ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸುದ್ದಿ, ಸಮಾಚಾರ

ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

January 17, 2007 - 2:08pm — venkatesh

ಹೇಗಿದ್ದರೂ, ಈ ಶಿರ್ಷಕೆಯ ಅಡಿಯಲ್ಲಿ ಏಕೆ 'ಚರ್ಚೆ' ಶುರು ಮಾಡಬಾರದು ಎನ್ನಿಸಿತು.

ನಿನ್ನೆ ನಾನು 'ತ್ರಿವಿಕ್ರಮ ಹೆಜ್ಜೆಗಳು 'ಎಂಬ ಅತ್ಯಂತ ಸೊಗಸಾದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಮೊದಲನೆಯ ಲೇಖನವೇ, ನಮ್ಮ ಪೂಜ್ಯ,ಶ್ರೀ.ಡಾ.ಸರ್.ಎಂ.ವಿಶ್ವೇಶ್ವರಯ್ಯನವರದು !
ಅವರು ಮೈಸೂರು ರಾಜ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಓದಿ ಆನಂದವಾಯಿತು. ವಿಶ್ವೇಶ್ವರಯ್ಯನವರು ಅಂದು ಇಲ್ಲದಿದ್ದರೆ, ನಮ್ಮ ರಾಜ್ಯದ ಗತಿ ಏನಾಗುತ್ತಿತ್ತು ? ಎಂದು ಮನಸ್ಸು ಹೊಯ್ದಾಡುತ್ತಿತ್ತು. ಅವರ ದೂರದೃಷ್ಟಿ, ಕೆಲಸದಲ್ಲಿನ ಅಚ್ಚುಕಟ್ಟು, ಶಿಸ್ತು, ಇತ್ಯಾದಿಗಳು ನನ್ನ್ನನ್ನು 'ಮೈಜುಂ' ಎನ್ನಿಸುವಷ್ಟು ಮೋಡಿ ಮಾಡಿತ್ತು !

ಅದರೆ, ಮೊದಲ ಪುಟದ ಸಂಗತಿಯನ್ನು ನೋಡಿ ಸ್ವಲ್ಪ ಬೇಸರವೇ ಆಯಿತು.

ಅದರ ವಿವರ ಸ್ವಲ್ಪ ನೋಡಿ ಅದು ಹೀಗಿದೆ :

ಸುಮಾರು ೩೫ ವರ್ಷಗಳ ಹಿಂದೆ ಎಲ್ಲರೂ ಆಡಿಕೊಳ್ಳುತ್ತಿದ್ದ ಪ್ರಸಂಗ. ಸರ್ವೊದಯ ನಾಯಕರೂ ಭೂದಾನ ಚಳುವಳಿಯ ರುವಾರಿಗಳು ಆದ, 'ವಿನೋದಾ ಭಾವೆ'ಯವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಆಗ ಮೊಕ್ಷಗುಂಡಂ ವಿಶ್ವೇಶ್ವರಯ್ಯನವರೂ ಅದೇ ಊರಿನಲ್ಲಿದ್ದರು.ವಿನೊಬಾರಿಗೆ 'ಅಯ್ಯ'ನವರನ್ನು ಭೇಟಿ ಮಾಡುವ ಹಂಬಲ. ಅವರ ನಿವಾಸಕ್ಕೆ ಹೊರಟೇಬಿಟ್ಟರು. ಕಾಲ್ನಡಿಗೆಯಲ್ಲೇ ಊರೂರು ಸುತ್ತುವ ಆತನಿಗೆ, ಇದೊಂದು ಲೆಖ್ಖವೇ !

ಅಯ್ಯನವರ ಕಾರ್ಯದರ್ಶಿ, ಅವರು ಬಂದ ವಿಷಯ ತಿಳಿಸಿದ. " ಮುಂಚೆಯೇ ಏರ್ಪಾಟಾಗಿರದ ಈ ಭೇಟಿ ಸಾಧ್ಯವೇ ಇಲ್ಲ " ಅಯ್ಯನವರು 'ಖಡಾಖಂಡಿತವಾಗಿ' ಹೇಳಿಯೇ ಬಿಟ್ಟರು. ಅವರಿಗೆ ಸೆಕ್ರೆಟರಿ ಮನವೊಲಿಸಲು ಹೇಳಿದ ಮಾತುಗಳು ಯಾವ ಕೆಲಸಕ್ಕೂ ಬರಲಿಲ್ಲ. 'ಋಷಿ' ಸಮಾನರಾದ ಭಾವೆಯವರು, "ಅವರ ಬೇಟಿಮಾಡುವ ಅದೃಷ್ಟ ನನಗಿಲ್ಲ; ಆದರೆ ಅವರು ತುಳಿದ ಮೆಟ್ಟಿಲಮೇಲೆ ಕುಳಿತು, ಅದರ ಸಂಪರ್ಕಕ್ಕೆ ಬಂದಾದರೂ ಜೀವನ ಸಾರ್ಥಕಮಾಡಿಕೊಳ್ಳುತ್ತೇನೆ." ಎಂದು ಅವರ ಮನೆಯ ಮೆಟ್ಟಿಲಿನಮೇಲೆ ಕುಳಿತು ಸ್ವಲ್ಪ ಹೊತ್ತಿನ ನಂತರ, ಹೊರಟೇ ಹೋದರು. ಒಳಗಡೆ ಅಯ್ಯನವರು ನಿರ್ಲಿಪ್ತರಾಗಿದ್ದರು !

ಮೇಲಿನ ಪ್ರಸಂಗ, ನಿಜವೊ- ಸುಳ್ಳೊ ಹೇಳಲಾರೆ. ಆದರೆ ಅಯ್ಯನವರ ಶಿಸ್ತಿನ ಬಗ್ಗೆ ಒತ್ತಿ ಹೇಳುವುದಕ್ಕೆ ಇಂತಹ ಹತ್ತಾರು ಕಥೆಗಳು ಹುಟ್ಟಿಕೊಂಡಿದ್ದವು......ಹೀಗೆ ಲೇಖನ ಸಾಗುತ್ತದೆ. ಇದನ್ನು ಬರೆದವರು ಪ್ರೊ.ಕೆ.ಆರ್. ಮೊಹನ್.

ಆದರೆ, ಅಪ್ಪಿ ತಪ್ಪಿ "ಇಂತಹ ದೊಡ್ಡ ವ್ಯಕ್ತಿ ಹೀಗೇಕೆ ಮಾಡಿದರೊ ಗೊತ್ತಾಗಲಿಲ್ಲ". ಎಂಬ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಅವರು ಕೊಡಬಹುದಾಗಿತ್ತು. ಇದು ನಮಗೆ ಸಿಕ್ಕಿರುವ ವಿಷಯ.
ಇದರ ಬಗ್ಗೆ ನಮಗೆ ಸಾಕಾದಷ್ಟು 'ಗ್ರಾಸ' ಸಿಕ್ಕಂತಾಗಿದೆ. ನಿಮ್ಮ ಅನಿಸಿಕೆ ಮತ್ತು ಇಂಥ ಹಲವಾರು ಸಂಗತಿಗಳು ಹೊರಗೆ ಬರಲಿ. ದಯಮಾಡಿ ಪುರಾಣದ ಕಥೆಗಳು ಬೇಡ.

ನನ್ನ ಒಂದು ವೈಯಕ್ತಿಕ ಅನುಭವ :

ನನ್ನ ಒಬ್ಬ ಹಿರಿಯ ಸ್ನೇಹಿತರು, ಹೇಳಿದ ಸಂಗತಿ. ಅಂದಿನ ದಿನಗಳಲ್ಲಿ ಅವರು 'ಈಸ್ಟ್ರನ್ ಎಕಾನೊಮಿಸ್ಟ್' ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಲಂಡನ್ ಗೆ ಹೊಗಬೇಕಾದ ಸಂಧರ್ಬ ಬಂತು. ಅವರಿಗೆ 'ಲಾರ್ಡ್ ಎಟ್ಲಿ'ಯವರನ್ನು ನೋಡುವ ಆಸೆ. ಅವರ ಜೊತೆಗೆ ಸಮಾಲೋಚನೆ ಇತ್ಯಾದಿ... ಬೊಂಬಯಿನಲ್ಲಿ ಅವರು ಸಾಕಷ್ಟು ಯೂರೋಪಿಯನ್ನರ ಸಂಪರ್ಕದಲ್ಲಿದ್ದರು. ಅವರು ಹೋಗಿ ಅವರ 'ಛೇಂಬರ್' ನ ಪೇದೆಗೆ ಹೇಳಿದರಂತೆ, "ನಾನು ಸರ್.ಏಟ್ಲಿ ಯವರನ್ನು ಕಾಣಬೇಕು"; ಅವನು ಸರಿ. ನೀವು 'ಪರವಾನಗಿ' ಪಡೆದಿದ್ದೀರಾ, ಅಪಾಯಿಂಟ್ ಮೆಂಟ್ ಇತ್ತಾ ? ನನ್ನ ಗೆಳೆಯರು ತಮ್ಮ 'ಲಾಗ್ ಬುಕ್ಕಿ'ನಿಂದ ಒಂದು ಚೀಟಿ ಹರಿದು, ಇದನ್ನು ತೋರಿಸು, ಅವರು ಒಪ್ಪಿದರೆ ಸರಿ. ಎಂದರಂತೆ. ಪೇದೆ, ಅವರನ್ನೇ ಕೆಕ್ಕರಿಸಿ ನೋಡಿ 'ಸರಿ'. ಎಂದು ಹೇಳಿ ಒಳಗೆ ಹೋದ. ೨ ನಿಮಿಷದಲ್ಲಿ ಹೊರಗೆ ಬಂದವನೇ, "ಸರ್, ಕೇವಲ ೧೨ ನಿಮಿಷ ಕೊಡುತ್ತಾರಂತೆ, ನಿಮಗೆ ಒಪ್ಪಿಗೆ ಯಾದರೆ ನೋಡಿ" ಎಂದನಂತೆ. ಸರಿ, ಒಳಗೆ ಹೋದವರು, ಅರ್ಧಗಂಟೆಯ ನಂತರ, ಬೀಗುತ್ತ ಹೊರಗೆ ಬಂದರಂತೆ. ಇದು ನಮಗೆ ತಿಳಿಸುವ ಕಿವಿ ಮಾತೇನು ? ಎಲ್ಲ, ನಮಗೆ ಅನುಕೂಲವಾಗಲೆಂದು ಕೆಲವೊಂದು ನಿಯಮಗಳನ್ನು ನಾವು ಹಾಕಿಕೊಂಡಿದ್ದೇವಿ. ಅದನ್ನು ಸಮಯಕ್ಕನುಗುಣವಾಗಿ ಅರ್ಥೈಸಿಕೊಳ್ಳುವ ಜಾಣ್ಮೆ ಬೇಕು ! !

ಬಹುಶಃ ಇದರಲ್ಲಿ ನನ್ನ 'ಆರಾಧ್ಯದೇವತೆ' 'ಮೈಸೂರಿನ ಕಳಸ', 'ಶ್ರೇಷ್ಟ ಸಂಘಟಕ', 'ಇಂಜಿನಿಯರ್' ಇತ್ಯಾದಿ ಇತ್ಯಾದಿ ಗಳು ನನ್ನ ಮನಸ್ಸಿನಿಂದ ದೂರ ಸಾಗುತ್ತಿವೆಯೇನೊ ಅನ್ನಿಸಿತು.

ಅಂತಹ ಭಾವೆಯವರು, ಮತ್ತೆ ನಮಗೆ ಸಿಕ್ಕುತ್ತಾರೆಯೇ ? ಮನೆ ಬಾಗಿಲಿಗೆ ಬಂದ ಅವರನ್ನು
(ಅತಿಥಿಯನ್ನು) ಕರೆದು ಒಳಗೆ ಕೂಡಿಸುವುದು, ನಮ್ಮ ಹಿಂದೂ ಸಂಪ್ರದಾಯ ! ಆದರೆ ಅಯ್ಯನವರು "ಬ್ರಿಟಿಷ್ ಎಟಿಕೇಟ್ ಗಳ ಪ್ರಭಾವಕ್ಕೆ" ಬಹಳವಾಗಿ ಒಳಗಾಗಿದ್ದರು !

