No free left turn - ನಾನು ಇಂಗ್ಲೀಷ್ ಓದಲ್ಲ
ನಾನು ರಸ್ತೆಯಲ್ಲಿ ಓಡಾಡುವಾಗ ಬಹಳ ಕಡೆಗಳಲ್ಲಿ ನೋಡುತ್ತೇನೆ. ಟ್ರಾಫಿಕ್ ಸೂಚನೆಗಳನ್ನು ಬರೀ ಇಂಗ್ಲೀಷಿನಲ್ಲಿ ಹಾಕಿರುತ್ತಾರೆ.
ನಾನು ಹೋಗುವ ದಾರಿಯಲ್ಲಿ ಒಂದು ಕಡೆ no free left turn ಎಂದು ಬರೆದಿದ್ದಾರೆ. ಅಲ್ಲಿ ಯಾವುದೇ ಬೇರೆ ಸಿಗ್ನಲ್ ದೀಪವಾಗಲೀ ಅಥವಾ ಚಿನ್ಹೆ ಆಗಲೀ ಇಲ್ಲ.
ಈಗ ನನ್ನ ಸಂಶಯ ಏನೆಂದರೆ , ನಾನು ಉದ್ದೇಶಪೂರ್ವಕವಾಗಿಯೇ ಆ ನಿಯಮವನ್ನು ಮುರಿದು ಪೋಲೀಸರ ಕೈಗೆ ಸಿಕ್ಕುತ್ತೇನೆ. ನಂತರ ಅವರು ದಂಡ ಕೇಳಿದರೆ ಅಲ್ಲಿ ಬರೆದದ್ದು ನಾನು ಓದಲಿಲ್ಲ , ಆದ್ದರಿಂದ ದಂಡವನ್ನೂ ಕಟ್ಟುವುದಿಲ್ಲ ಎನ್ನುತ್ತೇನೆ. ಕೇಸ್ ಕೋರ್ಟಿಗೆ ಹೋಗುತ್ತದೆ. ನಂತರ ವಿಚಾರಣೆಯ ಸಂದರ್ಭದಲ್ಲಿ ಇದೇ ಕಾರಣವನ್ನು ಕೊಡುತ್ತೇನೆ. ಅಂದರೆ ನನಗೆ ಇಂಗ್ಲೀಷ್ ಓದಲು ಬರೆಯಲು ಬರುತ್ತದೆ ಎಂದು ಕೋರ್ಟಿಗೆ ಗೊತ್ತಾಗುತ್ತದೆ. ಆದರೆ ನನಗೆ ಇಂಗ್ಲೀಷ್ ಓದಲು ಇಷ್ಟವಿಲ್ಲ. ಕರ್ನಾಟಕದ ಭಾಷೆ ಕನ್ನಡವಾದ್ದರಿಂದ ಟ್ರಾಫಿಕ್ ಸೂಚನೆಗಳನ್ನು ಕನ್ನಡದಲ್ಲಿ ಬರೆದಿದ್ದರೆ ಮಾತ್ರ ಓದುತ್ತೇನೆ ಎಂಬ ವಾದವು ಸರಿಯೆ? ಇದನ್ನೇ ಆಧಾರವಾಗಿಟ್ಟುಕೊಂಡು ಖುಲಾಸೆಯಾಗಲು ಸಾಧ್ಯವಿದೆಯೆ? ಒಂದು ವೇಳೆ ಯಾರೋ ನಿಜವಾಗಲೂ ಇಂಗ್ಲೀಷ್ ಬರದಿದ್ದವರು ಗೊತ್ತಾಗದೇ/ಇಂಗ್ಲೀಷ್ ಸೂಚನೆಗಳನ್ನು ಓದಲಾಗದೇ ಟ್ರಾಫಿಕ್ ನಿಯಮ ಮುರಿದರೂ ಕೂಡ ಅವರದೂ ತಪ್ಪೆ? ಎಲ್ಲ ಸೂಚನೆಗಳೂ ಕನ್ನಡದಲ್ಲಿರುವು ಅಗತ್ಯವಲ್ಲವೆ?
ಬಲ್ಲವರು ಕಾನೂನು ಸಲಹೆ ಕೊಡಿ.

- Login or register to post comments
- 825 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

ಉ: No free left turn - ನಾನು ಇಂಗ್ಲೀಷ್ ಓದಲ್ಲ
ನಿಯಮದ ಅರಿವಿರಲಿಲ್ಲ ಎನ್ನುವುದನ್ನು ನ್ಯಾಯಾಲಯ ಪುರಸ್ಕರಿಸದು ಎಂದು ನನ್ನನಿಸಿಕೆ.
*ಅಶೋಕ್
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅಶೋಕರೆ, ಇಲ್ಲಿ ನಿಯಮಕ್ಕಿಂತ ಭಾಷೆಯ ಪ್ರಶ್ನೆ ಮುಖ್ಯಗಿರುವುದಲ್ಲವೆ?.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಪ್ರಾಯಶ: ಇಲ್ಲ. ಯಾವುದೇ ಸಾರಿಗೆ ಸಂಕೇತದ ಬೋರ್ಡು ಇರುವಾಗ,ಅದೇನೆಂದು ತಿಳಿದುಕೊಳುವುದು ನಮ್ಮ ಕರ್ತವ್ಯವಾಗುತ್ತದೆಯಲ್ಲಾ?
ಇಷ್ಟಕ್ಕೂ ಭಾಷೆಯ ಬಗ್ಗೆ ಕಾಳಜಿ ಇದ್ದರೆ,ದೂರು ನೀಡಿ ಸರಿ ಪಡಿಸಲು ಪ್ರಯತ್ನಿಸುವುದು ಒಳಿತು.
ನಿಯಮ ಮುರಿಯಲು ಅಂತಹ ಬೋರ್ಡಿನ ನೆವ ನೀಡಿದರೆ ಹೇಗೆ?
ಅಲ್ಲದೆ ಅವರಿಗೆ ಅದರಲ್ಲೇನು ಬರೆದಿದೆ ಎಂದು ಅವರಿಗೆ ಗೊತ್ತಿದೆಯಲ್ಲಾ? ಇಂಗ್ಲಿಷಿನಲ್ಲಿ ಇದೆಯೆಂದು ಅದನ್ನು ಪಾಲಿಸಲೊಲ್ಲೆ ಎಂದರೆ ಯಾವ ಕೋರ್ಟಾದರೂ ಅದನ್ನು ಪರಿಗಣಿಸೀತೇ?
