ಪ್ರಿಯ ಇಸ್ಮಾಯಿಲ್,
ಕನ್ನಡದ ಶುದ್ಧತೆಯ ಬಗಗೆ ನಡೆಯುತ್ತಿರುವ ಚರ್ಚೆಗೆ ಸರಿಯಾದ ದಿಕ್ಕು ತೋರಿದ್ದೀರಿ. ಥ್ಯಾಂಕ್ಸ್. ಬೇರೆ ಬೇರೆ ಜಾಬುಗಳಲ್ಲಿರುವ ಜನ ಬಳಸುವ ಕನ್ನಡ ಇನ್ನೂ ನಿಘಂಟುಗಳ ಪವಿತ್ರ ದೃಷ್ಟಿಗೆ ಬಿದ್ದೇ ಇಲ್ಲ. ಇನ್ನು ಕನ್ನಡದ ಬದಲಾಗುತ್ತಿರುವ ಸ್ವರೂಪದ ಬಗ್ಗೆ ಚರ್ಚೆ ನಡೆಯುವುದೆಲ್ಲಿ ಬಂತು?
ಕನ್ನಡದ ಪರಿಸ್ಥಿತಿ ಕೊಂಚ ವಿಚಿತ್ರವಾಗಿದೆ. ಇಂಗ್ಲಿಷಿನಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದ ಗ್ಲಾಸರಿಗಳನ್ನು ಬಳಸುವಷ್ಟು ಅಕ್ಷರಸ್ಥರು ಇದ್ದಾರೆ. ಆದರೆ ದುಡಿಮೆಯಲ್ಲಿ ತೊಡಗಿ, ಆ ದುಡಿಮೆಯ ಮೂಲಕವೇ ಕನ್ನಡವನ್ನು ಶ್ರೀಮಂತಗೊಳಿಸುತ್ತಿರುವ ಜನಸಮುದಾಯ ಅಕ್ಷರವಂಚಿತರು. ನಾವು ಬೇರೆ ಬೇರೆ ಜಾಬುಗಳಿಗೆ ಸಂಬಂಧಿಸಿದ ನಿಘಂಟುಗಳನ್ನು ಕಷ್ಟಪಟ್ಟು ರಚಿಸಿದರೂ ಅದನ್ನು ಬಳಸಬಲ್ಲ ಜನ ಅಕ್ಷರ ಶುದ್ಧಿಯನ್ನು ಪ್ರತಿಪಾದಿಸುವ ಮಡಿವಂತರೇ! ಅವರಿಗೆ ಬದಲಾಗುತ್ತಿರುವ ಕನ್ನಡದ ಅಗತ್ಯಗಳಿಗಿಂತ ಕಲ್ಪಿತ ಅಭಿಮಾನ, ಕಲ್ಪಿತ ಶ್ರೀಮಂತಿಕೆ, ಇತ್ಯಾದಿ ಭ್ರಮೆಗಳೇ ಮುಖ್ಯ.
ವಿವಿಧ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪದಕೋಶವನ್ನು ಕನ್ನಡ ವಿವರಣೆಯೊಂದಿಗೆ ಸಂಪದದಲ್ಲಿ ಆರಂಭಿಸಬಹುದಲ್ಲವೇ? ನೀವೇ ಯಾಕೆ ಮೊದಲಿಗರಾಗಬಾರದು! ನನ್ನಂಥವರೂ ಕೈಜೋಡಿಸುತ್ತೇವೆ.
ನಾಗಭೂಷಣ
ಚರ್ಚೆಗೆ ಸರಿಯಾದ ದಿಕ್ಕು