ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ? ಈಗ ವಿಂಡೋಸ್ XPಯಲ್ಲಿ ಬರಹದಲ್ಲಿ ಬರೆದ ಬರಹವನ್ನು ಸಂಪದಕ್ಕೆ ಹಾಕಬೇಕಾದರೆ ಅದನ್ನು ನಾನು ವಿಂಡೋಸ್‌ನಲ್ಲೇ ನುಡಿಯಲ್ಲಿ UTF-8 ಎಂದು ಸೇವ್ ಮಾಡಿ ಅದನ್ನು ಲಿನಕ್ಸ ನಲ್ಲಿ ಓಪನ್ ಆಫೀಸ್‌ನಲ್ಲಿ ಪುನಃ ತೆರೆದು ಸರಿ ಮಾಡಬೇಕಾಗಿದೆ. ಅಥವಾ ವಿಂಡೋಸ್‌ನಲ್ಲೇ ನೋಟ್‌ಪ್ಯಾಡ್ ಮತ್ತು ಬರಹ IME ಉಪಯೋಗಿಸಬೇಕಾಗಿದೆ. ಕೆಲವೊಂದು ಅಕ್ಷರಗಳು UTF-8ರಲ್ಲಿ ಸರಿಯಾಗಿ ಬಂದಿರುವುದಿಲ್ಲ (ಉದಾ: ಅರ್ಕ ಒತ್ತು ಇತ್ಯಾದಿ). ಇಷ್ಟೆಲ್ಲಾ ಕಸರತ್ತಿನ ಬದಲು ಒಂದೇ ಸಲ ಓಪನ್ ಆಫೀಸ್‌ನಲ್ಲಿ ತೆರೆಯಲು ಏನಾದರೂ ಉಪಾಯ ಉಂಟಾ? {ವಿಂಡೋಸ್‌ನಲ್ಲೇ ಯೂನಿಕೋಡ್‌ನಲ್ಲೇ ಬರೆಯುವುದನ್ನು ಬಿಟ್ಟು _ ಅದು ಸದ್ಯಕ್ಕೆ ಕಾರಣಾಂತರಗಳಿಂದ ಸಾಧ್ಯವಿಲ್ಲ!}
ಇದನ್ನು ನಾನು ಚರ್ಚೆಯ ವೇದಿಕೆಯಲ್ಲಿ ಹಾಕಿ ಕೆಲವು ದಿನಗಳಾದರೂ ಎನೂ ಪ್ರತಿಕ್ರಿಯೆ ಇಲ್ಲದ್ದರಿಂದ ಲೇಖನವಾಗಿ ಹಾಕ್ತಾ ಇದ್ದೇನೆ. ಇಲ್ಲಾದರೂ ಯಾರಾದರೂ ಸಹಾಯಕ್ಕೆ ಬರುತ್ತಾರೇನೋ? ನನ್ನ ಸಮಸ್ಯೆ ಚಿಕ್ಕದಾಗಿ ಹೇಳಬೇಕೆಂದರೆ:
ವಿಂಡೋಸ್ XPಯಲ್ಲಿ ಬರಹದಲ್ಲಿ ಬರೆದ ಬರಹವನ್ನು ಲಿನಕ್ಸ್‌ನಲ್ಲಿ ಯೂನಿಕೋಡ್‌ಗೆ ಬದಲಾಯಿಸಬಹುದೇ? ಹೇಗೆ?

- Login or register to post comments
- 180 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
ನನ್ನದು ಈ ಸಮಸ್ಯೆ ಆದರೆ ಉತ್ತರ ಮಾತ್ರ ಎಲ್ಲೂ ದೊರಕಲಿಲ್ಲ ನಾನು ಒಂದು ಸಾರಿ ಸಂಪದದಲ್ಲಿ ಕೇಳಿದ್ದೆನು ಆದರೆ ಯಾರು ಅದಕ್ಕೆ ಉತ್ತರ ನೀಡಲಿಲ್ಲ. ದಯವಿಟ್ಟು ಯಾರದರೂ ಇದಕ್ಕೆ ಸಲಹೆ ನೀಡಿ.
ಮಾ.ಕೃ.ಮಂಜು
ಉ: ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
ಸರಿ, ನಾನು ಒಂದು ಉಪಾಯವನ್ನ ಕಂಡು ಕೊಂಡಿದ್ದೇನೆ.
ಬರಹದ ಫೈಲನ್ನ firefox ನಲ್ಲಿ plugin ಒಂದನ್ನ ಉಪಯೋಗಿಸಿ ಯುನಿಕೋಡ್ಗೆ ಕನ್ವರ್ಟ್ ಮಾಡಬಹುದು.
http://padma.mozdev.org/ ನಲ್ಲಿ ಸಿಗುವ plugin ಅನ್ನ ಈ ಕೊಂಡಿ ಇಂದ ಪಡೆಯಬಹುದು. http://downloads.mozdev.org/padma/padma-0.4.13.xpi
ಇದನ್ನ Firefox ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮ್ಮ ಬರಹದಲ್ಲಿ ಸೇವ್ ಮಾಡಿದ ಫೈಲನ್ನ (.BRH file) File -> Open File ಮೆನು ಉಪಯೋಗಿಸಿ Firefox ನಲ್ಲೇ ತೆರೆಯಿರಿ.
ನಂತರ CTRL+A ಬಳಸಿ ಎಲ್ಲವನ್ನೂ ಸೆಲೆಕ್ಟ್ ಮಾಡಿ ಕೊಳ್ ಬೇಕು. ಆಮೇಲೆ ಸೆಲೆಕ್ಟ್ ಆದ ಕೆಂಟೆಟ್ ಮೇಲೆ "Right" ಕ್ಲಿಕ್ ಮಾಡಿ "Transform ITRANS to Kannada" ಅನ್ನೋ ಮೆನು ಆಪ್ಶನ್ ಸೆಲೆಕ್ಟ್ ಮಾಡಿದರಾಯಿತು. ಆ ಪೇಜಿನಲ್ಲಿ ಕಂಡು ಬರುವ ಲೇಖನ ನಿಮಗೆ ಯುನಿಕೋಡ್ ಕನ್ನಡದಲ್ಲಿ ಕಾಣುತ್ತದೆ. ಕಾಫಿ ಪೇಸ್ಟ್ ಮಾಡಿಕೊಂಡರಾಯಿತು.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
ವಂದನೆಗಳು (-ಸ್ವಲ್ಪ ತಡವಾಗಿ). ನನ್ನ ಈ ಲೇಖನಕ್ಕೆ ಪ್ರತಿಕ್ರಿಯೆ ಬಂದ ಬಗ್ಗೆ ನನಗೆ ಮಿಂಚಂಚೆ ಬರಲಿಲ್ಲವಲ್ಲಾ? ಹಾಗಾಗಿ ಬೇರೇನೋ ನೋಡ್ತಾ ಇದ್ದಾಗ ಈ ಎಳೆ ಮತ್ತೆ ಸಿಕ್ಕಿದೆ. ಅದಕ್ಕೇ Tech ಸಂಪದ ಬಂದರೆ "ಸಣ್ಣ ವಿಷಯಗಳ ಬಗ್ಗೆ ದೊಡ್ಡ ಚರ್ಚೆಗಳ" (ಯಾವ ಪ್ರತಿಕ್ರಿಯೆಯಲ್ಲೋ ಓದಿದ್ದು!) ನಡುವೆ ಇಂತಹ ವಿಷಯಗಳು ಕಳೆದುಹೋಗದಿರಬಹುದು!