ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ನಮ್ಮ ರಾಜಕಾರಣ, ಪ್ರಜಾಪ್ರಭುತ್ವದ ಪ್ರಮುಖ ಸಮಸ್ಯೆಗಳು, ತೊಂದರೆಗಳು, ಯಾವುವು ಎಂದರೆ ಅನ್ನ,ವಸತಿ,ಉದ್ಯೋಗ, ಸಾರಿಗೆ ಅದು ಇದು ಎಂದು ಹೇಳುವುದು ಬರೀ ಬಾಯಿಮಾತಿಗೆ..
ಆದರೆ ನಾಯಕರು ಅತಿಶೀಘ್ರವಾಗೇ ಪರಿಹರಿಸಬೇಕಾದುದು
ಆ ಸೇತುವೆಯನ್ನ ರಾಮ ನಿರ್ಮಿಸಿದ್ದ ಇಲ್ಲವಾ?
ಈ ಶಿವನ ಗುಹೆಗೆ ಹೋಗಬೇಕ ಬೇಡವಾ?
ಹೀಗೆ ಇವೇ...
ನಮ್ಮ ನಾಯಕರು ಮೊದಲು ಈ ಸಮಸ್ಯೆಗಳನ್ನು ಪರಿಹಿರಿಸಲೆಂದು ನನ್ನ ಆಶಯ.. ಕಡೇಪಕ್ಷ ನಂತರವಾದರೂ ಬೇರೆಡೆಗೆ ಕಾಳಜಿ ವಹಿಸುತ್ತಾರೆ ಎಂಬ ಆಶಾಭಾವ.!
ಶುಭಂ

- Login or register to post comments
- 415 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಈ ರೀತಿ ಬರಹ ನಿಮ್ಮಿಂದ ಬರತ್ತೆ ಅಂತ ಅಂದು ಕೊಂಡೆ ಇರಲಿಲ್ಲ...!
ಇದಕ್ಕೆ ಸಮನಾಗಿ ಮಾತಡೋದಾದರೆ...ಹಳೆ ಕನ್ನಡ ಬಿಡು ಈಗಿನ ಕನ್ನಡ ನಡೀತಾ ಇದೆ ಇರಲಿ ಬಿಡು ಅಂದ್ ಹಾಗೆ ಆಯಿತು ಅಲ್ವ!
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಇನ್ನೊಂದು ಹೇಳೋದು ಮರೆತಿದ್ದೆ..
ಹಿಂದೂಗಳ ಪೂಜ್ಯ ಸ್ಥಳಗಳಾದರೆ ಮಾತ್ರವೇ ಗುಲ್ಲೇಕೆ?
ಸೇತುವೆ ಸಮಸ್ಯೆ ಬಗೆ ಹರಿಸುವುದೇ? ಒಡೆದರೆ ಸರಿ ಹೋಗುವುದೇ?
ಆಗಲೀ ...ಹಾಗೆ ಮಾಡಲಿ...
ಇಲ್ಲಿ ನಮ್ಮ ಬೆಂಗಳೂರಿನಲ್ಲಿ ೮೦ ಅಡಿ ರಸ್ತೆ ಗೆ ಅಡ್ಡವಾಗಿ ಮಸೀದಿಯಿದೆ...
ಸರಕಾರ ಉರುಳಿಸುವುದೇ?
ಇದರಿಂದ ಹಲವಾರು ಸಾವಿರ ಮಂದಿಗೆ ಸಹಾಯವಾಗುತ್ತೆ...
೫-೭ ದಿನಗಳಲ್ಲೇ ಕೆಲಸ ಮುಗಿಸಬಹುದು...ಕೋಟ್ಯಾಂತರ ರೂ ಕರ್ಚು ಕೂಡ ಇಲ್ಲ
ಯಾವ ಉದ್ಯಮಿಗೂ (ಟಿ ಆರ್ ಬಾಲನ್ ಎಂದು ಓದಿ) ಇದರಿಂದ ದುರ್ಲಾಭವಿಲ್ಲ ...
ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡಿ...ಆಮೇಲೆ ಮಾತಾಡೋಣ..
ಈಗ ಹೇಳಿ ಮಹೇಶರೆ, ಮಸೀದಿ ಉರುಳಿಸಲು ನಿಮ್ಮ ಸಹಮತವಿದೆಯೇ?
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಮಹೇಶಣ್ಣ,
ಸತ್ಯವಾದ ಮಾತು.
ನಮ್ಮ ನಾಯಕರಿಗೆ ಜಾತಿ ಧರ್ಮಗಳು ಒಡೆದು, ಸಂಘಟಿಸಿ ಕೊಡುವಷ್ಟು ಓಟ್ ಬ್ಯಾಂಕನ್ನು ಬೇರಾವ ಸಂಗತಿಗಳೂ ಕೊಡುವುದಿಲ್ಲ. ಬಡತನ, ನಿರುದ್ಯೋಗ, ರೋಗ ರುಜಿನಗಳೆಲ್ಲಾ ಎಲ್ಲಾ ವರ್ಗದಲ್ಲೂ ಇವೆ. ಅವುಗಳ ಬಗ್ಗೆ ಮಾತನಾದುವುದರಿಂದ ಸಹಾನುಭೂತಿ ಸಿಕ್ಕಬಹುದೇನೋ, ಅನುಕಂಪ ದಕ್ಕಬಹುದೇನೋ ಆದರೆ ಓಟಿನ ಲಾಭವಾಗದು. ಅದಕ್ಕೇ ನಮ್ಮ ನಾಯಕರು ಅವನ್ನು ಹಂಗೇ ಬಿಟ್ಟಿರ್ತಾರೆ, ಯಾವ ಹೊಸ ಸಮಸ್ಯೆಗಳೂ ಸಿಕ್ಕಲಿಲ್ಲವೆಂದರೆ ಎತ್ತಿಕೊಳ್ಳೋಣ ಎಂದು!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ನನ್ನಿ..
ಸರಿಯಾಗಿ ಅರಿತಿರಿ...
ಸಿರಿನೆಲೆಗ ವಸಿ ಇಂಗೂ ಯೋಸ್ನೆ ಮಾಡ್ರಲ
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
> " ಸಿರಿನೆಲೆಗ "
ಇದಕ್ಕೆ ಎರಡು ಮಾತಿಲ್ಲ..ನೀವು ಹೇಳುವುದು ದಿಟವೇ...
ರಾಜಕೀಯ ಮಾಡೋವ್ರು ನೀವು ಹೇಳಿದ ಹಾಗೆ ಬಟ್ಟೆ, ಬಾರೆ, ವಸತಿ ಇತ್ಯಾದಿ ಗಮನಿಸಲಿ...
ಜಾತಿ ರಾಜ ಕಾರಣ ಬೇಡ.. ಒಪ್ಪಿದೆ...
ನಾನು ಹೇಳಿದ್ದೇ ಬೇರೆ...
ರಾಮನ ಇತಿಹಾಸ ಮುಖ್ಯ ಇಲ್ಲವ? ಹಾಗಾದ್ರೆ ಹಲ್ಮಿಡಿ ಶಾಸನದ ಇತಿಹಾಸವೂ ಮುಖ್ಯ ಇಲ್ಲ

ಸರಕಾರ ಏನು ಮಾಡುವಸ್ಟಿಲ್ಲ... ಅಲ್ಲವಾ?
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವೂ ಬೇಡ ಅಲ್ಲವೇ?
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಹಂಗಾ..