*ಅಶೋಕ್
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನಿಯಮ ಮುರಿಯೋದಕ್ಕೆ ವಿಕಾಸ್ ಇಲ್ಲಿ ನೆಪ ಹುಡುಕ್ತಿಲ್ಲ ಅನ್ನಿಸುತ್ತೆ... ನಿಯಮ ಮುರಿಯುವ ನೆಪವನ್ನ ಪರಿಸ್ಥಿತಿಯನ್ನ ಸರಿಪಡಿಸೋಕೆ ಉಪಯೋಗಿಸಬಹುದಾ ಅನ್ನೋದು ಅವರ ಪ್ರಶ್ನೆ... ಇಂಥ ವಿಷಯಗಳಲ್ಲಿ ಕಾಳಜಿಯಿಂದ ಕೊಟ್ಟ ದೂರುಗಳಿಗೆ ಎಷ್ಟು ಮರ್ಯಾದೆ ಸಿಗುತ್ತೆ ಅನ್ನೋದು ಸರ್ಕಾರಿ ಇಲಾಖೆಗಳ ಪರಿಚಯ ಇರೋವ್ರಿಗೆಲ್ಲಾ ಗೊತ್ತಿರೋ ವಿಷಯವೇ... ಅದಕ್ಕೇ ನಿಯಮ ಮುರಿದು,ಆಗ ಸಹಜವಾಗಿ ಸಿಗುವ ಗಮನವನ್ನ ಪರಿಸ್ಥಿತಿಯನ್ನ ಸರಿಪಡಿಸೋಕೆ ಬಳಸಬಹುದು ಅಂತ ವಿಕಾಸ್ ಬರೆದಿದ್ದು - ಅನ್ನಿಸುತ್ತೆ...
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಶಿಕ್ಷೆ ಅನುಭವಿಸಲು ತಯಾರಿದ್ದು,ಸುದ್ದಿ ಮಾಡುವ ಹುರುಪಿದ್ದರೆ ಅಡ್ಡಿಯಿಲ್ಲ!
*ಅಶೋಕ್
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅಶೋಕ್ ಒಂದು ವಿಚಾರ, ಇಲ್ಲಿ ಸೈನ್ ಬೋರ್ಡ್ ಇದ್ದರೆ, ಅದನ್ನು ತಿಳಿದಿರಬೇಕಾದದ್ದು, ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರ ಕರ್ತವ್ಯ ಆಗಿರುತ್ತದೆ. ಆದರೆ ಇಲ್ಲಿ ವಿಕಾಸ್ ಹೇಳುತ್ತಿರುವದು ಬೇರೆ.
ಅಂದರೆ ಇಲ್ಲಿ, ಸೈನ್ ಬೋರ್ಡ್ ಇಲ್ಲ, ಕನ್ನಡದಲ್ಲಿ ಮಾಹಿತಿ ಇಲ್ಲ, ಬರೀ ಇಂಗ್ಲೀಶ್ ಲಿಪಿಯಲ್ಲಿ "No Free Left Turn" ಅಶ್ಟೇ ಇರೋದು. ಇಂತಹ ಬೋರ್ಡುಗಳನ್ನು ನೋಡಬೇಕಿದ್ರೆ ಕೋರಮಂಗಳಕ್ಕೆ ಬನ್ನಿ.
ಅಶ್ಟೋಂದು ಇದ್ದರೆ, ಕನ್ನಡ ಲಿಪಿ + ಚಿನ್ಹೆ ಬಳಸಬಹುದಲ್ವಾ !!!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಶಿಕ್ಶೆಯೂ ಇಲ್ಲ ಕುಕ್ಶೆಯೂ ಇಲ್ಲ...
ಆರಾಮಾಗಿ ವಯ್ಟುಮಾಡಿ ಲೆಪ್ಟ್ ತರ್‍ನ್ ತಗೊಂಡು ಮನೆಗೆ ವೋಗ್ತಾರೆ.!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹೌದು, ಶ್ರೀಮಾತಾರವರು ಹೇಳಿದ್ದು exactly right.
ಇದೇ ನನ್ನ ಉದ್ದೇಶ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅಶೋಕರೆ, ಇದು ಗಂಭೀರ ವಿಷಯವೆನಿಸುವುದಿಲ್ಲವೆ ನಿಮಗೆ? ಒಂದೊಮ್ಮೆ ನಿಜವಾಗಿಯೂ ಇಂಗ್ಲೀಷ್ ಬರದವರು ಇದ್ದರೆ ಎನು ಮಾಡುವುದು? ಅವರಿಗೆ ಇಲ್ಲಿ ಗಾಡಿ ಓಡಿಸುವ ಹಕ್ಕು ಇಲ್ಲವೋ? ಈ ರಾಜ್ಯದಲ್ಲಿ ಬದುಕಲು ಇಂಗ್ಲೀಷ ಕಲಿಯುವುದು, ಅದನ್ನೆ ಎಲ್ಲ ಕಡೆ ಬಳಸುವುದು ಅನಿವಾರ್ಯವಾ? ಹಾಗಿದ್ದರೆ ನಮಗೆ ಕನ್ನಡ ಏಕೆ ಬೇಕು?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅಶೋಕರೆ, ಇದು ಗಂಭೀರ ವಿಷಯವೆನಿಸುವುದಿಲ್ಲವೆ ನಿಮಗೆ? ಒಂದೊಮ್ಮೆ ನಿಜವಾಗಿಯೂ ಇಂಗ್ಲೀಷ್ ಬರದವರು ಇದ್ದರೆ ಎನು ಮಾಡುವುದು? ಅವರಿಗೆ ಇಲ್ಲಿ ಗಾಡಿ ಓಡಿಸುವ ಹಕ್ಕು ಇಲ್ಲವೋ? ಈ ರಾಜ್ಯದಲ್ಲಿ ಬದುಕಲು ಇಂಗ್ಲೀಷ ಕಲಿಯುವುದು, ಅದನ್ನೆ ಎಲ್ಲ ಕಡೆ ಬಳಸುವುದು ಅನಿವಾರ್ಯವಾ? ಹಾಗಿದ್ದರೆ ನಮಗೆ ಕನ್ನಡ ಏಕೆ ಬೇಕು?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ವಿಕಾಸ್ ನಿಮಗೆ ಡ್ರೈವಿಂಗ್ ಲೈಸೆನ್ಸ್ ಹೇಗೆ ಸಿಕ್ಕಿತು?