‹ ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ? ›
  • ಸುದ್ದಿ, ಸಮಾಚಾರ
~.~
  • Login or register to post comments
  • 1406 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 17, 2007 - 3:23pm — kannadiga_1956

Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

kannadiga_1956's picture

ತುಂಬ ಚೆನ್ನಾಗಿದೆ ಲೇಖನ. ಇದನ್ನ ಓದ್ದಾಗ ಆಲ್ಬರ್ಟ್ ಐನ್ಸ್ಟೈನ್ ಹೇಳಿದ್ದು ಜ್ಣಾಪಕಕ್ಕೆ ಬರುತ್ತೆ  "ನಾವು ಪ್ರಷ್ಣೆ ಕೇಳುವುದನ್ನ ನಿಲ್ಲಿಸದಿರುವುದು ಬಹಳ ಮುಖ್ಯ" ಅಂತ.  ನಮ್ಮ ಸಂಸ್ಕ್ರುತಿಲಿ ಚಿಕ್ಕ ಮಕ್ಕಳಿಗೆ "ಎದುರು ಉತ್ತರ ಕೊಡ್ಬಾರ್ದು ?",  "ಹಾಗೆಲ್ಲಾ ಮಾತಾಡ್ಬಾರ್ದು, ಚಿಕ್ಕವ್ರ್ಗೆ ಅದೆಲ್ಲಾ ಗೊತ್ತಾಗಲ್ಲ" ಅಂತೆಲ್ಲಾ ಹೇಳಿ ಬೆಳೆಸ್ತಾರೆ. ಅದ್ರ ಪರಿಣಾಮಾನೆ ನಾವು  ಕಣ್ ಮುಚ್ಕೊಂಡು ಎಲ್ಲಾನೂ ಅನುಕರಿಸೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 17, 2007 - 8:34pm — venkatesh

Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

venkatesh's picture

ಈ ಪ್ರಶ್ನೆ ಶತಮಾನದ (ಗಳ) ಪ್ರಶ್ನೆ ! ನಾನು ಚಿಕ್ಕವನಾದಾಗ (೧೯೪೯), ನಮ್ಮ ತಾಯಿಯವರನ್ನು ಇದೇ ಪ್ರಶ್ನೆ ಕೇಳಿದಾಗ, ನೋಡು ದೊಡ್ಡವರ ಬಗ್ಗೆ ಹಾಗೆ ಕೇಳಬಾರದು."ಆಮೇಲೆ ಒಂದ್ ತಿಳ್ಕೊ, ಋಷಿ ಮೂಲ- ನದಿ ಮೂಲ ಕೇಳ್ಬಾರ್ದು, ಸರಿನಾ". ನಾನು, ಹೌದೆಂದು, ಗೋಣು ಹಾಕಿದ್ದೆ. ಆದರೆ ಏಕೆ ಹೀಗೆ, ಅನ್ನುವ ಕುತೂಹಲ ಒಳಗೆ,ಇದ್ದೇ ಇತ್ತು. ನಮ್ಮ ಮಕ್ಕಳು ಭೂಮಿಗೆ ಬಂದರು. ಅವರೂ ಅದೆ ಪ್ರಶ್ನೆ, ನನ್ನನ್ನು ಕೇಳಿದ್ರು. ನನಗೆ ಅದು ಸ್ವಲ್ಪ ಒಗಟಾಗಿಯೇ ಇತ್ತು. ಮೆತ್ತಗೆ ಉಪಾಯದಿಂದ, 'ಅಮ್ಮನ್ನು ಕೇಳ್ರೊ' ಎಂದು ತಪ್ಪಿಸಿಕೊಂಡಿದ್ದೆ. ಇದು ಬಹಳ ಸಮಯ ನಡೀಲಿಲ್ಲ ! ಈಗಿನ ನನ್ನ 'ನೀಸ್' ಅಮೆರಿಕದಿಂದ ಬಂದಿದ್ಲು. ಅವಳು, ಆ ಮಂಕೀ ಗಾಡ್, ರಾಮನ್ ಗೆ ಎಷ್ಟು ಹೆಲ್ಪ್ ಮಾಡ್ತಲ್ಲವಾ, ಅಂಕಲ್ ? ಅನ್ನೊವಾಗ, ಯಾವ ರಾಮನ್ (?)ಅನ್ನುವಷ್ಟು ತೊಡಕಾದ ಪ್ರಶ್ನೆಗೆ, ಹೇಗೆ ಉತ್ತರಿಸಬೇಕೊ ತಿಳೀಲಿಲ್ಲ.

ಇನ್ನು, 'ಪಾರ್ವತಿ, ಗಣೇಶನ್ ನ ಹೊರಗೆ ಕೂಡ್ಸಿ, 'ಒಳ್ಗೆ ಯಾರ್ನೂ ಬಿಡ್ಬೇಡ', ಅಂದ್ಲಂತೆ. 'ಅಶ್ಟೊಂದ್ ಸ್ವೆಟ್ ಅವ್ಳ್ಘೇಗ್ ಬಂತು ? ಅವ್ಳ್ ಬಾತ್ ತೊಗೊಳ್ತಿರಲಿಲ್ವಾ' ? ...ದೇವ್ರೆ.. ನನ್ನ ಗತಿ...ಗೀ.. ತು.

ಈಗಿನ ಶರ ವೇಗದ ಕಾಲದಲ್ಲಿ (ಈ ೧೦ ವರ್ಷಗಳಲ್ಲಾದ ವಿಜ್ಞಾನದ ಪ್ರಗತಿ) ಬಹುಶಃ ೧೦೦ ವರ್ಷಗಳಲ್ಲೂ ಆಗಿರಲಿಕ್ಕಿಲ್ಲ ! ಮಕ್ಕಳಿಗೆ ವ್ಯಾಲ್ಯೂ, 'ಏನ್ ಹೇಳ್ಬೇಕಪ್ಪ', ಅಂತ ತಲೆ ಕೆರ್ಕೊಳ್ ಬೇಕಾದ ಪ್ರಸಂಗ ಬಂದಿದೆ !

'ಯಾವಗ್ಲೂ ಗ್ರೇಟ್, ಗ್ರೇಟ್, ಅಂತೀರ, ಗ್ರೇಟ್ ಅಂದ್ರೆ ಏನು' ?

ಆದ್ದರಿಂದ ಮಕ್ಕಳಿಗೆ ಹೇಳಲು ಒಂದು ಹೊಸ ಪದ್ಧತಿ, ಸೃಷ್ಟಿಸಬೇಕಾಗಿದೆ. ನನಗೆ ತಕ್ಷಣ ಸಹಾಯಕ್ಕೆ ಬಂದ ಪುಸ್ತಕ, "Tales from Indian Epics". ನಿಜವಾಗಿಯೂ ಅದು ನನಗೆ ಸಹಾಯ ಮಾಡಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 17, 2007 - 10:07pm — Sunil Jayaprakash

ಟಿಪ್ಪಣಿ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ?

Sunil Jayaprakash's picture

venkatesh wrote:
'ಯಾವಗ್ಲೂ ಗ್ರೇಟ್, ಗ್ರೇಟ್, ಅಂತೀರ, ಗ್ರೇಟ್ ಅಂದ್ರೆ ಏನು' ?

ವಾವ್. ಇದಪ್ಪ ಮಾತು, ವರಸೆ ಅಂದರೆ. "You hit the nail on the head" ಅಂತಾರಲ್ಲ. (ಬಹುಶಃ - ಸರಿಯಾದ ಜಾಗಕ್ಕೆ ಮೊಳೆ ಹೊಡ್ದ ಅಂತಾರೋ ಏನೋ ಕನ್ನಡದಲ್ಲಿ Eye-wink ).
ಈ ಮಾತನ್ನು ೧೦೦% ೧೦೦ರಷ್ಟು ಒಪ್ಪುತ್ತೀನಿ. ಸುಮ್ಮನೆ ನಾವು ಗ್ರೇಟು, ನಮ್ಮದೇ ಗ್ರೇಟು ಅಂತ ಕುರುಡು ಅಭಿಮಾನ ಹೊಂದಿರಬಾರದು. ಯಾವ ಕಾರಣಕ್ಕೆ ನಾವು ಗ್ರೇಟು, ಯಾವ ಕಾರಣಕ್ಕೆ ನಮ್ಮದು ಗ್ರೇಟು(ಅದು ಯಾವ ವಿಷಯವೇ ಆಗಿರಬಹುದು) ಎಂಬುದರ ಸ್ಫಷ್ಟ ಅರಿವು ನಮ್ಮಲ್ಲಿರಬೇಕು. ಇಲ್ಲದಿದ್ದರೆ ಅದು ಬರಗಾಲದಲ್ಲಿ ಬರದ ಮಳೆಯಂತೆಯೇ ಸರಿ, ಹರ ಹರಾ ಶ್ರೀ ಚೆನ್ನಸೋಮೇಶ್ವರಾ.

ಇಷ್ಟಲ್ಲದೆ, ಹಾಡನ್ನು ಬರೆದರೆ,

ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ, ಗುರುಗಳು ಹೇಳಿದ ಮಾತುಗಳೆಲ್ಲ ಎಂದೂ ನಿಜವಲ್ಲ, ಗೆಳೆಯ ಎಂದೂ ನಿಜವಲ್ಲ.

ಈ ವೈಭವೀಕರಣದ heights ತಲುಪುವುದು ಯಾವಾಗ ಗೊತ್ತೇ ?
ಉತ್ತರ : ಯಾರಾದರೂ ಸತ್ತಾಗ ಅವರನ್ನು ಕುರಿತು ಕೇಳಿಬರುವ ಗುಣಗಾನಗಳು. ಏಕೆಂದರೆ, ಸತ್ತವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಬೇಕಂತೆ, ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 18, 2007 - 4:41am — Shyam Kishore

ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...?

Shyam Kishore's picture

ವೆಂಕಟೇಶ್‌ರವರೇ,

ಚೆನಾಗಿ ಹೇಳಿದ್ರಿ Smile. ಅದರಲ್ಲೂ ನಿಮ್ಮ ಎರಡನೇ ಸುತ್ತಿನ ಉತ್ತರ ಚೆನ್ನಾಗಿತ್ತು. ಹೌದು, ನಾವೆಲ್ಲ ಚಿಕ್ಕವರಿದ್ದಾಗ ಪ್ರಶ್ನೆ ಕೇಳೋದು ತಪ್ಪು ಅನ್ನೋ ಅಭಿಪ್ರಾಯದಲ್ಲೇ ನೋಡ್ತಾ ಇದ್ದರು. ಈಗೀಗ ಬದಲಾಗ್ತಾ ಇದೆ ಅಂತಿಟ್ಟುಕೊಳ್ಳಿ. ಉತ್ತರ ಸರಿಯಾಗಿ ಇದ್ದಲ್ಲಿ ಯಾವ ಜನರೇಶನ್ ಮಕ್ಕಳೇ ಆಗಲಿ ಒಪ್ಪಿಕೊಂಡೇ ಒಪ್ಪಿಕೊಳ್ಳುತ್ತಾರೆ. ಆ ರೀತಿ ಉತ್ತರ ಹೇಳೋದಕ್ಕೆ ಪ್ರಯತ್ನ ಮಾಡಬೇಕು ಅಷ್ಟೇ. ಆದರೆ "ಪ್ರಶ್ನೆಯನ್ನು ಮಾಡುವುದೇ ತಪ್ಪು" ಅಂತನ್ನುವುದು ಸರಿಯಲ್ಲ ಅನ್ನೋದನ್ನು ನಾನೂ ಅನುಮೋದಿಸುತ್ತೀನಿ.

ನಮ್ಮ ಪುರಾಣಗಳನ್ನು, ಕಥೆಗಳನ್ನು ಓದಿದಾಗ, ಅದರಲ್ಲಿ ಬರುವ ಋಷಿಗಳ ಕೋಪ-ತಾಪ-ಶಾಪ, ಇಂದ್ರ ಮೊದಲಾದ ದೇವತೆಗಳ ದ್ವೇಷ-ಅಸೂಯೆಯ ಕಥೆಗಳು ಇವನ್ನೆಲ್ಲ ಓದುತ್ತಾ ಇರುವಾಗ, ನಿಜವಾಗಿಯೂ ಸ್ವಲ್ಪ ಹೊತ್ತು ತಣ್ಣಗೆ ಕೂತು ಯೋಚಿಸಿಬಿಟ್ಟರೆ ಎಷ್ಟು ನಗು ಬರುತ್ತೆ ಅಲ್ವಾ?