ನನ್ ಕೇಳಿ ಒಬ್ಬ ೪ ಕೋಟಿ ಕನ್ನಡಿಗರಿಗೂ ಅಟ್ ಲೀಸ್ಟ್ ೧೦೦ ವರುಶ ಅನ್ನನೀರಿಗೆ ತೊಂದರೆಯಾಗದ ಹಾಗೆ ನೋಡಿಕೋತೀವಿ, ಆದರೆ ಶಾಸ್ತ್ರೀಸ್ತಾನ ಕೊಡಲ್ಲ ಅಂದ್ರೆ ನಾನ್ ಕಣ್ಮುಚ್ಕೊಂಡು ಒಪ್ಕೋತೀನಿ...
ಕನ್ನಡ ಶಾಸ್ತ್ರೀಸ್ತಾನ ಕೊಟ್ಟರೂ ಅದು ಸಂಸ್ಕೃತಭರಿತಕ್ಕೆ ಸಿಕ್ಕಿದಂತೆ ಹೊರತು ನಮ್ಮ ಸರಕಾರ ನೆಲದ ಕನ್ನಡಕ್ಕೆ ಏನೂ ಮಾಡಲ್ಲ..
ಕನ್ನಡದ ನಿರಂತರ ಸಂಸ್ಕೃತಯೀಕರಣಕ್ಕೆ ಇನ್ನೂ ಹೆಚ್ಚು ಧನಬಲ ಬರತ್ತೆ ಅಶ್ಟೇ!
ನಮ್ಮ ಹುಡುಗರು ದಿಟವಾದ ಕನ್ನಡವನ್ನ ಕಲಿತು, ಕನ್ನಡದಿಂದೇ ಉಂಡು, ಕನ್ನಡದಿಂದಲೇ ಸಿರಿವಂತರಾಗಲಿ..
ಅದನ್ನ ಬಿಟ್ಟು ಶಾಸ್ತ್ರೀಸ್ತಾನ ಎಂದು ಕೆಲವು ಪಂಡಿತ ಶಾಸ್ತ್ರೀಗಳ ಉದ್ದಾರ ಯಾವ ಲೆಕ್ಕಕ್ಕೆ.
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
'ಶಾಸ್ತ್ರೀಯ ಸ್ಥಾನಮಾನ' ಎಂಬ ದ್ರಾವಿಡರ ಒಂದು ಬಾಣಕ್ಕೆ, ಹಲವು ಹಕ್ಕಿಗಳು !
ಓದಿರೆನ್ನ ಬೃಹಲ್ಲೇಖನವನ್ನ!
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಶಾಸ್ತ್ರೀಯ ಸ್ಥಾನ ಮಾನ ಅಂತ ಉದಾಹರಣೆ ನೀಡಿದೆ ಅಸ್ಟೇ...ಅಷ್ಟಕ್ಕೆ ನಿಲ್ಲಿಸ ಬೇಡಿ...
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
> ನನ್ ಕೇಳಿ ಒಬ್ಬ ೪ ಕೋಟಿ ಕನ್ನಡಿಗರಿಗೂ ಅಟ್ ಲೀಸ್ಟ್ ೧೦೦ ವರುಶ ಅನ್ನನೀರಿಗೆ ತೊಂದರೆಯಾಗದ ಹಾಗೆ ನೋಡಿಕೋತೀವಿ, ಆದರೆ ಶಾಸ್ತ್ರೀಸ್ತಾನ ಕೊಡಲ್ಲ ಅಂದ್ರೆ ನಾನ್ ಕಣ್ಮುಚ್ಕೊಂಡು ಒಪ್ಕೋತೀನಿ...
ಬರೀ ಶಾಸ್ತ್ರೀಯ ಸ್ಥಾನ ಮಾತ್ರ ಅಲ್ಲ ...
ಹಂಪಿ, ಬೇಲೂರು ಮುಂತಾದವು ಹಾಳಾದರೂ ಸುಮ್ಮನಿರಬೇಕು, ಕನ್ನಡ ನುಡಿಗಾಗಿ ಯಾವುದೇ ಕೆಲಸ ಮಾಡ ಬಾರದು...
ಸರಕಾರ ಏನಿದ್ದರೂ ಅನ್ನ/ನೀರಿನ ಸಮಸ್ಯೆ ಬಗೆ ಹರಿಸ ಬೇಕು...
ಒಪ್ಕೊತೀರ...?
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಇಲ್ಲ..
ಆದರೆ ನಮ್ಮ ಬೇಲೂರು ಹಂಪಿಗಳನ್ನು ಉಳಿಸುವುದೇ ಮೊದಲ ಕೆಲಸವಲ್ಲ..!!
ಒಮ್ಮೆ ನಮ್ಮ ಮುಕ್ಯಮಂತ್ರಿಗಳ ಆಯವ್ಯಯ ಒಮ್ಮೆ ನೋಡಿ..
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
> ಆದರೆ ನಮ್ಮ ಬೇಲೂರು ಹಂಪಿಗಳನ್ನು ಉಳಿಸುವುದೇ ಮೊದಲ ಕೆಲಸವಲ್ಲ..!!
ಮೊದಲ ಕೆಲಸ ಅಲ್ಲ ಆದರೆ ಮಾಡಬೇಕಾದ ಕೆಲಸ ಎಂದು ಒಪ್ಪಿಕೊಂಡಂತಿದೆ

ಹಾಗೆ ರಾಮನ ಜನುಮ ಭೂಮಿ / ಸೇತುವೆ ಮುಂತಾದವು...ಅಲ್ಲವಾ?
ಆಗಲೇ ಹೇಳಿದ ಹಾಗೆ ನಾನು ಜಾತಿ ರಾಜಕಾರಣದ ಪರವಲ್ಲ...ಆದರೆ ಎಲ್ಲ ಧರ್ಮಗಳನ್ನು ಸಮನಾಗಿ ನೋಡಲಿ...
ಉದಾ..
ಮುಸ್ಲಿಂ ಗೆ ಮೆಕ್ಕಾಗೆ ಹೋಗಲು ದುಡ್ಡು ಕೊಡ್ತಾರ..ನಾನು ಬದರಿಗೆ ಹೋಗ್ತೀನಿ, ನಂಗೂ ಕೊಡಲಿ..
ಆಂದ್ರದಲ್ಲಿ ವ್ಯಾತಿಕಾನ್ ಗೆ ಹೋಗೋದಕ್ಕೆ ದುಡ್ಡು ಕೊಡ್ತಾ ಇದಾರಂತೆ...ಇದೆಲ್ಲ ಯಾಕೆ ಬೇಕು???
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಆಯ್ತಂಣ
ನಾಂ ಸೋತೆ.. ಮೊದಲು ಅವನ್ನೇ ಮಾಡಲಿ.. ಅಂತ ತಾನೇ ಹೇಳಿರೋದು..!!
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಅಸ್ಟೇ ನಾನು ಹೇಳ್ಬೇಕಾಗಿದ್ದು
ಉದಾ ಹೇಳಿದ್ರೆ..
ಇಲ್ಲಿ ಏನಪ್ಪಾ ಆಗ್ತ ಇರೋದು ಅಂದ್ರೆ ಯಾವ ಪಕ್ಷದ ರಾಜಕಾರಣಿ ನೂ ಅನ್ನ/ನೀರು ಅಂತ ಕೆಲಸ ಮಾಡ್ತಾ ಇಲ್ಲ...ಆದ್ರೆ, ಹಂಪಿ, ಹಲ್ಮಿಡಿ ಶಾಸನ ಎಲ್ಲ ನಾಶ ಮಾಡ್ಕೊಂಡ್ ಬರ್ತಾ ಇದಾರೆ
ಅದಕ್ಕೆ ಬೇರೆ ಪಕ್ಷದೋರು ಗಲಾಟೆ ಮಾಡ್ತಾ ಇದಾರೆ ಅಸ್ಟೇ...
