ಉ: ಏಕೆ ಹೀಗೆ ಅನಿಸುತ್ತದೆಯೋ!
- ಉ: ಏಕೆ ಹೀಗೆ ಅನಿಸುತ್ತದೆಯೋ! By: mallik (Jun 7 2008 - 4:53am)
- ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (Jun 8 2008 - 6:59pm)
- ಉ: ಏಕೆ ಹೀಗೆ ಅನಿಸುತ್ತದೆಯೋ! By: ಹರೀಶ್ (May 22 2008 - 11:24am)
- ಉ: ಏಕೆ ಹೀಗೆ ಅನಿಸುತ್ತದೆಯೋ! By: pallavi.dharwad (May 26 2008 - 1:43pm)

RSS:
ಉ: ಏಕೆ ಹೀಗೆ ಅನಿಸುತ್ತದೆಯೋ!
ಈ ಎಳೆ ಹುಡುಕುದೂ ಒಂದ್ ಥರ ಮಜಾ, ಆದ್ರ ಏನ್ ಮಾಡುದು ಅದರ ಬಗ್ಗೆ ವಿಚಾರ ಮಾಡ್ಕೋಂತ ಮಾಡ್ಕೋಂತ ಹೋದ್ರ ಬರೇ confusion ಅ! ನಾನೂ ಯಾವಾಗಲೂ ಅದರ ಬಗ್ಗೆನ ವಿಚಾರ ಮಾಡ್ಕೋಂತ ಇರ್ತಿದ್ದ್ಯ...ಆದ್ರ ಸ್ವಲ್ಪ difference ಏನ್ ಅಂತ ಅಂದ್ರ, ನಾನು ಮನುಷ್ಯ ಮತ್ತು ಇನ್ನೊಬ್ಬ ಮನುಷ್ಯ ಇವರ ನಡುವಿನ ಎಳೆ ಬಗ್ಗೆ ಜಾಸ್ತಿ ವಿಚಾರ ಮಾಡ್ತಿದ್ದ್ಯ. ಹುಡುಕ್ಕೊಂತ ಹೋದಾಗ ಒಳ್ಳೆ ಅನುಭವಾ ನೂ ಆಗ್ಯಾವು, ಆ ಎಲ್ಲ ಒಳ್ಳೆದನ್ನ ಮರಸು ಅಂಥ ಕೆಟ್ಟನೂ ಆಗ್ಯಾವು. ಎಳೆ ಕಡಕೊಂಡು ನಾ ಹೋಗೇ ಹೊಕ್ಕೆನಿ ಅನ್ನವ್ರಿಗೆ ತಡಿಯಾಕ್ ಬರುದಿಲ್ಲ.
ಆದ್ರ ಒಂದ್ ಮಾತ್ರ ಖರೆ, ಗಾಂಧಿ ಭವನದಿಂದ ನಮ್ಮ ಕಂಪ್ಯೂಟರ್ ಡಿಪಾರ್ಟ್ಮೆಂಟ್ ತನ ಆ ಹಸರ್ ನೋಡ್ಕೊಂತ, ದಾರ್ಯಾಗ ಆ ಅದ್ಭುತ K.U.D ಲೈಬ್ರರಿ ನೋಡ್ಕೊಂತ 2 ವರ್ಷ ಮಟ ದಿನಾ ಲೂ ಹೊಕ್ಕಿದ್ದೆ, ಡಿಪಾರ್ಟ್ಮೆಂಟ್ ಕಡೆನ ಅಜ್ಜನ ಕ್ಯಾಂಟೀನ್ ನ್ಯಾಗ ಮಸ್ತ್ ಗಿರ್ಮಿಟ್ ತಿನ್ಬೇಕಾದ್ರ ಒಂದ್ ಒಂದ್ ಸೇಲ್ ನಂಗ ಹಂಗಾ ಅನ್ನಿಸ್ತಿತ್ತು...ಏನೋ ಎಳೆ ಐತಿ ಅಂತ. ಯಾವ್ ಎಳೆ? ಎಲ್ಲೇ ಐತಿ? ಹೆಂಗ ಐತಿ? ಅನೂದು ಇನ್ನೂ ಸಿಕ್ಕಿಲ್ಲ...ಆದ್ರ ನಾ ಬರೆ ಆ ಗಿರ್ಮಿಟ್ ಸಂಭಂದ ಇನ್ನು ಅಲ್ಲೇ ಹೊಕ್ಕಿರತೆನಿ...ಹೊದಾಗ್ ಒಂದ್ ಸಲ again ತಲಿಯಾಗ್ ಅದಾ ವಿಚಾರ ಬರತಾವು. ಇವತ್ತ ನಿಮ್ಮ ಇ ಬ್ಲಾಗ್ ಓದಿ ಇವೆಲ್ಲ ನೆನಪಾತು. ನೆನಪಿಸಿ ಕೊಟ್ಟಿದ್ದಕ್ಕ ಥಾಂಕ್ಸ್.