ಆದರೆ ಒಂದು ವಿಷಯ: ಇದರಲ್ಲಿ ನಮ್ಮದೂ ತಪ್ಪಿದೆ ಅಂತ ಅನ್ನಿಸುತ್ತೆ. "ದೊಡ್ಡವರು" ಅಂದ ತಕ್ಷಣ ನಾವೇ ಇಲ್ಲದಿರುವ ಗುಣಗಳನ್ನು, "ಹೀಗೇ ಇರಬೇಕು ಅವರು" ಅನ್ನುವ "ಇಮೇಜನ್ನು" ಕಲ್ಪಿಸಿಕೊಂಡು ಸುಮ್ಮನೆ ಒದ್ದಾಡುತ್ತೀವಾ ಅಂತ? ಆ ಮೂಲಕ ಅವರು ಮಾಡಿದ್ದನ್ನೆಲ್ಲ ವೈಭವೀಕರಿಸುತ್ತೀವಾ ಅಂತ. ನಾನು ಪುರಾಣದ ವ್ಯಕ್ತಿಗಳ ಬಗ್ಗೆ ಹೇಳುತ್ತಾ ಇಲ್ಲ. ನಮ್ಮ ನಡುವಿನ ದೊಡ್ಡವರ ಬಗ್ಗೆಯೇ ಹೇಳುತ್ತಿರೋದು. ಅವರೂ ನಮ್ಮ ಹಾಗೇ ಮನುಷ್ಯರು, ಅವರಿಗೂ ರಾಗ-ದ್ವೇಷ-ಅಸಹನೆ-ಕೋಪಗಳು ಇರುತ್ತೆ ಅಂತ ನಾವು ಯಾಕೆ ತಿಳ್ಕೋಬಾರದು? ಅವರು ನಮಗಿಂತ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಂಡಿರಬಹುದು,ನಿಜ. ಆದರೆ ಕೊನೆಗೆ ಅವರೂ ಮನುಷ್ಯರೇ ತಾನೇ? ಇದು ಸುಮಾರು ದಿನಗಳಿಂದ ನನ್ನನ್ನು ಕಾಡುತ್ತಾ ಇರೋ ಪ್ರಶ್ನೆ. ನಿಮಗೆ ಏನನ್ನಿಸುತ್ತೆ? ಉದಾಹರಣೆಗೆ ಯಾವುದೇ ದೊಡ್ಡ ವ್ಯಕ್ತಿ "ಸದಾಕಾಲ ನಾನು ಹೀಗೇ ಇರುತ್ತೇನೆ" ಅಂತ ಎಲ್ಲೂ ಹೇಳೋದಿಲ್ಲ. ಪಾಪ, ಅವರೂ ಒಮ್ಮೊಮ್ಮೆ ಆಯಾ ಸನ್ನಿವೇಶಕ್ಕೆ, ಅವರ ನಂಬಿಕೆಗೆ ತಕ್ಕಂತೆ ನಡೆದುಕೊಳ್ಳುತ್ತಾರೇನೋ? ಅದು ಅವರಿಗೆ ಸರಿ ಅನ್ನಿಸಿದ್ದರೂ, ನಾವು "ನಮ್ಮ ಮನಸ್ಸಿನಲ್ಲಿ ಅವರ ಒಂದು ಇಮೇಜ್ ಸೃಷ್ಟಿಸಿಕೊಂಡಿರುತ್ತೀವಲ್ಲ", ಆ ಇಮೇಜ್‌ಗೆ ಧಕ್ಕೆ ಬಂದಂತಾಗಿ ಅದನ್ನು "ಇದು ತಪ್ಪು; ಇಂಥವರೂ ನಮ್ಮ ಹಾಗೆ ಸಾಮಾನ್ಯವಾಗಿ ನಡೆದುಕೊಳ್ಳುವುದೇ?!" ಅಂತ ಒಂದು ನಿರ್ಣಯಕ್ಕೆ ಬಂದುಬಿಡುತ್ತೀವೇನೋ? ಇದರಲ್ಲಿ ಅವರು ಹಾಗೆ ನಡೆದುಕೊಂಡಿದ್ದು ತಪ್ಪೋ, ಅಥವಾ ನಮ್ಮ ಮನಸ್ಸಿನಲ್ಲಿ ಬಂದ ನಿರ್ಣಯ ತಪ್ಪೋ? ನನಗೂ ಗೊತ್ತಿಲ್ಲ. ಏನನ್ನಿಸುತ್ತೆ ಹೇಳಿ. ಇದೊಂದು ರೀತಿಯ "ಸಿಂಡ್ರೋಮ್" ಇರಬಹುದಾ?

"ಸಿಂಡ್ರೋಮ್" ಅಂದ ತಕ್ಷಣ ನೆನಪಾಯಿತು. ಈ ಬಾರಿಯ "ವಿಕ್ರಾಂತ ಕರ್ನಾಟಕ"ದಲ್ಲಿ "ಮಹಾಜನ್ ಸಿಂಡ್ರೋಮ್" ಅಂತ ಒಂದು ಲೇಖನ ಬಂದಿದೆ. ಕೆಲವು ಒಳ್ಳೆಯ ಅಂಶಗಳು ಅದರಲ್ಲಿವೆ. ಸಾಧ್ಯವಾದಲ್ಲಿ ಓದಿ ನೋಡಿ.

ಕಲೆಗಾರರಲ್ಲೂ ಅಷ್ಟೇ ತಾನೇ? ಅವರ ಕಲೆಯನ್ನು ಕೇಳಿದಾಗ/ನೋಡಿದಾಗ ಎಷ್ಟು ದೈವಿಕ ಆನಂದ. ಆದರೆ ಕೆಲವೊಮ್ಮೆ ಅವರ ವೈಯಕ್ತಿಕ ವಿವರಗಳನ್ನು ತಿಳಿದಾಗ "ಅಯ್ಯೋ, ಇಂಥಾ ದೊಡ್ಡ ಕಲಾವಿದ ಹೀಗೆ ಮಾಡಬಹುದಾ?" ಅಂತ ಅನ್ನಿಸುತ್ತೆ ಅಲ್ವಾ? (ಅಂದಹಾಗೆ ಭೈರಪ್ಪನವರ "ಮಂದ್ರ"ದ ಮೂಲ ಶೋಧ ಇದೇನೆ ತಾನೇ) ಆಗ ಆ ಕಲೆಗಾರರನ್ನು ನೀವು ಕೇಳಿದರೆ ಅವರು "ಅದೆಲ್ಲ ನನ್ನ ಪರ್ಸನಲ್. ಬೇಕಾದ್ರೆ ನನ್ನ ಕಲೆಯನ್ನು ಆನಂದಿಸಿ, ಇಲ್ಲಾಂದ್ರೆ ಸುಮ್ಮನಿರಿ. ನನ್ನ ವೈಯಕ್ತಿಕ ವಿಚಾರಕ್ಕೆ ಯಾಕೆ ತಲೆ ಹಾಕ್ತೀರಾ?" ಅಂತ ಕೇಳುತ್ತಾರೇನೋ?

ನನಗನ್ನಿಸುತ್ತೆ ಈ ವಿಷಯದಲ್ಲಿ "ಹಂಸ-ಹಾಲಿನ ನ್ಯಾಯ" ಸರಿಯೇನೋ? ಆದರ್ ಒಂದು ಮಾತ್ರ ನಿಜ; ಯಾವುದೇ ವಿಷಯದಲ್ಲಿ "ದೊಡ್ಡವರು" ಅಂತ ಅನ್ನಿಸಿಕೊಂಡಿರುವವರಲ್ಲಿ ಆ ರೀತಿ ಕಲಿಯೋದಕ್ಕೆ ತುಂಬಾ +ve ಗುಣಗಳು ಇರುತ್ತೆ . At least ಒಂದಾದರೂ ಗುಣ ಇಲ್ಲದೆ ಅವರು ದೊಡ್ಡ ಮಟ್ಟಕ್ಕೆ ಏರೋದಕ್ಕೆ ಸಾಧ್ಯವೇ ಇಲ್ಲ ಅಲ್ವಾ? ಅವರಿಂದ ಒಳ್ಳೆಯದನ್ನು (ನಮಗೆ ಬೇಕಾದ್ದನ್ನು) ಕಲಿತು ಉಳಿದದ್ದನ್ನು ಸುಮ್ಮನೇ ಬಿಟ್ಟರಾಯಿತು. ಅವರಲ್ಲಿ ಯಾವುದು ಒಳ್ಳೆಯದು ಅಂತ ವಿಚಾರ ಮಾಡೋಕೆ ಶುರು ಮಾಡೊದೇ "ಅವರು ಹೇಳಿದ್ದೆಲ್ಲ/ಮಾಡಿದ್ದೆಲ್ಲ ಸರಿ" ಅಂತ ವೈಭವೀಕರಿಸಿ ಒಪ್ಪಿಕೊಳ್ಳುವುದನ್ನೂ ತಪ್ಪಿಸುತ್ತೆ ಅಲ್ಲವೇ?

ನಮ್ಮ ಚಿ.ಉದಯಶಂಕರ್ ಹೇಳಿದಂತೆ "ಹೂವು ಮುಳ್ಳು ಎರಡೂ ಉಂಟು ಬಾಳ ಲತೆಯಲಿ...".

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 18, 2007 - 2:05pm — venkatesh

Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...?

venkatesh's picture

ವಿಚಾರ ಧಾರೆಗಳು ಚೆನ್ನಾಗಿವೆ. ಶ್ಯಾಮ್, ಸುನಿಲ್ ತಮ್ಮ ವಿಶಯಗಳನ್ನು ಅತ್ಯಂತ ಸಮರ್ಪಕವಾಗಿ ಮಂಡಿಸಿದ್ದಾರೆ. ಸದ್ಯ, ನಾನೂ ಇನ್ನೂ ದೊಡ್ಡವರು ಎನ್ನಿಸಿಕೊಳ್ಳುವ ಪಟ್ಟಿಯಲ್ಲಿ ಬರುವ ಮೊದಲೇ ಒಂದು ಪ್ರಶ್ನೆಯನ್ನು ಗಾಳಿಗೆ ತೂರಿ, ಅದರ ಚಲನೆಯನ್ನು ವೀಕ್ಷಿಸುತ್ತಿದ್ದೇನೆ !.ಎಚ್.ಪಿ.ಎನ್ ರು, ಶ್ರೀಕಾಂತರು, ಇನ್ನೂ ಏನೂ ಹೇಳಿಲ್ಲ.

ನನಗೆ ಇನ್ನೊಂದು ವಿಶಯ ನಿಮ್ಮ ಗಮನಕ್ಕೆ ತರುವ ಆಸೆ ಇತ್ತು. ಎಲ್ಲರಿಗೆ ತಿಳಿದಂತೆ ನಮಗೆ ಸ್ವಾತಂತ್ರ್ಯ ವನ್ನು ತಂದುಕೊಡಲು ಮುಂದಾಳತ್ವ ತೆಗೆದುಕೊಂಡು, ಒಂದು ವಿಕ್ರಮವನ್ನೇ ಸಾಧಿಸಿದ ಮಹಾನುಭವರು, ಶ್ರೀ ಮೊಹನದಾಸ್ ಕರಮಚಂದ್ ಗಾಂಧಿಯವರು. ಅವರ ಎಲ್ಲ ಗುಣಗಳೂ; ತ್ಯಾಗ, ಶ್ರದ್ಧೆ, ಹಾಗೂ ಹೊಸ ವಿಚಾರಗಳನ್ನು ಸಮಯಕ್ಕೆ ಸರಿಯಾಗಿ ಹುಟ್ಟುಹಾಕಿ, ನಡೆಸಿದ ಆಂದೋಳನದ ರೀತಿ, ಅತ್ಯಂತ ಬಲಶಾಲಿಯಾದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನದ ಹೋಲಿಕೆಯಾಗಿತ್ತು ! ಬಹುಶಃ ಬ್ರಿಟಿಷರ ಜೊತೆ ಯುದ್ಧಮಾಡಿ ಗೆಲ್ಲುವ ವಿಷಯ, ಗಾಳಿಗೆ ಗುದ್ದಿದಂತೆ ವ್ಯರ್ಥವಾಗಿ ಹೋಗುತ್ತಿತ್ತೊ ಏನೊ !

ಗಾಂಧಿಯವರ ಬಗ್ಗೆ ಗಮನಿಸೋಣ. ಅವರ ಪುತ್ರ, 'ಹರಿಲಾಲ್' ಬಗ್ಗೆ ಅವರು ನಡೆದುಕೊಂಡ ರೀತಿ ಅತ್ಯಂತ ವಿಶಾದಕರ ! ಅವನು ತನ್ನ ವಿದ್ಯಾಬ್ಯಾಸವನ್ನು ಇಂಗ್ಲೆಂಡ್ ನಲ್ಲಿ ಮುಂದುವರೆಸಬೇಕೆಂದು ತಂದೆಯನ್ನು ಬಹಳವಾಗಿ ಬೇಡುತ್ತಾನೆ. ಆದರೆ ಮಹಾತ್ಮರು ಅದನ್ನು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ಅದರ ಬದಲಾಗಿ ಹರಿಲಾಲ್ ಗಿಂತಾ ಕಡಿಮೆ ಪ್ರತಿಭೆಯ, ಒಬ್ಬ ಪಾರ್ಸಿಯುವಕ ನನ್ನು ವಿದೇಶಕ್ಕೆ ಕಳಿಸಲು ಪ್ರೊತ್ಸಾಹಿಸುತ್ತಾರೆ. ಇದು ಸರ್ವಥಾ ಸರಿಯಲ್ಲ. ಮಗನಿಗೆ ಒಂದು ಅವಕಾಶಕೊಟ್ಟು ನೋಡಬೇಕಿತ್ತು. ಇದೆಲ್ಲದರ ಪರಿಣಾಮ, ಅವನು ತನ್ನ 'ಮನೋಸ್ಥರ್ಯ' ಕಳೆದುಕೊಂಡು ಹುಚ್ಚನಾಗುತ್ತಾನೆ. ಜೀವನದಲ್ಲಿ ಬಹಳ ತಪ್ಪುಗಳಿಗೆ ಈ ಒಂದು ಸನ್ನಿವೇಷ ಪ್ರತ್ಯಕ್ಷವಾಗಿಯೊ ಪರೊಕ್ಷವಾಗಿಯೊ ಸಹಾಯಕವಾಗುತ್ತದೆ ! ಈ ಮಹಾ ತಪ್ಪಿಗೆ, ಬೇರೆಯಾರೂ ಕಾರಣರಲ್ಲ- ನಮ್ಮ ಮಹಾತ್ಮರೇ ! ಇದು ನನ್ನ ಅನಿಸಿಕೆ.

