ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ನಮ್ ಶಾಲೆಗಳಲ್ ಕಲಿಸುವ ತಪ್ಪು ಕನ್ನಡ ಸೊಲ್ಲರಿಮೆಗಿಂತ ವಾಸಿಯಾದ ಹೆಚ್ಚು ಸರಿ ಮತ್ತು ತಕ್ಕುದಾದ, ಲಾಜಿಕ್ಕಾದ ಸೊಲ್ಲರಿಮೆಯನ್ ಶಂಕರಬಟ್ಟರ ಹೊತ್ತಗೆಗಳಲ್ ನೋಡಬೋದು...
ಅವರ್ ಕಂನಡದ ಜೆಂಡರ್ ಸಿಸ್ಟಮ್ ಬಗ್ಗೆ ಹೀಗ್ ಹೇಳಿದ್ದಾರೆ.
ಕಂನಡದಲ್ ನಾಲಕ್ ಜೆಂಡರ್‍ಗಳಿವೆ.
೧) ಬರೀ ಮಾನುಶ - ಅವರು, ಮಗು, ಕೂಸು, ಮಂದಿ, ಜನ, ಮಾರಟಗಾರರು, ಹಾಡುಗಾರರು
೨) ಮಾನುಶ ಗಂಡು - ಅವನು, ಮಗ, ಹುಡುಗ(ರು), ಮಾರಟಗಾರ, ಹಾಡುಗಾರ
೩) ಮಾನುಶ ಹೆಣ್ಣು - ಅವಳು, ಮಗಳು, ಹುಡುಗಿ(ಯರು), ಮಾರಾಟಗಾರ್ತಿ, ಹಾಡುಗಾರ್ತಿ
೪) ಮಾನುಶವಲ್ಲದ - ಅದು,ಅವು,ಆನೆ,ಹುಲಿ,ಗೂಳಿ,ಹಸು,ಆಡು,ಮೇಕೆ
ಹಾಗೆ ಒಂದು ಕಾಲಕ್ ಒಂದು ಕೆಲಸದೊರೆಗ್ ಜೆಂಡರ್ ಮತ್ತು ವಚನಗಳ ಮೇಲೆ ಅಯ್ದ್ ರೂಪಗಳ್ ಕನ್ನಡದಲ್ಲಿ.
ಮಾದರಿ..
ಈಗಿನ ಕಾಲ, ಮಾಡು ಕೆಲಸದೊರೆ
೧) ಬರೀ ಮಾನುಶ (ಒರ್ವಚನ ಮತ್ತು ಹಲವಚನ) - ಮಾಡ್ತಾರೆ
೨) ಮಾನುಶ ಗಂಡು (ಒರ್ವಚನ)- ಮಾಡ್ತಾನೆ
೩) ಮಾನುಶ ಹೆಣ್ಣು (ಒರ್ವಚನ)- ಮಾಡ್ತಾಳೆ
೪) ಮಾನುಶವಲ್ಲದ (ಒರ್ವಚನ)- ಮಾಡ್ತದೆ
೪) ಮಾನುಶವಲ್ಲದ (ಹಲವಚನ)- ಮಾಡ್ತವೆ
ಕಂನಡದಲ್ಲಿ "The person will come" ಅನ್ "ಅವರು ಬರ್ತಾರೆ" ಎಂದೇ ಹೇಳಬೇಕು.. ಕನ್ನಡದಲ್ಲಿ "ಬರೀ ಮಾನುಶ ಒರ್ವಚನ" ಇಲ್ಲ, ಇಲ್ಲವೇ ಬರೀ ಮಾನುಶ ಜೆಂಡರ್ ಅಲ್ಲಿ ಒರ್ವಚನ ಮತ್ತು ಹಲವಚನ ರೂಪ ಒಂದೇ.
ಇದಕ್ಕೆ ಮಗು, ಕೂಸು ಮುಂತಾದ ಒರ್ವಚನ - ಮಾನುಶ ಒರೆಗಳು ಹೊರತು/ಅಪವಾದ
ಮಾದರಿ
"ಮಗು ಬಂತು" ಇಲ್ಲಿ ಮಗು ಮಾನುಶ ಜೆಂಡರ್ ಆದರು, ಬಂತು ಮಾನುಶವಲ್ಲದ-ಒರ್ವಚನ ರೂಪ.
"ಕೂಸು ಅತ್ತಿತು"
ಮುಂತಾದವು..
ಹಾಗೇ
ಮಕ್ಕಳು ಬಂದವು ( ಮಕ್ಕಳು ಬಂದರು ಎಂಬ ಬಳಕೆಯೂ ಇದೆ..
