ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
- ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು! By: hamsanandi (Aug 8 2008 - 10:21pm)
- ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು! By: uniquesupri (Aug 9 2008 - 10:17am)
- ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು! By: shreedevikalasad (Aug 9 2008 - 1:52pm)
- ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು! By: uniquesupri (Aug 9 2008 - 10:17am)

RSS:
ಉ: ಗ್ರಹಣ ಬಿಟ್ಟಲ್ಲಿ ನನ್ನ ವಿಜ್ಞಾನ ನಿಂತಿತ್ತು!
"‘ಗ್ರಹಣ ಹಿಡಿಯುವ ಸಮಯದಲ್ಲಿ ಊಟ ಮಾಡುವುದಿರಲಿ,
ಒಂದು ಹನಿ ನೀರನ್ನೂ ಕುಡಿಯಬಾರದು.’ ‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು
ಹೊರಬರುತ್ತವೆ, ಮನೆಯಿಂದ ಹೊರಬರಬಾರದು’, ‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು,
ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’, ‘ಗ್ರಹಣ ಹಿಡಿದಾಗ ಮನೆಯಲ್ಲಿನ ನೀರಿನ ತೊಟ್ಟಿ,
ಟ್ಯಾಂಕು, ಫಿಲ್ಟರುಗಳಲ್ಲಿ ತುಳಸಿ ದಳ ಹಾಕಬೇಕು’ , ‘ಗ್ರಹಣ ಬಿಟ್ಟ ಕೂಡಲೇ ಸ್ನಾನ
ಮಾಡಬೇಕು’ "
ಇಷ್ಟು ಮಾತುಗಳಲ್ಲಿ ಒಂದೆರಡು ಮಾತ್ರ ವಿಚಾರಿಸಲು ತಕ್ಕವು.
‘ಸೂರ್ಯನಿಗೆ ಗ್ರಹಣ ಅಪಾಯಕಾರಿ ವಿಕಿರಣಗಳು ಹೊರಬರುತ್ತವೆ’
---> ನಿಜ ಹೇಳಬೇಕೆಂದರೆ ಸೂರ್ಯನಿಂದ ಗ್ರಹಣ ಕಾಲದಲ್ಲಿ ಮಾತ್ರವಲ್ಲ, ಎಲ್ಲ ಹೊತ್ತಿನಲ್ಲೂ ಅಪಾಯಕಾರಿ ವಿಕಿರಣಗಳು ಬರುತ್ತಿರುತ್ತವೆ. ಹಾಗಾಗಿ, ಯಾವಾಗಲೂ ಸೂರ್ಯನನ್ನು ದಿಟ್ಟಿಸಿ ನೋಡಬಾರದು.
‘ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು, ನೋಡಿದರೆ ಕಣ್ಣುಗಳು ಹೋಗಿಬಿಡುತ್ತವೆ’
----> ಇದೂ ಕೂಡ ಹಿಂದಿನ ಸಾಲಿನಂತೆಯೇ. ಯಾವ ಸಮಯದಲ್ಲಾದರೂ ಸೂರ್ಯನನ್ನು ಬಹುಕಾಲ ದಿಟ್ಟಿಸಿ ನೋಡ ಬಾರದು ಅಂದಾಗ ಅದು ಗ್ರಹಣಕಾಲವನ್ನೂ ಸೇರಿಸಿಕೊಳ್ಳುತ್ತೆ.
ಯಾಕೋ ತೊಂಬತ್ತರ ದಶಕದ ನಂತರ ಟಿವಿ ರೇಡಿಯೋಗಳಲ್ಲಿ ಗ್ರಹಣವನ್ನು ಬರಿಗಣ್ಣಿಂದ ನೋಡಬೇಡಿ ಎಂಬ ಸಲಹೆ ಪ್ರಸಾರವಾಗತೊಡಗಿದ ಬಳಿಕ ’ಗ್ರಹಣ’ವಾದಿಗಳು, "ಹ್ಹ! ನೋಡಿ, ಇದನ್ನೇ ನಾವೂ ಹೇಳ್ತಿದ್ದಿದ್ದು ಸಾವಿರ ವರ್ಷದಿಂದ’ ಅಂತ ತಮ್ಮ ಭುಜ ತಾವೇ ತಟ್ಟಿಕೊಳ್ಳುತ್ತಿದ್ದಾರೆ!
ಸೂರ್ಯ ಮುಳುಗುವ ಸಮಯದಲ್ಲಿ (ಅಂದರೆ ಬೆಳಕು ಪ್ರಖರವಿಲ್ಲದಿರುವಾಗ) ನಡೆಯುವ ಗ್ರಹಣಗಳನ್ನು ಬರಿಗಣ್ಣಿಂದ ನೋಡಬಹುದು
ಬೇಕಾದರೆ ಯಾರಾದರೂ ಕಣ್ಣಿನ ವೈದ್ಯರನ್ನು ಕೇಳಿ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/