ಸುಮಿತ್ರ ದೇಸಾಯ್ ರವರು ಬರೆಯುವ ಲೇಖನದಲ್ಲಿ, 'ರೈಲಿನಲ್ಲಿ ಬಾ ರವರೊಡನೆ ಗಾಂಧೀಜಿ ಪ್ರಯಾಣಿಸುತ್ತಿರುತ್ತಾರೆ. ಮಧ್ಯೆ ಬಂದ ಒಂದು ಸ್ಟೇಷನ್ ನಲ್ಲಿ ಹೀರಾಲಾಲ್, ಒಂದು ಕಿತ್ತಳೆ ಹಣ್ಣನ್ನು ತಂದು ಅಮ್ಮನಿಗೆ ಕೊಡುತ್ತಾನೆ. ಆದರೆ ಗಾಂಧೀಜಿ ತಮಗೆ ಎಂದು ಕೈಚಾಚಿದಾಗ, "ಇದು ಅಮ್ಮನಿಗೆ ಮಾತ್ರ. ನಿಮಗೆ ಕೊಡಲ್ಲ; ನೀವು ಇಷ್ಟು ಎತ್ತರಕ್ಕೆ ಬರಲು ಕಾರಣ ನೀವಲ್ಲ. ಅಮ್ಮ ಅಮ್ಮ".....ಎನ್ನುತ್ತಾ ನಿಧಾನವಾಗಿ ಚಲಿಸುತ್ತಿರುವ ರೈಲ್ ಗಾಡಿಯ ಉದ್ದಕ್ಕೂ, ಹೇಳುತ್ತಾ ಓಡಿ ಬರುವುದು, ಎಂತಹವರನ್ನೂ ಕಂಗಾಲಾಗಿಸುವ ಸನ್ನಿವೇಷ ! ಇದಕ್ಕೆ ಕಾರಣ ಯಾರು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 18, 2007 - 4:00pm — shreekant.mishrikoti

Re: ದೊಡ್ಡವರು

shreekant.mishrikoti's picture

ದೊಡ್ಡ ಜನರ ಕುರಿತಾದ ಚರ್ಚೆ ನೋಡಿದೆ.

Quote:
ಶ್ರೀಕಾಂತರು, ಇನ್ನೂ ಏನೂ ಹೇಳಿಲ್ಲ.

ನನ್ನನ್ನು ನೆನೆದದ್ದಕ್ಕೆ ಧನ್ಯವಾದಗಳು .

ನೋಡಿ ಸ್ವಲ್ಪ ಬಿಡುವು ಮಾಡಿಕೊಂಡು ನನ್ನ ಅನಿಸಿಕೆಯನ್ನೂ ಕುಟ್ಟುತ್ತಿದ್ದೇನೆ.

೧. ಯಾರೊಬ್ಬರೂ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಮೆಚ್ಚಿಸಲು ಸಾಧ್ಯವಿಲ್ಲ . ಶ್ರೀ ರಾಮಚಂದ್ರನಿರಲಿ , ಮಹಾತ್ಮಾ ಗಾಂಧೀಯವರಿರಲಿ . ಅವರೆಲ್ಲ ತಮಗೆ ಸರಿ ಕಂಡಂತೆ ಬದುಕಿದರು.

೨. ನಾನು ಅವರ ಬದುಕಿನಿಂದ ಕಲಿಯಬೇಕಾದ , ನನಗೆ ಸರಿ ಎನಿಸಿದ ವಿಷಯ ಗಮನಿಸಬೇಕು.

೩. ದೊಡ್ಡ ಮನುಷ್ಯರ ನಡತೆಯ ಬಗ್ಗೆ ತೀರ್ಮಾನ ಕೊಡುವ ಯೋಗ್ಯತೆ ನನಗೆ ಇದೆಯೇ?

೪. ಅವರುಗಳೆಲ್ಲಾ ೯೯ % ಸರಿ ಇದ್ದು , ಎಲ್ಲೋ ೧ % ತಪ್ಪಾಗಿ ನಡೆದರೆ ನಾನು ಗಮನಿಸಬೇಕೇ ?

ಹಾಗೆಯೇ ಈ ಕೆಳಗಿನ ಸಂಸ್ಕೃತ ಸುಭಾಷಿತಗಳನ್ನು ನೋಡಿ

೧೩. ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು |
ಲಕ್ಷ್ಮೀ ಸಮಾವಿಶತು ಗಚ್ಛತು ವಾ ಯಥೇಷ್ಟಂ ||
ಅದೈವ ವಾ ಮರಣಮಸ್ತು ಯುಗಾಂತರೇ ವಾ |
ನ್ಯಾಯಾತ್ ಪಥ: ಪ್ರವಿಚಲಂತಿ ಪದಂ ನ ಧೀರ್‍ಆ: ||

ನೀತಿಶಾಸ್ತ್ರ ಬಲ್ಲವರು ತೆಗಳಲಿ ಅಥವಾ ಹೊಗಳಲಿ , ಸಂಪತ್ತು ಬರಲಿ ಅಥವಾ ಹೋಗಲಿ , ಮರಣವು ಈಗಲೇ ಬರಲಿ ಅಥವಾ ಯುಗಗಳ ನಂತರ ಬರಲಿ , ಧೀರರು ನ್ಯಾಯದ ದಾರಿಯಿಂದ ಸ್ವಲ್ಪವೂ ವಿಚಲಿತರಾಗುವದಿಲ್ಲ .

೧೪. ಪ್ರಿಯನ್ಯಾಯಾವೃತ್ತಿರ್ಮಲಿನಮಸುಭಂಗೇಪ್ಯಸುಕರಂ |
ಮತ್ವಂ ಸತೋನಾಭ್ಯರ್ಥಾ: ಸುಹೃದಪಿ ನಯಾಚ್ಯ: ಕೃಶಧನ:||
ವಿಪದ್ಯುಚ್ಚೈ: ಸ್ಥೇಯಂ ಪದಮನುವಿಧೇಯಂ ಚ ಮಹತಾ
ಸತಂ ಕೇನೋದ್ದಿಷ್ಟಂ ವಿಷಯಂ ಅಸಿಧಾರಾವೃತಮ್ ||

ಸಜ್ಜನರು ಶ್ರೇಯಸ್ಕರವಾದ ಸರಿಯಾದ ನ್ಯಾಯಮಾರ್ಗದಲ್ಲಿ ನಡೆಯುವರು. ಪ್ರಾಣ ಹೋಗುವ ಪ್ರಸಂಗ ಬಂದರೂ ತಮ್ಮ ವ್ಯಕ್ತಿತ್ವಕ್ಕೆ ಕಲಂಕ ಹಚ್ಚಿಕೊಳ್ಳಲಾರರು . ಆಪತ್ಕಾಲದಲ್ಲಿ ಸ್ಥಿರಚಿತ್ತರಿರುವರು. ಘನವಾದ ರೀತಿಯಲ್ಲಿ ನಡೆದುಕೊಳ್ಳುವರು. ಇಂಥ ಖಡ್ಗದ ಅಂಚಿನ ಮೇಲೆ ನಡೆಯುವ ಕಠಿಣ ವೃತವನ್ನು ಅವರಿಗೆ ಯಾರು ಹೇಳಿದರು?

ನನಗೆ ಇನ್ನೊಂದು ಆಲೋಚನೆ ಬಂದಿದೆ. ದೊಡ್ಡ ಜನರ ದೊಡ್ಡ ಗುಣಗಳ ಬಗೆಗೊಂದು ಸಿರೀಸ್ ಏಕೆ ಶುರುಮಾಡಬಾರದು?.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 18, 2007 - 4:46pm — Sunil Jayaprakash

ಚಪ್ಪಾಳೆ: ದೊಡ್ಡವರು

Sunil Jayaprakash's picture

shrikanth.mishrikoti wrote:
ಪ್ರಾಣ ಹೋಗುವ ಪ್ರಸಂಗ ಬಂದರೂ ತಮ್ಮ ವ್ಯಕ್ತಿತ್ವಕ್ಕೆ ಕಲಂಕ ಹಚ್ಚಿಕೊಳ್ಳಲಾರರು

ದೊಡ್ಡ ಮಾತು, ದೊಡ್ಡ ಮಾತು. Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2007 - 9:16am — venkatesh

Re: ಚಪ್ಪಾಳೆ: ದೊಡ್ಡವರು

venkatesh's picture

ಇನ್ನೊಂದು ವಿಷಯವನ್ನು ತಿಳಿಸಿ ,ನನ್ನ ಈ 'ದೊಡ್ಡವರ ಮಾತಿಗೆ' 'ಮಂಗಳ' ಹಾಡುತ್ತೇನೆ. ನೋಡಿ, ಮಹಾತ್ಮಾಗಾಂಧಿಯವರ ಬಗ್ಗೆ ಕೆಲವು ವಿಷಯಗಳು ಜನರಿಗೆ ತಿಳಿದಿರಲಿಲ್ಲ. ಇದು ಕೆಲವು ಕಾರಣಗಳಿಗಾಗಿ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಅದರಲ್ಲಿ ಒಂದು : ಗಾಂಧಿಜಿ ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರೊತ್ಸಾಹಿಸಲಿಲ್ಲ.

ಅವರಿಗಿದ್ದ ೪ ಮಕ್ಕಳಿಗು ತಂದೆಯಮೇಲೆ ಅಸಮಧಾನ ಇತ್ತು. ಹರಿಲಾಲ್ ಗೆ ಹೆಚ್ಚು.

೧. *ಹರಿಲಾಲ್ ಗಾಂಧಿ (೧೮೮೮-೧೯೪೮) (ನಾನು ಒಂದು ಕಡೆ 'ಹೀರಾಲಾಲ್' ಎಂದು
ಬರೆದಿದ್ದೇನೆ. ಅದು ತಪ್ಪು.)
೨. ಮಣಿಲಾಲ್ (೧೮೯೨-೧೯೫೬)
೩. ರಾಮ್ ದಾಸ್ (೧೮೯೮-೧೯೬೯)
೪. ಮೊಹನ್ ದಾಸ್ (೧೯೦೦-೧೯೫೭)

ಮಹಾತ್ಮರವರು ಗುಂಡಿನೇಟಿನಿಂದ ಮಡಿದ ಸಂದರ್ಭ- ೧೯೪೮ ರಲ್ಲಿ . ಅವರ ಅಂತಿಮ ಸಂಸ್ಕಾರದ ಸಮಯದಲ್ಲಿ ಇಡೀ ರಾಷ್ಟ್ರವೇ, ವಿಶ್ವವೇ, ಮಮ್ಮಲ ಮರುಗಿತು.

ಆ ಸಂಧರ್ಬದಲ್ಲಿ 'ಹರಿಲಾಲ್' ಕೂಡ ರಾಜ್ ಘಾಟ್ಗೆ ಬರುತ್ತಾರೆ. ಅವರ ರೂಪ ಎಷ್ಟು ವಿಕೃತವಾಗಿತ್ತೆಂದರೆ, ಹುಚ್ಚನತರಹದ ವೇಷದಲ್ಲಿದ್ದ ಅವರನ್ನು ಅಲ್ಲಿ ಯಾರೂ ಹತ್ತಿರಕೂಡ ಸೇರಿಸುವುದಿಲ್ಲ- ಗಾಂಧಿ ಪರಿವಾರದವರು ಸಹಿತ ! ಇದೆಂದ ದುರಂತ, ಎಂತಹ 'ಮಾನಸಿಕ ಆಘಾತ' ಗಾಂಧಿಪರಿವಾರಕ್ಕೆ ಆಗಿರಬಹುದುನೀವೇ ಯೋಚಿಸಿ !

ಮತ್ತೆ ೨ ತಿಂಗಳ ಬಳಿಕ, ಆತನ 'ಕ್ಷಯರೊಗ' ಉಲ್ಬಣಗೊಂಡು ಮರಣಹೊಂದುತ್ತಾರೆ.
(ತಾನು ಮತಾಂತರ ಹೊಂದಿ, ಸಹಸ್ರಾರು ಜನರನ್ನು ತನ್ನಂತೆ ಮತಾಂತರಗೊಳ್ಳಲು ಪ್ರಚೋದಿಸುತ್ತಾರೆ.) ಮನೆಯಲ್ಲಿ ಯಾರಿಗೂ ಅವರಿಂದ ಶಾಂತಿಯಿಲ್ಲ.

ಇದಕ್ಕೆಲ್ಲ ಗಾಂಧೀಜಿಯವರು ಪ್ರಮುಖಕಾರಣರಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2007 - 11:48am — shreekant.mishrikoti

Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು

shreekant.mishrikoti's picture

ನಮ್ಮ ಹಾಗೆ ನನ್ನ ಹೆಂಡತಿ , ನನ್ನ ಮಕ್ಕಳು , ಅವರ ವಿದ್ಯಾಭ್ಯಾಸ , ಮದುವೆ , ಇರಲಿಕ್ಕೆ ಒಂದು ಮನೆ , ಇಳಿಗಾಲದಲ್ಲಿ ಆರ್ಥಿಕ ಭದ್ರತೆ , ಇನ್ವೆಸ್ಟುಮೆಂಟು ಎಂದೆಲ್ಲ ಮಾಡಿಕೊಂಡಿರುತ್ತಿದ್ದರೆ ಅವರು ನಮ್ಮ ಹಾಗೇ ಕೋಟ್ಯಾಂತರ ಜನರಲ್ಲೊಬ್ಬರಾಗಿರುತ್ತಿದ್ದರೇ ಹೊರತು ಜಗತ್ತಿಗೆನೂರಾರು ವರುಷ ಮಾರ್ಗದರ್ಶಿ ಮನುಷ್ಯನಾಗಿರುತ್ತಿರಲಿಲ್ಲ ಅಲ್ಲವೇ?

ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು ಸಾಮಾನ್ಯರಿಗೆ ಕಷ್ಟ ಎಂದು ಹೇಳಿ ನನ್ನ ಎರಡು ಮಾತು ....

