ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ದಿನಕ್ಕೊಂದು ಪದ

ಪೊಳೆ, ಪೊೞೆ, ಹೊಳೆ, ಹೊೞೆ

July 25, 2008 - 9:57am — kannadakanda

ಪೊಳೆ(ಹೊಳೆ)=ಮಿಱುಗು, ಪ್ರಕಾಶಿಸು.
ಪೊೞೆ(ಹೊೞೆ)=ನದಿ, ತೊಱೆ, ನದಿ/ತೊಱೆಯಾಗಿ ಹರಿ

ಉದಾಹರಣೆ:- ಮೞೆಯೆಲ್ಲಾ ಹೊೞೆಯಾಗಿ ಹರಿದಿತ್ತು. ಹುಲ್ಲಿನ ತುದಿಯಲ್ಲಿ ಹತ್ತಿದ್ದ ಹೊೞೆಯ ನೀರು ಮುತ್ತಿನಂತೆ ಹೊಳೆಯುತ್ತಿತ್ತು.

‹ ಮರನ್, ನೆಲನ್, ಪೊಲನ್, ಕಡನ್, ಕೊಳನ್ ಪೞಗು, ಪೞೆ(ಹೞೆ) ›
  • ದಿನಕ್ಕೊಂದು ಪದ
~.~
  • Login or register to post comments
  • 114 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 31, 2008 - 7:01pm — mahesha

ಉ: ಪೊಳೆ, ಪೊೞೆ, ಹೊಳೆ, ಹೊೞೆ

mahesha's picture

ಇಲ್ಲಿ ಗಮನಿಸಿರಿ

ಪೊೞೆ = ಹೊಳೆ ಯಾಗಿ ಅಂದರೆ ಪ => ಹ ಆಗಿ ಮತ್ತು ೞ => ಳ ಆಗಿ ಮಾರ್‍ ಆಗಿರಬೋದು...!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 1, 2008 - 1:38pm — kannadakanda

ಉ: ಪೊಳೆ, ಪೊೞೆ, ಹೊಳೆ, ಹೊೞೆ

kannadakanda's picture

ನನ್ನ ನಿಟ್ಟು ’ೞ’ ಮತ್ತು ’ಳ’ ಬೇಱೆ ಬೇಱೆ ಅರ್ಥದಲ್ಲಿ ಬೞಕೆಯಲ್ಲಿರುವುದನ್ನೇ ಎತ್ತಿ ತೋಱಿಸುವುದಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 1, 2008 - 3:12pm — mahesha

ಉ: ಪೊಳೆ, ಪೊೞೆ, ಹೊಳೆ, ಹೊೞೆ

mahesha's picture

ಪ => ಹ ಆದ ಹಾಗೆ ೞ=>ಳ ಯಾಕೆ ಆಗಬಾರದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 1, 2008 - 4:46pm — kannadakanda

ಉ: ಪೊಳೆ, ಪೊೞೆ, ಹೊಳೆ, ಹೊೞೆ

kannadakanda's picture

ಪ->ಹ ಆದದ್ದು ಎಲ್ಲರ ಅಲಿಖಿತ ಅನುಮೋದನೆಯಿಂದ. ೞ->ಳ ಆದದ್ದು ಅದಱ ಉಚ್ಚಾರವ್ಯತ್ಯಾಸ ಗುಱುತಿಸಲಾಗದ ಅಸಾಮರ್ಥ್ಯದಿಂದ. ಪ->ಹ ಪ್ರಕ್ರಿಯೆ ಗುಪ್ತವಾಗಿ ’ಕವಿರಾಜಮಾರ್ಗ’ ಕಾಲಕ್ಕೆ. ಅಲ್ಲಿ ’ಹಡವರಸು’ ಎಂಬ ದೇಶೀ ಪ್ರಯೋಗದಲ್ಲಿ ಹ ಇದೆ. ಆದರೆ ೞ->ಳ ಹಾಗಲ್ಲ. ನಮ್ಮ ಅಸಮರ್ಥತೆಯಿಂದ ಬಿಟ್ಟಿದ್ದು. ಗಣಿತ ಕಷ್ಟವೆನ್ನುವ ವಿದ್ಯಾರ್ಥಿ ಗಣಿತವೇ ಬೇಡವೆಂದಂತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 1, 2008 - 4:53pm — mahesha

ಉ: ಪೊಳೆ, ಪೊೞೆ, ಹೊಳೆ, ಹೊೞೆ

mahesha's picture

ಯಾಕೆ ಆ ವ್ಯತ್ಯಾಸ ಸಮರ್ತತೆಯಾಯ್ತು ಹಲನೆಲಗನ್ನಡಿಗರಿಗೆ ಅಂತ ಯೋಚಿಸಿರಿ.

ಅದುದು ಆದುದು ಮಂದಿ ಹೆಚ್ಚು ಅವುಗಳ ನಡುವಣ ಉಲಿಬೇರೆತನವನ್ನ ಬಿಟ್ಟು ಬಿಟ್ಟಿದ್ದರಿಂದ.. ಇದೂ ಕೂಡ ಒಂದು ಉಲಿಮಾರ್ಪು ನುಡಿವಾರ್ಪು.. ಅದನ್ನ ನಾವೆಲ್ಲ ಒಪ್ಪಿದ್ದೀವಿ//

ಇದು ಕನ್ನಡದಲ್ಲಿ ಸ್ವಾಬಾವಿಕ ಮಾರ್ಪು ಹೊರತು.. ಬರಹದಲ್ಲಿ ಬಂದ ಕ್ರುತಕಗಳಲ್ಲ....

ನಿಮ್ಮ ಪ್ರಕಾರ

ಬರ್ಪುದು,ಬಪ್ಪುದು,ಬಹುದು, ಬರುವುದು ಇವುಗಳಲ್ಲಿ ಯಾವುದು ಸರಿ? ಎಲ್ಲವೂ ಆ ಆ ಕಾಲಹಂತದಲ್ಲಿ ಸರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2008 - 2:30am — hamsanandi

ಉ: ಪೊಳೆ, ಪೊೞೆ, ಹೊಳೆ, ಹೊೞೆ

hamsanandi's picture

ಕನ್ನಡ ನುಡಿಯು ಬಂದ ದಾರಿಯನ್ನು ತಿಳಿದುಕೊಳ್ಳಲು ಈ ವಿಷಯ ಒಳ್ಳೆಯದು - ಆದರೆ, ಇಂದು ಕಿವಿಗೆ ಹೊೞೆ, ಹೊಳೆ ಎರಡೂ ಹೊಳೆ ಎಂದೇ ಕೇಳುತ್ತವೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2008 - 10:04am — kannadakanda

ಉ: ಪೊಳೆ, ಪೊೞೆ, ಹೊಳೆ, ಹೊೞೆ

kannadakanda's picture

ಸೋಲಿಗರ, ಬಡಗರ ಕನ್ನಡದಲ್ಲಿ ಕೊಡವರ ಕೊಡವ (ಇದನ್ನು ನಾನು ಹೞಗನ್ನಡದ ಪ್ರಭೇದವೆಂದೇ ಭಾವಿಸುತ್ತೇನೆ) ಭಾಷೆಗಳಲ್ಲಿ ಸಹಜವಾಗೇ ಈ ’ೞ’ ಇದೆ. ಸೋಲಿಗರು ಈಗ ನಾಗರೀಕತೆಯ ಸೋಂಕಿನಿಂದ ’ೞ’ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಈ ಭಾಷೆಗಳನ್ನು ಜನ ಬರೆಯದಿರುವುದಱಿಂದ ಈ ’ೞ’ ಉೞಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತೊರೆ, ತೊಱೆ
  • ನಿತ್ಯ ನೂತನದಿ ಹೊಳೆ
  • ಒಲವಿನ ಹೊಳೆ
  • ಮಾತು ಎಂಬ ಹೊಳೆಯ ನೀರು ಬರೀ ತೀರ್ತಕ್ಕೆ ಸಾಕೇ?
  • ಮೈದಾಸ
Syndicate content

ಲೇಖಕರು

kannadakanda's picture

ಪೂರ್ಣ ಹೆಸರು
Anantha Krishna K S

ಪರಿಚಯ

I am an assistant professor in Computer Science. Very much interested in Old Kannada language.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಬಿಡ್ತಾರ್‍
  • ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
  • ಪೆಱೆ/ಹೆಱೆ
  • ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
  • must, can, may - ಕನ್ನಡದಲ್ಲಿ ಸಮಗಳೇನು?
  • ಕೆಲವು ಸಂಖ್ಯಾವಾಚಿಗಳು ಹಾಗೂ ಅವುಗಳ ಸಾಧಿತ ಪದಗಳು
  • ತೊರಡು/ತರಡು, ತೊಱಡು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shreedevikalasad
    ಉ: ಕಚೇರಿ ಎಂಬ ನರಕ-೧
    August 29, 2008 - 1:22pm
  • srinivasps
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 1:19pm
  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
ಇನ್ನಷ್ಟು


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator