ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.

February 14, 2006 - 11:42am — shreekant.mishrikoti

ನೀವು ಈ ಜನಪದ ಹಾಡನ್ನು ಕೇಳಿರಬಹುದು .( ಜೋಗಿ ಚಿತ್ರದಲ್ಲಿ ಇರುವದು ಅಲ್ಲ. ಜನಪದದಲ್ಲಿ ಇರುವ ಹಾಡು) . ಸಿ. ಅಶ್ವಥ್ ಮತ್ತಿತರರು ಇದನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ.
ಇದರಲ್ಲಿ ಒಳ್ಳೇಯ ಗಂಡನ ಬಿಟ್ಟು , ಎಳ್ಳೀನ ಹೊಲವ ಬಿಟ್ಟು , ಜೋಗಿಗೆ ಮರುಳಾಗಿ 'ನಿನ್ನಲ್ಲಿ ನನಗೆ ಮನಸಾದೆ '( ಇಂದಿನ ಐ ಲವ್ ಯೂ!) ಎಂದು ಅವನ ಹಿಂದೆ ಹೊರಟ ಹೆಣ್ಣು ಮಗಳು ಯಾರು ? ಗಂಡನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋಗುವಂಥ ಸನ್ನಿವೇಶವನ್ನು ಗುರುತಿಸಿರುವ ( ಅಥವಾ ಸ್ವೀಕರಿಸಿರುವ) ಈ ಹಾಡಿನ ಹಿನ್ನೆಲೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

‹ ರಾಹು ಮತ್ತು ಕೇತು - ಅದೃಶ್ಯ ಗ್ರಹಗಳು ದಪ್ಪ ಆಗಲು ಏನು ಮಾಡಬೇಕು ? ›
  • ಅರಳಿ ಕಟ್ಟೆ
~.~
  • Login or register to post comments
  • 1523 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 17, 2006 - 12:17pm — ಮಹೇಶ ಭೋಗಾದಿ

ಜೋಗಪ್ಪ - ಮಲೆ ಮಹಾದೇವ

ಮಹೇಶ ಭೋಗಾದಿ's picture

ನನಗೆ ತಿಳಿದಂತೆ ಈ ಹಾಡು ಮಲೆ ಮಹಾದೇವನ ಕುರಿತು ಇರುವುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 17, 2006 - 12:55pm — shreekant.mishrikoti

ಜೋಗಪ್ಪ - ಮಲೆ ಮಹಾದೇವ

shreekant.mishrikoti's picture

ಧನ್ಯವಾದಗಳು , ಹೆಚ್ಚಿಗೆ ವಿವರ ಇದ್ದರೆ ತಿಳಿಸಿ. ಗಂಡನನ್ನು ಬಿಟ್ಟು ಮಹಾದೇವನ್ ಹಿಂದೆ ಬಂದವಳು ಯಾರು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 19, 2006 - 6:55am — sinchanabhat

ತಮಾಷೆಗಾಗಿ!

sinchanabhat's picture

ಗಂಡನಿಗಿಂತಲೂ ಉನ್ನತವಾದ ದೇವರನ್ನು ನೋಡಹೊರಟವಳು!Smiling ಇದು ಜನಪದ ಕ್ರುತಿಯಾದ್ದರಿಂದ ಅದರ ಮೂಲ ಯಾರೆಂದು ತಿಳಿದಿರಲಿಕ್ಕಿಲ್ಲ. ತಿಳಿದವರಾರಾದರೂ ತಿಳಿಸಿದರೆ ನನಗೂ ತಿಳಿಸಿ. ಅರಿವ ಕುತೂಹಲವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 19, 2006 - 10:46pm — hpn

ಪದ ಪ್ರಯೋಗ

hpn's picture

> ಅರಿವ ಕುತೂಹಲವಿದೆ

ಅರಿತುಕೊಳ್ಳುವ ಕುತೂಹಲ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 20, 2006 - 7:12am — sinchanabhat