ಮೊದಲು ನಿಮ್ಮ ಡ್ರೈವಿಂಗ್ ಪರೀಕ್ಷೆ ಮಾಡಿ, ನಿಮಗೆ ರಸ್ತೆಯ ಎಲ್ಲಾ ಸುರಕ್ಷತಾ ತಿಳಿದುಕೊಂಡು ಪಾಸಾದರೆ ತಾನೆ ಡ್ರೈವಿಂಗ್ ಲೈಸೆನ್ಸು ಕೊಡುವುದು. ಈ ಹಂತದಲ್ಲೇ ನೀವು ನೋ ಫ್ರೀ ಲೆಫ್ಟ್ ಟರ್ನ್ ಎಂದು ಬರೆದದ್ದೋ, ಇಲ್ಲವೇ ನೋ ಪಾರ್ಕಿಂಗ್ ಎಂದು ಬರೆದದ್ದನ್ನೋ ನನಗೆ ಕನ್ನಡದಲ್ಲಿ ಹೇಳುವ ಬೋರ್ಡು ಬೇಕು ಎನ್ನಬೇಕು. ಲೈಸೆನ್ಸ್ ಸಿಕ್ಕಿದೆ ಎಂದ ಮೇಲೆ ನೀವು ‘ಈಗಿರುವ’ ಬೋರ್ಡುಗಳನ್ನು ಓದುವ ಅರ್ಹತೆ ಇದೆ ಅಂತ. ಇನ್ನು ಗಮನ ಸೆಳೆದು ಬದಲಾವಣೆ ತರಬೇಕು ಅನ್ನಿಸಿದರೆ ಅಶೋಕರು ಹೇಳಿದ ಹಾಗೆ ಶಿಕ್ಷೆಗೆ ತಯಾರಾಗಿ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನೀವಿನ್ನೂ ಡ್ರೈವಿಂಗ್ ಲೈಸನ್ಸ್ ತಗೊಂಡಿಲ್ಲ ಅನಿಸುತ್ತದೆ. ಲೈಸೆನ್ಸ್ ಕೊಡುವಾಗ ನಿನಗೆ ಇಂಗ್ಲೀಷು ಬರುತ್ತದೋ ಇಲ್ಲವೋ ನೋಡಿ ಕೊಡುವುದಿಲ್ಲ. ಗಾಡಿ ಸರಿಯಾಗಿ ಓಡಿಸಲು, ಟ್ರಾಫಿಕ್ ಚಿನ್ಹೆಗಳನ್ನು ಗುರುತಿಸಲು ಬರಬೇಕು. ನಾನು LLR ತಗೊಳ್ಳುವಾಗ ಕನ್ನಡ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಕನ್ನಡದಲ್ಲೇ ಉತ್ತರ ಬರೆದದ್ದು.
ಇಂಗ್ಲೀಷು ಬರದವರು ಏನು ಮಾಡಬೇಕು ಅದನ್ನು ಹೇಳಿ. ಈಗ ನಮ್ಮ ತಾತಂಗೆ ಇಂಗ್ಲೀಷ ಬರುವುದಿಲ್ಲವಪ್ಪ. ಅವರಿಗೆ ಗಾಡಿ ಓಡಿಸುವ ಹಕ್ಕು ಇಲ್ಲವಾ?
ಅಷ್ಟಕ್ಕೂ ಎಲ್ಲಾ ಸೂಚನೆಗಳು ಕನ್ನಡದಲ್ಲಿರಬೇಕು ಎಂಬುದರಲ್ಲಿ ನಿಮಗೆ ತಪ್ಪೇನಾದರೂ ಕಾಣಿಸಿತೆ?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಉದಾಹರಣೆಗೆ - ನಿಲುಗಡೆ ಇಲ್ಲ ಎನ್ನುವುದಕ್ಕೆ P ಅಕ್ಷರದ ಮೇಲೆ ಅಡ್ಡ ಗೆರೆ ಎಳೆದಿರುವ ಚಿನ್ಹೆ ಇದೆ. ಎಡತಿರುವು ಇಲ್ಲ ಎನ್ನುವುದಕ್ಕೆ ಎಡಕ್ಕೆ ತಿರುಗುವ ಬಾಣದ ಗುರುತಿನ ಮೇಲೆ ಅಡ್ಡ ಗೆರೆ ಎಳೆದಿರುವ ಚಿನ್ಹೆ ಇರುತ್ತದೆ.
ನನಗಂತೂ ಕರ್ನಾಟಕದಲ್ಲಿ ಎಲ್ಲಾ ಸೇವೆಗಳೂ ಕನ್ನಡದಲ್ಲಿ ಬೇಕು ಎಂದು ಆಸೆ.
ಅಷ್ಟಕ್ಕೂ ಈ ಬದಲಾವಣೆ ನಿಮಗೆ ಬೇಕು ಅನಿಸುತ್ತಿಲ್ಲವೆ? ಹೌದು ಎಂದಾದರೆ ಸಹಕರಿಸಿ. ಇಲ್ಲ ಎಂದಾದರೆ........... :-|
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನನ್ನ ಬಳಿಯೂ ಡ್ರೈವಿಂಗ್ ಲೈಸೆನ್ಸ್ ಇದೆ.
ಆದರೆ ಟ್ರಾಫಿಕ್ ಚಿಹ್ನೆಗಳಲ್ಲೇ ಇರುವ ಇಂಗ್ಲೀಷನ್ನು ಗುರುತಿಸಬೇಕು ಎಂದುಕೊಂಡಿದ್ದೆ.
ಕನ್ನಡ ಜಾರಿಗೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ನೀವು ಕೇಳಿದಂತೆ, ನಿಯಮ ಮುರಿದು ಆ ಕಾರಣವನ್ನು ಕೊಡಲು ಆಗುವುದಿಲ್ಲ ಅನ್ನಿಸುತ್ತೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನೋಡಿ ಎಷ್ಟೆಲ್ಲಾ ತಪ್ಪು ತಿಳುವಳಿಕೆ ಕನ್ನಡಿಗರಿಗೆ! ಟ್ರಾಫಿಕ್ ಚಿಹ್ನೆಗಳು, ಬೇರೆ ಟ್ರಾಫಿಕ್ ಸೂಚನೆಗಳು ಬೇರೆ.
ನಿಮ್ಮ ಅಭ್ಯಂತರ ಇಲ್ಲ ಎಂದು ಖುಷಿಯಾಯಿತು. ಆದರೆ ಕನ್ನಡಿಗನಾಗಿ ನಿಮಗೆ ಕರ್ನಾಟಕದಲ್ಲಿ ಈ ಬದಲಾವಣೆ ಬೇಕು ಎನ್ನುವ ಆಸೆ ಇಲ್ಲವಲ್ಲ ಎಂದು ಬೇಸರವಾಯಿತು.
ಇನ್ನೂ ಒಂದೆರಡು ಪ್ರಶ್ನೆ ಕೇಳಿದ್ದೆ ಮೇಲೆ.. ಅದರ ಬಗ್ಗೆ ಇದುವರೆಗೂ ನೀವು ಯೋಚಿಸಿಯೇ ಇಲ್ಲವೆಂದರೆ ಆಶ್ಚರ್ಯ !
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಯೋಚಿಸಿದೆ. ನಿಮ್ಮ ಆಶಯಕ್ಕೆ ಚಿಯರ್ಸ್
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: No free left turn - ನಾನು ಇಂಗ್ಲೀಷ್ ಓದಲ್ಲ
- ಶ್ರೀನಾಥ್. ಎಸ್
ಬೆಂಗಳೂರು
98454 89452
ಪ್ರೀತಿ ಇರಬೇಕು
ನಾಡ ಮೇಲೆ
ಗೌರವ ಇರಬೇಕು
ಪಕ್ಕದ ನಾಡ ಬಗ್ಗೆ
ಅತಿಯಾದರೆ ಆ ಪ್ರೀತಿ
ಆದೀತು ಫಜೀತಿ...
