ಇತಿಹಾಸದ ಪುಸ್ತಕಗಳು
ನನ್ನ ಸ್ನೇಹಿತನೊಬ್ಬ ಒಳ್ಳೆಯ ಐತಿಹಾಸಿಕ ಕನ್ನಡ ಪುಸ್ತಕಗಳ ಬಗ್ಗೆ ವಿಚಾರಿಸುತ್ತಿದ್ದಾನೆ.
ನಾನು ಶಾಲೆಯಲ್ಲಿ ಇತಿಹಾಸ ಓದಿದ್ದು ಬಿಟ್ಟರೆ, ಇತರೆ ಇತಿಹಾಸದ ಪುಸ್ತಕಗಳನ್ನು ಓದಿಲ್ಲ. ನಿಮಗೆ ಒಳ್ಳೆಯ ಪುಸ್ತಕಗಳ ಪರಿಚಯ ಇದ್ದಲ್ಲಿ ದಯವಿಟ್ಟು ತಿಳಿಸಿ, ಸಹಾಯ ಮಾಡಿ. ಆತನಿಗೆ ಸ್ವಾತಂತ್ರ್ಯ ಸಂಗ್ರಾಮದ (ಒಳ್ಳೆಯ) ಪುಸ್ತಕಗಳ ಪಟ್ಟಿ ಬೇಕಂತೆ.

- Login or register to post comments
- 1334 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪಾಲಾಕ್ಷರ ಕರ್ನಾಟಕ ಇತಿಹಾಸ ಓದಿ
ವಿಕಿಪೆಡಿಯದಲ್ಲೂ ಇತಿಹಾಸ ಚೆನ್ನಾಗಿದೆ.
ಬನ್ನಿ ಹೊಸ ನಾಡು ಕಟ್ಟೋಣ
ಇತಿಹಾಸದ ಪುಸ್ತಕಗಳು
ಭಾರತೀಯ ವಿಧ್ಯಾಭವನದ `ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ` ಶ್ರೇಣಿಯನ್ನು ನೋಡಿ. ಸುಮಾರು 4 ದಶಕಗಳಷ್ಟು ಹಿಂದಿನ ಇಂಗ್ಲೀಷ್ ಆವೃತ್ತಿಯ ಅನುವಾದವಾದರೂ ಸಾಕಷ್ಟು ಮಾಹಿತಿ ಒದಗಿಸುತ್ತದೆ. ಸುಮಾರು 25 ಸಂಪುಟಗಳನ್ನು ತಂದಹಾಗೆ ಜ್ಞಾಪಕ. ಅನುವಾದವೂ ಚೆನ್ನಾಗಿದೆ. (ಒಂದದೊಂದರ ಬೆಲೆ 100 ರಿಂದ 150 ಬಿಡಿಯಾಗಿ ಕೊಳ್ಳಬಹುದು). ಕನ್ನಡ ವಿಶ್ವವಿದ್ಯಾಲಯ ಸಹ ಕರ್ನಾಟಕ ಇತಿಹಾಸ ಸಂಪುಟಗಳನ್ನು ಹೊರತಂದಿದೆ. ಸಾಂಸ್ಕೃತಿಕ ಇತಿಹಾಸಕ್ಕೆ ಡಿ ಡಿ ಕೊಸಾಂಬಿಯವರ `ಪುರಾಣ ಮತ್ತು ವಾಸ್ತವ`(ಇಂಗ್ಲೀಷ್‌ನ Myth and Reality ಅನುವಾದ) ಲಭ್ಯವಿದೆ.
ಪಠ್ಯದಂತಲ್ಲದೆ ಜನಪ್ರಿಯ ಕನ್ನಡ ಇತಿಹಾಸ ಪುಸ್ತಕ ಇಲ್ಲವೆಂದೇ ನನ್ನ ಅನಿಸಿಕೆ. ಹಾಗೆ ಯಾವುದಾದರೂ ಲಭ್ಯವಿದೆಯೇ?.
ಇತಿಹಾಸದ ಪುಸ್ತಕಗಳು
ಭಾರತೀಯ ವಿಧ್ಯಾಭವನದ `ಭಾರತೀಯ ಜನತೆಯ ಇತಿಹಾಸ ಮತ್ತು ಸಂಸ್ಕೃತಿ` ಶ್ರೇಣಿಯನ್ನು ನೋಡಿ. ಸುಮಾರು 4 ದಶಕಗಳಷ್ಟು ಹಿಂದಿನ ಇಂಗ್ಲೀಷ್ ಆವೃತ್ತಿಯ ಅನುವಾದವಾದರೂ ಸಾಕಷ್ಟು ಮಾಹಿತಿ ಒದಗಿಸುತ್ತದೆ. ಸುಮಾರು 25 ಸಂಪುಟಗಳನ್ನು ತಂದಹಾಗೆ ಜ್ಞಾಪಕ. ಅನುವಾದವೂ ಚೆನ್ನಾಗಿದೆ. (ಒಂದದೊಂದರ ಬೆಲೆ 100 ರಿಂದ 150 ಬಿಡಿಯಾಗಿ ಕೊಳ್ಳಬಹುದು). ಸ್ವಾಂತ್ರ ಸಂಗ್ರಾಮದ ಬಗೆಗೂ ಬಿಡಿಯಾದ ಸಂಪುಟಗಳಿವೆ. ಸ್ವಾಂತ್ರ್ಯ ಸಂಗ್ರಾಮದ ಬಗೆಗೆ ಪಿ ವಿ ಶಂಕರ್‌ನಾರಾಯಣ ಅವರ ಪುಸ್ತಕ ಒಂದ ಲಭ್ಯವಿದೆಯೆಂದು ಕೇಳಿದ್ದೇನೆ.