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2007 - 1:32pm — venkatesh

Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು

venkatesh's picture

'ಮಹಾತ್ಮರ ರೀತಿಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ'

ಇದು ನಮ್ಮ ಚರ್ಚೆಯ ಮುಖ್ಯ ಸಂದೇಶವೇ ? ಮಹಾತ್ಮರೂ ತಪ್ಪು ಮಾಡುತ್ತಾರೆ. ನಮಗೆ ಅರ್ಥವಾಗದ ವಿಷಯ ಏನಿದೆ ಅಲ್ಲಿ ? ಆ ಭಯಂಕರವಾದ ತಪ್ಪು- ಕೆಲವರ ಜೀವನವನ್ನೇ ತಲೆ-ಬುಡ-ಮೇಲಾಗುವ ಪರಿಸ್ಥಿತಿಯನ್ನು ಉಂಟುಮಾಡಿದರೂ ಸಹಿತ. ಅದು ನಮ್ಮ ಪ್ರಿಯ ಓದುಗರ ಅಭಿಪ್ರಾಯ. ಎಲ್ಲರ ಅಭಿಪ್ರಾಯಗಳಿಗೂ ನಾವು ಒತ್ತು ಕೊಡಬೇಕು. ಅಭಿಪ್ರಾಯಗಳಿಗೆ ನಾನು ಯಾವಾಗಲು ಸ್ಪಂದಿಸುತ್ತೇನೆ, ಹಾಗೂ ಅದನ್ನು ಗೌರವಿಸುತ್ತೇನೆ.

ಆದರೆ ನಾನು ಹೇಳುವುದು ಇಷ್ಟು - ಮಹಾತ್ಮರೂ.. ಒಮ್ಮೊಮ್ಮೆ ಎಡವುತ್ತಾರೆ. ಅದನ್ನು ಒಪ್ಪಿಕೊಳ್ಳೋಣ; ಏಕೆಂದರೆ ಅವರೂ ಮನುಷ್ಯರು. ಆಗ ಗಾಂಧಿಯವರ ಮುಂದೆ ಇದ್ದ ಪ್ರಮುಖ ಮುದ್ದೆಗಳು-ದೇಶದ ಒಳಿತು, ಪರತಂತ್ರದಿಂದ ಮುಕ್ತಿ, ನಮ್ಮದೇಶದ ಗೃಹೋದ್ಯೊಗಗಳಿಗೆ ಆದ್ಯಗೆ; ಇತ್ಯಾದಿಗಳು ; ಸಮಯದ ಅಭಾವ ಇರಬಹುದು. ಮಗನಿಂದ ಅವರು ಬಹಳ ಸಮಯ ದೂರವಾಗಿದ್ದರು. ಆದರೆ ಅವರು ಒಬ್ಬ ತಂದೆಯೂ ಕೂಡ. ಅದನ್ನು ನಾವು ಮರೆಯಬಾರದು. ಅವರ ಲೇಖನಿ ಬಹಳ ಬಲವಾಗಿತ್ತು. ಬಹುಷಃ ಅವರು ಬರೆದಷ್ಟು ಪತ್ರಗಳನ್ನು ಏಷ್ಟು ಜನ ಬರೆದಿದ್ದಾರೆ, ಎಂದರೆ ಅದು ಅತಿಶಯೋಕ್ತಿಯಾಗಲಾರದು ! ಆ ಕ್ಷೇತ್ರದಲ್ಲಿ ಅವರು ಸೋತರು. ಅದರ ಬಗ್ಗೆ ನಾವು ಸಹಾನುಭೂತಿ ತೋರಿಸಬಹುದು. ಅವರನ್ನು ಅರ್ಥಮಾಡಿಕೊಳ್ಳಲಾಗದಂತಹ ಗಹನ ವಿಚಾರಗಳ್ಯಾವುವೂ ಅಲ್ಲಿಲ್ಲ. ಗಾಂಧಿಯವರ ಜೀವನ ಒಂದು ತೆರೆದಿಟ್ಟ ಪುಸ್ತಕದಂತೆ. ಪ್ರತಿ ಘಟನೆಯನ್ನೂ ಅವರು ತಮ್ಮ 'ದಿನಚರಿ'ಯಲ್ಲಿ ಬರೆದಿಟ್ಟಿದ್ದಾರೆ. ಅವರು ಎಷ್ಟೋ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ಹಾಗೆ ನೋಡಿದರೆ, ಬೇರೆ ಮಹಾತ್ಮರಿಗೆ ಹೋಲಿಸಿದರೆ, ಅವರನ್ನು ಅತ್ಯಂತ ಸುಲಭರೀತಿಯಲ್ಲಿ ಅರಿಯಬಹುದು. ಇದು ನನ್ನ ನಂಬಿಕೆ.

ಮನುಷ್ಯರು ತಪ್ಪು ಮಾಡದೆ ದೇವರು (ಈ ವಿಶ್ವವನ್ನು ಆಳುತ್ತಿರುವ ದಿವ್ಯಶಕ್ತಿ) ತಪ್ಪು ಮಾಡುವನೇ ?
ಇದು ನನ್ನ ಅನಿಸಿಕೆ....!

ಇದರೊಂದಿಗೆ ಈ ಚರ್ಚೆಯನ್ನು ಮುಗಿಸೋಣ. ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 19, 2007 - 8:09am — venkatesh

Re: ದೊಡ್ಡವರು

venkatesh's picture

ಶ್ರೀಕಾಂತರು, ತಮ್ಮ ಅತ್ಯುತ್ತಮ ಹೇಳಿಕೆ ನೀಡಿದ್ದಾರೆ.ಸಂತೋಷ. ಇಲ್ಲಿ ಒಂದು 'ವೇದಿಕೆ' ನಮ್ಮ ಗೆಳೆಯ ನಾಡಿಗರು, ಸ್ಥಾಪಿಸಿ, ಏನಾದರೂ ಚರ್ಚಿಸಿ, ಎಂದಿದ್ದಾರೆ. 'ಅಲ್ಪಮತಿ'ಯಾದ ನನಗೆ ಬಹಳಕಾಲದಿಂದಲೂ ಕೆಲವು ವಿಷಯಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಹಂಬಲ ಇತ್ತು ; ಅದಕ್ಕಾಗಿ ಪ್ರಾರಂಭಿಸಿದೆ. ಆಗ ತಾನೇ 'ತ್ರಿವಿಕ್ರಮ ಹೆಜ್ಜೆಗಳ'ನ್ನೊದಿದ (ಪುಸ್ತಕ)ನನಗೆ, ಏಕೆ ಹೀಗೆ ಎನ್ನಿಸಿದ್ದು ವಿಶೇಷವೇನಲ್ಲ. 'ಅಯ್ಯ'ನವರ ಗುಣಗಾವೇ, ಆ ಪುಸ್ತಕದ ಮೂಲ ಉದ್ದೇಶ. ಅದು ಸೂಕ್ತವಾಗಿದೆ ಕೂಡ ! ಎಳೆಯರಿಗೆ, ವಿಶೇಷ ಮಾಹಿತಿಗಳನ್ನು, ತಿಳಿಯದವರಿಗೆ,ಆ ವಿಶೇಷ ಗುಣಗಳನ್ನು ತಿಳಿಸುವ ಸದುದ್ದೇಶದಿಂದ ಬರೆದ ಪುಸ್ತಕ ಅದು.'ಅಯ್ಯ' ನವರ ಅನೇಕ (೯೯%) ಉನ್ನತ ಗುಣಗಳೆಲ್ಲಾ ಎಲ್ಲರಿಗೂ ತಿಳಿದದ್ದೆ. ಅಲ್ಲಿ ಇನ್ನೂ ಸಾಕಷ್ಟು ಮಾಹಿತಿಗಳಿವೆ. ನನಗೆ ಅದನ್ನು ಓದಲು ತುಂಬಾ ಆನಂದ. ಆದರೆ, ಒಬ್ಬ ಸಮಾಜಿಕ ಕಾರ್ಯಚಟುವಟಿಕೆಯಲ್ಲಿ ತನ್ನ ಅಮೂಲ್ಯ ಜೀವನವನ್ನು ಪಣತೊಟ್ಟ ಮಹಾತ್ಮಾಜಿ ಯವರ ಅಚ್ಚುಮೆಚ್ಚಿನ 'ಸೇವಾಧುರೀಣ', ವಿನೋದಾ ಭಾವೆ, ಅವರ ಮನೆ ಬಾಗಿಲಿಗೆ ಬಂದು ಅವರನ್ನು ಒಮ್ಮೆ ಮಾತಾಡಿಸಲು ಪ್ರಯತ್ನಿಸಿದರೆ; ಅಯ್ಯನವರಿಗೆ ಅಷ್ಟು ಸೌಜನ್ಯತೆ ಬೇಡವೇ ? ಇದು ಸರಿಯಲ್ಲ, ತಪ್ಪೆ; ಇದು ನನ್ನನ್ನು ತಕ್ಷಣ ಕಾಡಿದ ಸಂಗತಿ. ಅವರ ೯೯.೫% ಶ್ರೇಷ್ಟಗುಣ ಮುಖ್ಯವಲ್ಲ."ಒಳಗೆ ಅಯ್ಯನವರು ನಿರ್ಲಿಪ್ತತೆಯಿಂದ ಕುಳಿತಿದ್ದರು" ..? ಏನು ಇದರ ಅರ್ಥ ? ಮಾನವೀಯತೆಯ ಪ್ರಶ್ನೆಯಲ್ಲವೆ ! ಇಂತಹ ಉದಾಹರಣೆಗಳು, ದೊಡ್ಡವರ ಘನತೆ ಗಂಭೀರಗಳನ್ನು ಹೆಚ್ಚಿಸಲು ಸಹಕಾರಿಯಾಗದೆ, ಬೇಸರವನ್ನು ತರುತ್ತದೆ. ಮುಖ್ಯವಾಗಿ ಯುವಕರಿಗೆ !

ಇದು ನಿಜವೊ ಅಲ್ಲವೊ, ಗೊತ್ತಿಲ್ಲ ಅನ್ನುವ ಸೊಗು ಬೇರೆ ! ಯಾಕೆ ನಿಜ ಇರಬಾರದು ? ಈ ವಿಶಯವನ್ನು ಹೇಳುವಾಗ ಮಾತ್ರ ನಿಮಗೆ (ನಮಗೆ)ಸಂದೇಹ. ಆ ತಪ್ಪನ್ನೂ ಅವರ ಶಿಸ್ತಿಗೆ ಪುಷ್ಟೀಕರಿಸುವ/ಪ್ರತಿಪಾದಿಸುವ ಒಂದು ಉದಾಹರಣೆ, ಅನ್ನೋಣವೇ ? ಯಾಕೆ ಹೀಗೆ ? ಈ ತಪ್ಪನ್ನು ಏಕೆ ವೈಭವೀಕರಿಸುವಿರಿ ? ಅದರ ಬದಲು ಇಂತಹ ತಪ್ಪುಗಳೂ ಒಮ್ಮೊಮ್ಮೆ ನಡಿದಿದೆ; ಅದಕ್ಕೆ ಇದೊಂದು ಉದಾಹರಣೆ, ಅನ್ನುವ ನುಡಿ ಯಾಕೆ ಬರಬಾರದು ? ಬಹುಶಃ ಈ ಘಟನೆಯನ್ನು ಬಿಟ್ಟಿದ್ದಿದ್ದರೆ ಅದರ ಪ್ರಭಾವ ಇನ್ನೂ ಹೆಚ್ಚಾಗುತ್ತಿತ್ತೇನೋ ! ಅದನ್ನು ನಾವು ಬಯಸುವುದು.

'ಪ್ರಾತಃಸ್ಮರಣೀಯ'ರಾದ ವಿಶ್ವೇಶ್ವರಯ್ಯನವರು, ಮಾಡಿದ ಇದೊಂದು ಘಟನೆಇಂದ, ನಮ್ಮ ಹೃದಯದಲ್ಲಿ ಅವರ ಬಗ್ಗೆ ಭಕ್ತಿ, ಪೂಜ್ಯತೆಗಳು ಕಡಿಮೆ ಯಾಗುವುದಿಲ್ಲ. ಅವರ ಸ್ಥಾನ ಮೊದಲಿನಂತೆಯೇ ಇರುತ್ತೆ. ಅವರ 'ವ್ಯಕ್ತಿಚಿತ್ರ'ದ ಕಲ್ಪನೆ ನಮಗಿದೆ. 'ವೈಭವೀಕರಣ' ಬೇಡ ಅನ್ನುವ ಮಾತು ನಮ್ಮದು. "ಯಾರೋ ಹೇಳ್ತಾಇದ್ರಂತೆ; ನೋಡಿ ನನ್ನ ಕಾಲು ಹೀಗೆ ಸೊಟ್ಟಗಾಗಕ್ಕೆ ಕಾರಣಗೊತ್ತೆ ? ಮಹಾರಾಜ್ರ ಆನೆ, ನನ್ನ ಕಾಲ್ ತುಳಿದಿದ್ದರಿಂದ "! ಒಟ್ಟಿನಲ್ಲಿ ಕಾಲು 'ಊನ'ವಾಯಿತು. ಮಹಾ....ಆನೆ...ದ್ರಿಂದ..ಅಂತ ಹೆಮ್ಮೆ ಏಕೆ ? ಅದನ್ನೇ ನಾವು ಕರೆಯೋದು, "ವೈಭವೀಕರಣ" ಅಂತ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 4, 2007 - 8:40pm — smurthygr

ಉ: Re: ದೊಡ್ಡವರು

smurthygr's picture

""ಒಳಗೆ ಅಯ್ಯನವರು ನಿರ್ಲಿಪ್ತತೆಯಿಂದ ಕುಳಿತಿದ್ದರು" ..? ಏನು ಇದರ ಅರ್ಥ ? ಮಾನವೀಯತೆಯ ಪ್ರಶ್ನೆಯಲ್ಲವೆ ! " - ನನಗೆ ಅರ್ಥವಾಗ್ತಾ ಇಲ್ಲ. ನಿರ್ಲಿಪ್ತತೆ ಇಲ್ಲದಿದ್ದರೆ ಅವರು ಭಾವೆಯವರನ್ನು ನೋಡ್ತಾ ಇದ್ದರು ಅನ್ಸುತ್ತೆ. ಶಿಸ್ತು ಪಾಲಿಸಬೇಕಾದರೆ ಇಂತಹ ಪ್ರಸಂಗಗಳನ್ನು ತಪ್ಪಿಸಲಿಕ್ಕೆ ಆಗಲ್ಲ. ಭಾವೆಯವರು ಬಂದರು ಅಂತ ಅವರನ್ನು ಮಾತಾಡಿಸಿ, ಇನ್ನೊಬ್ಬ ಸಾಮಾನ್ಯ ಮನುಷ್ಯ ಬಂದರೆ ಸುಮ್ಮನಿದ್ದರೆ ಸರಿಯೇ? ಇದರಲ್ಲಿ ಮಾನವೀಯತೆ ಎಲ್ಲಿ ಬರುತ್ತೆ? V.I.P. ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದೇ ಮಾನವೀಯತೆಯೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2007 - 7:38am — venkatesh

ಉ: Re: ದೊಡ್ಡವರು

venkatesh's picture

ನನ್ನ ಹಳೆಯ ಲೇಖನಕ್ಕೆ ಸ್ಪಂದಿಸಿದ್ದೀರಿ. "ನಿರ್ಲಿಪ್ತತೆಯಿಂದ ಕುಳಿತಿದ್ದರು", ಅನ್ನುವ ಮಾತು, ನನ್ನದಲ್ಲ. ಆ ಲೇಖದಲ್ಲಿ ಉಲ್ಲೇಖಿಸಿದ ಮಾತು. ಇನ್ನು ಮಾನವೀಯತೆ, ಅಂದರೆ, ಸಮಸ್ತ ಪ್ರಾಣಿಗಳ ಬಗ್ಗೆ, ಮನುಷ್ಯ ಸಹಜವಾದ ಅನುಕಂಪ, ಪ್ರೀತಿ, ವಿಶ್ವಾಸ, ಸೌಹಾರ್ದತೆಗಳನ್ನು ಸೂಚಿಸಿ, ತಮ್ಮ ಕೈಲಾದಷ್ಟು ಸಹಾಯ ಮಾಡಬಹುದಾದರೆ, ಮಾಡುವುದು, ಎಂದು. ಇದು ನನಗೆ ಇದುವರೆಗೂ ಜೀವನ ಕಲಿಸಿದ ಅನುಭವದಿಂದ ಹೇಳುತ್ತಿದ್ದೇನೆ.

ಅದರಿಂದ, ವಿ. ಐಪಿ ಗಳಾಗಲಿ, ಸಾಮಾನ್ಯರಾಗಲಿ ಎಲ್ಲರೂ ಮನುಷ್ಯರೆ ಅಲ್ಲವೆ. ವಿನೋಬಭಾವೆ, ವಿ. ಐಪಿ ಅಲ್ಲ. ಅವರು ಒಬ್ಬ ಭೂ-ಚಳುವಳಿಗಾರ. ಗಾಂಧಿವಾದಿ. ತಮ್ಮ ಜೀವನವನ್ನು ಬಡವರ, ಅಸಹಾಯಕರ, ಒಳಿತಿಗಾಗಿ, ಒತ್ತೆಇಟ್ಟು ಡುಡಿದ ಆದರ್ಶವ್ಯಕ್ತಿ. ಮೇಲಾಗಿ ವಯಸ್ಸಾದವ್ಯಕ್ತಿ. ಸರೀನಾ ? ಅಯ್ಯನವರನ್ನು ನೋಡಲು, ದೂರದಿಂದ ನಡಿಗೆಯಲ್ಲಿ ಬಂದ ವ್ಯಕ್ತಿ. ಇಂತಹವರನ್ನು ನೋಡಿ ಒಂದೆರಡು ಮಾತಾಡಿದ್ದರೆ, ಅವರ ಗಂಟು ಏನಾದರು ಹೋಗುತ್ತಿತ್ತೆ ?

ಆದರೆ, ವಿನೋಬಾರೊ, ಸರಿ ಪರವಾಗಿಲ್ಲ, ಅಯ್ಯನವರ, ಓಡಾಡಿದ ಹೆಜ್ಜೆಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತೇನೆ, ಎಂದು, ಕೇಳಿಕೊಂಡಾಗ ಪರಿಚಾರಕನ ಮನಸ್ಸು ಕರಗುತ್ತದೆ. ಅವನು ಒಪ್ಪಿಕೊಳ್ಳುತ್ತಾನೆ. ಇದು ಆತನ ಸೌಜನ್ಯತೆ, ಸರಳತೆ. ಇದನ್ನು ಮಾನವೀಯತೆ ಎಂದೂ ಕರೆಯುತ್ತಾರೆ ! ಇದು ನಿಜವಾದ ಮೈಸೂರಿನವ ನಡೆದುಕೊಳ್ಳುವ ರೀತಿ.

ನಾನು ಸರ್ .ಎಮ್. ವಿ. ರವರನ್ನು ದೇವರೆಂದು ಭಾವಿಸಿದವನು. ಆದರೆ ಈ ವ್ಯವಹಾರ ನನಗೆ ಬಹಳ ಬೇಸರ ತಂದಿತು. ಆಂಗ್ಲರ ಶಿಸ್ತು, ಅವರ ಕಣ್ಣಿಗೆ ಪಟ್ಟಿ ಕಟ್ಟಿತ್ತು. ಎಮ್ .ವಿರವರು, ತಮ್ಮ ತನವನ್ನು ತುಸು ವೇಳೆ, ಕಳೆದುಕೊಂಡಿದ್ದರು. ಆದರೆ, ಎಮ್. ವಿ. ರವರು, ಇಂದಿಗೂ ಎಲ್ಲ ನಮ್ಮ ಮೈಸೂರಿನ ಜನತೆಯ ಆದರ್ಶ ದೈವ !

ನಿಮಗೆ ಇನ್ನೂ ಏನಾದರೂ ಸಂದೇಹವಿದ್ದರೆ, ಸಂಕೋಚ ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 10:09am — ritershivaram

ಉ: Re: ದೊಡ್ಡವರು

ritershivaram's picture

ದೊಡ್ಡವರು ಅವರಿಗಾಗಿ ನಡೆದದ್ದೇ ದಾರಿ. ಅವರು ಕಂಡುಂಡ ಅನುಭವದಂತೆ ವರ್ತಿಸುತ್ತಾರೆ. ಎಷ್ಟೋ ವೇಳೆ ಅವರೂ ಮನುಷ್ಯರೇ ಅವರದೇ ಹುಟ್ಟು ಗುಣಗಳು,ದೌರ್ಬಲ್ಯಗಳೂ ಇರುತ್ತವೆ. ಅವರ ಬೆನ್ನು ಅವರಿಗೆ ಕಾಣದೆಯೂ ಇರುತ್ತದೆ.
ಇತ್ತೀಚೆಗೆ ಇಂಥ ದೊಡ್ಡವರೂ ಇದ್ದಾರೆ. ತಾವು ಏನು ಹೇಳಿದರೂ ವೇದ ವಾಕ್ಯವೇ ಆಗಿಬಿಡುತ್ತದೆ. ಹಾಗೆಯೆ ತಾವು ಏನು ಮಾಡಿದರೂ ನಡೆಯುತ್ತದೆ. ಎನ್ನುವವರು. ಇಂಥವರಿಗೆ ಕಾರಂತರನ್ನೋ, ಸರ್ . ಎಮ್.ವಿ. ಅವರನ್ನೋ ಖಂಡಿತ ನಾವು ಹೋಲಿಸಲಾಗುವುದಿಲ್ಲ ಅಲ್ಲವೇ?

ಇನ್ನು ದೊಡ್ಡವರಾದವರಲ್ಲಿ ಕೆಲವರು ನಾನು ಹೇಳಿದಂತೆ ಮಾಡು, ನಾನು ಮಾಡಿದಂತೆ ಮಾಡಬೇಡ ಎನ್ನುವವರೂ ಇದ್ದಾರೆ. ಆದರೇನು! ದೊಡ್ಡವರು ಅನುಸರಿಸಿದ ಶಿಸ್ತು ಬದುಕಿದ ರೀತಿ ಇವುಗಳಿಂದ ಕಲಿಯುವುದು ಬಹಳವಿರುತ್ತದೆ. ಅದನ್ನಷ್ಟೇ ಕಿರಿಯರು ಆಯ್ದು ಅಳವಡಿಸಿಕೊಳ್ಳುವ ಜಾಣ್ಮೆ ತೋರಬೇಕು.

ಕಿರಿಯರಾದವರು ದೊಡ್ಡವರ ದೌರ್ಬಲ್ಯಗಳನ್ನೆ ಎತ್ತಿ ಆಡಿ ಹೇಳುವಂತಾಗುವ ಸಂದರ್ಭಗಳೆಂದರೆ, ದೊಡ್ಡವರು ದೊಡ್ಡವರಾಗಿ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳದೇ ಇದ್ದಾಗಲೇ. ಕೆಲ ದೊಡ್ಡವರಂತೂ ನಾನು ಮೇಲೆ ಇದ್ದೇನೆ ನಾನು ಹೇಳಿದ್ದು ಕೆಳಗಿನವರಿಗೆ ಸಿಡಿಯುತ್ತದೆ; ಬಡಿಯುತ್ತದೆ. ಆದರೆ, ಕೆಳಗಿನಿಂದ ಅವರು ಹೇಳುವಾಗ ಉಗುಳೂ ನನಗೆ ಸಿಡಿಯುವುದಿಲ್ಲ ಎಂಬ ಧೋರಣೆಯವರು. ಬಹುಶಃ ಹೊಲಸು ರಾಜಕೀಯ ಮಾಡುವವರಲ್ಲಿ ಇದನ್ನು ಕಾಣ ಬಹುದು. ಕೆಲ ದೊಡ್ಡವರಲ್ಲಿ ಎಚ್ಚರಿಕೆಯಿಂದ ತೂಕದ ಮಾತನಾಡುವವರೂ ಇರುತ್ತಾರೆ. ಯಾಕೆಂದರೆ, ತಾವು ಏನು ಹೇಳಿದರೂ ಅದು ಗಂಭೀರವಾಗಿ ಪರಿಗಣಿಸಲ್ಪಡುತ್ತದೆಂದೇ. ಇವರ ಮಾತುಗಳು ಅಣಿ ಮುತ್ತುಗಳೇ ಆಗಿದ್ದರೆ ನಾವು ಅಚ್ಚರಿ ಪಡಬೇಕಾಗಿಲ್ಲ.

ಇನ್ನೊಂದು ಮಾತು ಹೇಳಿ ಮುಗಿಸುತ್ತೇನೆ. ಇಂಥ ದೊಡ್ಡವರೂ ಇರುತ್ತಾರೆ ನೋಡಿ, “ನನಗೀಗ 90 ವರುಷ ಜನ ನನ್ನನ್ನು ಮಹಾನ್ ಸಾಧಕನಂತೆ ಗುರುತಿಸಿದ್ದಾರೆ. ನಾನೇನೂ ಅಂತದ್ದು ಮಾಡಿಲ್ಲ. ನಾನು ಮಾಡದೇ ಇರುವ ಒಳ್ಳೆಯ ಕೆಲಸಗಳು ಮಾಡಲಿಕ್ಕೆ ಇನ್ನೂ ಎಷ್ಟೋ ಇವೆ. ಅವುಗಳೇನೆಂದು ನಾನು ಬುದುಕಿದ ರೀತಿಯಿಂದ ನಾನು ಇತರರ ಒಳಿತಿಗಾಗಿಯೆ ಹೇಳಿದ ಮಾತುಗಳಿಂದ ತಿಳಿಯುತ್ತವೆ” ಎನ್ನುತ್ತಾರೆ.
-ಎಚ್.ಶಿವರಾಂ
ಜೀವನ-ಚೇತನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2007 - 4:06pm — ಸಂಗನಗೌಡ

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

ಸಂಗನಗೌಡ's picture

ಸರ್ ಎಮ್.ವಿ.ಯವರ ಅಂತ ಕಟ್ಟುನಿಟ್ಟಿನ ನಡುವಳಿಕೆ ಅವರ ಎಲ್ಲಾ ಗೆಲುವಿಗೆ ಓಸುಗರ(ಕಾರಣ) ಇದ್ದೀತು. ಅವರಿಗೆ ಬ್ರಿಟೀಷರ ನೆರಳು ಬಿದ್ದಿತ್ತು ಅನ್ನುವದು ಅಸ್ಟು ತಲೆಸಂಗತಿ ಅಲ್ಲ. ಒಳ್ಳೆಯ ಸಂಗತಿ ಯಾರಿಂದ ಸಿಕ್ಕರೂ ಪಡೆಯುವದರಲ್ಲಿ ತಪ್ಪಿಲ್ಲ ಅನಿಸುತ್ತೆ. ಬದುಕಿನಲ್ಲಿ ಕಟ್ಟುನಿಟ್ಟು ಇದ್ದರೇನೇ ಗೆಲ್ಲಲು ಆಗುವದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2007 - 5:19pm — Aram

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

Aram's picture

maanya venkateshravarey: thaavu thumbaa chennagi barediddeeri.

Doddavara sanna gunagalannu huduki adara meleye ondu dodda dhaaraavaahi maalikey yannu taranga patrikey yalli hatthu varshagala hindey kannada "prapancha" da diggaja Paa.Pu. ravaru bareyutthiddaru.

Idhondhu guna Paa.Pu. ravarannu innoo bittillavembudakke avaru hoda vaara Dr. Vaman Bendreyavara bagge maadidha theekey olleya udaaharaney.

Ee reethi doddavara sanna gunagalannu hekki heluva Paa.Pu.ravara havyaasa avara dodda gunavey athavaa sannatheye embudu kuthoohalakaari vishaya.

Doddavarellaroo sriramachandrananthey nishkalankaraagi irabeku endu naavekey bayasuttevey? Uttarisuviraa?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 5, 2007 - 8:02pm — venkatesh

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

venkatesh's picture

ಇಲ್ಲಿ ಪ್ರಸ್ತುತ ಎನ್ನಿಸುವುದು. ದೊಡ್ಡವರೆಂದು ಹಣೆಪಟ್ಟಿ ಬಂದವರಿಗೆ (ಎಮ್. ವಿ.ಎಂದು ಅದಕ್ಕೆ ಆಶಿಸಿದವರಲ್ಲ.) ತಮ್ಮ ಎಲ್ಲ ಜೀವನದ ಪ್ರಾಕಾರಗಳಲ್ಲಿ ಅವರು ದೊಡ್ಡವರಾಗಿರಲು ಸಾಧ್ಯವಿಲ್ಲ. ಇದರ ಅಸಾಧ್ಯತೆ, ಸಂಕೀರ್ಣತೆಗಳನ್ನು, ವ್ಯಾಪ್ತಿಗಳನ್ನು ನಾವು ಏಕೆ ಅರ್ಥಮಾಡಿಕೊಳ್ಳಬಾರದು ಇನ್ನುವುದೇ ಪ್ರಶ್ನೆ. ನಮಗೆ ಎಮ್ ವಿ. ಒಬ್ಬ ಶ್ರೇಷ್ತ ಇಂಜಿನಿಯರ್, ಶಿಲ್ಪಿ. ಸರಿ. ಅವರು ತಮ್ಮ ಜೀವನದುದ್ದಕ್ಕೂ ಮಾಡಿದ ಎಲ್ಲಾ ಕಾರ್ಯಗಳೂ ಎಲ್ಲ ಸರಿಯಿರಬೇಕು ಎನ್ನುವ ಮಾನದಂಡ ಸರಿಯಲ್ಲ. ಉದಾ :

ಶ್ರೀ. ಶಿವರಾಮಕಾರಂತರನ್ನೇ, ತೆಗೆದುಕೊಳ್ಳಿ. ಅವರೊಬ್ಬ ನಡೆದಾಡುತ್ತಿದ್ದ ವಿಶ್ವಕೊಶವೆನ್ನುವುದು ನಮ್ಮೆಲ್ಲರಿಗೂ ತಿಳಿದ ಸಂಗತಿ. ನನಗೆ ಅವರ ಬಗ್ಗೆ ಆಸಾಧ್ಯ ಗೌರವ. ಆದರೆ ನಮಗೆ ಗೊಲ್ಲದ ಒಂದು ಸಂಗತಿ ನನಗೆ ಒಬ್ಬ ಮಹಾನ್ ವ್ಯಕ್ತಿಯ ಆತ್ಮ ಚರಿತ್ರೆ ಓದಿದಾಗ ತಿಳಿಯಿತು. ಅದರಲ್ಲಿ ನಮ ಕಾರಂತರು ಅವರ ಸಹಪಠಿಯಾಗಿದ್ದಾಗ ಅವರು ನಡೆದುಕೊಳ್ಳುತ್ತಿದ್ದ ಬಗೆ ಯ ಬಗ್ಗೆ, ಓದಿದಾಗ ನನ್ನ ಮನಸ್ಸು ತೆರೆಯಿತು. ಅಬ್ಬಾ, ನಮ್ಮ ಜೀವನ ಎಷ್ಟು ಸಂಕೀರ್ಣ. ವೈವಿಧ್ಯಮಯ ಎಂದು !

ಕಾರಂತರು ತಮ್ಮ ಸಹಪಾಠಿಗಗ ಸಂಗಡ, ಸಲಿಂಗ -ಕಾಮದ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಆವರು ಒಂದು ನಾಟಕ ಕಂ. ಯಲ್ಲಿ ನಾಟಕವನ್ನು ಬರೆದು ನಿರ್ದೇಶಿಸುತ್ತಿದ್ದರು. ಪತ್ರಿಕಾ ಕರ್ತರು, ಆಗಿದ್ದರಂತೆ. ಆಗಿನ ಮಾತು. ಇದು. ಆಗ ಅವರು ಆ ಕಂ.ಯಿಂದ ತಲೆಹಿಡಿದು ನೂಕಲ್ಪಟ್ಟರು. ಇದು ಸತ್ಯಕಥೆ. ಇದನ್ನು ಓದಿದಾಗ ಆಗುವ ಪ್ರತಿಕ್ರಿಯೆ, ಅತ್ಯಂತ ಪ್ರಭಾವಿಯಾಗಿರುತ್ತದೆ. ಇದು ನನಗೆ ಗೊತ್ತು.

ಇಲ್ಲಿ ನಾವು ತಿಳಿದುಕೊಳ್ಳಬೇಕಾದದ್ದು ಇಷ್ಟು. ಒಟ್ಟಾರೆ ಒಬ್ಬ ವ್ಯಕ್ತಿಯನ್ನು ಅರಿಯುವುದು ಬಹಳ ಕಷ್ಟಸಾಧ್ಯವಾದ ವಿಷಯ. ಕ್ಲಿಂಟನ್ ,ಕೆನೆಡಿ ಮತ್ತೆ ನಮ್ಮ ಪ್ರೀತಿಯ ಕಾರಂತರು, [ಆಗ ಅವರು ಡಾ. ಕಾರಂತ್ ಆಗಿರಲಿಲ್ಲ. ಮದುವೆಯೂ ಆಗಿರಲಿಲ್ಲ.] ಇವರುಗಳಲ್ಲಿ ಬರುತ್ತಾರೆ.

ವಿಶ್ವೇಶ್ವರಯ್ಯನವರ ವೈವಾಕ ಜೀವನದ ವೈಫಲ್ಯವನ್ನು ನಾವು ಅವರ ಕಾರ್ಯಕ್ಷೇತ್ರದ ಹತ್ತಿರ ಸುಳಿಯಲೂ ಬಿಡಬಾರದು. ಇವೆಲ್ಲಾ ಕಟು ಸತ್ಯಗಳು ! ಮತ್ತೆ ಹಲವು ದಶಕಗಳ ತರುವಾಯ ಡಾ ಕಾರಂತರ ಪತ್ನಿ ನಾನು ಹೇಳಿದ ಸುಪ್ರಸಿದ್ಧ ವ್ಯಕ್ತಿಯ ಬಳಿ ಬಂದು ಅವರ ಸಹಾಯ ಪಡೆದರು. ಆಗ ತಮ್ಮ ಪತಿಯವರ ಕೆಲವು ದೋಷಗಳನ್ನು ಒಪ್ಪಿಕೊಳ್ಳುವಷ್ಟು ಪ್ರಭುದ್ಧತೆ ಆ ಮಹಾತಾಯಿಬಳಿ ಇತ್ತು, ಎನ್ನುವುದು ಮತ್ತೊಂದು ವಿಷಯ ! [ಅಂದರೆ, ಆಕೆ, ಮಹಾ ಪ್ರತಿಭಾವಂತೆ, ಇದನ್ನು ಸೂಕ್ಷ್ಮವಾಗಿ ಆಕೆ ಗಮನಿಸಿದ್ದರಂತೆ. ನನಗೆ ಈ ಸನ್ನಿವೇಷದಿಂದ ಕಾರಂತರ ಬಗ್ಗೆ ಕಿಂಚಿತ್ತಾದರೂ ಗೌರವ ಕಡಿಮೆಯಾಗಲಿಲ್ಲ. ಕೆಲವನ್ನು ನಾವು ಸಮೀಕರಿಸುವುದು ಅನ್ಯಾಯ. ಮನುಷ್ಯ ಮೂಲತಃ ಅಪರಿಪೂರ್ಣ. ವಂಶವೃಕ್ಷದಂತಹ ಉದಾಹರಣೆ ಇದ್ದೇ ಇದೆಯಲ್ಲ !

ಇಷ್ಟು ಸಾಕು ಅಂತ ತೋರ್ತಿದೆ. ಆಗಲೆ ಕಿಡಿಗಳು ಹಾರ್ತಿವೆ ! ಇದರ ಬಗ್ಗೆ ನಾನು ನನ್ನ "ಫೀಡ್ ಬ್ಯಾಕ್," ಕೊಡಲು ಸಿದ್ಧ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 12:48am — Aram

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

Aram's picture

ಅನೈಸರ್ಗಿಕ ಲೈಂಗಿಕತೆ ಸರ್ವಸಾಮಾನ್ಯ.

ಶಿ.ಕಾರಂತರ ಬಗ್ಗೆ ತಿಳಿದಿರಲಿಲ್ಲ.

ಜಗದ್ಗುರು ಬಾಬಾರ ಸಲಿಂಗರುಚಿ, sci-fi ಲೋಕದ 85ರ ಹರೆಯದ Arthur Clarkeನ ಎಳೆಮಕ್ಕಳ ಹುಚ್ಚು, ದಾರ್ಶನಿಕ ರಾಷ್ಟ್ರಪತಿ

ಜಾನುವಾರುಗಳ ಲೈಂಗಿಕತೆ ನೋಡಿದರೆ ಇವೆಲ್ಲವೂ ಸಾಮಾನ್ಯ ಎಂಬುದು ತಿಳಿಯುತ್ತದೆ.

ರಾ.ಕ್ರಷ್ನನ್ ಮುಂತಾದವರ ಕಥೆಗಳು ಪ್ರಸಿದ್ಧ.

ಮಹಾನ್ ಋಶಿ ವಿಶ್ವಾಮಿತ್ರರ ಕಾಮಾಯಣದ ಮುಂದೆ ಈ ಹುಲುಮಾನವರ ಪಾಡೇನು !

ನಪುಂಸಕ ಲೈಂಗಿಕತೆಗಿಂತ ಈ ವಿಕ್ರತತೆ ಒಳ್ಳೆಯದಲ್ಲವೇ?

ದೊಡ್ಡವರ ದೊಡ್ಡಸ್ತಿಕೆಯನ್ನು ಹೊಗಳೋಣ, ಆದರೆ ಅವರ ಸಣ್ಣ/ಅವಗುಣಗಳನ್ನೂ ದೊಡ್ಡದಾಗಿಸದಿರೋಣ.

ಈ ವಿಷಯದಲ್ಲಿ expert ಆದ ಮಾನ್ಯ Paa.Puttappa ರ ಚಾಳಿಯನ್ನು ನಾವೂ ಅನುಸರಿಸದಿರೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 6:24am — venkatesh

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

venkatesh's picture

ಸಲಿಂಗ-ಲೈಂಗಿಕತೆ ಬಗ್ಗೆ, [ homosexuality] ತಿಳಿದಾಗ ಎಲ್ಲರಿಗೂ ನಮ್ಮ ಭಾರತೀಯರಿಗೆ, [ಅದರಲ್ಲೂ ನನ್ನ ಕಾಲದವರಿಗೆ] ಅಗುವ ಆತಂಕ, ಕಲ್ಚರಲ್ ಶಾಕ್, ಸಾಮಾನ್ಯವಲ್ಲ. ಇತ್ತೀಚೆಗೆ, ಅವರ ಅಸೋಸಿಯೇಷಣ್ ಮಾಡಿಕೊಂಡಿದ್ದಾರೆ ; ಅಂತಹವರ ಜೊತೆ, ಮದುವೆಗಳೂ ಆಗುತ್ತಿರುವ ವಿಷಯಗಳನ್ನು ನಾವು ವೃತ್ತಪತ್ರಿಕೆಗಳಲ್ಲಿ ಓದಿದ್ದೇವೆ. ಅಂದರೆ ಈ ತರಹದ ಪ್ರವೃತ್ತಿ ಸರ್ವೇಸಾಮಾನ್ಯವೇನೊ ಅನ್ನುವಷ್ಟು ಬಳಕೆಯಲ್ಲಿದೆ !

ಒಟ್ಟಿನಲ್ಲಿ ಪಾಶ್ಚಿಮಾತ್ಯ ಪದ್ಧತಿಯ ಅರಿವಿನ ಮಟ್ಟ- ಹೆಚ್ಚಾದಂತೆಲ್ಲಾ ಅಸಮಾನ್ಯ ವಿಷಯಗಳೆಲ್ಲಾ ಸಾಮಾನ್ಯವಾಗುತ್ತವೆ. ನಾನು ಹೇಳುವುದು. ಇಷ್ಟೆ.

೧. ನಮ್ಮ ವೇಷ-ಭೂಷಣಗಳು ವಿದೇಶೀಮೂಲದವುಗಳಾಗಿದ್ದರೇನು ? ಹೃದಯದಲ್ಲಿ ಭಾರತೀಯತೆ
ಹೊಮ್ಮಿಕೊಂಡರೆ ಸಾಕು !

೨. ನಮ್ಮ ಕೆಲವಾರು ಅನುಕರಣೆಗಳು ಅಪ್ಪಟ-ವಿದೇಶಿ ಆಗಿವೆ. ಅದು ಆಗಿವೆ; ಅದನ್ನು ಅರಿಯೋಣ. ಅದರೆ, ಅವಿಲ್ಲದೆಯೂ ನಾವು ನಮ್ಮ ದಿನ-ನಿತ್ಯದ ಕೆಲಸಗಳನ್ನು ಸಮರ್ಥವಾಗಿ, ಸರಿಯಾಗಿಯೇ ನೆರವೇರಿಸಬಹುದು ! ನಮಗೆ ಗೊತ್ತಿಲ್ಲದಹಾಗೆ, ಇನ್ನೊಬ್ಬರ ಜೊತೆ ಮಾತಾಡುವಾಗ, ಮೈಕುಣಿಸುವುದು, ಮುಖಮಾದುವುದು, ಬಾಯಿಸೊಟ್ಟಗೆ, ಹುಬ್ಬುಹಾರಿಸುವ ಮತ್ತು, ವೆಲ್, ವಾಟ್ ಐ ಮೀನ್ ಎನ್ನುವ ಪದಗಳನ್ನು, ಪದೇ-ಪದೆ, ಗಾಳಿಗೆ ತೂರುವ ಚಟವನ್ನು ಕಾಣುತ್ತಿದ್ದೇವೆ. ಇದು ಮೀಡಿಯದಲ್ಲೂ ನಾವು ಕಾಣಬಹುದು. ಇದು ಮುಖ್ಯವಾಗಿ ಯೂರೋಪಿಯನ್ ಅಥವ ಅಮೆರಿಕನ್ ಜನರನ್ನು ಅನುಕರಿಸಿ ನಮಗೆ ಗೊತ್ತಿಲ್ಲದಂತೆ ನಮ್ಮ ಮೇಲೆ ಆಗಿರುವ ಅವರ ಜಾದು ಅಲ್ಲವೆ ? ಇವೆಲ್ಲಾ ’ಗ್ಲೊಬಲೈಸೇಶನ್” ನಮ್ಮಮೇಲೆ ಮಾಡಿರುವ ಪರಿಣಾಮ !

ತಾತ್ಪರ್ಯ, ನನಗೆ ತೋರಿದಂತೆ :

೧. ಸರ್ ಎಮ್. ವಿ ಯವರಂತೆ, ಒಬ್ಬ ೧೦೧ ವರ್ಷದ ವ್ಯಕ್ತಿ, ಗರಿಮುರಿಯದ, ಟೈ, ಸೂಟ್, ನಳಿನಳಿಸುವ,
ಹೊಳೆಯುವ ಶೂಸ್ ಅನ್ನು ಹಾಕಿಕೊಂಡರೆ ತಪ್ಪೇನು ? ಆ ಉಡುಪು ಅವರಿಗೆ ಸರಿಹೊಂದಿ,
ಅನುಕೂಲಕರವಾಗಿದ್ದು, ಅದರಲ್ಲಿ ಅವರು ಸಂತೋಷವಾಗಿದ್ದರೆ, ಸರಿ.

೨. ಶಿಸ್ತು ಅನ್ನುವುದು, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಮಾಡಿಕೊಂಡ, ನಮ್ಮದೇ ಆದ ನಿಯಮ. ಆ
ನಿಯಮದಲ್ಲಿ ನಾವು ಸಿಕ್ಕಿಹಾಕಿಕೊಂಡು, ಸಿಂಬಳದಲ್ಲಿ ಬಂದಿಯಾಗಿರುವ ನೊಣದಂತೆ ಆಗದಿದ್ದರೆ, ಸರಿ.
ಸಂಯಮ, ವೆನ್ನುವ ಪದದ ವ್ಯಾಪ್ತಿಯಲ್ಲೇ ಎಲ್ಲ ಹುದುಗಿದೆ. ಭಾರತೀಯತೆಯನ್ನು ಆಗಾಗ ಓದಿ
ತಿಳಿದುಕೊಳ್ಳೋಣ ! ನಮ್ಮಲ್ಲಿ ಅಗಾಧ ಜ್ಞಾನ ಸಂಪತ್ತಿದೆ. ಅದರ ಅರಿವನ್ನು ನಾವು ಮೊದಲು ಮನನ
ಮಾಡಿಕೊಂಡು ನಮ್ಮ ಮಕ್ಕಳಿಗೆ ಬೋಧಿಸೋಣ.

೩. ಅಯ್ಯನವರು, ತಮ್ಮ ಖಾಸಗಿವಲಯ, ಅಂದರೆ, ತಮ್ಮ ಸ್ವಗೃಹದಲ್ಲಿ ನಡೆದ ಒಂದುಸನ್ನಿವೇಷದಲ್ಲಿ, ಇನ್ನೂ
ಚೆನ್ನಾಗಿ ನಡೆದುಕೊಳ್ಳುವ ಸಾಧ್ಯತೆಯನ್ನು ನಾವು ಮನಗಾಣುತ್ತಿದ್ದೇವೆ. ಬಡ-ಕುಟುಂಬದಲ್ಲಿ ರಸ್ತೆ-
ದೀಪದಡಿಯಲ್ಲಿ ಓದಿ, ಮುಂದೆಬಂದ, ಪರಿಶ್ರಮಿ, ಅಗಾಧದೇಶಪ್ರೇಮಿ, ರಾಷ್ಟ್ರಶಿಲ್ಪಿ, ಕನ್ನಡದಜನತೆಯ
ಆರಾಧ್ಯದೇವತೆ, ರೈತರಕಣ್ಮಣಿ, ದೂರದೃಷ್ಟಿಯನ್ನು ಹೊಂದಿ ಮುಂದಿನ ಸಮಸ್ಯೆಗಳಿಗಿ ಇಂದೇ ಪರಿಹಾರ
ತಯಾರಿಸುವ ಅತ್ಯಂತ ಪ್ರತಿಭಾನ್ವಿತರು- ಇನ್ನೇನು ಎಂದೂ ಫಲಾಪೇಕ್ಷೆ ಮಾಡಿದವರಲ್ಲ. ಅಲ್ಪತೃಪ್ತರು.
ಇತ್ಯಾದಿ, ಇತ್ಯಾದಿ.

ಆದರೆ, ಮನೆಗೆ ಬಂದ ಅತಿಥಿಯವರನ್ನು ಬರಮಾಡಿಕೊಂಡು ವಿಚಾರಿಸುವ ನಮ್ಮ ಭಾರತೀಯತೆಯ ಮೂಲಮಂತ್ರ ಅವರಿಗೆ ತಕ್ಷಣ ಮನಸ್ಸಿಗೆ ಬರಲಿಲ್ಲವಲ್ಲಾ, ಎನ್ನುವ ಮಾತನ್ನು ಮಾತ್ರ ಮತ್ತೊಮ್ಮೆ ದೊಹರಿಸಿ, ನನ್ನ ಈ ಮಾತು-ಕತೆಯನ್ನು ಮುಂದುವರಿಸಲು ಇಚ್ಛಿಸದೆ, ವಿರಮಿಸುತ್ತೇನೆ. ನಮಸ್ಕಾರ. ಇದು ನನ್ನ ನಿಲವು.
ಸಾಕಲ್ವ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 10:50am — roshan_netla

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

roshan_netla's picture

ತಪ್ಪು ಮನುಷ್ಯರಲ್ಲದೆ ಮತ್ಯಾರು ಮಾಡುತ್ತಾರೆ? ಆ ದಿನ ಸರ್. ಎಂ. ವಿ ಅವರ ಮಾನಸಿಕ ಸ್ತಿತಿ ಆರೊಗ್ಯದ ಸ್ತಿತಿ ಹೇಗಿತ್ತೊ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 1:57pm — venkatesh

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

venkatesh's picture

ಸರಿ. ನೀವು ಅಂತಹ ಸಂಗತಿಗಳ ವೈಭವೀಕರಣಕ್ಕೆ, ಅಗ್ರಪಂಕ್ತಿಯಲ್ಲಿ ಕೂಡುವಿರಿ !

ನಾವು ಎಮ್. ವಿ. ರವರದು ತಪ್ಪುಮಾದಿದರು, ಎನ್ನುವುದಕ್ಕಿಂತ ಅದರ ವೈಭವೀಕರಣವನ್ನು ಕುರಿತು, ಇಷ್ಟು ಹೊತ್ತೂ ತಲೆಚಚ್ಚಿಕೊಳ್ಳುತ್ತಿದ್ದೇವೆ. ನೀವು ಅವರ ಮೂಡಿನ ಬಗ್ಗೆ ಹೇಳ್ತಿದೀರಿ. ಅಲ್ಲವೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 4:00pm — roshan_netla

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

roshan_netla's picture

ನಾನು ಯಾವ ಮಾಡಿನಬಗ್ಗೆ ಹೆಳಿಲ್ಲಾ ಅವರ ಆಗಿನ ಪರಿಸ್ತಿತಿ ಮತ್ತು ಮನಸ್ತಿತಿ ಬಗ್ಗೆ ಆಲೋಚಿಸಿದೆ. ಅದನ್ನು ವೈಭವಿ ಕರಿಸಿದ್ದು ಸದ್ದ್ಯಕ್ಕೆ ನೀವೇ ಆಲ್ಲವೇ?. ಆ ಪುಸ್ತಕದಲ್ಲಿ ಆ ಘಟಣೆ ಪ್ರಸ್ತಾಪ ಮಡಿದ್ದಾರೆ ಹೊರತು ಆ ಘಟಣೆ ವೈಭವೀಕರಿಸಿದೆ ಅನ್ನಿಸುತ್ತಿದೆಯೊ?
ನನಗೆ ಅಗ್ರ ಪಂಕ್ತಿ ಯಾಕೊ?Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 6, 2007 - 8:09pm — smurthygr

ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

smurthygr's picture

ಎಮ್.ವೀ.ಯವರು "ತಪ್ಪು ಮಾಡಿದರು" ಅಂತ ತೀರ್ಮಾನಿಸ್ತಾ ಇದ್ದೀರಲ್ಲಾ? ಅದು ತಪ್ಪು ಅಂತ ನಿಮ್ಮ ಅಭಿಪ್ರಾಯ ಅಷ್ಟೆ. ಅವರು ಪಾಲಿಸಿಕೊಂಡು ಬಂದ ಶಿಸ್ತಿನ ದೃಷ್ಟಿಯಿಂದ ಅವರಿಗೆ ಅದು ತಪ್ಪು ಅಂತ ಅನ್ನಿಸಿರಲಿಕ್ಕೇ ಇಲ್ಲ. ಸರಿ / ತಪ್ಪು ಗಳನ್ನು ಹೀಗೇ ಅಂತ ಎಲ್ಲರ ಅಭಿಪ್ರಾಯ ಕೇಳಿಕೊಂಡು ಬದುಕಲಿಕ್ಕೆ ಆಗಲ್ಲ. ಒಂದು ಚೌಕಟ್ಟಿನೊಳಗೆ ನಮ್ಮ ನಮ್ಮ ಅನಿಸಿಕೆಗೆ ಸರಿಯಾಗಿ ಬದುಕು ಸಾಗಿಸುವುದು. ಅದು ಇನ್ನೊಬ್ಬರನ್ನು ಮೆಚ್ಚಿಸುತ್ತೋ, ಅವರಿಂದ ಸರ್ಟಿಫಿಕೇಟ್ ದೊರಕುತ್ತೋ ಅಂತ ಯೋಚನೆ ಮಾಡದಿರುವುದು ಇವೇ ದೊಡ್ಡ ಮನುಷ್ಯರ ಗುಣ ಅಂತ ನನ್ನ ಅನಿಸಿಕೆ. ಜನರ ಮೆಚ್ಚಿಗೆಗೆ ಒದ್ದಾಡುವವರು ದೊಡ್ಡ ಜನ ಹೇಗಾಗ್ತಾರೆ? ಇಡೀ ಪುಸ್ತಕದಲ್ಲಿ ಈ ಒಂದು ಘಟನೆ ಓದಿ ನಿಮ್ಮ ಅಭಿಪ್ರಾಯವೇ ಬದಲಾಗುವುದಾದರೆ ಈ ಘಟನೆಯನ್ನು ವೈಭವೀಕರಿಸ್ತಾ ಇರುವವರು ಯಾರು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು
  • ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ಮಕ್ಕಳ ಮೇಲೆ ನಾವೇಕೆ ತಾಳ್ಮೆಗೆಡುತ್ತೇವೆ?
  • ನಾನು ಉತ್ತಮ ಪುರುಷ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