ನಮ್ಮ ಕರುನಾಡ ಜನತೆಯಲ್ಲೂ ಅಂದರೆ ನನ್ನನ್ನೂ ಸೇರಿ ಈ ಅತಿಥಿದೇವೂಭವಗುಣ ಅತಿಯಾದದ್ದೇ ಇದಕ್ಕೆಲ್ಲಾ ಕಾರಣ.
ಗೌರವವಿರಲಿ, ಪ್ರೀತಿಯಿರಲಿ, ಸ್ನೇಹವಿರಲಿ ಆದರೆ ತಲೆ ಬಾಗದಿರಲಿ...
ನಮ್ಮ ಮನೆಯಲ್ಲಿ ನಮ್ಮ ಭಾಷೆ, ನಮ್ಮ ನಾಡಲ್ಲಿ ನಮ್ಮ ನಾಡಿನ ಭಾಷೆ, ನಮ್ಮ ದೇಶದಲ್ಲಿ ನಾನಾ ಭಾಷೆ ಆದರೂ ನಾವೆಲ್ಲಾ ಒಂದೇ...
ಇದರರ್ಥ ನಮ್ಮ ನಾಡಲ್ಲಿ ನಮ್ಮ ನಾಡಿನ ಭಾಷೆ ಕಡ್ಡಾಯ...ಬಳಕೆ...ಆಗಬೇಕು
ಪಳೆಯುಳಿಕೆ ಆಗಬಾರದು...
ಬರೀ ಜನಸಾಮಾನ್ಯರಲ್ಲದೇ... ನ್ಯಾಯಾಂಗ, ಶಾಸಕಾಂಗ, ಕಾರ್ಯಾ೦ಗ, ಪತ್ರಿಕಾರಂಗಗಳು ಇದರತ್ತ ಜರೂರು ಗಮನಹರಿಸುವುದು.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹು..
ಸಂಸ್ಕೃತದಿಂದ ಕರ್ನಾಟಕ ಏಕೀಕರಣ ಎಂದವರು ನೀವೇ ಮಾಪ್ರಭು...
ನಮಗೂ ಕನ್ನಡ ಬೇಕೋ ಎಲ್ಲೆಲ್ಲೂ ಕನ್ನಡ ನೆಲದೊಳ್.. ಸಂಸ್ಕ್ರುತವೆಂದೂ ಕನ್ನಡವಲ್ಲ.. ! ಬೇಡವಾಗಿ ಸಂಸ್ಕ್ರುತ ಬೆರೆಸಿದ ಕನ್ನಡವೆಂದೂ ಸರಿಗನ್ನಡವಲ್ಲ.
ಅದಕ್ಕೆ ನಾನು ಕೇಳಿದ್ದು..
"ನೋ ಪ್ರೀ ಲೆಪ್ಸ್ ತರ್‌ನ್" ಅನ್ನೋ ಬೋರ್ಡು ಮತ್ತು "ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು" ಈ ಎರಡು ನಿಮ್ಮಂತೆ ಕನ್ನಡವಾ ಎಂದು?
ಪಾಪಾ ಮುನಿಸಿಕೊಂಡಿರೇನೋ!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಯುನೀಕ್ಸುಪ್ರಿ, ಡ್ರೈವಿಂಗ್ ಲೈಸೆನ್ಸಿಗೆ ಬೇಕಾಗಿರೋದು, ಚಿನ್ಹೆಗಳನ್ನು ಗುರುತಿಸುವ ತಾಕತ್ತು. ನಿಮಗೆ ಗೊತ್ತಿದೆಯೋ ಇಲ್ಲವೋ, ಈಗಾಗಲೇ ವಿಕಾಸ್ ಹೇಳಿರುವ ಹಾಗೆ ಕನ್ನಡದಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪರೀಕ್ಷೆ ತೆಗೆದುಕೊಳ್ಳಬಹುದು. ನನ್ನದೂ ಹಾಗೆ ಇದ್ದದ್ದು.
ಅದಕ್ಕೇ ಹೇಳಿದ್ದು, ಕನ್ನಡನಾಡಿನಲ್ಲಿ, "ಕನ್ನಡ ಲಿಪಿ + ಭಾರತೀಯ ಟ್ರಾಫಿಕ್ ಕಾಯ್ದೆಯ ಮಾನ್ಯತೆ ಪಡೆದಿರುವ ಚಿನ್ಹೆ" ಇರಬೇಕು. ಇಂಗ್ಲೀಷ್ ಇನ್ಫಾಕ್ಟ್ ಬೇಕೇ ಆಗಿಲ್ಲ. ಏಕೆಂದರೆ ಭಾರತದಲ್ಲಿ ಗಾಡಿ ಓಡಿಸುವ ಡ್ರೈವಿಂಗ್ ಲೈಸೆನ್ಸನ್ನು ಒಬ್ಬ ಪಡೆದಿದ್ದಾನೆ ಅಂದ್ರೆ, ಅವನಿಗೆ ಭಾರತದಲ್ಲಿ ಬಳಕೆಯಾಗುವ ಚಿನ್ಹೆಗಳನ್ನು ಗುರುತಿಸುವ ತಾಕತ್ತು ಇದೇ ಅಂತಲೇ ಅರ್ಥ. ಭಾರತಕ್ಕೆ ಬೇರೆ ದೇಶದಿಂದ ವಲಸೆ ಬರುವವನು, ಇಲ್ಲಿಯ ಚಿನ್ಹೆಗಳನ್ನು ಅಭ್ಯಾಸ ಮಾಡಲೇಬೇಕು. ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬರುವವರು, ಚಿನ್ಹೆ ಗುರುತಿಸಬೇಕು ಎಂಬುದು ಕಾಮನ್ ಸೆನ್ಸ್. ಇಂಗ್ಲೀಷಲ್ಲಿದೆಯೋ, ಕನ್ನಡದಲ್ಲಿದೆಯೋ ಅದೆಲ್ಲ ಬೇರೆಯವರಿಗೆ ಸೆಕೆಂಡರಿ. ಆದರೆ ಕನ್ನಾಡಿಗರಾಗಿ ನಮಗೆ ಕನ್ನಡ ಬೇಕು, ಅಷ್ಟೇ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಈ ಸಂಗತಿಯನ್ನ ಸರಕಾರದ ಗಮನಕ್ಕೆ ತನ್ನಿ..
ಇಲ್ಲವೇ ಕರವೆ ತರದೊರಿಗೆ ಹೇಳಿ..
