ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

July 25, 2008 - 5:13pm — harshavardhan v...

ಬಾಂಬ್ ಹಾರಿಸಿ ಅಮಾಯಕರನ್ನು ಕೊಲ್ಲುವುದರಿಂದ, ಮುಗ್ಧ ಜನರನ್ನು ಗಾಯಗೊಳಿಸಿ,ನಾಗರಿಕ ಸಮಾಜವನ್ನು ಭಯಭೀತಗೊಳಿಸಿವುದರಿಂದ ಯಾವುದಾರೂಂದು ಸಮಸ್ಯೆಗೆ ಕೊನೆಪಕ್ಷ ಪರಿಹಾರ ಸಿಗುವುದು ಎಂದಾದರೆ ಎಲ್ಲರೂ ಅದನ್ನೇ ಮಾಡೋಣ. ಕೈಲಾಗದಿದ್ದಲ್ಲಿ ಮೈಎಲ್ಲ ಪರಚಿಕೊಂಡಂತೆ, ಹೇಡಿಗಳಂತೆ ಕದ್ದು-ಮುಚ್ಚಿ ಗೆರಿಲ್ಲಾ ಶೈಲಿ ‘ಪ್ರಾಕ್ಸಿ ವಾರ್’ಗೆ ಇಳಿದವರ ವಿರುದ್ಧ ನಮ್ಮ ವರ್ತನೆ ಎಷ್ಟು ಕಠಿಣವಾಗಿರಬೇಕು? ಮತ್ತು ಈಗಾಗಲೇ ಭಯೋತ್ಪಾದನೆಯಲ್ಲಿ ಕೈವಾಡವಿರುವುದು ಸಾಬೀತಾದ ಮಂದಿಯನ್ನು ನಾವು ಹೇಗೆ ಶಿಕ್ಷಿಸಿದ್ದೇವೆ? ಎಂಬುದರ ತಥ್ಯದ ಮೇಲೆ ಶಾಶ್ವತ ಪರಿಹಾರ ದೊರಕುವುದು.

ಅನಾಗರಿಕ ವರ್ತನೆಯ ಭಯೋತ್ಪಾದಕರಿಗೆ ನಾಗರಿಕ ಸಮಾಜದ ಸಂಘಟಿತ ಹೋರಾಟವೇ ಉತ್ತರವಲ್ಲವೇ? ಸದಾ ಸನ್ನದ್ಧ ಹಾಗು ಎಚ್ಚರ ಸ್ಥಿತಿಯಲ್ಲಿ ಇರಬೇಕಾಗಿದ್ದೇ ನಾವು ಸ್ವಾತಂತ್ರ್ಯಕ್ಕೆ ನೈಜಾರ್ಥದಲ್ಲಿ ತೆರಬೇಕಾದ ಬೆಲೆ ಅಲ್ಲವೇ?

‹ ಸಂಬಂಧಗಳು ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? ›
  • ಸಮುದಾಯ
~.~
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 26, 2008 - 5:02pm — sudheendralur_m...

ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

sudheendralur_mundaragi's picture

ಭಯೋತ್ಪಾದಕರ ಕುಕೃತ್ಯ ಯಾವತ್ತೂ ಖಂಡನೀಯ. ದೇಶದ ಅಖಂಡತೆಗೆ ಹಾಗು ಸಾರ್ವಭೌಮತೆಗೆ ಧಕ್ಕೆ ತರುವಂತಹ ಈ ಕೃತ್ಯಗಳನ್ನು ಮೂಲೋಚ್ಛಾಟನೆ ಮಾಡಲೇಬೇಕು. ಜಾಗೃತ ಸಮಾಜ ಮಾತ್ರ ಬಹಳ ದಿನ ಬದುಕಬಲ್ಲುದು ಎಂಬುದು ಸರ್ವಕಾಲಿಕ. ಚರ್ಚಾ ವಿಷಯದಂತೆ ಸಂಘ ಶಕ್ತಿಯೇ ಭಯೋತ್ಪಾದನೆ ತೊಲಗಿಸುವ ಮದ್ದು. ನಾಗರಿಕ ಸಮಾಜದಲ್ಲಿ ಸಂವಿಧಾನ ಬದ್ಧ ಹೋರಾಟಗಳಿಗೆ ಮಾತ್ರ ಸ್ಥಾನ-ಮಾನ. ಅನಾಗರಿಕ ರೀತ್ಯಾ ‘ಹಾರಾಟ’ಗಳಿಗೆ ಅದೇ ಉತ್ತರ ತಿರುಗಿಸುವ ಸಿದ್ಧತೆ ನಡೆಯಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2008 - 5:11pm — siddupujar

ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

siddupujar's picture

ಶಂಕಿತ ಉಗ್ರರ ಬಂಧನದ ಪ್ರಾರಂಭದ ಹಂತದಲ್ಲಿಯೇ ಅವರ ಅಡುಗು ತಾಣಗಳನ್ನೆಲ್ಲ ಜಾಲಾಡಿಬಿಡಬೇಕಿತ್ತು. ಹಾಗೆ ಮಾಡದಿರುವುದೇ ಈಗ ಈ ಪರಿಸ್ಥಿಯನ್ನು ನಮ್ಮ ರಾಜಧಾನಿಯ ಜನ ಎದುರಿಸುವಂತಾಯಿತು. ಜೊತೆಗೆ ಈಗಾಗಲೇ ಶಂಕಿತ ಭಯೋತ್ಪಾದನೆ ಅಡಿಯಲ್ಲಿ ಬಂಧಿತರಾಗಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮಾಧ್ಯಮಗಳಲ್ಲಿ ಶಂಕಿತ ಉಗ್ರರ ಚಿತ್ರಗಳು ಪ್ರಕಟಗೊಂಡಾಗ ಅವರ ಮುಖದಲ್ಲಿ ಯಾವುದೇ ಆತಂಕಗಳಿಲ್ಲದಿರುವುದು, ಆವರಣದಲ್ಲಿ ನಿಂತವರತ್ತ ಅವರು ಕೈಬೀಸುವುದು ಎಲ್ಲ ನಮ್ಮ ಪ್ರಜಾಪ್ರಭುತ್ವವನ್ನು ಅಣಕಿಸುತ್ತಿವೆ ಎನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2008 - 5:19pm — PusplataHosakeri

ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

PusplataHosakeri's picture

ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಎನ್ನುವುದನ್ನು ಬಿಟ್ಟು ನಾವೆಲ್ಲರು ಜಾಗೃತರಾಗಬೇಕು ಮೊದಲು. ಉಗ್ರರು ಇನ್ನೊಂದು ಬಾರಿ ಇಂತಹ ದುಷ್ಕೃತ್ಯ ವೆಸಗದ ಹಾಗೆ ನಾಗರಿಕರೇ ಪೊಲೀಸರಾಗಿ ವರ್ತಿಸಬೇಕು. ಸಹನೆ ಕೈಲಾಗದತನ ಎನ್ನಿಸಿಕೊಳ್ಳುವ ಮೊದಲು ದಿಟ್ಟ ಉತ್ತರ ನೀಡಲು ನಾವು ಸಿದ್ಧರಾಗೋಣ. ಎಲ್ಲವೂ ಸರಕಾರವೇ ಮಾಡಲಿ ಎಂದರೆ ‘ಸಮಾಜದ ಸಹಭಾಗಿತ್ವ’, ನಮ್ಮ ನಿಮ್ಮ ಪಾಲೇನು? ಪಾಡೇನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 26, 2008 - 5:28pm — seemashimikeri

ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

seemashimikeri's picture

ನಾಡಿನ ಶಾಂತಿಯನ್ನು ಕದಡುವ ಇಂತಹ ಘಟನೆಗಳು ಪುನರಾವರ್ತಿಯಾಗದಂತೆ ವ್ಯಾಪಕ ಸುರಕ್ಷಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. ಶ್ರೀಸಾಮಾನ್ಯನಿಗೆ ಪರಿಸ್ಥಿತಿ ತಹಬದಿಗೆ ಬರುವ ವರೆಗೆ ಕೆಲದಿನಗಳ ಕಾಲ ಇದು ಪೊಲೀಸ್ ರಾಜ್ಯವೇ? ಎನಿಸಿದರೂ ಪರವಾಗಿಲ್ಲ. ಒಮ್ಮೆ ಅವರನ್ನು ಹತ್ತಿಕ್ಕಿಬಿಡಲಿ. ಇಲ್ಲದಿದ್ದರೆ ಇದು ನಮ್ಮ ಪೂರ್ವಾಂಚಲದ ನಕ್ಸಲಿಸಂ, ಮಾವೋಇಸಂ, ಮೂಲಭೂತವಾದದ ಪಡಿಯಚ್ಚು ಎನಿಸಿ ಕರ್ನಾಟಕದಲ್ಲಿ ಉಗ್ರರ ಪ್ರತಿ ಸಹಾನುಭೂತಿ ಪ್ರಕಟಗೊಂಡು, ಅವರಿಗೂ ಸಹ ಪರಿಹಾರ ನೀಡಿ ಮುಖ್ಯವಾಹಿನಿಗೆ ಸೇರಿಸುವ ತರ್ಕ ಸರಕಾರದ ಮುಂದೆ ಬರಬಹುದು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 27, 2008 - 10:40am — csomsekraiah