ಹೌದು

sinchanabhat's picture

ಅರಿ ಎಂದರೆ ಕ್ರಿಯಾಪದವಾಗಿ ತಿಳಿ ಎಂದಾಗುತ್ತದೆ.ತಿಳಿಯುವ,ಅರಿಯುವ ಎನ್ನಲು ಅರಿವ ಎಂದು ಉಪಯೋಗಿಸಿದ್ದೇನೆ.ಹೀಗೆ ಅರಿವ,ತಿಳಿವ ಎಂದು ಉಪಯೋಗಿಸುತ್ತಾರಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 20, 2006 - 10:52am — ಮಹೇಶ ಭೋಗಾದಿ

ಕುತೂಹಲ

ಮಹೇಶ ಭೋಗಾದಿ's picture

ಕುತೂಹಲವೆಂದರೆ ತಿಳಿಯುವ/ಅರಿಯುವ ಆಸೆ/ಆಸಕ್ತಿ ಎಂದು ಅರ್ಥವೆಂದು ನಾನು ಭಾವಿಸಿದ್ದೇನೆ.

ಆದ್ದರಿಂದ ಅರಿವ/ಅರಿಯುವ ಕುತೂಹಲ ಎಂದು ಹೇಳಬೇಕಾಗಿಲ್ಲ. ಬರೀ ಕುತೂಹಲವೆಂದರೆ ಸಾಕೆಂದು ನನ್ನ ಅನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 21, 2006 - 7:57am — sinchanabhat

ನಾನು

sinchanabhat's picture

ನಾನು ಕುತೂಹಲವೆಂದರೆ ತವಕ ಎಂದು ತಿಳಿದಿದ್ದೆ.ನನ್ನದು ತಪ್ಪು ಕಲ್ಪನೆ ಆಗಿತ್ತೇನೊ,ನೀವು ಹೇಳಿರುವುದು ಸರಿ ಇದ್ದಿರಬಹುದು.ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 21, 2006 - 11:39pm — bhatpp

ಉ: ಕುತೂಹಲ

bhatpp's picture

ಕೇವಲ ಅರಿಯುವ ಕುತೂಹಲವೊಂದೆ ಇಲ್ಲವಲ್ಲ .. ನೋಡುವ ಹಾಗೂ ಕೇಳುವ ಕುತೂಹಲವೂ ಇರುವುದಲ್ಲವೆ? ಹಾಗಾಗಿ, ನನ್ನ ಪ್ರಕಾರ ಕುತೂಹಲವೆಂದರೆ (ಕೇವಲ) ಆಸಕ್ತಿ! ಏನಂತೀರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 21, 2006 - 6:36pm — shreekant.mishrikoti

ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ - ಒಂದು update!

shreekant.mishrikoti's picture

ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಯಾರಿಗಾದರೂ ಗೊತ್ತಿದ್ದರೆ ತಿಳಿಸಿ .
ಎಂದು ಹಿಂದೊಮ್ಮೆ ಕೇಳಿದ್ದೆ . ಅದು ಯಾಕೋ ಇಲ್ಲಿ ಚರ್ಚೆಗಳು ಬಾಷಾ ಶುದ್ಧಿಯ / ಶಬ್ದಪ್ರಯೋಗ ಕುರಿತಾದ ಚರ್ಚೆಗಳಾಗಿ ಬದಲಾಗಿ ಬಿಡುತ್ತವೆ!. ಇದಕ್ಕೂ ಅದೇ ಗತಿಯಾಯಿತು.

ಇರಲಿ .
ನಾನು ಆಗಾಗ ಧಾರವಾಡದಲ್ಲಿ ಸಮಾಜ ಪುಸ್ತಕಾಲಯಕ್ಕೆ ಭೆಟ್ಟಿ ಕೊಡುತ್ತೇನೆ. ಅಲ್ಲಿ ಒಬ್ಬ ಸೇಲ್ಸ್‍ಮನ್ ಇದ್ದಾರೆ . ಪುಸ್ತಕದ ಅಂಗಡಿಯಲ್ಲಿ ಕೆಲಸಮಾಡಿಕೊಂಡಿರುವ ಅವರು ಬಹಳ ಓದಿಕೊಂಡಿದ್ದಾರೆ. ಅವರನ್ನು ಕೇಳಿದೆ. ಅವರು ಈ ಹಾಡಿಗೆ 'ಆಧ್ಯಾತ್ಮಿಕ ಅರ್ಥ' ಇದೆ ಎಂದು ತಿಳಿಸಿದರು.