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಶ್ರೀನಿವಾಸ್, ಸರಿಯಾಗಿ ರಾಚಿದ್ದೀರಿ ಸೋಗಲಾಡಿಗಳಿಗೆ.
**************************
http://vikasavada.blogspot.com/
**************************
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಅಲ್ಲಾ ಸಾರ್. ನನ್ನ ವಾದ ಇರೋದು ಸಿಂಪಲ್.
ಈ ರಾಮ ಮಂದಿರವಾಗಲೀ, ರಾಮ ಸೇತುವಾಗಲೀ, ಅದೆಲ್ಲೋ ರಸ್ತೆ ಮಧ್ಯದ ಮಸೀದಿಯಾಗಲೀ ಹೊಟ್ಟೆಗೆ ಹಿಟ್ಟಿಲ್ಲದವರ, ನೆನೆಯುವ ಮಳೆಯಲ್ಲಿ ಸೂರಿಲ್ಲದವರ ಸಮಸ್ಯೆಗಳಲ್ಲ. ಅವೆಲ್ಲಾ ನಮ್ಮ ನಿಮ್ಮಂಥ ಹೊಟ್ಟೆ ತುಂಬಿದ ಮಂದಿ ಬೆಚ್ಚಗೆ ಮನೆಗಳಲ್ಲಿ ಕೂತು ಯೋಚಿಸುವಂಥ ಸಮಸ್ಯೆಗಳು. ಸರಕಾರವೂ ಅಂಥದ್ದೇ ಸಮಸ್ಯೆಗಳಿಗೆ ತನ್ನ ಸಂಪತ್ತನ್ನು ವಿನಿಯೋಗಿಸತೊಡಗುವುದು ಯಾತರ ನ್ಯಾಯ ಎನ್ನುವುದು ನನ್ನ ಪ್ರಶ್ನೆ.
ಇದರಲ್ಲಿ ಸೋಗಲಾಡಿತನವೂ ಇಲ್ಲ, ಹಿಪಾಕ್ರಸಿಯೂ ಇಲ್ಲ. ಹೊಟ್ಟೆಗೆ ಹಿಟ್ಟು ನೋಡಿಕೊಳ್ಳಿ ಆಮೇಲೆ ಜುಟ್ಟಿಗೆ ಮಲ್ಲಿಗೆಯೋ ಕನಕಾಂಬರವೋ ಎಂದು ಜಗಳವಾಡುವ. ಏನಂತೀರಿ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ನನ್ನ ಈ ಮಾತುಗಳನ್ನು ಹೇಗೆ ಬಿಟ್ಟಿರಿ...
" ಆಗಲೇ ಹೇಳಿದ ಹಾಗೆ ನಾನು ಜಾತಿ ರಾಜಕಾರಣದ ಪರವಲ್ಲ...ಆದರೆ ಎಲ್ಲ ಧರ್ಮಗಳನ್ನು ಸಮನಾಗಿ ನೋಡಲಿ..."
"ಇದಕ್ಕೆ ಎರಡು ಮಾತಿಲ್ಲ..ನೀವು ಹೇಳುವುದು ದಿಟವೇ...
ರಾಜಕೀಯ ಮಾಡೋವ್ರು ನೀವು ಹೇಳಿದ ಹಾಗೆ ಬಟ್ಟೆ, ಬಾರೆ, ವಸತಿ ಇತ್ಯಾದಿ ಗಮನಿಸಲಿ...
ಜಾತಿ ರಾಜ ಕಾರಣ ಬೇಡ.. ಒಪ್ಪಿದೆ..."
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಇದೆಲ್ಲ ಭಾಳ ಮುಖ್ಯ.
ಅನ್ನ,ವಸತಿ,ಉದ್ಯೋಗ, ಸಾರಿಗೆ ಇದಕ್ಕಂತನೆ ಕೆಲವು ಮಂತ್ರಿಗಳನ್ನು ಅದಕ್ಕಂತಾನೆ ಆಡಳಿತ ಪಡೆನು, ಅದಕ್ಕಂತ್ತನೆ ಒಂದಿಷ್ಟು ಬಡ್ಜೇಟ್ಟು ನೇಮಕ ಮಾಡಲಾಗಿದೆ.
ಇಲ್ಲಿ ವಿಷಯ ಬೇರೆ.
ನಾಗರೀಕತೆಗೆ ಆಡಳಿತಕ್ಕೆ ರಾಜಕೀಯ ಹೇಗೊ, ಆಧ್ಯಾತ್ಮಕ್ಕೆ religion ಹಾಗೆ. ಆಧ್ಯಾತ್ಮದ ರಾಜಕೀಯನೆ religion. ಬಹಳ ಮುಖ್ಯ.
ದಂಡಕಾರಣ್ಯದಲ್ಲಿ ರಾಜಕೀಯ ಇಲ್ದೆ ಆದಿ ಸಮಾಜದೋಳಗೆ ನಕ್ಸಲಿಯರು ನುಗ್ಗಿದಹಾಗೆ ಹಾಗೆ religion ಇಲ್ಲ ಅಂದ್ರೆ ದಾರಿಯಾವುದಯ್ಯ ವೈಕುಂಠಕ್ಕೆ ಅನ್ನೊ ನಮ್ಮ ಅದಿ ಸಮಾಜಕ್ಕೆ ನಕ್ಸಲಿಯರು ನುಗ್ಗುತ್ತಾರೆ. ಜನರ ಆಧ್ಯಾತ್ಮ, ಜನರ ನಂಬಿಕೆ ಜನರ ಧರ್ಮ ಇವುಗಳ ಬಗ್ಗೆ ಮೌಲ್ಯಮಾಪನೆ ಮಾಡುವುದಕ್ಕೆ ಸರ್ಕಾರದ ಯಾವುದೆ ಅಂಗಕ್ಕೆ ಯಾವ ಅರ್ಹತೆ ಇದೆ? ಇದು ಅಕ್ಕ, ಬಸವ ಮಾಡಿದ criticism ಅಲ್ಲ. ಇದು ಸೆಕ್ಯುಲರಿಸಮ್ ಅನ್ನೊ cynicism.
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಸೆಕ್ಯುಲರಿಸಂ ಬಗೆಗಿನ ಗೊಂದಲವನ್ನು ನಿಜಕ್ಕೂ ಒಪ್ಪಿಕೊಳ್ಳಬೇಕು. ಹಾಗೂ ಅದರ ಬಗ್ಗೆ ಚಿಂತಿಸಬೇಕು. ಅದಕ್ಕಿಂತ ಮೂಲಭೂತವಾದ ಪ್ರಶ್ನೆಯೆಂದರೆ ಭಾರತೀಯರು ಎಂಬುದು ಹಿಂದು ಎನ್ನುವುದಕ್ಕೆ ಸಮಾನವೋ ಅಥವಾ ಹಿಂದೂ ಎನ್ನುವುದು ಭಾರತೀಯ ಎನ್ನುವುದಕ್ಕೆ ಸಮಾನವೋ ಎಂದು.
ಮತ್ತೆ ಮೂಲಭೂತ ಪ್ರಶ್ನೆಯನ್ನು ಎತ್ತಿಕೊಳ್ಳಬೇಕು: ಹಿಂದು ಎಂದರೆ ಏನು?
______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
ಅಯ್ಯೊ..ಬೆಂಗಳೂರಾಗೆ ಬಾಂಬ್ ಬ್ಲಾಸ್ಟ್ ಆಯಿತ್ಂತ್ತೆ... ಯಡಿಯೂರಪ್ಪನ ಸರಕಾರ ಕಿತ್ ಹಾಕಿ ಅಂತಾ ಬೊಬ್ಬೆ ಹೊಡಿಯೋಣ ಸಾರ್...