ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವಿಜ್ಞಾನ ಸಾಹಿತ್ಯ

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ!

August 4, 2005 - 6:44pm — nilagriva

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! ದಯವಿಟ್ಟು ಇದನ್ನು vijnaana saahitya ಎಂದು ಸರಿಯಾಗುವ ಹಾಗೆ ಬರೆಯಿರಿ. ಅಥವಾ ಬರಹದ ಲಿಪಿಪ್ರಕಾರವನ್ನು ಉಪಯೋಗಿಸಿ vij~JAna sAhitya ಎಂದಾದರೂ ಬರೆದರೆ ಒಳ್ಳೆಯದು.

‹ ಭಗವದ್ ಗೀತೆಯ ಶ್ಲೋಕ! ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ›
  • ವಿಜ್ಞಾನ ಸಾಹಿತ್ಯ
~.~
  • Login or register to post comments
  • 1552 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 4, 2005 - 7:20pm — hpn

ಅರೆರೆ, ಏನಿದು ಅತಿಶಯೋಕ್ತಿ?

hpn's picture

ಅಷ್ಟೊಂದು ಸ್ಟ್ರಿಕ್ಟಾಗಿ 'ಬರಹ' ಲಿಪಿಪ್ರಕಾರವನ್ನುಪಯೋಗಿಸಬೇಕೆಂದೇನೂ ಇಲ್ಲ, ಸ್ವಾಮಿ... ಕನ್ನಡಕ್ಕೆ ಇಂಗ್ಲಿಷ್ ಲಿಪಿ ಬಳಸುವಾಗ ಒಂದಷ್ಟು ಹೆಚ್ಚು ಕಡಿಮೆಯಾದರೆ ನಡೆಯುತ್ತದೆ. ಲಿನಕ್ಸಿನಲ್ಲಿ, ಪಕ್ಕಾ ಐಟ್ರಾನ್ಸಿನಲ್ಲಿ 'ಜ್ಞ' ಬರೆಯಲು ಐಟ್ರಾನ್ಸ್ ಉಪಯೋಗಿಸುವಾಗ 'dny' ಉಪಯೋಗಿಸಬೇಕಾಗುತ್ತದೆ, ಆದ್ದರಿಂದ ಆಂಗ್ಲದಲ್ಲಿ 'vidnyAna' ಎಂದು ಬರೆಯಲೆ? ನೀವು ಹೇಳುವಂತಾದರೆ ಅದೂ ಸರಿ ಹೊಂದಬೇಕಲ್ಲವೆ?

ಐಟ್ರಾನ್ಸ್ ಅಥವಾ ಅದರ ಸ್ವಲ್ಪ ಬದಲಾವಣೆಯಾದ ಬರಹ ಲಿಪಿಪ್ರಕಾರದಲ್ಲಿ ಉಪಯೋಗಿಸಿದ ಮಾತ್ರಕ್ಕೆ ಸರಿಯಾಗಿ ಬಿಡುವುದೆ? ಕನ್ನಡ ತಪ್ಪಾಗಿದ್ದರೆ ತಿಳಿಸಿ ಸರಿಮಾಡೋಣ... ಆದರೆ ಇಂಗ್ಲಿಷ್ ಲಿಪಿಯಲ್ಲಿ ಬರೆದದ್ದು ತಪ್ಪು ಎನ್ನಬೇಡಿ... ಅದಕ್ಕೆ ಹುರುಳಿಲ್ಲ. ಆಂಗ್ಲ ಲಿಪಿಯಲ್ಲಿದ್ದಾಗ ನೀವು ಓದಿಕೊಂಡಂತೆ ಅದು 'ಸರಿ' ಅಥವಾ 'ತಪ್ಪು' ಆಗುವುದು.

ಏನಕ್ಕೂ ಮಾತು ಕಥೆ ವಿಭಾಗವನ್ನು ಯುನಿಕೋಡ್ ಕನ್ನಡದಲ್ಲೇ ಹೆಸರುಗಳನ್ನು ಈಗ ಸೇರಿಸಿರುವೆ. ಅದೇ ಬಹುಶಃ ಅಲ್ಲಿಗೆ ಹೊಂದುವಂತದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 4, 2005 - 11:29pm — pavanaja

ಕನ್ನಡ ಲಿಪಿಯಲ್ಲಿ ಸರಿಯಿದ

pavanaja's picture

ಬಹುಮಟ್ಟಿಗೆ ನಾನೂ ಕೂಡ ನಾಡಿಗ್ ಅವರ ಅಭಿಪ್ರಾಯವನ್ನು ಒಪ್ಪುತ್ತೇನೆ.

ಆದರೂ ಕೆಲವೊಮ್ಮೆ ಅಲ್ಪಪ್ರಾಣ ಮಹಾಪ್ರಾಣಗಳಲ್ಲಿ ತಪ್ಪಾದಾಗ ಬೇಸರವಾಗುತ್ತದೆ. ಉದಾಹರಣೆಗೆ ಮೇಘ ಎಂಬುದನ್ನು Mega ಎಂದು ಬರೆಯುವುದು ತಪ್ಪು. ಅದು Megha ಎಂದಿರಬೇಕು. ಐಟ್ರಾನ್ಸ್ ಅಥವಾ ಬರಹ ಪ್ರಕಾರ ಅದು mEgha ಇರಬೇಕು. ಆದರೆ ಹೆಸರನ್ನು ಈ ರೀತಿ ಪುಸ್ತಕದಲ್ಲಾಗಲೀ ಅಂಗಡಿ ಬೋರ್ಡಿನಲ್ಲಾಗಲೀ ಬರೆದರೆ ಹೇಗಿರುತ್ತದೆ? ಆದುದರಿಂದ ನಾನು ಹೇಳುವುದೇನಂದರೆ ಕನಿಷ್ಠ ಕನ್ನಡ ಲಿಪಿಯಲ್ಲಾದರೂ ಅವುಗಳು ಶುದ್ಧವಾಗಿರಲಿ.

ಉಚ್ಛಾರದ ವಿಷಯ ಹೇಳುವಂತೆಯೇ ಇಲ್ಲ. ಬಹುಪಾಲು ಜನರು ಈಗಲೂ ಗ್ನಾನ ಎಂದೇ ಉಚ್ಛರಿಸುತ್ತಾರೆ. ಅದಕ್ಕಾಗಿಯೇ ಶಿವರಾಮ ಕಾರಂತರು ಸುಮಾರು ನಲವತ್ತು ವರ್ಷಗಳ ಹಿಂದೆಯೇ "ಗ್ನಾನ" ಎಂಬ ಪುಸ್ತಕ ಬರೆದಿದ್ದರು. ಅದು ಈಗ ದೊರಕುತ್ತಿಲ್ಲ. ಆ ಪುಸ್ತಕವನ್ನು ಮತ್ತೊಮ್ಮೆ ಓದಬೇಕೆಂದು ಹುಡುಕಾಡುತ್ತಲೇ ಇದ್ದೇನೆ. ಬಹುಶಃ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪ್ರಕಟಿಸುತ್ತಿರುವ ಶಿವರಾಮ ಕಾರಂತರ ಸಮಗ್ರ ಕೃತಿಗಳಲ್ಲಿ ಅದೂ ಇರಬಹುದೇನೋ? ಇದು ತನಕ ಪ್ರಕಟವಾಗಿರುವ ಪುಸ್ತಗಳಲ್ಲಿ ಅದು ಇಲ್ಲ. ಮುಂದಿನ ಪುಸ್ತಕಗಳಿಗೆ ಕಾಯುತ್ತಿದ್ದೇನೆ.

ಈಗ ಮೂಲ ವಿಷಯಕ್ಕೆ ಪುನಾ ಬರುತ್ತೇನೆ. ಕನ್ನಡದ ಹೆಸರುಗಳನ್ನು ಇಂಗ್ಲೀಶಿನಲ್ಲಿ ಕೆಟ್ಟದಾಗಿ ಬದಲಿಸಿ ಪುನಾ ಅದನ್ನೆ ಕನ್ನಡ ಲಿಪಿಯಲ್ಲಿ ಬರೆಯುವುದನ್ನು ಕಂಡಾಗ ನನಗೆ ಮೈ ಉರಿಯುವಂತಹ ಸಿಟ್ಟು ಬರುತ್ತದೆ. ಉದಾಹರಣೆಗೆ -ಕನ್ನಡದ ಸೀರೆ ಇಂಗ್ಲೀಶಿನಲ್ಲಿ Sari ಆಗಿ ಪುನಾ ಅದುವೇ ಕನ್ನಡ ಲಿಪಿಯಲ್ಲಿ ಸ್ಯಾರಿ ಆಗುವುದು. ಇದು ಬೇಕೇ? ಖಂಡಿತಾ ಬೇಡ. ಏನಂತೀರಾ?

ಸಿಗೋಣ,
ಪವನಜ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 4, 2005 - 11:54pm — hpn

ಬಹುಪಾಲು

hpn's picture

ಬಹುಪಾಲು ಜನರು ಈಗಲೂ ಗ್ನಾನ ಎಂದೇ ಉಚ್ಛರಿಸುತ್ತಾರೆ

ನಾನಂತೂ ಆ ಪೈಕಿ ಅಲ್ಲ. ಜ್ಞಾನವನ್ನು ಗ್ನಾನ ಮಾಡುವವನಾಗಿದ್ದರೆ ವಿಕಿಪೀಡಿಯದಲ್ಲಿ 'ವಿಗ್ನಾನ'ವೆಂಬ ವರ್ಗವೊಂದಿರಬೇಕಿತ್ತು. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 6, 2007 - 4:07pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಒಬ್ಬ ಕನ್ನಡಿಗ; ವಾರಾಣಸಿಯಿಂದ.

ಕನ್ನಡದ ಸೀರೆ ಇದ್ದದ್ದು sari ಆಗಿ ಕೊನೆಗೆ ಸ್ಯಾರೀ ಆಯಿತೆಂದು ನನಗನ್ನಿಸುವುದಿಲ್ಲ.
’ ಸಾರೀ ’ ಅಥವಾ ’ಸಾಡೀ’ ಎಂಬುದು ಉತ್ತರ ಭಾರತದ ಹಿಂದಿ ಮಾತಾಡುವವರ ಶಬ್ದ.
ಅದನ್ನು ಇಂಗ್ಲಿಷಿನಲ್ಲಿ sari ಅಂತಲೋ saree ಅಂತಲೋ ಬರೆಯುತ್ತಾರೆ ಅಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 10:23am — mahesha

ಉ: ಕನ್ನಡ ಲಿಪಿಯಲ್ಲಿ ಸರಿಯಿದ

mahesha's picture

ಕನ್ನಡದ ಸೀರೆ
ತಲುಗು ಚೀರಾ
ತಮಿಳು ಚೀರೈ
ಸಕ್ಕದ ಚೀರಾ

ಸೀರೆ ಯ ಬೇರುಗಳು Smiling

ಸೀರೆ ಅಂದರೆ ಬರಿ ಹೆಂಗಸರು ಉಡುವ ಸೀರೆ ಎಂದು ಇರಲಿಲ್ಲವಂತೆ, ಹಂಡಸು ಉಡುವ ಬಟ್ಟೆಯನ್ನು ಸೀರೆ ಎಂದೇ ಹೇಳುತ್ತಿದ್ದರಂತೆ.!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 10:25am — mahesha

ಉ: ಕನ್ನಡ ಲಿಪಿಯಲ್ಲಿ ಸರಿಯಿದ

mahesha's picture

ಸೀರೆ ಒರೆಯ ಬೇರುಗಳು
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 9:13pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಸಾರೀ (ಸೀರೆ) ಯ ಬಗ್ಗೆ ನಾನೂ ಸ್ವಲ್ಪ ಸಂಶೋಧನೆ ನಡೆಸಿದೆ.

ಸಾರಿ ಗೆ ಮೂರು ಸಂಸ್ಕೃತ ಶಬ್ದಗಳ ಬೇರು ಸಿಕ್ಕಿದವು:
೧. ಚೇಲ
೨. ಚೀರ
೩. ಶಾಟಿ / ಶಾಟಿಕಾ

ಹೆಚ್ಚಾಗಿ ಎಲ್ಲ ಎಂಗ್ಲಿಷ್ ನಿಘಂಟುಗಳು ತೋರಿಸುವುದು ’ಸಾರಿ’ ಎಂಬ ಹಿಂದಿ ಶಬ್ದದ ಮೂಲವನ್ನು ಅಥವಾ”ಶಾಟಿ’ ಎಂಬ ಸಂಸ್ಕೃತದ ಮೂಲವನ್ನು.
ಇದನ್ನು ಹುಡುಕುವಾಗ 'etymology' ಬಗ್ಗೆ ಇರುವ online dictionary ಕೂಡ ಸಿಕ್ಕಿತು.

ಇಲ್ಲಿ ಕೊಂಡಿ ಹೇಗೆ ಕೊಡುವುದು ಅಂತ ನನಗೆ ಗೊತ್ತಿಲ್ಲ. ಯಾರಾದರೂ ಗೊತ್ತಿದ್ದವರು ಹೇಳಿಕೊಟ್ಟರೆ ಕೊಟ್ಟೇನು!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 11:41pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಧನ್ಯವಾದಗಳು.

ತುಂಬ ಒಳ್ಳೆಯ ಶಬ್ದಕೋಶದ ಕೊಂಡಿ ಇದು:

http://www.etymonline.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 11:46pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಈ etymology ಕೋಶದಲ್ಲಿ sari ಎಂದು ಟೈಪ್ ಮಾಡಿ. saree ಎಂದು ಟೈಪ್ ಮಾಡಿದರೆ ಅದು”ಫಲಿತಾಂಶಗಳಿಲ್ಲ’ ಎಂಬ ಸಂದೇಶ ಕೊಡುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 10:48am — mahesha

ಉ: ಕನ್ನಡ ಲಿಪಿಯಲ್ಲಿ ಸರಿಯಿದ

mahesha's picture

ಸಕ್ಕದದ ಚೀರೆಯ ಕತೆ ಏನಾದರೂ ಇರಲಿ...

ಆದರೆ ಕನ್ನಡದ ಸೀರೆ ಕನ್ನಡದ್ದೇ... ಇದು ಸಕ್ಕದದಿಂದ ಬಂದಿಲ್ಲ, ಅಂತ ಹೇಳಬವುದು!!

http://dsal.uchicago.edu/cgi-bin/philologic/getobject.pl?c.1:1:41.burrow

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 6:17pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಇರಬಹುದು.
ನಾನು ಎತ್ತಿರುವ ಪ್ರಶ್ನೆ ಅದಲ್ಲ.
ಇಂಗ್ಲಿಷಿಗೆ ಹೋದ ’ಸಾರಿ” ಕನ್ನಡದ್ದಲ್ಲ ಎಂದಷ್ಟೇ ನಾನು ಹೇಳಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 6:42pm — mahesha

ಉ: ಕನ್ನಡ ಲಿಪಿಯಲ್ಲಿ ಸರಿಯಿದ

mahesha's picture

ಕನ್ನಡ ಸೀರೆ ಇರಲಿ...

ಈಗ ಇಂಗ್ಲೀಸಿನ sareeಯ ಬಗ್ಗೆ, ಇಲ್ಲೊಂದು ಗೊಂದಲ...

ಇಂಗ್ಲೀಸಿಗೆ ಸಕ್ಕದದಿಂದ ಹೋಯಿತು ಅಂತ ನಿಮ್ಮ ಮಾತು...

ಆದರೆ ಗ್ರೀಕ್, ಲ್ಯಾಟಿನ್ ಇಲ್ವೇ ರೋಮನ್ ನುಡಿಯಿಂದ ಅದು ಇಂಗ್ಲೀಸಿಗೂ ಮತ್ತು ಸಕ್ಕದಕ್ಕೂ ಬಂದಿರಬಹುದು.
ಹೀಗೆ ಆಗೇ ಇಲ್ಲ ಅಂತ ಏನು ನಿಕ್ಕುವ? ಅದು ಇತ್ತಲಿಂದಲೇ ಅತ್ತ ಹೋಯಿತು ಅಂತ ಹೇಗೆ ನಿಕ್ಕುವ?

ಸಕ್ಕದದಲ್ಲಿ ಬೇಕಾನಿತ್ತು ಗ್ರೀಕು, ಲ್ಯಾಟಿನ್, ಪಾರಸೀ, ರೋಮನ್ ಮುಂತಾದ ನುಡಿಗಳ ಒರೆಗಳಿವೆ.

ಗ್ರೀಕು, ಲ್ಯಾಟಿನ್ನು, ಪಾರಸಿ, ರೋಮನ್ ಇವು ಸಕ್ಕದಿಂದ ಹುಟ್ಟಿಲ್ಲ, ಇವೆಲ್ಲ ಒಂದೇ ಮನೆತನ(family)ದ ನುಡಿಗಳು!!
================================================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 6:51pm — mahesha

ಉ: ಕನ್ನಡ ಲಿಪಿಯಲ್ಲಿ ಸರಿಯಿದ

mahesha's picture

http://www.etymonline.com/index.php?search=sari&searchmode=none
ಇದು ಹೇಗಿ ಹೇಳುವುದು

"long, wrapping garment worn by Hindu women," 1785, from Hindi sari, from Prakrit sadi, from Skt. sati "garment, petticoat."

