ಉ: ಧಾರವಾಡದ ಕೋಗಿಲೆ
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 10:56am)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shylaswamy (Aug 27 2008 - 8:58am)
- ಉ: ಧಾರವಾಡದ ಕೋಗಿಲೆ By: hamsanandi (Aug 27 2008 - 6:40am)
- ಉ: ಧಾರವಾಡದ ಕೋಗಿಲೆ By: shreedevikalasad (Aug 5 2008 - 12:49pm)
- ಉ: ಧಾರವಾಡದ ಕೋಗಿಲೆ By: shylaswamy (Aug 5 2008 - 12:37pm)
- ಉ: ಧಾರವಾಡದ ಕೋಗಿಲೆ By: rameshbalaganchi (Aug 4 2008 - 5:13pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)
- ಉ: ಧಾರವಾಡದ ಕೋಗಿಲೆ By: shylaswamy (Aug 4 2008 - 11:16pm)
- ಉ: ಧಾರವಾಡದ ಕೋಗಿಲೆ By: hamsanandi (Aug 4 2008 - 11:01pm)

RSS:
ಉ: ಧಾರವಾಡದ ಕೋಗಿಲೆ
ಸೊಗಸಾಗಿ ಬರೆದಿದ್ದೀರ. ಮತ್ತೆ, ಗಂಗೂಬಾಯಿಯವರ ಹೆಚ್ಚಿನ ಪರಿಚಯ ಮಾಡಿಸಿದ್ದು ಧನ್ಯವಾದಗಳು.
ಇನ್ನೊಂದು ವಿಷಯ ಹೇಳಬಯಸುವೆ:
"ಆದರೆ ಇಲ್ಲಿ ನನ್ನದು ಒಂದು ಅನಿಸಿಕೆ. ಅದು ತಪ್ಪಿದ್ದರೂ ಇರಬಹುದು. ತಾಯಿಯ ಈ ತ್ಯಾಗದ ಅವಶ್ಯಕತೆ ಇತ್ತೆ? ಅವರವರ ಪದ್ಧತಿಯಲ್ಲಿ ಅವರವರು ಹಾಡಬಹುದಾಗಿತ್ತಲ್ಲವೇ? ಎರಡು ಪದ್ಧತಿಗಳನ್ನೂ ಒಬ್ಬರೇ ಕಲಿತ ಶ್ರೀಮತಿ ಶ್ಯಾಮಲಾ ಬಾವೆಯಂತಹಾ ವಿದ್ವಾಂಸರು ಯಾವ ಪದ್ಧತಿಗೂ ಚ್ಯುತಿ ಬಾರದಂತೆ ಸುಂದರವಾಗಿ ಹಾಡುವುದನ್ನು ನಾವು ಕೇಳಿಲ್ಲವೇ?"
ನೀವು ಹೇಳುವುದು ನಿಜವಾದರೂ ಅದರಲ್ಲಿರುವ ತ್ಯಾಗ ಇನ್ನೂ ಮೇಲ್ಮಟ್ಟದ್ದು ಎಂದು ನನಗನಿಸುತ್ತೆ. ಮುಖ್ಯವಾಗಿ ಅದು ಶೈಲಿಯಲ್ಲಿ ಬದಲಾವಣೆಯಿಂದ ಆಗುವ ತೊಂದರೆಗಿಂತ, ತಾನೂ ಕಚೇರಿ ಕಾರ್ಯಕ್ರಮಗಳನ್ನು ಮಾಡುತ್ತ ಮಗಳ ಸಂಗೀತದ ಮೇಲೆ ಎಲ್ಲಿ ಕೊಡಬೇಕಾದಷ್ಟು ಗಮನ ಕೊಡದೇ ಹೋದರೆ ಎನ್ನುವ ಭಾವನೆಯಿಂದ ಇರಬಹುದು. ಆ ಕಾರಣಕ್ಕಾಗೇ ತಮ್ಮ ಸಂಗೀತ ಜೀವನವನ್ನೇ ಅವರು ಪಕ್ಕಕ್ಕಿಟ್ಟರೇನೋ ಎನ್ನಿಸುತ್ತೆ.
ಎಷ್ಟೋ ಜನ ಪ್ರಸಿದ್ಧ ಸಂಗೀತಗಾರರ ಮಕ್ಕಳು(ಅಥವಾ ಪ್ರಮುಖ ಶಿಷ್ಯರು) ಬಹಳ ಸೊಗಸಾದ ಸಂಗೀತಗಾರರಾಗಿದ್ದರೂ, ತಮ್ಮ ತಂದೆ/ತಾಯಿ/ಗುರುಗಳ ನೆರಳಿಂದ ಹೊರಬರಲಾಗದೇ, ನಿಜವಾಗಿ ಅವರಲ್ಲಿರುವ ಪ್ರತಿಭೆಗೆ ಪುರಸ್ಕಾರ ಸಿಗದೇ ಹೋಗಿರುವ ಹಲವಾರು ಉದಾಹರಣೆಗಳಿವೆ. ಬಹುಶಃ ತಾವು ಅಂತಹ ಒಂದು ಉದಾಹರಣೆಯಾಗಬಾರದೆಂದು ಗಂಗೂಬಾಯಿಯವರ ತಾಯಿ ಎಣಿಸಿದ್ದರೋ ಏನೋ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/