ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: Jayalaxmi.Patil (Jul 9 2008 - 3:22pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: kalpana (Jul 9 2008 - 12:02am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 9 2008 - 4:01am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: benaka (Jul 9 2008 - 8:51pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 9 2008 - 9:24pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: benaka (Jul 10 2008 - 2:15am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 11 2008 - 3:42am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: ಸಂಗನಗೌಡ (Jul 10 2008 - 5:58pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: benaka (Jul 10 2008 - 8:16pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: ಸಂಗನಗೌಡ (Jul 10 2008 - 6:01pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: benaka (Jul 10 2008 - 2:15am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 9 2008 - 9:24pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 9 2008 - 4:08am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: benaka (Jul 9 2008 - 8:51pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: kalpana (Jul 9 2008 - 12:19am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: Sunil Jayaprakash (Jul 9 2008 - 8:35am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: kalpana (Jul 9 2008 - 8:58am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: Sunil Jayaprakash (Jul 9 2008 - 10:48am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: kalpana (Jul 9 2008 - 8:58am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 9 2008 - 4:02am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: savithru (Jul 9 2008 - 12:37pm)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: Sunil Jayaprakash (Jul 9 2008 - 8:35am)
- ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ? By: hamsanandi (Jul 9 2008 - 4:01am)

RSS:
ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
ಪ್ರಿಯ ಹಂಸಾನಂದಿ,ಕಲ್ಪನಾ,
ಸೂರ್ಯಸಿದ್ಧಾಂತದಲ್ಲಿ ನಂಬತಕ್ಕ ಹಾಗೂ ನಂಬಲಾಗದ ಎಷ್ಟೋ ಸಂಗತಿಗಳಿವೆ. ಇದನ್ನು ಬರೆದವರಾರೋ ತಿಳಿಯದು!
ಈ ಮೇಲಿನ ರಾಕ್ಷಸ-ದಕ್ಷಿಣ ವಿಚಾರಕ್ಕೆ ಬಂದರೆ, ಇದೊಂದೇ ಗ್ರಂಥದಿಂದ ತಿಳಿಯಲು ಅಸಾಧ್ಯವೆನಿಸುತ್ತದೆ.
ಆದರೆ, ಸಮಕಾಲೀನವಿರಬಹುದೆಂದು ತಿಳಿದುಕೊಂಡಿರುವ ಇತರ ಸಿದ್ಧಾಂತ (ವಿಶೇಷವಾಗಿ ರೋಮಕ ಸಿದ್ಧಾಂತ)ಗಳ ತುಲನಾತ್ಮಕ ಅಧ್ಯಯನದಿಂದ ಕೆಲವು ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ, ಬೀಳುತ್ತಿವೆ.
ತಮಾಷೆಯೋ, ಅಚ್ಚರಿಯೋ, ಇದಕ್ಕೂ ತಮಿಳು-ಕನ್ನಡದ ಹುಟ್ಟಿಗೂ ಸಂಬಂಧವಿದೆಯೆಂದರೆ ಅದ್ಭುತವೆನಿಸದಿರದು! ದಕ್ಷಿಣ ಎಂಬುದನ್ನು ಅಂಟಾರ್ಟಿಕ ಎಂದಷ್ಟೇ ಅಲ್ಲದೆ ’ಲೆಮೂರಿಯಾ’ ಖಂಡವೆನ್ನುವವರಿದ್ದಾರೆ.
ಭಾರತದ ಥಿಯೋಸಾಫಿಕಲ್ ಸೊಸೈಟಿಯ ಆಧಾರಸ್ತಂಭವಾಗಿದ್ದ ಮೇಡಂ ಬ್ಲಾವಾತ್‍ಸ್ಕೀ ಈ ತುಲನಾತ್ಮಕ ಅಧ್ಯಯನದಿಂದ ಹೊರತಂದ ’ಡಿಝೈನ್’(ಧ್ಯಾನದ ಅಪಭ್ರಂಶ) ನಲ್ಲಿ ಲೆಮೂರಿಯಾ ಅಥವಾ ’ಕುಮಾರೀಖಂಡ’ದ ಬಗ್ಗೆ ವಿವರಿಸುತ್ತಾರೆ! ಕನ್ಯಾಕುಮಾರಿಯ ದಕ್ಷಿಣದಲ್ಲಿತ್ತೆಂದು ನಂಬಲಾದ ಈ ಕುಮಾರೀಖಂಡವನ್ನೇ ತಮಿಳರು ತಮ್ಮ ಜನಾಂಗದ ಮೂಲನೆಲವೆಂದೂ, ತಾಯ್ನಾಡೆಂದೂ ತಿಳಿದಿರುವುದು!
ಇದಕ್ಕೆ ಹೌದೆನ್ನಬೇಕೋ, ಇಲ್ಲವೆನ್ನಬೇಕೋ ತಿಳಿಯದು; ಆದರೆ ಇದು ಅರ್ಧಸತ್ಯವೆಂದು ಮಾತ್ರ ಹೇಳಬಲ್ಲೆ. ಈ ತೆಂಕಣನಾಡಿಗೂ, ಸೂರ್ಯಸಿದ್ಧಾಂತಕ್ಕೂ ಇರುವ ಸಂಬಂಧವನ್ನು ಮೇಡಂ ಬ್ಲಾವಾತ್‍ಸ್ಕೀ ಚೆನ್ನಾಗಿ ವರ್ಣಿಸುತ್ತಾರೆ! ಆದ್ದರಿಂದ ಸೂರ್ಯಸಿದ್ಧಾಂತದ ’ದಕ್ಷಿಣ’ದ ಜನಾಂಗಕ್ಕೂ, ಕುಮಾರೀಖಂಡಕ್ಕೂ, ಮೇಡಂ ಬ್ಲಾವಾತ್‍ಸ್ಕೀ ಅವರ ’ಸಪ್ತಜನಾಂಗ’ ವಾದಕ್ಕೂ, ’ಸಪ್ತದ್ವೀಪಾ ವಸುಂಧರಾ’ ಎಂಬ ವೇದ ಮಂತ್ರಕ್ಕೂ ನಂಟಿದೆ!
ಸೂರ್ಯಸಿದ್ಧಾಂತದ ಕಾಲ ಅದರಲ್ಲೇ ಹೇಳಿರುವಂತೆ ಕೃತಯುಗದ ಕೊನೆ! 2,164,960 ವರ್ಷಗಳ ಹಿಂದೆ ಸೂರ್ಯನಿಂದ ಮಯ ಎಂಬ ಅಸುರನಿಗೆ ಕೊಡಲ್ಪಟ್ಟದ್ದಂತೆ. ಈ ಮಯನೇ ರಾವಣನ ಮಾವ, ಮಂಡೋದರಿಯ ತಂದೆ! ಸುತ್ತಿ ಬಳಸಿ ಮತ್ತೆ ತೆಂಕಣದ ಲಂಕೆಗೇ ಬರುತ್ತದೆ ಬೇರು! ಆಸಕ್ತರು ಮೇಡಂ ಬ್ಲಾವಾತ್‍ಸ್ಕೀಯವರ ಪುಸ್ತಕಗಳನ್ನು ಓದಿನೋಡಿ ಎಂದು ಹೇಳಬಹುದಿತ್ತು; ಆದರೆ ಇಲ್ಲಿಂದ ಆರಂಭಿಸಿದರೆ, ಸತ್ಯವೇ ತಿಳಿಯದೆ ಕಳೆದುಹೋಗುವ ಅಪಾಯವಿದೆ! ಆದ್ದರಿಂದ ಭಾರತೀಯ ಭಾಷ್ಯಕಾರರಿಂದ ಆರಂಭಿಸುವುದು ಒಳ್ಳೆಯದು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.