ಹಳೆಗನ್ನಡ ಓದಲು ನೆರವು
ಹಳೆಗನ್ನಡವನ್ನು ಓದಲು ನೆರವಾಗುವ, ಪುಸ್ತಕಗಳು ಯಾವುವು?
ಅಂದರೆ ಹಳೆಗನ್ನಡದ ವ್ಯಾಕರಣ, ಪದಗಳ ಅರ್ಥ ಮುಂತಾದವು.
ಧನ್ಯವಾದ

- Login or register to post comments
- 1208 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹಳೆಗನ್ನಡವನ್ನು ಓದಲು ನೆರವಾಗುವ, ಪುಸ್ತಕಗಳು ಯಾವುವು?
ಅಂದರೆ ಹಳೆಗನ್ನಡದ ವ್ಯಾಕರಣ, ಪದಗಳ ಅರ್ಥ ಮುಂತಾದವು.
ಧನ್ಯವಾದ




ಉ: ಹಳೆಗನ್ನಡವನ್ನು ಓದಲು ನೆರವು
ನಾನೂ ಹಿಂದೊಮ್ಮೆ ಈ ತರಹ ನನ್ನ ಮಿತ್ರರೊಬ್ಬರಿಗೆ ಕೇಳಿದೆ . 'ನನಗೆ ಹಳಗನ್ನಡ ಗೊತ್ತಿಲ್ಲ ; ಕಲಿಯುವ ಆಸೆ - ಹೇಗೆ / ಎಲ್ಲಿಂದ ಆರಂಬಿಸಬೇಕು ? ' ಅವರು ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಓದಲು ತಿಳಿಸಿದರು. ಖರೀದಿ ಏನೋ ಆಯಿತು . ವರ್‍ಷಗಳು ಕಳೆದವು . ಇನ್ನೂ ಓದಿಲ್ಲ! . ಈ ಮಧ್ಯೆ ಕೆಂಪು ನಾರಾಯಣ ವಿರಚಿತ ಮುದ್ರಾಮಂಜೂಷ ಹುಡುಕಿ ಖರೀದಿಸಿದೆ. ಸ್ವಲ್ಪ ಮಟ್ಟಿಗೆ ಹಳೆಗನ್ನಡದ ಪರಿಚಯ ಆಗುತ್ತದೆ. ಅದರಿಂದ ೫೦ ಪುಟ ಓದಿ ನಿಲ್ಲಿಸಿದ್ದೇನೆ. ಆದರೆ ಅದು ಓದಲು ಸುಲಭ. ಹಳೆಗನ್ನಡದ ಪರಿಚಯ ಈ ಕಥೆಯ ಮೂಲಕ ಚೆನ್ನಾಗಿ ಆಗುತ್ತದೆ.
ಹಳೆಗನ್ನಡ ವ್ಯಾಕರಣ
ಅದೇನೆಯಿರಲಿ.
ಕ್ರಮಬದ್ಧವಾಗಿ ಹಳೆಗನ್ನಡವನ್ನು ಓದಲು, ಹಳೆಗನ್ನಡದ ವ್ಯಾಕರಣವನ್ನು ತಿಳಿಯಲು, ಹೊಸಗನ್ನಡದಲ್ಲಿ ಯಾವುದಾದರು ಒಳ್ಳೆಯ ಸರಳ ಪುಸ್ತಕವಿದೆಯೆ?
ಹಳೆಗನ್ನಡ ವ್ಯಾಕರಣ ಪುಸ್ತಕ
ಡಿ.ಎಲ್.ಎನ್.ಶಂಕರಭಟ್ಟರ 'ಹಳಗನ್ನಡ ವ್ಯಾಕರಣ' ಹೆಸರಿನ ಒಂದು ಪುಸ್ತಕ ಇದೆ . ನೋಡಿರಿ.
ಉ: ಹಳೆಗನ್ನಡ ವ್ಯಾಕರಣ ಪುಸ್ತಕ
ಡಿ.ಎನ್. ಶಂಕರಬಟ್ಟರ "ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು?" ಎಂಬ ಹೊತ್ತಿಗೆಯಿದೆ. ಓದಿ ತಲೆಗಿಳ್ಸಿಕೊಳ್ಳುವುದಕ್ಕೆ ತುಂಬ ಸಲೀಸಾಗಿದೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಓದಿ ಬರೆಯಿರಿ
ಓದಿದ್ದನ್ನೆಲ್ಲಾ ಇಲ್ಲಿ ಬರೆಯಿರಿ ಸರ್.
ಹಳಗನ್ನಡದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗಿದೆ. ಈ ಪುಸ್ತಕದಲ್ಲಿ ಇಲ್ಲಿಯವರೆವಿಗೆ ಓದಿರುವುದನ್ನು (೫೦ ಪುಟಗಳು) ಬರೆಯಿರಿ.
ಪುರಾತನ ಕನ್ನಡ ಸಾಹಿತ್ಯವನ್ನು ತಿಳಿದುಕೊಳ್ಳಲು ಇದೊಂದು ಸದವಕಾಶ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಉ: ಹಳೆಗನ್ನಡವನ್ನು ಓದಲು ನೆರವು
ನೀವೂ ಹಳೆಗನ್ನಡ ಕಲಿಯಬೇಕೆಂದರೆ ಮೊದಲು ಪಂಪ ನನ್ನು ಓದಿ ಆಮೇಲೆ ಪರಿಣಾಮ ನೋಡಿ.
ಉ: ಹಳೆಗನ್ನಡವನ್ನು ಓದಲು ನೆರವು
ರನ್ನ ಕಂದ ಚತುರಾಸ್ಯ ನಿಘಂಟು ಹಾಗೂ ಕನ್ನಡಸಾಹಿತ್ಯ ಪರಿಷತ್ತಿನ ’ಹೞಗನ್ನಡ ನಿಘಂಟು’ ಹಾಗೂ ಯಾವುದೇ ಬರಹಗಾರರು ಬರೆದಿರುವ ಟೀಕೆ ಟಿಪ್ಪಣಿಗಳುಳ್ಳ ’ಶಬ್ದಮಣಿದರ್ಪಣಂ’ ದಯವಿಟ್ಟು ಓದಿ. ಹಾಗೆಯೇ ’ಕವಿರಾಜಮಾರ್ಗಂ’ ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.