ಲೈಂಗಿಕ ಸ್ವಾತಂತ್ರವೊಂದರಿಂದಲೇ ಎಲ್ಲಾ ಸಮಸ್ಯೆಗಳು ಬಗೆಹರಿಯುವುದು ಅನುಮಾನ ವಿನಯ್ ಅವರೇ. ಆದರೆ, ನೀವು ಎತ್ತಿರುವ ತಾತ್ವಿಕ ಪ್ರಶ್ನೆಗಳು ಖಂಡಿತ ವಿಚಾರಾರ್ಹ.
ವೈಚಾರಿಕ ಸ್ವಾತಂತ್ರವೊಂದೇ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯ ಎಂದು ನಂಬಿರುವವಳು ನಾನು. ನೀವು ಪ್ರಸ್ತಾಪಿಸಿದ ಹೆಣ್ಣಿನಂಥ ಹಲವಾರು ಹೆಣ್ಣುಮಕ್ಕಳನ್ನು ನೋಡಿದ್ದೇನೆ. ಎಷ್ಟೋ ಜನ ಸಮಸ್ಯೆ ಎದುರಿಸಲು ಆಗದೇ ಆತ್ಮಹತ್ಯೆಗೂ ಶರಣಾಗಿದ್ದಾರೆ. ಅದು ಪರಿಹಾರವಲ್ಲ ನಿಜ. ಆದರೆ, ಸಮಾಜ ಅವಳಂಥವರಿಗೆ ಯಾವ ಪರಿಹಾರ ಉಳಿಸಿತ್ತು ಹೇಳಿ?
ನೀಚತನ ನಮ್ಮ ನಡುವೇ ಇರುತ್ತದೆ. ಆದರೆ, ನಮ್ಮನ್ನು ನಾವು ಒಳ್ಳೆಯವರು, ಸುಧಾರಣಾವಾದಿಗಳು, ಆಧುನಿಕರು ಅಂದುಕೊಂಡಿರುತ್ತೇವೆ. ಇನ್ನೊಬ್ಬರು ನಮ್ಮ ದೋಷ ತೋರಿಸಿದಾಗ ಅದನ್ನು ಒಪ್ಪಿಕೊಳ್ಳುವುದಿಲ್ಲ. ಮನಸ್ಸನ್ನು ಅರಳಿಸದ, ಚಿಂತನೆಗೆ ಹಚ್ಚದ, ಅದನ್ನು ಗಟ್ಟಿಗೊಳಿಸಲು ಸಹಕರಿಸಿದ ಎಲ್ಲ ಪ್ರಯತ್ನಗಳೂ ವ್ಯರ್ಥ. ಅದು ಬರವಣಿಗೆಯಾಗಿರಬಹುದು, ಕಾರ್ಯಕ್ರಮವಾಗಿರಬಹುದು, ಭಾಷಣ, ಯೋಜನೆಗಳಾಗಿರಬಹುದು ಎಲ್ಲ ವ್ಯರ್ಥವಾಗುತ್ತವೆ.
ಗಂಡಸು ಬಸುರಿಯಾಗಿದ್ದರೆ ಎಂಬ ವಿಚಾರ ಲಹರಿ ಒಳ್ಳೆಯದೇ. ಆದರೆ, ಅದು ಕೂಡಾ ಸಮಸ್ಯೆಗೆ ಪರಿಹಾರ ಹುಡುಕುವುದಿಲ್ಲ. ಹುಟ್ಟುತ್ತಲೇ ಲಿಂಗಾಧರಿತ ತಾರತಮ್ಯ ತೋರುವುದು ಮೊದಲು ಬದಲಾಗಬೇಕು ಎಂಬುದು ನನ್ನ ಅನಿಸಿಕೆ.
ಉ: ಗಂಡಸರೂ ಬಸುರಿ ಆಗುವುದಾಗಿದ್ದರೆ...?!

- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...