ಹೆಚ್ಚಿನ ವಿವರ ನಾನು ಕೇಳಲಿಲ್ಲ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 21, 2006 - 8:50pm — ಸಂಗನಗೌಡ

ಜೋಗಿ

ಸಂಗನಗೌಡ's picture

ಮೇಲು ನೋಟಕ್ಕೆ ಈ ಹಾಡು, ಹಾದರಕ್ಕೆ ಎಳಸುವ ಚಂಚಲ ಮನಸ್ಸಿನ ಹೆಣ್ಣೊಬ್ಬಳ ಹಾಡಿನಂತೆ ತೋರುತ್ತದೆ. ಆದರೆ ಇದಕ್ಕೆ ಒಳತಿರುಳಿನ ತಿಳಿವಿದೆ ಎಂದು ತಿಳಿದು ಕಣ್ಣರಳಿಸುವಂತಾಯಿತು. ಹಾಗೆಯೇ ಜನಪದದಲ್ಲಿ "ಪಾರವತಿಯನ್ನೂ ಹಾದರ ಬಿಡಲಿಲ್ಲ" ಎಂದಿದೆ. ಮಹಾಬಾರತವನ್ನು "ಹಾದರದ ಕತೆ,ಸೋದರದ ವದೆ" ಎನ್ನಲಾಗಿದೆ. ಮಹಾಬಾರತದ ಹೊತ್ತಿನಲ್ಲಿ ಮಕ್ಕಳಾಗದಿದ್ದವರಿಗೆ "ಮಕ್ಕಳ ಮಾಡುವ ಸಲುವಾಗಿ" ಗರತಿ ಹೆಣ್ಣು ಬೇರೊಬ್ಬನ ಸಂಗಡ ಮಲಗುತ್ತಿದ್ದಳು. ಅದರ ಉದ್ದೇಸ ಬರೀ ಮಕ್ಕಳಾಗಿ ಪೀಳಿಗೆ ಮುನ್ನಡೆಯಲಿ ಎಂಬುದಟ್ಟೇ ಆಗಿರುತ್ತಿತ್ತು. ಕಾಮ ವಾಸನೆ ಇರುತ್ತಿರಲಿಲ್ಲ. ಹಾಗೂ ಆ ಕಾಲದಲ್ಲಿ ಬಹುಗಂಡಂದಿರನ್ನು ಹೊಂದುವ ಪದ್ದತಿ ಇತ್ತು. ಆಚಾರ್‍ಯ ಬೀಸ್‍ಮರ ಅಪ್ಪ ಶಂತನುನ ಮೂರನೆಯ ಹೆಂಡತಿ 'ಸತ್‍ಯವತಿ', ಮದುವೆಗೆ ಮುನ್ನ ಮುನಿಯೊಬ್ಬರೊಂದಿಗೆ ಕೂಡಿ ಹುಟ್ಟಿದವನೇ ವ್‍ಯಾಸ ಮುನಿ, ಎಂದು ವ್‍ಯಾಸರೇ ಬರೆದ ಮಹಾಬಾರತದಲ್ಲಿದೆ. ಇದನ್ನೆಲ್ಲಾ ನೋಡಿದರೆ ಆಗಿನ ಹೊತ್ತಿನಲ್ಲಿ, ಹಾದರದ ಬಗ್ಗೆ ಈಗಿರುವಾಟು ಮೈಲಿಗೆ-ಮುಡಿಚೆಟ್ಟಿನ ಬಾವನೆ ಇರಲಿಲ್ಲ ಅನಿಸುತ್ತದೆ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2006 - 3:19pm — betala

ನನ್ನ

betala's picture

ನನ್ನ ಪ್ರಕಾರ ಇದು ಒಂದು ಪ್ರೆಮಗೀತೆ ಅನ್ನಿಸುತ್ತೆ.

ಒಂದು ಮದುವೆಗೆ ಬಂದ ಹುಡುಗಿ ಒಬ್ಬ ಒಳ್ಲೆ ಹುಡುಗನಿಗೆ ಹುಡುಕುತ್ತಿರುತ್ತಾಳೆ, ಆದರೆ ಹುಡುಗ ಜೀವನದ ಗುರಿ ಹುಡುಕುತ್ತ ಇರುತ್ತಾನೆ...