ಇದು ಸರಿಯಾಗಿ ಸಕ್ಕದದ್ದು ಎಂದು ತೋರುವುದು.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 8, 2007 - 10:03pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಅಬ್ಬ! ಕೊನೆಗೂ ನಾನು ಕೊಟ್ಟ ಕೊಂಡಿಯನ್ನೇ ಉದ್ಧರಿಸಿ ನನ್ನ ಮಾತು ನಿಜ ಇರಬಹುದು ಎಂದಿದ್ದೀರಲ್ಲ... ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 9:14pm — kishorpatwardhan

ಉ: ಕನ್ನಡ ಲಿಪಿಯಲ್ಲಿ ಸರಿಯಿದ

kishorpatwardhan's picture

ಒರೆ ಎಂದರೇನು? ತಿಳಿಸುವಿರಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 9:58pm — ASHOKKUMAR

ಉ: ಕನ್ನಡ ಲಿಪಿಯಲ್ಲಿ ಸರಿಯಿದ

ASHOKKUMAR's picture

link(ಕೊಂಡಿ)ಯನ್ನು ಇಲ್ಲಿ ಪೇಸ್ಟ್ ಮಾಡಿದರೆ ಸಾಕು.ಉದಾ;
http://sampada.net
ಒರೆ ಅಂದರೆ ಶಬ್ದ,ಪದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 7, 2007 - 10:50pm — hamsanandi

ಉ: ಕನ್ನಡ ಲಿಪಿಯಲ್ಲಿ ಸರಿಯಿದ

hamsanandi's picture

Quote:
ಸೀರೆ ಅಂದರೆ ಬರಿ ಹೆಂಗಸರು ಉಡುವ ಸೀರೆ ಎಂದು ಇರಲಿಲ್ಲವಂತೆ, ಹಂಡಸು ಉಡುವ ಬಟ್ಟೆಯನ್ನು ಸೀರೆ ಎಂದೇ ಹೇಳುತ್ತಿದ್ದರಂತೆ.!

ಹೌದು, ಈ ಪ್ರಯೋಗ ಇದೆ. ಹೊಲಿಗೆ ಹಾಕದ ಬಟ್ಟೆ ಎಂಬ ಮೂಲಾರ್ಥ. ಹಾಗಾಗಿ ಪಂಪ ರನ್ನರಲ್ಲಿ ಭೀಮಾರ್ಜುನರೂ ಸೀರೆ ಉಟ್ಟವರೇ!

ನನಗೆ ಗೊತ್ತಿರುವ ಮಟ್ಟಿಗೆ ಈಗ ತಮಿಳಿನಲ್ಲಿ ಆಡುಮಾತಿನಲ್ಲಿ ಚೀರೈ ಎನ್ನುವ ಪದದ ಉಪಯೋಗ ಸೀರೆ ಎಂಬರ್ಥದಲ್ಲಿ ಇಲ್ಲ - ಸಾಧಾರಣವಾಗಿ ಪೊಡವೆ ಎಂಬ ಪದವನ್ನು ಉಪಯೋಗಿಸಲಾಗುತ್ತೆ.

ಈ ಚೇಲಕ ಅನ್ನುವ ಪದ ನಮ್ಮಲ್ಲೂ, ತಮಿಳಿನಲ್ಲೂ ಸಂಸ್ಕೃತದಿಂದಲೆ ಬಂದು ಉಪಯೋಗವಾಗುತ್ತಿದೆ. ತಾಯಿಯಂತೆ ಮಗಳು, ನೂಲಿನಂತೆ ಶಾಲೆ ಎಂಬ ಗಾದೆಯನ್ನು ನೆನೆಸಿಕೊಳ್ಳಿ. ( ನೂಲಿನಂತೆ ಸೀರೆ ಎಂದೂ ಹೇಳುತ್ತೇವೆ). ಮೊನ್ನೆ ಒಂದು ರೇಡಿಯೋ ಶೋನಲ್ಲಿ ತಮಿಳು ಗಾದೆಗಳ ಮೇಲೆ ಕಾರ್ಯಕ್ರಮಕೇಳುತ್ತಿದ್ದೆ. ಆಗ ಅವರಲ್ಲೂ ಇದೇ ಗಾದೆ ಇದೆ ಎಂದು ತಿಳಿಯಿತು. (ಅಮ್ಮಾ ಪೋಲೆ ಪೊಣ್ಣು. ನೂಲ್ ಪೋಲೆ ಸೇಲೈ).

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2005 - 11:37am — nilagriva

ಅದೇ ವಿಷಯ

nilagriva's picture

ಹುರುಳಿಲ್ಲವೆಂಬುದು ನನ್ನ ಪ್ರಕಾರ ಸರಿಯಲ್ಲ. ಈಗ ವಿಜ್ಞಾನ ಶಬ್ದವನ್ನು uidyaana ಎಂದು ಬರೆಯಲು ಆಗುತ್ತದೆಯೇ ? ಆದಷ್ಟು ಸರಿಯಾದ ಉಚ್ಚಾರಣೆ ಮಾಡಿಸುವುದು ಬರಹದ ಉದ್ದೇಶ. (ಇಂಗ್ಲೀಷಿನಲ್ಲಿ ಅದು ಸ್ವಲ್ಪ ಕಷ್ಟವೇ, ಒಪ್ಪುತ್ತೇನೆ) ಇಂಗ್ಲೀಷಿನಲ್ಲಾದರೂ ಸರಿಯಾದ ಉಚ್ಚಾರಣೆ ಬರುವ ರೀತಿಯೇ ಬರೆಯಬೇಕು. vignAna ಎಂದು ಬರೆದರೆ ಓದುವವರು ವಿಗ್ನಾನ ಎಂದೇ ಓದುತ್ತಾರೆ. ಇರುವ ಉಚ್ಚಾರಣೆ ಬಿಟ್ಟು ಬಾಯಿ ತಿರುಗದವರು ಹಾಗೆ ಹೇಳುತ್ತಾರೆ ಎಂದು ಪದದ ಬದಲಾವಣೆಯನ್ನು ಆದಷ್ಟು ಮಾಡಬಾರದು. ಇಲ್ಲಿ ನಾನು ಒತ್ತುವ ಪದ ಆದಷ್ಟು. ಎಲ್ಲ ಮಾಡಲು ಸಾಧ್ಯವಿಲ್ಲ. "ಎಷ್ಟಾದರಷ್ಟು ಸರಿ ಮಂಕುತಿಮ್ಮ" ಎಂದು ಡಿ.ವಿ.ಜಿ. ಹೇಳಿಲ್ಲವೆ ? ಹಾಗೆ ನಾವು ಕೂಡ ಮಾಡಬೇಕು.
ಇಲ್ಲಿ ನೀವು ಮಾಡಿದ್ದು ಚೆನ್ನಾಗಿದೆ. ಈಗ ವಿಜ್ಞಾನ ಸಾಹಿತ್ಯ ಎಂದು ಯೂನಿಕೋಡಿನಲ್ಲೇ ಬರೆದಿದ್ದೀರಿ. ಸಮಸ್ಯೆ ಪರಿಹಾರವಾಗಲಿಲ್ಲವೇ ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2005 - 12:22pm — hpn

ಮತ್ತದೇ ವಿಷಯವೇ?

