ಲಿನ ತಪ್ಪುಗಳು - Bugs in Vista Wordpad

ಎಲ್ಲಕ್ಕಿಂತ ಸ್ವಲ್ಪ ಆಶ್ಚರ್ಯವುಂಟು ಮಾಡಿದ್ದೆಂದರೆ, ಫೈರ್ಫಾಕ್ಸ್. ಫೈರ್ಫಾಕ್ಸಿನಲ್ಲಿ ಸರಿಯಾಗಿ ರೆಂಡರಾಗುತ್ತಿದೆ.

ಒಟ್ಟಿನಲ್ಲಿ IE.7.0ಗೆ ಕನ್ನಡದ ಮಾರುಕಟ್ಟೆ ಸಿಗುವುದು ಕಷ್ಟ ಎಂದಾಯಿತು. ಆದರೆ ಕೊಳ್ಳುವ ಕನ್ನಡಿಗರ ಮಾರುಕಟ್ಟೆಯೂ ಸಿಗದಂತೆ ಮಾಡುವುದು ಬಿಡುವುದು ನಮ್ಮ ನಮ್ಮ ಕೈಯಲ್ಲೇ ಇದೆ.
ಉ: ವಿಸ್ತಾದಲ್ಲಿನ ಬಗ್ಗುಗಳು- Bugs in Vista
ಒಳ್ಳೆಯ ಕೆಲಸ, ಸುನಿಲ್. Bravo!
ಫೈರ್ಫಾಕ್ಸ್ ಇದೊಂದನ್ನು ಸರಿಯಾಗಿ ರೆಂಡರ್ ಮಾಡಬಹುದು, ಆದರೆ ವಿಸ್ಟಾದೊಂದಿಗೆ ಉಪಯೋಗಿಸಲು ಲಭ್ಯವಿರುವ ಫರಿಫಾಕ್ಸಿನ bugsಗಳ ಒಂದು ದೊಡ್ಡ ಪಟ್ಟಿಯೇ ಇದೆ. ಅವೆಲ್ಲವೂ ನಿಮಗೆ ತೊಂದರೆಯಿನಿಸದಿದ್ದರೆ ವಿಸ್ಟಾ ಕೊಂಡು ಅದರೊಂದಿಗೆ ಫೈರ್ಫಾಕ್ಸ್ ಬಳಸಬಹುದು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಮೈಕ್ರೋಸಾಫ್ಟೀಕರಣ
ಅದಕ್ಕೇ ನಾನು ಮೈಕ್ರೋಸಾಫ್ಟ್ ನ ಐಎಂಇಯನ್ನು ಉಪಯೋಗಿಸುವುದೇ ಇಲ್ಲ.
XPನಲ್ಲಿ ಬರಹ ಐಎಂಇಯನ್ನೂ, ಲಿನಕ್ಸ್ ನಲ್ಲಿ ಸ್ಕಿಮ್-೧೭ಎನ್ ಅನ್ನೂ ಯಾವುದೇ ತೊಂದರೆಯಿಲ್ಲದೆ ಉಪಯೋಗಿಸುತ್ತಿದ್ದೇನೆ. ಇದರಿಂದ ಮುಕ್ತ ತಂತ್ರಾಂಶವನ್ನೂ ನಿತ್ಯ ಬಳಸುವುದು ಅಭ್ಯಾಸವಾಗುತ್ತದೆ.
ವಂದನೆಗಳೊಂದಿಗೆ,
ಸುಧೀಂದ್ರ
Re: ಮೈಕ್ರೋಸಾಫ್ಟೀಕರಣ
ನಮಸ್ಕಾರ ಸುಧೀಂದ್ರರವರೇ,
ನಿಜಹೇಳಬೇಕೆಂದರೆ, ನಿಮ್ಮ ಮಾತು ನನಗೆ ಸರಿಬರಲಿಲ್ಲ. Microsoft IMEಗೂ ಇದಕ್ಕೂ ಸಂಬಂಧವಿಲ್ಲ. XPಯನ್ನೇ ಬಳಸುವುದಾದರೆ, ಅತ್ಯಂತ ಸುಲಭವಾಗಿ ಟೈಪಬಹುದಾದ Microsoft IMEಅನ್ನು ಬಳಸಿ ಯಾವದೇ ಅಳುಕಿಲ್ಲದೆ INSCRIPT ಮೂಲಕ ಕನ್ನಡ ಟೈಪಬಹುದು. ಮೈಕ್ರೋಸಾಫ್ಟ್ ಬಗ್ಗುಗಳೆಂಬ ಒಂದೇ ಕಾರಣಕ್ಕಾಗಿ, ನಾನು ಬರಹ ಬಳಸುತ್ತೇನೆ ಎನ್ನುವುದು ಒಪ್ಪತಕ್ಕ ಮಾತಲ್ಲ. Microsoft IME ಬಳಸುವುದರಲ್ಲಿ ನನಗೆ ವೈಯಕ್ತಿಕವಾಗಿ ಯಾವ ತಪ್ಪೂ ಕಾಣುವುದಿಲ್ಲ. ಕನ್ನಡ ಟೈಪುವುದಕ್ಕೆ ಬರಹ, ನುಡಿ ಇಲ್ಲವೇ ಮತ್ಯಾವುದೇ THIRD PARTY ಸಾಫ್ಟ್ ವೇರ್ ಬೇಕಿಲ್ಲ.
ಹಾಗೆಯೇ, ಲಿನಕ್ಸಿನಲ್ಲಿಯೂ ಕೂಡ ಸ್ಕಿಮ್ ಇಲ್ಲದೆ, ಮೂಲ ಗ್ನೋಮ್ ಮೂಲಕವೇ ಕನ್ನಡವನ್ನು ಟೈಪಬಹುದು, ಆದರೆ ಇದರ ಬಗ್ಗೆ ನನ್ನ ಯಾವ ತಕರಾರೂ ಇಲ್ಲ. ಅದು ಬಳಸುವವರಿಗೆ ಬಿಟ್ಟಿದ್ದು.
ನಿಮ್ಮ ಈ ಮಾತು ತುಂಬಾ ಇಷ್ಟವಾಯಿತು.
ಉ: ಮೈಕ್ರೋಸಾಫ್ಟೀಕರಣ
Third party? ಮೈಕ್ರೊಸಾಫ್ಟು ನಮಗೆ "ಥರ್ಡ್ ಪಾರ್ಟಿ", ಇವರೆಲ್ಲ ನಮ್ಮವರೇ - ಕನ್ನಡ ಪಾರ್ಟಿ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"