ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

vtu ಮೊಬೈಲ್ ರಾಮಾಯಣ

September 6, 2005 - 12:40pm — hpn
ಮೊಬೈಲ್ ರಾಮಾಯಣ
ಫೋಟೊ ಕೃಪೆ: ಪ್ರಜಾವಾಣಿ

ನಿನ್ನೆ ದಿನ ವಿಟಿಯು ಸಿ ಇ ಓ (ಆಕಾ ಕುಲಪತಿ - ಬಲವೀರರೆಡ್ಡಿ) ಕೆಲವರೊಂದಿಗೆ ಬಿ ಎಮ್ ಎಸ್ ಹಾಗು ಇನ್ನೊಂದು ಇಂಜಿನೀಯರಿಂಗ್ ಕಾಲೇಜಿಗೆ ಲಗ್ಗೆ ಇಟ್ಟು ಕ್ಲಾಸಿನಲ್ಲಿದ್ದ ಮೊಬೈಲ್ ಫೋನುಗಳನ್ನೆಲ್ಲ ವಶಪಡಿಸಿಕೊಂಡರಂತೆ!

ವಿಟಿಯು ಪ್ರಕಾರ ಕಾಲೇಜು ಪ್ರಾಂಗಣಕ್ಕೆ ಮೊಬೈಲ್ ತರುವುದೇ ತಪ್ಪಂತೆ, ಹಾಗೂ ಹಾಗೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆಯಂತೆ. ಎಲ್ಲಾದರೂ 'ಸುರಕ್ಷಿತ' ಜಾಗದಲ್ಲಿ ಮೊಬೈಲ್ ಇಟ್ಟು ಕಾಲೇಜು ಪ್ರವೇಶಿಸಬೇಕಂತೆ Eye-wink

"ಏನಪ್ಪಾ ವಿಚಿತ್ರ, ಇದು? 'ಆಫ್ ಮಾಡಿಟ್ಟುಕೊಳ್ಳಿ' ಎನ್ನುವುದನ್ನು ಕೇಳಿದ್ದೇನೆ, 'ಹೊರಗೆಲ್ಲೋ ಇಟ್ಟು ಬನ್ನಿ' ಎಂದರೆ ಮೊಬೈಲ್ ಇಟ್ಟುಕೊಂಡರೂ ಬಂದ ಸುಖವೇನು?" ಎಂದು ಅಲೋಚಿಸುತ್ತಿದ್ದೀರ? ನಮ್ಮ 'ಶಿಕ್ಷಕವೃಂದ' 'ಶಿಕ್ಷಕರ ದಿನ'ದಂದು ಎಸಗಿದ ತಾನಾಶಾಹೀ ಕೃತ್ಯದ 'ಸಾಗಾ' ಡೀಟೇಯ್ಲಾಗಿ ಪ್ರಜಾವಾಣಿಯಲ್ಲಿ ಓದಿ.

ಸದ್ಯ. ನಾವು ಪುಣ್ಯವಂತರು. ವಿ ಟಿ ಯು ಮಾಡುವ ತರಲೆ ನಿರ್ಧಾರಗಳಿಂದ ಹಿಂದಿನ ವರ್ಷವೇ ಮುಕ್ತಿ ಪಡೆದೆವು ಎಂದು ಇದನ್ನೋದಿದಾಗ ನನಗನ್ನಿಸಿತು Smiling

‹ ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ? translate.sampada.net ›
  • ಅರಳಿ ಕಟ್ಟೆ
~.~
  • Login or register to post comments
  • 1128 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 7, 2005 - 11:44am — pavanaja