ಕೂಸುಗಳು ಅತ್ತವು

- Login or register to post comments
- 234 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
<<ಕಂನಡದಲ್ಲಿ "The person will come" ಅನ್ "ಅವರು ಬರ್ತಾರೆ" ಎಂದೇ ಹೇಳಬೇಕು.. ಕನ್ನಡದಲ್ಲಿ "ಬರೀ ಮಾನುಶ ಒರ್ವಚನ" ಇಲ್ಲ, ಇಲ್ಲವೇ ಬರೀ ಮಾನುಶ ಜೆಂಡರ್ ಅಲ್ಲಿ ಒರ್ವಚನ ಮತ್ತು ಹಲವಚನ ರೂಪ ಒಂದೇ.>>ಕಂನಡದಲ್ಲಿ>
ಮಹೇಶ ಅವರೆ ನಾವು ಮಾತನಾಡುವಾಗ "ಒಬ್ಬರು ಬರ್ತಾರೆ ತಡಿ, ಆಮ್ಯಾಲೆ ನಿನಗ ತಿಳಿತೈತಿ" ಅಂತೀವಲ್ಲಾ ಇದರಲ್ಲಿ ಮಾನುಶ ಜೆಂಡರ್ ಒರ್ವಚನ ಇಲ್ಲಾ ಅಂತೀರಾ ?
ನನ್ನಿ.
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಇಲ್ಲಿ ಮಾನುಶ ಜೆಂಡರ್ ಒರ್ವಚನ ಅಯ್ತಿ..
’ಒಬ್ಬರು’ ಮತ್ತು ’ಬರ್ತಾರೆ’ ಇದು ಬರೀ ಮಾನುಶ ಜೆಂಡರ್ ಒರ್ವಚನ...
ಈಗ ನೀವ್ ’ಅವರು’ ಯಾ ಜೆಂಡರ್ ವಚನ ಹೇಳ್ರಿ?
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಆದರೆ ಇಲ್ಲಿ ಒಬ್ಬರು ಅನ್ನೋದು ಮಗು, ಕೂಸು ಎಂಬ ಸರಕು/ಸಂಗತಿಯನ್ ಹೇಳ್ತಿಲ್ಲ..!
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಮಹೇಶ ಅವರೆ.......ಪ್ರಾಮಾಣಿಕವಾಗಿ.
ನನಗೇನೂ ಅರ್ಥ ಆಗಲಿಲ್ಲ.
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಒಂದು ಕೂಸು, ಒಂದು ಮಗು ಹೀಗೆ ಹೇಳ್ತೀವಿ.. ಅಲ್ವ.!!
ಒಬ್ಬರು ಕೂಸು, ಒಬ್ಬರು ಮಗು ಎಂದು ಹೇಳಲ್ಲ..
ನಿಮಗೆ ಏನು ತಿಳೀಲಿಲ್ಲ?
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಒರ್ವಚನ ಹಲವಚನ: ವಚನ ಶಬ್ದಕ್ಕೂ ಶುಧ್ಧಕನ್ನಡ ಪ್ರಯೋಗ ನೀವು ಯೋಚಿಸಿರಬಹುದೆಂದು ಕುತೂಹಲ ನನಗೆ.
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ವಚನಕ್ಕೂ ಕಂನಡದ್ದೇ ಒರೆ ಮಾಡಬೋದು... ಎಣಿಕೆ, ಎಣಿಮೆ..
ಆದರೆ ಬಟ್ಟರು ಒರ್ವಚನ ಎಂದೇ ಬಳಸಿದ್ದಾರೆ...
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
'ನಾವುಗಳು' ಅಂತೀವಿ...ಇದು ಯಾವ ವಚನ?
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಕಂನಡದಲ್ಲಿ ನಾನು/ನಾನ್ ಇದರ ಹಲವವಚನ ನಾವು/ನಾಮ್..
ನಾವು(ಗಳು) ಇದು ಹಲವಚನ..
ಈ ನಾವು ಬಳಕೆ ಎಲ್ಲೆಡೆ ಇಲ್ಲ .. ನಮ್ ಮನೆಯಲ್ಲಂತೂ ಇಲ್ಲ.
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ನಾವೆಲ್ಲ ಅನ್ನೋದಕ್ಕೆ ಹಲವು ನಾವುಗಳು ಅಂತಾರೇನೋ
ನಾವೆಲ್ಲ ಈಗ ಬಂದೆವು / ನಾವುಗಳು ಈಗ ಬಂದೆವು ಹೀಗೆ
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಏಕವಚನ=ಓರೆಣೆ/ಓರೆಣಿಕೆ
ಬಹುವಚನ=ಹಲವೆಣೆ/ಹಲವೆಣಿಕೆ ಆಗಬಹುದೇನೋ?
