ಸವಿಯೊದಗಿನ ದೊಡ್ಡ ಕತೆ
- ಜೊತೆಗೂಡು: "ಓದುವ ಸುಖ, ಬರೆಯುವ ಸುಖ....." By: Sunil Jayaprakash (Jan 8 2007 - 10:20am)
- ಅನುಮಾನ: ಜೊತೆಗೂಡು: "ಓದುವ ಸುಖ, ಬರೆಯುವ ಸುಖ....." By: Shyam Kishore (Jan 8 2007 - 12:43pm)
- ಸವಿಯೊದಗಿನ ದೊಡ್ಡ ಕತೆ By: Sunil Jayaprakash (Jan 8 2007 - 2:32pm)
- ಅನುಮಾನ: ಜೊತೆಗೂಡು: "ಓದುವ ಸುಖ, ಬರೆಯುವ ಸುಖ....." By: Shyam Kishore (Jan 8 2007 - 12:43pm)
- Re: "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ By: kannadiga_1956 (Jan 7 2007 - 6:00pm)

RSS:
ಸವಿಯೊದಗಿನ ದೊಡ್ಡ ಕತೆ
ಶ್ಯಾಮ್ ರವರೇ,
ಸವಿಯೊದಗಿನದೊಂದು ದೊಡ್ಡ ಕತೆ.
ಈಗ್ಗೆ ಹಿಂದೆ, ನಾನು ಮತ್ತು ನನ್ನ ಸಂಪದದ ಗೆಳೆಯರೊಬ್ಬರು Thanks ಎಂಬುದಕ್ಕೆ ಅಚ್ಚ-ಕನ್ನಡ ಪಲುಕನ್ನು ರೂಢಿ ಮಾಡಿಕೊಳ್ಳಬೇಕು ಅಂತ ಯೋಚಿಸುತ್ತಾ, ಒಂದು ದಿನ ತುಂಬಾ ಹರಟುತ್ತಿದ್ದೆವು. 
ಹಾ! ಧನ್ಯವಾದವೇನೋ ಇದೆ, ಆದರೆ ಅಚ್ಚ ಕನ್ನಡವೂ ಮಂಕಾಗಬಾರದು ನೋಡಿ
, ಆ ಕಾರಣಕ್ಕೆ ಅಚ್ಚಕನ್ನಡದ್ದೇ ಒಂದು ಒರೆಗಾಗಿ(=ಪದಕ್ಕಾಗಿ, ಪಲುಕಿಗಾಗಿ) ಹುಡುಕಾಟ ನಡೆಸುತ್ತಿದ್ದೆವು. 
ಆಗ, ನಾವಿಬ್ಬರು ಸೇರಿ ಹುಟ್ಟುಹಾಕಿದ ಪಲುಕಿದು. ಆಗ ನಾವಿಬ್ಬರು ಚರ್ಚಿಸಿದ ಸಾರಾಂಶವೇನೆಂದರೆ, thanks ಎನ್ನುವುದು, ನಮಗೆ ಬೇರೆಯವರು ಮಾಡಿರಬಹುದಾದ ಸಹಾಯ(ಅದು ಯಾವ ರೀತಿಯಲ್ಲಿ ಬೇಕಾದರೂ ಇರಬಹುದು)ವನ್ನು ಕುರಿತು ನಮ್ಮಲ್ಲಿರುವ ಭಾವ.
ಅಂದರೆ ನಮಗೆ ಸರಿಯಾದ ಸಮಯದಲ್ಲಿ ಒದಗಿಬಂದ ಸಹಾಯಕ್ಕಾಗಿ ನಾವು ಅವರಿಗೆ ಪ್ರತಿ ಸಲ್ಲಿಸುವಾಗ ನಮ್ಮಲ್ಲಿರುವ ಭಾವನೆ.
ನಿಮ್ಮ ಅನುಮಾನ ನಿಜ, ಸವಿ + ಒದಗು = ಸವಿಯೊದಗು.
ಒಂದು ರೀತಿಯಲ್ಲಿ ಇದು, ನೀನು ಮಾಡಿದ್ದು ನನಗೆ ಒಳ್ಳೆಯದನ್ನು ಉಂಟುಮಾಡಿದೆ ಅಂತ ಅವನಿಗೆ ಪ್ರತಿ ನುಡಿಯುವುದು., ಸವಿಯೊದಗು.
So, ಸವಿಯೊದಗು = ಸರಿಯಾದ ಸಮಯದಲ್ಲಿ ಒದಗಿಬಂದ ಸಹಾಯವನ್ನು ನೆನಪಿಸಿಕೊಳ್ಳುವಾಗ ತನ್ನಲ್ಲಿರುವ ಭಾವ.
ಸವಿಯೊದಗು might be same as ಧನ್ಯವಾದಗಳು might be same as "Thank you".