hpn's picture

ಮೊದಲಿಗೆ - "uidyaana" ಅಲ್ಲ, "vidnyana" - ಪಕ್ಕಾ ಐಟ್ರಾನ್ಸ್ ನಲ್ಲಿ ಹೀಗೆಯೇ ಬರೆಯೋದು. ನಾನಿದನ್ನು ನಿಮಗೆ ತಿಳಿಸಿದ್ದು "ಹಾಗೆ ಉಪಯೋಗಿಸಿ" ಎಂಬ ಉಪದೇಶವಲ್ಲ Smiling ಇನ್ನು ಮುಂದೆ "ಹೀಗೇ ಉಪಯೋಗಿಸೋಣ" ಎಂದೂ ಅಲ್ಲ. ಬದಲಿಗೆ ನೀವು ತಿಳಿಸಿದಂತೆ (ಬರಹದಲ್ಲಿ ಬಳಸುವ) "vij~JAna" ಬಳಕೆ ಸರಿಯಾದರೆ, (ಐಟ್ರಾನ್ಸ್ ನಲ್ಲಿ ಬಳಸುವ) "vidnyana" ಯಾಕೆ ಸರಿಯಾಗಬಾರದು? (ಎರಡೂ ಸರಿಯಲ್ಲ!) ನಾನು ಈಗಾಗಲೇ ಹೇಳಿದಂತೆ "ಆಂಗ್ಲ ಲಿಪಿಯಲ್ಲಿದ್ದಾಗ ನೀವು *ಓದಿಕೊಂಡಂತೆ* ಅದು 'ಸರಿ' ಅಥವಾ 'ತಪ್ಪು' ಆಗುವುದು." ಸ್ವಲ್ಪ ಹೆಚ್ಚು ಕಡಿಮೆ *ನಡೆಯುತ್ತದೆ*. ಇದರ ಬಗ್ಗೆ ತಲೆಕೆಡಿಸಿಕೊಂಡು ಶಿಸ್ತು ಕ್ರಮವೊಂದರ ಉಲ್ಲಂಘನೆಯಾಯಿತೆಂಬಂತೆ ಹೌಹಾರಿದರೆ ನಾವುಗಳು ಮೂರ್ಖರೆನಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2005 - 4:21pm — Vasanth Kumar M

vijnaana, vij~JAna, vignyana...???

Vasanth Kumar M's picture

Yenidu avaantara?  naavellaroo achha kannadigaraagiddiddare mathu kannadavanne haasu hokkagi balasiddiddare, eee controversy iruthiralilla.  Aadare, naavugalu maathanaaduvudu "kanglish" athava "engannada". 

Kannadigaraaada naavellaroo modalu ondugoodi baalodanna mathu namma nammalle kithaaduvudanna bittu sahrudaryaraagi, namma kannadada anna thammandiru mathu akka thangiyarodagoodi, yene thappu maadidaroo, kshamisi sahabaalve maaduvudannu kaliyona. 

"vijnaana" da bagge ishtondu ...? thappallave? saaku maadi ee vaadavannu.  Sampadavannu mundhe kondu hogi.

vasanth kumar m. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಧರೆಗುರುಳಿದ ವಿಜ್ಞಾನ ತಾರೆ!
  • ಎಚ್ಚರ -ಝೆನ್ ಕಥೆ
  • ಅಲ್‌ಬರ್ಟ್ ಐನ್‌ಸ್ಟೀನ್
  • ಪ್ರವಚನ: ವಿಜ್ಞಾನ ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆ
  • ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ (ಕನ್ನಡಕ್ಕೆ: ಪ್ರೊ. ಓ ಎಲ್ ಎನ್ ಸ್ವಾಮಿ)
Syndicate content

ಲೇಖಕರು

nilagriva's picture

ಪರಿಚಯ

ನಾನೊಬ್ಬ ಸಾಮಾನ್ಯ ಮನುಷ್ಯ. ಕನ್ನಡ, ಭಾರತ, ಸಂಸ್ಕೃತ ಮತ್ತು ನಮ್ಮ ಸಂಸ್ಕೃತಿಯೆಂದರೆ ನನಗೆ ಬಹಳ ಇಷ್ಟ. ಬೆಂಗಳೂರುವಾಸಿ. ಸಾಹಿತ್ಯಾಸಕ್ತ. ಒಮ್ಮೊಮ್ಮೆ ಏನೋ ಬರೆಯುವುದುಂಟು. ಪರಿಚಯಕ್ಕೆ ಇಷ್ಟು ಸಾಕು, ಅಲ್ಲವೇ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
  • ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
  • ಯಳ್ಳೆಶಪುರ
  • ಯನಿಕೋಡ್ ಸಂಶಯ
  • ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
  • ಕುಡಿಯೋ ನೀರು ಮತ್ತು ಕುಡಿಯಲು/ಕುಡಿಯಕ್ಕೆ ನೀರು
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
  • makrumanju
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 12, 2008 - 10:57am
  • makrumanju
    ಉ: ಮರಳಿ ಬರಲಿ ಬಾಲ್ಯ
    October 12, 2008 - 10:42am
  • ಪ್ರವೀಣ್
    ಉ: ಕನ್ನಡದ ಯುವ ಗಾನ ಕೋಗಿಲೆ, ಭಾರತದ ಭರವಸೆಯ ಗಾಯಕಿ 'ರಿತೀಶಾ'
    October 12, 2008 - 9:54am
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator