ಉ: ಹೆಂಡತಿ-ಎಂದರೆ ಜೋಕು ಯಾಕೆ ?
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: vallish Rao (Sep 17 2008 - 10:10am)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: nagesamrat (Jul 8 2008 - 1:20pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: ಸಂಗನಗೌಡ (Sep 17 2008 - 6:19pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 6 2008 - 10:35pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: kalpana (Jul 7 2008 - 9:59pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 7 2008 - 10:47pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Guruprasadkr (Jul 8 2008 - 12:05pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 7 2008 - 10:47pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: kalpana (Jul 7 2008 - 9:59pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 6 2008 - 10:29pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: roopablrao (Jul 7 2008 - 3:56pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: ಶ್ರೀನಿವಾಸ ವೀ. ಬ೦ಗೋಡಿ (Jul 7 2008 - 3:39pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: kalpana (Jul 6 2008 - 9:24pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 6 2008 - 10:27pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: ಗಣೇಶ (Jul 6 2008 - 12:15am)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: roopablrao (Jul 7 2008 - 3:51pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: ಗಣೇಶ (Jul 7 2008 - 11:13pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: roopablrao (Jul 7 2008 - 3:51pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: hamsanandi (Jul 5 2008 - 9:29am)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: hamsanandi (Jul 8 2008 - 12:52am)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 4 2008 - 5:09pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: cmariejoseph (Jul 4 2008 - 6:20pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: Sunil Jayaprakash (Jul 4 2008 - 5:02pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: yuvapremi (Jul 4 2008 - 4:50pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: mahesha (Jul 4 2008 - 3:24pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: mahesha (Jul 4 2008 - 3:10pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: roopablrao (Jul 4 2008 - 3:14pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: mahesha (Jul 4 2008 - 3:22pm)
- ಉ: ಹೆಂಡತಿ-ಎಂದರೆ ಜೋಕು ಯಾಕೆ ? By: roopablrao (Jul 4 2008 - 3:14pm)

RSS:
ಉ: ಹೆಂಡತಿ-ಎಂದರೆ ಜೋಕು ಯಾಕೆ ?
ಒಳ್ಳೆಯ ವಿಷಯ. ಮದುವೆಗೆ ನಂಟಾದ ನನ್ನೆ ಕೆಲವು ಅನಿಸಿಕೆಗಳು (*)
೧. ಮದುವೆಯಾಗುವುದರಿಂದ ಸ್ವಾತಂತ್ರ್ಯ (ಅದೂ ಮುಖ್ಯವಾಗಿ ಹೆಂಗಳೆಯರಿಗೆ) ಹೋಗುತ್ತದೆ ಎಂಬ ಕಾನ್ಸೆಪ್ಟಿನಲ್ಲಿ ನನಗೆ ವಿಶ್ವಾಸ ಮೂಡಿಲ್ಲ. ಒಂದು ಮದುವೆ ಓರ್ವ ಹೆಣ್ಣಿನ ಬಾಳಿನಲ್ಲಿ ಅದೆಷ್ಟು ಧೈರ್ಯ ತುಂಬುತ್ತದೆ ಎಂಬುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಧೈರ್ಯವನ್ನು ಬೇಬೇರೆ ಆಯಾಮಗಳಿಂದ ನೋಡಬೇಕು. ಮದುವೆ ಆದಮೇಲೆ, "ಅತ್ತೆ" ಎಲ್ಲದಕ್ಕೂ ರೆಸ್ಟ್ರಿಕ್ಟ್ ಮಾಡ್ತಾರೆ, ಲೇಟಾಗಿ ಬಂದ್ರೆ "ಮಾವ" ಬಯ್ತಾರೆ, ಗಂಡ ಏನಂದ್ಕೋತಾನೆ, ಇವುಗಳನ್ನು "ಹೆಣ್ಣಿನ ಸ್ವಾತಂತ್ರ್ಯ ಹರಣ"ಕ್ಕೆ ನಂಟಾಗಿಸುವುದು ತರವಲ್ಲ. "ಏನೇ ಆದರೂ, ನೋಡಿಕೊಳ್ಳೋಕ್ಕೆ ಗಂಡ ಅನ್ನೋವ್ನು ಒಬ್ಬ ಇದ್ದಾನೆ ಎಂಬುದು ಹೆಂಡತಿಗೆ ಯಾವ ಕಾಲಕ್ಕೂ ಧೈರ್ಯ ಕೊಡತ್ತೆ".
೨. ಇಲ್ಲಿ ಚರ್ಚಿತವಾಗಿರುವ ಹೆಣ್ಣನ್ನು ನಗೆಪಾಟಲಿಗೀಡುಮಾಡುವ ಗಂಡಿನ ಮನಸ್ಥಿತಿ. ಇದಕ್ಕೆ ಬಹುಮಟ್ಟಿನ ಕಾರಣ, ನನಗೆ ಅನಿಸುವ ಮಟ್ಟಿಗೆ, "ಗಂಡಿನ ಸ್ವಾರ್ಥ". ಈಗ ನೋಡಿ. ಒಂದು ಗಂಡು, ತನ್ನ ಹೆಂಡತಿಯನ್ನು ಹೀಗೆ ಪರಿಚಯಿಸುತ್ತಾನೆ. "ಈಕೆ ನನ್ನ ಹೆಂಡತಿ". ಒಬ್ಬ, ನನಗೆ ಹೀಗೆ ಹೇಳಿದ್ದ, "ಇವಳು ನನ್ನ ರಿಲೇಟೀವ್, ಹಾಗೆ ಈಗ ಗರ್ಲಫ್ರೆಂಡ್". ಅಪರೂಪಕ್ಕೆ "ಇವಳು ನಮ್ಮಾಕೆ", "ನಮ್ಮ ಮನೆಯವಳು", "ನಮ್ಮ ಕುಟುಂಬ" ಹೇಳುವುದುಂಟು. "ಈಕೆ ನನ್ನ ಹೆಂಡತಿ" ಅಂದಾಗ ಏನಾಗುತ್ತದೆ ನೋಡಿ, "ಈಕೆ ನನ್ನ ತಾಯಿಯ ಸೊಸೆ", "ನನ್ನ ಮಗನ ತಾಯಿ", "ನನ್ನ ತಮ್ಮನ ಅತ್ತಿಗೆ", "ನನ್ನ ಅತ್ತಿಗೆಯ ಓರಗಿತ್ತಿ" ಇವುಗಳು ಹಿಂದೆಸರಿಯುತ್ತದೆ. ಅಂದರೆ ಹೆಣ್ಣು ಇಡೀ ಮನೆಗಲ್ಲದೆ, ತನಗೊಬ್ಬಳಿಗೇ ಸೇರಿದವಳು ಎಂಬ "ಟೇಕನ್ ಫಾರ್ ಗ್ರಾಂಟೆಡ್" ಮನಸ್ಥಿತಿ. ಆದರೆ ಒಂದು ಹೆಣ್ಣು ತನ್ನ ಗಂಡನನ್ನು ಪರಿಚಯಿಸುವಾಗ, "ನಮ್ಮ ಮನೆಯವರು", "ಇವರು", "ನಮ್ಮವರು", "ಇವರು ನಮ್ಮೆಜಮಾನ್ರು" ಈ ರೀತಿಯ ಪದಬಳಕೆಮಾಡ್ತಾರೆ. ಹೀಗೆ ಮಾಡಿದಾಗ, ಗಂಡ ತನಗೊಬ್ಬನಿಗೇ ಅಲ್ಲದೆ, ಎಲ್ಲರಿಗೂ ಸೇತುವಾಗಬೇಕಾದವನು ಎಂದುಕೊಳ್ಳುತ್ತಾರೆ. ಆದರೆ ಗಂಡಿಗೆ ಈ ಹಂಗಿಲ್ಲ.
* - ಈ ಮೇಲಿನ ಪಾಯಿಂಟುಗಳಿಗೆ ಅಪವಾದಗಳೂ ಇವೆ. ಈಗೀಗ ನಗರಗಳಲ್ಲಿ, ಮೇಲಿನ ಪದಗಳ ಬದಲಾಗಿ ಬೇರೆ ಪದಗಳು ಬಳಕೆಯಲ್ಲಿದೆ. ಆದರೆ, ಎಲ್ಲ ವಿಷಯಗಳ ಒಳಗುಟ್ಟು "ತನ್ನವಳಾಗಿಬಿಟ್ಟಿದ್ದಾಳೆ", "ತನ್ನದೆನ್ನುವ ಸ್ವಾರ್ಥ".