ಮೊಬೈಲ್ ಗೇಟಿನಲ್ಲಿಟ್ಟು ಬನ್ನಿ

pavanaja's picture

ಗ್ರಂಥಾಲಯಗಳಲ್ಲಿ ಮತ್ತು ಸೂಪರ್‌ಮಾರ್ಕೆಟ್ಟುಗಳಲ್ಲಿ ನೀವು ತೆಗೆದುಕೊಂಡು ಹೋದ ಪುಸ್ತಕ, ಚೀಲಗಳನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆ ಇದೆ. ಅಲ್ಲಿ ಚೀಲ ಇಟ್ಟು ಟೋಕನ್ ತೆಗೆದುಕೊಂಡು ಒಳಗೆ ಹೋಗಿ ಕೆಲಸ ಮುಗಿಸಿ ವಾಪಾಸು ಬರುವಾಗ ಟೋಕನ್ ಕೊಟ್ಟು ನಿಮ್ಮ ಚೀಲ ವಾಪಾಸು ತೆಗೆದುಕೊಳ್ಳಬಹುದು. ಇದೇ ವ್ಯವಸ್ಥೆಯನ್ನು ಕಾಲೇಜುಗಳಲ್ಲೂ ಮಾಡಬಹುದು. ಮೊಬೈಲ್ ಫೋನ್ ಒಂದಕ್ಕೆ ದಿನಕ್ಕೆ ಒಂದು ರೂ ಚಾರ್ಜೂ ಮಾಡಬಹುದು!

ಇನ್ನೊಂದು ಸಲಹೆ ಇದೆ. ಮೊಬೈಲ್ ಜಾಮರ್‌ಗಳು ಈಗಾಗಲೇ ಲಭ್ಯವಿವೆ. ಅವುಗಳನ್ನು ಕಾಲೆಜುಗಳಲ್ಲಿ ಸ್ಥಾಪಿಸಬಹುದು.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2005 - 12:15pm — hpn

ನಿಜ

hpn's picture

ನಿಜ, ಇಂಜಿನೀಯರಿಂಗ್ ಕಾಲೇಜುಗಳಿಗೆ ದುಡ್ಡಿಗೇನೂ‌ಕಡಿಮೆ ಇಲ್ಲವಾದ್ದರಿಂದ ಮೊಬೈಲ್ ಜಾಮ್ಮರ್ ಗಳನ್ನುಪಯೋಗಿಸಬಹುದು. ಎಲ್ಲರಿಗೂ 'ಹೊರಗಿಟ್ಟು ಬನ್ನಿ' ಎನ್ನುವುದು ಸೂಪರ್ ಮಾರ್ಕೆಟ್ಟಿನಲ್ಲಿ ಸಾಮಾನು ಇಟ್ಟುಬರುವಾಗ ಸರಿ ಇರಬಹುದು... ಆದರೆ ದಿನವಿಡೀ ಕಾಲೇಜಿನಲ್ಲಿ ಹೊರಗಿಟ್ಟು ಬರೋದೆಂದರೆ ಪಜೀತಿಯ ವಿಷಯ.

ಹಿರಿಯರಾದ ಶಿಕ್ಷಕರು ಸ್ವಲ್ಪವಾದರೂ ಸೆನ್ಸಿಬಲ್ ಆದ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಬೇಕು. ಒಂದೆರಡು ಬಾರಿ ಹಿಡಿದು ಹೆದರಿಸಿದರೆ ಮೊಬೈಲ್ ಕಾಲೇಜಿಗೆ ತರದೇ ಬಿಡುತ್ತಾರೆಯೇ ವಿಧ್ಯಾರ್ಥಿಗಳು? ಗೊತ್ತಾಗದ ಹಾಗೆ ಸ್ಮಗಲ್ ಮಾಡುತ್ತಾರೆ (ಅಷ್ಟೊಂದು ಜನಸಂದಣಿಯಲ್ಲಿ ಹೀಗೆ ಮಾಡುವುದು ಕಷ್ಟವೂ ಅಲ್ಲ). ಅಲ್ಲದೇ ಟೇಬಲ್ ಕೆಳಗೆ ಅಡಗಿಸಿಕೊಂಡು ಉಪಯೋಗಿಸುತ್ತಾರೆ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೂಗಲ್ ನ ಜಿಮೇಯ್ಲ್ ಈಗ ಮೊಬೈಲ್ ಫೋನುಗಳಿಗೆ ಲಭ್ಯ
  • ಮೊಬೈಲ್ ಫೋನ್ ಗಾದೆಗಳು
  • ಹೊಸ ಮೊಬೈಲ್
  • ಕೆ ಎಸ್ ನ ಸ್ಮರಣೆ
  • ನೋಕಿಯಾ ತೆಕ್ಕೆಗೆ ಸಿಂಬಿಯನ್
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಶಬ್ದಗಳನ್ನು ಸೇರಿಸುವುದು ಹೇಗೆ
  • ಬಿಡ್ತಾರ್‍
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator