ವಿಜ್ಞೇಶ್ವರನನ್ನು ಚಿತ್ರಿಸುವ ಕಲೆ
ಸರಿಯಾಗಿ ಒಂದು ವರ್ಷದ ಹಿಂದೆ ಚಿತ್ರಕಲೆ, ಕಂಪ್ಯೂಟರ್ ಗ್ರಾಫಿಕ್ಸಿಗೆ ಸೂರೆ ಹೋಗಿ 'ಕಂಜ್ಯೂರರ್' ಎಂಬ ಹೆಸರಲ್ಲಿ ಡೀವಿಯೆಂಟ್ ಆರ್ಟ್ ತಾಣದಲ್ಲಿ ಖಾತೆಯೊಂದನ್ನು ತೆರೆದಿದ್ದೆ. ಆಗ ಪರಿಚಯವಾದವರು ಹಲವು ಚಿತ್ರಕಾರರು, ಕಲಾಕಾರರು, ಗ್ರಾಫಿಕ್ಸ್ ಪಂಡಿತರು. ನನ್ನ ಇದೆಲ್ಲದರ ತಿಳುವಳಿಕೆ ಎಷ್ಟರ ಮಟ್ಟಿಗೆ (ಕಳಪೆಯಾಗಿ) ಇರುವುದೆಂಬ ಪರಿಚಯ ಮಾಡಿಕೊಟ್ಟದ್ದು ಅದೇ ಸಮುದಾಯವೆ!
ಆಗೊಮ್ಮೆ ಮಲೇಶಿಯಾದ ಥಿನೇಶ್ವರಿ ಗೋವಿಂದಸಾಮಿ ಎಂಬುವರ ಪರಿಚಯವಾದಾಗ ಅವರ ಗ್ಯಾಲರಿ ನೋಡುತ್ತ ಹೊರಟಿದ್ದೆ. ಆಗ ಸಿಕ್ಕದ್ದು ಗಣೇಶನ ಈ ಗ್ರಾಫಿಕ್. ಎಷ್ಟು ಸುಂದರವಾದ ಗ್ರಾಫಿಕ್ ಇದು ಎನ್ನುವುದನ್ನು ಒಂದು ವರ್ಷ ಕಾಲ ನನ್ನ ಡೆಸ್ಕ್ ಟಾಪಿನ ವಾಲ್ ಪೇಪರ್ ಆಗಿ ಉಳಿದದ್ದು ಎಂಬುದರಿಂದ ಗ್ರಹಿಸಬಹುದು.
ಸ್ವತಃ ಚಿತ್ರಕಲೆಯಲ್ಲಿ ಆಸಕ್ತನಾದ ನಾನೂ ಕೂಡ ಹಲವು ರೀತಿಯಲ್ಲಿ ವಿಜ್ಞೇಶ್ವರನನ್ನು ಬಿಡಿಸಲು ಪ್ರಯತ್ನಿಸಿದ್ದೇನೆ, ಆದರೆ ಕಂಪ್ಯೂಟರಿನಲ್ಲಿ ಇಷ್ಟರಮಟ್ಟಿಗೆ ಬಿಡಿಸುವ ಕಲೆ ಬಹುಶಃ ಥಿನೇಶ್ವರಿಯಂತವರಿಗೆ ಮಾತ್ರ ಒಲಿದದ್ದೇನೊ ![]()
ವಾಲ್ ಪೇಪರ್ ಪ್ರೇಮಿಗಳಿಗೆ ಸುಲಭವಾಗುವಂತೆ ಇಲ್ಲಿಯೂ ಅದರ ಪ್ರತಿ ಲಗತ್ತಿಸಿರುವೆ, ಬೇಕಾದರೆ ಡೌನ್ಲೋಡ್ ಮಾಡಿಕೊಳ್ಳಿ
| Attachment | Size |
|---|---|
| Ganesha_Wallpaper_by_TrIXInc.jpg | 186.55 ಕೆಬಿ |

- Login or register to post comments
- 1079 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಚಿತ್ರವಾ?
ಇದು ಚಿತ್ರವಾ? ನನಗಂತೂ ನಂಬೋಕ್ಕೇ ಆಗ್ತಿಲ್ಲ. ಕ್ಯಾಲೆಂಡರ್ ಗಳಲ್ಲಿ ಇಂತಹ ಚಿತ್ರಗಳನ್ನು ನೋಡಿದ್ದೇ. ತುಂಬಾ ಚೆನ್ನಾಗಿ ಬರೆದಿದ್ದಾರೆ. ಬೆಳಕಿನ ಎಫೆಕ್ಟ್ ಮತ್ತು ಸ್ವಾಮಿಯ ಮೇಲಿನ ಶೈನಿಂಗ್ ತುಂಬಾ ಚೆನ್ನಾಗಿ ಮೂಡಿದೆ. ಇದಕ್ಕೆ ಕಾಪಿರೈಟ್ ಇಲ್ಲ ಅಲ್ವಾ? ನಾನಂತೂ ನನ್ನ ಪಿಸಿಗೆ ರವಾನಿಸಿಕೊಂಡಿದ್ದೀನಿ.
ಇನ್ನೂ ಇಂತಹ ಚಿತ್ರಗಳನ್ನು ನಮಗೆ ತೋರಿಸಿ. ನೀವು ಬರೆದಿರುವುದನ್ನೂ ತೋರಿಸಿ.
---
ತವಿಶ್ರೀನಿವಾಸ
ಒಂದು ರೀತಿಯಲ್ಲಿ ಚಿತ್ರವೇ
ಹೌದು, ಒಂದು ರೀತಿಯಲ್ಲಿ ಚಿತ್ರವೇ
ಈಗಿನ ಕಾಲದಲ್ಲಿ ಪ್ರತಿಯೊಂದಕ್ಕೂ ಕಂಪ್ಯೂಟರ್ ಬಳಕೆ ಸಾಮಾನ್ಯವಾಗಿರುವಾಗ, ಚಿತ್ರಕಲೆಯೂ, ಗ್ರಾಫಿಕ್ಸ್ ನೊಂದಿಗೆ ಮೇಳೈಸಿ ಹೊಸ ರೂಪ ಪಡೆದುಕೊಂಡಿದೆ. ಇವರು ಇದನ್ನು ತಯಾರಿಸಿರುವುದು ಕಂಪ್ಯೂಟರಿನಲ್ಲಿ. ನೀವು ಮುಂಚೆಯೆಲ್ಲಾ ನೋಡಿರುವ ಕ್ಯಾಲೆಂಡರ್ ಫೋಟೋಗಳೂ ಇತ್ತೀಚೆವಾದರೆ ಕಂಪ್ಯೂಟರಿನಲ್ಲಿ ಡಿಸೈನ್ ಮಾಡಿರುವ ಸಾಧ್ಯತೆಗಳೇ ಹೆಚ್ಚು.
ಕಾಪಿರೈಟ್ - ಸ್ವಂತ ಉಪಯೋಗಕ್ಕೆ ತೊಂದರೆ ಇಲ್ಲ. ಕಮರ್ಶಿಯಲ್ ಬಳಕೆಗೆ ಇದರ ಕರ್ತೃವನ್ನು ಒಮ್ಮೆ ಸಂಪರ್ಕಿಸಿದರೆ ಒಳಿತು.
--
"ಹೊಸ ಚಿಗುರು, ಹಳೆ ಬೇರು"