ಲಾಂದರ
ಲಾಂದರ, ಲಾಂದ್ರ, ಲಾಟನ, ಲಾಟಾನು, ಲಾಟೀನು (ನಾಮಪದ) ಇದು ಕನ್ನಡಕ್ಕೆ ಪೋರ್ಚುಗೀಸ್ ಭಾಷೆಯ Lanterna ದಿಂದ ಬಂದಿದೆ.
ಇದರರ್ಥ: ಗಾಳಿ ತಾಗದಂತೆ ಗಾಜಿನ ಆವರಣವುಳ್ಳ, ಎಲ್ಲಿಗಾದರೂ ಒಯ್ಯಲು ಅನುಕೂಲವಾಗುವಂತೆ ಹಿಡಿಕೆಯುಳ್ಳ ದೀಪ; ಕಂದೀಲು
ಹೇಗೆ ಪ್ರಯೋಗವಾಗಿದೆ ಅಂದರೆ:
ನುಸುಳಿ ಬರುವ ಬೆಳುದಿಂಗಳ ಮಂಜಲ್ಲಿ ಮಂಕಾದ ಬೆಳಕಿನ ಲಾಂದರದಲ್ಲಿ - ಇಂಗ್ಲಿಷ್ ಗೀತಗಳು; ಲಾಂದ್ರದಲ್ಲಿ ದೀಪವು ನಿರ್ಮಲವಾಗಿ ಕಂಡಂತೆ ಬೋಕಿಯಲ್ಲಿ ನಿರ್ಮಲವಾಗಿ ಕಾಣುವುದೇ?; ಕಾಮಾಕ್ಷಿ ಒಳಗಿನಿಂದ ಲಾಟನವೊಂದನ್ನು ಹಚ್ಚಿ ತಂದಳು; ಲಾಟೀನು ಬೆಳಕಲ್ಲಿ ಓದೋಕಾದರೆ ಓದು; ಕೈಯಲ್ಲಿದ್ದ ಲಾಟೀನನ್ನು ಬಿಸಾಡಿ ಕಾಲಿಗೆ ಬುದ್ದಿ ಹೇಳಿದೆ)
[ಇಂಗ್ಲಿಷ್: Lantern; ತಮಿಳು: ಲಾನ್ತರ್; ತುಳು: ಲಾಂಟನ್, ಲಾಂದರ್]
(ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಿಂದ ತೆಗೆದುಕೊಳ್ಳಲಾಗಿದೆ)

- Login or register to post comments
- 130 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಉ: ಲಾಂದರ
"ಹೂವ ಹಣ್ಣು" ಚಿತ್ರವಿರಬೇಕು, ಅಶ್ವತ್ಥ್ ಹಾಡಿರುವ ಈ ಹಾಡನ್ನು ಕೇಳದವರು ಇಲ್ಲವೇ ಇಲ್ಲವೇನೋ.
ನಿಂಗಿ ನಿಂಗಿ ನಿಂಗಿ ನಿಂಗಿ,
ನಿದ್ದಿ ಕದ್ದೀಯಲ್ಲೆ ನಿಂಗಿ,
ನಿಂಗಿ ನಿಂಗಿ ನಿಂಗಿ ನಿಂಗಿ,
ಆಸೀ ಕದ್ದೈಯ್ತಲ್ಲೆ ನಿಂಗಿ.
ಚಂದಾನ ಚಂದ್ರ, ಹೊಯ್ಯಾರೆ ಹೊಯ್ಯ,
ಭೂಮೀಗಲಾಂದ್ರ ಹೊಯ್ಯಾರೆ ಹೊಯ್ಯ,
ಆಗ್ಯಾನ ನೋಡಲ್ಲಿ.
ಈ ವೀಡಿಯೋದಲ್ಲಿ, ಸರಿಸುಮಾರು ೪:೦೬ಕ್ಕೆ ಶುರುವಾಗತ್ತೆ. ಕೇಳಿ ಖುಷಿಪಡಿ.