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಓರೆಣೆ/ಓರೆಣಿಕೆಗಳು ಹುಟ್ಟು ಚನ್ನಾಗಿದೆ...
ಗಮನಿಸಿರಿ..
http://dsal.uchicago.edu/cgi-bin/philologic/getobject.pl?c.0:1:995.burro...
Ka. or (before consonant), ōr (before vowel) one;
orage oneness, entireness; ore likeness, similarity; orme, omme one time, once, together, at the same time; orba, obba, (PBh.) orvaN one man or person; obbanu one man; obbaḷu one woman; obbar(u) some persons, one person (hon.); oggu, or̤gu to become one, unite with, meet together, agree with one's constitution (as water, climate, etc.); join (tr.); oggu, orgu, or̤gu assemblage, heap; union, harmony, intimacy;
ōrage, ōrige equality, similarity, a match; ōraṇa a line, row
ಓರ್ವ ಎಂಬ ಬಳಕೆ ತಪ್ಪು, ಒರ್ವ ಎಂಬುದೇ ಸರಿ ಎಂಬ ಮಾತಿದೆ..
ಓರೆಣೆ(ಕೆ)(ಮೆ) ಸಲ್ಲುವುದು.!
ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ
ಕನ್ನಡದಲ್ಲಿ ನಾವು ಉದ್ದೇಶಿಸುವ ಅಥವಾ ಸಂಬೋಧಿಸುವ ವ್ಯಕ್ತಿಯ ಲಿಂಗವನ್ನು ಗಮನಿಸದಿದ್ದರೆ ಅದನ್ನು ಒಬ್ಬ ವ್ಯಕ್ತಿ ಅವಮಾನವೆಂದೇ ಭಾವಿಸುತ್ತಾನೆ/ಳೆ. ಉದಾಹರಣೆಗೆ ಮಕ್ಕಳ ವಿಷಯವಾಗಿ ಸಣ್ಣ ವಯಸ್ಸಿನಲ್ಲಿ ನಾವು ನಪುಂಸಕಲಿಂಗ ಬೞಸುತ್ತೇವೆ. "ಅದು ಗಲಾಟೆ ಮಾಡುತ್ತೆ" ಎಂದು ನಾನು ನನ್ನ ಮಗಳನ್ನು ಕುಱಿತು ಹೇೞಿದಾಗ ನನ್ನ ಐದು ವರ್ಷದ ಮಗಳು "ನನ್ನನ್ನು ಯಾಕೆ ಅದು ಅಂತ ಕರೆಯುತ್ತೀಯಾ, ಅವಳು ಅಂತ ಹೇೞೆನ್ನುತ್ತಾಳೆ". ಇದನ್ನೇ ನಾವು ಪ್ರೌಢ ಜನರ ವಿಷಯದಲ್ಲೂ ನೋಡಬಹುದು. ಒಬ್ಬ ವ್ಯಕ್ತಿಯ ವಿಚಾರವಾಗಿ ಅವನ ಲಿಂಗವೂ ವ್ಯಕ್ತಿತ್ವದ ಒಂದು ಭಾಗವೇ ಆಗಿದೆ. ಹಾಗಾಗಿ ಕನ್ನಡದಲ್ಲಿ ದೇವರು ಮತ್ತು ಮನುಷ್ಯರಿಗೆ ಮಾತ್ರ ಪುಂ/ಸ್ತ್ರೀಲಿಂಗಗಳು. ಉೞಿದವಕ್ಕೆ ನಪುಂಸಕಲಿಂಗ. ಉದಾಹರಣೆಗೆ ಪ್ರಾಣಿಗಳೆಲ್ಲ ನಪುಂಸಕಲಿಂಗಗಳೇ. ಅದು ಗಂಡು ನಾಯಿ. ಇದು ಹೆಣ್ಣು ನಾಯಿ. ಇತ್ಯಾದಿ. ಬಹುಶಃ ಪ್ರಾಣಿಗಳಿಗೆ ಮಾತು ಬರುವುದಿಲ್ಲವೆಂಬ ದಾರ್ಷ್ಟಿಕತನವೇ ಇದಕ್ಕೆ ಕಾರಣವಿರಬಹುದೇನೋ?

ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್ ಸಿಸ್ಟಮ್ ಬಗ್ಗೆ