ನಮ್ಮ ಸರಕಾರಕ್ಕೆ ಮನವಿ ಸಲ್ಲಿಸುವ ಸವಲತ್ತು ಇದೆ ಅನ್ನಿಸ್ತದೆ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ವಿಕಾಸ್ ಇದು ಹಗುರವಾಗಿರುವಂತ ತೋರಿದರೂ ತುಂಬಾ ಆಳವಾದಂತಹದ್ದು. ಹೀಗೆ ಮಾಡಬಹುದು. ಈ ವಿಷಯದಲ್ಲಿ ತಾತ್ಸಾರ ಸಲ್ಲ. ಇದು ನನಗೆ ಅನುಭವ ಆಗಿದೆ. ಒಮ್ಮೆ ನಾನು ಪೋಲೀಸರಿಗೆ ಸಿಕ್ಕಿಹಾಕ್ಕೊಂಡಾಗ, "ಕನ್ನಡದಲ್ಲಾಗಲೀ, ಅಥವಾ ಸೈನ್ ಬೋರ್ಡಾಗಲೀ ಇಲ್ಲವಲ್ಲ". ಅಂತ ಹೇಳಿದ್ದಕ್ಕೆ, ನನ್ನನ್ನು ಬಿಟ್ಟುಬಿಟ್ಟಿದ್ರು. "ಓಪನ್ ಮೈಂಡೆಡ್ ಪೀಪಲ್", ಹಾಗೆ, "ರೂಲ್ಸ್ ಅಂದ್ರೆ ರೂಲ್ಸ್" ಅನ್ನೋರು ಇದನ್ನು ತಪ್ಪು ಎನ್ನಬಹುದು. ಆದರೆ ನಮ್ಮ ನಾಡಿನಲ್ಲಿ ನಮಗಾಗಿ ಇರುವ ನಿಯಮಗಳು ನಮ್ಮ ನುಡಿಯಲ್ಲಿ ಇರಲೇಬೇಕು.
ನಾವುಗಳು ಒಂದಷ್ಟು ಜನ ಸಂಪದದವರು, ಕನ್ನಡ ಸಂಘಟನೆಗಳು, ಹಾಗೂ ಪತ್ರಿಕೆಯವರು, "ಕನ್ನಡದಲ್ಲಿ ಇಲ್ಲದಿರುವ ನಿಯಮಗಳನ್ನು ಮುರೀತೀವಿ" ಅಂತ ಮೊದಲೇ ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟು, ಪತ್ರಿಕೆಗಳಲ್ಲಿ ಪ್ರಕಟಣೆಯಿತ್ತು ಒಂದು ದಿನ "ಕನ್ನಡ ನಿಯಮ ದಿನ"ವನ್ನು ಆಚರಿಸಬಹುದು.
ಈಗ ಬೇರೆ ಬೇರೆ ಗುಂಪುಗಳು ಸ್ಟ್ರೈಕ್ ಅಂತ ಮಾಡ್ತಾರಲ್ಲ, ಅವರೂ ಹೀಗೇ ಅಲ್ವಾ ಮಾಡೋದು.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹೌದು ಸುನೀಲ್, ನಾನು ಇನ್ಮೆಲೆ ಹೀಗೆ ಕನ್ನಡದಲ್ಲಿ ಇಲ್ಲದಿರುವ ನಿಯಮಗಳನ್ನು ಮುರೀಯೋದು ಅಂತ ಅಂದುಕೊಂಡಿದ್ದೇನೆ. ಆಗಿದ್ದು ಆಗೋಗ್ಲಿ.
ಮೊದಲು ವೈಯಕ್ತಿಕ ಮಟ್ಟದಲ್ಲಿ ಮಾಡಿ ನಂತರ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದಾ ನೋಡಬೇಕು.
ಕನ್ನಡ ಕಾಳಜಿ ಇರುವ ಎಲ್ಲರೂ ಹೀಗೆ ಮಾಡಿದರೆ ಸಂಬಂಧಪಟ್ಟವರಿಗೆ ಬಿಸಿ ಮುಟ್ಟಿಸಬಹುದೇನೋ.
ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಎಲ್ಲದಕ್ಕೂ ನಾವು ಪರದಾಡಬೇಕಾಗಿ ಬಂದಿರುವುದು ವಿಪರ್ಯಾಸ
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಕನ್ನಡ ಬಳಸಬೇಕು ಎನ್ನುವುದು ಸರಿ. ಆದರೆ ಅದಕ್ಕೆ ವಿಕಾಸ್ ಹೇಳುವ ವಿಧಾನ ಅನುಸರಿಸುವುದು ಪ್ರಯೋಜನವಾಗಲಿಕ್ಕಿಲ್ಲ. ಸುನೀಲ್ ಹೇಳುವಂತೆ ಸಾಮೂಹಿಕವಾಗಿ ನಿಯಮ ಮುರಿದು, ಅದಕ್ಕೆ ಪ್ರಚಾರ ಕೊಟ್ಟು ಪ್ರಯತ್ನಿಸಬಹುದು. ಹಾಗೆಲ್ಲಾ ಮಾಡುವ ಮೊದಲು ಟಿವಿಯಲ್ಲಿ ತೋರಿಸಿ, ಸಂಬಂಧಿಸಿದವರಿಗೆ ಬರೆದು, ಸಂಪಾದಕರಿಗೆ ಪತ್ರ ಬರೆದು ಪ್ರಯತ್ನಿಸಬಾರದೇ?
*ಅಶೋಕ್
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅರೇ..
ಗವ್ರನ್ಮೆಟ್ ಬಸ್ ಸ್ಟಾಂಡಲ್ಲಿ ಇರೋ "ಶೌಚಾಲಯ", "ಪುರುಷ", "ಮಹಿಳೆ" ಮುಂದೇ ಸ್ಟ್ರಯ್ಕು ಎರಡನೇ ಹೆಜ್ಜೆಯೋ?
ಆದರೂ ಕನ್ನಡಕ್ಕೆ ಅನ್ನೋ ಹೆಸರಲ್ಲಿ ಏನಾರ ನಡೆದ್ರೆ ನಲ್ ಅನ್ಬೇಕು.. ನಿಮಗೆ ನಲ್ ಆಗಲಿ.!
... ~_O
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನೀವು ಹೇಳುವುದು ಸರಿ ಯಾಗಿ ಇದೆ... ಮುಖ್ಯಮಂತ್ರಿ ಚಂದ್ರು ಅವರ ಗಮನಕ್ಕೆ ಬರಬೇಕು. ..
ಅದೆಲ್ಲಾ ಸರಿ ಅಕ್ಷರ ಜ್ನಾನ ಇಲ್ಲದ ಯೆಶ್ಟೊಮಂದಿ ಚಾಲಕರಿದ್ದಾರೆ ಅಲ್ವ?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅಕ್ಷರ ಜ್ಞಾನ ಇಲ್ಲದವರೂ ಗಾಡಿ ಓಡಿಸಬಹುದೆಂದು ಅದಕ್ಕಾಗೇ ಟ್ರಾಫಿಕ್ ಚಿನ್ಹೆಗಳ ಬಳಕೆ ಇರುವುದು. ಚಿತ್ರಗಳಿಗೆ ಭಾಷೆಯ ಹಂಗಿಲ್ಲವಲ್ಲ.
ಆದರೂ ಇಲ್ಲಿ ಕೆಲವರು ಗಾಡಿ ಓಡಿಸುವಾಗ, ಲೈಸನ್ಸ್ ತೆಗೆದುಕೊಳ್ಳುವಾಗ ಇಂಗ್ಲೀಷು ತಿಳಿದುಕೊಂಡೆ ಇರಬೇಕು ಎಂದು ವಾದಿಸುತ್ತಿರುವುದು ಆಶ್ಚರ್ಯವಾಗುತ್ತಿದೆ !
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹೌದು ಕಣ್ರಿ..ಅದೇ..ನೀವು ಹೇಳಿದ್ದು ಸರಿ..ಆದರೆ ಕನ್ನಡಕ್ಕೆ ಆಗಿರೊದು ಅನ್ಯಾಯ ಇಲ್ಲಿ ಮಾತ್ರ ಅಲ್ಲ..ಪ್ರತಿಭಟಿಸಬೇಕು ಸರಿ ಆದರೆ ಯಾವುದಕ್ಕೆ ಯೆಲ್ಲ ಪ್ರತಿಭಟಿಸೊದ್ರಿ..ನಮ್ಮ ಜನರಿಗೆ ಇಚ್ಚಾಮನೊಬಾವ ಬೇಕು ನಮ್ಮ ಸರಕಾರಕ್ಕು. ಚಂದ್ರು ಈ ಬಗ್ಗೆ ತುಂಬಾ ಆಸೆ ಇಟ್ಕೊಂಡಿರೊ ಮನುಷ್ಯ..ಈ ಸಲ ಯೇನಾದ್ರು ಆಗ್ಬಹುದೊ ಅಂತ ಆಸೆ ನನ್ಗೂ ಇದೆ..
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನಮ್ಮ ಜನಗಳೇ ಸರಿಗಿಲ್ಲ ಅಂದ್ಮೆಲೆ ಯಾವ ಚಂದ್ರುನೂ ಏನೂ ಮಾಡಕ್ಕಾಗಲ್ಲ, ಸೂರ್ಯನು ಎನೂ ಮಾಡಕ್ಕಾಗಲ್ಲ.
ಎಲ್ಲಿವರೆಗೆ ಕನ್ನಡ ಡಿಮ್ಯಾಂಡ್ ಮಾಡಕ್ಕೆ ಕನ್ನಡಿಗರು ಹಿಂಜರಿತಾರೋ ಅಥವಾ ಹೀಗೆ ಇಂಗ್ಲೀಷಿನಲ್ಲೆ ಇರಲಿ/ಇರಬೇಕು ಅಂತ ತಲೆತಗ್ಗಿಸಿ ಒಪ್ಪಿಕೊಳ್ತಾರೋ ಅಲ್ಲಿವರೆಗೆ ಇಷ್ಟೆ ಗತಿ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
"ಪ್ರವೇಶ ನಿಷೇಧಿಸಲಾಗಿದೆ" ಎಂಬುದೂ ಕನ್ನಡ ಅಲ್ಲ..
ಅದನ್ನೂ ಕನ್ನಡ ತನ್ನಿ ಅನ್ಬೇಕು..!
ನಾಳೇ "ನೋ ಪ್ರೀ ಲೆಪ್ಟ್ ಟರ್‍ನ್" ಎಂದು ಹಾಕಿ ಅದನ್ನ ಕನ್ನಡ ಅಂದ್ರೆ!!
:)
ನಮ್ಮ "ಸಂಚಾರಿ ನಿಯಮ"ಗಳನ್ನು ತಿಳಿಯಕ್ಕೆ ಸಂಸ್ಕ್ರುತ ಬರಬೇಕು
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಇಲ್ಲಿಯೂ ಸುರುವಾಯ್ತು ಮತ್ತೆ .
ಒಂದು ಕೆಲಸ ಮಾಡಿ ನೀವು ನನಗೆ ಸಂಕ್ರುತ ಬರಕ್ಕಿಲ್ಲ ಅಂತ ಪೋಲೀಸವ್ರತ್ರ ಏಳಿ ಫೈನು ಕಟ್ಬೇಡಿ
ರಸ್ತೆಲ್ಲಿ ಪ್ರವೇಸ ನಿಸೇಧಿಸಲಾಗಿದೆ ಅಂತ ಬರಿತಾರಾ? ಬರದ್ರೆ ಹೋಗೋದು ಎಲ್ಲಿಗೆ? ಫುಟ್ ಪಾತ್ ಮ್ಯಾಕೆ ಓಗ್ಬೇಕಾ?
ಎಡ ತಿರುವು ಅನ್ನದು ಹಚ್ಚ ಕನ್ನಡವೇ ಬಿಡ್ರಿ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹೇಗೆ ಹೋದರೂ (ಚರ್ಚೆ) ಕೊನೆಗೆ ತಿರುಗುವುದು ಇಲ್ಲಿಗೇ
*ಅಶೋಕ್
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಸಂಪದದ ಅಣೇಬರ
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಇನ್ನು ಸ್ವಲ್ಪ ಒತ್ನಲ್ಲಿ ಶಂಕರ ಬಟ್ಟರು ಬರ್ತಾರೆ!!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹು ಮತ್ತೆ..
ಹಿಂಗೆ ದೂರು ನೀಡ್ತಾ ಹೋದ್ರೆ...
ವಿಮಾನ ನಿಲ್ದಾಣದ ವಿಮಾನ ಕನ್ನಡ ಅಲ್ಲ
ಶೌಚಾಲಯ ಕನ್ನಡ ಅಲ್ಲ
ಪುರುಷ, ಮಹಿಳೆ ಕನ್ನಡ ಅಲ್ಲ
ವೃತ್ತ ಕನ್ನಡ ಅಲ್ಲ
ವರ್ತುಲ ರಸ್ತೆ ಕನ್ನಡ ಅಲ್ಲ
ಬೃಹತ್ ನಗರಪಾಲಿಕೆ ಕನ್ನಡ ಅಲ್ಲ
ದೊಡ್ಡ ಪಟ್ಟಿ ಮಾಡಿ ದೂರು ಕೊಡಬೇಕು..!!
No left turn ಅನ್ನು ಕನ್ನಡದಲ್ಲಿ "ಎಡ ತಿರುವು ನಿಷೇಧಿಸಿದೆ/ಪ್ರವೇಶವಿಕ್ಕ" ಅಂತ ತಾನೆ ಬರೆಯೋದು.. ನಮಗೆ ನಿಷೇದಿಸಿದೆ/ಪ್ರವೇಶ ಅನ್ನೋ ವರ್ಡ್‌ಗಳೇ ಗೊತ್ತಿಲ್ಲ..!!
ಲಿಪಿ ಕನ್ನಡ ಇದ್ರೆ ಆಯ್ತ.. ವರ್ಡ್‌ಗಳು ಕನ್ನಡ ಇರಬೇಕು..!!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಹುಂ. ಕನ್ನಡ ವರ್ಡು , ವರ್ಡು ಗಳು ಬೇಕು ನಿಮಗೆ.
ಎಡ ತಿರುವು ಇಲ್ಲ/ಎಡಕ್ಕೆ ತಿರುಗುವಂತಿಲ್ಲ ಅಂತ ಬರೀತಾರೆ. ನಿಸೇದಿಸಿದೆ ಪಸೇದಿಸಿದೆ ಅಂತ ಇಲ್ಲ.
ಚರ್ಚೆಯನ್ನು ಎಲ್ಲೆಲ್ಲೋ ಕರೆದೊಯ್ಯಲು ನೋಡ್ತಾ ಇದೀರಾ ಅಂತ ಗೊತ್ತು.
ವಿಷಯದ ಬಗ್ಗೆ ಹೇಳೋಕೆ ಏನಿಲ್ಲ ಅಂದ್ರೆ ಸೈಲೆಂಟಾಗಿ ಸೈಡಲ್ಲಿದ್ರೆ ಒಳ್ಳೆಯದು.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಟಾಪಿಕ್ ಬಗ್ಗೇ ಹೇಳ್ತಾ ಇರೋದು...
ನಾಳೆ "ನೊ ಪ್ರೀ ಲೆಪ್ಟ್ ಟರ್‍ನ್" ಅಂತ ಕನ್ನಡ ಲಿಪಿಯಲ್ಲಿ ಹಾಕಿದ್ರೆ ನಡೆಯತ್ತಾ?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಮಹೇಶ ಮತ್ತು ಬೇಬೇರೆ ಗೆಳೆಯರೇ, ಟ್ರಾಫಿಕ್ ಸಿಗ್ನಲ್ಲುಗಳು ಕನ್ನಡ ಲಿಪಿಯಲ್ಲಿ ಇರಬೇಕು ಎಂಬುದು ಮೊದಲ ಹೆಜ್ಜೆ. ಈ ಮೊದಲ ಹೆಜ್ಜೆಯಲ್ಲಿಯೇ ಹೀಗೆ ಕಿತ್ತಾಡಿದರೆ ಯಾವ ಏಳಿಗೆಯೂ ಆಗಲ್ಲ. ಇದನ್ನು ಯಾಕೆ ಮನದಟ್ಟು ಮಾಡಿಕೊಳ್ಳಲ್ಲ.
ಹೌದು, ಸಂಸ್ಕೃತ ಜಾಸ್ತಿ ಇದೆ, ಹೆಚ್ಚು ಹೆಚ್ಚು ಜೀವಂತ ಕನ್ನಡವನ್ನು ತರಬೇಕು ಎಂಬ ಕಣಸಿದೆ. ಆದರೆ ಆ ಕಣಸು ಸಾಕಾರಗೊಳ್ಳಲಿಕ್ಕೆ ಬೇಕಿರುವ ಮೊದಲ ಹೆಜ್ಜೆಗೆ ಕೈಜೋಡಿಸಿರಿ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಅದನ್ನೇ ಸುನಿಲರೇ ಕೇಳಿದ್ದು
"ನೋ ಪ್ರೀ ಲೆಪ್ಟ್ ಟರ್‍ನ್" ಅಂತ ಕನ್ನಡ ಲಿಪಿ ಬರೆದ್ರೇ ಸಾಕಾ? ಮೊದಲ ಹೆಜ್ಜೆ.!
ಟ್ರಾಪಿಕ್ ಸಿಗ್ನಲ್ಲು ಕನ್ನಡ ಲಿಪಿಯಲ್ಲಿ ಆಯ್ತಲ್ಲ?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಪ್ರತಿಯೊಂದು ಎಳೆಯಲ್ಲೂ ಕನ್ನಡ vs ಸಂಸ್ಕೃತ ತರುವುದು ತಪ್ಪು...
ಸ್ವಲ್ಪ ಶಂಕರ ಭಟ್ಟರನ್ನ ಅಚ್ಚ ಕನ್ನಡನ ಪಕ್ಕಕ್ಕಿಡಿ...
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಇಶ್ಟೆಲ್ಲ ಹೇಳೋರು ತಮ್ಮ ಡ್ರಯ್ವಿಂಗ್ ಲಯ್ಸೆನ್ಸು ನೋಡಿಲ್ಲ ಅಂತ ಕಾಣಿಸ್ತದೆ..
ನಮ್ಮ ಸರಕಾರ ಕೊಡೋದೇ ಇಂಗ್ಲಿಶಲ್ಲಿ.. ಅಂದ್ರೇನರ್ತ.. ನಿಮಗೆ ಇಶ್ಟಾದ್ರು ಇಂಗ್ಲಿಶ್ ಬಂದ್ರೆ ಬಂಡಿ ಓಡಿಸಿ ಅಂತ ತಾನೆ.!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ನಾವು ಗಾಡಿ ಓಡ್ಸೋದು ಡ್ರೈವಿಂಗ್ ಲೈಸನ್ಸ್ ಮೇಲಲ್ಲ. ರಸ್ತೆ ಮೇಲೆ
ಲೈಸನ್ಸು ಇಡೀ ಭಾರತಕ್ಕೆ ಅನ್ವಯಿಸುವುದರಿಂದ ಇಂಗ್ಲೀಸಲ್ಲಿರ್ತದೆ. ಯಾವ ರಾಜ್ಯಕ್ಕೋದ್ರೂ ಗೊತ್ತಾಗ್ಲಿ ಅಂತ. ಅದ್ರಲ್ಲೂ ಕನ್ನಡಕ್ಕೆ ಒತ್ತಾಯ ಮಾಡೋಣ ಅದಕ್ಕೇನು?
ಆದ್ರೆ ನಾವು ಗಾಡಿ ಓಡಿಸೋ ರಸ್ತೆ ಇರೋದು ಕರ್ನಾಟಕದಲ್ಲಿ.
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಕರೆಕ್ಟು.. ರಸ್ತೆ ಕರ್ನಾಟಕದಲ್ಲೇ ಇರೋದು.. ಆದ್ರೆ ರಸ್ತೆ ಮೇಲೆ ಓಡಾಡೋರಿಗೆಲ್ಲ ಕನ್ನಡಲಿಪಿ ಓದಕ್ಕೆ ಬರ್ತದ?
ನನ್ ಕೇಳಿದ್ರೆ ಎರಡ್ರಲ್ಲೂ ಇರಬೇಕು..
ಹಿಂಗೆ
"ನೋ ಪ್ರೀ ಲೆಪ್ಟ್ ಟರ್‍ನ್" ಮತ್ತು "No free free left turn" ಕನ್ನಡದಲ್ಲಿ ಆಯ್ತು.. ಅಂತ ಲೆಕ್ಕ ತಾನೆ..
ಬೇಕಾದ್ರೇ ದೇವನಾಗರಿಯಲ್ಲೂ ಬರೀಲಿ..
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಬರತ್ತೋ ಬಿಡತ್ತೋ, ಅದು ಬೇರೆ ಪ್ರಶ್ನೆ, ಆದರೆ ಕರ್ನಾಟಕದಲ್ಲಿ ಇದ್ದ ಮೇಲೆ ಕನ್ನಡದ ಲಿಪಿಯನ್ನು ಗುರುತಿಸುವಷ್ಟು ಶಕ್ತಿ ಇರಲೇಬೇಕು ಅಂತ ನಿರೀಕ್ಷಿಸೋದು ತಪ್ಪಾ!!!!! ಅಲ್ಲಪ್ಪಾ ಮಹೇಶ, "ನೋ ಪ್ರೀ ಲೆಪ್ಟ್ ಟರ್‍ನ್" ಅಂತ ಬರೆದರೆ ಅದು ಕನ್ನಡವಾಗತ್ತೆ ಅಂತ ಯಾರು ಹೇಳಿದ್ದಾರೆ ಈ ಎಳೆಯಲ್ಲಿ ? ಸುಮ್ಸುಮ್ನೆ ಬೇರೆಯವರು ಹೇಳದೇ ಇರೋದನ್ನೆಲ್ಲ ಕಲ್ಪಿಸಿಕೊಂಡು ಕಾಮೆಂಟ್ ಮಾಡ್ಬಾರ್ದು ಅಲ್ವಾ ? ಬೇರೆಯವರಿಗೆ ಕನ್ನಡ ಗೊತ್ತಿಲ್ಲದೆ, ಸಂಸ್ಕೃತಕ್ಕೋ, ಇಂಗ್ಲೀಷಿಗೋ ಮಾರುಹೋಗಿದ್ದರೆ, ನೀನು ಅವರಿಗೆಲ್ಲ ಸರಳವಾದ, ಕೇಳಲು ಚೆನ್ನಾಗಿರುವ, ಅಚ್ಚಕನ್ನಡ ಹೇಳಿಕೊಡು. ಅದು ಬಿಟ್ಟು, ಒಬ್ಬರು ಒಂದು ಒಳ್ಳೆಯ ಆಶಯವನ್ನು ಮುಂದಿಟ್ಟರೆ, ಈ ರೀತಿ ಮೊಂಡು ವಾದ ಮಾಡಿ, ಆ ಕಣಸಿಗೆ ತಣ್ಣೀರೆರೆಚೋದಾ ?
ಸರಿ ಒಂದೇ ಒಂದು ಪ್ರಶ್ನೆ. ನೇರವಾಗಿ ಹೇಳು. ಈಗೇನು, "ಟ್ರಾಫಿಕ್ ಸಿಗ್ನಲ್ಲು ಕನ್ನಡದಲ್ಲಿ ಇರಬೇಕು" ಎಂಬುದಕ್ಕೆ ನೀನು ಕೈಜೋಡಿಸುತ್ತೀಯೋ ಇಲ್ಲವೋ ?
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಪಾಯಿಂಟ್ ನಂಬರ್ ೧)ಕರ್ನಾಟಕದಲ್ಲಿ ಇದ್ದ ಮ್ಯಾಲೆ ಎಲ್ರೂ ಕನ್ನಡ ಸ್ರಿಪ್ಟನ್ನ ಗುರುತು ಹಿಡೀತಾರೆ ಅಂತ ಎಕ್ಸ್‌ಪೆಕ್ಟೋದು ’ಕಾನೂನಾತ್ಮಕವಾಗಿ’ ತಪ್ಪು. ಕಡ್ಡಾಯವಾಗಿ ಎಲ್ರೂ ಕನ್ನಡ ಸ್ರಿಪ್ಟನ್ನ ಕಲೀಬೇಕು ಅಂತ ರೂಲಿಲ್ಲ..
ಪಾಯಿಂಟ್ ನಂಬರ್ ೨) "ನೋ ಪ್ರೀ ಲೆಪ್ಟ್ ಟರ್‍ನ್" ಹಿಂಗೆ ಬರೆದ್ರೆ ಕನ್ನಡ ಆಗುತ್ತಾ ಅಂತ ಕೊಶ್ಚನ್ನಿದವನು ಮೊದಲ ನಾನೇನೇ.. ಬೇರೆಯೋರಿಗೆ ಹೊಳೆದೇ ಇಲ್ಲ ಇದು
.. ತಾವ್ ಹೇಳದಂಗೆ ’ಮೊದಲ ಸ್ಟೆಪ್ಪು’ ಕನ್ನಡಸ್ರಿಪ್ಟಿಗೋಸ್ಕರ, ಬಳಿಕ ..
ಪಾಯಿಂಟ್ ನಂಬರ್ ೩)
ಒಬ್ಬರು ಒಂದು ಒಳ್ಳೆಯ ಆಶಯವನ್ನು ಮುಂದಿಟ್ಟರೆ, ಈ ರೀತಿ ಮೊಂಡು ವಾದ ಮಾಡಿ, ಆ ಕಣಸಿಗೆ ತಣ್ಣೀರೆರೆಚೋದಾ ?
ಪಾಯಿಂಟ್ ನಂಬರ್ ೪)
"ಟ್ರಾಫಿಕ್ ಸಿಗ್ನಲ್ಲು ಕನ್ನಡದಲ್ಲಿ ಇರಬೇಕು" ಎಂಬುದಕ್ಕೆ ನೀನು ಕೈಜೋಡಿಸುತ್ತೀಯೋ ಇಲ್ಲವೋ ?
’ಕನ್ನಡ’ದಲ್ಲಿ ಇರ್ಬೇಕು. ಸಂಸ್‌ಕ್ರುತದಲ್ಲಿ "ಮುಕ್ತ ವಾಮ ಭ್ರಮಣ ನಿಷಿದ್ಧ" ಅಂತ ಬಂದ್ರೆ ಅದಕ್ಕಿಂಗ "No Free left turn" ಇದೇ ವಾಸಿ....
ಪಾಯಿಂಟ್ ನಂಬರ್ ೫)
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ
ಈ ಬೋರ್ಡು ನಮಗೆ ಸರಿ ಅರ್ತ ಆಗಲ್ಲ.. ಅದು ಸಂಸ್ಕ್ರುತ ಅಂತ ಯಾವಾನಾರ ಹೆಂಡಕುಡಿದು ಗುದ್ದಿದ್ರೇ. ಈ ಚರ್ಚೆ ಆಶಯ, ಲಾಜಿಕ್ಕನ್ನೇ ಯೂಜ್ಸ್ ಮಾಡಬೋದು...
ಅದೆಲ್ಲ ಸರಿ.. ನಿಮ್ಮ ಸ್ರಯ್ಕ್ ಯಾವಾಗ.. ಟೀವಿಯಲ್ಲಿ ನೋಡಣ ಅಂತ ಇದ್ದೀನಿ..
ನನ್ನಿ!!
ಉ: No free left turn - ನಾನು ಇಂಗ್ಲೀಷ್ ಓದಲ್ಲ
ಸುನಿಲ್, ಇನ್ನೂ ಇಂತವರತ್ರ ಮಾತಾಡಿ ಏನಾದ್ರೂ ಪ್ರಯೋಜನ ಇದೆ ಅನಿಸುತ್ತದಾ ನಿಮಗೆ?