ಗುತ್ತಿಲ್ಲ ಗುರಿಇಲ್ಲ .... ಅಂತ ಹೆಳ್ತಾನೆ....

 

ಇದು ನನ್ನ ಅನಿಸಿಕೆ.

 

-nimma bembidadha betala

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 5, 2007 - 9:19am — nagu

ಉ: ಎಲ್ಲೋ ಜೋಗಪ್ಪ ನಿನ್ನ ಅರಮನೆ ? - ಈ ಹಾಡಿನ ಹಿನ್ನೆಲೆ ಗೊತ್ತಿದ್ದರೆ ತಿಳಿಸಿ.

nagu's picture

ಸ್ವಾಮಿ ಮಿಶ್ರಕೋಟಿಯವರೇ!
ನಿಮ್ಮ ಜೋಗಿಯ ಹಾಡಿನ ಹಿನ್ನೆಲೆಯ ಹುಡುಕಾಟ ತುಂಬಾ ಇಷ್ಟವಾಯಿತು. ನಾನೂ ಆ ಜನಪದಗೀತೆಯನ್ನು ಕೇಳಿ ಮೆಚ್ಚಿದ್ದೇನೆ. ಅದರಲ್ಲಿ ಸಾಕಷ್ಟು ಬದಲಾವಣೆಗೊಂಡ ಹಾಡುಗಳನ್ನೂ ಕೇಳಿದ್ದೇನೆ ಥೇಟ್ ‘ಜೋಗಿ’ಯ ಹಾಡಿನಂಗೆ. ನಾನೊಂದು ಕಥೆ (ಜಾನಪದ) ಓದಿದ್ದೆ. ಅದು ಇಬ್ಬರು ಮಲ-ಸಹೋದರಿಯರ ಕಥೆ. ಅದರ ಕೆಲವು ಸಾಲುಗಳು ನನ್ನ ನೆನಪಿನಲ್ಲಿ . .

. . .

ಹಿರಿಹೆಂಡತಿಯ ಮಗಳಿಗೆ ಮೈಮುರಿಯುವಂತಹ ಕೆಲಸ. ಇವಳ ಹೆತ್ತವ್ವನೂ ಇಲ್ಲ. ಮೈಮುರಿಯುವ ಕೆಲಸ ಹಾಗೂ ಅರೆಹೊಟ್ಟೆಯಿಂದಾಗಿ ಅವಳು ಸಪೂರ, ಏಳು ಮಲ್ಲಿಗೆ ತೂಕದವಳು. . . ಜೊತೆಗೆ ತನ್ನವ್ವನಂತೆಯೇ ಸುರಸುಂದರಿ!
ಕಿರಿಹೆಂಡತಿಯ ಮಗಳು ಮುದ್ದಿನಿಂದಾಗಿ ಮೊದ್ದು ಮೊದ್ದು. ಕೆಲಸವಿಲ್ಲದೆ ಹಾಗೂ ದಿನಾಪೂರಾ ಮೇಯುತ್ತಿರುವುದರಿಂದ ಮೈಯಲ್ಲೂ ಕೊಬ್ಬು, ಮುದ್ದಿನಿಂದಾಗಿ ಹಾಗೂ ಮನಪೂರಾ ಕೊಬ್ಬು!(ಸೊಕ್ಕಾ?) ಜೊತೆಗೆ ರೂಪವೋ ತನ್ನವ್ವನಂತೆಯೇ.
ಸುರಸುಂದರಿಯೊಮ್ಮೆ ಸುರಸುಂದರಾಂಗ ರಾಜಕುಮಾರನ ಕಣ್ಣಿಗೆ ಬೀಳುತ್ತಾಳೆ. ತಕ್ಷಣವೇ ಪ್ರೇಮೋದಯ! ಸುರಸುಂದರಾಂಗ ಮಾರುವೇಷದಲ್ಲಿ ಸುರಸುಂದರಿಯನ್ನು ಮೆಚ್ಚಿಸಲು ಹಿಂದೆದೇ ಸುತ್ತುವುದು ಮೊದ್ದು ಸೋದರಿಯ ಕಣ್ಣಿಗೆ ಬಿಳದಿರುವುದೇ? ಅವಳ ಹಿಂದೆ ಇಂತಹ ಸುರಸುಂದರಾಂಗ, ಮನಮೋಹನಾಂಗ ಸುತ್ತುವುದು ನೋಡಿ ಅವಳೊಟ್ಟಿಯಲ್ಲಿ ಉರಿಯೋ ಉರಿ. ಸರಿ ಇನ್ನು, ಸುರಸುಂದರಿಯ ಗ್ರಹಚಾರ ಬಿಡಿಸಬೇಕೆಂದು ಅಮ್ಮನ ಗಂಟು ಬೀಳುತ್ತಾಳೆ.
ಅಮ್ಮನೂ ಸುರಸುಂದರನನ್ನು ನೋಡುತ್ತಾಳೆ. ಹೇಗಾದರೂ ಸುರಸುಂದರಿಯನ್ನು ತೊಲಗಿಸಿದರೆ ತನ್ನ ಮುದ್ದಿನ ಮೊದ್ದಿಗೆ ತಕ್ಕ ವರ ಎಂದುಕೊಳ್ಳುತ್ತಾಳೆ. ಕ್ಯಾತೆ ತೆಗೆದು ನಾಳೆಯೇ ಬರುವ ಕುರೂಪಿ ಜೋಗಿಯೊಂದಿಗೆ (ತಿರುಕ) ನಿನ್ನ ಮದುವೆ ಮಾಡಿ ತೊಲಗಿಸುತ್ತೇನೆ ಎಂದು ಶಪತ ಮಾಡುತ್ತಾಳೆ. ಮಾರನೆಯ ದಿನ ಹಾಗೇ ಮಾಡಿ ಕೈತೊಳೆಯುತ್ತಾಳೆ.
ಆದರೆ, ನಮ್ಮ ಸುರಸುಂದರಿ ಮದುವೆಯ ಮರುದಿನವೇ ಅರಮನೆಯಲ್ಲಿ, ರಾಜಕುಮಾರಿಯಾಗಿ! (ಡಯಾನಾ ಬಗ್ಗೆ ಹೇಳುತ್ತಿಲ್ಲ ಮಾರಾಯ್ರೇ) . . . . .
ಮೊದಲೇ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ನಮ್ಮ ಮೊದ್ದಮ್ಮ ಸುಮ್ಮನಿರಬೇಕಲ್ಲ. ತನ್ನನ್ನೂ ಜೋಗಿಯೊಬ್ಬನಿಗೆ ಮದುವೆ ಮಾಡಲು ತಾಯಿಯನ್ನು ಪೀಡಿಸುತ್ತಾಳೆ. ತನಗೂ ರಾಜಕುಮಾರನೇ ಸಿಗಲೆಂಬ ಆಸೆ ಅವಳಿಗೆ (:
ಅದೂ ನಡೆದು ಹೋಗುತ್ತದೆ. ಅವಳು ಜೋಗಿಯ ಹಿಂದೆ! ಕೇಳುತ್ತಾ ಹೋಗುತ್ತಾಳೆ. ಜೋಗಿ ನಿನ್ನರಮನೆಯೆಲ್ಲಿ? ಎಂದು. . .
ಅದೇನೇನೋ ದಾಟಿ ಅಂತೂ ಸಿಗುತ್ತದೆ ತಿರುಪೆಯವನ ಅರಮನೆ!
ಈ.ನಾ.ಕೇಸರ್ಕರ್‍

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲೋ ಜೋಗಪ್ಪ
  • ಕನ್ನಡದಲ್ಲಿ ಹಿನ್ನೆಲೆ ಗಾಯಕರ ಕೊರತೆಯೆ?
  • ಯಾರಿಗಾದರೂ ಗೊತ್ತಿದ್ದರೆ ತಿಳಿಸಿ
  • ಹಾಡು ಬೇಕಾಗಿತ್ತು.
  • ಅಂತರ್ಜಾಲ ಪುಟ ಮಾಡಲು ಲೈಸೆನ್ಸ್ ಬೇಕೇ ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
  • ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
  • ದಿನಕ್ಕೊಂದು ಪದ
  • ಮುರಿ, ಮುಱಿ
  • 'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಎಲ್ಲಿ ಸಿಗಬಹುದು?
  • ಬಾಳ್, ಬಾೞ್
  • ಅಱಬು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
ಇನ್ನಷ್ಟು


ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator