ಉ: ಧಾರವಾಡದ ಕೋಗಿಲೆ
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 10:56am)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shylaswamy (Aug 27 2008 - 8:58am)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: rameshbalaganchi (Aug 4 2008 - 5:13pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)
- ಉ: ಧಾರವಾಡದ ಕೋಗಿಲೆ By: shylaswamy (Aug 4 2008 - 11:16pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)

RSS:
ಉ: ಧಾರವಾಡದ ಕೋಗಿಲೆ
ಶ್ರೀದೇವಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಮೊದಲು ಧನ್ಯವಾದಗಳು. ಅದನ್ನು ಜಿಂಝೋಟಿ ಅಂತಾ ಬಹುಷಹ ಹಿಂದೂಸ್ತಾನಿಲಿ ಹೇಳ್ತಾರೇನೋ ನಾನು ಕರ್ನಾಟಕ ಪದ್ಧತಿಯಲ್ಲಿ ಝುಂಝೋಟಿ ಎಂದು ಒಂದು ರಾಗ ಇದೆ. ಅದು ಮನಸಿನಲ್ಲಿ ಇತ್ತು. ಎರಡರದ್ದೂ ಒಂದೇ ಸ್ಕೇಲಾ ಅಥವಾ ಬೇರೆನಾ ಗೊತ್ತಿಲ್ಲ. ಕರ್ನಾಟಕ ಪದ್ಧತಿಯ ಸ್ಕೇಲ್ ಹೀಗಿದೆ. ಈ ರಾಗವನ್ನು ಮಧ್ಯಮ ಶೃತಿಯಲ್ಲಿ ಹಾಡುತ್ತೇವೆ. ಇದರ ಸ್ಕೇಲ್ ಹೀಗಿದೆ.
ಆ:- ಪಧ2ಸರಿ2ಗ3ಮ1ಪಧ2
ಅವ:-ನಿ2ಧ2ಪಮ1ಗ3ರಿ2ಸ (ನಿ2ಧ2ಪಧ2ಸ) ಆವರ್ತ ಹಾಕಿರುವ ಸ್ವರಗಳು ಮಂದ್ರ ಸ್ಥಾಯಿ ಸ್ವರಗಳು ಅವುಗಳಿಗೆ ಕೆಳಗೆ ಚುಕ್ಕಿ ಇಡೊದಕ್ಕೆ ಇಲ್ಲಿ ನನಗೆ ಬರಲಿಲ್ಲ. ಇದರಲ್ಲಿ ತಾರಸ್ಥಾಯಿ ಸಂಚಾರಗಳು ಇಲ್ಲ. ಗಾಂಧಾರ, ಕಾಕಲಿನಿಷಾದಗಳು ಸಂದರ್ಭಾನುಸಾರ ಬರುತ್ತವೆ. ಇದು ಭಾಷಾಂಗ ರಾಗ. ಹಿಂದೂಸ್ತಾನಿಯ ಝಿಂಝೋಟಿಯೂ ಹೆಚ್ಚುಕಡಿಮೆ ಈರಾಗವನ್ನೇ ಹೋಲಬಹುದೇನೊ ಎಂದು ನನ್ನ ಅನಿಸಿಕೆ. ತಿಳಿದವರು ಯಾರಾದರೂ ಈ ಅನುಮಾನ ಪರಿಹರಿಸಿದರೆ ಅನುಕೂಲ ಅಲ್ಲವೇ? ಧನ್ಯವಾದಗಳು ಶ್ರೀದೇವಿಯವರೆ.
ಶೈಲಾಸ್ವಾಮಿ