ಉ: ‘ಅನಾಗರಿಕರ ಬಾಂಬ್’ ಉತ್ತರವೇ? ಪ್ರಶ್ನೆಯೇ?

csomsekraiah's picture

ಅನಾಗರಿಕ ಬಾಂಬ್ ಉತ್ತರವೂ ಅಲ್ಲ ,ಪ್ರಶ್ನೆಯೂ ಅಲ್ಲ . ಅದೊಂದು ಕೆಟ್ಟ ಸಮಸ್ಯೆ .ಇದರ ಪೋಷಕರು ದೂರದಲ್ಲೆಲ್ಲೂ ಇಲ್ಲ. ನಮ್ಮ ಕೆಟ್ಟ ರಾಜಕೀಯ ವ್ಯವಸ್ಥೆಯೇ ಇದರ ತಾಯಿ ಬೇರು . ನಮ್ಮ ಪ್ರಜಾತಂತ್ರ, ನಮ್ಮ ಸ್ವಾತಂತ್ರ್ಯ ಉಳಿಯಬೇಕಾದರೆ ಯಾರು ಏನೇ ಬೊಬ್ಬೆ ಹೊಡೆಯಲಿ, ಭಯೋತ್ಪಾದಕರಿಗೆ, ಹಿಂಸೆಯನ್ನು ಅವಲಂಬಿಸಿರುವವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯಾಗಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಬಿ.ಜೆ.ಪಿ ಸರ್ಕಾರ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯನ್ನು ರೂಪಿಸಿದ ಚಿನಕುರಳಿ ಮೊಹ್ಮದ್ ರ ಪ್ರಥಮ ವ್ಯಂಗ್ಯ-ಚಿತ್ರ !
  • ಮಳೆ
  • ಕೆಂಪು, ಕಣ್ಣು ಏನು ಪರಿಹಾರ..???
  • ಜೀವ ಉಳಿಸಿದ ಸುಕುಮಾರನಿಗೆ ನನ್ನಿ
  • ನೀರಿನ ಸಮಸ್ಯಗೆ ಒಂದು ಪರಿಹಾರ !!
Syndicate content

ಲೇಖಕರು

harshavardhan v.sheelavant's picture

ಪೂರ್ಣ ಹೆಸರು
harshavardhan v. sheelavant

ಪರಿಚಯ

Assistant Professor, Institute of Mass Communication and Research, Hubli. Freelance Journalist. a netizen having own blog- 'arivinamarevu.blogspot.com.' Karnataka Media Academy awardee. AIR grade artist. Centre for Agricultural Media (CAM) Fellow. Love to contribute feature articles, farm crisis, rural and agri life. Happy to teach journalism, to promote citizen journalism.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬರಹದಿಂದ ಯೂನಿಕೋಡ್‌ಗೆ ಲಿನಕ್ಸನಲ್ಲಿ ಬದಲಾಯಿಸಬಹುದೇ?
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ಮುಕ್ತ...ಮುಕ್ತ...ಸಾಹಿತ್ಯ ಬೇಕು...
  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • ಜ್ಯೋತಿಷ್ಯ..ವೈಜ್ಞಾನಿಕ ?
  • "ಶಂಖದಿಂದ ಬಂದರೆ ತೀರ್ಥ..."
  • ನರಸಿಂಹ ಸಾಲಿಗ್ರಾಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 7, 2008 - 8:09pm
  • agilenag
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 7, 2008 - 7:51pm
  • ಸಂಗನಗೌಡ
    ಉ: ಮೊದಲ ಚಿತ್ರ
    September 7, 2008 - 5:34pm
  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator