ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಇತರ ಚರ್ಚೆ › ಅರಳಿ ಕಟ್ಟೆ

ಆದಾಯ-ಸಂದಾಯ=ಉೞಿತಾಯ

July 27, 2008 - 5:39am — kannadakanda

ನಮ್ಮ ದುಡಿಮೆಯ ಸಾಫಲ್ಯ ಈ ಮೂಱು ಪದಗಳ ಸರಿಯಾದ ಅಸ್ತಿತ್ವದ ಮೇಲೆ ನಿಂತಿದೆ. ಸ್ವಲ್ಪ ಭಾಷೆಯ ದೃಷ್ಟಿಯಿಂದ ಇದನ್ನು ವಿಶ್ಲೇಷಿಸೋಣ.

ಆದಾಯ:- ಇದು ’ಆಗು’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮಗೇನಾದರೂ ಸಿಗುವುದಱ ಬಗ್ಗೆ ಹೇೞುತ್ತದೆ. ಅಂದರೆ ನಮ್ಮ ಲಾಭ.
ಸಂದಾಯ:- ಇದು ’ಸಲ್’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಇದು ನಮ್ಮಿಂದ ಬೇಱೆಯವರಿಗೆ ಏನಾದರೂ ಸಲ್ಲುವುದಿದ್ದರೆ ಅದಱ ಬಗ್ಗೆ ಹೇೞುತ್ತದೆ. ಇದು ವಿದ್ಯುತ್ ಬಿಲ್, ಫೋನ್ ಬಿಲ್ ಹಾಗೆಯೇ ಯಾರಿಂದಲಾದರೂ ತುರ್ತಕ್ಕೆ ಕೈಗಡ ತೆಗೆದುಕೊಂಡಿದ್ದರೆ ಅಥವಾ credit card ಬೞಸಿದ್ದರೆ ಅವರಿಗೆ ಸಮಯಕ್ಕೆ ಕೊಡಬೇಕಾದ ಹಣ ಇತ್ಯಾದಿ ಸೂಚಿಸುತ್ತದೆ. ಅಂದರೆ ನಮ್ಮ ದುಡಿಮೆಯಲ್ಲಿ ನಮ್ಮದಲ್ಲದ ಹಣವನ್ನು ಕಳೆಯುವುದು.

ಉೞಿತಾಯ:- ಇದು ’ಉೞಿ’ ಧಾತುವಿಗೆ ’ತಾಯ/ದಾಯ’ ಸೇರಿ ಆದ ಪದ. ಮೇಲಿನ ಆದಾಯದಿಂದ ಸಂದಾಯವನ್ನು ಕಳೆದಾಗ ಉೞಿಯುವುದೇ ಈ ಉೞಿತಾಯ. ಇದು ಮಿಗತೆಯಾದರೆ ಜೀವನ ಸುಖ. ಕೊಱತೆಯಾದರೆ ಕಷ್ಟ. ಆಗ ಸಾಲದೆಂಬ ಸಾಲ ನಮ್ಮನ್ನು ದುಃಖಕ್ಕೀಡುಮಾಡುತ್ತದೆ.
ಈ ಮೂಱು ಹೆಚ್ಚಿದಂತೆ ಸುಖ ಹೆಚ್ಚುತ್ತದೆ. ಆದರೆ ಆದಾಯಕ್ಕಿಂತ ಸಂದಾಯ ಕಡಿಮೆಯಿದ್ದರೆ ಜೀವನ ಸೊಗಸು.

ಅದಕ್ಕೆ ಹಿರಿಯರೆಂದರು:

ಇದಮೇವ ಹಿ ಪಾಂಡಿತ್ಯಂ ಚಾತುರ್ಯಮಿದಮೇವ ಹಿ
ಇದಮೇವ ಸುಬುದ್ಧಿತ್ವಂ ಆಯಾದಲ್ಪತರೋ ವ್ಯಯಃ||

ಇದೇ ಪಾಂಡಿತ್ಯ. ಇದೇ ಚಾತುರ್ಯ. ಇದೇ ನಿಜವಾದ ಬುದ್ಧಿವಂತಿಕೆ. ಅದು ಯಾವುದೆಂದರೆ ಆದಾಯಕ್ಕಿಂತ ಸಂದಾಯ ಕಡಿಮೆಯಿರುವುದು. ಅಂದರೆ ಗಳಿಕೆಗಿಂತ ಖರ್ಚು ಕಡಿಮೆ ಮಾಡುವುದು. ಇದನ್ನು ಬಿಟ್ಟು ಬೇಱೆ ಪಾಂಡಿತ್ಯ, ಚಾತುರ್ಯ ಹಾಗೂ ಬುದ್ಧಿವಂತಿಕೆಯಿಲ್ಲ.

‹ ಮೊಬೈಲ್ ಫಿಲಾಸಫಿ ಭಾಗ ೧ ಯಾರಲೇ ನೀ................... ›
  • ಅರಳಿ ಕಟ್ಟೆ
~.~
  • Login or register to post comments
  • 151 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2008 - 6:57pm — mahesha

ಉ: ಆದಾಯ-ಸಂದಾಯ=ಉೞಿತಾಯ

mahesha's picture

ಆದಾಯ
ಸಂದಾಯ
ಉಳಿತಾಯ
ಒತ್ತಾಯ
ಹೆಚ್ಚಾಯ

ಇಲ್ಲಿ ಹಿನ್ನೊಟ್ಟು/ಪ್ರತ್ಯಯ ’ತಾಯ’?

ಆಯ್ + ತಾಯ = ಆದಾಯ
ಸಲ್ + ತಾಯ = ಸಂದಾಯ
ಉೞಿ+ತಾಯ = ಉೞಿತಾಯ ( ಗಮನಿಸಿರಿ: ಹಲವು ಕತೆ ೞಕಾರದ ಮುಂದೆ ’ತ’ )
ಒಳ್/ಒತ್ + ತಾಯ = ಒತ್ತಾಯ
ಹೆರ್‍ಚ್+ತಾಯ => ಹೆಚ್ಚಾಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2008 - 1:32pm — kannadakanda

ಉ: ಆದಾಯ-ಸಂದಾಯ=ಉೞಿತಾಯ

kannadakanda's picture

ಒತ್ತು+ತಾಯ=ಒತ್ತಾಯ. ಹೆಚ್ಚಿನ ತಕಾರ ಕಿಱುಚುಲಿ ಆದ್ದಱಿಂದ ಲೋಪ. ನೋಡಿ ಉತ್+ಸ್ಥಾನ=ಉತ್ಥಾನ ಎರಡಕ್ಕಿಂತ ಹೆಚ್ಚಿನ ಕಿಱುಚುಲಿ ಉಸಿರುಗಟ್ಟಿಸುತ್ತದೆ. ವಾಹನ ತಡೆಯೊಡ್ಡಿದಾಗ ಕೀಚ್ಚ್ಚ್ಚ್ ಎಂದು ವಾಹನ ನಿಲ್ಲುವಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
  • ಸಾಫ್ಟ್ ವೇರ್ ಕಂಪನಿ ಸೇರಿ!!!
  • ೫೦ ಕೋಟಿ! ಒಂದು ವಾರ್..
  • 7 ಮದುವೆ ಅನುಭವ
  • ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
  • ಕನ್ನಡದಲ್ಲಿ ಞ ಮತ್ತು ಙ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • bvenkatraya
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 8:25pm
  • gnanadev
    ಉ: bird_at_waterfall.jpg
    December 2, 2008 - 8:22pm
  • gnanadev
    ಉ: ಸಕಲವೂ ಈಶ್ವರಮಯವಾದುದು
    December 2, 2008 - 8:13pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 8:10pm
  • gnanadev
    ಉ: ಹೀಗೊ೦ದು ರಸಕ್ಷಣ
    December 2, 2008 - 8:08pm
  • ASHOKKUMAR
    ಉ: ಸ್ವಿಡನ್ನಿನ ನಗೆಚಿತ್ರಗಳು
    December 2, 2008 - 7:56pm
  • rameshbalaganchi
    ಉ: ಸಕಲವೂ ಈಶ್ವರಮಯವಾದುದು
    December 2, 2008 - 7:56pm
  • anil.ramesh
    ಉ: ಹೀಗೊ೦ದು ರಸಕ್ಷಣ
    December 2, 2008 - 7:53pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:39pm
  • anil.ramesh
    ಉ: ಸೋಮಾರಿತನದ ಪರಮಾವಧಿ...
    December 2, 2008 - 7:38pm
ಇನ್ನಷ್ಟು


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator