ಉ: ರಾಜೇಶ್ vs ರಾಜ್
- ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 9:43am)
- ಉ: ರಾಜೇಶ್ vs ರಾಜ್ By: kalpana (Jul 15 2008 - 10:03pm)
- ಉ: ರಾಜೇಶ್ vs ರಾಜ್ By: kalpana (Jul 15 2008 - 12:00am)
- ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 9:11am)
- ಉ: ರಾಜೇಶ್ vs ರಾಜ್ By: kalpana (Jul 15 2008 - 9:59pm)
- ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 8:56am)
- ಉ: ರಾಜೇಶ್ vs ರಾಜ್ By: kalpana (Jul 15 2008 - 9:11pm)
- ಉ: ರಾಜೇಶ್ vs ರಾಜ್ By: Sunil Jayaprakash (Jul 16 2008 - 12:36pm)
- ಉ: ರಾಜೇಶ್ vs ರಾಜ್ By: kalpana (Jul 16 2008 - 9:01pm)
- ಉ: ರಾಜೇಶ್ vs ರಾಜ್ By: Sunil Jayaprakash (Jul 16 2008 - 12:36pm)
- ಉ: ರಾಜೇಶ್ vs ರಾಜ್ By: kalpana (Jul 15 2008 - 9:11pm)
- ಉ: ರಾಜೇಶ್ vs ರಾಜ್ By: Sunil Jayaprakash (Jul 15 2008 - 9:11am)
- ಉ: ರಾಜೇಶ್ vs ರಾಜ್ By: roopablrao (Jul 14 2008 - 2:06pm)
- ಉ: ರಾಜೇಶ್ vs ರಾಜ್ By: kpbolumbu (Jul 14 2008 - 1:19pm)
- ಉ: ರಾಜೇಶ್ vs ರಾಜ್ By: varunbhatbm (Jul 14 2008 - 5:12am)

RSS:
ಉ: ರಾಜೇಶ್ vs ರಾಜ್
"ರಾಜೇಶ್ ಮತ್ತು ರಾಜ್" ಬಗ್ಗೆ ನನ್ನ ಎರಡು ಅನಿಸಿಕೆಗಳು. ಮೊದಲು ನಿಜ ಒಪ್ಕೊಳ್ಳೋಣ. ನಾನು ಇವರಿಬ್ಬರೂ ನಟರ ಅಭಿಮಾನಿ, ಅತ್ವಾ ಬೀಸಣಿಗೆ. ಹೌದು.
೧. ರಾಜೇಶರಿಗಿಂತ ಹೆಚ್ಚು ಸಿನಿಮಾಗಳನ್ನು ಡಾ|ರಾಜ್ ಮಾಡಿದ್ದಾರೆ. ಹೌದು!!!!! ಆದರೆ, ಇಲ್ಲಿ ಗಮನಿಸಬೇಕಾದ್ದು, ಡಾ|ರಾಜ್, ರಾಜೇಶ್ ಅಷ್ಟೇ ಅಲ್ಲ, ಬೇರೆಲ್ಲರಿಗಿಂತಲೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಆದ್ದರಿಂದ, ರಾಜ್ ಹಾಗು ರಾಜೇಶರನ್ನು ಎಷ್ಟು ಸಿನಿಮಾ ಮಾಡಿದ್ದಾರೆ ಎಂಬುದನ್ನು ಮುಂದಿಟ್ಟುಕೊಂಡು, ರಾಜೇಶರು ಅವಕಾಶವಂಚಿತರು ಅನ್ನೋಕ್ಕೆ ಆಗಲ್ಲ. ದಯವಿಟ್ಟು ಕನ್ನಡದಲ್ಲಿ ಆಗ ಬಿಡುಗಡೆಯಾಗುತ್ತಿದ್ದ, ಸಿನಿಮಾಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಿ.
೨. ಬರಿಯ ನಟನೆಯಿಂದ ರಾಜ್ ಎಲ್ಲರನ್ನೂ ಹಿಂದೆ ಹಾಕಿದರೆ ? ನಿಸ್ಸಂಶಯವಾಗಿ ಹೇಳಬಲ್ಲೆ, ಹೌದು. ಏಕೆಂದರೆ ರಾಜರಿಗೆ ದಕ್ಕಿದ ಪಾತ್ರಗಳು ಹಾಗಿದ್ದವು. ತೆರೆಮರೆಯಲ್ಲಿ ಇದ್ದುಕೊಂಡು ಯಾರೂ ಕೂಡ ಒಂದು ನಾಡಿನ ದೊಡ್ಡ ಶಕ್ತಿಯಾಗಿ ಬೆಳೆಯೋದು ಸಾಧ್ಯ ಇಲ್ಲ, ಕಣ್ರೀ.
೩. ರಾಜೇಶರಿಗೆ ಗತ್ತು, ಮುಖಚರ್ಯೆ, ಎತ್ತರ, ನಟನಾ ಸಾಮರ್ಥ್ಯ ಎಲ್ಲವೂ ಇತ್ತು, ಆದರೆ ನಾನು ಒಂದು ಸೂಕ್ಷ್ಮ ಅಂಶವನ್ನು ಗಮನಿಸಿದ್ದೇನೆ. ಅವರ ಚಿತ್ರಗಳಲ್ಲಿ ಮಾತುಕತೆಗಿಂತ ಡಿಸ್ಕಶನ್ ಹೆಚ್ಚು. ಹಿಂದಿನ ಕನ್ನಡ ಸಿನಿಮಾಗಳಲ್ಲಿ, ಸಂಸ್ಕೃತ ಪದಬಳಕೆ ಹೆಚ್ಚು. ಸಂಸ್ಕೃತದ ಪದಗಳನ್ನು ಡಾ|ರಾಜರು ಸ್ವಾಭಾವಿಕವೇನೋ ಎನ್ನುವಂತೆ ಹೇಳುತ್ತಿದ್ದರು. ಆದರೆ ರಾಜೇಶರು ಈ ರೀತಿಯ ಸಂಸ್ಕೃತ ಪದಗಳನ್ನು ಬಳಸಿದಾಗ, ಅದೆಲ್ಲೋ ಕೃತಕ ಅಂತ ತಕ್ಷಣಕ್ಕೆ ಗೊತ್ತಾಗತ್ತೆ. (ಬೇಕಿದ್ದರೆ ನೋಡಿ, ನನಗೆ ಸಿನಿಮಾ ಹೆಸರು ಗೊತ್ತಿಲ್ಲ, ಆದರೆ ರಾಜೇಶ್ ಒಬ್ಬಳು ಸೂಳೆಯನ್ನು ಗರತಿಯನ್ನಾಗಿ ಮಾಡಿ ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸುವ ಒಂದು ಫಿಲಮ್ ಇದೆ. ಅಲ್ಲಿ ಮಾತುಗಳು ಡಿಸ್ಕಶನ್, ಚರ್ಚೆ ಎನ್ನುವಂತೆ ಇರುತ್ತದೆ). ಡಾ|ರಾಜ್ ರವರು ಕೃತಕವಲ್ಲದ ರೀತಿಯಲ್ಲಿ, ಲೀಲಾಜಾಲವಾಗಿ ತೂಕದ ಸಂಸ್ಕೃತ ಪದಗಳನ್ನು ಬಳಸುವ ಶೈಲಿ ತುಂಬಾ ಕಷ್ಟ ಸಿಗೋದು.
ನೋಡಿ, ರಾಜೇಶರು ಡಾ|ರಾಜರ ಸಿನಿಮಾ ನೋಡಿರ್ತಾರೆ. ಡಾ|ರಾಜ್, ರಾಜೇಶರನ್ನು ನೆನೆಸಿಕೊಂಡಿರ್ತಾರೆ. ಆದರೆ ನಾವು ಇಂತಹ ಆನ್ಲೈನ್ ವೇದಿಕೆಗಳಲ್ಲಿ ಹೊಡ್ದಾಡ್ತೀವಿ, ಅವ್ನು ಇವ್ನನ್ನು ತುಳ್ದಬಿಟ್ಟ, ಅವನು ಅವಕಾಶವಂಚಿತ, ಹಾಗೆ ಹೀಗೆ ಅಂತ. ಚಿತ್ರರಂಗ ಒಂದು ಸ್ಪರ್ಧೆ, ಸ್ಪರ್ಧೆಯಲ್ಲಿ ರಾಜ್ ಜನಮನ ಗೆದ್ದರು, ಅಷ್ಟೇ, ಅಂತ ಯಾಕೆ ಅರ್ಥ ಮಾಡ್ಕೊಳಲ್ಲ.